Saturday, July 6, 2013

ಸೀನ ತ್ಯಾಂಪನ - ಪ್ರತಿಜ್ಞೆ ೧.



ಟಿಂಗ್........... ಟಿಂಗ್!!
ಅರೇ ಬೆಲ್ಲಾಯ್ತು.
ಧಿಗ್ಗನೆದ್ದೆ.
ಬಾಗಿಲು ತೆರೆದೆ.
ಇಲ್ಲ ಹೊರಗೆ ಯಾರೂ ಕಾಣಲಿಲ್ಲ. ಮತ್ತೆ .....?,
ಪುನಃ ಬೆಲ್ಲಾಯ್ತು.
ಥುಥ್ ..ಗೊತ್ತಾಯ್ತು, .
ಇದು ಬಾಗಿಲ ಕರೆ ಗಂಟೆಯಲ್ಲ... ,
ಮಕ್ಕಳು ನನ್ನ ಕರೆವಾಣಿಯ ಯಾವಾಗಿನ ಸದ್ದನ್ನೇ ಬದಲು ಬಾಗಿಲ ಸದ್ದಿನಂತೆ ಮಾಡಿಟ್ಟಿದ್ದಾರೆ.
ಇದು ಅದರದ್ದು......!!
ಎತ್ತಿದೆ
" ಹಿಲ್ಲೋ.."
ಇಂತಹ ಶಬ್ದ ಭೂಮಿ ಮಾತ್ರದಲ್ಲಿ ಬಂತೆಂದರೆ ಅದು ಸೀನನದ್ದು ಆಗಿರಲೇ ಬೇಕು.
ಹೇಳು ಸೀನ...
ಅರೇ ನಿಂಗೆ ಹೇಗೋ ಗೊತ್ತಾಯ್ತು..?
ನಿನ್ನ ಸ್ನೇಹಿತ ಅಲ್ವೇನೋ ..?
ಆದರೂ ಇದು ಹೊಸ ನಂಬರ್..?
ವಿಷಯ ಹೇಳು..?
ಸ್ವಲ್ಪ ಕೆಳಗಡೆ ಬರ್ತೀಯಾ..??
ನಾನಿರುವುದು ೫ ನೇ ಮಹಡಿಯಲ್ಲಿ...
ಅಲ್ಲಾ ಬೆಂಗಳೂರು ದರ್ಶನ ಮಾಡಲು ಹೊರಟಿದ್ದಲ್ಲವಾ..?? ವಾಪಾಸ್ಸು ಬಂದು ಬಿಟ್ಟರಾ ಇಷ್ಟು ಬೇಗ..? ಅಲ್ಲ ಹೆಲಿಕಾಫ್ಟರ್ನಲ್ಲಿ ತಿರುಗಿದರೂ ಇಷ್ಟು ಇಡೀ ಬೆಂಗಳೂರು ನೋಡಿ ಬರಲು ಸಾಧ್ಯವೇ ಇಲ್ಲಾ ಮತ್ತೆ...?
ಯಾಕೆ ಮಂಡೆ ಬಿಸಿ ಅವನನ್ನೇ ಕೇಳಿದರಾಯ್ತಪ್ಪಾ..!! ಲಗುಬಗೆಯಿಂದ ಕೆಳಗಿಳಿದೆ.
ಕೆಳಗೆ ಇಡೀ ಪಟಾಲಮ್ಮೇ ಇದೆ!!!!
ತ್ಯಾಂಪ ತ್ಯಾಂಪಿ ಸೀನ ಸೀನನ ಲಚುಮಿ, ಗಣಪ..??!!! ಇನ್ನೆರಡು (ಮಂಗನ) ಮರಿಗಳು!!!
ಬನ್ನಿ ಬನ್ನಿ ಎರಡು ದಿನ ಬೆಂಗಳೂರೆಲ್ಲಾ ತಿರುಗಿ ಆರಾಮ್ ಆಗಿ ನಮ್ಮನೆಗೆ ಬರ್ತೀವಪ್ಪಾ ಎಂದಿದ್ದರಲ್ಲಾ... ಏನಿದು ಕೆಲವೇ ಗಂಟೆಗಳಲ್ಲಿ ಇಡೀ ಬೆಂಗಳೂರೇ ಮುಗಿಸಿ ಬಿಟ್ಟಿರಾ..???
ಉತ್ತರ ಬಿಸಿಯಾಗಿತ್ತು
ಬೆಂಗಳೂರು ಮುಗಿಸಲು ನಾವೇನು ಅಲ್ಕೈದಾಗಳೇನು..? ತ್ಯಾಂಪನ ಮುಸಿ ಮುಸಿ
ಯಾಕೋ ಬೆಳಗಿನ ಸಮಯವೇ ಸರಿ ಇದ್ದಂಗಿಲ್ಲ... ಏನೋ ಎಡವಟ್ಟಾಗಿದೆ ಅನ್ನಿಸಿತು..
"ಯಾಕ್ರೀ ಅಣ್ಣ ಅವರ ಮೇಲೆ ರೇಗಾಡ್ತೀರಾ..? ತಪ್ಪು ನೀವ್ ಮಾಡಿದ್ದಲ್ಲದೇ ಸಿಟ್ಟು ಬೇರೆ "ತ್ಯಾಂಪಿ ಇಲ್ಲೂ ತನ್ನ ಸಾಮ್ರಾಜ್ಞಿಯ ದರ್ಪ ತೋರಿಸಿಯೇ ಬಿಟ್ಟಳು.
ಎಲ್ಲಾದರೇನು ತ್ಯಾಂಪನ ದಿನದ ರಾಮಾಯಣ ಇದು. ಇವತ್ತೇನೋ ನಮ್ಮನೆಯಲ್ಲಿ ಅಷ್ಟೆ. ಸಧ್ಯ ನನ್ನವಳು ಮನೆಯಲ್ಲಿಲ್ಲ. ಇದ್ದಿದ್ದರೆ..........??.
ನೋ ನೋ...
ಯಾಕಪ್ಪಾ‌ಏನಾಯ್ತು..???
ಯಾರೂ ಮಾತಾಡಲಿಲ್ಲ..
"ನಮ್ಮನ್ನ ಇಲ್ಲೇ ನಿಲ್ಲಿಸಿ ಮಾತಾಡ್ತೀಯಾ, .. ಹೇಗೆ?" ಈ ಸಾರಿ ಸೀನ
ನನ್ನ ತಪ್ಪು ಅರಿವಾಯ್ತು.
ತ್ಯಾಂಪ ಸೀನ ಎತ್ತಿಗೆ ( ಲಿಫ್ಟು) ಉಪಯೋಗಿಸಲ್ಲ, ಎಷ್ಟೇ ಮೆಟ್ಟಲಾದರೂ ನಡೆದೇ ಬರ್ತಾರೆ....
ಏನೂ ............ ಇಲ್ಲಪ್ಪ.... ಅಂತದ್ದೇನಿಲ್ಲ
ಎತ್ತಿಗೆಯಲ್ಲಿ ಹತ್ತಲು ಹೆದರಿಕೆ ಅವರಿಗೆ..

ಅದಕ್ಕೂ ಬಲವಾದ ಕಾರಣವಿತ್ತು...............................
ಒಮ್ಮೆ ಅವರು ಬಂದಾಗ ಹೀಗಾಯ್ತು.....
ಇಬ್ಬರೂ ನಮ್ಮನೆಯಿಂದ ಪೇಟೆಗೆ ಹೊರಟಿದ್ದರು.
ಅವರಿಬ್ಬರನ್ನು ಬಿಟ್ಟು ಮನೆ ಸೇರಿ ಬಾಗಿಲು ಹಾಕಿ ೫ ನಿಮಿಷ ಕಳೆದಿಲ್ಲ ಬೆಲ್ಲಾಯ್ತು.
ನೋಡಿದರೆ ತ್ಯಾಂಪ ಏದುಸಿರು ಬಿಡುತ್ತಾ ನಿಂತಿದ್ದಾನೆ....
ಏನಾಯ್ತೋ..?
ಪಾಕೀಟು ಬಿಟ್ಟು ಹೊಂಟಿದ್ದೆ.
ನಿಜವೇ ತ್ಯಾಂಪಿಗೆ ಇವನು ಕೊಡಿಸಬೇಕಾದ ಲಿಸ್ಟು ದೊಡ್ಡದೇ ಇತ್ತು, ಮುಖ್ಯವಾದದ್ದನ್ನೇ ಬಿಟ್ಟರೆ ಹೇಗೆ..??
ನನಗೆ ಫೋನ್ ಮಾಡಿ ಹೇಳಿದ್ದರೆ ನಾನೇ ತರ್ತಿದ್ದೇನಲ್ಲಪ್ಪಾ..??
ನಿನ್ ನಂಬ್ರ ನೋಡಿ ಮಾಡೋಣ ಎಂದರೆ ನನ್ ಕನ್ನಡಕವೂ ಇಲ್ಲೇ ಬಿಟ್ಟಿದ್ದೆ.
ಅದಕ್ಕೇ...???
ಯಾರದ್ದೋ ಫೋನ್ ಬಂತಾ, ನಿಂದೇ ಅಂತ ಮಾತಾಡ್ದೆ.. ಬಾಯಿಗ್ ಬಂದ ಹಾಗೆ ಬಯ್ಯೋದಾ ಆತ.. ನಂಗಂತೂ ತಲೆ ಬಿಸಿ ಆಯ್ತಪ್ಪಾ... ಅದಕ್ಕೆ ಫೋನ್ ಯಾರದ್ದ್ ಬಂದದ್ದ್ ಅಂದೇಳಿ ಗೊತ್ತಾಗದೇ ಮಾತಾಡಲ್ಲ ಅಂತ ಪ್ರತಿಜ್ಞೆ ಮಾಡಿದ್ದೆ. ಫೋನ್ ಬಂದದ್ದ್ ಯಾರದ್ದ ಅಂದ್ ಕಾಂಬೋ ಅಂದ್ರೆ ಕನ್ನಡಕ ಇಲ್ಯಲ್ಲೆ.
ನಾನೂ ಅದಕ್ಕೇ ಹೇಳದ್ದಾ. ನಂಗ್ಯಾಕೆ ಫೋನ್ ಮಾಡ್ಲಿಲ್ಲೆ..?
ಅಲ್ಲ ನಿಂಗ್ ಫೋನ್ ಮಾಡುಕೂ ಕನ್ನಡಕ ಇಲ್ದೆ ಮಾಡಿ ಮತ್ ಎಲ್ಲಾರೂ ಹೋಯಿ ಆ ಬೈಗುಳ ತಿಂಬುವ ಕಥಿ ಬ್ಯಾಡವೇ ಬ್ಯಾಡ ಮಾರಾಯಾ.

########

ಅದೇ ಸರಿ ಬಿಡಿ ಅಂದ್ಕೊಂಡರೆ ಕಳೆದ ಸಾರಿಯೂ............

ಅವರಿಬ್ಬರು ಎತ್ತಿಗೆಗೆ ಹತ್ತಿದರಾ. ಒಳ ಬಂದು ೫ ಎಂಬ ಗುಂಡಿ ಒತ್ತಿದರು. ಬಾಗಿಲು ಮುಚ್ಚಿಕೊಂಡಿತು. ಸ್ವಲ್ಪ ಎತ್ತರಕ್ಕೇರುತ್ತಿದ್ದಂತೆಯೇ ನಿಂತಿತು. ಮೇಲೂ ಹತ್ತಲ್ಲ ಕೆಳಕ್ಕೂ ಇಳಿಯಲ್ಲ
ತ್ರಿಶಂಕು...
ತ್ಯಾಂಪನಿಗೆ ಕತ್ತಲೆ ಎಂದರೆ ಹೆದರಿಕೆ, ಸೀನನಿಗೆ ಎತ್ತರವೆಂದರೆ...
ಇಬ್ಬರೂ ದಬ್ಬ ದಬ ಬಡಿದರು ಕೂಗಿದರು ಅತ್ತರು ಯಾರೂ ಇಲ್ಲ. ಕೂಗಿ ಕೂಗಿ ಗಂಟಲ ಪಸೆಯೇ ಇಲ್ಲ ಇಬ್ಬರಿಗೂ. ಇನ್ನು ಮೂರ್ಚೆ ಹೋಗುವುದೊಂದು ಬಾಕಿ.
ಕೆಳಗಿನ ಮನೆಯ ಚಿಲ್ಟೂ ..... ನಾವೆಲ್ಲಾ ಅದಕ್ಕೆ ಒಸಾಮಾ ಅಂತೇವೆ ಮಹಾ ದರೋಡೆಕೋರ, ಉಗ್ರವಾದಿ. ಇದೆಲ್ಲಾ ನೋಡಿಕೊಂಡಿತ್ತು. ಅಂದರೆ ಅವರಿಬ್ಬರು ಎತ್ತಿಗೆ ಹತ್ತಿದ್ದೂ, ವಿದ್ಯುತ್ ಕೈ ಕೊಟ್ಟಿದ್ದೂ, ಎತ್ತಿಗೆ ಮಧ್ಯದಲ್ಲೇ ನಿಂತು ಅವರಿಬ್ಬರೂ ಕೂಗಿಕೊಂಡದ್ದು... ಮುಂದೇನಾಗುತ್ತೆ ನೋಡೋಣ ಎಂಬ ಆಸೆ ಅದಕ್ಕೆ.. ಅಂತೂ ಇವರಿಬ್ಬರ ಸದ್ದಡಗಿದ ಮೇಲೆ ಒಂದು ಪುಣ್ಯದ ಕೆಲಸ ಮಾಡಿತು. ನಮ್ಮ ಎತ್ತಿಗೆಯ ನಿರ್ವಹಣಕಾರನನ್ನು ಕರೆದು ಹೇಳಿತು.
ಆತ ಹೋಗಿ ಜನರೇಟರ್ ಶುರು ಮಾಡಿದ ಮೇಲೆ ಎತ್ತಿಗೆ ಮೇಲೆ ಬಂತು.ಎತ್ತಿಗೆಯಿಂದ ಇಬ್ಬರನ್ನೂ ಹೊರ ಬರಮಾಡಿಕೊಳ್ಳಲಾಯ್ತು.
ಏನಾಯ್ತಾ..... ನೋಡಿ ಎತ್ತಿಗೆ ನಿಂತರೆ ಒಳಗಿನ ಬೆಲ್ ಮಾಡಿದರಾಯ್ತು, ಅಥವಾ ನನಗೆ ಫೋನ್ ಮಾಡಿಲ್ಲ ಯಾಕೆ..??
ನನ್ನ ಫೋನ್ ನಲ್ಲಿ ನಿನ್ನ ನಂಬರ್ ಇಲ್ಲ
ಮತ್ತೆ ಸೀನನದ್ದು.. ಕತ್ತಲೆಯಲ್ಲಿ ಅವನಿಗೆ ಮೊಬೈಲ್ ನಂಬರ ಕಾಣದು.
ತ್ಯಾಂಪನಿಗೆ.... ಸೀನನ ಫೋನ್ ನೋಡ ಬಹುದಿತ್ತಲ್ಲಾ... ಕೇಳಿದೆ ನಾನು
ಅವನಿಗೆ ಸೀನನ ಫೋನ್ ಆಪರೇಟ್ ಮಾಡಲು ಬರುವುದಿಲ್ಲ.
ಇಲ್ಲವಾ ಹೆದರಿಕೆಯಿಂದ ಕೈ ಕಾಲೇ ಬಿದ್ದ್ ಹೋಯ್ತಾ...
ಇನ್ನು ಜನ್ಮದಲ್ಲಿ ಎತ್ತಿಗೆ( ಲಿಫ್ಟು ) ಹತ್ತಲ್ಲ ಅಂತ ಇಬ್ಬರೂ ಪ್ರತಿಜ್ಞೆಯೇ ಮಾಡಿದ್ದಾರೆ.
ಅವರಿಬ್ಬರೂ ಸುಧಾರಿಸಲು ಒಂದು ವಾರವೇ ಬೇಕಾಯ್ತು...
ಇದು ನಿಜವಾದ ವಿಷಯ
ಪಾಪ ಅನ್ನಿಸಿತ್ತು.

ಆದರೆ ನನ್ನ ನನ್ನ ಮನೆಯ ಕಥೆ........
ಅಲ್ಲಿಯವರೆಗೆ ನನ್ನ ಮನೆಯೇ ಮೈದಾನ, ನನ್ನ ಹೆಂಡತಿ, ಕಳೆದೊಂದು ಸಾರಿ ಇವರೆಲ್ಲಾ ಬಂದು ಮಾಡಿ ಹೋದ ಮೇಲೆ ನನಗೂ ಒಂದು ವಾರವಾದರೂ. ರಜೆ ಹಾಕಬೇಕಾಗಿತ್ತು ಮನೇನ ನಾನೂ ನನ್ನ ಅರ್ಧಾಂಗಿ ಸೇರಿ ಕೂಡಾ ಸರಿ ಮಾಡಲು. ಅದಕ್ಕೆಮ್ದೇ ನಮ್ಮ ಮನೆಯಲ್ಲಿ ಧರ್ಮ ಯುದ್ಧವೂ ನಡೆದಿತ್ತು......
ಬಿಡಿ ಅದೆಲ್ಲಾ ಈಸಾರಿ ...... ಈಗ ಬೇಡ ಬಿಡಿ ..
ಮುಂದಿನ್ ಸಾರಿ

No comments:

Post a Comment