Monday, March 5, 2012

ಪಾಪ...........ತ್ಯಾಂಪ ೨.







೨. ಒಸಾಮಾ ಕರಾಮತ್

ಇದೆಲ್ಲಿಂದ ಬಂತು ಕಣ್ಣು ಬಿಟ್ಟ ತ್ಯಾಂಪ, .................ತ್ಯಾಂಪನ ಈ ತರಹದ... ಕಣ್ಣಿಗೆಲ್ಲಾ ಹೆದರಿದರೆ ಅದು ಒಸಾಮಾನಾ..?
"ಅಲ್ಲ ಆಂಟೀ ಆ ದಿನ ಅವರ ಜೇಬಲ್ಲಿ ಟೂತ್ ಪಿಕ್ ಸಿಕ್ಕಿತ್ತು......... ನೀವು ನನಗೆ ಕೊಟ್ಟಿದ್ರಲ್ಲಾ...... ನೆನಪಾಯ್ತಾ..?
ಮುಗೀತು ಇದು ಚೆಕ್ ಮೇಟ್, ..........ಇದಕ್ಕೆ ಬ್ರಹ್ಮಾಸ್ತ್ರವೇ ಬೇಕು...

ಮೊದಲೊಮ್ಮೆ ಹೀಗೇ ಆಗಿತ್ತು.
ಆ ಸಂಜೆ ತ್ಯಾಂಪಿ ಒಳ್ಳೆಯ ಮೂಡ್ ನಲ್ಲಿದ್ದಳು
ಎಫ್ ಎಮ್ ನಲ್ಲಿ ಹಾಡು ಬರುತ್ತಿತ್ತು
ನೀರಿಗೆ ಬಾರೇ ಚೆನ್ನೀ........
ಇಬ್ಬರೂ ಒಂದ್ ತರಾ ಟ್ರಾನ್ಶ್ ನಲ್ಲಿ ಆ ಹಾಡು ಹಾಡಬೇಕು... ಅಷ್ಟರಲ್ಲಿ   ಫೋನ್ ಬಂತು

ತ್ಯಾಂಪಿ ಎತ್ತಿದಳು
ಹಲ್ಲೋ
ಮೇಡಮ್ ನಾವು ... ಹನಿಮೂನ್ ಡ್ರೈ ಕ್ಲೀನರ್ಸ್
ಹೂ  ಹೇಳಿ
ನೀವು ಕಳೆದ ವಾರ ನಮ್ಮಲ್ಲಿ ಕರ್ಚೀಫ್ ಬಿಟ್ಟು ಹೋಗಿದ್ದಾಗಿ ಕಂಪ್ಲೈಂಟ್ ಮಾಡಿದ್ದೀರಿ
ಹೌದು, ಅದೂ ನನ್ನ ಪತಿಯವರದ್ದು ಕಳೆದು ಹೋಗಿತ್ತು
ಅದೇ ಮೇಡಮ್..... ಸ್ವರ ಸರಿಯಾಗಿಕೇಳಿಸುತ್ತಿಲ್ಲ
"ಅದನ್ನ ಧ್ವನಿ ವರ್ಧಕದಲ್ಲಿ ಹಾಕೇ... ಸರಿಯಾಗಿ ಕೇಳತ್ತೆ"  ತ್ಯಾಂಪನೆಂದಿದ್ದ. ಇದು ...ಇದು ಮಾತ್ರ ಬೇಡವಾಗಿತ್ತು ತ್ಯಾಂಪನಿಗೆ.
ಹಾ  ಮೇಡಮ್ .. ಈಗ ಕೇಳ್:ಈಸ್ತಾ ಇದೆಯಾ, ನಿಮ್ಮ ಕರವಸ್ತ್ರ ಸಿಕ್ಕಿದೆ ಮೇಡಮ್, ಬಂದು ತಕೊಂಡು ಹೋಗ್ತೀರಾ..
ಯಾಕೆ ..?
ಅದೇ ಮೇಡಮ್ ನಮಗೆ ಗೊತ್ತಾಗ್ತಾ ಇಲ್ಲ ಯಾವುದು ನಿಮ್ಮದು ಅಂತ..
ಯಾಕೆ ಅದರಲ್ಲಿ ವಿದ್ ಲವ್  ತ್ಯಾಂಪ ಅಂತ ಬರೆದಿದೆಯಲ್ಲ ಅದೇ, ಪಿಂಕ್ ಬಣ್ಣದ್ದು.
ಹೌದು ಮೇಡಮ್...
ತ್ಯಾಂಪನ ಮುಖದ ಬಣ್ಣ... ನೋಡ ಬೇಕಿತ್ತು..... ತಡೆ ಬ್ಯಾಡ ಏನೋ ತೊದಲಿದ ಗಾಬರಿಯಲ್ಲಿ
ಅದೇ ಮೇಡಮ್...
ಅಂತಹದ್ದೇ ನಮಗೆ ನಾಲ್ಕು ಸಿಕ್ಕಿವೆ... ನೀವು ಇಲ್ಲಿಗೆ ಬಂದು ತೆಗೆದು ಕೊಂಡು ಹೋಗಿ...

ಆಗಲೇ ತ್ಯಾಂಪಿಯ ಕೋಪ ಏರುತ್ತಿರುವ ಸಮಯದಲ್ಲೇ.......
ಹೊರಗಡೆ ಬಾವಿಯಲ್ಲಿ ಶಬ್ದ.....  ದುಡೂಮ್.... ದೊಡ್ಡದು...
ಒಸಾಮಾ ಬಂತು... ಆಂಟೀ  ತ್ಯಾಂಪ ಅಂಕಲ್
ಆಕಡೆ ಗಡಿಬಿಡಿಯಲ್ಲಿ ಓಡುತ್ತಿದ್ದರು.... ಆ ಬಾವಿಯ ಕಡೆಗೆ
ಎಲ್ಲರೂ ಓಡಿದರು ಬಾವಿಯ ಕಡೆಗೇ
ಹೌದು ಏನೋ ಬಿದ್ದ ರೀತಿಯಲ್ಲಿ ನೀರಿನಲ್ಲಿ ಗುಳ್ಳೆಗಳು ಏಳುತ್ತಿದ್ದವು........
...........................................
.....................................

.....................................

ಆ ಸಮಯಕ್ಕೆ ಸರಿಯಾಗಿ ಎಂಟ್ರಿ ಕೊಟ್ಟಿದ್ದ ಸೀನ.
ತ್ಯಾಂಪಿಗೆಂದಿದ್ದ
ಜಾಸ್ತಿ ಏರೊತ್ತಡ ತಳೆದುಕೊಳ್ಳನಾತ
ಅಂತೂ ಕಾರಣ ಏನೇ ಇರಲಿ ಬಿಡಿ
 ಆ ಕಥೆ ಸುಖಾಂತ್ಯ

ಈ ಕಥೆ...?
ಜೋರಾಗಿ ಕೆಮ್ಮು ಬಂತು ಎದೆ ಹಿಡಿದು ಬಗ್ಗಿ ಕೆಮ್ಮಿಸಿದ......... ಅದರಲ್ಲಿ ಎರಡು ಮಾತ್ರ ನಿಜವಾದದ್ದು. ಬಾಕಿ ನಾಲ್ಕು ನ..ಟ..ನೆ..
ಇದು ನಾಟಿತ್ತಾ...????.
ಯ....  ಯಾಕ್ರಿ.......... ??ಏನಾಯ್ತು...??
ಸ್ವರದಲ್ಲಿ ಮಾರ್ದವತೆ..ಇತ್ತಾ?
"ಇರಿ ನೀರು ತರ್ತೇನೆ..."
ಇಷ್ಟು ಸಮಯ ಸಾಕು ತ್ಯಾಂಪನಿಗೆ
"ಯಾಕೆ ನನ್ನಪ್ಪಾ, ನನ್ನ ಗೋಳು ಹೊಯ್ಕೋತೀಯಾ..?"
"ಅಲ್ಲ......... ಅಂಕಲ್  ಆ ಶನಿವಾರ..ನಾನು ನಿಮ್ಮ ಟಿಗ್ರಿ ಆಂಟಿ ಹಿಂದೇನೆ ಇದ್ದೆ ಗೊತ್ತಾ..?
"ಸರಿ ಡೀಲ್ ಏನು ಹೇಳು..?"
"ಅದೇ ನನ್ನ ಪಿಎಸ್ ಟೂ ವಿಡಿಯೋ ಗೇಂ  ಕ್ಯಾಸೆಟ್!!!
"ಡನ್!! "
ಯಥಾ ಸ್ಥಾನ ಮಧ್ವಾಸಯಾಮಿ.
ಬಂದಳು ತ್ಯಾಂಪಿ
"ಆಂಟೀ ಅಲ್ಲ ಇದು... ಈ ಟೂತ್ ಪಿಕ್    ಬ್ಲಾಕ್ ಪ್ಯಾಂಟ್ ನಲ್ಲಿ ಸಿಕ್ಕಿತ್ತು , ಸಟರ್ ಡೇ ಅಂಕಲ್ ನೀಲಿ ಪ್ಯಾಂಟ್ ಹಾಕಿದ್ದರು, ಟೂತ್ ಪಿಕ್ ನಿಮಗೆ ಸಿಕ್ಕಿದ್ದು ಕಪ್ಪು ಪ್ಯಾಂಟ್ನ ಜೇಬಲ್ಲಿ..."
ಸಾಕ್ಷಿಯೇ ಬದಲಾದರೆ...????
ಇಂತದ್ದೆಲ್ಲಾ ಸ್ವಲ್ಪ ಸರಿಯಾಗಿಯೇ ನಾಟುತ್ತೆ.
 "ಹೌದೂ , ನಮ್ಮ ಮೇಡಮ್ ಗೆ ಸ್ವಲ್ಪ ಕಣ್ಣೂ ಸರೀ ಕಾಣ್ಸಲ್ಲ, ಅದಕ್ಕೇ ಬೇರೆಯಾರನ್ನೋ ನೋಡಿ ಹೀಗಂದಿರ ಬೇಕು  ಬಿಡು"
"ಅಷ್ಟೇ ಅಂತೀರಾ..?"
ಮೆತ್ತಗಾದಳಾ, ..............??
ಇದು ಇನ್ನೊಮ್ಮೆ ಮಿಸೆಸ್ ಕಲ್ಲೂರಾಮ್ ಸಿಗುವ ವರೆಗೆ, ಅದೂ ಆಗ ತ್ಯಾಂಪಿಗೆ ಇದು ನೆನಪಿದ್ದಲ್ಲಿ.....
ಅಂತೂ   ಬೇಡಿಕೆ ಇದ್ದ  ಹಾಗೆ ಮುಂದುವರಿಯುವ
ಪಾಪ.............ತ್ಯಾಂಪ.

Friday, March 2, 2012

ಪಾಪ...........ತ್ಯಾಂಪ!!!!!

ಪಾಪ...........ತ್ಯಾಂಪ!!!!!

೧. ಸಂಶಯ


ಓಹ್ ಮಿಸೆಸ್ ಥಾಂಪ್!!
"ಅಗೋ ಬಂದಳು ಮಿಸೆಸ್ ಕಲ್ಲೂರಾಮ್" ತ್ಯಾಂಪಿಗೆಂದ ತ್ಯಾಂಪ.
ಅವನಿಗೆ ಅವಳನ್ನು ಕಂಡರೆ ... ಅಗೋದೇ ಇಲ್ಲ, ಆದರೇನು ಮಾಡುವುದು!!
ತ್ಯಾಂಪನ ಬಾಸ್ ನ ಹೆಂಡತಿ ಅವಳು... ಅಲ್ಲಾ ಅವ...ರು.!!!!!!.........ಹೊಟ್ಟೆ ಪಾಡು.
"ಅಲ್ಲ ಮೇಡಮ್..... ತ್ಯಾಂಪ!!" ಸರಿಪಡಿಸಿದಳು ತ್ಯಾಂಪಿ.
ಮಿಸೆಸ್ ಕಲ್ಲೂರಾಮ್ ನನ್ನು ಕಂಡಮ್ ಮಾಡೋ ಚಾನ್ಸ್ ಎಲ್ಲಿದ್ದರೂ ಬಿಡಲ್ಲ ಅವಳು.
ಆ ಒಂದು ವಿಷಯದಲ್ಲಿ ತ್ಯಾಂಪಿಯನ್ನ ತುಂಬಾ ಮೆಚ್ಚಿಕೊಳ್ತಾನೆ ತ್ಯಾಂಪ. ಆದರೆ ಕಲ್ಲೂರಾಮ್ ಇದಿರಿಗೆ  ಅಲ್ಲ!!!
"ನಾನೂ ಅದೇ ಹೇಳಿದ್ದು ಮಿಸೆಸ್ ಥ್ಯಾಂಪ್"  ಮಿಸೆಸ್ ಕಲ್ಲೂ.
"ಮತ್ತೆ ಏನು ಈಕಡೆ..? " ತ್ಯಾಂಪಿ
"ನಾನೂ ನನ್ನ ಟಿಗ್ರಿಸ್ ಹಾಗೇ ವಾಕಿಂಗ್ ಹೋಗುತ್ತಿದ್ದೆವು, .
ಕಾರಣವಿಲ್ಲದೆ ಈ ಕಡೆ ಬರುವ ಅಸಾಮಿ ಸುತರಾಮ್ ಅಲ್ಲ ಅದು ಇಬ್ಬರಿಗೂ ಗೊತ್ತಿದೆ.
."..ನಿಮ್ಮ ಮನೆಕಡೆ ಬಂದೆವು.ಯು ನೋ, ಮೊನ್ನೆ ಮೊನ್ನೆ ನನ್ನ ಹಬ್ಬೀ...............?!!"
"ಅದ್ಯಾರು ನಿಮ್ಮ ಅಮ್ಮನಾ..?" ತ್ಯಾಂಪ ಕೇಳಿದ.
"ನೋ ಮಿಶ್ಟರ್ ಥಾಂಪ್, ಯು ಆರ್ ಜೋಕಿಂಗ್ ......... ನನ್ನ ಹಸ್ಬೆಂಡ್!!  ಅವರು  ಗಿಲಿ ಗೆ ಹೊಗಿದ್ದರು"
"ಏನದು ಗಿಲಿಗಿಲಿ......... ಟಿಗ್ರಿಸ್ ನ ಆಟಿಕೆನಾ..? "ತ್ಯಾಂಪನಿಗೆ ನಿಜವಾಗಿಯೂ ಗೊತ್ತಿಲ್ಲ.
"ಅರೇ ನಿಮಗೆ ಗಿಲಿ ಗೊತ್ತಿಲ್ವಾ..?" ಇನ್ನು ನೀವು ಬದುಕಿರೋದೇ ವ್ಯರ್ಥ ಅನ್ನೋ ಹಾಗೆ ನೋಡಿದಳು ತ್ಯಾಂಪನನ್ನ.
"ಅದು ಒಳ್ಳೆಯ ವಜ್ರಗಳ ಅಂಗಡಿ, ನೀವು ನೋಡಲಿಲ್ಲ ಅಂತ ಕಾಣ್ಸತ್ತೆ, ನೋಡಿ ನನ್ನ ಬೆರಳಲ್ಲಿ ಇದೆಯಲ್ಲಾ ಇದೇ ಉಂಗುರ........". ಪುನಃ ಕೈಯೆತ್ತಿ ಬೆರಳು ತೋರಿಸಿದಳು....
ಹೋ ಅದಕ್ಕೇನಾ ಇವಳು ಆಗಿನಿಂದ ಆ ಕೈ ಬೆರಳು ಮಾತ್ರ ತೋರಿಸ್ತಾ ಇದ್ದದ್ದು..... ಆಗಲೇ ಅಂದ್ಕಂಡೆ.. !!
ಇದನ್ನ  ಗಟ್ಟಿಯಾಗಿ ಹೇಳೋ ಹಾಗಿಲ್ಲ.. ತ್ಯಾಂಪ!!  ನಾಳೆ ಆಫೀಸಿಗೆ ಹೋಗೋದು ಬ್ಯಾಡವಾ..??.
""ನನ್ನ......... ಅವ.....ರು ತೆಗೆದದ್ದು, ನನ್ನಗೆ ಗಿಫ್ಟ್ ಕೊಡೊದಂದ್ರೆ ಅವರಿಗೆ ಸ್ವಲ್ಪವೂ ಬೇಸರವೇ ಇಲ್ಲ ಗೊತ್ತಾ..? "
ತ್ಯಾಂಪ ದೇವರಲ್ಲಿ ಬೇಡಿಕೊಳ್ಳುತ್ತಿದ್ದ ಈ ಪ್ರಶ್ನೆ ಬಾರದಿರಲಿ ಅಂತ ಆದರೆ ಈ ಬಾರಿ ಅವನನ್ನು  ದೇವರೂ ಕಾಪಾಡಲಿಲ್ಲ.
"ಎಷ್ಟಾಯ್ತು?... "
ಪ್ರಶ್ನೆ ಈಗ ಬಂದದ್ದು ತ್ಯಾಂಪಿಯಿಂದ.ಅದು ನಿರೀಕ್ಷಿತವಲ್ಲ.
"ಬರೇ ಒಂದೂವರೆ ಮಿಸೆಸ್ ಥಾಂಪ್!!"
"ಏನೂ ಒಂದೂವರೆ ಸಾವಿರವಾ..?" ಪಾಪ..........ಬಡಪಾಯಿ ತ್ಯಾಂಪ  ಆಶಾವಾದಿ .
"ನೋ ನೋನೋ ನೋನೊ    ...... ಜೋಕ್ ಮಿಷ್ಟರ್ ಥ್ಯಾಂಪ್!!  ನೋಡಿ ಮಿಸೆಸ್ ತ್ಯಾಂಫ್ ನಿಮ್ಮ ಹಬ್ಬೀ ತುಂಬಾ ತಮಾಷೆ ಮಾಡ್ತಾರೆ ಯು ನೋ ಅದಕ್ಕೇ  ಐ ಲೈಕ್ ಹಿಮ್!!
ಅಲ್ಲ ಅಲ್ಲ ಇದು ಒಂದೂವರೆ ಲಾಖ್!! ಲಕ್ಷ.!!!!
"ಮುಚ್ಚಿಕೊಳ್ಳೆ ಬಾಯಿ " ಇದೇ ಚಾನ್ಸ್ ಅಂತ ತ್ಯಾಂಪ ಮೆಲ್ಲಗೆ ಅವಳ ಕಿವಿಯಲ್ಲಿ ಮಾತ್ರ ಕೇಳಿಸುವಂತೆ ಹೇಳಿದ." ಸೊಳ್ಳೆ ನೊಣ ಎಲ್ಲಾ........ನುಗ್ಗಿಯಾವು!!"
 ಬಿತ್ತೂ ಬಾಂಬು,
ಹೌದೂ, ನೀವು ನಿಮ್ಮ ಮಿಸೆಸ್ ಗೆ ಇಂತದ್ದೆಲ್ಲಾ ಕೊಡಿಸೋಲ್ವಾ ಮಿಸ್ಟರ್ ಥ್ಯಾಂಪ್? ಈ ಸಾರಿಯ ನಿಮ್ಮ ಬರ್ಡೆ ಗಿಫ್ಟ್ ಏನಿತ್ತು..?
"ನನಗೆ ಒಂದು ಅರೊ ಷರ್ಟ್ ಮತ್ತೆ ಬೆಲ್ಟ್ " ತ್ಯಾಂಪ ನೆಂದ
"ನಿಮ್ಮದಲ್ಲಾ ಮಿ. ಥ್ಯಾಂಪ್ ನಿಮ್ಮ ಮಿಸೆಸ್ ನ ಕೇಳಿದ್ದು ನಾನು" ಮಿಸೆಸ್ ಕಲ್ಲೂರಾಮ್ ಪಕ್ಕಾ ಜಿಗಣೆಯೇ.
ಈ ಸಾರಿ....................... ಸಾರಿ ತಂದಿದ್ದರು.  ತ್ಯಾಂಪಿ.
ನೋ ಮಿ ತ್ಯಾಂಫ್ ನಿಮಗೆ ಚೊಯ್ಸ್ ಮಾಡಲು ಬರುವುದಿಲ್ಲ!! ನನ್ನ ಹಬ್ಬಿ ನೋಡಿ ಎಷ್ಟು ಚೆನ್ನಾಗಿರೋ ಗಿಫ್ಟ್ ತರ್ತಾರೆ!೧
ಈ ಸಾರಿ ನಾನು ಹುಟ್ಟು ಹಬ್ಬ ಬಂದಾಗ ಅವರಿಗೇ ಹೇಳ್ತೇನೆ.... ತ್ಯಾಂಪಿ ನಿನಗೆ ತೊಂದರೆಯಿಲ್ಲವಲ್ಲಾ..??
ಅರೆರೇ ಮಿ ಥ್ಯಾಂಫ್ ನಾನು ಹೇಳಿದ್ದು ನಿಮಗೆ.... ನೀವು ನಿಮ್ಮ ಸ್ಪೌಸ್ ಗೆ ತರಬೇಕಲ್ಲಾ ಅದಕ್ಕೇ ಹೇಳಿದ್ದು.
ಬೇಡ ನಮ್ಮ ಮನೆಯಲ್ಲಿ ಗ್ಯಾಸ್ ಇದೆ ಸ್ಟೌ ಬೇಡ..
ಹ ಹಹ್ಹ ಮತ್ತೆ ಜೋಕ್ ಮಾಡ್ತಾರೆ ....ಇರಲಿ,   ಸಾರೀ... ಓಹ್ ನೋ ಮಿಶ್ಟರ್ ಥ್ಯಾಂಪ್,
ನಿಮಗೆ ಮದುವೆಯಾಗಿ ಎಷ್ಟು ವರ್ಷ ಆಯ್ತು..?
ಥ್ಯಾಂಪಿ ಜತೆಗಾ..... ಸುಮಾರು ಹತ್ತು ವರ್ಷ ಅಲ್ಲವಾ..?
"ಅಲ್ಲಲ್ಲ ಬರೇ ಎಂಟು ಅಷ್ಟೇ"   ತಿದ್ದಿದಳು ತ್ಯಾಂಪಿ
ಅಂತಹಾ ಡಿಫರೆನ್ಸ್ ಏನೂ ಇಲ್ಲ ಬಿಡಿ
ಈ ಸಾರಿ ನಾನು ಹೇಳ್ತೇನೆ ಅವರು ನಿಮಗೆ ಒಳ್ಳೆಯ ಗಿಫ್ಟ್ ತಂದು ಕೊಡ್ತಾರೆ ಗ್ಯಾರಂಟೀ..? ಶ್ಯೂರ್ ಮಿಶ್ಟರ್ ಥ್ಯಾಂಫ್..?
ಎ..............................ಸ್   ಮೇಡಮ್" ಮತ್ತೇನು ಹೇಳಿಯಾನು ಪಾಪ.
"ಅಂದ ಹಾಗೆ ಥ್ಯಾಂಫ್ ..ಮೊನ್ನೆ.... ........ ಬೇಡ ಬಿಡಿ."
ಏನು ಮೇಡಮ್ ಹೇಳಿ?      ಮೊನ್ನೆ ಎನು..        ?   ಬ್ಯಾಡವಿತ್ತು ತ್ಯಾಂಪನಿಗೆ ಕೋಲು ಕೊಟ್ಟು...................!!!!!!!!!!!
ಎಲ್ಲಿಗೋ ಹೋಗ್ತಾ ಇದ್ದರಲ್ಲಾ............?
ಎ...........ಎ ಲ್ಲಿ ಮೇಡಮ್.................?
ಅದೇ ಅಡಿಗಾಸ್ ...........ಹತ್ತಿರ ನೀವು......... ನಿಮ್ಮ ಮಿಸೆಸ್ ಥ್ಯಾಂಪ್, ಅವರು ಹಸಿರು ಚೂಡಿದಾರ್ನಲ್ಲಿದ್ದರಲ್ಲಾ...........
.............................
ಮಿ .ಥ್ಯಾಂಪನಿಗೆ ಇಲ್ಲಿಯೇ ಭೂಮಿ ಬಾಯ್ ಬಿಡಬಾರದೇ ಅನ್ನಿಸಿತ್ತು

ನೋ...... ನೋ ಮಡಮ್...... ನಾನು.....?!!??

"ಎಸ್!!  ಮಿ ಥ್ಯಾಂಪ್ ನಾನು ಟಿಗ್ರಿಸ್ ನಿಮಗೆ ಟಾ ಟಾ ಕೂಡ ಹೇಳಿದ್ದೆವು, .........ಅಲ್ವಾ ಟಿಗ್ರಿಸ್..?   ಓ. ಕೆ      ಮಿಸೆಸ್ ಥ್ಯಂಫ್ ನನ್ನ ಕೆಲ್ಸ ಆಯ್ತು .....ನಾನಿನ್ನು ಬರ್ತೀನಿ.. ಬಾಯ್"
...........................................................................
ಹೌದು...........ಇನ್ನುಳಿದ ಕೆಲಸ..............??? ಮಿಸೆಸ್  ತ್ಯಾಂಪೀದು. 

ಕಲ್ಲೂರಾಮ್ ಥ್ಯಂಪ್ ಅಂದದ್ದೂ ಸಹಾ ಕೇಳುವ ಸ್ಥಿತಿಯಲ್ಲಿಲ್ಲ ತ್ಯಾಂಪಿ

"ಈಗ ಹೇಳ್ರಿ.................ಯಾರ್ರೀ ಅದು ಹಸಿರು ಚೂಡಿದಾರ..???"

ಮೊನ್ನೆ ಯಾ............. ವಾಗ ??,
ಓಹ್  ....ಹೌದು... ಮೊನ್ನೆ ರವಿವಾರ ಅಲ್ವಾ, ನಾನು ಇಡೀ ದಿನ ಮನೆಯಲ್ಲೇ ಇದ್ದೆನಲ್ಲೆ,
ನಿನ್ನ ಜತೆ ತ್ಯಾಂಪಿ ನಿನ್ಮೇಲೆ ನಂಗೆ ಮನಸೈತೆ ಅಂತ ಹಾಡು ಬೇರೆ ಹಾಡ್ತಾ ಇದ್ದೆನಲ್ಲಾ, ನಾನು ಬಟ್ಟೆ ಒಗೆದು ಕೊಡ್ತಾ ಇದ್ದೆ ನೀವು ಅವನ್ನ ಒಣ ಹಾಕಿದ್ದೆಯಲ್ಲಾ, ಅದಾದ ಮೇಲೆ ಅಡುಗೆ ಮಾಡಲು ನಾನೇ ನಿನಗೆ ಸಹಾಯ ಮಾಡಿದ್ದೆ....... ಅಲ್ವಾ     ನೆನಪಾಯ್ತಾ... ಅವಳನ್ನು ಯೋಚಿಸಲೂ ಬಿಡ ಬಾರದು ಈಗ........
"ತಡೀರ್ರೀ ನನಗೆ ಯೋಚನೆ ಮಾಡಲು ಬಿಡಿ"   ತ್ಯಾಂಪಿಯ ಯೋಚನೆಗೆ ತುದಿಗಾಲಿಲ್ಲ.
"ಇತ್ತೀಚೆಗೆ ನಿನಗೆ ಮರೆವು ಜಾಸ್ತಿ ಆಯ್ತು ನೋಡು...." ಪುನಃ ತ್ಯಾಂಪ ಅವಳನ್ನು  ಟ್ರಾಕ್ ಬಿ ಯಲ್ಲಿ ತಳ್ಳೋ ಯೋಚಹನೆಯಲ್ಲಿದ್ದ.
"ಹಾಗಂತೀರಾ, ತಡೀರಿ ಆ ನಿಮ್ ಮಿಟುಕಲಾಡಿ ಹೇಳಿದ್ದು ೯ ನೇ ತಾರಿಖ್ ಅಲ್ವಾ, ಅಂದರೆ ಹತ್ತು ರವಿವಾರ, ಅಂದರೆ ಒಂಭತ್ತು ಶನಿವಾರ................"?????????
................................................................
"ಹೌದು ಅಂಕಲ್ !!  ಆದರೆ ಶನಿವಾರ ನೀವು ಇಡೀ ದಿನ ಆಫೀಸಲ್ಲೇ ಇದ್ದೆ ಅಂದ್ರಲ್ಲಾ..?"
 ಇನ್ನೊಂದು ಬಾಂಬ್ ಈ ಸಾರಿ ಅದು ಒಸಾಮಾನಿಂದ.
ಸತ್ಯಾ ನಾಶ್!!!!!!!!!!

( ಮುಂದುವರಿಯುವುದು)