ಹೆಲ್ದೀ ಉಂಡೆ
HEALTHY SWEET
ತಯಾರು ಮಾಡುವ ವಿಧಾನ
ಸಾಮಗ್ರಿಗಳು
ಇಡಿ ಗೋದಿ ಅರ್ಧ ಕೆ ಜಿ
ನೆಲಗಡಲೆ ಕಾಲು ಕೆ ಜಿ
ಒಣ ಕೊಬರಿ ಒಂದು ಕಡಿ
ಅವಲಕ್ಕಿ ೨೦೦ ಗ್ರಾಮ್ಸ್
ಬಿಳಿ ಎಳ್ಳು ೧೦೦ ಗ್ರಾಮ್ಸ್ ( ಬೇಕಾದರೆ)
ಗೋಡಂಬಿ, ದ್ರಾಕ್ಷಿ,ಬಾದಾಮಿ ಇತ್ಯಾದಿ
ನೂರು ನೂರು ಗ್ರಾಮ್ಸ್
ಎಲ್ಲವನ್ನೂ ಖಮ್ಮಗೆ ಪರಿಮಳ ಬರುವ ಹಾಗೆ ಬೇರೆ ಬೇರೆಯಾಗಿ ಹುರಿದು ತೆಗೆದಿಡಿ
ಒಣ ಹಣ್ಣುಗಳನ್ನು ತುಪ್ಪದಲ್ಲಿ ಹುರಿದುಕೊಂಡು ಚಿಕ್ಕಚಿಕ್ಕದಾಗಿ ತುಂಡು ಮಾಡಿಟ್ಟುಕೊಳ್ಳಿ.
ಹುರಿದ ಗೋದಿ ಮತ್ತು ನೆಲಗಡಲೆಯನ್ನು ಬೇರೆಯಾಗಿ ಮಿಕ್ಸಿಗೆ ಹಾಕಿಕೊಂಡು ಹುಡಿ ಮಾಡಿಕೊಳ್ಳಿ
ಇದನ್ನು ಗಾಳಿಸಿಕೊಳ್ಳಿ ಒಂದೇ ರೀತಿಯಾಗಿ ಇರಲು.
ಅರ್ಧ ಕೇಜಿ ಸಿಹಿ ಬೆಲ್ಲ ( ಕೆಲವು ಬೆಲ್ಲ ಸ್ವಲ್ಪ ಉಪ್ಪಾಗಿಯೂ ಇರುತ್ತದೆ) ಮುಳುಗುವಷ್ಟು ನೀರು ಹಾಕಿ ಪಾಕ ಮಾಡಿಕೊಳ್ಳಿ
ಸ್ವಲ್ಪವೇ ಎಳಪಾಕವಿರಲಿ.
ನೂಲು ಪಾಕವೂ ಸರಿಯೇ.
ಉಂಡೆ ಗಟ್ಟಿಯಾದರೆ ಮಿಶ್ರಣಕ್ಕೆ ಸ್ವಲ್ಪ ಬಿಸಿ ಹಾಲು ಹಾಕಿದರೆ ಉಂಡೆ ಮೆತ್ತಗಾಗುತ್ತದೆ.
ಜಾಸ್ತಿ ಮೆತ್ತಗಾದರೆ ಸ್ವಲ್ಪ ಬಿಸಿ ಮಾಡಿಕೊಳ್ಳಬಹುದು. ಬೆಲ್ಲದ ಮತ್ತು ಒಣ ಹಣ್ಣುಗಳ ಪ್ರಮಾಣವನ್ನು ನಿಮ್ಮ ರುಚಿಗೆ ತಕ್ಕಂತೆ ಹೆಚ್ಚು ಕಮ್ಮಿ ಮಾಡಿಕೊಳ್ಳಬಹುದು.
ಎಲ್ಲವನ್ನೂ ಸ್ವಲ್ಪ ಬಿಸಿ ಇರುವಾಗಲೇ ಮಿಶ್ರಣ ಮಾಡಿಕೊಂಡು ಉಂಡೆ ಕಟ್ಟಿ, ಇದಕ್ಕೆ ಮನೆಯವರೆಲ್ಲರ ಸಹಾಯ ಪಡೆದುಕೊಳ್ಳಿ
ಕೂಡಿ ಮಾಡೋಕೆಲ್ಲ ಇನ್ನೂ ಸವಿಯಾಗಿರುತ್ತವೆ,
ವಿಧಾನದ ಕಾಪಿ ರೈಟ್: ಶ್ರೀಮತಿ ಶಾಂತಿ ಗೋಪೀನಾಥ್

ಸೌತೆಕಡುಬು
ಒಂದೂವರೆ ಮಧ್ಯಮಗಾತ್ರದ ಸೌತೆ ಕಾಯಿ (ಮುಳ್ಳು ಸೌತೆ)ತುರಿದಿಟ್ಟು ಕೊಳ್ಳಿ
ಒಂದು ತಟ್ಟೆ ಅಕ್ಕಿ ಹುಡಿ ಜಾಸ್ತಿ ಹಿಟ್ಟಿನ ತರ ಇರಬಾರದು
ಅರ್ಧ ತಟ್ಟೆ ತೆಂಗಿನಕಾಯಿ ತುರಿ
ಮೂರನ್ನೂ ಸೇರಿಸಿ ರುಚಿಗೆ ಉಪ್ಪು ಬೆರೆಸಿ ಇಡ್ಲಿ ಅಟ್ಟ ಅಥವಾ ಕುಕ್ಕರಿನಲ್ಲಿ ಬೇಯಿಸಿ
ಘಮಘಮ ಇಡ್ಲಿ /ಕಡುಬು ರೆಡಿ
ತುಪ್ಪ ಅಥವಾ ತೆಂಗಿನ ಎಣ್ಣೆ ಮಾವಿನ ಕಾಯಿ ಚಟ್ನಿ ಯೊಂದಿಗೆ ಬಲು ರುಚಿ