ತ್ಯಾಂಪ ಶೀನರ ಜಿ ಪಿ ಎಸ್ ಪಯಣ ಮತ್ತು ಪುಷ್ಪರಾಜರ "ಬಿಳಿ ಬಯಲು"
ಏಯ್!! ಇಲ್ಲಿ ನೋಡೂ ನನ್ನ ಹತ್ರ ಏನಿದೇಂತ... "
ನನಗೂ ಸೀನನಿಗೂ ಒಂದು ಹೊಸ ರಹಸ್ಯ ಹೇಳುವ ಹಾಗೆ ದೂರದಿಂದಲೇ ಕೈಯ್ಯೆತ್ತಿಕೊಂಡು ರೂಮೊಳಗೆ ಬಂದ ನಮ್ಮ ಹೀರೋ.
"ಏನದೂ, .. ತೋರಿಸೂ"
ನಾನೂ ಸೀನನೂ ಎದ್ದು ನಿಂತೆವು
ಅವನ ಕೈಯಲ್ಲೊಂದು ಹೊಸ ಮೊಬಾಯಿಲ್!! ಮಿರಿ ಮಿರಿ ಮಿಂಚುತ್ತಿತ್ತು.
ಏನಿದೂ ಹೇಳೊ.. ಸೀನ ಪೀಡಿಸಿದ
ಹೇಳ್ತೀನಿ ಇರು.. ತ್ಯಾಂಪಿಯ ಅಣ್ಣನ ಸ್ನೇಹಿತ ದುಬಾಯ್ ನಿಂದ ಕಳುಹಿಸಿದ್ದಾನಂತೆ, ತ್ಯಾಂಪಿ ನನಗೆ ಕೊಟ್ಟಳು.
ಅಲ್ದಾನಾ ಮೊನ್ನೆ ಮೊನ್ನೆ ಕಿತಾಪತಿ ನಡೆಸಿದ ರೈಲಿನ ಗಲಾಟೆ, ಪ್ರೇಮಿಗಳ ದಿನದ ದ್ದೆಲ್ಲಾ ಮರೆತು ನಿನಗೆ ಇಷ್ಟು ಒಳ್ಳೆ ಪ್ರೈಜ್ ಕೊಟ್ಟಿದ್ದಾಳೆ ಅಂದರೆ.....??
"ಏನು ಮಾಯ ಮಾಡಿದೆಯಯ್ಯಾ..??""
ಅದೆಲ್ಲಾ ಬಿಡು, ಇದರಲ್ಲಿ ಏನೆಲ್ಲಾ ಮಾಡಬಹುದು ಗೊತ್ತಾ..??
ಅದರಲ್ಲಿ ಸಿ ಪಿ ಸಿ ಇದೆಯಾ..??
ಅದ್ಯಾವುದದು ಸಿ ಪಿ ಸಿ ಅಂದರೆ..??
ಅಲ್ಲ, ನಾವು ಎಲ್ಲಿಗೆ ಹೋಗುತ್ತೇವೆ ಅದನ್ನೆಲ್ಲಾ ನೋಡ ಬಹುದು, ರಸ್ತೆ ತಪ್ಪಿ ಹೋದರೆ ಅದೇ ಹೇಳುತ್ತ್ತೆ ಅದು ತೋರಿಸಿದ ಹಾಗೆ ನಾವು ಹೋದರಾಯ್ತು ಅಷ್ಟೇ ಎಲ್ಲಿಗೆ ಬೇಕಾದರೂ ಹೋಗಬಹುದು," ತ್ಯಾಂಪ. "ನೋಡುವಾ ಈ ನಿನ್ನ ಆಫೀಸ್ ಎಲ್ಲಿದೆ ತೋರಿಸು. ." ಶೀನನಿಗೆ ಹೊಸತೆಂದರೆ ತುಂಬಾನೇ ಆಸಕ್ತಿ.
ನಾನೆಂದೆ ಅದು ಜಿ ಪಿ ಎಸ್, ನೋಡು , ಅದರಲ್ಲಿನ ನಕ್ಷೆ ತೆಗೆದು ತೋರಿಸಿದೆ, ತ್ಯಾಂಪನ ಮನೆ ನನ್ನ ಆಫೀಸು, ನನ್ನ ಮನೆ ಎಲ್ಲವೂ ಅದರಲ್ಲಿ ಅಳವಡಿಸಿಕೊಟ್ಟೆ.
"ಆದರೂ ತ್ಯಾಂಪ, ಇತ್ತೀಚೆಗಿನ ನಮ್ಮ ಬೆಂಗಳೂರಿನ ರಸ್ತೆಯಲ್ಲಿ ಮಾಡಿದ ಬದಲಾವಣೆ ಇದರಲ್ಲಿ ಬಂದಿರಲಿಕ್ಕಿಲ್ಲ, ಅದಕ್ಕೆ ನಾವೇ ಅಂತಹ ಮಾರ್ಗದಲ್ಲಿ ಚಲಿಸಿ, ಆ ಮಾರ್ಗವನ್ನು ಅದರಲ್ಲಿ ಉಳಿಸಿಡ ಬೇಕಾಗಿ ಬರಬಹುದು. ಏನಿದ್ದರೂ ಸಂಪೂರ್ಣವಾಗಿ ಅದನ್ನೇ ಅವಲಂಬಿಸಲಾಗದು ಆಯ್ತಾ ಎಂದೆ ನಾನು, ಅದೆಲ್ಲಾ ಬಿಡಾ ದೊಡ್ದ ವಿಷಯವೇ ಅಲ್ಲ" ಅಂದ ತ್ಯಾಂಪ.
"ಸರಿ ಹಾಗಾದರೆ ಈ ಶನಿವಾರ ಚೌಟರು ಬರ ಹೇಳಿದ್ದಾರಲ್ಲ ಬಿಳಿ ಬಯಲಿಗೆ, ಅಲ್ಲಿಗೇ ಹೋಗಿ ನಮ್ಮ ಪ್ರಯಾಣದ ಆರಂಭ ಮಾಡೋಣ"
ಒಪ್ಪಿಗೆ ಆಯ್ತು ಮೂವರಿಗು.
"ವೊಲ್ವೊ ಬಸ್ನಲ್ಲಿ ಬಿಳಿ ಮೈದಾನದ ಚೌಟರನ್ನು ನೋಡಲು ಹೋಗಬೇಕಾದರೆ ಬೆಳಿಗ್ಗೆ ಬಲಗಡೆ ಕುಳಿತುಕೊಳ್ಳಬಾರದು, ಸಂಜೆ ಎಡಗಡೆ.ಗೊತ್ತಾ...?" ತ್ಯಾಂಪ ಹೇಳಿದ
ಹೌದಾ ಯಾಕೆ..?? ಶೀನ. ತ್ಯಾಂಪ ಅದಕ್ಕೆ ಉತ್ತರ ಕೊಡದೇ... "ವೋಲ್ವೋ ಬಸ್ ಯಾಕೆ..? ಇವನ ಕಾರಿನಲ್ಲಿ ಹೋಗೋಣ.. ಆಯ್ತಾ. ಹೇಗಿದ್ದರೂ ನನ್ನ ಜಿ ಪಿ ಎಸ್ ಇದೆಯಲ್ಲಾ ಎಲ್ಲಿಗೆ ಬೇಕಾದರೂ ಹೋಗಲು" ಎಂದ.
॒॒॒॒॒॑॑॑!!!!॑॑॑॑॑॑
ತ್ಯಾಂಪಾ...ಬ್ಯಾಟರಿ ಸರಿಯಾಗಿ ಚಾರ್ಜು ಮಾಡಿದ್ದೆ ತಾನೇ
ಹೌದು ಕಣೋ, ನಾಲ್ಕೂ ಗೆರೆ ತುಂಬಿಕೊಂಡಿದೆ ಬಿಡು
ಸರಿಯಾಗಿ ಕೇಳಿಸಿಕೋ, ಇಲ್ಲಿಂದ( ಹೆಬ್ಬಾಳದಿಂದ ಹೆಣ್ಣೂರು ಮಾರ್ಗವಾಗಿ ಒಂದೇ ರಸ್ತೆ, ಸೀದಾ ಹೋಗಿ. ಆಯ್ತಾ ಸಿ ವಿರಾಮನ್ ನಗರ್ ಹತ್ರ ರಸ್ತೆ ಬದಲಾಗುತ್ತೆ ಎಡಗಡೆ, ನಂತರದ ಗುತ್ತು ಮಹದೇವಪುರ, ಅಲ್ಲಿಂದ ಸೀದಾ ಕಾಡುಗುಡಿ ಕಡೆ ಆಯ್ತಾ"
ಆಯ್ತು ಬಿಡಾ, ನಾನು ಗಾಡಿ ಬಿಡುತ್ತೇನೆ ಶೀನ ಜಿ ಪಿ ಎಸ್ ನೋಡುತ್ತಾ ದಿಕ್ಕು ಹೇಳುತ್ತಿರುತ್ತಾನೆ, ನಿನ್ನ ಹತ್ರ ಕೇಳಲು ಬರುವುದಿಲ್ಲ ಆಯ್ತಾ, ಇದರಲ್ಲಿ ಅಮೇರಿಕಾದ ರಸ್ತೆ ಕೂಡಾ ಇದೆ ಗೊತ್ತಾ,
ಹೌದು ಒಬಾಮಾ ಹತ್ರನೇ ಹೋಗಿ ಸೀದಾ...
ಸರಿಯಾಅಗಿಕೇಳಿಸಿಕೋ, ಅಲ್ಲಿಂದ ಐಟಿಪಿಎಲ್ ನಲ್ಲಿ ಒಂದೇ ರಸ್ತೆ ಎಂಟೂವರೆ ಕಿ ಮಿ
ಎಲ್ಲಾ ಗೊತ್ತಿದೆಯಾ, ಜಿ ಪಿಎಸ್ ನಲ್ಲಿದೆ, ನೀನು ಹೊರಡು. ಇಲ್ಲವಾದರೆ ಈತ ನಮಗೆ ಪೂರಾ ವೀಕ್ಷಕ ವಿವರಣೆ ಕೊಟ್ಟಾನು.
ನೋಡು ಈಗ ೯ ಗಂಟೆ ಅಬ್ಬಬ್ಬಾ ಆಂದರೆ ಹತ್ತೂವರೆ ಹನ್ನೊಂದು ಗಂಟೆಗೆ ಅಲ್ಲಿರ್ತೀರಾ,
ಗೊತ್ತಿದೆ ಮರಾಯಾ, ಅಲ್ಲಿನ್ ಹೋಕ್ ತೋಟದ ಬಳಿ ಚೌಟರು ಕಾದಿರ್ತಾರೆ,
"ಅದು ಹೋಕ್ ಅಲ್ಲ, ಹೋಫ್ ..". ನಾನು ತಿದ್ದಿದೆ
ಶೀನನೆಂದ" ನಾನು ಕನ್ನಡದಲ್ಲಿ ಹೇಳೀದ್ದಾ,.... ನಿಧಾನವಾಗಿ ಹೋಗಬೇಕು , ರಸ್ತೆ ನಿಯಮ ಪಾಲಿಸಬೇಕು ಎಲ್ಲಾ ನೆನಪಿದೆ, ಇದೇನೂ ಅಮೇರಿಕಾ ಅಲ್ಲಾ ಆಯ್ತಾ" ಶೀನನೆಂದ ನಗುತ್ತಾ.
"..ನನ್ನ ಹತ್ರ ಜಿ ಪಿ ಎಸ್ ಇದೆ.."ಅವನ ಮಾತನ್ನು ನಾನು ಪೂರ್ತಿ ಮಾಡಿದೆ ನಗುತ್ತಾ .
ನನಗೆ ಅರ್ಜೆಂಟ್ ಆಗಿ ಒಂದು ಮೀಟಿಂಗ್ ಕೂಡಿ ಬಂತು, ಬಾಸ್ ಊರಲ್ಲಿಲ್ಲ, ನಾನು ಅದರಲ್ಲಿರಲೇ ಬೇಕಾಗಿತ್ತು. ಹಾಗಾಗಿ ನನ್ನ ಹೊಸ ಯಮ ಎಫ್ ಜಡ್ ಎಸ್ ನಲ್ಲಿ ಅವರಿಬ್ಬರನ್ನೂ ಕಳುಹಿಸಿದ್ದೆ.
ಆದರು ಕುರುಡ ಕುಂಟನ ಜೊತೆ ಆದ ಹಾಗೆ ಅಂತ ಸಂಶಯ ಬಂತು, ಆದರೂ ಅವರಿಬ್ಬರ ಉತ್ಸಾಹ ಕುಂಟಿಸುವ ಹಾಗಿಲ್ಲ, ಊರೆಲ್ಲಾ ಗದ್ದಲ ಎಬ್ಬಿಸಿ ಬಿಡುತ್ತಾನೆ ಶೀನ, ಅವನ ಜತೆ ಈಗ ತ್ಯಾಂಪನೂ ಸೇರಿದರೆ ದೇವರೇ ಗತಿ.
ಹೋಗಿ ಅರ್ಧ ಗಂಟೆಯಾಗಿಲ್ಲ ಶೀನನ ಕರೆ
ಹೇಳು ಶೀನಾ..."
ಏಯ್ ಇಲ್ಲಿ ಎಡಕ್ಕೂ ಬಲಕ್ಕೂ ಕೆಳಕ್ಕಿಳಿಯುವ ರಸ್ತೆ ಇದೆ. ಕರೆ ವಾಣಿಯಲ್ಲಿ ಮೇಲೆ ಹೋಗಲು ಹೇಳ್ತಾ ಇದೆ, ಏನು ಮಾಡಲಿ..?
ಅದೇನು... ಸೇತುವೇನಾ ..?ಹಾಗಾದರೆ ಸೀದಾ ಮುಂದೆ ಹೋಗಿ, ಅಕ್ಕ ಪಕ್ಕದವು ಕವಲು ದಾರಿಗಳು, ಅದರಲ್ಲಿ ಹೋಗಬೇಡಿ..
ಸರಿ"
ಪುನಃ ಅರ್ಧ ಗಂಟೆ ಬಿಟ್ಟು.. ಕರೆ ಶೀನನದ್ದೇ
ಏಯ್ ಈ ಸಾರಿ ಇದು ಬಲಗಡೆ ತಿರುಗಿ ಅಂತಾ ಇದೆ ಕಣೋ, ಬಲಗಡೆ ದೊಡ್ಡ ಗೋಡೆಯಿದೆ ಉದ್ದಕ್ಕೆ... ಏನೋ ಮಾಡೋದು,
ಹಾಗೇ ಮುಂದೆ ಹೋಗಿ ಬಲಗಡೆ ರಸ್ತೆ ಬರಬಹುದು
ಸರಿ
ಹತ್ತೇ ನಿಮಿಷ, ಮತ್ತೆ ಕರೆ
ಏಯ್, ಇದು ಹಿಂದಕ್ಕೆ ತಿರುಗಲು ಹೇಳ್ತಾ ಇದೆ ಕಣೋ
ಯಾಕೆ ಏನಾಯ್ತೊ..?
ಎಲ್ಲರೂ ಮುಂದೆ ಮುಂದೆ ಹೋಗ್ತಾ ಇದ್ದಾರೆ, ಇದು ಹಿಂದೆ ಹೋಗಲು ಹೇಳ್ತಾ ಇದೆ ಕಣೊ..?
ಅಂದರೆ ಅದು ಏಕ ಮುಖ.ರಸ್ತೆ......ಸರಿ ಹಾಗೇ ಮುಂದೆ ಹೋಗಿ, ಎಡಕ್ಕೆ ತಿರುಗಿ ಬನ್ನಿ, ಸರಿ ಹೋಗುತ್ತೆ.
ಮತ್ತೆ
ಕಾಲೇ ಗಂಟೆ.. ಪುನಾಃ ಕರೆ
ಏಯ್, ಇಲ್ಲೆಲ್ಲಾ ಕರುಳ ಬಳ್ಳಿ ಇದ್ದ ಹಾಗೆ ಮೇಲ್ಸೇತುವೆ ಇದೆ ಕಣೋ..ಏನು ಮಾಡೋದು..??
"ಯಾಕೆ ಈಗ ನಿನ್ನ ಸಿ ಪಿ ಸಿ ಏನ್ ಹೇಳ್ತಾ ಇದೆ..??" ನನ್ನ ಮೀಟಿಂಗ್ ಕೂಡಾ ಹಾಳು ಮಾಡ್ತಾ ಇದ್ದಾರೆ, ನಾನೇ ಹೋಗಬಹುದಿತ್ತು, ಪಾಪ ಚೌಟರು ಬೇರೆ ಕಾಯ್ತಾ ಇದ್ದಾರೆ ಬಯಲಲ್ಲಿ.
"ನೋಡು ಸೂಚನಾ ಫಲಕ ಇದೆಯಾ ನೋಡು"
"ಅದೇನಿಲ್ಲ ಕಣೋ"
"ಯಾರನ್ನಾದರೂ ಕೇಳಲು ಸಾಧ್ಯವೋ ನೋಡು,"
"ಎಲ್ಲಾ ಅವರಷ್ಟಕ್ಕೇ ಹೋಗ್ತಾ ೭೦-೮೦ ರ ವೇಗದಲ್ಲಿ ಹೋಗ್ತಾ ಇದ್ದಾರೆ, ಏನೋ ಮಾಡೋದು..?"
"ಸರಿ ಹಾಗೇ ಮುಂದೆ ಹೋಗಿ ಯಾರನ್ನಾದರು ಕೇಳಿ ನೋಡಿ.."
"ಇಲ್ಲ ಬಿಡು ರಸ್ತೆ ಸಿಕ್ಕಿತು"
ನನಗೂ ನಿರಮ್ಮಳವಾಯ್ತು
॒॒॒॒॒॒॒
ಒಂದು ಗಂಟೆ ಕಳೆಯಿತು.
ಇಬ್ಬರ ಪತ್ತೆ ಇಲ್ಲ
ಅಷ್ಟರಲ್ಲಿ ಕರೆ ಬಂತು... ನೋಡಿದೆ ಚೌಟರದ್ದೇ, ಹಾಗಾದರೆ ಅಲ್ಲಿಗೆ ತಲುಪಿದರು ಇಬ್ಬರೂ..??
" ಇಲ್ಲ, ಕ್ಷಮಿಸಿ ನನಗೆ ಇವತ್ತು ಎರಡೂವರೆವರೆಗೆ ಮೀಟಿಂಗ್ ಇದೆ... ಅದಕ್ಕೇ ಬರುವುದಾದರೆ ಮೂರು ಗಂಟೆಗೆ ಬನ್ನಿ ಕಾದಿರ್ತೇನೆ"
ಆದರೆ ...ನಾನೆಂದೆ, "ತೊಂದರೆ ಯಿಲ್ಲ ಬಿಡಿ ಇನ್ನೊಮ್ಮೆ ನೋಡಿದರಾಯ್ತು.... , ನನಗೂ ಮೀಟಿಂಗ್ ಇದೆ ಇವತ್ತು...ಬಾಯ್"
ಅವರಿಗೆ ಇವರಿಬ್ಬರೂ ಹೊರಟಿರುವುದು ಹೇಳುವುದು ಬೇಡ ಎನ್ನಿಸಿತ್ತು.
ಆದರೆ ಇವರಿಬ್ಬರೂ ಹೋದರೆಲ್ಲಿಗೆ...??
ಫೋನೂ ಇಲ್ಲ
ಮತ್ತೆ ಹಾಗೇ ಒಂದು ಗಂಟೆ...
ಹಾಗಾದರೆ.... ಇಲ್ಲ, ಬಂತು... ಈ ಸಾರಿಯ ಕರೆ ಶೀನನದ್ದೇ..
"ಏಯ್ ನಾಲ್ಕೈದು ಕಿ ಮೀ ಬಂದಿದ್ದೇವೆ, ಮೇಲ್ಸೇತುವೆಯಲ್ಲಿ, ಚಂದ ಇದೆ.......ಮುಗೀತಾನೇ ಇಲ್ಲ ಕಣೋ ರಸ್ತೆ..
ಹೌಹಾರಿ ನಿಂತೆ...
"ಅಲ್ಲೆಲ್ಲಿದೆ ಮೇಲ್ಸೇತುವೆ.... ಚೌಟರ ಬಿಳೀ ಬಯಲಿನ ದಾರಿಯಲ್ಲಿ............ಅಂದರೆ ಪ್ರಾಣಿಗಳು ... ಇಲೆಕ್ಟ್ರಾನಿಕ್ ಸಿಟಿಯ ಮೇಲ್ಸೇತುವೆಯಲ್ಲಿದ್ದಾವೆ..!!!!"
ಕೇಳಿದೆ " ಅಲ್ಲೆಲ್ಲಾದರು.... ಇನ್ಫೋಸಿಸ್ ಕಟ್ಟಡ ಕಾಣುತ್ತಾ..?"
"ಹಾ.. ಹೌದು, ೨೮,೨೯ ಎಲ್ಲಾ ಇದೆ..."
ಅದೇನದು....???
"ಕಟ್ಟೋಣದ ಸಂಖ್ಯೆ..... ಹಾಗೇ ಮುಂದೆ ಹೋಗಬೇಕಾ..?? ಚೌಟರು ಸಿಗುತ್ತಾರಾ..??" ಶೀನ
"ಮುಂದೆ ಹೋದರೆ ನಿಮಗೆ ಈ ಜನ್ಮದಲ್ಲಿ ಚೌಟರು ಸಿಗಲಿಕ್ಕಿಲ್ಲ ಬಿಡಿ ಮುಂದೆ .. ಜಿಗಣಿ, ಆನೆಕಲ್ , ಹಾಗೇ ಹೋದರೆ ಜಯಲಲಿತ ಹತ್ರ ಕಾವೇರಿ ನೀರ್ ಬಗ್ಗೇನೂ ಕೇಳ ಬಹುದು. ನೀವು ಬೇರೆ ದಿಕ್ಕಿನಲ್ಲಿ ಹೋದಿರಿ,"
"ಈಗೇನು ಮಾಡಬೇಕು ಹೇಳು"
ಸರಿ ಬಿಡು ಮುಂದೆ ಹೋಗಿ ಅದೇ ಸೇತುವೆಯಲ್ಲಿ ಕೆಳಗಿಳಿದು ಸುಂಕ ಕಟ್ಟಿ ವಾಪಾಸ್ಸು ಬನ್ನಿ, ಬರುವಾಗ ದಾರಿ ಕೇಳಿಕೊಂಡು ಹೆಬ್ಬಾಳ್ ಮೇಲ್ಸೇತುವೆಗೆ ಬಂದು ನನಗೆ ಕರೆ ಮಾಡಿ ಆಯ್ತಾ..??
ಮತ್ತೆ ಚೌಟರಿಗೆ...
ನಾನೇ ಹೇಳ್ತೇನೆ..
ಹತ್ತೇ ನಿಮಿಷ, ಪುನಃ ಕರೆ, ಏಯ್ ಬೈಕು ಸಿಕ್ಕಾ ಪಟ್ಟೆ ಅಲುಗಾಡ್ತಾ ಇದೆ, ಅದು ಹದಿನೆಂಟಿಪ್ಪತ್ತಾಳು ಎತ್ತರದ ಸೇತುವೆ ಮೇಲೆ, ನಂಗೆ ಹೆದ್ರಿಕೆ ಆಗ್ತಾ ಇದೆಯಪ್ಪಾ ಏನೋ ಮಾಡೊದು.
ಗಾಡಿ ನಿಲ್ಲಿಸಲು ಹೇಳು ತ್ಯಾಂಪನಿಗೆ, ಪಂಕ್ಛರ್ ಆಗಿರ ಬೇಕಾ ನೋಡು, ಸ್ವಲ್ಪ ನಿಧಾನ, ಇನ್ನು ತಳ್ಳೀಕೊಂಡೇ ಹೋಗಬೇಕಷ್ಟೇ..
ಎಷ್ಟು ದೂರ ..??
ಐದಾರು ಕಿ ಮೀ ಇರಬಹುದು.
ಅಯ್ಯಯ್ಯೋ ಈ ಯಮ ಭಾರದ ಗಾಡಿ ನನ್ನ ಹತ್ರ ಅಗ್ಲಿಕ್ಕಿಲ್ಲ ಮರಾಯ. ಅದೂ ಪಕ್ಕದಲ್ಲೇ ೮೦-೯೦ ರವೇಗದಲ್ಲೇ ಗಾಡಿಗಳು ಭರ ಭರ ಚಲಿಸುತ್ತಿರುವಾಗ, ಯಾವ ಕ್ಷಣದಲ್ಲೂ ಈ ಯಮ ಭಾರದ ಗಾಡಿಯನ್ನು ದೂಡುತ್ತಿರುವ ನಮ್ಮನ್ನು ಯಮಪುರಿಗೆ ಅಟ್ಟುವ ಕೊನೆಯ ಪಯಣ ಇದೇ ಅನ್ನಿಸುತ್ತೆ ಕಣೋ.
ಅಲ್ಲ ಅಲ್ಲೇ ಇರಿ, ನಾನೇ ಏನಾರೂ ಮಾಡ್ತೇನೆ,ಬಿಡು.
॒॒॒॒॒॒॒॒॒ ॑॑॑॑॑॑॑॑
ಸರಿಯಾಗಿ ನೋಡಿದ್ದೆ ತಾನೇ..?
ನೋಡಿಯೇ ಹೇಳಿದ್ದು ಬಿಡೋ
ಟ್ರಿಪ್ ಬಟನ್ ಒತ್ತಿದ್ದೆ ಅಲ್ವಾ..??
ಹೌದೂ
ಜಿ ಎಸ್ ಪಿ..??
ಅದು ಕೂಡಾ
ಸರಿ ಅದನ್ನ ನೋಡಿ ಹೇಳಿ.. ಏನಂತಾ ಇದೆ ಈಗ..??
ಇಲ್ಲಿಂದ ನೇರ ಮೂರುವರೆ ಕಿ ಮೀ ಹೋಗಿ ನಂತರ ಬಲಗಡೆ ತಿರುಗಿ ಅಂತಾ ಇದೆ.
ಸರಿ, ಹೆಬ್ಬಾಳದ ಹತ್ರ ತಾನೇ ನೀನಿರೋದು,
ಹೌದು ಕಣೋ
ಸರಿ ಹೊರಡಿ.
@@@@@@@
ಟೈಮ್ ನೋಡಿದೆ, ಲೆಕ್ಕಾಚಾರ ಪ್ರಕಾರ ಈಗ ಅವನು ಅಬ್ಬಿಗೆರೆ ತಲುಪಬೇಕಾಗಿತ್ತು, ಆದರೆ ಆ ಕಡೆಯಿಂದ ಸುದ್ದೀನೇ ಇಲ್ಲ. ನಾನೇ ಕರೆ ಮಾಡಿದೆ.
ತ್ಯಾಂಪ ಎಲ್ಲಿದ್ದೀರಾ..??
ಎಲ್ಲಿದ್ದೇವೆ ಅಂತಾನೇ ಗೊತ್ತಾಗುತ್ತಿಲ್ಲ ಕಣೋ
ಏನೋ ಹಂಗಂದ್ರೆ... ಪಕ್ಕದಲ್ಲಿ ಕೆರೆ ಇದೆಯಾ..?
ಇಲ್ಲ..
ಮತ್ತೆ ಸ್ಮಶಾನ..??
ಅಯ್ಯಯ್ಯೋ ಅದ್ರ ಹೆಸರು ಹೇಳ್ಬೇಡ.. ( ಸೀನನಿಗೂ ತ್ಯಾಂಪನಿಗೂ ಸ್ಮಶಾನ ಅಂದ್ರೆ ಜಮ ಹೆದರಿಕೆ)
ಮತ್ತೆ ಯಾವ್ದಾರು ಕಟ್ಟಡ ಹತ್ರ ಇದೆಯಾ..??
ಇಲ್ಲ..
ನೀರಿನ ಹೌದ?
ಇಲ್ಲವಲ್ಲ
ಮತ್ತೆ ಬಸ್ ನಿಲ್ದಾಣ
ಅದು ಇಲ್ಲ
ಮತ್ತೆ ಎಲ್ಲಿದ್ದೀರೋ, ರಸ್ತೆಯಲ್ಲೇ ಇದ್ದೀರಿತಾನೇ
ಇಲ್ಲ..
ಮತ್ತೆ, ತಮಾಷೆ ಮಾಡ್ತಾ ಇಲ್ಲ ತಾನೇ
ಇಲ್ಲಪ್ಪಾ ಕಾಡಲ್ಲಿದ್ದೇವೆ
ಕಾಡಾ..?? ಅದೂ ಈ ಬೆಂಗಳೂರಿನಲ್ಲಿ..?? ಅಲ್ಲ ಹೆಬ್ಬಾಳದಿಂದ ಮೂರೂವರೆ ಅಂದ್ರೆ ಬೆಲ್ ವ್ರತ್ತ, ಅದಾದ ನಂತರ ಗಂಗಮ್ಮ ವ್ರತ್ತ, ಅಲ್ಲಿಂದ ಸೀದಾ ಕೆಳಗಿಳಿದರೆ ಕೇಂದ್ರೀಯ ವಿದ್ಯಾಲಯ, ಅಲ್ಲಿಂದ ಪುನಃ ಬಲಗಡೆ ಹೊರಳಿದರೆ ೨-೩ ಕಿಮೀನಲ್ಲೇ ಅಬ್ಬಿಗೆರೆ.ಇವರಿಗೆಲ್ಲಿಂದ ಕಾಡು ಸಿಕ್ಕಿತು?
ಬೇಗ ಬಾರೋ, ಆಗಲೇ ಕತ್ತಲಾಗುತ್ತಾ ಇದೆ, ಈ ಕಾಡಲ್ಲಿ ಹೆದರಿಕೆಯಾಗ್ತಾ ಇದೆ, ಇಬ್ಬರಿಗು, ಅದೂ ಅಲ್ದೇ ಸ್ಮಶಾನ ಹತ್ರ ಇದೆ ಅಂತ ಬೇರೆ ಹೆದರಿಸ್ತಾ ಇದ್ದೀಯಾ ನೀನು..?/
ಇರು, ಗಂಗಮ್ಮ ಸರ್ಕಲ್ ವರೆಗೆ ಸರಿಯಾಗಿ ಬಂದ್ರೀ ತಾನೇ..??
ಹೌದು
ಮತ್ತೆ ಅಲ್ಲಿಂದ ಎಡಗಡೆ ತಿರುಗಿದ್ರಾ..?
ಹೌದಾ..
ಆಮೇಲೆ...?
ಸೀದಾ ಬಂದ್ರಾ ಕೆಳಗಡೆ..??
ಇಲ್ಲ ಕಣೋ, ಅದೇನೋ ಬಲಗಡೆ ತಿರುಗಲು ಹೇಳಿತು, ನಾವು ತಿರುಗಿದೆವು, ಮತ್ತೆ.....
ಮತ್ತೆ ನೀವು ಒಂದೋ ಸೀದಾ ಕೆಳಗೆ ಬರಬೇಕಿತ್ತು, ಅಥವಾ ಸ್ವಲ್ಪ ಅಂದರೆ ನಾನೂರು ಮೀಟರ್ ಬಂದು ಬಲಗಡೆ ತಿರುಗಬೇಕಿತ್ತು.
ಹಾಗೇ ಮಾಡಿದ್ದೆವು,ಕಣೋ .
ಹಾ ಗೊತ್ತಾಯ್ತು, ನೀವು ನಾನ್ನೂರು ಮೀಟರ್ ಅಂದರೆ ನೂರು ಮೀಟರ್ ಒಳಗೇ ಬಲಕ್ಕೆ ತಿರುಗಿ ವಾಯುದಳದ ಬಂದೂಕು ತರಭೇತಿ ವಲಯದೊಳಕ್ಕೆ ಹೊಕ್ಕೀದ್ದೀರಾ, ನಾನೇ ಬರುತ್ತೇನೆ ಬಿಡಿ ಅಲ್ಲಿಗೇ..ಅಥವಾ ಸ್ವಲ್ಪ ಹಿಂದೆ ಬಂದು ಹೊರಕ್ಕೆ ಬನ್ನಿ ನಾನು ಅಲ್ಲಿಗೇ ಬರುತ್ತೇನೆ.
ಸ್ವಲ್ಪ ಸಮಯದ ನಂತರ.
"ಅಂದ ಹಾಗೇ, ನಮ್ಮ ಪಂಕ್ಚರ್ ಆದ ಗಾಡಿ ಆ ೧೦ ಕಿ ಮೀ ಮೇಲ್ಸೇತುವೆಯಲ್ಲಿ ದೂಡಿಕೊಂದು ಹೋಗುತ್ತಿದ್ದೇವೆ ಅಂತ ನೀನು ಅವರಿಗೆ ತಿಳಿಸಿದ್ದೆಯಾ?" ಶೀನ.
"ಇಲ್ಲಪ್ಪಾ, ಇದೇ ನಿಮ್ಮನ್ನು ಅವರು ಅಲ್ಲಲ್ಲಿ ಇಟ್ಟಿರುವ ಕೆಮರಾದಿಂದ ನೋಡಿ ನಿಮಗೆ ಸಹಾಯ ಕಳುಹಿಸಿಕೊಟ್ಟರು. ಅದಕ್ಕೆಂತಲೇ ಒಂದು ವಾಹನ ಇಟ್ಟಿರುತ್ತಾರೆ ಅವರು. ಇರಲಿ ನಿಮ್ಮ ಅನುಭವಕ್ಕಾಯ್ತು ಇದು. ಇನ್ನೊಮ್ಮೆ ಜಿ ಪಿ ಎಸ್ ಇದೆ ಅಂತ ಏನೇನೋ ಮಾಡಲು ಹೋಗಬೇಡಿ ಆಯ್ತಾ.." ನಾನೆಂದೆ.
ಇನ್ನು ಜನ್ಮದಲ್ಲಿ ಈ ಸಿ ಪಿಸಿ ಅಲ್ಲಲ್ಲ ಜಿಪಿಎಸ್ ಗೆ ಕೈ ಹಾಕಲ್ಲ.ಬಿಡು ಇದನ್ನ ತ್ಯಾಂಪಿಗೇ ವಾಪಾಸ್ಸು ಕೊಡ್ತೇನೆ." ಎಂದ ತ್ಯಾಂಪ