Tuesday, February 28, 2012

ಅಗ್ಗದ ಆಪರೇಶನ್ನೂ ಮತ್ತು ತ್ಯಾಂಪ

ದಢೂತಿ ಹೆಂಗಸಿನೊಂದಿಗೆ ವ್ಯಕ್ತಿಯೊಬ್ಬ ಡಾಕ್ಟರರ ಹತ್ತಿರಕ್ಕೆ ನಡೆದ
ಏನೂ... ನಿಮ್ಮ ಊಹೆ ನಿಜ
ಆತನನ್ನು ಮಧ್ಯದಲ್ಲೇ ತಡೆದ ಡಾಕ್ಟರು
 " ನಾನು ಪ್ರಾಣಿಗಳ ಡಾಕ್ಟರು ಅಲ್ಲವಯ್ಯಾ ಹೇಗೆ ಬಂದಿದ್ದೀಯೋ ಹಾಗೇ ಹಿಂತಿರುಗಿ ಹೋಗಿ ಬಿಡು" ಎಂದ
" ಇಲ್ಲ ಸಾರ್ ಈ ಸಾರಿ ನಾನು ಸರಿಯಾಗಿ ನೋಡಿಕೊಂಡೇ ಬಂದಿದ್ದೀನಿ. ಹೊರಗೆ ಕುಳಿತುಕೊಂದಿದ್ದಳಲ್ಲಾ 
ಆ ದಢೂತಿ ಹೆಂಗಸು ನನ್ನ ಹೆಂಡತಿಯ ತಾಯಿ, ಅವಳನ್ನು ಸರಿಯಾಗಿ ಪರಿಶೀಲಿಸಿ, ಆವಳ ಸ್ಥೂಲ ರೂಪ ಕಡಿಮೆ ಮಾಡಲು ಸಲಹೆ ಕೇಳಲೆಂದೇ ಬಂದೆ"
ಎಂದನಾತ .
ತುಂಬಾನೇ ತೂಕ ಕಮ್ಮಿ ಮಾಡಬೇಕಾದೀತಯ್ಯ ಹೇಗೆ ಮಾಡ್ತಾಳೆ,,?? ಡಾಕ್ಟರು
"ಅದ್ಯಾರೋ ಅದ್ನಾನ್ ಸಾಮಿ ಬದಲು ಮಾಡಿಕೊಂಡಿದ್ದನಲ್ಲಾ ಡಾಕ್ಟರೇ ಇವಳನ್ನೂ ಹಾಗೇ ಬದಲು ಮಾಡಿ"
"ಅದಕ್ಕೆಲ್ಲಾ ಖರ್ಚಾಗುತ್ತಲ್ಲಯ್ಯಾ, ಪ್ಲಾಸ್ಟಿಕ್ ಸರ್ಜರಿ ಬೇರೆ ಮಾಡಿಸ್ಬೇಕಾದೀತು" ಡಾಕ್ಟರು ಉವಾಚ
"ಮಹಾ ಎಂದರೆ ಎಷ್ಟಾದೀತು ಸಾರ್ ಇವಳು ರೇಖಾಳಂತಾದರೆ ಸಾಕು" ತ್ಯಾಂಪನೆಂದ
ರೇಖಾನೇ ಯಾಕೆ..? ಈ ಬಾರಿ ಡಾಕ್ಟರ ಅಚ್ಚರಿ.
ನಾನು ತ್ಯಾಂಪಿಯೊಂದಿಗೆ ಪಂಥ ಕಟ್ಟಿದ್ದೀನಿ ಸಾರ್..?? ಎಂದ ತ್ಯಾಂಪ.
ಸರಿ ಸುಮಾರು ೪೫ ಲಕ್ಷವಾದೀತು ಕೊಡ ಬಲ್ಲೆಯಾ ನೀನು..?
ಅಯ್ಯಯ್ಯೋ ನಾ ಬಡವಾ ಸಾರ್ ಅಷ್ಟೊಂದು ಹಣ ಎಲ್ಲಿಂದ ತರಲೀ..? ಕಮ್ಮಿ ಮಾಡ್ಕೊಳ್ಳಿ ಸಾರ್" ಗೋಗೆರೆದ ತ್ಯಾಂಪ
ಈ ಹಳೇ ಮನೆಗೇ ಅಂತ ಎಷ್ಟು ಅಂತ ಖರ್ಚು ಮಾಡ್ತಿ ?
"ಒಂದ್ನೂರೈವತ್ತು ರುಪಾಯಿ ಕೊಟ್ಟು ಬುರ್ಖಾ "ತಂದು ಕೊಡು ಸಲಹಿಸಿದರು ಡಾಕ್ಟರು.

ಬದುಕಿನ ದಾರಿಯಲಿ

ಬದುಕಿನ ದಾರಿಯಲಿ



ಬದುಕಿನ ದಾರಿಯಲಿ
ನಾ ನಡೆದ ಹಾದಿಯಲಿ
ಜರಗಿದ್ದೆಲ್ಲವೂ
ಬಲು ವಿಚಿತ್ರ ಸತ್ಯ

ಎದೆ ಉಬ್ಬಿಸಿ ತಲೆ ಎತ್ತಿ
ವಿಶ್ವಾಸದೆ ನಾ ಬೀಗಿ ನಡೆವಾಗ
ಕಾಲು ಜಾರಿ ಮುಖವಡಿಯಾಗಿ
ಬಿದ್ದಿದ್ದೆ
ದಾರಿ ತಪ್ಪಿ ಗಮ್ಯ ಸಿಗದೇ
ತಡವರಿಸುವಾಗ
ಗಮ್ಯವೇ ದೊರಕಿತ್ತು
ಅನಾಯಾಸವಾಗಿ

ನನ್ನವರು ಬಲು ಆತ್ಮೀಯರು
ನೋವೇ ತಿನ್ನಿಸಿದರು
ಹರಿಸಿದರು
ಕಣ್ಣೀರ ಕೋಡಿಯನ್ನೇ
ಆದರೆ ನನ್ನ ಸಂತೈಸಿ
ಮೈದಡವಿ ಕೈ ಹಿಡಿದು
ಆಸರೆಯಾದವರು
ಬರೇ ಅಪರಿಚಿತರು

ಬಲು ವಿಚಿತ್ರ
ಈ ಬದುಕಿನ ದಾರಿ
ಇಲ್ಲಿ ಅನಿರೀಕ್ಷಿತಗಳೇ
ಸಲೀಸಾಗಿ ನಡೆದವು
ನಿರೀಕ್ಷೆಯಂತೆ

Sunday, February 26, 2012

ಸೀನ ಮತ್ತು ಅಣ್ಣೀನಾಯ್ಕನ ಪ್ರಸಂಗ


ಸೀನ ಮತ್ತು ಅಣ್ಣೀನಾಯ್ಕನ ಪ್ರಸಂಗ

೧. ಅಣ್ಣೀ ನಾಯ್ಕ


"ನಾಯ್ಕರೇ ಸಲ್ಪ ತಡಿನಿ ನಿಂತ್ಕಳಿ"
ಓಡಿ ಬಂದಿದ್ದ ಶೀನ ಏದುಸಿರು ಬಿಡುತ್ತಿದ್ದ. ನಾನೂ ಸೀನನೂ ಬರುವುದು ಸ್ವಲ್ಪ ತಡವಾಗಿದ್ದರೂ ಅಣ್ಣಿ ನಾಯ್ಕ  ಹೊರಟು ಹೋಗಿ ಆಗಿರುತ್ತಿತ್ತು.
"ಎ... ಏನಾಯ್ತಾ ಸೀನ"  ನಾಯ್ಕ ಗಾಬರಿಗೊಂಡ
"ಸಲ್ಪ ಲೆಕ್ಕ ತಪ್ಪಾಯ್ತ ಅಂತ್ ಕಾಣತ್ತ್..!!"
"ಆದ ಹೆಂಗಾ , ಅಲ್ದನಾ ದಿನ ಬೆಳ್ಗಾದ್ರ್ ಅವರದ್ ಅದೇ ಕೆಲಸ ಅಲ್ದಾನಾ ಆದ ಹೆಂಗ್ ತಪ್ಪತ್ ಅವ್ರ ಲೆಕ್ಕ"   ನಾನೆಂದೆ
ನಿನ್ ಶಾಲಿಗ್ ಹೊತಿಲ್ಲೇ ಎನಿಲ್ಲೇ ನಿಂಗ್ ಎಂತ ಗೊತ್ತಿತ್ ಅಡ್ಕಿ ಲೆಕ್ಕ..? ಇದು ಅವನ ಅಮ್ಮನ ಲೆಕ್ಕಾಚಾರ
ನಾನ್ ಹೇಳುದ್ ಎಂತ ಅಂದ್ರೆ....
"ನಿ ಎಂತ ಹೇಳುದು ಬ್ಯಾಡ ನಾಯಕರೆ ನಿವ ಲೆಕ್ಕ ಹೇಳಿ ಎಷ್ಟಾಯ್ತ್ ..? " ಅಮ್ಮ
"ಹೌದಮ್ಮ, ನಿಮ್ಮದು ಸಾವಿರ ಅಡ್ಕಿಗೆ ನೂರಕ್ಕೆ ಹತ್ ರುಪಾಯಿ ಲೆಕ್ಕದಂಗೆ ನೂರ್ ರುಪಾಯ್ ಆತ್ತ, ತಕಣಿ ನಿಮ್ ನೂರ್ ರುಪಾಯಿ"
ಅಲ್ದೆ ನಾಯಕರೆ ನಮ್ಮನಿ ಅಡ್ಕಿ ತಂದಿರಲ್ಲೇ ನೀವ ಅದ್ರಂಗೆ ಸಾವಿರದಿಪ್ಪತ್ ಅಡ್ಕಿ ಇದ್ದಿತ ನೀವ್ ಎರಡ್ ಸಾವಿರದ ಹ್ಯಾಂಗ್ ಅಮ್ಮಂಗ್ ದುಡ್ ಕೊಟ್ಟಿರಲ್ಲೇ ... ಮರ್ರಾಯ್ರೆ
ಇಲ್ಯಲೇ ನಾನ್ ಸರಿ ಲೆಕ್ಕ ಮಾಡಿ ಹಾಕಿನಲ್ಲೇ ಮಾರಾಯಾ
ಅಲ್ಲ ಅಮ್ಮ ನಿನ್ ಬೇರೆ ಕಡಿದ ಅದ್ರಂಗೆ ಸೇರ್ಸಿದ್ಯಾ ಮಾರಾಯ್ತಿ..? ಶಿನ ಅಮ್ಮನನ್ನು ಕೇಳಿದ
"ಹೌದೇನೋ ಹಂಗಾರೆ"   ಅಮ್ಮ
ಹಂಗಾರ್ ಅದ್ ಎರಡ ಸಾವಿರವೂ ಅಲ್ಲ ಮೂರ್ ಸಾವ್ರ ಆತ್ತೆ!!! ನೀವೇ ಸಾವರ್ ಅಡ್ಕಿ ದು ದುಡ್ ಕೊಡ್ಕಾತ್ತಲೇ,
"ಅದಲ್ಲ ಮಾರಾಯಾ.......... ನಾನ್ ಸರಿ ಲೆಕ್ಕ ಮಾಡಿ ಹಾಕಿನಲ್ಲೇ ಹಂಗಾರೆ " ನಾಯ್ಕ
"ಹಾಂಗಾರ್ ಒಂದುಪಾಯಾ ಮಾಡುವ , ಯಾವ್ದ ನಮ್ಮನಿ ಚೀಲ ಹೇಳಿ ನಾನ್ ಲೆಕ್ಕ ಮಾಡ್ತೆ " ಸೀನ
"ಅದೆಲ್ಲ ಬ್ಯಾಡ್ದಾ..ಸೀನ,  ನಾನೇ ನಿಂಗ್ ಸಾವಿರ ಅಡ್ಕಿ ದುಡ್ ಕೊಟ್ಟರ್ ಸೈ, ಅಲ್ದಾ ಇಗಾ ತಕಾ ನೂರ್ ರುಪಾಯಿ" .ನಾಯ್ಕ
"ನಂಗ್ ದುಡ್ ಬ್ಯಾಡ ಮಾರಾಯ್ರೆ ಅಡ್ಕಿ ಲೆಕ್ಕ ಮಾಡುವ ಸರಿ ಅಂದ್ರ ಸೈ ಇಲ್ಲೇ ಅಂದ್ರೆ ನೀವ ದುಡ್ ಕೊಡಿ , ಎಂತ ಅಂತ್ರಿ ಅಮ್ಮ " ಸೀನ
"ಹೌದಾ ನಾಯಕರೆ ಅಂವ ಹೇಳುದು ಸರಿಯೇ , ನೀವ ಒಂದ್ಸಲಿ ಲೆಕ್ಕ ಮಾಡಿ ಗೊತ್ತಾತ್ತಲೇ "  ಅಮ್ಮ.
ಅಣ್ಣಿ ನಾಯ್ಕ ಮೀನ ಮೇಷ ಎಣಿಸುವ ಹೊತ್ತಿಗೆ  ಸರಿಯಾಗಿ....
 ಗಣಪ ಗಣಪನ ತಾಯಿ ಅಂಗಳಕ್ಕೆ ಬಂದರು, ಗಣಪನ ತಾಯಿಯ ಕೈ ಗಣಪನ ಕಿವಿ ಗಟ್ಟಿಯಾಗಿ ಹಿಡಿದಿತ್ತು..
**********************                                      *********************

೨-  ಗಣಪ


ಎಲ್ಲಿಟ್ಟಿದ್ದ್ ಹೇಳಾ ಬಿಕನಾಸಿ, ಇನ್ನೂ ಬಿತ್ತು ಬೆನ್ನಿಗ್ ನಾಲ್ಕು.....

ಇಲ್ಲಮ್ಮಾ ಇಲ್ಲೇ ಯಾವ್ದೋ ಚೀಲ್ದಂಗ್ ಇಟ್ಟಿದ್ದೆ.....

ಯಾವ್ದ್ರಂಗೆ   ಇಟ್ಟಿದೆ ಬಗುಳೋ, ಕಿಚ್ ಹಿಡಿವವ್ನೇ...

ಯಾವ್ದ್ರಂಗೆ ಗೊತ್ತಾತಿಲ್ಲೆ ಎಲ್ಲಾ ಬಿಚ್ಚಿ ಕಾಣ್ಕಾ ಅಂದೆಳಿ, ಹೊಡಿ ಬ್ಯಾಡ ನಾನೇ ಹುಡ್ಕ್ತೆ......

ಈಗ ನಿಜವಾಗಿಯೂ ಅಣ್ಣಿ ನಾಯ್ಕ ಬೆಚ್ಚಿ ಬಿದ್ದ

(ಮುಂದುವರಿಯುವುದು)

ಸೀನ ಮತ್ತು ಅಣ್ಣೀನಾಯ್ಕನ ಪ್ರಸಂಗ






ಸೀನ ಮತ್ತು ಅಣ್ಣೀನಾಯ್ಕನ ಪ್ರಸಂಗ





೧. ಅಣ್ಣೀ ನಾಯ್ಕ
"ನಾಯ್ಕರೇ ಸಲ್ಪ ತಡಿನಿ ನಿಂತ್ಕಳಿ"
ಓಡಿ ಬಂದಿದ್ದ ಶೀನ ಏದುಸಿರು ಬಿಡುತ್ತಿದ್ದ. ನಾನೂ ಸೀನನೂ ಬರುವುದು ಸ್ವಲ್ಪ ತಡವಾಗಿದ್ದರೂ ಅಣ್ಣಿ ನಾಯ್ಕ  ಹೊರಟು ಹೋಗಿ ಆಗಿರುತ್ತಿತ್ತು.
"ಎ... ಏನಾಯ್ತಾ ಸೀನ"  ನಾಯ್ಕ ಗಾಬರಿಗೊಂಡ
"ಸಲ್ಪ ಲೆಕ್ಕ ತಪ್ಪಾಯ್ತ ಅಂತ್ ಕಾಣತ್ತ್..!!"
"ಆದ ಹೆಂಗಾ , ಅಲ್ದನಾ ದಿನ ಬೆಳ್ಗಾದ್ರ್ ಅವರದ್ ಅದೇ ಕೆಲಸ ಅಲ್ದಾನಾ ಆದ ಹೆಂಗ್ ತಪ್ಪತ್ ಅವ್ರ ಲೆಕ್ಕ"   ನಾನೆಂದೆ
ನಿನ್ ಶಾಲಿಗ್ ಹೊತಿಲ್ಲೇ ಎನಿಲ್ಲೇ ನಿಂಗ್ ಎಂತ ಗೊತ್ತಿತ್ ಅಡ್ಕಿ ಲೆಕ್ಕ..? ಇದು ಅವನ ಅಮ್ಮನ ಲೆಕ್ಕಾಚಾರ
ನಾನ್ ಹೇಳುದ್ ಎಂತ ಅಂದ್ರೆ....
"ನಿ ಎಂತ ಹೇಳುದು ಬ್ಯಾಡ ನಾಯಕರೆ ನಿವ ಲೆಕ್ಕ ಹೇಳಿ ಎಷ್ಟಾಯ್ತ್ ..? " ಅಮ್ಮ
"ಹೌದಮ್ಮ, ನಿಮ್ಮದು ಸಾವಿರ ಅಡ್ಕಿಗೆ ನೂರಕ್ಕೆ ಹತ್ ರುಪಾಯಿ ಲೆಕ್ಕದಂಗೆ ನೂರ್ ರುಪಾಯ್ ಆತ್ತ, ತಕಣಿ ನಿಮ್ ನೂರ್ ರುಪಾಯಿ"
ಅಲ್ದೆ ನಾಯಕರೆ ನಮ್ಮನಿ ಅಡ್ಕಿ ತಂದಿರಲ್ಲೇ ನೀವ ಅದ್ರಂಗೆ ಸಾವಿರದಿಪ್ಪತ್ ಅಡ್ಕಿ ಇದ್ದಿತ ನೀವ್ ಎರಡ್ ಸಾವಿರದ ಹ್ಯಾಂಗ್ ಅಮ್ಮಂಗ್ ದುಡ್ ಕೊಟ್ಟಿರಲ್ಲೇ ... ಮರ್ರಾಯ್ರೆ
ಇಲ್ಯಲೇ ನಾನ್ ಸರಿ ಲೆಕ್ಕ ಮಾಡಿ ಹಾಕಿನಲ್ಲೇ ಮಾರಾಯಾ
ಅಲ್ಲ ಅಮ್ಮ ನಿನ್ ಬೇರೆ ಕಡಿದ ಅದ್ರಂಗೆ ಸೇರ್ಸಿದ್ಯಾ ಮಾರಾಯ್ತಿ..? ಶಿನ ಅಮ್ಮನನ್ನು ಕೇಳಿದ
"ಹೌದೇನೋ ಹಂಗಾರೆ"   ಅಮ್ಮ
ಹಂಗಾರ್ ಅದ್ ಎರಡ ಸಾವಿರವೂ ಅಲ್ಲ ಮೂರ್ ಸಾವ್ರ ಆತ್ತೆ!!! ನೀವೇ ಸಾವರ್ ಅಡ್ಕಿ ದು ದುಡ್ ಕೊಡ್ಕಾತ್ತಲೇ,
"ಅದಲ್ಲ ಮಾರಾಯಾ.......... ನಾನ್ ಸರಿ ಲೆಕ್ಕ ಮಾಡಿ ಹಾಕಿನಲ್ಲೇ ಹಂಗಾರೆ " ನಾಯ್ಕ
"ಹಾಂಗಾರ್ ಒಂದುಪಾಯಾ ಮಾಡುವ , ಯಾವ್ದ ನಮ್ಮನಿ ಚೀಲ ಹೇಳಿ ನಾನ್ ಲೆಕ್ಕ ಮಾಡ್ತೆ " ಸೀನ
"ಅದೆಲ್ಲ ಬ್ಯಾಡ್ದಾ..ಸೀನ,  ನಾನೇ ನಿಂಗ್ ಸಾವಿರ ಅಡ್ಕಿ ದುಡ್ ಕೊಟ್ಟರ್ ಸೈ, ಅಲ್ದಾ ಇಗಾ ತಕಾ ನೂರ್ ರುಪಾಯಿ" .ನಾಯ್ಕ
"ನಂಗ್ ದುಡ್ ಬ್ಯಾಡ ಮಾರಾಯ್ರೆ ಅಡ್ಕಿ ಲೆಕ್ಕ ಮಾಡುವ ಸರಿ ಅಂದ್ರ ಸೈ ಇಲ್ಲೇ ಅಂದ್ರೆ ನೀವ ದುಡ್ ಕೊಡಿ , ಎಂತ ಅಂತ್ರಿ ಅಮ್ಮ " ಸೀನ

"ಹೌದಾ ನಾಯಕರೆ ಅಂವ ಹೇಳುದು ಸರಿಯೇ , ನೀವ ಒಂದ್ಸಲಿ ಲೆಕ್ಕ ಮಾಡಿ ಗೊತ್ತಾತ್ತಲೇ "  ಅಮ್ಮ.

ಅಣ್ಣಿ ನಾಯ್ಕ ಮೀನ ಮೇಷ ಎಣಿಸುವ ಹೊತ್ತಿಗೆ  ಸರಿಯಾಗಿ....

 ಗಣಪ ಗಣಪನ ತಾಯಿ ಅಂಗಳಕ್ಕೆ ಬಂದರು, ಗಣಪನ ತಾಯಿಯ ಕೈ ಗಣಪನ ಕಿವಿ ಗಟ್ಟಿಯಾಗಿ ಹಿಡಿದಿತ್ತು..


೨-  ಗಣಪ

ಎಲ್ಲಿಟ್ಟಿದ್ದ್ ಹೇಳಾ ಬಿಕನಾಸಿ, ಇನ್ನೂ ಬಿತ್ತು ಬೆನ್ನಿಗ್ ನಾಲ್ಕು.....

ಇಲ್ಲಮ್ಮಾ ಇಲ್ಲೇ ಯಾವ್ದೋ ಚೀಲ್ದಂಗ್ ಇಟ್ಟಿದ್ದೆ.....

ಯಾವ್ದ್ರಂಗೆ   ಇಟ್ಟಿದೆ ಬಗುಳೋ, ಕಿಚ್ ಹಿಡಿವವ್ನೇ...

ಯಾವ್ದ್ರಂಗೆ ಗೊತ್ತಾತಿಲ್ಲೆ ಎಲ್ಲಾ ಬಿಚ್ಚಿ ಕಾಣ್ಕಾ ಅಂದೆಳಿ, ಹೊಡಿ ಬ್ಯಾಡ ನಾನೇ ಹುಡ್ಕ್ತೆ......

ಈಗ ನಿಜವಾಗಿಯೂ ಅಣ್ಣಿ ನಾಯ್ಕ ಬೆಚ್ಚಿ ಬಿದ್ದ

(ಮುಂದುವರಿಯುವುದು)


Friday, February 24, 2012

ನವ್ಯ ಚಿತ್ರ ಕಲಾ ಪ್ರದರ್ಶಿನಿಯಲ್ಲಿದ್ದ ತ್ಯಾಂಪ

 
ನವ್ಯ ಚಿತ್ರ ಕಲಾ ಪ್ರದರ್ಶಿನಿ ಮತ್ತು ತ್ಯಾಂಪ


ಅವನಿಗೆ ಯಾವುದೂ ಅರ್ಥವಾಗುತ್ತಿರಲಿಲ್ಲ.
ಜನ ಯಾಕೆ ಈ ಸಿಕ್ಕಾಪಟ್ಟೆ ಬಣ್ಣ ಹಚ್ಚಿದ ಚಿತ್ರನೋಡುತ್ತಾರೆ ಎಂದು ಯೋಚಿಸುತ್ತಿದ್ದ.
ಆದರೂ ಎಲ್ಲರೂ ಪ್ರತಿ ಚಿತ್ರವನ್ನು ಗಮನಿಸುವಂತೆ ತಾನೂ ನಟಿಸುತ್ತಿದ್ದ.
ತ್ಯಾಂಪನ ಗಮನ ಒಬ್ಬನೆಡೆ ಹರಿಯಿತು.
ಆತ ಎಲ್ಲಾ ಕಲಾಕೃತಿಯ ಹತ್ತಿರವೂ ನಿಂತು ಚಿತ್ರವನ್ನು ಪರಾಂಬರಿಸುತ್ತಿದ್ದ.
ಎಲ್ಲಾ ಕಲಾಕೃತಿಯನ್ನೂ ಕೂಲಂಕುಶವಾಗಿ ಆತ ವೀಕ್ಷಿಸುವುದನ್ನು ನೋಡಿ ತ್ಯಾಂಪ ಅವನ ಬಳಿಬಂದು ನಿಂತ.
ತ್ಯಾಂಪನನ್ನು ನೋಡುತ್ತಾ ಆತ ನುಡಿದ " ನೋಡಿ ಈ ಚಿಕ್ಕ ಚಿಕ್ಕ ಚೌಕಟ್ಟಿನ ಚಿತ್ರಗಳು ಚೆನ್ನಾಗಿಲ್ಲ, ಆ ದೊಡ್ಡ ದೊಡ್ಡ ಚೌಕಟ್ಟಿನವುಗಳು ಉತ್ತಮ"
"ನೀವು ಚಿತ್ರಕಾರರೇ?" ಕೇಳಿದ ತ್ಯಾಂಪ
"ಅಲ್ಲ"
"ಮತ್ತೆ ವಿಮರ್ಶಕರೇ"
"ಅಲ್ಲ"
"ಹಾಗಿದ್ದಲ್ಲಿ ನೀವು ಯಾರು"
"ನಾನೊಬ್ಬ ಚೌಕಟ್ಟು ಮಾಡುವವ" ಎಂದನಾತ ತ್ಯಾಂಪನನ್ನು ಅಮೂಲಾಗ್ರವಾಗಿ ವೀಕ್ಷಿಸುತ್ತಾ.
ತ್ಯಾಂಪ ನಿಗೆ ಏನು ಹೇಳಬೇಕೆಂತಲೇ ಗೊತ್ತಾಗಲಿಲ್ಲ.
ತಪ್ಪಿಸಿ ಇನ್ನೊಂದೆಡೆ ಓಡಿದ.
ಅಲ್ಲಿ
ಪ್ರತಿ ಕಲಾಕ್ರತಿಗಳನ್ನೂ ತುಂಬಾ ಆಸಕ್ತಿಯಿಂದ ನೋಡುತ್ತಿದ್ದ ಒಬ್ಬ ಹೊಸ ಕಲಾಕಾರನಿದ್ದ.
ಅವನ ಜತೆಯಲ್ಲೇ ತಿರುಗ ತೊಡಗಿದ ತ್ಯಾಂಪ.
ನೋಡಿ ನೋಡಿ ಕೊನೆಯಲ್ಲಿ ಒಂದು ಕಲಾಕ್ರತಿ ತ್ಯಾಂಪನ ಗಮನ ಸೆಳೆಯಿತು.
ಅದೊಂದು ಬಿಳಿ ಚೌಕಟ್ಟು ಮಧ್ಯದಲ್ಲಿ ಎರಡು ವ್ರತ್ತಾಕಾರದ ಕಪ್ಪು ವಸ್ತುಗಳಿದ್ದವು.
ಎಷ್ಟು ಹೊತ್ತು ನೋಡಿದರೂ ಅರ್ಥವಾಗದೇ ಕೇಳಿದ " ಇದರ ಅರ್ಥವೇನು ಗೊತ್ತೇ?"
ಹೊಸ ಕಲಾಕಾರನಿಗೂ ಅರ್ಥವಾಗಲಿಲ್ಲ,
"ಪ್ರಾಯಷಃ ಜೀವನದ ಮುಖ್ಯ ಸಂದೇಶವಿರಬಹುದು ಅನ್ನಿಸುತ್ತಿದೆ" ಎಂದನಾತ.
ಪಕ್ಕದಲ್ಲಿದ್ದ, ಇಬ್ಬರನ್ನೂ ಸೂಕ್ಷ್ಮವಾಗಿ ಗಮನಿಸುತ್ತಲಿದ್ದ ಪಹರೆಯವ ಮುಗುಮ್ಮಾಗಿ ನುಡಿದ
" ಯಾಕಿಲ್ಲ, ಕತ್ತಲೆಯಿಂದ ಬೆಳಕಿಗೆ. ಬರಲು ಸಹಾಯ ಮಾಡುವ....................!!!!!!
ಇಬ್ಬರಿಗೂ ಮುಂದಿನ ಶಬ್ದ ಕೇಳುವ ಆತುರ...............
"ಅದೊಂದು ಸ್ವಿಚ್ ಬೋರ್ಡ್"

Thursday, February 23, 2012

ತ್ಯಾಂಪನ ಇಲಿಯ ಪ್ರಹಸನ





ತ್ಯಾಂಪನ ಇಲಿಯ ಪ್ರಹಸನ

ಏಯ್!!
ತಲೆಯೆತ್ತಿ ನೋಡಿದೆ
ತ್ಯಾಂಪ!!??!!ಏನಪ್ಪಾ ವಿಷೇಷ?
ಏನಿಲ್ಲ ಕಣೋ ಬೋರಾಯ್ತು, ಬಂದ್ಬಿಟ್ಟೆ.
ಒಳ್ಳೆಯದಾಯ್ತು ಬಿಡು
ಏನೂ ಬೋರಾದ್ದದ್ದಾ..? ನಾನು ಬಂದದ್ದಾ..?
ಎರಡೂ, ಏನ್ ತಗೋತೀಯಾ..?
ನೀನೇನು ಕೊಡ್ತೀಯೋ ಅದು..ಯಾವುದಾದರೂ ಆದೀತು..
ಬೆಲ್ ಮಾಡಿದೆ ಮಂಜು ಬಂದ
ಎರಡು ಜ್ಯೂಸ್ ತಗೊಂಬಾ ಅಂದೆ ಆತ ಹೋದ
ಅಂದ ಹಾಗೇ ನಿನಗೊಂದು ಗುಡ್ ನ್ಯೂಸ್ ಇದೆ ಕಣೋ ಅಂದ
ಏನು  ಹೇಳು
ಸ್ವರ ಕಮ್ಮಿ ಮಾಡಿ ಅಂಗೈಯನ್ನು ಬಾಯಿಗೆ ಅಡ್ಡ ಹಿಡಿದು ನನ್ನ ಕಿವಿಯಲ್ಲಿ ಮಾತ್ರ ಹೇಳೊ ಹಾಗೆ ಅಂದ
"ಫೇಸ್ ಬುಕ್ ತಂದಿದ್ದೇನೆ"
"ಏನೂ....???" ನನಗೆ ಆಶ್ಚರ್ಯ ನಗು ಏಕ ಕಾಲಕ್ಕಾಯ್ತು . ನಾನು ಕೇಳಿದ್ದು ತಪ್ಪಾ ಅಥವಾ ಇವನು ಹೇಳಿದ್ದಾ ಅರ್ಥ ಆಗ್ಲಿಲ್ಲ
ಪುನಹ ಅದೇ ಶೈಲಿಯಲ್ಲಿ ನುಡಿದ
"ಫೇಸ್ ಬುಕ್ ತಂದಿದ್ದೇನೆ"
ಇವನು ಹಾಗೆ ಹೊತ್ತು ತರಲು ಅದೇನು ಶೀನನ ಜೋನಿ ಬೆಲ್ಲ ಕೆಟ್ಟೋಯ್ತಾ..??
"ಅಂದರೆ..??"  ಕೇಳಿದೆ
"ಕೊಡ್ತೀನಿ ಇರು, ಅಂತಾ ಅವಸರ ಯಾಕೆ..?, ಅದೆಲ್ಲಿಗೂ ಓಡಿ ಹೋಗೊಲ್ಲಾ ಬಿಡು"
"ಅಲ್ಲಪಾ ಫೇಸು ಬುಕ್ಕೂ ಅಂದ್ರೇನೂ, ನೀನು ತರೋದು ಅಂದ್ರೇನೂ ಅರ್ಥ ಆಗ್ಲಿಲ್ಲ ಕಣೋ " ಎಂದೆ
"ಅಯ್ಯೋ ನಿನ್ನ.........!!!".ನಾನೊಂದು ಪೆಕರು ಅನ್ನುವಂತೆ ನೋಡಿದ "ನೀನೊಬ್ಬ ಬ.ಪೆ ( ಬರೀ ಪೆದ್ದು)"
"ಯಾಕೋ ಹಂಗಂತೀ..??"
"ಅಲ್ವೇ ಮತ್ತೆ"
"ಯಾಕೆ?"
"ಅಲ್ಲಾನಾ ನಿನ್ನ ಆಫೀಸಲ್ಲಿ ಫೇಸ್ ಬುಕ್ ಮನಾ ( ಬ್ಯಾನ್) ಮಾಡಿದ್ದಾರೆ ಅಂದೆಯಲ್ಲಾ"
"ಹೌದೂ....??!!"
"ಅದಕ್ಕೇ ನಾನು ಅದನ್ನ ನಿನಗಾಗಿ ತಕೊಂಡು ಬಂದಿದ್ದೇನೆ, ನೀನು ಇನ್ನು ಆರಾಮ್ ಆಗಿ ಅದನ್ನ ನಿನ್ನ ಕಂಪ್ಯೂಟರಿನಲ್ಲಿ ಉಪಯೋಗಿಸಿಕೊಳ್ಳಬಹುದು..."
ನನಗೆ ನಗು ಬಂತು ಆದರೆ ಈಗ ತೋರಿಸಿಕೊಳ್ಳೋ ಹಾಗಿಲ್ಲ
"ನೀವೆಲ್ಲಾ ಓದಿದೋರೂ ಅಂತೀರಾ ನೋಡಿದ್ಯಾ ನಾನು ಕಮ್ಮಿ ಓದಿದವನಾದ್ರೂ ನಿನಗಿಂತ ಬುದ್ದಿವಂತ ಅನ್ನೋದನ್ನ ಒಪ್ತೀಯಾ ಹಾಗಾದರೆ..??"
"ನಿಜವಾಗಿಯೂ  ಒಪ್ಪಿಕೊಳ್ತೇನೆ ಬಿಡು.. ಕೊಡು ಮತ್ತೆ..."
"ಏಯ್!! ನಿನ್ನ್ ಆಫೀಸಿನ ಜೋಕ್ ತರಾ ಮಾಡ ಬೇಡ ಎಲ್ಲಿದೆ ನಿನ್ನ ಆ ಜ್ಯೂಸ್..??"
"ಬರತ್ತೆ ಬಿಡು..."
ಏ"ನು ಬರುತ್ತೆ...?? ನೀನೇನ್ ನನ್ನನ್ನ ನಿನ್ನ ಹಾಗೇ ಅಂದ್ಕೊಂಡ್ಯಾ..??"
"ಯಾಕಪ್ಪಾ..??"
"ನೀನು ಹೇಳಿದ ಜೋಕು ನನಗೂ ನೆನಪಿದೆ ಇನ್ನೂ... ಮೊದಲು ಜ್ಯೂಸು ತರಿಸು" ಅಂದ..

ಮೂರು ಸಲ ಬೆಲ್ ಮಾಡಿದರೆ

ನನಗೊಬ್ಬ ಕಂಜ್ಯೂಸ್ ಸ್ನೇಹಿತನಿದ್ದ. ಎಲ್ಲರಿಂದಲೂ ತಾನು ಖರ್ಚು ಮಾಡಿಸ್ತಾನಾದರೂ ತಾನು ಒಂದು ಪೈಸೆನೂ ಬಿಚ್ಚೋ ಜನ ಅಲ್ಲ. ಒಮ್ಮೆ ಯಾವುದೋ ಕೆಲ್ಸದ ನಿಮಿತ್ತ ಬನಶಂಕರಿಗೆ ಹೋಗಿದ್ದೆ. ನೋಡದೇ ಸುಮಾರು ಕಾಲ ಆಯ್ತಲ್ಲ ಅಂತ ಅವನ ಹತ್ರಾನೂ ಹೋಗಿದ್ದೆ.
"ಹೋ....... ಗೋಪಿ ತುಂಬಾ ಅಪರೂಪದ ಭೇಟಿ" ಎಂದ

"ಚಾಯ್ ತರಿಸಲಾ..??" ಎಂದಂದು ಒಂದು ಬೆಲ್ ಮಾಡಿದ
"ಬೇಡಪ್ಪಾ ಚಾಯ್ ಬಿಟ್ಟು ತುಂಬಾನೇ ಸಮಯ ಆಯ್ತಲ್ಲಾ" ಎಂದೆ
"ಹೋ ಹಾಗಾದರೆ ಕಾಫೀ..??" ಈಗ  ಎರಡು ಸಲ ಬೆಲ್ ಮಾಡಿದ
"ಈ ಉರಿ ಬಿಸಿಲಲ್ಲಿ..?" ಎಂದೆ
"ಹಾಗಾದರೆ ತಂಪು ಕಬ್ಬಿನ ಹಾಲು..?......... ಬೇಡ ಮೂಸುಂಬೀ ಜ್ಯೂಸ್ ಆದೀತು"  ಎಂದವ ನನ್ನ ಉತ್ತರಕ್ಕೂ ಕಾಯದೇ ಮೂರುಸಲ ಬೆಲ್ ಮಾಡಿದ.
ಅದೂ ಇದೂ ಮಾತನಾಡುತ್ತಾ ಕಾಲ ಕಳೆದೆವು, ಸರ್ದಾರ್ಜೀ ಜೋಕುಗಳಿಂದ ಮೊನ್ನೆ ಮೊನ್ನೆ ಕ್ರಿಕೆಟ್ ನಲ್ಲಿ ಸೋತ ವಿಷಯ ಸಹಾ ಬಂತು. ಇವನ ಜ್ಯೂಸ್ ಮಾತ್ರ ಬರಲೇ ಇಲ್ಲ ಅರ್ಧ ಗಂಟೆ ಕಾದು ನಾನೇ ಕೇಳಿದೆ "ಎಲ್ಲೋ ಜ್ಯೂಸು..?"
"ನೋಡಿದ್ಯಾ ನಮ್ಮ ಕೆಲಸಗಾರರು ಮೈಗಳ್ಳರು ........ಹೇಗೆ ಇವರನ್ನು ಸರಿ ಮಾಡೋದು ಗೊತ್ತಾಗೋಲ್ಲ ಕಣೋ, ನೀನೇ ನೋಡಿದ್ಯಲ್ಲ ಹೇಳಿ ಅರ್ಧ ಗಂಟೆ ಆಯ್ತು " ಎಂದ.
ನಾನೇ ಆಫೀಸಿನ ಒಳಹೊಕ್ಕೆ ಮಂಜು ಡಿಸ್ಪಾಚ್ ಸೆಕ್ಷನ್ ನಲ್ಲಿ ತೂಕಡಿಸುತ್ತಿದ್ದ.
ಎಚ್ಚರಿಸಿ ಕೇಳಿದೆ "ಯಾಕೋ ಸಾಹೇಬರು ಅಷ್ಟಲ್ಲದೇ ಹೇಳಿದ್ರೂ ನೀನೇನೂ ಕೆಲ್ಸ ಮಾಡೊಲ್ಲವಲ್ಲಾ" ಎಂದೆ
"ಅವರು ಏನೂ ಹೇಳ್ಲಿಲ್ಲ ಸಾರ್" ಎಂದ
"ನಾನೇ ಸ್ವತಃ  ನೋಡಿದ್ದೆ " ಅಂದೆ
"ಏನನ್ನು..?" ಕೇಳಿದ
" ಮೂಸುಂಬಿ ಜ್ಯೂಸಿಗೆ ಮೂರುಸಲ ಬೆಲ್ ಹೊಡೆದದ್ದನ್ನು" ಅಂದೆ
"ನೀವು ಹೊಸಬರು ಬಿಡಿ ಸಾರ್" ಎಂದ ಒಂದು ತರಾ ನಕ್ಕು
"ಆದರೆ ಬೆಲ್ಲ್  ಹೊಡೆದದ್ದಕ್ಕೂ  ಅದಕ್ಕೂ ಏನೋ ಸಂಬಂಧ" ಕೇಳಿದೆ ಜೋರಲ್ಲಿ
"ಅದೇ ಸಾರ್, ಮೂರು ಸಲ ಬೆಲ್ ಹೊಡೆದರೆ ಏನೂ ತರಬೇಡ ಅಂತಾನೇ ಅರ್ಥ".ಎಂದ ಮುಗುಮ್ ಆಗಿ


ಇದೇ ಜೋಕನ್ನ ಸೀನನಿಗೂ ಇವನಿಗೂ ಹೇಳಿದ್ದೆ  ಆಗ ಇಬ್ಬರೂ ನಕ್ಕಿದ್ದರು .ಈಗ ಅದನ್ನೇ ನನ್ನ ತಲೆಗೇ ಕಟ್ಟುತ್ತಿದ್ದಾನೆ
ಅಷ್ಟರಲ್ಲಿ ಮಂಜು ಜ್ಯೂಸ್ ತಂದ
ಕೊಳವೆ ಬಾಯಿಗಿಟ್ಟುಕೊಂಡು ಜೋರಾಗಿ ಸಪ್ಪಳ ಬರುವ ವರೆಗೆ ಹೀರಿ ಗ್ಲಾಸಿನಲ್ಲಿ ಅದರ ನೊರೆಯೂ ಬಿಡದಂತೆ ಖಾಲಿ ಮಾಡಿದ...
ಈಗ ಹೇಳು ಎಂದೆ..
ಏನು ಜ್ಯೂಸ್ ಬಗ್ಗೇನಾ ನಿನ್ನ ಫ್ರೆಂಡ್ ಬಗ್ಗೇನಾ?
"ಎರಡೂ ಅಲ್ಲ ನೀನೇನೋ ನನಗಾಗಿ ತಂದೆ ಎಂದೆಯಲ್ಲಾ ಅದರ ಬಗ್ಗೆ"
ಏನದು..??
"ನೀನು ಹೇಳಬೇಕು ಅದನ್ನ" ಅಂದೆ ನಾನು ಮತ್ತೆ ಮರೆವು ಬಂತಾ ಹೇಗೆ ಇವನಿಗೆ.
ಮೊದಲು ಬಂದಾಗ ನಾನೂ ಸೀನನೂ ಕಡಿಮೆ ಅಧ್ವಾನ ಪಡಲಿಲ್ಲ ಅವನನ್ನು ಸರಿ ಮಾಡಲು , ನಿಮ್ಹಾನ್ಸ್ ಗೆ ಬೇರೆ ಹೋಗಿದ್ದೆವು.
ಇಲ್ಲ ಹಾಗೇನೂ ಆಗಿರಲಿಕ್ಕಿಲ್ಲ. ಪುನಃ ಯಾಕೆ ... ಕೋಲು ಕೊಟ್ಟು...ತಿನ್ನಬೇಕು..??
ಅಷ್ಟರಲ್ಲಿ ಕಿಸೆಯಿಂದ ಕಪ್ಪಗಿನದ್ದೇನೋ ಹೊರತೆಗೆದ
ಅದೊಂದು ಕಪ್ಪನೆಯ ವಯರ್.
ಈ ವಯರಲ್ಲಿ...??
ಅಲ್ಲಪ್ಪಾ ಇದು ಇಲಿ" ಎಂದ
ಇಲಿಯಾ...??
ಹೌದು ಇಲಿ
ಇದು ಹೇಗೋ ಇಲ್ಲ..... ಇಲ್ಲಿ ಬೆಕ್ಕಿಲ್ಲವಾ..
ಅಷ್ಟರಲ್ಲಿ ಪೂರ್ತಿ ಹೊರತೆಗೆದ
ಅದೊಂದು ಮೌಸ್
ಇದರಲ್ಲಿ...??
ಹೌದು ಇದೆ
ಅಂದರೆ ಹೇಗೆ..?
ನಮ್ಮ ಅಫೀಸಿನ ಕಂಪ್ಯೂಟರಿನಿಂದ ಫೇಸ್ ಬುಕ್ ಸೆಲೆಕ್ಟ್ ಮಾಡಿ ಕಾಪಿ ಮಾಡಿಕೊಂಡು ತಂದಿದ್ದೇನೆ. ಎಲ್ಲಾ ಇದರಲ್ಲಿ ಇದೆ ಬಿಡು. ಅದನ್ನ ನಿನ್ನ ಕಂಪ್ಯೂಟರಿನಲ್ಲಿ ಅಂಟಿಸಿಕೋ. ಎಲ್ಲಾ ಬರತ್ತೆ. ಯಾರಾದರೂ ಬಂದರೆ ಈ ಇಲಿಯನ್ನು ತೆಗೆದು ಪಕ್ಕಕ್ಕೆ ಇಡು ಯಾರಿಗೂ ಗೊತ್ತಾಗಲ್ಲ.
ನಗಬೇಕೋ ಅಳಬೇಕೋ ಗೊತ್ತಾಗ್ಲಿಲ್ಲ
ಇವನನ್ನ ಹರಿಪ್ರಸಾದ ನಾಡಿಗರ ಹತ್ತಿರ ಹಳುಹಿಸಿದರೆ..??
ಬೇದವೇ ಬೇಡ ಪಾಪ ಮೊದಲೇ ಅವರಿಗೆ ಜಾಸ್ತೀ ಬ್ಯೂಸಿ, ಮತ್ತೆ ಇವ ಏನಾದರೂ ಅಲ್ಲಿಗೆ ಹೋದರೆ ಸಂಪದದ ಲಗಾಡಿ ತೆಗೆದಾನು.
ಮತ್ತೆ ಪ್ರಸನ್ನ ಶಂಕರ ಪುರರ ಹತ್ತರಾನೋ ಶ್ರೀಧರ ಬಂಡ್ರಿಯವ ಹತ್ರಾನೋ ಕಳುಹಿಸೋಣವೇ ಅಂದ್ಕೊಂಡೆ.
ಆದರೆ ನನ್ನ ತಲೆ ತಿಂದ ಹಾಗೆ ಅವರ ತಲೆ ನೂ ತಿಂದ್ರೆ ಕಷ್ಟ ಅನ್ನಿಸಿತು.
ಸರಿ  ಅಲ್ಲೇ ಇಡು ಎಂದೆ.
ಇವನ್ನೇನ್ರೀ ಮಾಡೋಣ..???

Friday, February 3, 2012



ಶರಾಬು ಕುಡಿಯುವುದು ಒಳ್ಳೆಯದು..??





ಅದೊಂದು ವಯಸ್ಕರ ಶಾಲೆ
ತ್ಯಾಂಪ ಆದಿನ ಅಲ್ಲಿ ಕುಡಿತದಿಂದಾದ ದುಷ್ಪರಿಣಾಮಗಳು ಪಾಠ ಮಾಡಲಿದ್ದ..
ಅದನ್ನೊಂದು ವಿಶೇಷ ದಿನವನ್ನಾಗಿ ಮಾಡಲೆಂದು ತ್ಯಾಂಪ ತನ್ನ ಕೈಯ್ಯಲ್ಲಿ ಶರಾಬು ಬಾಟ್ಲಿ ಹಿಡಿದೇ ಹೊರಟಿದ್ದ.
ಉತ್ಸಾಹದಲ್ಲಿ ಸ್ವಲ್ಪ ಬೇಗನೇ ಹೊರಟಿದ್ದ ಶಾಲೆಗೆ.

ಹೋಗಿ ನೋಡುತ್ತಾನೆ ಒಬ್ಬ ವಿದ್ಯಾರ್ಥಿ ಶಾಲೆಯ ಬಾಗಿಲ ಬೀಗವನ್ನು ತೆರೆಯಲು ಪ್ರಯತ್ನ ಪಡುತ್ತಿದ್ದ.
ಒಳಗಿನ ಎಣ್ಣೆಯ ಪ್ರಭಾವ ಪಾಪ ಬೀಗದ ತೂತಿನಲ್ಲಿ ಬೀಗದ ಕೈ ಸಿಕ್ಕಿಸಲಾಗುತ್ತಿಲ್ಲ ಆತನಿಗೆ.
ತ್ಯಾಂಪ ನೋದಿ ನೋಡಿ ಸಾಕಾಗಿ ಕೇಳಿದ ಕೈ ಕೊಡು ನಾನು ಬೀಗ ತೆಗೆಯುತ್ತೇನೆ
ಆತ ಹೇಳಿದ ತ್ಯಾಂಪನ ಕೈಯ್ಯಲ್ಲಿದ್ದ ಬಾಟ್ಲಿಯನ್ನು ನೋಡುತ್ತಾ " ನೀನು ಅಲುಗಾಡುತ್ತಿರುವ ಬಾಗಿಲನ್ನೊಮ್ಮೆ ಹಿಡಿದುಕೋ, ಬೀಗ ನಾನು ತೆರೆಯುತ್ತೇನೆ."
ಶಾಲೆ ಆರಂಭವಾಯ್ತು.
ಬಾಗಿಲು ತೆಗೆದವ ಇವನನ್ನು ನೋಡುತ್ತಾ ಉಸುರಿದ" ತಪ್ಪಯ್ತು ಮಾಸ್ತರೇ, ನೀವು ನನ್ನ ಶರಾಬು  ಬಿಡಿಸುತ್ತೀರಾ..?
ತ್ಯಾಂಪನೆಂದ "ಯಾಕಿಲ್ಲಾ ..? "
ಖುಷಿಯಲ್ಲಿ ಆತ ಹೇಳಿದ ಹಾಗಾದರೆ ನನ ಎರಡು ಪೆಟ್ಟಿಗೆ ಶರಾಬು ಪೋಲೀಸರು ಹಿಡಿದಿದ್ದಾರೆ ಬಿಡಿಸುತ್ತೀರಾ..??
ಅಂತೂ ಕ್ಲಾಸು ಶುರುವಾಯ್ತು.
ತನ್ನ ಕೈಯ್ಯಲ್ಲಿದ್ದ ಶರಾಬಿನ ಬಾಟ್ಲಿಯನ್ನು ತೋರಿಸುತ್ತಾ ನುಡಿದ ತ್ಯಾಂಪ
ನೋಡಿದಿರಾ ಮಕ್ಕಳೇ ಅಲ್ಲಲ್ಲ ವಯಸ್ಕರೇ ಈ ಶರಾಬಿನ ಬಾಟ್ಲಿಯಲ್ಲಿ ಎರಡು ನೊಣಗಳನ್ನು ಹಾಕಿದ್ದೆ
ಓಹ್!!!! ಕೋರಸ್
ಆದರೆ ಈಗ ನೋಡಿ ಅವೆಲ್ಲ ಸತ್ತು ಹೋಗಿವೆ. ಇದರಿಂದ ನಮಗೆ ಏನು ಗೊತ್ತಾಗುತ್ತದೆ..?
ಮೊದಲಿನ ಕುಡುಕ ಹೇಳಿದ" ತ್ಯಾಂಪಣ್ಣನವರು ಈ ಶರಾಬಿನ ಬಾಟ್ಲಿಯಲ್ಲಿ ಎರಡುಜೀವಂತ ನೊಣಗಳನ್ನು ಹಾಕಿದ್ದರು, ಸ್ವಲ್ಪ ಸಮಯದ ನಂತರ ನೋಡಿದಾಗ ಅವು ಸತ್ತು ಹೋಗಿವೆ. ಇದರಿಂದ ನಮಗೆ ಏನು ತಿಳಿಯುತ್ತದೆ ಅಂದರೆ....??
ತ್ಯಾಂಪ ಖುಷ್!!!
ಶರಾಬು ಕುಡಿಯುವದರಿಂದ ನಮ್ಮ ಹೊಟ್ಟೆಯೊಳಗಿನ ಹುಳ ಹಪ್ಪಡಿಗಳೆಲ್ಲ ಸಾಯುತ್ತವೆ ಆದುದರಿಂದ ಶರಾಬು....
ತ್ಯಾಂಪ ಆಕಾಶಕ್ಕೇರಿದ, ತನ್ನ ಪಾಠದ ಕ್ರಮ ಬಿಲ್ ಕುಲ್ ಸರಿ!!!
ಕುಡುಕ ಮುಂದುವರಿಸಿದ್ದ.." ಆದುದರಿಂದ  ನಾವು ದಿನಾ ಶರಾಬು ಕುಡಿಯುವುದು ಒಳ್ಳೆಯದ್ದು.
ತ್ಯಾಂಪ ದೊಪ್ಪನೆ ಕೆಳಗೆ ಬಿದ್ದ,
ಪ್ರಿನ್ಸಿಪಾಲ ಬರದಿದ್ದರೆ ಅಲ್ಲುಳಿದ ಬಾಟ್ಲಿಯ ಶರಾಬು ತ್ಯಾಂಪನ ಬಾಯೊಳಗೇ ಹೋಗುತ್ತಿತ್ತು.