ತ್ಯಾಂಪ ಸೀನನ ಕಂಪೂಟರ್ ಕಲಿಕೆ 1
ಹದಿನಾ.......ರು ಪೇಜಿನ ರಿಪೋರ್ಟ್ ಅದು.
ಎಲ್ಲಾ ಲೆಕ್ಕಾಚಾರ ಮಾಡಿ ಸರಿಯಾಗಿ ಕ್ರಾಸ್ ಚೆಕ್ ಮಾಡಿಟ್ಟಿದ್ದೆ.
ತ್ಯಾಂಪ ಮತ್ತು ಶೀನ ಇಬ್ಬರೂ ವಕ್ಕರಿಸಿದರು... ಛೇ ಅಲ್ಲಲ್ಲಪ್ಪಾ ನನ್ನ ಆಪ್ತ ಸ್ನೇಹಿತರಲ್ಲವ್ರಾ ಇವ್ರು..?
ಬರಲೇನಾ ಒಳಕ್ಕೇ......?
ಬಂದಿದ್ದಾಯ್ತಲ್ಲಾ... ಬನ್ರೀ ಬನ್ರೀ .. ಏನು ವಿಶೇಷ ಇಬ್ಬರೂ ಒಟ್ಟಿಗೇ..??
ನಾವು ಕಂಪ್ಯೂಟರ್ ಕಲೀತಾ ಇದ್ದೀವಿ...
ಅರ್ರೇ ತುಂಬಾನೇ ಒಳ್ಳೆಯ ವಿಷಯ ಇದು.. ಏನೆನೆಲ್ಲಾ ಕಲಿತ್ರಿ..??
ಸುಮಾರಾಗಿ ಎಲ್ಲಾ ಕಲೀತಾಯ್ತು,... ಇಲ್ಲಿ ನಿನ್ನ ಕಂಪ್ಯೂಟರಿನಲ್ಲಿ ತೋರಿಸಲಾ..?
ತ್ಯಾಂಪ ಆಪ್ತವಾಗಿ ಕೇಳಿದಾಗ ನನಗೆ ಬೇಡ ಎನ್ನಲಾಗುವುದಿಲ್ಲ ನನ್ನ ದೌರ್ಬಲ್ಯ ಅದು, ಅದು ಇವರಿಬ್ಬರಿಗೂ ಗೊತ್ತು, ಮತ್ತು ನನಗೂ.
ನೋಡಪ್ಪಾ ಏನಾದ್ರೂ ಮಾಡಿ, ಆದರೆ ನನ್ನ ಫೈಲ್ ಮುಟ್ಟಬೇಡಿ. ಆಯ್ತಾ.
ನಾನೊಂದು ಹೊಸ ವಿಷಯ ಹೇಳ್ತೇನೆ, ನಿಮಗೇನಾದರೂ ನಮ್ಮ ಕಂಪ್ಯೂಟರಿನಲ್ಲಿ ಬೇಕಾದರೆ ಕಂಟ್ರೋಲ್ ಪ್ಲಸ್ ಎಫ್ ಒತ್ತಿದರಾಯ್ತು. ಒಂದು ಟಾಸ್ಕ್ ಬಾರ್ ಬರ್ತದೆ
ಇಲ್ಲಪ್ಪ ನಮಗೆ ಹಗಲಲ್ಲಿ ಅಂತಹಾ ಕುಡಿಯುವ ಮೂಡೇನೂ ಇರಲ್ಲಾ
ತುಥ್!! ಅದಲ್ಲಾ ಮರಾಯಾ ಶೀನ ನನ್ನ ನೆರವಿಗೆ ಬಂದ
ಆ ಬಾರ್ ಲ್ಲಿ ಏನು ಬರೆಯುತ್ತೀರೋ ಅದನ್ನು ನಿಮಗೆ ಕಂಪ್ಯೂಟರ್ನಲ್ಲಿ ತೋರಿಸುತ್ತದೆ
ಇಬ್ಬರ ಮುಖದಲ್ಲಿ ಆಶ್ಚರ್ಯ ಎದ್ದು ಕಾಣುತ್ತಿತ್ತು..
ಖುಷಿಯಿಂದ ವಿವರಿಸಿದೆ. ಇದು ಮಾತ್ರ ನನ್ನ ಮನಸ್ಸು ಬೇಡವೆಂದರೂ ಕೇಳದೇ.
ಅಷ್ಟೇ ಅಲ್ಲ ಅದರಲ್ಲಿ ಇನ್ನೊಂದು ಅಯ್ಕೆ ಇದೆ ಅದರಲ್ಲೇ.
ಇದರಲ್ಲಿ ಬದಲು ಮಾಡಿ ಅಂತ ಇನ್ನೊಂದು ಇದೆ ಅದನ್ನ ಒತ್ತಿದರೆ ನೀವು ಬರೆದ ಅಥವಾ ತಪ್ಪೆನಿಸಿದ ಯಾವುದೇ ಶಬ್ದವನ್ನು ಬದಲಿಸಬಹುದು ಗೊತ್ತಾ..??
ಹೌದಾ ಮರಾಯ ಸಾವಿರ ಪೇಜಿದ್ದರೂ..???
ಹೌದು ಲಕ್ಷ ಪೇಜಿದ್ದರೂ ಕೂಡಾ
ಬೇಕಿದ್ದರೆ ನೋಡು..
ಅಷ್ಟರಲ್ಲಿ ಕಲ್ಲೂರಾಮ್ ಕರೆ ಬಂತು..
ನೋಡ್ತಾ ಇರಿ ಈಗ ಬಂದೆ ನಾನು, ಅವರಿಬ್ಬರನ್ನೂ ಬಿಟ್ಟು ನಾಹೊರಬಂದೆ
ಏನ್ರೀ ರಾವ್ ಎಲ್ಲಿದೆ ಬಡ್ಜಟ್ ರಿಪೋರ್ಟು..?
ರೆಡಿ ಇದೆ ಸಾರ್
ಮೂರ್ದಿನದಿಂದ ಇದೇ ಹೇಳ್ತಾ ಇದ್ದೀರಲ್ರೀ , ಹೆಡ್ ಆಫೀಸಿನಿಂದ ತಲೆ ತಿನ್ತಾ ಇದ್ದಾರೆ, ಎಲ್ಲಿ ಬೇಗ ತನ್ನಿ..
ಏನ್ಸಾರ್ ಒಂದ್ವಾರ ಬೇಕು ಅದನ್ನ ಪೂರ್ತಿಯಾಗಿ ಮಾಡೊಕ್ಕೆ, ಅದನ್ನ ನಾನು ದಿನಾ ರಾತ್ರೆ ಅಂತ ನಿದ್ದೆಗೆಟ್ಟು ನಾಲ್ಕ್ ದಿನ್ದಲ್ಲಿ ಮಾಡಿದ್ದೇನೆ ಅದನ್ನ , ನಂಗೇ ಜೋರ್ ಮಾಡ್ತಾ ಇದ್ದೀರಲ್ಲಾ
ಸರಿ ಸರಿ, ಕಳುಹಿಸಿ ಬೇಗ
ವಾಪಾಸ್ ಚೇಂಬರಿಗೆ ಬಂದೆ
ಇಬ್ಬರೂ ಕಂಪ್ಯೂಟರಿನೊಳಕ್ಕೇ ತಲೆ ಹಾಕ್ಕೊಂಡಿದ್ದಾರೆ.
ಅಕ್ಕಾ ನೀನ್ ಹೇಳ್ದನ್ನ ನಾವ್ ಕಲ್ತ್ಕಂಡೇ ಬಿಡ್ತ ಕಾಣ್
ಎಂತದಾ
ನೀನ್ ಹೇಳಿ ಕೊಟ್ಟಿಯಲ್ಲೆ, ಅದೇ ರಿಪ್ಲೇಸ್ , ಕಂಡ್ರೆ ನಿಂಗೂ ಖುಷೀಯಾತ್ ಕಾಣ್
ಹೌದಾ ಎಲ್ಲಿ..?
ಅದೇ ನಿನ್ನ ರಿಪೋರ್ಟ್ ಇದೆಯಲ್ಲಾ, ಹದಿನಾರು ಪೇಜಿನದ್....................!!
ಅಲ್ಲಾ ಮರಾಯಾ ಅದನ್ನ್ ಏನೂ ಮಾಡ್ಬೇಡಿ ಅಂದಿದ್ದೆನಲ್ಲಾ..??
ಎಂತದ್ದೂ ಮಾಡ್ಲ್ಯಾ ..........ಇಲ್ ಕಾಣ್...........೬ ರ ಬದ್ಲು ಆರ್ ಅಂತ್ ಮಾಡ್ದೆ, ಏಳರ ಬದಲು ಪಿ ಮಾಡ್ದೆ ಮೂರರ ಬದ್ಲು ಕ್ಯೂ ಅಂತ ಮಾಡ್ದೆ.
ಅಲ್ದಾ ನೀನ್ ಮಾಡದ್ ಆರ್ ಗೆ ೮ , ಪಿ ಗೆ ೩ ಮತ್ ಕ್ಯೂ ಗೆ ೬ ಮಾಡದ್
ಅಲ್ಲಾ ನಂಗೆ ಸರೀ ನೆನ್ಪಿತ್ತಾ, ನಾನ್ ಹೇಳದ್ದೇ ಕರೆಕ್ಟ್..........
ಒಂದೇ ಕ್ಷಣ ನನ್ನ ಎದೆ ಬಡಿಯುವುದನ್ನೇ ನಿಲ್ಲಿಸಿತು........ ಅಂದರೆ
ನನ್ನ.... ರಿಪೋರ್ಟ್ ನಲ್ಲಿ ಇವರ ಕಲಿತಾಟ.....
ಸತ್ಯಾನಾಶ್,
ಅಂಕೆಗಳ ಬದಲು ಇಂಗ್ಲೀಷ್ ಅಕ್ಷರಗಳು ಅದೂ ಅದನ್ನ ಬದಲು ಮಾಡುವಾಗ ಒಂದೇ ಅಂಕೆ ತಪ್ಪಾದರೂ ಸರ್ವ ನಾಶ ಖಂಡಿತಾ, ಹೊಸದಾಗಿ ಮಾಡಲು ಸಮಯವೂ ಇಲ್ಲ..
ಪುನಃ ಬಾಸ್ ನ ಕರೆ
ಏನೂ ಮಾಡಲು ತೋಚದೇ ದಿಗ್ಞೂಡನಾಗಿ ನಿಂತೆ.
ಅಕ್ಷರಗಳು ಅಂಕೆಗಳಾಗಿ ಅಂಕೆಗಳು ಅಕ್ಷರಗಳಾಗಿ ನನ್ನ ಅಣಕಿಸುತ್ತಿದ್ದವು.
ಅಯ್ಯೋ ನನ್ನ ಮಾವಂದಿರಾ ....ಮತ್ತೇನಾದರೂ ಮಾಡಿದ್ದೀರಾ ಇದ್ರಲ್ಲಿ..?
ಅಂದ್ರೆ ಎಂತ ನೀನ್ ಹೇಳೂದ್..?
ಅಲ್ಲ ಶ್ರೀಧರ್ ಅವರು ಹೇಳಿದ ಹಾಗೇ ಕಂಟ್ರೋಲ್ + ಎಸ್ ಅಂತೇನಾದರು ಒತ್ತಿದ್ರಾ...?
ಹೌದಲ್ಲಾ.... ನಮ್ಮ ಮಾಸ್ಟ್ರ್ ಹೇಳಿ ಕೊಟ್ಟಿದ್ದರಲ್ಲಾ...?
ಏನಂತ..? ನನ್ನ ಎದೆ ಬಡಿತ ಇನ್ನೂ ಜೋರಾಯ್ತು..!!!
ಅದ್ ಒತ್ತಿದ್ ಮೇಲೇ ನೀನ್ ಬಂದದ್ ಮರಾಯಾ...!!??!!
ಗೋವಿಂದಾ ಗೋವಿಂದ....!!!!!!!!!
.........................................ತ್ಯಾಂಪ ಸೀನನ ಕಂಪೂಟರ್ ಕಲಿಕೆ 2
No comments:
Post a Comment