೧,
ಚಂದ್ರ ಗುಪ್ತ ಮೌರ್ಯ ಯಾರು?
ಮುತ್ತನ ಮಗ ಚಿಲ್ಟಾರಿ ಮುತ್ಯಾ ಮತ್ತು ಮರಿತ್ಯಾಂಪ ಗಳಸ್ಯ ಕಂಠಸ್ಯ ಗೊತ್ತಲ್ಲ ನಿಮಗೆ?
ಚಿಲ್ಟಾರಿ ಕೇಳಿದ
ಅಲ್ಲಯ್ಯಾ ಮರಿ ತ್ಯಾಂಪ ಚಂದ್ರ ಗುಪ್ತ ಮೌರ್ಯ ಯಾರಾ..?
ಅಷ್ಟೂ ಗೊತ್ತಿಲ್ವಾ.. ನಿಂಗೆ ಈ ಗಣಪತಿ ಬಪ್ಪಾ ಮೊರಿಯಾ ನ ಸಂಭಂಧಿ ಇರಬೇಕು...ಕಣೋ.
...
೨.
ಐ ಫೋನ್ ಯಾವ ಕಂಪೆನಿದೂ..!!!
ಹುಡುಗ: ನಾನೊಂದು ಐ ಫೋನ್ ೫ ತೆಗೆದೆ ಗೊತ್ತಾ..??
ಹುಡುಗಿ: ವಾವ್ ತುಂಬಾ ಚೆನ್ನು.. ಯಾವ ಕಂಪೆನಿದೂ..??!!
ಹುಡುಗ: ಹೋಗು ತಂಗೀ ಮನೆಗೆ ಹೋಗು..!! ರಿಬೋಕ್ ಕಂಪೆನಿದು.
೩. ಏನೆಲ್ಲಾ ಸಿಗತ್ತೆ..?
ಗಗನ ಸಖಿ ಪೂಜಾರಿಗೆ: ನೀವು ಏನು ತಕ್ಕೊಳ್ತೀರಾ,, ಸಾಹೇಬರೇ
ಶಾಸ್ತ್ರಿ: ಇಡ್ಲಿ ವಡೆ ದೋಸೆ, ಪೂರಿ ಇದ್ದರೆ ಅಥವಾ ಪಾಯಸ.
ಗಗನಸಖಿ: ನೀವು ಕಿಂಗ್ ಫಿಷರ್ ವಿಮಾನದಲ್ಲಿದ್ದೀರಾ, ವಿಜಯ ಮಲ್ಯರವರ ಮದುವೆಯಲ್ಲಿ ಅಲ್ಲ.
೪, ಇವತ್ತು ಪೌಡರ್ ಕೇಳ್ತಿರೋದು, ನಾಳೆ ಬೇರೇನೂ ಕೇಳ್ಬಹುದು
ಮಾರಾಟಗಾರ: ಸರ್ ಜಿರಳೆಗೆ ಪೌಡರ್ ತಗೋತೀರಾ..?
ಜೋಗ: ಇಲ್ಯಾ, ನಾವೆಲ್ಲ, ಜಿರಳೆಯನ್ನ ಅಷ್ಟೊಂದು ಪ್ರೀತಿಸಲ್ಲ, ಅಲ್ಲ ಇವತ್ತು ಪೌಡರ್ ಕೊಟ್ಟರೆ ನಾಳೆ ಬೇರೆ ಕ್ರೀಮೂ, ಡಿಯೋ ಎಲ್ಲಾ ಕೇಳೋದಿಲ್ಲ ಅಂತ ಯಾವ ಗ್ಯಾರಂಟೀ..?
ನಮ್ಮ ಕಡೂರ್ ಗಣೇಶರ ವಾಟ್ಸ್ ಅಪ್ ಸಂದೇಶದ ಭಾವ ಅನುವಾದ