ಕುಂದಾಪುರ ಕನ್ನಡ

ನನ್ನ ಇತಿಹಾಸದ ಕ್ಲಾಸ್............ಮರ.. ಕೆಸುವಿನ ಪತ್ರೊಡೆ ಮತ್ತು ಸೀನ

ಹ್ಞಾ ಎಲ್ಲಿಯವರೆಗೆ ಓದಿದ್ದೆವು...?"
ಕಾರಂತರ ಕ್ಲಾಸ್ ನಲ್ಲಿ ಈ ಒಂದು ಪ್ರಶ್ನೆ ಬಾರದ ದಿನವೇ ಇಲ್ಲ ಎನ್ನಬಹುದು.
ಎರಡನೇ ಕ್ಲಾಸ್ ಫೈಲ್ ಸಾರ್........................!!
!
ಮೊದಲನೇ ಪದವಿ ಪೂರ್ವ ರಸಾಯನ ಶಾಸ್ತ್ರದ ತರಗತಿ ಅದು.
ಈ ಉತ್ತರ ಬಂದರೆ ಹೇಗಾಗಿರಬೇಡ." ನೀವು ಈಗಾಗಲೇ ಊಹಿಸಿರಬಹುದು ಈ ಉತ್ತರ ಸೀನನಿಂದ ಮಾತ್ರ ಬಂದಿರಬಹುದು..... ಅಂತ,
ನೂರಕ್ಕೆ ನೂರು ಸರಿ ನಿಮ್ಮ ಊಹೆ. .............ಕಾರಣ...

" ಥರ್ಮಾಸ್ ಫ್ಲಾಸ್ಕ್..... ನಿನ್ನೆ ನಾವು ಇದರಬಗ್ಗೆ ಕಲಿತುಕೊಂಡಿದ್ದೆವು, ಮನೆಯಲ್ಲಿ ಕಾಫಿ ಟೀ, ಹಾಲು ಮುಂತಾದವುಗಳನ್ನು ತುಂಬಾ ಹೊತ್ತಿನ ವರೆಗೆ ಬಿಸಿಯಾಗಿಡಲು, ಅಥವಾ ಕೆಡದೇ ಇಡಲು ಇದನ್ನ ಉಪಯೋಗಿಸುತ್ತೇವೆ"
ಈಗ ಒಂದು ಕೈ ಮೇಲೆ ಬಂತು.
ಎದ್ದು ನಿಲ್ಲಿ... ಏನು ಹೆಸರು??
ಸೀನ"
"ಗೊತ್ತಿದೆಯಲ್ಲಾ............?..
"ಜಾಸ್ತಿ ಹೊತ್ತು ಉಳಿಲಿಲ್ಲ, ಮೇಲಿಂದ ಕೆಳಗೆ ಬಿತ್ತು , ಒಡೆದೋಯ್ತು."
ಆದರೆ ಸೀನಾ, ಸ್ವಲ್ಪದರಲ್ಲಿ ಹಾಗೆಲ್ಲಾ ಫ್ಲಾಸ್ಕ್ ಒಡೆಯೋಲ್ಲವಲ್ಲ?
ಫ್ಲಾಸ್ಕ್ ಅಲ್ಲ , ಒಡೆದದ್ದು ..............ಹಾಲು"
ಮೂಲೆಯಿಂದ ಶುರುವಾದ ನಗೆಯ ಅಲೆಯೊಂದು ಇಡೀ ಕ್ಲಾಸ್ ಹರಡಿತು.
" ಸರಿ ಸರಿ ...ಕೂತ್ಕೋ ಕೆಳಕ್ಕೆ..." ಪುನಹ ನಗು.
"ಕೆಳಗೆ ಅಂದ್ರೆ ನೆಲದಲ್ಲಿ ಅಲ್ಲಾ ಸ್ಟುಪಿಡ್....... ಬೆಂಚಿನ ಮೇಲೆ..."
"ಹಾಗೇ ಮಾಂಸವನ್ನು ಹೆಚ್ಚು ಕೆಡದೇ ಇಡಬೇಕಾದರೆ ಅದನ್ನು ಶೀತಲೀಕರಣ ಮಾಡಬೇಕು ಅಂದರೆ, ನಾವು ಹೆಚ್ಚು ಸಮಯ ಕೆಡದೇ ಇಡಬಹುದು, ಸಾಮಾನ್ಯವಾಗಿ ಹೆಚ್ಚೆಂದರೆ................" ..
ಸೀನನ ನೋಟ ಬೆರೆಯುತ್ತಲೇ, ಎದ್ದು ನಿಂತ ಸೀನ
"ಡಾ ಖಾಲಿಲ್.. ಹೇಳ್ತ್ರ್ ಒಂದ್ ದಿನಕ್ಕೂ ಜಾಸ್ತಿ ಇಡೂಕಾತ್ತ್"
"ಗುಡ್ ನನಗೇ ಗೊತ್ತಿರಲಿಲ್ಲ ಈ ವಿಷಯ... ಅಂದ ಹಾಗೇ ಯಾರು ಈ ಡಾಕ್ಟರ್ ಖಾಲಿಲ್..?
ಡಾಕ್ಟರ್ ಅಲ್ಲ, ಡಾಗರ್ ಖಾಲಿಲ್
ಹ್ಞೂ ಅವರೇ .. ಯಾರಾತ?
ನಮ್ಮ ಮನೆ ಗಲ್ಲಿ ಯಗೆ ಮಾಂಸದ ಅಂಗಡಿ ಹೈಕಂಡ್ ಇದ್ದ
"ಯಾರೀ..?. ಇದೂ ಸೀನ .. ನೋಡಿ ಶ್ರೀಮಾನ್ ಸೀನ....!!!"

"ಶ್ರೀಮಾನ್ ಅಲ್ಲ ಚೌತಿಪಾಲ್ ಸೀನ.. " ತಿದ್ದಿದ
ಒಕೆ.. ಓಕೆ................. ನಾವೆಲ್ಲಿಯವರೆಗೆ ಓದಿದ್ದು...?
ಉತ್ತರ ಬಂತು "ಎರಡನೇ ಕ್ಲಾಸ್ ಫೈಲ್ ......!!" ಒಡೆಯಿತು ಕಟ್ಟೆ
"ಇಲ್ಲಿಗ್ಯಾಕ ಬಂದದ್ದು?.................

"ಕಥಿ ಹೈಲ್ ಅಯ್ತಲ್ಲ ಮರಾಯ್ರೆ,
ನಾನು ಬಂದದ್ದು ಇಲ್ಲಿಗಲ್ಲ ಕೆಸುವಿನೆಲೆ ಪತ್ರೊಡೆ ತಂದಿದ್ದೆ, ಜೋಯಿಸರಿಗೆ , ತಪ್ಪಕೆ ಹೇಳದ್ದ ಗೋಪಿನಾಥ ನಿಮ್ಮ ಆ ಜುಟ್ಟಿನ ಬಟ್ರ ನನ್ನ ಕರ್ಕಂಡ್ ಇಲ್ಲಿಗೆ ಬಂದ್ ಬಿಟ್ರ. ನಾನಲ್ಲ ಅಂದ್ರೂ ಕೇಣಲ್ಲೆ.
ಎಂತ ಮಾಡೂದ್ ನೀವೇ ಹೇಳೀ"
ಕಾರಂತರ ಕ್ಲಾಸಲ್ಲಿ ಹೊರಗಡೆ ಹಾಗೆಲ್ಲಾ ಯಾರು ತಿರುಗಾಡುತ್ತಾ ಇರೋ ಹಂಗಿಲ್ಲ, ಜುಟ್ಟಿನ ಬಟ್ಟ ಯಾರಿದ್ದರೂ ಜಬರ್ದಸ್ತಿ ಕ್ಲಾಸಿಗೆ ಕರೆದುಕೊಂಡು ಹೋಗಿ ಬಿಡುತ್ತಿದ್ದ. ಇವತ್ತು ನಮ್ಮ ಭಾವನಿಗೆಂತ ಪತ್ರೊಡೆ ತಂದು ಸೀನ ಬಟ್ಟನ ಹತ್ತಿರ ಸಿಕ್ಕಿ ರಸಾಯನ ಶಾಸ್ತ್ರದ ಕಾರಂತರ ಕೈಲಿ ಸಿಕ್ಕಿಬಿದ್ದಿದ್ದ.

"ಯಾರ್ರೀ ಗೋಪಿನಾಥ..? .............".
ಕೋರಸ್ "ಇವತ್ತು ಬರಲಿಲ್ಲ ಸಾರ್...."

ನಾನು ಕ್ಲಾಸಿಗೆ ಯಾಕೆ ಬರಲಿಲ್ಲ ಎಂದು ನಿಮಗೆ ಗೊತ್ತಾಗಲು ನೀವು ಸ್ವಲ್ಪ ಕಾಲ ಹಿಂದಕ್ಕೆ ಹೋಗಬೇಕು.............

ಆಗೆಲ್ಲ ನನಗೆ ಯಕ್ಷಗಾನದ ಹುಚ್ಚು ಬಹಳ, ಎಲ್ಲಕ್ಕಿಂತ ನಾನು ಮಾಸ್ತರ ಮಗ ಅಂತ ಇಡಗುಂಜಿ ಮೇಳದದ್ದಾದರೆ ಫ್ರೀ ಪಾಸ್, ತಂದೆಯವರಿಗೆ ಪರಿಚಯಾಂತ, ನಮ್ಮ ಅಮ್ಮನ ಮನೆ ಉತ್ತರಕನ್ನಡ ಅದಕ್ಕೆ.ರಾತ್ರೆಯ ಯಕ್ಷಗಾನ ಮುಗಿಸಿ ನೇರ ಕ್ಲಾಸಿಗೆ ಬಂದಿದ್ದೆ. ಜಾಸ್ತಿ ಬೇಗನೇ ಅಂದರೆ ಸುಮಾರು ೭ ಗಂಟೆಗೇ ಪ್ರಿನ್ಸಿಪಾಲ ರೂಮಿನ ಪಕ್ಕದ ರೂಮಿನೊಳಕ್ಕೆ ನುಗ್ಗಿ ಹಿಂದಿನ ಬೆಂಚನಲ್ಲಿ ಮಲಗಿಬಿಟ್ಟಿದ್ದೆ. ಹಾಗೇ ಜೊಂಪು ಹತ್ತಿತ್ತು.

ಕ್ಲಾಸ್ ಶುರುವಾದ ಹಾಗೇ, ವಿಧ್ಯರ್ಥಿಗಳೆಲ್ಲರೂ ಒಮ್ಮೆಲೇ ನುಗ್ಗಿ ಬಂದ ಹಾಗೇ, ಶೆಟ್ರು ಮಾಸ್ಟ್ರು ಬಂದ ಕ್ಲಾಸ್ ಶುರು ಮಾಡಿದ ಹಾಗೆ..
ಯಾರೋ ಅಲುಗಾಡಿಸಿದ ಹಾಗೆ ಆಯ್ತು. ಬಾವಿಯೊಳಗಿಂದ ಸೀನನ ಸ್ವರ... ಈತ ನಿದ್ದೆಯಲ್ಲೂ ನನ್ನ ಬಿಡ.. ಹೇಳೋಣ ಅಂದ್ಕಂಡೆ,.. ಹೇಳಲಿಲ್ಲ..
ಕೆಸುವಿನ ಪತ್ರೊಡೆ ತಂದ್ನಾ ಅಂದ. ನಿದ್ದೆಯಲ್ಲೂ ನನ್ನ ಅತ್ಯಂತ ಪ್ರೀತಿಪಾತ್ರ ತಿಂಡಿ ಅದು!!!!!! ಧಡ್ ಅಂತ ಎದ್ದೆ.
ಆಗಲೇ ಚಟೀರ್ ಅಂತ ಏಟು ಬಿತ್ತು ಕೆನ್ನೆ ಚುರೀಲ್ ಅಂತು.
ಹಾಗಾದರೆ ಇಷ್ಟರ ವರೆಗಿನದ್ದು ನನ್ನ ಕನಸು ನಿಜವಾದದ್ದೇ

ಇದಿರಲ್ಲಿ ಶೆಟ್ರು ದುರುಗುಟ್ಟಿಕೊಂಡು ನಿಂತಿದ್ದರು ಅವರ ಫೋಸು ನೋಡಿದರೆ ಕೆನ್ನೆಗೆ ಬಾರಿಸಿದ್ದು ಅವರೇ ಅನ್ನಿಸಿತು..
"ಸರ್ ಇವನು ಸೈನ್ಸ್ ಕ್ಲಾಸ್ .. " ಪಕ್ಕದ ಕೋರಸ್
ಯಾಕೋ ಕತ್ತೆ ಭಢವಾ ಬೇರೆ ಕ್ಲಾಸಲ್ಲಿ ಬಂದು ನಿದ್ದೆ ಮಾಡ್ತಾ ಇದ್ದಿಯೇನೋ... " ಉಳಿದದ್ದು ನನಗೆ ಕೇಳಿಸಲಿಲ್ಲ

ಯಾಕೆಂದರೆ ...ಬಿದ್ದೇನೋ ಕೆಟ್ಟೆನೋ ಎದ್ದು ಓಡಿದ್ದೆ.... ಹೊರಕ್ಕೆ
ಆಗ ಕೇಳಿಸಿತು... ಪರಿಚಿತ ಸ್ವರ .

ಏಯ್!!. ಜೊಯ್ಸರಿಗೆ..... ಪತ್ರೊಡೆ!!!!...

ಇದಿರಲ್ಲಿ ಸೀನ!!!

ನಾನು ಪೆಟ್ಟು ತಿಂದದ್ದು ಈತ ನೋಡಿರಬಹುದಾ?

No comments:

Post a Comment