Friday, February 3, 2012



ಶರಾಬು ಕುಡಿಯುವುದು ಒಳ್ಳೆಯದು..??





ಅದೊಂದು ವಯಸ್ಕರ ಶಾಲೆ
ತ್ಯಾಂಪ ಆದಿನ ಅಲ್ಲಿ ಕುಡಿತದಿಂದಾದ ದುಷ್ಪರಿಣಾಮಗಳು ಪಾಠ ಮಾಡಲಿದ್ದ..
ಅದನ್ನೊಂದು ವಿಶೇಷ ದಿನವನ್ನಾಗಿ ಮಾಡಲೆಂದು ತ್ಯಾಂಪ ತನ್ನ ಕೈಯ್ಯಲ್ಲಿ ಶರಾಬು ಬಾಟ್ಲಿ ಹಿಡಿದೇ ಹೊರಟಿದ್ದ.
ಉತ್ಸಾಹದಲ್ಲಿ ಸ್ವಲ್ಪ ಬೇಗನೇ ಹೊರಟಿದ್ದ ಶಾಲೆಗೆ.

ಹೋಗಿ ನೋಡುತ್ತಾನೆ ಒಬ್ಬ ವಿದ್ಯಾರ್ಥಿ ಶಾಲೆಯ ಬಾಗಿಲ ಬೀಗವನ್ನು ತೆರೆಯಲು ಪ್ರಯತ್ನ ಪಡುತ್ತಿದ್ದ.
ಒಳಗಿನ ಎಣ್ಣೆಯ ಪ್ರಭಾವ ಪಾಪ ಬೀಗದ ತೂತಿನಲ್ಲಿ ಬೀಗದ ಕೈ ಸಿಕ್ಕಿಸಲಾಗುತ್ತಿಲ್ಲ ಆತನಿಗೆ.
ತ್ಯಾಂಪ ನೋದಿ ನೋಡಿ ಸಾಕಾಗಿ ಕೇಳಿದ ಕೈ ಕೊಡು ನಾನು ಬೀಗ ತೆಗೆಯುತ್ತೇನೆ
ಆತ ಹೇಳಿದ ತ್ಯಾಂಪನ ಕೈಯ್ಯಲ್ಲಿದ್ದ ಬಾಟ್ಲಿಯನ್ನು ನೋಡುತ್ತಾ " ನೀನು ಅಲುಗಾಡುತ್ತಿರುವ ಬಾಗಿಲನ್ನೊಮ್ಮೆ ಹಿಡಿದುಕೋ, ಬೀಗ ನಾನು ತೆರೆಯುತ್ತೇನೆ."
ಶಾಲೆ ಆರಂಭವಾಯ್ತು.
ಬಾಗಿಲು ತೆಗೆದವ ಇವನನ್ನು ನೋಡುತ್ತಾ ಉಸುರಿದ" ತಪ್ಪಯ್ತು ಮಾಸ್ತರೇ, ನೀವು ನನ್ನ ಶರಾಬು  ಬಿಡಿಸುತ್ತೀರಾ..?
ತ್ಯಾಂಪನೆಂದ "ಯಾಕಿಲ್ಲಾ ..? "
ಖುಷಿಯಲ್ಲಿ ಆತ ಹೇಳಿದ ಹಾಗಾದರೆ ನನ ಎರಡು ಪೆಟ್ಟಿಗೆ ಶರಾಬು ಪೋಲೀಸರು ಹಿಡಿದಿದ್ದಾರೆ ಬಿಡಿಸುತ್ತೀರಾ..??
ಅಂತೂ ಕ್ಲಾಸು ಶುರುವಾಯ್ತು.
ತನ್ನ ಕೈಯ್ಯಲ್ಲಿದ್ದ ಶರಾಬಿನ ಬಾಟ್ಲಿಯನ್ನು ತೋರಿಸುತ್ತಾ ನುಡಿದ ತ್ಯಾಂಪ
ನೋಡಿದಿರಾ ಮಕ್ಕಳೇ ಅಲ್ಲಲ್ಲ ವಯಸ್ಕರೇ ಈ ಶರಾಬಿನ ಬಾಟ್ಲಿಯಲ್ಲಿ ಎರಡು ನೊಣಗಳನ್ನು ಹಾಕಿದ್ದೆ
ಓಹ್!!!! ಕೋರಸ್
ಆದರೆ ಈಗ ನೋಡಿ ಅವೆಲ್ಲ ಸತ್ತು ಹೋಗಿವೆ. ಇದರಿಂದ ನಮಗೆ ಏನು ಗೊತ್ತಾಗುತ್ತದೆ..?
ಮೊದಲಿನ ಕುಡುಕ ಹೇಳಿದ" ತ್ಯಾಂಪಣ್ಣನವರು ಈ ಶರಾಬಿನ ಬಾಟ್ಲಿಯಲ್ಲಿ ಎರಡುಜೀವಂತ ನೊಣಗಳನ್ನು ಹಾಕಿದ್ದರು, ಸ್ವಲ್ಪ ಸಮಯದ ನಂತರ ನೋಡಿದಾಗ ಅವು ಸತ್ತು ಹೋಗಿವೆ. ಇದರಿಂದ ನಮಗೆ ಏನು ತಿಳಿಯುತ್ತದೆ ಅಂದರೆ....??
ತ್ಯಾಂಪ ಖುಷ್!!!
ಶರಾಬು ಕುಡಿಯುವದರಿಂದ ನಮ್ಮ ಹೊಟ್ಟೆಯೊಳಗಿನ ಹುಳ ಹಪ್ಪಡಿಗಳೆಲ್ಲ ಸಾಯುತ್ತವೆ ಆದುದರಿಂದ ಶರಾಬು....
ತ್ಯಾಂಪ ಆಕಾಶಕ್ಕೇರಿದ, ತನ್ನ ಪಾಠದ ಕ್ರಮ ಬಿಲ್ ಕುಲ್ ಸರಿ!!!
ಕುಡುಕ ಮುಂದುವರಿಸಿದ್ದ.." ಆದುದರಿಂದ  ನಾವು ದಿನಾ ಶರಾಬು ಕುಡಿಯುವುದು ಒಳ್ಳೆಯದ್ದು.
ತ್ಯಾಂಪ ದೊಪ್ಪನೆ ಕೆಳಗೆ ಬಿದ್ದ,
ಪ್ರಿನ್ಸಿಪಾಲ ಬರದಿದ್ದರೆ ಅಲ್ಲುಳಿದ ಬಾಟ್ಲಿಯ ಶರಾಬು ತ್ಯಾಂಪನ ಬಾಯೊಳಗೇ ಹೋಗುತ್ತಿತ್ತು.

1 comment:

  1. ಗೋಪಿ ಸರ್,

    ಹಹಹ...ಚೆನ್ನಾಗಿದೆ....ಶರಾಬು ಕುಡಿಯುವುದರಿಂದ ಹೊಟ್ಟೆಯಲ್ಲಿನ ಹುಳುಗಳು ಸಾಯುತ್ತವೆ ಅಂದ್ರೆ ಶರಾಬು ಒಳ್ಳೆಯದಲ್ಲವೇ ??? ಕುಡುಕರ ತರ್ಕವು ಸರಿಯಾದುದೆ....

    ನನ್ನ ಬ್ಲಾಗ್ ಗೂ ಬನ್ನಿ....
    http://ashokkodlady.blogspot.com/

    ReplyDelete