Monday, December 10, 2012

ತ್ಯಾಂಪ ಶೀನರ ಜಿ ಪಿ ಎಸ್ ಪಯಣ ಮತ್ತು  ಪುಷ್ಪರಾಜರ "ಬಿಳಿ ಬಯಲು"

ಏಯ್!!   ಇಲ್ಲಿ ನೋಡೂ   ನನ್ನ ಹತ್ರ  ಏನಿದೇಂತ... "
ನನಗೂ ಸೀನನಿಗೂ ಒಂದು ಹೊಸ ರಹಸ್ಯ ಹೇಳುವ ಹಾಗೆ ದೂರದಿಂದಲೇ ಕೈಯ್ಯೆತ್ತಿಕೊಂಡು ರೂಮೊಳಗೆ ಬಂದ ನಮ್ಮ ಹೀರೋ.
"ಏನದೂ, .. ತೋರಿಸೂ"
ನಾನೂ ಸೀನನೂ ಎದ್ದು ನಿಂತೆವು
ಅವನ ಕೈಯಲ್ಲೊಂದು ಹೊಸ ಮೊಬಾಯಿಲ್!! ಮಿರಿ ಮಿರಿ ಮಿಂಚುತ್ತಿತ್ತು.
ಏನಿದೂ ಹೇಳೊ.. ಸೀನ ಪೀಡಿಸಿದ
ಹೇಳ್ತೀನಿ ಇರು.. ತ್ಯಾಂಪಿಯ ಅಣ್ಣನ ಸ್ನೇಹಿತ ದುಬಾಯ್ ನಿಂದ ಕಳುಹಿಸಿದ್ದಾನಂತೆ, ತ್ಯಾಂಪಿ ನನಗೆ ಕೊಟ್ಟಳು.
ಅಲ್ದಾನಾ ಮೊನ್ನೆ ಮೊನ್ನೆ ಕಿತಾಪತಿ ನಡೆಸಿದ ರೈಲಿನ ಗಲಾಟೆ, ಪ್ರೇಮಿಗಳ ದಿನದ ದ್ದೆಲ್ಲಾ ಮರೆತು ನಿನಗೆ ಇಷ್ಟು ಒಳ್ಳೆ ಪ್ರೈಜ್ ಕೊಟ್ಟಿದ್ದಾಳೆ ಅಂದರೆ.....??
"ಏನು ಮಾಯ ಮಾಡಿದೆಯಯ್ಯಾ..??""
ಅದೆಲ್ಲಾ ಬಿಡು, ಇದರಲ್ಲಿ ಏನೆಲ್ಲಾ ಮಾಡಬಹುದು ಗೊತ್ತಾ..??
ಅದರಲ್ಲಿ ಸಿ ಪಿ ಸಿ ಇದೆಯಾ..??
ಅದ್ಯಾವುದದು ಸಿ ಪಿ ಸಿ ಅಂದರೆ..??
ಅಲ್ಲ, ನಾವು ಎಲ್ಲಿಗೆ ಹೋಗುತ್ತೇವೆ ಅದನ್ನೆಲ್ಲಾ ನೋಡ ಬಹುದು, ರಸ್ತೆ ತಪ್ಪಿ ಹೋದರೆ ಅದೇ ಹೇಳುತ್ತ್ತೆ ಅದು ತೋರಿಸಿದ ಹಾಗೆ ನಾವು ಹೋದರಾಯ್ತು ಅಷ್ಟೇ ಎಲ್ಲಿಗೆ ಬೇಕಾದರೂ ಹೋಗಬಹುದು," ತ್ಯಾಂಪ. "ನೋಡುವಾ ಈ ನಿನ್ನ ಆಫೀಸ್ ಎಲ್ಲಿದೆ ತೋರಿಸು. ." ಶೀನನಿಗೆ ಹೊಸತೆಂದರೆ ತುಂಬಾನೇ ಆಸಕ್ತಿ.
ನಾನೆಂದೆ ಅದು ಜಿ ಪಿ ಎಸ್, ನೋಡು , ಅದರಲ್ಲಿನ ನಕ್ಷೆ ತೆಗೆದು ತೋರಿಸಿದೆ, ತ್ಯಾಂಪನ ಮನೆ ನನ್ನ ಆಫೀಸು, ನನ್ನ ಮನೆ ಎಲ್ಲವೂ ಅದರಲ್ಲಿ ಅಳವಡಿಸಿಕೊಟ್ಟೆ.
"ಆದರೂ ತ್ಯಾಂಪ, ಇತ್ತೀಚೆಗಿನ ನಮ್ಮ ಬೆಂಗಳೂರಿನ ರಸ್ತೆಯಲ್ಲಿ ಮಾಡಿದ ಬದಲಾವಣೆ ಇದರಲ್ಲಿ ಬಂದಿರಲಿಕ್ಕಿಲ್ಲ, ಅದಕ್ಕೆ ನಾವೇ ಅಂತಹ ಮಾರ್ಗದಲ್ಲಿ ಚಲಿಸಿ, ಆ ಮಾರ್ಗವನ್ನು ಅದರಲ್ಲಿ ಉಳಿಸಿಡ ಬೇಕಾಗಿ ಬರಬಹುದು. ಏನಿದ್ದರೂ ಸಂಪೂರ್ಣವಾಗಿ ಅದನ್ನೇ ಅವಲಂಬಿಸಲಾಗದು ಆಯ್ತಾ ಎಂದೆ ನಾನು, ಅದೆಲ್ಲಾ ಬಿಡಾ ದೊಡ್ದ ವಿಷಯವೇ ಅಲ್ಲ" ಅಂದ ತ್ಯಾಂಪ.
"ಸರಿ ಹಾಗಾದರೆ ಈ ಶನಿವಾರ ಚೌಟರು ಬರ ಹೇಳಿದ್ದಾರಲ್ಲ ಬಿಳಿ ಬಯಲಿಗೆ, ಅಲ್ಲಿಗೇ ಹೋಗಿ ನಮ್ಮ ಪ್ರಯಾಣದ ಆರಂಭ ಮಾಡೋಣ"
 ಒಪ್ಪಿಗೆ ಆಯ್ತು ಮೂವರಿಗು.
"ವೊಲ್ವೊ ಬಸ್ನಲ್ಲಿ ಬಿಳಿ ಮೈದಾನದ ಚೌಟರನ್ನು ನೋಡಲು ಹೋಗಬೇಕಾದರೆ ಬೆಳಿಗ್ಗೆ ಬಲಗಡೆ ಕುಳಿತುಕೊಳ್ಳಬಾರದು, ಸಂಜೆ ಎಡಗಡೆ.ಗೊತ್ತಾ...?"  ತ್ಯಾಂಪ ಹೇಳಿದ
ಹೌದಾ ಯಾಕೆ..?? ಶೀನ. ತ್ಯಾಂಪ ಅದಕ್ಕೆ ಉತ್ತರ ಕೊಡದೇ...  "ವೋಲ್ವೋ ಬಸ್  ಯಾಕೆ..? ಇವನ ಕಾರಿನಲ್ಲಿ ಹೋಗೋಣ.. ಆಯ್ತಾ.  ಹೇಗಿದ್ದರೂ ನನ್ನ ಜಿ ಪಿ ಎಸ್ ಇದೆಯಲ್ಲಾ ಎಲ್ಲಿಗೆ ಬೇಕಾದರೂ ಹೋಗಲು" ಎಂದ.
॒॒॒॒॒॑॑॑!!!!॑॑॑॑॑॑
ತ್ಯಾಂಪಾ...ಬ್ಯಾಟರಿ ಸರಿಯಾಗಿ ಚಾರ್ಜು ಮಾಡಿದ್ದೆ ತಾನೇ
ಹೌದು ಕಣೋ, ನಾಲ್ಕೂ ಗೆರೆ ತುಂಬಿಕೊಂಡಿದೆ ಬಿಡು
ಸರಿಯಾಗಿ ಕೇಳಿಸಿಕೋ, ಇಲ್ಲಿಂದ( ಹೆಬ್ಬಾಳದಿಂದ ಹೆಣ್ಣೂರು ಮಾರ್ಗವಾಗಿ ಒಂದೇ ರಸ್ತೆ, ಸೀದಾ ಹೋಗಿ. ಆಯ್ತಾ ಸಿ ವಿರಾಮನ್ ನಗರ್ ಹತ್ರ ರಸ್ತೆ ಬದಲಾಗುತ್ತೆ ಎಡಗಡೆ, ನಂತರದ ಗುತ್ತು ಮಹದೇವಪುರ, ಅಲ್ಲಿಂದ ಸೀದಾ ಕಾಡುಗುಡಿ ಕಡೆ ಆಯ್ತಾ"
ಆಯ್ತು ಬಿಡಾ, ನಾನು ಗಾಡಿ ಬಿಡುತ್ತೇನೆ ಶೀನ ಜಿ ಪಿ ಎಸ್ ನೋಡುತ್ತಾ ದಿಕ್ಕು ಹೇಳುತ್ತಿರುತ್ತಾನೆ, ನಿನ್ನ ಹತ್ರ ಕೇಳಲು ಬರುವುದಿಲ್ಲ ಆಯ್ತಾ, ಇದರಲ್ಲಿ ಅಮೇರಿಕಾದ ರಸ್ತೆ ಕೂಡಾ ಇದೆ ಗೊತ್ತಾ,
ಹೌದು ಒಬಾಮಾ ಹತ್ರನೇ ಹೋಗಿ ಸೀದಾ...
ಸರಿಯಾಅಗಿಕೇಳಿಸಿಕೋ, ಅಲ್ಲಿಂದ ಐಟಿಪಿಎಲ್ ನಲ್ಲಿ ಒಂದೇ ರಸ್ತೆ ಎಂಟೂವರೆ ಕಿ ಮಿ
ಎಲ್ಲಾ ಗೊತ್ತಿದೆಯಾ, ಜಿ ಪಿಎಸ್ ನಲ್ಲಿದೆ, ನೀನು ಹೊರಡು. ಇಲ್ಲವಾದರೆ ಈತ ನಮಗೆ ಪೂರಾ ವೀಕ್ಷಕ ವಿವರಣೆ ಕೊಟ್ಟಾನು.
ನೋಡು ಈಗ ೯ ಗಂಟೆ ಅಬ್ಬಬ್ಬಾ ಆಂದರೆ ಹತ್ತೂವರೆ ಹನ್ನೊಂದು ಗಂಟೆಗೆ  ಅಲ್ಲಿರ್ತೀರಾ,
ಗೊತ್ತಿದೆ ಮರಾಯಾ, ಅಲ್ಲಿನ್ ಹೋಕ್ ತೋಟದ ಬಳಿ ಚೌಟರು ಕಾದಿರ್ತಾರೆ,
"ಅದು ಹೋಕ್ ಅಲ್ಲ, ಹೋಫ್ ..". ನಾನು ತಿದ್ದಿದೆ
ಶೀನನೆಂದ" ನಾನು ಕನ್ನಡದಲ್ಲಿ ಹೇಳೀದ್ದಾ,....   ನಿಧಾನವಾಗಿ ಹೋಗಬೇಕು , ರಸ್ತೆ ನಿಯಮ ಪಾಲಿಸಬೇಕು ಎಲ್ಲಾ ನೆನಪಿದೆ, ಇದೇನೂ ಅಮೇರಿಕಾ ಅಲ್ಲಾ ಆಯ್ತಾ" ಶೀನನೆಂದ ನಗುತ್ತಾ.
"..ನನ್ನ ಹತ್ರ ಜಿ ಪಿ ಎಸ್ ಇದೆ.."ಅವನ ಮಾತನ್ನು ನಾನು ಪೂರ್ತಿ ಮಾಡಿದೆ ನಗುತ್ತಾ .
ನನಗೆ ಅರ್ಜೆಂಟ್ ಆಗಿ ಒಂದು ಮೀಟಿಂಗ್ ಕೂಡಿ ಬಂತು, ಬಾಸ್ ಊರಲ್ಲಿಲ್ಲ, ನಾನು ಅದರಲ್ಲಿರಲೇ ಬೇಕಾಗಿತ್ತು. ಹಾಗಾಗಿ ನನ್ನ ಹೊಸ ಯಮ ಎಫ್ ಜಡ್ ಎಸ್ ನಲ್ಲಿ ಅವರಿಬ್ಬರನ್ನೂ ಕಳುಹಿಸಿದ್ದೆ.
ಆದರು ಕುರುಡ ಕುಂಟನ ಜೊತೆ ಆದ ಹಾಗೆ ಅಂತ ಸಂಶಯ ಬಂತು, ಆದರೂ ಅವರಿಬ್ಬರ ಉತ್ಸಾಹ ಕುಂಟಿಸುವ ಹಾಗಿಲ್ಲ, ಊರೆಲ್ಲಾ ಗದ್ದಲ ಎಬ್ಬಿಸಿ ಬಿಡುತ್ತಾನೆ ಶೀನ, ಅವನ ಜತೆ ಈಗ ತ್ಯಾಂಪನೂ ಸೇರಿದರೆ ದೇವರೇ ಗತಿ.

ಹೋಗಿ ಅರ್ಧ ಗಂಟೆಯಾಗಿಲ್ಲ ಶೀನನ ಕರೆ
ಹೇಳು ಶೀನಾ..."
ಏಯ್ ಇಲ್ಲಿ ಎಡಕ್ಕೂ ಬಲಕ್ಕೂ ಕೆಳಕ್ಕಿಳಿಯುವ ರಸ್ತೆ ಇದೆ. ಕರೆ ವಾಣಿಯಲ್ಲಿ ಮೇಲೆ ಹೋಗಲು ಹೇಳ್ತಾ ಇದೆ, ಏನು ಮಾಡಲಿ..?
ಅದೇನು... ಸೇತುವೇನಾ ..?ಹಾಗಾದರೆ ಸೀದಾ ಮುಂದೆ ಹೋಗಿ, ಅಕ್ಕ ಪಕ್ಕದವು ಕವಲು ದಾರಿಗಳು, ಅದರಲ್ಲಿ ಹೋಗಬೇಡಿ..
ಸರಿ"
ಪುನಃ ಅರ್ಧ ಗಂಟೆ ಬಿಟ್ಟು.. ಕರೆ ಶೀನನದ್ದೇ
ಏಯ್ ಈ ಸಾರಿ ಇದು ಬಲಗಡೆ ತಿರುಗಿ ಅಂತಾ ಇದೆ ಕಣೋ, ಬಲಗಡೆ ದೊಡ್ಡ ಗೋಡೆಯಿದೆ ಉದ್ದಕ್ಕೆ... ಏನೋ ಮಾಡೋದು,
ಹಾಗೇ ಮುಂದೆ ಹೋಗಿ ಬಲಗಡೆ ರಸ್ತೆ ಬರಬಹುದು
ಸರಿ

ಹತ್ತೇ ನಿಮಿಷ, ಮತ್ತೆ ಕರೆ
ಏಯ್, ಇದು ಹಿಂದಕ್ಕೆ ತಿರುಗಲು ಹೇಳ್ತಾ ಇದೆ ಕಣೋ
ಯಾಕೆ ಏನಾಯ್ತೊ..?
ಎಲ್ಲರೂ ಮುಂದೆ ಮುಂದೆ ಹೋಗ್ತಾ ಇದ್ದಾರೆ, ಇದು ಹಿಂದೆ ಹೋಗಲು ಹೇಳ್ತಾ ಇದೆ ಕಣೊ..?
ಅಂದರೆ ಅದು ಏಕ ಮುಖ.ರಸ್ತೆ......ಸರಿ ಹಾಗೇ ಮುಂದೆ ಹೋಗಿ, ಎಡಕ್ಕೆ ತಿರುಗಿ ಬನ್ನಿ, ಸರಿ ಹೋಗುತ್ತೆ.
ಮತ್ತೆ
ಕಾಲೇ ಗಂಟೆ.. ಪುನಾಃ ಕರೆ
ಏಯ್, ಇಲ್ಲೆಲ್ಲಾ ಕರುಳ ಬಳ್ಳಿ ಇದ್ದ ಹಾಗೆ ಮೇಲ್ಸೇತುವೆ ಇದೆ ಕಣೋ..ಏನು ಮಾಡೋದು..??
"ಯಾಕೆ ಈಗ ನಿನ್ನ ಸಿ ಪಿ ಸಿ ಏನ್ ಹೇಳ್ತಾ ಇದೆ..??" ನನ್ನ ಮೀಟಿಂಗ್ ಕೂಡಾ ಹಾಳು ಮಾಡ್ತಾ ಇದ್ದಾರೆ, ನಾನೇ ಹೋಗಬಹುದಿತ್ತು, ಪಾಪ ಚೌಟರು ಬೇರೆ ಕಾಯ್ತಾ ಇದ್ದಾರೆ ಬಯಲಲ್ಲಿ.
"ನೋಡು ಸೂಚನಾ ಫಲಕ ಇದೆಯಾ ನೋಡು"
"ಅದೇನಿಲ್ಲ ಕಣೋ"
"ಯಾರನ್ನಾದರೂ ಕೇಳಲು ಸಾಧ್ಯವೋ ನೋಡು,"
"ಎಲ್ಲಾ ಅವರಷ್ಟಕ್ಕೇ ಹೋಗ್ತಾ ೭೦-೮೦ ರ ವೇಗದಲ್ಲಿ ಹೋಗ್ತಾ ಇದ್ದಾರೆ, ಏನೋ ಮಾಡೋದು..?"
"ಸರಿ ಹಾಗೇ ಮುಂದೆ ಹೋಗಿ ಯಾರನ್ನಾದರು ಕೇಳಿ ನೋಡಿ.."
"ಇಲ್ಲ ಬಿಡು ರಸ್ತೆ ಸಿಕ್ಕಿತು"
ನನಗೂ ನಿರಮ್ಮಳವಾಯ್ತು
॒॒॒॒॒॒॒

ಒಂದು ಗಂಟೆ ಕಳೆಯಿತು.
ಇಬ್ಬರ ಪತ್ತೆ ಇಲ್ಲ
ಅಷ್ಟರಲ್ಲಿ ಕರೆ ಬಂತು... ನೋಡಿದೆ ಚೌಟರದ್ದೇ, ಹಾಗಾದರೆ ಅಲ್ಲಿಗೆ ತಲುಪಿದರು ಇಬ್ಬರೂ..??
" ಇಲ್ಲ, ಕ್ಷಮಿಸಿ ನನಗೆ ಇವತ್ತು ಎರಡೂವರೆವರೆಗೆ ಮೀಟಿಂಗ್ ಇದೆ... ಅದಕ್ಕೇ ಬರುವುದಾದರೆ  ಮೂರು ಗಂಟೆಗೆ ಬನ್ನಿ ಕಾದಿರ್ತೇನೆ"
ಆದರೆ ...ನಾನೆಂದೆ, "ತೊಂದರೆ ಯಿಲ್ಲ ಬಿಡಿ ಇನ್ನೊಮ್ಮೆ ನೋಡಿದರಾಯ್ತು.... , ನನಗೂ ಮೀಟಿಂಗ್ ಇದೆ ಇವತ್ತು...ಬಾಯ್"
ಅವರಿಗೆ ಇವರಿಬ್ಬರೂ ಹೊರಟಿರುವುದು ಹೇಳುವುದು ಬೇಡ ಎನ್ನಿಸಿತ್ತು.
ಆದರೆ ಇವರಿಬ್ಬರೂ ಹೋದರೆಲ್ಲಿಗೆ...??
ಫೋನೂ ಇಲ್ಲ
ಮತ್ತೆ ಹಾಗೇ ಒಂದು ಗಂಟೆ...
ಹಾಗಾದರೆ....  ಇಲ್ಲ, ಬಂತು...  ಈ ಸಾರಿಯ ಕರೆ ಶೀನನದ್ದೇ..
"ಏಯ್ ನಾಲ್ಕೈದು ಕಿ ಮೀ ಬಂದಿದ್ದೇವೆ, ಮೇಲ್ಸೇತುವೆಯಲ್ಲಿ, ಚಂದ ಇದೆ.......ಮುಗೀತಾನೇ ಇಲ್ಲ ಕಣೋ ರಸ್ತೆ..
ಹೌಹಾರಿ ನಿಂತೆ...
"ಅಲ್ಲೆಲ್ಲಿದೆ ಮೇಲ್ಸೇತುವೆ.... ಚೌಟರ ಬಿಳೀ ಬಯಲಿನ ದಾರಿಯಲ್ಲಿ............ಅಂದರೆ ಪ್ರಾಣಿಗಳು ... ಇಲೆಕ್ಟ್ರಾನಿಕ್ ಸಿಟಿಯ ಮೇಲ್ಸೇತುವೆಯಲ್ಲಿದ್ದಾವೆ..!!!!"

ಕೇಳಿದೆ " ಅಲ್ಲೆಲ್ಲಾದರು.... ಇನ್ಫೋಸಿಸ್   ಕಟ್ಟಡ  ಕಾಣುತ್ತಾ..?"
"ಹಾ.. ಹೌದು, ೨೮,೨೯ ಎಲ್ಲಾ ಇದೆ..."
ಅದೇನದು....???
"ಕಟ್ಟೋಣದ ಸಂಖ್ಯೆ..... ಹಾಗೇ ಮುಂದೆ ಹೋಗಬೇಕಾ..?? ಚೌಟರು ಸಿಗುತ್ತಾರಾ..??" ಶೀನ
 "ಮುಂದೆ ಹೋದರೆ ನಿಮಗೆ ಈ ಜನ್ಮದಲ್ಲಿ  ಚೌಟರು  ಸಿಗಲಿಕ್ಕಿಲ್ಲ ಬಿಡಿ ಮುಂದೆ .. ಜಿಗಣಿ, ಆನೆಕಲ್ ,  ಹಾಗೇ ಹೋದರೆ ಜಯಲಲಿತ ಹತ್ರ ಕಾವೇರಿ ನೀರ್ ಬಗ್ಗೇನೂ ಕೇಳ ಬಹುದು.  ನೀವು ಬೇರೆ ದಿಕ್ಕಿನಲ್ಲಿ ಹೋದಿರಿ,"
"ಈಗೇನು ಮಾಡಬೇಕು ಹೇಳು"
ಸರಿ ಬಿಡು ಮುಂದೆ ಹೋಗಿ ಅದೇ ಸೇತುವೆಯಲ್ಲಿ ಕೆಳಗಿಳಿದು ಸುಂಕ ಕಟ್ಟಿ ವಾಪಾಸ್ಸು ಬನ್ನಿ, ಬರುವಾಗ ದಾರಿ ಕೇಳಿಕೊಂಡು ಹೆಬ್ಬಾಳ್ ಮೇಲ್ಸೇತುವೆಗೆ ಬಂದು ನನಗೆ ಕರೆ ಮಾಡಿ ಆಯ್ತಾ..??
ಮತ್ತೆ  ಚೌಟರಿಗೆ...
ನಾನೇ ಹೇಳ್ತೇನೆ..
ಹತ್ತೇ ನಿಮಿಷ, ಪುನಃ ಕರೆ, ಏಯ್ ಬೈಕು ಸಿಕ್ಕಾ ಪಟ್ಟೆ ಅಲುಗಾಡ್ತಾ ಇದೆ, ಅದು ಹದಿನೆಂಟಿಪ್ಪತ್ತಾಳು ಎತ್ತರದ ಸೇತುವೆ ಮೇಲೆ, ನಂಗೆ ಹೆದ್ರಿಕೆ ಆಗ್ತಾ ಇದೆಯಪ್ಪಾ ಏನೋ ಮಾಡೊದು.
ಗಾಡಿ ನಿಲ್ಲಿಸಲು ಹೇಳು ತ್ಯಾಂಪನಿಗೆ, ಪಂಕ್ಛರ್ ಆಗಿರ ಬೇಕಾ ನೋಡು, ಸ್ವಲ್ಪ ನಿಧಾನ, ಇನ್ನು  ತಳ್ಳೀಕೊಂಡೇ ಹೋಗಬೇಕಷ್ಟೇ..
ಎಷ್ಟು ದೂರ ..??
ಐದಾರು ಕಿ ಮೀ ಇರಬಹುದು.
ಅಯ್ಯಯ್ಯೋ ಈ ಯಮ ಭಾರದ ಗಾಡಿ ನನ್ನ ಹತ್ರ ಅಗ್ಲಿಕ್ಕಿಲ್ಲ ಮರಾಯ. ಅದೂ ಪಕ್ಕದಲ್ಲೇ ೮೦-೯೦ ರವೇಗದಲ್ಲೇ ಗಾಡಿಗಳು ಭರ ಭರ ಚಲಿಸುತ್ತಿರುವಾಗ, ಯಾವ ಕ್ಷಣದಲ್ಲೂ ಈ ಯಮ ಭಾರದ ಗಾಡಿಯನ್ನು ದೂಡುತ್ತಿರುವ ನಮ್ಮನ್ನು ಯಮಪುರಿಗೆ ಅಟ್ಟುವ ಕೊನೆಯ ಪಯಣ ಇದೇ ಅನ್ನಿಸುತ್ತೆ ಕಣೋ.
ಅಲ್ಲ ಅಲ್ಲೇ ಇರಿ, ನಾನೇ ಏನಾರೂ ಮಾಡ್ತೇನೆ,ಬಿಡು.

॒॒॒॒॒॒॒॒॒                    ॑॑॑॑॑॑॑॑
ಸರಿಯಾಗಿ ನೋಡಿದ್ದೆ ತಾನೇ..?
ನೋಡಿಯೇ ಹೇಳಿದ್ದು ಬಿಡೋ
ಟ್ರಿಪ್ ಬಟನ್ ಒತ್ತಿದ್ದೆ ಅಲ್ವಾ..??
ಹೌದೂ
ಜಿ ಎಸ್ ಪಿ..??
ಅದು ಕೂಡಾ
ಸರಿ ಅದನ್ನ ನೋಡಿ ಹೇಳಿ.. ಏನಂತಾ ಇದೆ ಈಗ..??
ಇಲ್ಲಿಂದ ನೇರ ಮೂರುವರೆ ಕಿ ಮೀ ಹೋಗಿ ನಂತರ ಬಲಗಡೆ ತಿರುಗಿ ಅಂತಾ ಇದೆ.
ಸರಿ, ಹೆಬ್ಬಾಳದ ಹತ್ರ ತಾನೇ ನೀನಿರೋದು,
ಹೌದು ಕಣೋ
ಸರಿ ಹೊರಡಿ.

@@@@@@@
ಟೈಮ್ ನೋಡಿದೆ, ಲೆಕ್ಕಾಚಾರ ಪ್ರಕಾರ ಈಗ ಅವನು ಅಬ್ಬಿಗೆರೆ ತಲುಪಬೇಕಾಗಿತ್ತು, ಆದರೆ ಆ ಕಡೆಯಿಂದ ಸುದ್ದೀನೇ ಇಲ್ಲ. ನಾನೇ ಕರೆ ಮಾಡಿದೆ.
ತ್ಯಾಂಪ ಎಲ್ಲಿದ್ದೀರಾ..??
ಎಲ್ಲಿದ್ದೇವೆ ಅಂತಾನೇ ಗೊತ್ತಾಗುತ್ತಿಲ್ಲ ಕಣೋ
ಏನೋ ಹಂಗಂದ್ರೆ... ಪಕ್ಕದಲ್ಲಿ ಕೆರೆ ಇದೆಯಾ..?
ಇಲ್ಲ..
ಮತ್ತೆ ಸ್ಮಶಾನ..??
ಅಯ್ಯಯ್ಯೋ ಅದ್ರ ಹೆಸರು ಹೇಳ್ಬೇಡ.. ( ಸೀನನಿಗೂ ತ್ಯಾಂಪನಿಗೂ ಸ್ಮಶಾನ ಅಂದ್ರೆ ಜಮ ಹೆದರಿಕೆ)
ಮತ್ತೆ ಯಾವ್ದಾರು ಕಟ್ಟಡ ಹತ್ರ ಇದೆಯಾ..??
ಇಲ್ಲ..
ನೀರಿನ ಹೌದ?
ಇಲ್ಲವಲ್ಲ
ಮತ್ತೆ ಬಸ್ ನಿಲ್ದಾಣ
ಅದು ಇಲ್ಲ
ಮತ್ತೆ ಎಲ್ಲಿದ್ದೀರೋ, ರಸ್ತೆಯಲ್ಲೇ ಇದ್ದೀರಿತಾನೇ
ಇಲ್ಲ..
ಮತ್ತೆ, ತಮಾಷೆ ಮಾಡ್ತಾ ಇಲ್ಲ ತಾನೇ
ಇಲ್ಲಪ್ಪಾ ಕಾಡಲ್ಲಿದ್ದೇವೆ
ಕಾಡಾ..?? ಅದೂ ಈ ಬೆಂಗಳೂರಿನಲ್ಲಿ..?? ಅಲ್ಲ ಹೆಬ್ಬಾಳದಿಂದ ಮೂರೂವರೆ ಅಂದ್ರೆ ಬೆಲ್ ವ್ರತ್ತ, ಅದಾದ ನಂತರ ಗಂಗಮ್ಮ ವ್ರತ್ತ, ಅಲ್ಲಿಂದ ಸೀದಾ ಕೆಳಗಿಳಿದರೆ ಕೇಂದ್ರೀಯ ವಿದ್ಯಾಲಯ, ಅಲ್ಲಿಂದ ಪುನಃ ಬಲಗಡೆ ಹೊರಳಿದರೆ ೨-೩ ಕಿಮೀನಲ್ಲೇ ಅಬ್ಬಿಗೆರೆ.ಇವರಿಗೆಲ್ಲಿಂದ ಕಾಡು ಸಿಕ್ಕಿತು?

ಬೇಗ ಬಾರೋ, ಆಗಲೇ ಕತ್ತಲಾಗುತ್ತಾ ಇದೆ, ಈ ಕಾಡಲ್ಲಿ ಹೆದರಿಕೆಯಾಗ್ತಾ ಇದೆ, ಇಬ್ಬರಿಗು, ಅದೂ ಅಲ್ದೇ ಸ್ಮಶಾನ ಹತ್ರ ಇದೆ ಅಂತ ಬೇರೆ ಹೆದರಿಸ್ತಾ ಇದ್ದೀಯಾ ನೀನು..?/
ಇರು, ಗಂಗಮ್ಮ ಸರ್ಕಲ್ ವರೆಗೆ ಸರಿಯಾಗಿ ಬಂದ್ರೀ ತಾನೇ..??
ಹೌದು
ಮತ್ತೆ ಅಲ್ಲಿಂದ  ಎಡಗಡೆ ತಿರುಗಿದ್ರಾ..?
ಹೌದಾ..
ಆಮೇಲೆ...?
ಸೀದಾ ಬಂದ್ರಾ ಕೆಳಗಡೆ..??
ಇಲ್ಲ ಕಣೋ, ಅದೇನೋ ಬಲಗಡೆ ತಿರುಗಲು ಹೇಳಿತು, ನಾವು ತಿರುಗಿದೆವು, ಮತ್ತೆ.....
ಮತ್ತೆ ನೀವು ಒಂದೋ ಸೀದಾ ಕೆಳಗೆ ಬರಬೇಕಿತ್ತು, ಅಥವಾ ಸ್ವಲ್ಪ ಅಂದರೆ ನಾನೂರು ಮೀಟರ್ ಬಂದು ಬಲಗಡೆ ತಿರುಗಬೇಕಿತ್ತು.
ಹಾಗೇ ಮಾಡಿದ್ದೆವು,ಕಣೋ .
ಹಾ ಗೊತ್ತಾಯ್ತು, ನೀವು ನಾನ್ನೂರು ಮೀಟರ್ ಅಂದರೆ ನೂರು ಮೀಟರ್ ಒಳಗೇ ಬಲಕ್ಕೆ ತಿರುಗಿ ವಾಯುದಳದ ಬಂದೂಕು ತರಭೇತಿ ವಲಯದೊಳಕ್ಕೆ ಹೊಕ್ಕೀದ್ದೀರಾ, ನಾನೇ ಬರುತ್ತೇನೆ ಬಿಡಿ ಅಲ್ಲಿಗೇ..ಅಥವಾ ಸ್ವಲ್ಪ ಹಿಂದೆ ಬಂದು ಹೊರಕ್ಕೆ ಬನ್ನಿ ನಾನು ಅಲ್ಲಿಗೇ ಬರುತ್ತೇನೆ.

ಸ್ವಲ್ಪ ಸಮಯದ ನಂತರ.
"ಅಂದ ಹಾಗೇ, ನಮ್ಮ ಪಂಕ್ಚರ್ ಆದ ಗಾಡಿ ಆ ೧೦ ಕಿ ಮೀ ಮೇಲ್ಸೇತುವೆಯಲ್ಲಿ ದೂಡಿಕೊಂದು ಹೋಗುತ್ತಿದ್ದೇವೆ ಅಂತ ನೀನು ಅವರಿಗೆ ತಿಳಿಸಿದ್ದೆಯಾ?" ಶೀನ.
"ಇಲ್ಲಪ್ಪಾ, ಇದೇ ನಿಮ್ಮನ್ನು ಅವರು ಅಲ್ಲಲ್ಲಿ ಇಟ್ಟಿರುವ ಕೆಮರಾದಿಂದ ನೋಡಿ  ನಿಮಗೆ ಸಹಾಯ ಕಳುಹಿಸಿಕೊಟ್ಟರು. ಅದಕ್ಕೆಂತಲೇ ಒಂದು ವಾಹನ ಇಟ್ಟಿರುತ್ತಾರೆ ಅವರು. ಇರಲಿ ನಿಮ್ಮ ಅನುಭವಕ್ಕಾಯ್ತು ಇದು. ಇನ್ನೊಮ್ಮೆ ಜಿ ಪಿ ಎಸ್ ಇದೆ ಅಂತ ಏನೇನೋ ಮಾಡಲು ಹೋಗಬೇಡಿ ಆಯ್ತಾ.." ನಾನೆಂದೆ.
ಇನ್ನು ಜನ್ಮದಲ್ಲಿ ಈ ಸಿ ಪಿಸಿ ಅಲ್ಲಲ್ಲ ಜಿಪಿಎಸ್ ಗೆ ಕೈ ಹಾಕಲ್ಲ.ಬಿಡು ಇದನ್ನ ತ್ಯಾಂಪಿಗೇ ವಾಪಾಸ್ಸು ಕೊಡ್ತೇನೆ." ಎಂದ ತ್ಯಾಂಪ

Saturday, December 1, 2012

ತ್ಯಾಂಪಿಯ ಕಾರು ಕಲಿವಾಟ

ಒಮ್ಮೆ ತ್ಯಾಂಪ ತ್ಯಾಂಪಿ ಬಸ್ ನಿಲ್ದಾನದಲ್ಲಿ ಬಸ್ಸಿಗಾಗಿ ಕಾಯುತ್ತಿದ್ದರು, ಆಗಲೇ ಮಹಿಳಾ ವಿಶೇಷವಾಹನವೊಂದು ಅವರನ್ನು ದಾಟಿ ಮುಂದೆ ಹೋಯ್ತು.
"ಅರೆರೇ ಅದರಲ್ಲಿ ಗಂಡಸರೂ ಕುಳಿತಿದ್ದಾರಲ್ಲಾ" ಎಂದಳು ತ್ಯಾಂಪಿ,
" ನಾನು ಗಮನಿಸಲೇ ಇಲ್ಲ...ಕಂಡಕ್ಟ್ರೇನೋ" ಅಂದ ತ್ಯಾಂಪ, ನಾಲ್ಕೈದು ಜನರಿದ್ದಾರಲ್ಲ" ತ್ಯಾಂಪಿ.
"ಯಾಕೆ ನಾಲ್ಕೈದು ಜನರು ಇರಬಾರದಾ" ತ್ಯಾಂಪ.
"ಅವರಿಗೆ ಮಹಿಳೆಯರ ಬಸ್ಸೇ ಬೇಕಾಯ್ತಾ. ."ತ್ಯಾಂಪಿ.
" ಪುರುಷರು ಎಂದೂ ಹೀಗೆ ಕುಟುಕುವುದಿಲ್ಲ, ಪುರುಷರಿಗೆಂದೇ ಮೀಸಲಾದ ವಾಹನದಲ್ಲೂ ಮಹಿಳೆಯರು ಕುಳಿತರೆ. ಗೊತ್ತಾ." ತ್ಯಾಂಪ.
"ನೀವೆಲ್ಲಾ ಒಂದೇ....ಎಂದಳು ತ್ಯಾಂಪಿ.
"ತ್ಯಾಂಪಿ.. ನೋಡು ನೀನು ಗಮನಿಸಿದ್ದೂ ಪುರುಷರನ್ನು ಮಾತ್ರ, ಅದೇ ನನ್ನನ್ನು ಯಾಕೆ ಗದರುತ್ತೀಯಾ..?"
ಎಂದಿದ್ದ ತ್ಯಾಂಪ ಅವಳಿಗೆ ಮಾತ್ರ ಕೇಳುವಂತೆ. 
ಅಂದೇ ತ್ಯಾಂಪಿಗೆ ವಾಹನ ಚಾಲನೆಯ ವಿಷಯ ಹೊಳೆದದ್ದು.

ಅವಳ ಮೊದಲ ದಿನದ ಕಲಿಕೆ ಆರಂಭವಾಗಿದ್ದುದು ಹೇಗೆ ಅಂತಾನಾ..?? 
ಅವಳು ಕಲಿಯಬೇಕಾದ ಕಾರು ಹಳದಿ ಬಣ್ಣದ ಸ್ಯಾಂಟ್ರೋ, ಅದನ್ನೇ ಕೆಲವೊಮ್ಮೆ ಆಲ್ಟ್ರೋ ಅಂತಾನೂ ಹೇಳುತ್ತಿದ್ದುದ್ದಿದೆ , ಅವಳು.
ಅದಕ್ಕೇ ಮೊದಲೇ ೮ ನೇ ಕ್ರಾಸಿಗೆ ಹೋಗಿ ಹಳದಿ ಚೂಡಿದಾರ, ಅದಕ್ಕೆ ಸರಿ ಹೊಂದುವ ಬಳೇಗಳು ಚಪ್ಪಲ್, ಚುನ್ನೀ, ಎಲ್ಲಾ ತಂದಿದ್ದಳು, ಇದೆಲ್ಲಾ ಏನೂ ಅಲ್ಲ.... ಬಿಡಿ, ಹಳದಿಗೆ ಸರಿಹೊಂದಿಸಲೆಂದೇ ೩-೪ ದಿನದಿಂದ ಹಲ್ಲೂ ಉಜ್ಜಿರಲಿಲ್ಲ ಅವಳು ಗೊತ್ತಾ......ಹೌದು ಮ್ಯಾಚಿಂಗ್ ಆಗೋದು ಬ್ಯಾಡವಾ..??

ತರಬೇತುದಾರ ಕೇಳಿದ್ದ ಹಿಂದೆ ಯಾವ ಗಾಡಿಯಾದರು ಚಲಾಯಿಸಿದ ಅನುಭವ ಇದೆಯೇ
ಹೌದು ತ್ಯಾಂಪಿಯ ಉತ್ತರ ಸಣ್ಣ ಇರುವಾಗ ಸೈಕಲ್ ಓಡಿಸಿದ್ದೆ.
ಸರಿಯಾಗಿ ಬಿಡ್ತಿದ್ರಾ..??
ಹೌದು ಮೊದಲು ಸೆಟ್ಟರ ಬೆನ್ನಿಗೇ ಬಿಟ್ಟಿದ್ದೆ ಅವರು ಒಂದು ವಾರ ಆಸ್ಪತೆಯಲ್ಲಿದ್ದರು...
ಅದಲ್ಲಾ.... ನಾಲ್ಕು ಚಕ್ರದ್ದು?
ಹೌದು!!
ಅವನು ಯಾವುದು ಅಂತ ಕೇಳಲಿಲ್ಲ ಪುಣ್ಯಾತ್ಮ, ಕೇಳಿದ್ದರೆ ಅವಳ ಬುದ್ದಿ ಮತ್ತೆ ಗೊತ್ತಾಗುತ್ತಿತ್ತು ಪಾಪ.
ಸರಿ ಇದು ಕ್ಲಚ್ಚು, ಎಕ್ಸಿಲೇಟರ್, ಬ್ರೇಕ್ ಎಂತೆಲ್ಲಾ ವಿವರಿಸುವಾಗ, ಕಾಲಿಗಾ, ಕಯ್ಯಲ್ಲಿಲ್ಲವಾ ಅಂತ ಕೇಳಿದ್ದಳು ತ್ಯಾಂಪಿ.
ಅಲ್ಲ... ಕಾಲಲ್ಲದೇ ಕೈಯಲ್ಲಿದ್ದರೆ ಒಳ್ಳೆಯದಿತ್ತು ಅಲ್ಲವಾ ", 
ಕಯ್ಯಲ್ಲಿ ಬ್ರೇಕ್ ಇರೋ, ನಾಲ್ಕು ಚಕ್ರದ ಗಾಡಿ ಮಾರ್ಕೇಟಿಗೇ ಬಂದಿಲ್ಲ ಇಲ್ಲಿಯವರೆಗೂ ಅಂದಿದ್ದನವ.
ಸರಿ ಹೊರಟಿತು ಗಾಡಿ, ಅವಳಿಗೆ ಸರಿಯಾಗಿರಲಿ ಅಂತ ಬೆಳಿಗ್ಗೆ ಬೇಗ ಕಲಿಸಲು ಬಂದಿದ್ದನಾತ. ಹಾಗಲ್ಲಾ ಅಂತ ತರಬೇತುದಾರ ಹೇಳುವುದರೊಳಗೆ ಅ ಸುದರ್ಶನ ಚಕ್ರ ಒಮ್ಮೆಲೇ ಸುಯ್ಯೀ ಅಂತ ತಿರುಗಿಸಿ ಪಕ್ಕದ ನಾಲ್ಕು ನಾಯಿಗಳೂ ಎರಡು ಕರುಗಳೂ, ದಿಗಿಲು ಬಡಿದು ಓಡಿ ಇವಳಿಗೆ ಹಿಡಿಶಾಪದ ಹಾಕಿ ಬೊಗಳಿದರೆ, ಬೆಳಿಗ್ಗೆ ಬೆಳಿಗ್ಗೆ ಗಾಳಿ ಸೇವನೆಗೆ ಮುದುಕರೂ, ಮಕ್ಕಳೂ, ಬಂದಿದ್ದವರೂ, ಜನ್ಮದಲ್ಲೇ ಓಡದಿದ್ದವರೂ ಸಹಾ ಓಡಲು ಕಲಿತರು ಇವಳಿಂದ,
ಅಗಲೇ ಅವನಿಗೆ ಗೊತ್ತಾದದ್ದು ಇವಳು ಬಿಟ್ಟಿದ್ದು ಅಂತ ಮೊದಲು ಹೇಳಿದ್ದು ಸೀನನ ಗದ್ದೆ ಊಳುವ ಟ್ರಾಕ್ಟರ್ ಅಂತ ಇನ್ನು ನನ್ನ ಜನ್ಮದಲ್ಲೆ ಯಾರಿಗೂ ಕಲಿಸಲ್ಲ, ನನ್ನನ್ನು ಮಾತ್ರ ಬಿಡಿ ಅಂತ ಅಲವತ್ತು ಕೊಂಡು ಊರ್ರ್ ಬಿಟ್ಟು ಹೋದವನನ್ನು ಇನ್ನೂ ಹುಡುಕುತ್ತಿದ್ದಾರೆ ಆ ಶಾಲೆಯವರು. 

ನಂತರದವ..
ಮಲ್ಲೇಶ್ವರಮ್ ೧೩ ನೇ ಅಡ್ದರಸ್ತೆಯಲ್ಲಿ ಕಾರು ಕಲಿಯುತ್ತಿದ್ದಳಾಕೆ, ತಿರುಪತಿ ಮಂದಿರ ದಾಟಿ ನಂತರದ ಉಬ್ಬಿನಲ್ಲಿ ಒಂದು ಸಂಪಿಗೆ ಮರವಿತ್ತು. ಅದರಲ್ಲಿ ಎರಡು ಸಂಪಿಗೆ ಹೂವುಗಳು ಅರಳಿ ನಗುತ್ತಿದ್ದವು. ತ್ಯಾಂಪಿ ಕಾರು ನಡೆಸುತ್ತಿದ್ದಂತೆಯೇ ಕಿಟಿಕಿಯ ಪಕ್ಕ ಕೈಹಾಕಿ ಹೂ ಕೊಯ್ಯಲು ನೋಡಿದ್ದಳು. ಈ ತಾಕಲಾಟದಲ್ಲಿ ಕಾರು ಎಡಗಡೆ ಮಗುಚಿಕೊಂಡಿತ್ತು. ಕಷ್ಟದಲ್ಲಿ, ತುಂಬಾನೇ ಅಧ್ವಾನವಾಗಿ ಹೋಯ್ತು ಅಲ್ಲಿಂದ ಹೊರ ಬರಲು, ಪಾಪ ತರಬೇತುದಾರನಿಗೆ. ಕಷ್ಟ ಪಟ್ಟು ಹೊರ ಬಂದ ಮೇಲೆ "ಯಾಕ್ರೀ ಕೈ ಹೊರಗೆ ಹಾಕಿದ್ದು" ಗದ್ದರಿಸಿ ಕೇಳಿದ್ದ.
"ನನ್ನ ಡ್ರೆಸ್ ಗೆ ಮ್ಯಾಚಿಂಗ್ ಆದ ಹೂ ಕಂಡಿತ್ತು ಅದಕ್ಕೇ ಕೊಯ್ಯಲ್ಲು ನೋಡಿದ್ದೆ, ಬೆಳಿಗ್ಗೆ ಬೇಗ ಬರುವಾಗ ಹೂ ಮುಡಿದಿರಲಿಲ್ಲವಲ್ಲಾ" ಅಂದಿದ್ದಳುತ್ಯಾಂಪಿ, 
ಆದರೆ ಬಿದ್ದ ಕಾರು ಹೊರತೆಗೆಯಲು ಕ್ರೇನೇ ತರಬೇಕಾಯ್ತು. ನಂತರ ಅದು ಹೋದದ್ದು ಗುಜರಿ ಅಂಗಡಿಗೇ. 
ನಂತರ ಆ ಶಾಲೆಯವರು ಹಾಜರಿ ಪುಸ್ತಕದಿಂದ ಅವಳ ಹೆಸರನ್ನು ಶಾಶ್ವತವಾಗಿ ತೆಗೆದು ಹಾಕಿದ್ದರು. ಪುನಃ ಇವಳಿಗೆ ಕಲಿಸಲು ಯಾರೂ ಬಾರದ ಹಾಗೆ. 

ಮೂರನೆಯವ
ಸಿಗ್ನಲ್ ನಲ್ಲಿ ನಿಂತ ಕಾರನ್ನು ಗೇರ್ ಹಾಕಲು ಹೋಗಿ ಹಿಂದೆ ನಿಂತಿದ್ದ ಕಾರಿಗೆ ತ್ಯಾಂಪಿಯ ಕಾರು ಮುತ್ತಿಕ್ಕಿತ್ತು.ಪರಿಣಾಮ ಇವಳ ಕಾರಿನ ಡಿಕ್ಕಿ ಹಿಂದಿನ ಕಾರಿನ ಬಾನೆಟ್ ಎರಡೂ ಕಾದಲು ನಿಂತ ಟಗರುಗಳಂತೆ ಒಮ್ಮೆಲೇ ಹಣೆಯೆತ್ತಿ ನಿಂತವು, ಕನ್ನಡಿಯಲ್ಲಿ ಈ ವಿಪ್ಲವ ನೋಡಿದ ತ್ಯಾಂಪಿಗೆ ನಗು ತಡೆಯಲಾಗಲಿಲ್ಲ.ಮಾಸ್ಟ್ರು ಹಿಂದಿನಿಂದ ಬರುತ್ತಿರುವ ಕಾರಿನ ಚಾಲಕನನ್ನು ಸಮಾಧಾನಿಸಲೇ ಅಥವಾ ಇವಳನ್ನು ಗದರಿಸಲೆ ಎಂಬ ಸಂಧಿಗ್ದತೆಯಲ್ಲಿದ್ದ........ 
ಅವನು ಕಾರು ವಾಪಾಸ್ಸು ಕೊಂಡೊಯ್ಯುವಾಗ ಕಾರಿನ ಪರಿಸ್ಥಿತಿ ನೋಡಿದ ಮಾಲೀಕರು ಅವನನ್ನೇ ಕೆಲಸದಿಂದ ತೆಗೆದರೆಂತ ಸುದ್ದಿ ಪಾಪ.

ಮೇಖ್ರೀ ಸರ್ಕಲ್
ಇದ್ದುದರಲ್ಲಿಯೇ ಅತ್ಯಂತ ವಾಹನನಿಬಿಡ ವೃತ್ತವಾಗಿತ್ತದು, ಅವರು ಕಾರಿನಲ್ಲಿ ಹೋಗುತ್ತಿದ್ದ ಸಮಯದಲ್ಲಿ.
ವೇಗವಾಗಿ ತಮ್ಮ ತಮ್ಮ ಅಧಿಕಾರಯುತ ವೇಗದಲ್ಲಿ ಚಲಿಸುವ ವಾಹನಗಳು, ಒಬ್ಬರಿಗೊಬ್ಬರು ಸಂಬಂಧವೇ ಇಲ್ಲದ, ಇಲ್ಲದಂತೆ ಚಲಿಸುತ್ತಿರುವ ತರಹೇವಾರಿ ವಾಹನಗಳು. 
ಪ್ರತಿಯೊಂದೂ ಬೇರೆ ಬೇರೆ ಗಾತ್ರ ಬಣ್ಣದವುಗಳು.
ಮುಂದೆ ಸ್ವಲ್ಪ ಇಳಿಜಾರು, ಮಹಾಲಕ್ಷ್ಮೀ ಸರ್ಕಲ್ ವರೆಗೆ ಸಾಮಾನ್ಯವಾಗಿ ಎರಡು ಸಾಲಿನಲ್ಲಿ ಪಕ್ಕ ಪಕ್ಕ ಚಲಿಸುವ ಗಾಡಿಗಳಲ್ಲಿ ಒಂದು ಸ್ವಲ್ಪ ನಿಧಾನವಾದಂತೆ ಅನ್ನಿಸಿತು, 
ಆಗಲೇ ಪಕ್ಕನೆ ಒಬ್ಬ ಮುದುಕ ಬಂದಿದ್ದ...ಅಡ್ದಲಾಗಿ 
. ಸಾಮಾನ್ಯವಾಗಿ ಇಂತಹ ಸಮಯದಲ್ಲಿ .... ಗಾಡಿಯ ವೇಗ ಇನ್ನೂ ಕಡಿಮೆಯಾಗಬೇಕು, 
ಇಲ್ಲ ಬದಲು ಇನ್ನೂ ಜಾಸ್ತಿಯಾಯ್ತು. ಆಶ್ಚರ್ಯವಾಯ್ತು ಮಾಸ್ತರರಿಗೆ, 
ಒಂದೇ ಒಂದು ಕ್ಷಣ ಮುದುಕ ಇನ್ನೂ ಹತ್ತಿರಾದ,
"ಬ್ರೇಕ್... ಬ್ರೇಕ್ ಹಾಕಿ..." ಅರಚಿದ ಮಾಸ್ತರು...
ಇನ್ನೇನು ಆ ಮುದುಕನ ಮೇಲೆಯೇ ಹೋಗ ಬೇಕು... ಅರೇರೇ 
ಇಂತಹಾ ಸಮಯದಲ್ಲಿಯೂ ಇಲ್ಲ... ಸವಾರ ವಾಹನದ ಬ್ರೇಕ್ ಹಾಕಿದ ಹಾಗೆ ಕಾಣಲಿಲ್ಲ...
ವಾಹನ ಸವಾರ ಒಂದು ಹೆಂಗಸು..
ಬ್ರೇಕ್ ಹಾಕೀ ಬ್ರೇಕ್... ಇನ್ನೊಮ್ಮೆ ಕಿರುಚಿದ ಗಟ್ಟಿಯಾಗೇ...ಮಾಸ್ತರ್
ಈಗ ಚಲಿಸಿದಳವಳು... 
"ಬ್ರೇಕ್.. ಎಲ್ಲಿದೆ..?? ಎಲ್ಲಿದೆ ಬ್ರೇಕ್..??"
ಕಲಿಸುವ ಮಾಸ್ತ್ರ ಜಂಗಾಬಲವೇ ಉಡುಗಿತು.
ಕೊನೆಯ ಕ್ಷಣ.... ಬ್ರೇಕ್ ಹಾಕಬೇಕಾದ ಸಮಯದಲ್ಲಿ ಅದನ್ನೇ..... ಅಂದರೆ ಆ ಬ್ರೇಕೇ....ಎಲ್ಲಿದೆ ಅಂತ ಕೇಳ್ತಾ ಇದ್ದಾಳೆ ಈ ಹೊಸ ಕಾರು ಸವಾರಿಣಿ....
ಇದೇನು ಮೊದಲ ದಿನವಾ...???
ಅಲ್ಲ ಎಂಟನೇ ದಿನ ಇವತ್ತಿಗೆ ಇವಳು ಕಲಿಯಲು ಆರಂಭ ಮಾಡಿ....
ಇನ್ನೇನು... ನೂರರಲ್ಲೊಂದು ಕ್ಷಣ,...ದಲ್ಲೇ...
ಎಲ್ಲಾ ಮುಗಿಯುತ್ತೇ.....
........
ಇದೆಲ್ಲಾ ಕ್ಷಣದಲ್ಲಿ ನಡೆದದ್ದು
ಈಗ ತಾನೇ ಮುಂದುವರಿದ ಆ ಮಾಸ್ಟರ್....
ಇಂತಹ ಸಮಯದಲ್ಲಿಯೇ ಗೊತ್ತಾಗುವದು ನುರಿತ ಮಾಸ್ತ್ರರಿಗೂ ಹೊಸದಾಗಿ ಕಲಿಯುವವರಿಗೂ ಇರುವ ವ್ಯತ್ಯಾಸ.
ಕಣ್ಣು ರೆಪ್ಪೆ ಮುಚ್ಚುವ ಸಮಯದಲ್ಲೇ....ಆ ಕಾರಿನ ಸುದರ್ಶನ ಚಕ್ರ ( ತ್ಯಾಂಪಿಯೇ ಇಟ್ಟ ಹೆಸರದು- ಸ್ಟಿಯರಿಂಗ್ ವೀಲ್ ಗೆ) ಒಂದು ಕೈಯ್ಯಲ್ಲೇ ಹಿಡಿದು ಬಲಗಡೆ ತಿರುಗಿಸಿದ.
ಕಾರು ರಿವ್ವನೆ ತಿರುಗಿತು ಬಲಕ್ಕೆ....
ಹಿಂದಿನಿಂದ ಅನೂಚಾನವಾಗಿ ಬರುತ್ತಿರುವ ವಾಹನಗಳೂ ಕಷ್ಟ ಪಟ್ಟು ಅಂತಹಾ ನಿಭಿಡತೆಯಲ್ಲೇ ಸಿಕ್ಕ ಸಿಕ್ಕ ಕಡೆ ತಿರುಗಿಸಿದ 
ಪರಿಣಾಮ
ರಸ್ತೆ....ಜಾಮ್ 
.....
ಬೀಸೋ ದೊಣ್ಣೆ ತಪ್ಪಿಸಿಕೊಂಡಂತಾಯ್ತಲ್ಲಾ....
ಆಗಲೇ ಅಪ್ರಯತ್ನವಾಗಿ ಮಾಸ್ತರರ ಕಣ್ಣು ಆ ಸವಾರಿಣಿಯ ಕಾಲಿನತ್ತ ಹರಿಯಿತು.... .
ಹೇಗೆ ಬ್ರೇಕ್ ಸಿಗಲು ಸಾಧ್ಯ.....
ಅವಳ ಬಲಗಾಲು ಕ್ಲ್ಛ್ ಚ್ ಮೇಲಿದ್ದರೆ ಎಡಗಾಲು ಎಕ್ಸಿಲೇಟರ್ ಮೇಲೆ..
ಇದೇನ್ರಿ... ಹೇಳಿಕೊಟ್ಟದ್ದಲ್ವಾ...ಬಲಗಾಲು ಎಕ್ಸಿಲೇಟರ್ ಮತ್ತು ಎಡಗಾಲು ಕ್ಲಚ್ ಮೇಲೆ ಅಂತ...?
ಜೋರಾದ...ಇನ್ನೂ ಹಿಂದಿನ ಅಪಘಾತದ ಅನಿವಾರ್ಯತೆಯ ಟೆನ್ಷನ್ ನಿಂದ ಹೊರ ಬಂದಿರಲಿಲ್ಲ ಆತ...ಪಾಪ
"ನನ್ನ ಚಪ್ಪಲ್ ಆ ಕಡೆ ಹೋಗಿತ್ತು, ಹುಡುಕುತ್ತಿದ್ದೆ...."
ತನ್ನ ಕೈಯ್ಯ ಉಗುರ ಬಣ್ಣವನ್ನು ಇನ್ನೊಮ್ಮೆ ನೋಡಿಕೊಂಡು ಹೇಳಿದಳು ತ್ಯಾಂಪಿ
ಹೊಸ ನಮೂನೆಯದ್ದದ್ದು, ನಿನ್ನೆ ತಾನೇ ತಂದದ್ದು ಮಂತ್ರಿ ಮಾಲ್ ನಿಂದ.
ಏನಾಯ್ತೀಗ? ಅಂತಹಾ ದೊಡ್ಡ ತಪ್ಪು, ನಿಮ್ ಹತ್ರಾನೂ ಇದೆಯಲ್ಲಾ ಬ್ರೇಕ್..??
ಅಲ್ಲಾರೀ ನನ್ನ ಹತ್ರ ಇದ್ದರೆ..? ನಿಮ್ ಕಾರು ಬಿಡೋವಾಗ ಅದರಲ್ಲಿ ಹಾಗೇ ಮಾಡ್ತೀರಾ..??
ಅದನ್ನ್ ಆಮೇಲ್ ನೋಡಿದ್ರಾಯ್ತು ಬಿಡಿ.
ತ್ಯಾಂಪಿಯೇ ಹೇಳೋವಂತೆ ಅವಳಿಗೆ ದೊಣ್ಣೇ ತಿರುಗಿಸಲು ಈ ಜನ್ಮದಲ್ಲಿ ಬರಲಿಕ್ಕಿಲ್ಲ ಬಿಡಿ ( ಕಾರಿನ ಗೇರಿಗೆ ತ್ಯಾಂಪಿಯೇ ಇಟ್ಟ ಹೆಸರದು).
ಅವಳ ಗಾಡಿ ನಿಂತ ರಭಸಕ್ಕೆ ಅವಳ ಹಿಂದಿನಿಂದ ಬರುತ್ತಿರುವ ಗಾಡಿಗಳೆಲ್ಲವು ಒಂದರ ಹಿಂದೆ ಮೂತಿ ಚಚ್ಚಿಸಿಕೊಂಡೇ ನಿಂತವು. ಇದು ಮೊದಲ ಸಾರಿಯಲ್ಲ ಬಿಡಿ
ಅವಳಿಗೆ ಮಲ್ಲೇಶ್ವರಮ್ ಸುತ್ತಲಿನ ಯಾವ ವಾಹನ ತರಬೇತು ಶಾಲೆಯೂ ಕಾರು ಕಲಿಸಲು ಮುಂದೆ ಬರುತ್ತಿಲ್ಲ. ಪಾಪ ಇವತ್ತಿನ ಮಾಸ್ತ್ರು ಸಂಜಯನಗರದವ, ಅವನಿಗೆ ಇವಳ ಹಿಂದಿನ ಕರಾಮಾತ್ ಗೊತ್ತಿರದೆ ಬಂದಿದ್ದ, 
ಇವತ್ತು ಗೊತ್ತಾಯ್ತಲ್ಲಾ, 
ಹೊರಡುವ ಮೊದಲು "ಅಮ್ಮಾ ಮಹಾ ತಾಯೀ, ನಿಮಗೆ ಈ ಜನ್ಮದಲ್ಲಿ ಯಾರೂ ಕಾರು ಕಲಿಸಲು ಸಾಧ್ಯವೇ ಇಲ್ಲ, ಅದೂ ಅಲ್ಲದೆ ಇನ್ನೂ ನಿಮಗೆ ಕಲಿಯಲೇಬೇಕು ಅಂತ ಅನ್ನಿಸಿದರೆ ,ನಿಮ್ಮದೇ ಕಾರು ತರಿಸಿ ನನ್ನನ್ನು ಕರೆಸಿಕೊಳ್ಳಿ" ಅಂತ ಸಲಹೆಯನ್ನೂ ಕೊಟ್ಟು ಹೊರಟೇ ಹೋದ.
ಇನ್ನು ಬರಲಿಕ್ಕಿಲ್ಲ ಬಿಡಿ.
ಅದನ್ನೆ ತ್ಯಾಂಪನಿಗೂ ಸೀನನಿಗು ಹೇಳಿದಾಗ
"ಅದಕ್ಕೆಲ್ಲಾ ಬೇಸರಿಸದಿರು, ಹಾಗೇ ಮಾಡೋಣ,( ಅವನೇನೂ ಖರ್ಚು ಮಾಡಬೇಕಾಗಿಲ್ಲವಲ್ಲ, ಅವಳ ಅಣ್ಣಂದಿರಿಲ್ಲವೇ), ಅದಕ್ಕೆ ನೀನು ವಾಹನ ಚಾಲಕನನ್ನೇ ಇಟ್ಟುಕೊಂಡರಾಯ್ತು" ಸಲಹೆಯನ್ನೂ ಕೊಟ್ಟು, ಎಲ್ಲಾ ವಾಹನ ತರಬೇತುದಾರರಿಗೆ ಉಪಕಾರ ಮಾಡಿದ.

ಆ ಮೂರು ಬೆರಳುಗಳು

ಆ ಮೂರು ಬೆರಳುಗಳು

ಮತ್ತೊಮ್ಮೆ ಕನ್ನಡಕವನ್ನು ಮೂಗಿನ ಮೇಲಿಂದ ಸರಿಪಡಿಸಿಕೊಂಡರು ಮೇಜರ್ .
"ನಿಜ!" ಮಿಲಿಂಡ್ ಹೇಳಿಕೆಯನ್ನು ಅನುಮೋದಿಸುತ್ತ " ಎಷ್ಟೇ ಸೂಕ್ಷ್ಮವಾಗಿ ಪರಿಶೀಲಿಸಿದರೂ ಎಲ್ಲಿಯೂ ತಪ್ಪು ಗೊತ್ತಾಗುತ್ತಿಲ್ಲ, ನನ್ನ ಇಷ್ಟು ವರ್ಷಗಳ ಸುಧೀರ್ಘ ಅನುಭವದಲ್ಲಿ ಈ ರೀತಿಯಲ್ಲಿ ತಯಾರಿಸಿರೋ ಪರ್ಫೆಕ್ಟ್ ಟೆಂಡರ್ ನೋಡಿರಲಿಲ್ಲ." ಎಂದರು ಮೇಜರ್ ವಿಶ್ವನಾಥ್,  
"ನಿಮಗೆ ಸಂಶಯ ಯಾಕೆ ಬಂತು ಹೇಳುತ್ತೀರಾ ?"   ಮಿಲಿಂಡ್.
"ಮೊದಲನೆಯ ಹಂತದಿಂದ ನಾಲ್ಕನೆಯ ಹಂತದವರೆಗಿನ ನಮ್ಮ ಪರಿಶೀಲಿಸುವಿಕೆಯಲ್ಲಿ ಪ್ರತಿಯೊಂದೂ ಟೆಂಡರನ್ನು ನಾವು ಕೂಲಂಕುಶವಾಗಿ ಪರಿಶೀಲಿಸಿದ್ದೆವು. ಇದಕ್ಕೇ ನಮ್ಮದೇ ಆದ ವಿಶಿಷ್ಟವಾದ  ಸಿಸ್ಟಮ್ ಒಂದನ್ನು ಅನುಸರಿಸಿಕೊಂಡು ಬರುತ್ತಿದ್ದೇವೆ. ನಾಲ್ಕನೆಯ ಹಂತಕ್ಕೆ ಬಂದ ನಾಲ್ಕು ಟೆಂಡರುಗಳೂ ಒಳ್ಳೆಯ ಪ್ರತಿಷ್ಟಿತ ಸಂಸ್ಥೆಗಳಿಂದಲೇ ಬಂದಿವೆ. ಯಾರನ್ನೂ ಸಂಶಯಿಸುವ ಹಾಗೆ ಇಲ್ಲ. ಅಂತಹ ರೆಕಾರ್ಡ್ ಅವರದ್ದೆಲ್ಲಾ. ಆದರೆ ಐದನೆಯ ಸಂಸ್ಥೆಯದ್ದೇ ನನಗೆ ಸಂಶಯ. ಅಷ್ಟೇನೂ ಪ್ರತಿಷ್ಟಿತವಾಗಿಲ್ಲದ ಸಂಸ್ಥೆಯೊಂದು ಹೀಗೆ ಇಲ್ಲಿಯವರೆಗೆ ಬಂತು ಎಂದರೆ ಒಂದೋ ಅದು ನಿಜವಾಗಿಯೂ ಒಳ್ಳೆಯ ಸಂಸ್ಥೆ ಅಥವಾ ನಮ್ಮಲ್ಲಿನ ಯಾರೋ ಅದಕ್ಕೆ ಸಹಾಯ ಮಾಡುತ್ತಿದ್ದಾರೆ. ಅದು ಒಳ್ಳೆಯದೇ ಆಗಿದ್ದರೆ ಸರಿ, ಆದರೆ ಹಾಗಿಲ್ಲದ ಪಕ್ಷದಲ್ಲಿ ನಮ್ಮ ಸಂಸ್ಥೆಗೆ ಕೆಟ್ಟ ಹೆಸರು ಬರುವ ಸಾಧ್ಯತೆಯಿದ್ದುದಲ್ಲದೇ ಈ ಪದ್ದತಿ ಮುಂದುವರಿಯುವುದು ಎಲ್ಲಾ ರೀತಿಯಿಂದಲೂ ಕೆಟ್ಟದ್ದು." ಮೇಜರ್.

"ನಿಮಗೆ ಯಾರ ಮೇಲಾದರೂ ಸಂಶಯ..??" ಮಿಲಿಂಡ್.
" ನಿಜ ಹೇಳಬೇಕೆಂದರೆ, ಇಲ್ಲ.  ನಮ್ಮ ಗುಮಾಸ್ತ ಸುಮಾರು ಹದಿನೈದು ವರ್ಷಗಳಿಂದ ನಮ್ಮಲಿಯೇ ಇದ್ದಾನೆ, ತುಂಬಾ ನೇರಸ್ಥ. ಅವನನ್ನು ಸಂಶಯಿಸಲಾಗದು. ಅಲ್ಲದೇ ನಮ್ಮಲ್ಲಿ ಎಲ್ಲಾ ಕಡೆ ಸಿಸಿ ಕೆಮರಾಗಳಿವೆ. ಯಾವುದೇ ವಿಷಯವೂ ಆಫೀಸಿನಿಂದ ಹೊರ ಹೋಗುವುದು ಸಾಧ್ಯವೇ ಇಲ್ಲ. ಅಷ್ಟೂ ಭದ್ರತೆಯಿದೆ. ಇಲ್ಲಿಯವರೆಗೆ ಬಂದ ಟೆಂಡರುದಾರರ ರೇಟು ಪರಿಶೀಲಿಸಿದಾಗ ಯಾವುದೇ ವಿಷಯ ಪರಸ್ಪರ ವಿನಿಮಯದ ಮಾಹಿತಿಯಿಲ್ಲ.... ಆದರೂ.....!!!"

ಇನ್ನೆಷ್ಟು ಜನರಿದ್ದೀರಿ.. ಈ ಟೆಂಡರು ಪ್ರಕ್ರಿಯೆಯಲ್ಲಿ ? ಕೇಳಿದ ಮಿಲಿಂಡ್ ಸುಮ್ಮನೇ.

"ನಾನು, ಈ ಕನ್ಯಾಲ್, ಈ ಆಫೀಸಿನ ಮುಖ್ಯಸ್ತ ಕಲ್ಲೂರಾಮ್, ಕೆಲಸಗಾರ ಮಂಜೂ ಮತ್ತು  ಇಬ್ಬರು ಭಾಗೀದಾರರು, ಒಟ್ಟು ಏಳು ಜನ ಮಾತ್ರ.
"ಏಳನೆಯವ ಯಾರು..??" ಮಿಲಿಂಡ್
 "ರುದ್ರ,  ಒಬ್ಬ ಸಲಹಾದಾರ.  ಈ ಪ್ರಾಜೆಕ್ಟ್ ಹೇಗೆ ನಡೆಯ ಬೇಕು, ಯಾವ ಯಾವ ಕಾಮಗಾರಿ ಯಾವ್ಯಾವಾಗ ಅನುಕ್ರಮವಾಗಿ ಹೇಗೆ ನಡೆಯಬೇಕು, ಎಂಬುದನ್ನು ನೋಡಿಕೊಳ್ತಾನೆ. ಈ ಪ್ರಾಜೆಕ್ಟನ ಮೇಲುಸ್ತುವಾರಿ ಆತನದ್ದೇ. ಕಳೆದ ನಾಲ್ಕು ಪ್ರಾಜೆಕ್ಟ್ ಅವನ ಮೇಲುಸ್ತುವಾರಿಯಲ್ಲೇ ನಡೆದದ್ದು. ಒಳ್ಳೆಯ ಲಾಭ ಸಹಾ ತರಿಸಿದ್ದ." ಮಧ್ಯೆ ಬಾಯಿ ಹಾಕಿದ್ದ ಮಿಲಿಂಡ್ 
"ಅಲ್ಲಾ ಮೇಜರ್ ನಿಮಗೆ ಸಂಶಯ ಯಾಕೆ ಬಂತು ಎನ್ನುವುದನ್ನು ಹೇಳಲಿಲ್ಲವಲ್ಲ ನೀವು."
"ನನ್ನ ಆರನೆಯ ಇಂದ್ರಿಯ" ವಿಶ್ವನಾಥ್ ನುಡಿದರು.  ಆ ದಿನದ ಘಟನೆಯನ್ನು ಮೆಲುಕು ಹಾಕುತ್ತ ....

"ಹೇಳಿ, ನಿಮ್ಮ ಟೆಂಡರಿನಲ್ಲಿ ನೀವು ಬೇರೆಯವರಿಗಿಂತ ಎಷ್ಟು ಕಡಿಮೆಯಲ್ಲಿ ಈ ಪ್ರಾಜೆಕ್ಟ್ ಮುಗಿಸಿಕೊಡಬಲ್ಲಿರಿ..? ನಾನೆಂದೆ.
"ಯಾಕೆಂದರೆ ಈ ಕೆಲಸಕ್ಕೆ ಬಂದಿರುವ ಟೆಂಡರಿನಲ್ಲಿ ನೀವೇ ಕೊನೆಯವರು, ಬಾಕಿ ಉಳಿದವರ ಕೊಟೇಷನ್ ನಮಗೆ ಸಿಕ್ಕಿ ಆಗಿದೆ. ನಿಮ್ಮ ಉತ್ತರದ ಮೇಲೆ ಅದು ಅವಲಂಬಿಸಿದೆ. ನಿಮ್ಮೊಬ್ಬರನ್ನು ಬಿಟ್ಟು ಉಳಿದೆಲ್ಲರ ಕೋಟ್ ನಮಗೆ ಬಂದಾಗಿದೆ."

"ಸರಿ ಸರ್ ನಾನು ಈಗಲೇ ನನ್ನ ಕೊನೆಯ ಕೋಟ್ ನಿಮಗೆ ಕೊಡುತ್ತಿದ್ದೇನೆ, ಇದು ಉಳಿದವರಿಗಿಂತ ಕಡಿಮೆ ಅಂತ ನನಗೆ ಖಂಡಿತಾ ನಂಬಿಕೆಯಿದೆ," ಆತನೆಂದ.
ಆತನ ಮಾತಿನಲ್ಲಿನ ವಿಶ್ವಾಸ ನನ್ನನ್ನು ಕೆಲ ಕಾಲ ಸ್ಥಬ್ದವಾಗಿಸಿತ್ತು.
ತನ್ನ ಕಿಸೆಯಿಂದ ಪೆನ್ ತೆಗೆದು  ಕ್ಷಣ ಮಾತ್ರ ಯೋಚಿಸಿದ ಆತ ತನ್ನ ಕಂಪೆನಿಯ ತಲೆ ಬರಹದ ಪತ್ರದಲ್ಲಿ ಸರಸರನೆ ಬರೆದು ಕೈಗಿತ್ತ. ನಿಜ, ಇಲ್ಲಿಯವರೆಗೆ ಎಲ್ಲಕ್ಕಿಂತ ಕಡಿಮೆ ಬಂದ ಟೆಂಡರಿಗಿಂತಲೂ ಮೂರು ಪ್ರತಿಶತ ಅತ ತನ್ನ ಟೆಂಡರಿನ ಹಣದಲ್ಲಿ ಕಡಿತ ಮಾಡಿದ್ದ. ನಿಜವಾಗಿಯೂ ಉಳಿದೆಲ್ಲರಿಗಿಂತ ಇದು ಕಡಿಮೆಯೇ.
ನಿಜವಾಗಿ ಇವನಿಗೇ ಟೆಂಡರ್ ಕೊಡಬೇಕು, ಆದರೆ ನನಗೆ ಬಂದ ಸಂಶಯ ಈ ಕಂಪೆನಿಗೆ ಕೆಲಸ ಕೊಡಲು ಅನುಮಾನಿಸಿತ್ತು.
ಇವತ್ತೇ ಕೊನೇ ದಿನ, ನಾಳೆ ಕೆಲಸದ ಪರವಾನಿಗೆ ನೀಡಲೇ ಬೇಕು. ಅದಕ್ಕೇ ನಿನಗೆ ಕರೆ ಮಾಡಿದ್ದು.ಏನಾದರೂ ಮಾಡಿ ನೀನು ಈ ಒಗಟನ್ನು ಬಿಡಿಸುವಿ ಎಂತ ನಂಬಿದ್ದೇನೆ.
"ಅಲ್ಲ, ಎಲ್ಲಾ ಕಡೆ ಸಿಸಿ ಕೆಮರಾಗಳಿವೆ ಎಂದಿರಲ್ಲ..??"
"ಹೌದು ನಿಜ, ಅದೆಲ್ಲಾ ನಾನು ನೋಡಿಯಾಗಿದೆ ಮಿಲಿಂಡ್, ಅದೂ ನಮ್ಮೆಲ್ಲರ ಇದಿರಿಗೇ ಮುಖತ: ನಡೆಯುವ ಘಟನೆ, ಇದರಲ್ಲಿ ಹೇಗೆ ಮತ್ತು ಯಾಕೆ ಯಾರಾದರೂ ತನ್ನ ಕತ್ತು ಕೊಯ್ದು ಕೊಳ್ಳುವರು..??"
"ಆದರೂ ಒಂದು ಕೊನೆಯ ಚಾನ್ಸ್ ನೋಡೆ ಬಿಡೋಣ..ಸರ್" ಮಿಲಿಂಡ್
"ಓ ಕೆ ಮೈ ಬಾಯ್!!" ಆತನ ಬೆನ್ನು ತಟ್ಟುತ್ತಾ ಮೇಜರ್  ಕಾನ್ಫರೆನ್ಸ್ ಹಾಲ್ ಪ್ರವೇಶಿಸಿದರು ಮಿಲಿಂಡ್ ಜತೆ.
ವಾರಕ್ಕೆ ಹತ್ತು ಹನ್ನೆರಡು ಬಾರಿಯಾದರೂ ಮೀಟಿಂಗ್ ನಡೆದೇ ನಡೆಯುತ್ತೆ ಇಲ್ಲಿ.
ಕನ್ಯಾಲ್ ಹಾಲ್ನ ಪ್ರೊಜೆಕ್ಟರ್ ಶುರು ಮಾಡಿದ. ಇದಿರಿನ ದೊಡ್ಡ ಪರದೆಯಲ್ಲಿ ಟೆಂಡರು ಪ್ರಕ್ರಿಯೆ ಆರಂಭವಾಯ್ತು.
ಟೆಂಡರುಗಳನ್ನು ಪರಿಶೀಲಿಸುವಾಗ ಗೋಚರವಾದದ್ದೆಂದರೆ ಕ್ಯಾಮರಾದ ಕೋನ ಬರೇ ವೆಂಡರ್ಸ್ ಅಥವಾ ಇದಿರಿನ ವ್ಯಕ್ತಿಗಳ ಮೇಲೆಯೇ ಕೇಂದ್ರೀಕ್ರತವಾಗಿದ್ದುದು, ಮಿಲಿಂಡ್ ಅದನ್ನೇ ವ್ಯಕ್ತ ಪಡಿಸಿದಾಗ...
"ಅದರಲ್ಲೇನು ಈಕಡೆ  ನಮ್ಮ ಕಂಪೆನಿಯವರಲ್ಲವೇ ಇದ್ದುದ್ದು.." ಮೇಜರ್ ಉತ್ತರಿಸಿದ್ದರು, 
ಬೇರೆ ಕೋನದಿಂದ ತೆಗೆದ ವಿಡಿಯೋ ಇದೆಯಾ..? " ಮಿಲಿಂಡ್ ಪ್ರಶ್ನೆ.
ಇದೆ ಸಾರ್... ಆದರೆ...? ಕನ್ಯಾಲ್ ಹೇಳಲು ಅನುಮಾನಿಸಿದ್ದ. 
ಏನು.... ಆದರೆ..??
"ಆದರೆ ಅದು ಸಾರ್ ( ಮೇಜರ್ ತೋರಿಸಿ) ರೂಮಿನಲ್ಲಿದೆ ಸರ್".
"ಓಕೆ ಅಲ್ಲಿಗೇ ಹೋಗಿ ನೋಡೋಣ" ಇಬ್ಬರನ್ನೂ ಅಲ್ಲಿಂದ ಎಬ್ಬಿಸಿದ ಮಿಲಿಂಡ್
++++++++++
ಮಿ. ರುದ್ರ...  ನಾನು ಮಿಲಿಂಡ್.ಸೊಲ್ಯುಶನ್ ಕಂಪೆನಿಯ ಆಂತರಿಕ ಸಲಹಾದಾರ.
ನಿಮ್ಮಲ್ಲಿ ಕೆಲವು ಪ್ರಶ್ನೆ ಕೇಳಬೇಕು"
ಕೇಳಿ, ಅದಕ್ಕೇನು..??
ನಿನಗೆ ತಾನೇ ಎಲ್ಲಾ ಕೊಟೇಷನ್ನುಗಳ ವಿವರ ತಿಳಿದಿದ್ದುದು. 
ಹೌದು, ನಾನು ಈ ಕಂಪೆನಿಯ ಪ್ರೊಜೆಕ್ಟ್ ಗಳ ಸಲಹಾದಾರ.. !!"
ಸಾಧಾರಣ ವಿಷಯವೆಂಬಂತೆ ಮಿಲಿಂಡ್ ಮಾತನ್ನು ತಳ್ಳಿ ಹಾಕಿದ್ದ ರುದ್ರ.
ಮೇಜರ್ ಮುಖದಲ್ಲಿ ಇನ್ನೂ ಕಿರಿ ಕಿರಿ ಕಾಣಿಸಿಕೊಂಡಿತು. ಮಿಲಿಂಡ್ ಮೇಜರ್ಗೆ ಕಂಡೂ ಕಾಣದ ಹಾಗೆ ಕಣ್ಣು ಹೊಡೆದ.
ನಿಜ.
ನಿನ್ನೆ ನೀವು ಕನ್ಯಾಲ್ ಗೆ ಐದನೆಯವರ ಹೆಸರಿಗೆ ಕೆಲಸ ಆರಂಭಿಸುವ ಪತ್ರ ತಯಾರಿಸಲು ಹೇಳಿದ್ದರಲ್ಲಾ??
ನಿಜ ಎಲ್ಲರಿಗಿಂತ ಕಡಿಮೇ ಅವರದ್ದೇ ಆಗಿತ್ತಲ್ಲ ಸರ್,  ಅದಕ್ಕೇ ಕಾಗದ ಸಿದ್ಧ ಮಾಡಿಡಲು ತಿಳಿಸಿದ್ದೆ, ಅದರಲ್ಲೇನು ತಪ್ಪು..??
ತಪ್ಪಿಲ್ಲ ನೀನು ಮಾಡಿದ್ದುದು ಸರಿ,
ಇನ್ನೊಂದು ವಿಷಯ ನಿಮ್ಮ ಕಾರು ತುಂಬಾ ಚೆನ್ನಾಗಿದೆ ಯಾವ ಮೊಡೆಲ್? 
ಈ ವರ್ಷದ್ದೇ ಸಾರ್, 
ಅಲ್ಲಯ್ಯಾ ಎರಡು ತಿಂಗಳು ಕಳೆದರೆ ಮುಂದಿನ ವರ್ಷದ್ದೇ ಸಿಗುತ್ತಿತ್ತಲ್ಲಾ..?
ಇಲ್ಲ ಸರ್ ಮನೆಯವರು ಒತ್ತಾಯ ಮಾಡಿದ್ದರು ಸಾರ್
ಅವರ ಆಯ್ಕೆಯಾ ನಿಮ್ಮದಾ..?
ನನ್ನದೇ ಸರ್..?
ಮತ್ತೆ ನಿಮ್ಮ ಮನೆ ಸಾಲದ ಕೊನೆಯ ಕಂತೂ ತೀರಿಸಿ ಬಿಟ್ಟಿರಿ
ಹೌದು ಸರ್
ಅದೂ ಐದು ವರ್ಶದ್ದು ಒಮ್ಮೆಲೇ ಕಟ್ಟಿದ್ದಿರಾ..?ಈಗ ಆಶ್ಚರ್ಯವಾಗುವ ಸರದಿ ರುದ್ರನದ್ದು.
ಹೌದು ಸರ್,
ಅದೇ ಇದಕ್ಕೆಲ್ಲಾ ಹಣ ಎಲ್ಲಿಂದ ಬಂತು..??
ನನ್ನಣ್ಣ ಕೊಟ್ಟರು ಸಾರ್...??
ಯಾವ ಅಣ್ಣ..?
ಯಾಕೆ ಸರ್..??ನನ್ನ ಮೇಲೆ ಸಂಶಯವಾ..? ಕಳೆದ ನಾಲ್ಕು ವರ್ಷಗಳಿಂದ ಇಲ್ಲಿ ಕೆಲಸ ಮಾಡುತ್ತಿದ್ದೇನೆ, ಏನಾದರು  ತಪ್ಪು ಕಂಡಿದ್ದೀರಾ.."
ಆದರೆ ರುದ್ರ ಈ ಪ್ರಶ್ನೆ ಕೇಳಿದ್ದು ಮೇಜರಿಗೆ. ಅವರು  ಸುಮ್ಮನಿದ್ದರು.
ಮಿಲಿಂಡ್ ಮುಂದುವರಿಸಿದ್ದ.. ತನ್ನ ಪ್ರಶ್ನಾವಳಿ.
ಮಿ ರುದ್ರ... ನೀವು ನನ್ನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ಹೋಗಲಿ ಚೆಕ್ ಕೊಟ್ಟರಾ ಅಥವಾ ನಗದಾ..?
ನಗದೇ ಸರ್.
ಹತ್ತು ಲಕ್ಷ.... ನಿಮಗಾಗಿ  ನಿಮ್ಮಣ್ಣ ಎಲ್ಲಿಂದ ತಂದರು ಅಂತ ಕೇಳಿದಿರಾ..??
"ಇಲ್ಲ ಸರ್... ಅದು..."
"ಸರಿ ಅವರ ಹೆಸರೇನು ಅಂದಿರಿ..?"
"ಕೄಷ್ಣಕಾಂತ್ ಸರ್.."
"ಆದರೆ ನಿಮ್ಮ ಅಕ್ಕೌಂಟ್ ಗೆ ಹಣ ಕಟ್ಟಿದವರ ಹೆಸರು ಅದಲ್ಲ."
"ಅದೂ...... ನಾನು ಬೇರೆ ಯಾರನ್ನೋ ಕಳುಹಿಸಿದ್ದೆ "
ಯಾರನ್ನು ಕಳುಹಿಸಿದ್ದೀರಿ..?? " ಈ ಪ್ರಶ್ನೆಗೆ ಉತ್ತರವಿಲ್ಲ ರುದ್ರನ ಬಳಿ

.........

"ಹೇಳಿ ರುದ್ರ... ಯಾರನ್ನ ಕಳುಹಿಸಿದ್ದೀರಿ..?"
"ನಾನ್ಯಾಕೆ ಹೇಳಬೇಕು ಸರ್ ನಿಮಗೆ..?  ಅದು ನನ್ನ ಸ್ವಂತ ವಿಷಯ...." ರುದ್ರನ ಅಸಹನೆಯ ಕೊನೆಯ ಕ್ಷಣ ಅದು
"ನಿಜ ರುದ್ರ, ಈ ವಿಷಯ ನಿಮ್ಮ ವೈಯ್ಯಕ್ತಿಕ,  ಆದರೆ ಕಟ್ಟಿದ ಹಣ ಮಾತ್ರ ವೈಯ್ಯಕ್ತಿಕ ಅಲ್ಲ."
"ಅಂದರೆ ಏನು ನಿಮ್ಮ ಮಾತಿನ ಅರ್ಥ..??...."
"ನಿಮ್ಮ ಹಣ ಕಟ್ಟಿದವನು ಈ ಐದನೆಯ ಟೆಂಡರ್ ಕಂಪೆನಿಯ ಎರಡನೆಯ  ಪಾಲುದಾರ".
ನೀವು ಹೇಳುತ್ತಿರುವುದು ಶುದ್ಧ ಸುಳ್ಳು..... ಅವನ ಸ್ವರ ತಡವರಿಸುತ್ತಿತ್ತು.
ಮೇಜರ್ ಕೇಳಿದರು "ಇದೇನು ಮಿಲಿಂಡ್ ರುದ್ರ ನೀವು ಯಾವುದರ ಬಗ್ಗೆ ಮಾತನಾಡುತ್ತಿದ್ದೀರಿ..?"
"ಸರ್ ಎರಡು ದಿನದ ಹಿಂದೆ ರುದ್ರನ ಖಾತೆಗೆ ಸೇರಿದ್ದ ಹತ್ತು ಲಕ್ಷದ ಬಗ್ಗೆ, ಆ ಹಣ ರುದ್ರನ ಅಣ್ಣ ಕೊಟ್ಟಿದ್ದಲ್ಲ, ಅದನ್ನು ಕೊಟ್ಟವರು ಪೀತಾಂಬರ್ ನಿಮ್ಮ  ಐದನೆಯ ಟೆಂಡರು ಕಳುಹಿಸಿದ ಕಂಪೆನಿಯ ಎರಡನೆಯ ಪಾಲುದಾರ. ನಾನು ನಿಮ್ಮ ಆಫೀಸಿನ ಎಲ್ಲರ ಬಗ್ಗೆ ಮಾಹಿತಿ ಕಲೆ ಹಾಕಿದ್ದೆ. ಪ್ರತಿ ತಿಂಗಳೂ ಅಡ್ವಾನ್ಸಾಗಿಯೇ ಸಂಬಳ ತೆಗೆದು ಕೊಳ್ಳುವ ರುದ್ರ, ಸಂಬಳ ಎರಡು ದಿನ ತಡವಾದರೆ ಇಡೀ ಫೈನಾನ್ಸ್ ಸೆಕ್ಷನ್ ನ್ನೇ ಬುಡ ಮೇಲು ಮಾಡುವ ರುದ್ರ ಈ ತಿಂಗಳು  ಸುಮ್ಮನಿದ್ದರಂತೆ ನಾಲ್ಕು ದಿನ ತಡವಾದರೂ. 
         ನನಗೆ ಇನ್ನೂ ರುದ್ರನ ಮೇಲೆ ಸಂಶಯ ಹೆಚ್ಚಾದದ್ದು ಇನ್ನೊಂದು ವಿಷಯ ಮಂಜುವಿನಿಂದ ಕೇಳುವಾಗ, ತಿಂಗಳು ತಿಂಗಳು ರುದ್ರನ ಮನೆಯ ಸಾಲದ ಕಂತು ಬ್ಯಾಂಕ್ ಗೆ ಕಟ್ಟುವವ ಮಂಜು, ಈ ಸಾರಿ ತಡವಾದರೂ ರುದ್ರ ಚೆಕ್ ಕೊಡದಿದ್ದಾಗ ಕೇಳಿದರೆ ಬೇಡ ಬಿಡು ಅಂದರಂತೆ, ಈ ವಿಷಯದ ಹಿಂದೆ ತಪಾಸಿಸಿದಾಗ ಗೊತ್ತಾಗಿದ್ದುದು ಎಲ್ಲಾ ಹಣ ಚುಕ್ತಾ ಮಾಡಿದ್ದಾರೆ ರುದ್ರ ಅಂತ. ಅದಲ್ಲದೇ ಹನ್ನೆರಡು ಲಕ್ಷ ದ ಕಾರಿಗೆ ಈತ ಸಾಲ ತೆಗೆದದ್ದು ಬರೇ ಎರಡು ಲಕ್ಷ ಮಾತ್ರ, ಬಾಕಿ ಎಲ್ಲಾ ನಗದಿನಲ್ಲಿ ಪಾವತಿಸಿದ್ದಾನೆ. ನಿಮ್ಮ ಹೆಸರು ಹೇಳುತ್ತಲೇ ಬ್ಯಾಂಕ್ ಮೆನೇಜರ್ ಎಲ್ಲ ವಿಷಯಗಳನ್ನೂ ಅರುಹಿದ್ದರು. ನಿಮ್ಮ ಕಂಪೆನಿಯ ಮಾರ್ಕೇಟ್ ವ್ಯಾಲ್ಯೂ ತುಂಬಾ ಹೆಚ್ಚಿನದ್ದು. ಅದಲ್ಲದೇ ನಿಮ್ಮ ಕಂಪೆನಿಯ ಹೆಸರಿನಲ್ಲಿನ ಆತನ ಖಾತೆಯಲ್ಲಿಯೇ ಆತ ತನ್ನೆಲ್ಲಾ ವ್ಯವಹಾರ ಮಾಡಿದ್ದರಿಂದಲೂ, ಆತನ ಪಾನ್ ಕಾರ್ಡ್ ನಂಬರ್ ನಿಂದಲೂ ಬಾಕಿ ವಿಷಯ ಗೊತ್ತಾಗಿತ್ತು.

  ಎಲ್ಲಾ ವ್ಯವಹಾರಗಳನ್ನೂ ಆತ ನಗದಿನಲ್ಲಿಯೇ ವ್ಯವಹಾರ ಮಾಡಿದ್ದರೂ, ನೀವು ಹೇಗೆ ಇಷ್ಟೆಲ್ಲಾ ವಿವರ ಸಂಗ್ರಹ ಮಾಡಿದಿರಿ..? ಮೇಜರ್ 
ಅದೇ ಸರ್ ನನಗೆ ಗೊತ್ತಾಗಲು ಮುಖ್ಯ ಕಾರಣ ಪಾನ್ ಕಾರ್ಡ್ ನಂಬರ್. ಜಾಸ್ತಿ ಹಣ ಬ್ಯಾಂಕ್ ಖಾತೆಗೆ ಜಮಾ ಮಾಡಬೇಕಾದರೆ ಪಾನ್ ಕಾರ್ಡ್ ನಂಬರ್ ಕೊಡಲೇ ಬೇಕು, ಅದನ್ನು ಪರಿಶೀಲಿಸಿದಾಗ ಗೊತ್ತಾಗಿದ್ದದ್ದು ಪಾನ್ ನಂಬರ್ ರುದ್ರನದ್ದಲ್ಲ, ಆ ನಂಬರ್ ಹಿಂದೆ ಹೊರಟಾಗ ಹೊರಗೆ ಬಂತು ಪೀತಾಂಬರ್ ಹೆಸರು.
ಅದು ಸರಿ ಮಿಲಿಂಡ್, ನಿನಗೆ ಸಂಶಯ ಬಂದುದು ಹೇಗೆ? 

ನಿಮ್ಮ  ಚೇಂಬರ್ ನಲ್ಲಿದ್ದ ವಿಡಿಯೋ ಸರ್,
ಅದನ್ನ ನಿನ್ನ ಜತೆ ನಾನೂ ಕನ್ಯಾಲ್ ನೋಡಿದ್ದೆವಲ್ಲ, ಅದರಲ್ಲಿ ನಿನಗೇನು ಪುರಾವೆ ದೊರಕಿತ್ತು..?
ನಡೆಯಿರಿ ಸರ್ ನಿಮ್ಮ ರೂಮಿನಲ್ಲೇ ಕಾಫಿ ಕುಡಿಯುತ್ತ ಕೇಳೋಣ, ಅಲ್ಲಲ್ಲ ನೋಡೋಣ.

ದೊಡ್ಡ ಪರದೆಯ ಮೇಲೆ ಪುನಃ ಅಂದಿನ ದೃಶ್ಯಗಳನ್ನು ತೋರಿಸಲಾಯ್ತು, ಎರಡೂ ಕೋನಗಳಿಂದ ತೆಗೆದ ಕ್ಯಾಮೆರಾಗಳಿಂದ.
ಪುನ ದಿಗಂಬರ್ ತನ್ನ ಪೆನ್ನು ತೆಗೆದು ಬರೆದು ಮೇಜರಿಗೆ ಕೊಟ್ಟಲ್ಲಿಯವರೆಗೆ...
ಗೊತ್ತಾಯ್ತಾ ಸರ್..
ಇಲ್ಲವಲ್ಲ....
ಈಗ ನೋಡಿ ಸರ್ ಎರಡೂ ಕಡೆಯ ದೃಶ್ಯ.
ಐದನೆಯ ಕಂಪೆನಿಯ ಭಾಗೀದಾರ ತನ್ನ ಕೊನೆಯ ಕೋಟ್ ಕೊಡುವ ಮೊದಲಿನ ದೃಶ್ಯದಲ್ಲಿ
ದಿಗಂಬರ್ ಮೇಜರ್ ಕಡೆಯಿಂದ ನಿಧಾನವಾಗಿ ರುದ್ರನ ಕಡೆ ನೋಡುವಾಗ
ಮೇಜಿನ ಮೇಲಿಟ್ಟಿದ್ದ ರುದ್ರನ ಎಡ ಹಿಂಗೈ ಮೇಲೆ ಇಟ್ಟಿದ್ದ ಬಲಗೈ. ಮತ್ತು ನೋಡ ನೋಡುತ್ತಿದ್ದಂತೆ ಅದರ ಮೇಲೆಯೇ ಮಡಚಿಟ್ಟ ಆತನ ಬಲ ಗೈಯ  ಹೆಬ್ಬೆಟ್ಟು ಮತ್ತು ಕಿರಿ ಬೆರಳು -ಎರಡೂ  ಮಡಿಸಿಕೊಂಡವು.
ಇದಾದ ಎರಡನೇ ನಿಮಿಷದಲ್ಲಿ ಮೇಜರ್ ಕೈಗೆ ಐದನೆಯ ಕಂಪೆನಿಯ ದಿಗಂಬರನ  ಟೆಂಡರ್ ಬಂದಿದ್ದು  ಮೂರು ಪರ್ಸೆಂಟ್ ಕಡಿಮೆಯಾಗಿ.
ಅರ್ಥವಾಯ್ತೇ..? ಎಂದ ನಗುತ್ತಾ ಮಿಲಿಂಡ್
"ಅಸಾಧ್ಯವಪ್ಪಾ ನೀನು" ಎಂದರು ಅವನೆಡೆ ಹೆಮ್ಮೆಯ ನೋಟ ಬೀರುತ್ತಾ ಮೇಜರ್ ವಿಶ್ವನಾಥ್.

Monday, November 19, 2012

ತ್ಯಾಂಪ ತ್ಯಾಂಪಿಯ ರೈಲು ಪ್ರವಾ (ಯಾ) ಸ

ಬೆಂಗಳೂರಿಗೆ ಹೊರಡುವ ರೈಲದು.
ಇವರು ಕುಳಿತ ಭೋಗಿಯಲ್ಲಿ ಬೇರೆ ಯಾರೂ ಇರಲಿಲ್ಲ. ಹೊರಡುತ್ತೆ ಅನ್ನುವಾಗ ಒಂದು ಜೋಡಿ ಅದೇ ಬೋಗಿ ಹತ್ತಿದರು.
ನಿಮ್ಮ ಹತ್ತಿರ ರಿಸರ್ವೇಶನ್ ಟಿಕೆಟ್ ಇದೆಯಾ ಮೇಡಮ್..?
"ನುಲಿಯುವುದ್ಯಾಕೆ..? ಟಿಕೆಟ್ ಇದ್ಯಾ ಅಂತ ಕೇಳಿದನಷ್ಟೇ, ನೀನು ಭಾರೀ ಚಂದ ಅಂತೇನೂ ಹೇಳಲಿಲ್ಲ ಆತ." ತ್ಯಾಂಪ ಬಿರುಸಾದ
"ಹೇಳದಿದ್ದರೇನು ಅವನ ಕಣ್ಣೇ ಅದನ್ನು ಹೇಳಿತ್ತು..." ಸುಲಭದಲ್ಲಿ ಬಿಡುವಳಲ್ಲ ತ್ಯಾಂಪಿ
"ಹೋ...ಅದೂ ಹ್ಯಾಗೆ ....ಗೊತ್ತಾಗುತ್ತದೋ ನಿನಗೆ" ತ್ಯಾಂಪ.
"ಮತ್ತೆ........ ಊರಲ್ಲಿ ಮಾವನ ಮಗನಿದ್ದನಲ್ಲ...... ಅವನೂ ಹೀಗೇ ಇದ್ದ"
"ಮತ್ಯಾಕೆ......." ಇಲ್ಲ ತ್ಯಾಂಪನ ಗಮನ ಬೇರೆ ಕಡೆ ಹೊರಳಿತ್ತು..
"ಮಿ ತ್ಯಾಂಫ್!!! ??"
ಇದಿರಲ್ಲಿರುವ ಸುಂದರಿಗೆ ತನ್ನ ಹೆಸರೂ ತಿಳಿದಿದೆ..
" ಹೇಳಿ"
"ನನಗೆ ಬೆಂಗಳೂರಿಗೆ ಹೋಗಲಿಕ್ಕಿದೆ, ಇಲ್ಲೇ ನಿಮ್ಮ ಪಕ್ಕದಲ್ಲೇ ಕೂತುಕೊಳ್ಳಬಹುದಲ್ಲಾ..?"
ತ್ಯಾಂಪನಿಗೆ ಸ್ವರ್ಗ ಮೂರೇ ಗೇಣು... ಆದರೆ....
ಮುಚ್ರೀ ಬಾಯಿನಾ...?? ನಾಲಿಗೆಯ ಎಂಜಲೂ ಹೊರ ಬೀಳ್ತಾ ಇದೆ" ತ್ಯಾಂಪಿಯ ಬಾಂಬು ಅದೂ ....ಅವನಿಗೆ ಮಾತ್ರ ಕೇಳಿಸುವಂತೆ.
ಮುಚ್ಚಿತ್ತು ಬಾಯಿ ಆದರೇನು ಕಣ್ಣು ತೆರೆದೇ ಇದೆಯಲ್ಲ.
"ಅದ್ಯಾಕೆ ಮೇಡಮ್ ಅವರನ್ನು ಕೇಳ್ತೀರಾ... ರೈಲು ನಮ್ಮದಲ್ಲ.. ನೀವು ಎಲ್ಲಿ ಬೇಕಾದರೆ ಕುಳಿತುಕೊಳ್ಳಿ ಆದರೆ ಇಲ್ಲಲ್ಲ... ಇದು ನನಗೆ ಮತ್ತು ಈ ನನ್ನವರಿಗೆ ಮಾತ್ರ ಮೀಸಲು.
ನೀವು ಇದಿರಿನ ಸೀಟಿನಲ್ಲಿರಿ."
ಅದೂ ಬೋನಸ್ಸೇ
ಅಲ್ಲಾ ನಿಮ್ಮೆಜಮಾನ್ರೂ...? ತ್ಯಾಂಪ
ಕಿಲಕಿಲಾ ನಕ್ಕಳಾಕೆ , ತಂಪಾದ ಗಾಳಿ ಬೀಸಿತು ಬೇಸಗೆಯ ತ್ಯಾಂಪನಿಗೆ
"ನನ್ನ ಯಜಮಾನರಲ್ಲ......ಅವರು"
ಮತ್ತೆ...... ???? ತ್ಯಾಂಪಿ
ಆದರೆ ಉತ್ತರ ಕೇಳುವ ಕುತೂಹಲ ತ್ಯಾಂಪನಿಗೆ.
ನಿಮ್ಮ ಬ್ರದರ್ರಾ..? ತ್ಯಾಂಪ
"ಅಲ್ಲ ಅವರು ನನ್ನ ಕಸಿನ್"
ಎರಡರಲ್ಲೂ ಅಂತ ವ್ಯತ್ಯಾಸ ಇದೆಯಾ...... ತ್ಯಾಂಪನ ಸಂಶಯ. ಆದರೂ ಯಾಕೋ ನಿರಾಳನಾದ.
"ಮತ್ತೆ ನಿಮ್ಮ ಜತೆ ಬರಲ್ಲವಾ ಅವರೂ...." ತ್ಯಾಂಪನ ಕಣ್ಣಲ್ಲಿ ...........ಎಂತದ್ದೋ ಛಾಯೆ.
"ಇಲ್ಲ ನನ್ನನ್ನು ಬಿಡಲು ಬಂದರಷ್ಟೇ, ಹೋಗುತ್ತಾರೆ ವಾಪಾಸ್ಸು..........ಯಾಕೆ .ಏನೂ ಹೆದರಿಕೆ ಇಲ್ಲವಲ್ಲಾ ಮಿ ಥ್ಯಾಂಫ್..?? ಯಾಕೆಂದರೆ ನಾನು ಮೊದಲ ಸಲ ಇದರಲ್ಲಿ ಬರುವುದು..."
ತ್ಯಾಂಪ್ ಒಮ್ಮೆಲೇ ಉಬ್ಬಿ ಸೂಪರ್ ಮ್ಯಾನ್ ಆದ.
"ಛೇ ಏನೂ ಹೆದರಿಕೆಯಿಲ್ಲ ಬಿಡಿ, ನಾನಿದ್ದೇನಲ್ಲ..........."
"ದಂಡಕ್ಕೆ......... "ತ್ಯಾಂಪಿ ಮುಗಿಸಿದ್ದಳು ತ್ಯಾಂಪನ ವಾಕ್ಯ.
"ಏನಂದ್ರೀ ತ್ಯಾಂಪಿ ಯವರೇ" ಕೇಳಿದಳಾಕೆ.
"ಏನಿಲ್ಲ ಬಿಡಿ ಅಂದ ಹಾಗೆ ನಮ್ಮ ಹೆಸರು ಹೇಗೆ ತಿಳಿಯಿತು ನಿಮಗೆ.".
"ಹೊರಗೆ ಪೇಪರಿನಲ್ಲಿ......"
ತನ್ನ ಹೆಸರು ಪೇಪರಿನಲ್ಲಿ ಬಂದಿತ್ತಾ....??? ಯಾವಾಗ..? ತನಗೇ ತಿಳಿಯದೇ ತಾನು ಯಾವಾಗ ಫೇಮಸ್ ಆದೆ
ಯಾವ ಪೇಪರಿನಲ್ಲಿ..?
ಅಲ್ಲಲ್ಲ ಹೊರಗೆ... ಈ ಭೋಗಿಯ ಮೇಲೆ ಅಂಟಿಸಿರುತ್ತಾರಲ್ಲ ರಿಸರ್ವೇಶನ್ ಚಾರ್ಟ್ ಪೇಪರಿನಲ್ಲಿ.....
ಹೋ ಅದಾ.... ತ್ಯಾಂಪಿ ಗಂಡನೆಡೆಗೆ ತಾತ್ಸಾರವಾಗಿ ನೋಡಿದಳು
ನೀವು ಎಲ್ಲಾ ಒಟ್ಟಿಗೇ ಇರುವುದಾ..?" ತ್ಯಾಂಪಿ
ಎಲ್ಲಾ ಅಲ್ಲ ತ್ಯಾಂಪಿಯವರೇ
ನಾನೂ ಕಸಿನ್ನೂ ಒಟ್ಟಿಗೇ ಇರುವುದು.
ಮನೆಯಾ..??" ತ್ಯಾಂಪಿ
ಅಲ್ಲಲ್ಲ ರೂಮು...
ಅಂದರೆ ಅವರು ನಿಮ್ಮ ದೂರದ ಅಣ್ಣನಾ..?"ತ್ಯಾಂಪಿ
ಅಲ್ಲಪ್ಪಾ
ಮತ್ತೆ ಮೊದಲು ಕಸಿನ್ನೂ ಅಂದ್ರಿ" ತ್ಯಾಂಪಿ
ಅದು...ನಾನೂ..
"ಇರಲಿ ಬಿಡೇ ನಮಗೇನು.........? ಈಗ ಬಂದ ತ್ಯಾಂಪ ನಡುವಿಗೆ, ತ್ಯಾಂಪಿ ಯ ಪೋಲೀಸ್ ತರಹದ ವಿಚಾರಣೆ ಹಿಡಿಸಲಿಲ್ಲ ಆತನಿಗೆ.. ಪಾಪ
ಅಂದ ಹಾಗೇ ನಿಮ್ಮ ಹೆಸರು ಮಿಸ್......!! ????????
ಭಾರೀ ಖುಷಿಯಲ್ಲಿ ಕೇಳಿದ ಹಾಗಿತ್ತೇ...??
"ಮಾಯಾ"
"ಚೆಂದದ ಹೆಸರು..".ತ್ಯಾಂಪ
ಅಂದ ಹಾಗೇ ನೀವು ಏನು ಕೆಲಸ ಮಾಡುವುದು...?
"ಮಾಯಾ..."
ಅಲ್ಲ ನಿಮ್ಮ ಹೆಸರಲ್ಲ.... ಮಾಯಾ ಅವರೇ...ನಿಮ್ಮ ಉ..."
ಅಷ್ಟರಲ್ಲಿ ಮಾಯಾ ಎದ್ದು " ಈಗ ಬರ್ತೀನಿ ಸ್ವಲ್ಪ ನನ್ನ ಸಾಮಾನು ನೋಡಿಕೊಂಡಿರಿ..!!" ಎಂದಳು.
"ನಿಮ್ಮ ಸಮಯ ತಗೊಳ್ಳಿ..........." ಇದರಲ್ಲೆಲ್ಲಾ ತ್ಯಾಂಪ ಧಾರಾಳಿ ಹೆಂಗರಳು ಪಾಪ
ಟಿ ಟಿ ಬಂದ

ತ್ಯಾಂಪ ಟಿಕೆಟ್ ತೋರಿಸಿದ.
"ಬೇರೆ ಯಾರೂ ಇಲ್ಲ ಅಲ್ವಾ ಇಲ್ಲಿ"
ತ್ಯಾಂಪಿ ಏನೋ ಹೇಳ ಹೊರಟಳು. ....ತ್ಯಾಂಪ ಸುಮ್ಮನಿರಿಸಿದ.
"ಒಳಗಡೆಯಿಂದ ಬಾಗಿಲು ಹಾಕ್ಕೊಳ್ಳಿ ರಾತ್ರೆ ಕಳ್ಳ ಕಾಕರ ತೊಂದರೆ ಇರುತ್ತೆ. ಇದರಲ್ಲಿಯಂತೂ ಸ್ವಲ್ಪ ಕಲಿತಿದ್ದವರ ಹಾಗೆ ಬಂದು ಟೋಪಿ ಹಾಕುವವರೇ ಜಾಸ್ತಿ. ಎಚ್ಚರವಾಗಿರಿ, ಶುಭರಾತ್ರೆ". ಅವರನ್ನು ಎಬ್ಬಿಸಿ ಹೊರಟು ಹೋದ. ಅವನ ಕೆಲಸವೇ ಅದು.
ತ್ಯಾಂಪನಿಗೆ ಹೇಳಿ ಜಬ್ಬರ್ ದಸ್ತೀ ಬಾಗಿಲು ಹಾಕಿಸಿದಳು ಅವನ ಅರ್ಧಾಂಗಿ.
ಸ್ವಲ್ಪ ಹೊತ್ತಲ್ಲಿ ಬಾಗಿಲ ಸದ್ದಾಯ್ತು.
"ಯಾರೂ..??" ಕೇಳಿದ ತ್ಯಾಂಪ
"ನಾನು ಮಾಯಾ.. ಮಿ ಥ್ಯಾಂಫ್"
"ಅರೆ... ಮಾಯಾ ಅಂತೆ" ಬಾಗಿಲು ತೆಗೆಯಲು ಹೋದ ತ್ಯಾಂಪ
"ಟಿಟಿ ಯವರು ಬಾಗಿಲು ತೆರೆಯಬಾರದೆಂದು ಹೇಳಿದ್ದರಲ್ವಾ ..." ತ್ಯಾಂಪಿ
"ಅಲ್ಲ ಅದೆಲ್ಲ ಅಪರಿಚಿತರಾದರೆ ಮಾತ್ರ...!!!"
"ನೀವೆಲ್ಲಿಗೆ ಹೋಗಿದ್ರೀ, ಮಾಯಾ...?? ಟಿ ಟಿ ಬಂದು ಹೋದ"
"ನಾನು ನೀರು ಕುಡಿಯಲು ಕೆಳಗಿಳಿದೆ ಅಷ್ಟರಲ್ಲಿ ರೈಲು ಹೊರಟಿತ್ತು, ಹೇಗೋ ಯಾವುದೋ ಭೋಗಿ ಹತ್ತಿದೆ, ಈ ಸಲ ಇಲ್ಲಿಗೆ ಬಂದೆ ಅದಕ್ಕೆ ತಡವಾಯ್ತು...." ಮಾಯಾ.
"ನಿಮ್ಮ ಹತ್ತಿರ ಟಿಕೆಟ್ ಇದೆಯಲ್ಲಾ....??" ತ್ಯಾಂಪಿ
"ಪ್ಲಾಟ್ ಫಾರಂ ಟಿಕೆಟ್ ತಗೊಂಡೇ ನಾನು ರೈಲು ಹತ್ತಿದ್ದು...."ಮಾಯಾ.
"ಪ್ಲಾಟ್ ಫಾರಂ ಟಿಕೆಟಾ..??"
"ಹಂಗಂದ್ನಾ ನಾನು ಅಲ್ಲಲ್ಲ ಪ್ಲಾಟ್ ಫಾರಂ ನಲ್ಲಿ ಟಿಕೆಟ್ ತೆಗೆದುಕೊಂಡು ನಾನು ಈ ಭೋಗಿ ಹತ್ತಿದ್ದು ಅಂದೆ, ಯಾಕೆ ತೋರಿಸಲಾ..?? "ಮಾಯಾ.
"ಬೇಡ ಬಿಡಿ..!! ಅದರ ಅಗತ್ಯವಿಲ್ಲ.." ಅಲ್ಲ ಇಷ್ಟು ಚೆಂದ ಇರುವವರ್ಯಾರಾದರೂ ಸುಳ್ಳು ಹೇಳ್ತಾರಾ...? ತ್ಯಾಂಪ
" ಮಿ ಥ್ಯಾಂಪ ರವರೇ ನೀವು ಹೇಗೆ ಮಲಗ್ತೀರಿ..? ಮೇಲಾ..?"ಮಾಯಾ.
"ಏನಂದ್ರೀ" ಕೇಳಿದ್ದನ್ನ ನಂಬಲಾರದೇ ಕೇಳಿದ ತ್ಯಾಂಪ
"ಅಲ್ಲ ನೀವು ಕೇಳಗಿನ ಬರ್ತ್ ನಲಿ ಮಲಗ್ತೀರಾ ಅಥವಾ ನಿಮ್ಮ ಶ್ರೀಮತಿಯವರಾ..ಅಂತ ಕೇಳಿದ್ದೆ ಅಷ್ಟೆ??ಮಾಯಾ.
ಅಷ್ಟೇನಾ..??' ತ್ಯಾಂಪ
"ನಾನು ದಿನಾ ತಡವಾಗಿಯೇ ಮಲಗುವುದು, ಆದರೆ ತ್ಯಾಂಪಿ ಸ್ವಲ್ಪ ಬೇಗ ಮಲಗ್ತಾಳಷ್ಟೇ, ಸರಿ ನೀನು ಮೇಲ್ಗಡೆ ಹೋಗಿ ಮಲಗೆ..". ಅಂದ ತ್ಯಾಂಪಿಗೆ.
" ಸ್ವಲ್ಪ ಸಾಮಾನೆಲ್ಲಾ ಜೋಪಾನವಾಗಿ ನೋಡ್ಕೊಳಿ, ಆ ಟೀ ಟಿ......"ತ್ಯಾಂಪಿ
"ನೀವು ಅದನ್ನೆಲ್ಲಾ ಮರೆತು ಬಿಡಿ ಮೇಡಮ್......" ಮಾಯಾ
"ಅಂದರೆ...??" ತ್ಯಾಂಪಿ
"ನಾನೂ ತ್ಯಾಂಪ ಅವರೂ ನೋಡ್ಕೋಳ್ತೀವಿ ಬಿಡಿ." ಮಾಯಾ
"ನೆನಪಿದೆ ಎಲ್ಲವೂ ನೀನು ನಿದ್ದೆ ಮಾಡು ಆರಾಮ್ ಆಗಿ...... ನಾನಿದ್ದೇನಲ್ಲ" . ತ್ಯಾಂಪ

ತ್ಯಾಂಪ ತ್ಯಾಂಪಿಯ ರೈಲು ಪ್ರಯಾಣ

(ಕೊನೆಯ ಭಾಗ)

ಕಾಫೀ ಕಫೇಯಾ... ಪೇಪರ್ ಪೇಪರ್, ಎಲ್ಲ ಶಬ್ದಗಳೂ ಕಲಸು ಮೇಲೋಗರವಾಗಿ ಕೇಳಿಸುತ್ತಿವೆ ತ್ಯಾಂಪಿಗೆ.
ಒಂದೇ ಕ್ಷಣ
ಓಹ್ ಅಂದರೆ ತಮ್ಮ ಗಮ್ಯ ಬಂತು.
ಬೆಂಗಳೂರು.. ಬಂತು
ಅಭ್ಯಾಸ ಬಲ.... ಮಲಗಿದ್ದಲ್ಲಿಂದ ತನ್ನ ತಲೆ ಪಕ್ಕ ಕೈ ಆಡಿಸಿದಳು.
ಇಲ್ಲ ಜಂಬದ ಚೀಲ ಅಲ್ಲಿರ ಬೇಕಾಗಿತ್ತು..
...
ಹಾಗೆಯೇ ಕಣ್ಣು ಪಕ್ಕದಲ್ಲೆಲ್ಲಾ ಹುಡುಕಾಡಿತು..
ಹತ್ತು ಲೀಟರ್ ನೀರಿನ ಸಂಗ್ರಹ ದಾನಿ, ಬಿಸಿಯಾಗಿಡೋ ಚೆಂಬು,ಎರಡು ಸೂಟ್ ಕೇಸುಗಳು, ಒಂದು ಕಿಟ್ ಬ್ಯಗ್,ಎಲ್ಲವೂ ಅದರದರ ಜಾಗದಲ್ಲಿದ್ದುವು, ತನ್ನ ಜಂಬದ ಚೀಲ ತನ್ನ ತಲೆಯ ಪಕ್ಕವೇ, ಇದ್ದವು ಎಲ್ಲಾ, ಸರೀ ನೆನಪಿತ್ತು, ಆದರೆ ಅದು ತಾನು ಮಲಗುವ ಮೊದಲು
ತ್ಯಾಂಪನಿಗೆ ಹೇಳಿಯೇ ಮಲಗಿದ್ದು..
. ಅಲ್ಲಿಲ್ಲ..
ಈಗ ಯಾವುವೂ ಕಾಣುತ್ತಿಲ್ಲ ಅವುಗಳ ಜಾಗದಲ್ಲಿ..
ತ್ಯಾಂಪ ಅರಮ್ ಆಗಿ ಮಲಗಿದ್ದ ಮಗುವಿನ ಹಾಗೆ, ಅವನು ಮಲಗಿದರೆ ಹಾಗೇ, ಯಾವ ಚಿಂತೆಯಿಲ್ಲ
ಆತನೂ ತಿಳಿಸಿದ್ದ
ಎಲ್ಲಿಯೋ ಭದ್ರವಾಗಿ ತೆಗೆದಿಟ್ಟಿರಬೇಕು..
ಜತೆಗೇ.. ನೆನಪಾಯ್ತು "ಆರಾಮ್ ಆಗಿ ಮಲಗು.. ನಾವಿದ್ದೇವಲ್ಲಾ ...’
ಆಗಲೆ ನೆನಪಾಗಿ ಆಕಡೆ ಕಣ್ಣು ತಿರುಗಿತು.
ಎಲ್ಲಿದ್ದಾಳೆ ಅವಳು ..ಆ ಮಿಟುಕಲಾಡಿ!!
ರ್ರೀ ಎಲ್ರೀ... ಏಳ್ರೀ... ಹೌದಾ..???
ಹೂಂ ತಡಿಯೇ....
ಬೆಂಗಳೂರು ಬಂತು
ಬಂದೇ ಬೀಡ್ತಾ..??
ಏಳ್ರೀ.. ಇಳೀರಿ ಕೆಳಗೆ
ಯಾಕೇ ಗಂಟಲು ಹರ್ಕೋತಾ ಇದ್ದೀಯಾ
ಎಲ್ಲಿ ನಮ್ಮ ಸಾಮಾನೂ...
ಸಾಮಾನೂ..??
ತ್ಯಾಂಪ ಕೊಂಚ ಅಧೀರನಾದ
ಹೌದೂ ನಮ್ಮ ಬ್ಯಾಗೆಲ್ಲಾ ಎಲ್ಲಿ..?? ಎಲ್ಲಿಟ್ಟೀದ್ದೀರಾ..?/
ನೀನೂ ಇಟ್ಟಲ್ಲೇ ಇರಬೇಕೂ...
ಅವಳೆಲ್ಲಿ ನಿಮ್ಮ ಪಾಪದ ಮಾಯಾ..??
ಅವಳೇ ಹಿಂದೆಯೇ ಇಳಿದು ಹೋದಳಲ್ಲ.. ಅವಳ ಸಾಮಾನೆಲ್ಲಾ ನಾನೇ ಕೆಳಗಿಳಿಸಿ ಕೊಟ್ಟಿದ್ದೆ, ನಮ್ಮಹತ್ರ ಇದ್ದ ಹಾಗಿನದ್ದೇ ನೀರು ಸಂಗ್ರಹ ದಾನಿ ಕೂಡಾ ಇತ್ತು ಅವಳ ಬಳಿ, ನಮ್ಮಿಬ್ಬರ ಯೋಚನೆ ಎಷ್ಟು ಸರಿಯಾಗಿ ಹೊಂದುತ್ತೆ ಅಂತ ಕೂಡಾ ಹೇಳಿದ್ದಳು.
ಹೋಯ್ತು..ನಮ್ಮ ಸಾಮಾನೆಲ್ಲಾ ಹೋಯ್ತು... ನೀವೇ ಅವಳಿಗೆ ಕೈಯ್ಯೆತ್ತಿ ಕೊಟ್ಟಿರಲ್ಲಾ.. ದೇವರೇ
ತ್ಯಾಂಪಿಯ ಅರಚಾಟ ಹಾಗೇ...
ಇಳಿಯಲೇ ಬೇಕಲ್ಲ
ಇಲ್ಲಾ ಕಣೇ ಹಾಗೆಲ್ಲಾ ಮಾಡುವವಳಲ್ಲ ಕಣೇ ಪಾಪ....
ತ್ಯಾಂಪಿಯ ದುಮು ದುಮು ನಡೆದೇ ಇತ್ತು.....
ಬಾಗಿಲಿಂದ ಕೆಳಗಿಳಿದರು...
ಬನ್ನಿ ಮನೆಗೆ ನಿಮ್ಮ...... ನೋಡ್ಕೋತೀನಿ..
ಅರೆರೇಏನಾಯ್ತು
ಸೀನಣ್ಣ
ಅರೇ ನನ್ನ ಬ್ಯಾಗ್ ನಿಮ್ಮ ಕೈಯಲ್ಲಿ ಹೇಗೇ..?
ಅದನ್ನ ನಾನು ಹೇಳ್ತೇನೆ...
"ಪೋಲೀಸ್ ಗಣೇಶ್..."
ಸುಮಾರು ದಿನದಿಂದ ನಾವು ಒಬ್ಬ ಮೋಸ ಮಾಡುವ ಹೆಂಗಸನ್ನ ಹುಡುಕುತ್ತಿದ್ದೆವು, ನಮ್ಮ ಸೀನನ ಕಾರಣದಿಂದ ಇವಳು ಸಿಕ್ಕಿ ಬಿದ್ದಳು.
ನಾನಲ್ಲ ಕಾರಣ, ನಿಜವಾಗಿ ತ್ಯಾಂಪ ನನಗೆ ಫೋನ್ ಮಾಡಿದ್ದ, ಆಗಲೇ ನನಗೆ ಸಂಶಯ ಬಂತು, ನಾನು ಗಣೇಶನ ಸಹಾಯದಿಂದ ಹಿಡಿದು ಬಿಟ್ಟೆವು. ಓಹ್ ತ್ಯಾಂಪನಾ....
ಹೌದೇನ್ರಿ....??ತ್ಯಾಂಪಿ.
ನಾನಾ..?? ನಿನಗೆ ಯಾವಾಗ..??
ಸೀನ ಕಣ್ಣು ಹೊಡೆದದ್ದು ಗಣೇಶ ಮಾತ್ರ ನೋಡಿದ್ದ...
ಆಗಲೇ.....
ಜತೆಯಲ್ಲಿ ಮಹಿಳಾ ಪೋಲೀಸ್... ಹಗ್ಗ ಕಟ್ಟಿಸಿಕೊಂಡ ಮಾಯಾ....
ತ್ಯಾಂಪನ ಕಥೆ ಸೀನನ ಎಂಟ್ರಿ ಜತೆ ಸುಖಾಂತ್ಯ.

Saturday, November 17, 2012

ಸ್ವಾರ್ಥ

೧.   ಕನಸು

ಆದಿನ ನನಗೇ ನೋ ಸ್ವಲ್ಪ ಪೂರ್ವಾಭಾಸವಾಗಿತ್ತು. ಇವತ್ತು ಏನೋ ಆಗುತ್ತೆ ಅಂತ. ಬೆಳಿಗ್ಗೆ ಚುಮುಚುಮು ಚಳಿಯಲ್ಲಿ ಒಬ್ಬನೇ ತಿರುಗಾಡುವುದೆಂದರೆ ನನಗೆ ತುಂಬಾನೇ ಇಷ್ಟ. ಆ ಎತ್ತರವಾಗಿ ಬೆಳೆದಿದ್ದ ಮರಗಳಿಂದ ದಟ್ಟವಾಗಿದ್ದ ಲಾಲಭಾಗ್ ನ ಆ ವಿಷೇಷ ಸ್ಠಳ ನನಗೆ ಯಾವತ್ತೂ ಪ್ರಿಯವೇ.   ಬೆಳೆದ ಹಸಿರು ಚಿಮ್ಮುವ ಗಳುವಿನ ಗುಂಪಿನಲ್ಲಿ ನಾನು ನನ್ನನ್ನೇ ಮರೆಯುವಷ್ಟು ವಿವಶನಾಗುತ್ತಿದ್ದೆ. ತಮ್ಮಷ್ಟಕ್ಕೆ ತಾವೇ ಬೆಳೆಯುತ್ತಾ, ತನಗೇ ಎಂದೂ ಏನೂ ಅಪೇಕ್ಷೆ ಪಡದೇ ಸರ್ವರಿಗೂ ಸದಾ ಏನನ್ನಾದರೂ ಕೊಡುತ್ತಿರುವ ಇವುಗಳು ಪ್ರಕೃತಿಗೇ ಸವಾಲು ಹಾಕುತ್ತ ಮೆರೆಯುವ ಮಾನವನೆಷ್ಟು ಕುಬ್ಜ ಎಂಬುದನ್ನು ತೋರಿಸಿಕೊಡುತ್ತಿವೆ ಎನ್ನಿಸುತ್ತದೆ. ಪ್ರಕ್ಷುಬ್ದವಾಗಿರುವ ಮನಸ್ಸನ್ನು ಪ್ರಶಾಂತ ಮಾಡುವ ಗುಣ ಇವುಗಳಲ್ಲಿವೆ. ಮನುಷ್ಯನ ಜೀವನಗತಿಯಲ್ಲಿನ ಏರಿಳಿತಗಳು ಇವುಗಳ ಒಂದು ವರುಷದ ಮಾರ್ಪಾಡಿನಲ್ಲಿ ಸಾಂಕೇತಿಕವಾಗಿ ಪ್ರತಿನಿಧಿಸುವಂತಿದೆ.ಅರ್ಥ ಮಾಡಿಕೊಂಡರೆ ನಾವು ಹೇಗಿರಬೇಕು ಎಂಬುದನ್ನೂ ಇವುಗಳು ನಮಗೆ ಕಲಿಸುತ್ತಿರುತ್ತವೆ.ಸಹನೆ ಶಾಂತಿ ಗಂಭೀರತೆ ಮತ್ತು ಚೇತೋಹಾರೀ ಗುಣಗಳು....... ನನ್ನ ಮನಸ್ಸು ಯೋಚಿಸುವುದನ್ನೂ ನಿಲ್ಲಿಸಿತು, ಇಲ್ಲ ಇವತ್ತು ಎಂದಿನಂತಿಲ್ಲ ಈ ಜಾಗ. ಇವತ್ತು ಏನನ್ನೋ ಅಡಗಿಸಿಕೊಂಡಂತಿದೆ. ಯಾವುದೋ ರಹಸ್ಯ..? ನನಗೇ ನಗು ಬಂತು ಇಲ್ಲಿ ಯಾವ ರಹಸ್ಯ ಅಡಗಿಸಿಡಲು ಸಾಧ್ಯ..? ಇವತ್ಯಾಕೋ ಜಾಸ್ತಿಯೇ ಹಿಮ (ಮಂಜು) ಆವರಿಸಿದೆ ಅನ್ನಿಸಿತ್ತು.ಮೂರ್ನಾಲ್ಕು ಅಡಿ ಮುಂದೆ ಏನಿದೆ ಅಂತ ಗೊತಾಗದಂತೆ ಆವರಿಸಿದೆ ಹಿಮ( ಮಂಜು). ಆದರೂ ನಿರ್ಭಾವುಕವಾಗಿ ( ಈ ಶಬ್ದ ಯಾಕೀಗ..?) ಯಾಂತ್ರಿಕ ನಡೆ. ಆಗಲೇ ಅದು ಕಾಣಿಸಿತು. ಅಸ್ಪಷ್ಟವಾಗಿ. ಕದಲ್ಲುತ್ತಿದೆಯಾ ನಿಶ್ಚಲವಾ ಅಂತಾನೂ ಗೊತ್ತಾಗಿರಲಿಲ್ಲ. ಮನಸ್ಸು ಮುಂದೆ ಹೆಜ್ಜೆ ಹಾಕಲು ಅನುಮಾನಿಸುತ್ತಿರಬೇಕಾದರೆ, ಮುಂದಿನ ಸೆಕೆಂಡಿನ ಕೆಲವೇ ಅಂಶಗಳಲ್ಲಿ ನನ್ನ ಮೇಲೆ ಆಕ್ರಮಣ ಮಾಡಲು ಅಣಿವಾಗುತ್ತಿರುವ ಸಿಟ್ಟಿಗೆದ್ದ , ಜೊಲ್ಲು ಸುರಿಯುತ್ತಿರುವ ತೆರೆದ ಬಾಯಿ ,  ಮಡಿಸಿಕೊಂಡ ಬಾಲ,  ಕೆಂಪು ಕಣ್ಣಿನ ಉಗ್ರ ದೈತ್ಯಾಕಾರದ  ನಾಯಿ..? ಓಡಲೂ ಕಾಲು ಗಳು ಮನಸ್ಸಿನ ಆಜ್ಞೆಯನ್ನು ಸ್ವೀಕರಿಸುತ್ತಿಲ್ಲ. ಯಾಕೆ ನನ್ನ ದೇಹ ನನ್ನ ಮನಸ್ಸಿನಾಣತಿಯನ್ನು  ಸ್ವೀಕರಿಸುತ್ತಿಲ್ಲ.?..? ಎಲ್ಲಕ್ಕಿಂತ ನನ್ನ ಮನಸ್ಸನ್ನು ಘಾಸಿ ಮಾಡಿದ ವಿಷಯ . ಇದು ನನ್ನ ಆಲಿವ್, ನಾನೇ  ಅಕ್ಕರೆಯಿಂದ ಸಾಕಿದ, ನನ್ನ ಕೈಯಾರೆ ಬಾಟಲಿಯಲ್ಲಿ ಹಾಲು ಕುಡಿಸಿ ಎತ್ತಿಕೊಂಡು ಲಲ್ಲೆಗೆರೆಯುತ್ತಾ ಮನೆಯೆಲ್ಲಾ ತಿರುಗುತ್ತಾ, ಮಗುವಿನಂತೆ ಮನೆಯ ಸದಸ್ಯನಂತೆ ಎಣಿಸಿ ಸಾಕಿದ ನಾಯಿ. ಪ್ರಪಂಚದಲ್ಲಿ ಯಾವುದೇ ಜೀವಿಗಿಂತಲೂ ಹೆಚ್ಚಾಗಿ ಕ್ರತಜ್ಞತೆಯನ್ನು ಪ್ರೀತಿಯಲ್ಲಿ ಮಾತ್ರವೇ ಕೊಡಲು ಸಮರ್ಥತೆಯುಳ್ಳ ಈ ಪ್ರಾಣಿ ಈಗ ಮಾತ್ರ ತನ್ನ ಅನ್ನ ಕೊಟ್ಟವನನ್ನೇ ಗುರುತಿಸದೇ,  ಜನ್ಮ ಜನ್ಮಾಂತರದ ವೈರಿಯಂತೆ ನನ್ನನ್ನೇ ಇತಿಶ್ರೀ ಮಾಡಲು ಹೊಂಚಿ ಕಾದಿತ್ತಾ..?

ಬಾಲ್ಯದಲ್ಲಿ ನನ್ನ ಗೆಳೆಯನ ಅಣ್ಣನಿಗೆ ಹುಛ್ಚು ನಾಯಿ ಕಡಿದದ್ದಕ್ಕೆ ಅವನಿಗಾದ ಬವಣೆ ನನ್ನ ಮನಸ್ಸಿನಿಂದ  ಇಂದೂ ಮರೆಯಾಗಿಲ್ಲ. ಅವನನ್ನು ಒಂದು ಪಂಜರದಲ್ಲಿ ಕಟ್ಟಿ ಹಾಕಿದ್ದರು. ಆತ ಹುಚ್ಚು ನಾಯಿಯಂತೆಯೇ ಸರಳನ್ನೆಲ್ಲಾ ಕಚ್ಚುತ್ತಾ ಮುಲುಗುತ್ತಿದ್ದ. ನನಗೂ ಹಾಗೇ ಆಗುತ್ತಾ..? ಇನ್ನೂ ಇದಕ್ಕೆ ಔಷಧಿ ಕಂಡು ಹಿಡಿದಿಲ್ಲವೇ..

ಆಗಲೇ ನನಗೆ ಯಾವುದೋ ಕಾದಂಬರಿಯ ಸಾಲುಗಳು ನೆನಪಾದವು.

"ರೆಬೀಸ್ ಬರದಂತೆ ತಡೆಯಲು ವ್ಯಾಕ್ಸಿನ್ ಇದೆಯೇನೋ ಹೊರತಾಗಿ ಬಂದ ಮೇಲೆ ಯಾರೂ ಏನೂ ಮಾಡಲೂ ಸಾಧ್ಯವಿಲ್ಲ. ಮನುಷ್ಯನಿಗೆ ಯಾವಾಗಲಾದರೂ ಯಾವುದೋ ರೀತಿಯಲ್ಲಿ ಸಾವು ತಪ್ಪದಾದರೂ ಆದರು ರ್ಯಾಬೀಸ್ ಮೂಲಕ ಬರುವ ಸಾವು ಶತೃಗಳಿಗೂ ನಾವು ಬಯಸದಷ್ಟು ನಿಕೃಷ್ಟವಾಗಿರುತ್ತದೆ. ಮುಖದಲ್ಲಿ ಆತಂಕ. ರಾತ್ರೆಯಂತೂ ನಿದ್ದೆಯೇ ಇರದು. ಸ್ವಲ್ಪ ಸಪ್ಪಳವಾದರೂ ಮುಟ್ಟಿದರೂ ಬೆಚ್ಚಿ ಬೀಳುತ್ತಾನೆ. ಉಚ್ಚ್ವಾಸ ನಿಶ್ವಾಶಗಳವೇಗ ಹೆಚ್ಚಿ ಕಣ್ಣು ಮುಖ ಗಂಟಲಿನ ಮಾಂಸ ಖಂಡಗಳಿಗೆ ಪಕ್ಷವಾತ ಬಂದು ನುಂಗಲಾಗದ ಜೊಲ್ಲು ಹೊರಕ್ಕೆ ಉಕ್ಕುತ್ತಿರುತ್ತದೆಮೂತ್ರ ಕೋಶಕ್ಕೂ ಹಬ್ಬಿ ಮೂತ್ರ ನಿಂತು ಹೋಗಿ ಹೊಟ್ಟೆಯುಬ್ಬಿ, ಈ ಎಲ್ಲಾ ಶರೀರದಲ್ಲಿನ ಬದಲಾವಣೆಗೆ ಹುಚ್ಚರಾಗುತ್ತಾರೆ. ಫಿಟ್ಸ್ ನಲ್ಲಿ ಮಾಂಸ ಖಂಡಗಳು ಬಿಗಿದುಕೊಂಡು ಅವು ಸಡಿಲವಾಗದೇ ಇರೋದ್ರಿಂದ ಹೃದಯ ಕೂಡಾ ಒಂದು ವಾರದಲ್ಲಿ ನಿಂತೇ ಹೋಗುತ್ತೆ"

ಕ್ಷಣದಲ್ಲಿ ನನ್ನ  ಕಣ್ಣು ಮುಚ್ಚಿತ್ತು, ನಾನು ಧಡಕ್ಕನೆ ಕೆಳಗೆ ಬಿದ್ದಿದ್ದೆ.. ಆ ದೈತ್ಯಾಕಾರದ ಆಲಿವ್ ತೆರೆದ ಬಾಯಿಯಿಂದ ಬೀಳುತ್ತಿರುವ ಜೊಲ್ಲಿನ ಜತೆ  ಎದೆಯ ಮೇಲೆಯೇ ತನ್ನ ಮುಂದಿನ ಕಾಲೂರಿ ನಿಂತಿತ್ತು, ಯಾವ ಕ್ಷಣದಲ್ಲೂ  ನನ್ನ ಮ್ರತ್ಯುವನ್ನು ಅಹ್ವಾನಿಸುತ್ತ. ನಾನು ಕಣ್ಣು ಮುಚ್ಚಿಕೊಂಡೆ, ಮುಂದಿನ ಗಳಿಗೆಯನ್ನು ಎದುರಿಸಲು.

೨.   ಪೀಠಿಕೆ

ಯಾಕೆ ನನ್ನ ಚಿನ್ನ ..? ಇವತ್ಯಾಕಿಷ್ಟು ಬೇಸರ?
ಅಲ್ಲರಿ ನಮ್ಮ ಪುಟ್ಟ ಇವತ್ತು ಊಟವೂ ಮಾಡುತ್ತಿಲ್ಲ.
ಯಾಕೆ ಶಾಲೆಯಿಂದ ಬರುತ್ತಿರಬೇಕಾದರೆ ಏನನ್ನೋ ತಿಂದು ಬಂದಿರ ಬೇಕು.
ಇಲ್ಲ ಇವತ್ತು ಶಾಲೆಗೆ ಹೋಗಲೇ ಇಲ್ಲ ಆತ , ರೂಮಿನಲ್ಲೇ ಇದ್ದಾನೆ, ಬೆಳಗಿನಿಂದ ಹೊರಗೂ ಬಂದಿಲ್ಲ
ಯಾಕೆ ಏನಾಯ್ತು,  ಅಂದರೆ ಏನೋ ದೊಡ್ಡ ಬೇಡಿಕೆಯೇ ಇರಬೇಕು.
ಅದೇ ನಿನ್ನೆ ಹೇಳಿದ್ದೆನಲ್ಲಾ, ಅವನಿಗೆ ಡ್ರಮ್ಸ್ ಸೆಟ್ ಬೇಕಿತ್ತಂತೆ,
ನೆನ್ನೆಯೇ ಹೇಳಿದ್ದೆನಲ್ಲ, ಅವನು ಕೇಳಿದ ಸೆಟ್ ಗೆ ಮತ್ತು ಅದನ್ನು ಕಲಿಯುವದಕ್ಕೆ ಕನಿಷ್ಟವೆಂದರೂ ಒಂದು ಲಕ್ಷ ಬೇಕು ನನ್ನಲ್ಲಿ ಅಷ್ಟು ಹಣವಿಲ್ಲವಲ್ಲ  ಈಗ.
ಅದು ಅವನಿಗೆ ಗೊತ್ತಾಗಬೇಕಲ್ಲ, ಅವನದ್ದೊಂದೇ ರಾಗ, ಬೇಕೇ ಬೇಕು ಅಂತ. ಅಲ್ಲಾರಿ ನಾನೊಂದು ಮಾತು ಹೇಳಲಾ?
"ಹೇಳು.."
"ನನ್ನ ಹತ್ತಿರ ಒಡವೆಗಳಿವೆಯಲ್ಲಾ, ನಾನಂತೂ ಅವುಗಳನ್ನು  ಉಪಯೋಗಿಸುತ್ತಿಲ್ಲ, ಹೊರಗಡೆ ಕಳ್ಳ ಕಾಕರ ಸರ ಎಳೆಯುವವರ ಭರಾಟೆ. ಇದನ್ನೇ ಅಡವಿಟ್ಟು ಹಣ ಹೊಂದಿಸಿದರೆ ಆಯ್ತಲ್ಲಾ..?"
ಇದು ಮಾತ್ರ ಬೇಡವೇ ಬೇಡ, ನಾನು ಪ್ರೀತಿಯಿಂದ ನಿನಗೆ ಮಾಡಿಸಿದ್ದು ಅದು, ಅದಕ್ಕೆ  ಕಷ್ಟ ಪಟ್ಟಿದ್ದೆಷ್ಟಂತ ನಿನಗೇ ಗೊತ್ತು.
ನಾನೇ ನು ಮಾರಲು ಹೇಳಿದೆನಾ ನಿಮಗೆ..?   ನಂತರ ಅದನ್ನು ವಾಪಾಸು ತೆಗೆದುಕೊಂಡರಾಯ್ತು.
ಆದರೆ....
ಆದರೆ  ಹೋದರೆ ಏನಿಲ್ಲ, ನಾನು ಹೇಳಿದ್ದು ಕೇಳಿ. ಈಗ.
...........................................................

ಆದರೆ ಬಿಡಿಸಲು ಸಮಯದ, ಹಣದ ಅಭಾವವಾದಲ್ಲಿ ಅದು ಕೈತಪ್ಪಿ ಹೋಯಿತೆಂದೇ ಅರ್ಥ. 
ಹೀಗೆ ಹೋದದ್ದು ಅದೊಂದೇ ಅಲ್ಲ, ಪ್ರತಿಯೊಬ್ಬರ ಉಪವಾಸಕ್ಕೂ ಒಂದೊಂದು.
ಅಂತಹ ಸಂಸಾರಗಳೆಷ್ಟಿವೆಯೋ ಜಗದಲ್ಲಿ.
ಕೇಳುವ ಹೇಳುವ  ಹದಿನೈದು ಸಂವತ್ಸರಗಳು ಹೀಗೆಯೇ ಕೊಚ್ಚಿ ಹೋದವು
ಇದೇ ಅಲ್ಲವೇ  ಸ್ವಾರ್ಥದ ಪ್ರೀತಿಯ ಮಾಯೆ.

೩.  ಭ್ರಮೆ

"ನಮಸ್ಕಾರ"    ಶಬ್ದ ಕೇಳಿ ತಲೆಯೆತ್ತಿದೆ
"ನೀವೇನಾ ಕೃಷ್ಣ ಕುಮಾರ್, ನಿಮ್ಮ ಪರಿಚಯವಾದದ್ದು ತುಂಬಾ ಸಂತೋಷ."  ಸ್ವಲ್ಪ ತಡೆದು "ಏಯ್ ನೆನಪಾಗಿಲ್ಲವಾ. ನಾನು ಕೆ ಸಿ " ಎಂದನಾತ ಶುದ್ಧ  ಹಿಂದೀಯಲ್ಲಿ .
ಆಗಲೇ  ಹಳತೆಲ್ಲಾ ಪಕ್ಕನೆ ನೆನಪಾಯ್ತು,
ಕೆಲವೇ ಕ್ಷಣಗಳಲ್ಲಿ ನಾವು ಎಲ್ಲವನ್ನೂ ಜ್ಞಾಪಿಸಿಕೊಂಡು ಬಿಟ್ಟೆವು.
ನಾನೂ ಈತನೂ ಸುಮಾರು ೮-೧೦ ವರ್ಶಗಳ ಹಿಂದೆ ಜತೆಯಲ್ಲೇ ಇದ್ದೆವು. ನಮ್ಮದು ಪ್ರತಿ ಮೂರು ವರುಷಕ್ಕೊಮ್ಮೆ ಗುಳೆ ಏಳುವ ಸಂಪ್ರದಾಯದ ಕೆಲಸ.
ಆಗ ಸಿಕ್ಕಿದ ದಿಲ್ದಾರ್ ಸ್ನೇಹಿತ.  ಈತ ಹೆಸರು ಕಾಳಿಚರಣ್ ಸಿಂಘ್, ನಾವೆಲ್ಲಾ ಈತನನ್ನು ಕೆ ಸಿ ಎಂತಲೇ ಕರೆಯುತ್ತಿದ್ದೆವು. ನಾವಿಬ್ಬರೂ ಸಂಸಾರಸ್ಥರಾಗುವ ಮೊದಲೇ  ಸ್ನೇಹ ಬೆಳೆದು ಬಂದುದರಿಂದ ಹಳ್ಳಿಯ ನೆಲೆಯಿಂದ ಬಂದ ಆತನ ಶ್ರೀಮತಿಯೂ ನನ್ನ ಮನೆಯವರನ್ನು ಹೊಂದಿಕೊಂಡಿದ್ದಳು. ಆತನ ಇಬ್ಬರು ಮಕ್ಕಳೂ ನಮ್ಮಿದುರೇ ಬೆಳೆದರು. ಸರಿ ಸುಮಾರು ೯-೧೦ ವರುಷ ನಮ್ಮ ಸಂಸಾರ ಜತೆಯಲ್ಲೇ ಇದ್ದು, ನಮ್ಮ ಪ್ರತೀ ವರ್ಗಾವಣೆಯೂ ಸರಿ ಸುಮಾರು ಹತ್ತಿರ ಹತ್ತಿರವೇ ಇದ್ದುದರಿಂದ, ಸ್ವಾಭಾವಿಕವಾಗಿ ನಾವು ಮನೆಯವರ ಹಾಗೆ ಹೊಂದಿಕೊಂಡಿದ್ದೆವು. ಹಬ್ಬ ಹರಿದಿನಗಳಲ್ಲಿ ಅವರ ನಮ್ಮ ಸಂಭಂಧಿಗಳೂ. ಅವನ  ತುಡುಗ ತುಂಟ ಮಕ್ಕಳಿಗೂ ನಾನು ಪಾಠ ಹೇಳಿಕೊಡುವ ಮಾಸ್ಟರ್, ಅವುಗಳು  ಸ್ವಲ್ಪ ಮನುಷ್ತ್ಯರಂತಾಗಲು ನಾವಿಬ್ಬರೂ ಕಾರಣರಾಗಿದ್ದೆವು. ಆತ ಒಮ್ಮೆ ಊರಿಗೆ ಹೋಗಿದ್ದಾಗ, ಖಾಯಿಲೆ ಬಿದ್ದ ಮಕ್ಕಳನ್ನೂ ಆತನ ಶ್ರೀಮತಿಯವರನ್ನೂ ಕಾಳಜಿಯಿಂದ ನೋಡಿಕೊಂಡಿದ್ದೆವು.
ದೆಹಲಿಯಲ್ಲಾತ ಈಗ ಸೆಟಲ್ ಆಗಿದ್ದಾನೆ.
ಕ್ಲಾಸಿನಲ್ಲಿ ಹಿಂದೆ ಬಿದ್ದಿರುತ್ತಿದ್ದ ಆತನ ಶೈತಾನ್ ಮಕ್ಕಳು ಈಗ ಟ್ಯುಟೋರಿಯಲ್ ನಡೆಸುವಲ್ಲಿ ಅಪ್ಪನ ಜತೆ ಸೇರಿದ್ದವಂತೆ.
ತನ್ನ ಜೀವಿತಾವಧಿಯಲ್ಲಿ ಸೇರಿಸಿಟ್ಟ ಹಣದಿಂದ ಟ್ಯುಟೋರಿಯಲ್   ಆರಂಭಿಸಿದ ಈತ ಅದನ್ನೇ ಮಕ್ಕಳಿಗೆ ವಹಿಸುವ ಇರಾದೆ ಹೊಂದಿದ್ದಾನೆ.
ಅದೂ ಸರಿಯೇ,ಆತನಿಗೆ ಬೀಪಿ ಮತ್ತು ಶುಗರ್ ಕೂಡಾ ಇವೆಯಂತೆ. ಮೊದಲಿಗಿಂತ ಸ್ವಲ್ಪ ಹೆಚ್ಚಿಗೆಯೇ  ದಪ್ಪವಾಗಿ ಆತನ ದೇಹ ಕೂಡ ಅದನ್ನೇ ಉಸುರುತ್ತಿತ್ತು. .
ನನಗೂ , ಅವನಿಗೆ ವಿಶ್ರಾಂತಿಯ ಅವಶ್ಯಕತೆಯಿದೆ ಅನ್ನಿಸಿದ್ದರೂ,  ಮಂಗಗಳಂತಹಾ ಮಕ್ಕಳಿಗೇ ಎಲ್ಲವನ್ನೂ ಕೊಡುವುದು ಅದೇಕೋ ಸರಿ ಕಾಣಲಿಲ್ಲ
 "ಸರಿಯಪ್ಪಾ, ನಿನಗೆ ಈಗ ಬೇಕಾದದ್ದು ವಿಶ್ರಾಂತಿ. ಆದರೂ ಪೂರ್ತಿಯಾಗಿ ಮಕ್ಕಳ ಕೈಯಲ್ಲಿ ಕೊಡುವುದು ಉಚಿತವಲ್ಲ " ಎಂದೆ ನಾನು
ಅದೆಲ್ಲಾ ಆಮೇಲೆ ನೋಡೋಣ ಬಿಡು "  ಅಂದ ಹಾಗೆ ಇಲ್ಲಿ ಎಲ್ಲಾ ಚೆನ್ನಾಗಿದೆ ತಾನೇ, ಏನಾದರೂ ಬೇಕಿದ್ದಲ್ಲಿ ಸಂಕೋಚ ಪಡದೇ ಕೇಳು" ಎಂದ
ಹೊಸದಾಗಿ ದೆಹಲಿಗೆ ವರ್ಗವಾಗಿ ಬಂದ ನನಗೆ ಎಲ್ಲವೂ ಅಡಚಣೆಯೇ,
"ಎಲ್ಲಾದರೂ ಇರಲು ಮನೆ ಹೊಂದಿಸಿಕೊಡು ನೋಡುವಾ" ಎಂದೆ.
"ಸಂಕೋಚ ಯಾಕೆ ಯಾರ್  ನನ್ನಲ್ಲಿ,  ದೆಹಲಿಯಲ್ಲಿ ಅದಕ್ಕೇನೂ ಬರಗಾಲವಿಲ್ಲ ಬಿಡು,
ಯಾವಾಗ ಕರೆತರುವ ಯೋಚನೆಯಿದೆ..?ತಿಳಿಸು.ನಿನ್ನ ಸಂಸಾರಕ್ಕೆಇಷ್ಟವಾದ ಮನೆ ಕೊಡಿಸೋದು ನನ್ನ ಜವಾಬ್ದಾರಿ  ಆಯ್ತಾ."
ವಿಶ್ವಾಸದ ಅಲೆ ನನ್ನೆದೆ ತುಂಬಿತು ಹೇಳಿದೆ
 "ಹಾಗಾದರೆ  ಈಗಲೇ ಊರಿಗೆ ಹೊರಟು ನನ್ನ ಸಂಸಾರ  ಆದಷ್ಟು ಬೇಗ  ಕರೆದು ತರ್ತೇನೆ"
 "ಊರಿಂದ ಹೊರಡುವ ಮೊದಲು ನನಗೆ ತಪ್ಪದೇ ಫೋನ್ ಮಾಡು"   .ಆತ ಎಚ್ಚರಿಸಿದ.
ಹೊರಡುವ ಸಮಯದಲ್ಲೂ ಪಕ್ಕದಲ್ಲಿನ ಖಾನ್ ಕೇಸಿಗೆ ಹೇಳಿದ್ದ ಮಾತು ಅಸ್ಪಷ್ಟವೆಂಬಂತೆ ಕೇಳಿಸಿತ್ತು.
 " ನಿಮ್ಮದೇ ಮನೆ ಇದೆಯಲ್ಲ, ಈಗಂತೂ ಸುಮಾರು ದಿನಗಳಿಂದ ಖಾಲಿಯೇ ಇದೆ.......?"

೪. ವರ್ತಮಾನ

ಶ್ರೀಮತಿಗೆ ಕೇಸಿ ಬಗ್ಗೆ ಕೇಳಿಯೇ ಖುಷಿಯಾಗಿತ್ತು.
"ಅಂದ ಹಾಗೆ ಅವನ ಶ್ರೀಮತಿ ಹೇಗಿದ್ದಾಳಂತೆ ಈಗ..?"  ನನಗೆ ಒಮ್ಮೆಲೇ ಪಿಚ್ಚೆನ್ನಿಸಿತು.
"ನಮ್ಮದೇ ಮಾತಿನ ಗುಂಗಿನಲ್ಲಿ ನಾನು ಈ ವಿಷಯವನ್ನು ಮರೆತೇ ಬಿಟ್ಟಿದ್ದೆ....
ಒಮ್ಮೆಲೇ ಕೇಸಿ ಯಮೇಲೆ ಸಿಟ್ಟು ಬಂತು .
ಅವನಾದರೂ ತಿಳಿಸ ಬಾರದಿತ್ತಾ....?.
ಆದರೂ ನನ್ನವಳನ್ನು ಸಂತೈಸಲು ಹೇಳಿದ್ದೆ 
 "  ನೀನೇ ಕೇಳಿಕೋ.... ಹೇಗಿದ್ದರೂ ಅಲ್ಲಿಗೇ ಹೋಗುತ್ತೆವಲ್ಲ...!!"
ಮನೆಯಿಂದ ಹೊರಡುವ ಮುನ್ನ ನಾನು  ದೆಹಲಿಯಲ್ಲಿನ  ಕೆ ಸಿಂಘ್ ಗೆ  ಫೋನ್ ಮಾಡಿದೆ.
ಆದರೆ ಆಗ ಆತ ಯಾವುದೋ ಬೇರೆಯೇ ಲೋಕದಲ್ಲಿದ್ದ ಹಾಗಿತ್ತು.
"ಆಯ್ತು ಬನ್ನಿ"  ಅಂದಷ್ಟೇ ಹೇಳಿದ್ದ.
ಅಂತೂ ದೆಹಲಿಯಲ್ಲಿ ರೈಲಿನಿಂದ ಇಳಿದ ನಾವು ಸಿಂಘ್ ಹೇಳಿದಂತೆ ಅವನಿರುವ ರೋಹಿಣಿಯಲ್ಲಿನ ಅಪಾರ್ಟ್ಮೆಂಟ್ ಗೇ ಹೊರಟೆವು.
ನನ್ನ ಬೆಳಗಿನ ಫೋನ್ ಗಾಗಿ ಕಾಯದೇ ಆತನೇ ನನ್ನ ಬಳಿ ಬಂದ.
ನಮ್ಮನ್ನು ಅವನದ್ದೇ ಆದ ಮಕಾನಿಗೆ ಕರೆದೊಯ್ದ.
ಅದು ಆತ ತನ್ನ ಬದುಕಿನೆಲ್ಲಾ ಸಂಪತ್ತನ್ನು ಧಾರೆಯೆರೆದು ಸಂಪಾದಿಸಿಕೊಂಡ ಮಹಲು.
ಮೇಲಿನ ಎರಡೂ ಅಂತಸ್ತನ್ನು  ಟ್ಯುಟೋರಿಯಲ್ಸ್ ಗಾಗಿ ಉಪಯೋಗಿಸುತ್ತಿದ್ದಾರೆ.
ಕೆಳಗಡೆಯ ಮನೆಯಿಂದ ಸಿಂಘ್ ಗೆ ಬಾಡಿಗೆ ಬರುತ್ತಿತ್ತು. ಈಗ್ಗೆ ಕೆಲವು ಸಮಯದಿಂದ ಖಾಲಿಯಿದ್ದಂತಿತ್ತು.
ತನ್ನ ಮಕ್ಕಳನ್ನು ಚೆನ್ನಾಗಿ ಪ್ರೀತಿ ಅಕ್ಕರೆಯಿಂದ  ತನ್ನೆಲ್ಲಾ ಪ್ರೀತಿ ಧಾರೆಯೆರೆದ ಸಿಂಘ ಅವರನ್ನು ದೊಡ್ದವರನ್ನಾಗಿ ಮಾಡಲು ತನ್ನೆಲ್ಲಾ ಆಸೆ ಆಕಾಂಕ್ಷೆಗಳನ್ನೂ ಬದಿಗೊತ್ತಿದ್ದ. ಕಲಿಯಲು ಹೆಚ್ಚೇನೂ ಆಸಕ್ತಿ ತೋರಿಸದಿದ್ದ ಅವರನ್ನು ತಮ್ಮ ಕಾಲ ಮೇಲೆ ನಿಂತುಕೊಳ್ಳುವಂತೆ ಮಾಡಲು ತನ್ನದೇ ಈ ಜಾಗದಲ್ಲಿ ಟ್ಯುಟೋರಿಯಲ್ ಒಂದನ್ನು ತೆರೆದಿದ್ದ.
ಮಕ್ಕಳು ಕಲಿತದ್ದಕ್ಕೆ ಹೊರಗಡೆ ಕೆಲಸ ಸಿಗದೇ ಇದ್ದರೂ  ಇಲ್ಲಿ ತಿಂಗಳಿಗೆ ನಲವತ್ತು ಐವತ್ತು ಸಾವಿರ ಸಂಪಾದಿಸುತ್ತಿದ್ದಾರೆ ಎನ್ನುತ್ತಿದ್ದ.
 ಸಿಂಘ ನ ಮಾತಿನಲ್ಲಿ ಅವನ ಮಕ್ಕಳ ಬಗೆಗೆ ಎಷ್ಟು ಹೇಳಿದರೂ ಕಡಿಮೆಯೆಂಬಂತಿತ್ತು. ಇಬ್ಬರೂ ತಂದೆ ತಾಯಿಯವರನ್ನು ದೇವರಂತೆ ಕಾಣುತ್ತಿದ್ದಾರೆ, ಇಂತಹ ಮಕ್ಕಳಿರುವುದೇ ತಂದೆ ತಾಯಿಯವರ ಭಾಗ್ಯ ಎಂದೆಲ್ಲಾ ಹೇಳುತ್ತಿದ್ದನಾದರೂ ಯಾವುದೋ ಒಂದು ಯೋಚನೆ ಆತನನ್ನು ಕಾಡಿದಂತಿತ್ತು.
"ನಮಸ್ತೇ ಭಾಭೀಜಿ ಹೇಗಿದ್ದೀರಾ..?"
 ನನ್ನ ಶ್ರೀಮತಿ ನಕ್ಕು ವಂದಿಸಿದಳು. "ನಿಮ್ಮ ಶ್ರೀಮತಿಯವರು ಹೇಗಿದ್ದಾರೆ ಅವರು ಯಾಕೆ ಬಂದಿಲ್ಲ"
  "  ಅವಳು ಬರುವ ಸ್ಥಿತಿಯಲ್ಲಿಲ್ಲ ,"   ಒಮ್ಮೆಲೇ ಅನ್ಯ ಮನಸ್ಕನಾದ ಕೇಸೀ.
"ರೈಲಿನಲ್ಲಿ ಬರುವಾಗಲೇ ನೀವು ಭಾಭೀಜಿ ಕಟ್ಟಿ ತಂದ ತಿಂಡಿಯೆಲ್ಲಾ ಮುಗಿಸಿರಬಹುದಲ್ಲಾ " ಎಂದ ಆತ ನನ್ನ ಉತ್ತರಕ್ಕೂ ಕಾಯದೇ.
"ಹತ್ತಿರದಲ್ಲೇಒಂದು ವೈಷ್ಣೋ ಧಾಭಾ ಇದೆ, ನಿಮಗೆಲ್ಲಾದರೂ ಹೊರಗಡೆ ಒಳ್ಳೆಯ ಶುದ್ಧವಾದ ಅಚ್ಚುಕಟ್ಟಾದ ರುಚಿಯಾದ , ತಿಂಡಿ ಊಟ ತಿನ್ನ ಬೇಕೆನಿಸಿದರೆ , ತೋರಿಸುತ್ತೇನೆ ಬಾ ,   ಎಂದು ಕರೆದೊಯ್ದಿದ್ದ
ನಮಗೆ ರೋಹಿಣಿಯಲ್ಲಿ  ಊಟ ತಿಂಡಿಗೂ  ಪರದಾಡ ಬೇಕಾದ ಪರಿಸ್ಥಿತಿಯಿರಲಿಲ್ಲ ನಿಜ . ಶ್ರೀಮತಿಗಂತೂ ಎಲ್ಲಾ ಕಡೆ ಸಸ್ಯಾಹಾರಿಗಳೇ  ಕಾಣಿಸಿದರಂತೆ. ಒಂದೇ ಒಂದು ಸಮಸ್ಯೆ ಎಂದರೆ ಎಲ್ಲಾ ಕಡೆ ಹೋಟೆಲ್ಲುಗಳು ಧಾಭಾಗಳು ಬೆಳಗ್ಗೆ ತೆರೆಯುವದೇ ಹತ್ತು ಹನ್ನೊಂದು ಘಂಟೆಯ ನಂತರ, ಇದೊಂದೇ ನಮಗೆಲ್ಲಾ ಬೆಳಗಿನ ದೊಡ್ಡ ತೊಡಕು.  ಬೆಳಿಗ್ಗೆ ಬೇಗ ಏಳುವ ಅಭ್ಯಾಸವಾಗಿದ್ದು,  ಇಲ್ಲಿನ ವ್ಯಾಪಾರಸ್ಥರ ರೀತಿಯ ರಾತ್ರೆ ತಡವಾಗಿ ಮಲಗಿ ಬೆಳಿಗ್ಗೆ ತಡವಾಗಿ ಏಳುವವರಲ್ಲವಲ್ಲ. ಹೊಟ್ಟೆಯ ಕೂಗು ಬೆಳಗಿನ ಎಂಟೂವರೆಗೇ ಬಂಬಡಾ ಬಾರಿಸುತ್ತಿರುತ್ತದೆ.
"ನಿಮ್ಮನ್ನು ನನ್ನ ಮನೆಗೇ  ಕರೆದು ಕೊಂಡು ಹೋಗಬಹುದಿತ್ತು.ಇವತ್ತು ನಮ್ಮ ಮನೆಯಲ್ಲಿ ಮಾಂಸಾಹಾರ, ಅಲ್ಲದೇ ಆದರೆ ಅಲ್ಲಿಯೂ ಈ ಟ್ಯೂಷನ್ ಹಾವಳಿಯಿದೆ. ನಿಮಗೆ ತೊಂದರೆ ಯಾಗಬಾರದಲ್ಲಾ,  ಬೇರೆ ಮನೆ ದೊರಕುವವರೆಗೆ ಇಲ್ಲಿಯೇ ಇರಿ"  ಎಂದಿದ್ದ ಕಾಳಜಿಯಿಂದ. ಕೇಸೀ.
"ಕೆ ಸಿ ನೀನು  ಇಷ್ಟು ಮಾಡಿದ್ದೇ ಹೆಚ್ಚು " ಎಂದೆಪ್ರೀತಿಯಿಂದ.
ಸಂಜೆ ನಾನೂ ನನ್ನ ಶ್ರೀಮತಿ  ಹೊರ ಸಂಜೆ ಯಾನ ಹೊರಟೆವು. ಹತ್ತಿರದಲ್ಲೇ ಕಂಡು ಬಂದ ಒಬ್ಬ ಪ್ರಾಪರ್ಟಿ ಡೀಲರ್ ಅಂಗಡಿಯಲ್ಲಿ ವಿಚಾರಿಸಿದೆವು. ಆತ ಬೆಳಿಗ್ಗೆಯೇ ಮೂರ್ನಾಲ್ಕು  ಮನೆ ತೋರಿಸುವ , ಅದರಲ್ಲೊಂದಾದರೂ ನಮಗೆ ಮೆಚ್ಚುಗೆಯಾಗುವ ಬರವಸೆಯಿತ್ತ.
ಶ್ರೀಮತಿಯನ್ನು ಮನೆಯ ಹತ್ತಿರ ಬಿಟ್ಟು ನಾನು ಸಿಂಘ್ ಮನೆಯತ್ತ ನಡೆದೆ.
ಹೋಗದಿದ್ದರೇ ಒಳ್ಳೆಯದಿತ್ತು ಅನ್ನಿಸುತ್ತಿದೆ ಈಗ.

೫. ಪ್ರಕೃತ

" ಯಾರನ್ನು ಕೇಳಿ  ಕೊಟ್ಟಿರಿ ನಮ್ಮ ಮನೆಯನ್ನು ನಿಮ್ಮ ಸ್ನೇಹಿತನಿಗೆ"

ಹಾಗಲ್ಲ ಮಗಾ, ಅವನು ನನ್ನ ಪ್ರಾಣ ಸ್ನೇಹಿತ , ನೀವೆಲ್ಲಾ ಸಣ್ಣವರಿರುವಾಗ ಎಷ್ಟು ಸಹಾಯ ಮಾಡಿದ್ದಾನೆ ಗೊತ್ತಾ..? " ಇದು ಕೇಸಿ ಯ ಸ್ವರವಲ್ಲವೇ..?

ನಾನು ಬಾಗಿಲು ತಟ್ಟಲು ಅನುಮಾನಿಸಿದ್ದೆ.

ಕಂಡರೂ ಕಾಣದಂತಿದ್ದ ತೆರೆದ ಬಾಗಿಲಿನ ಸಂದಿಯಲ್ಲಿ  ಮೇಜಿನ ಮೇಲಿದ್ದ ಅರ್ಧ ಮಧು ತುಂಬಿದ ಗ್ಲಾಸ್ ಮುಂದಿನ ಕಥೆ ಸಾರಿ  ಹೇಳುತ್ತಿತ್ತು.

"ನೋಡಪ್ಪಾ ನೀನೀಗ ನಮ್ಮ ಮೇಲೆ ಅವಲಂಬಿತ , ಅದಕ್ಕೇ ನಾನು ಹೇಳಿದಂತೆ ಕೇಳಲೇಬೇಕು.  ಹಿಂದೆ ನಡೆದದ್ದು,  ಮರೆತು ಬಿಡು ,ದೆಹಲಿಯಲ್ಲಿ ಬೇಕಾದಷ್ಟು ಮನೆಗಳಿವೆ ಬಾಡಿಗೆಗೆ, ಅವರಿಗೆ  ನಮ್ಮದೇ ಮಕಾನು ಅಗ ಬೇಕಂತಿಲ್ಲ, ನಾನು ಅದನ್ನು ನನ್ನ ಸ್ನೇಹಿತನಿಗೇ ಕೊಡುತ್ತೇನೆ."

"ಅಲ್ಲಾ.... ಅವನ ಋಣವೇ ಸಾಕಷ್ಟಿದೆ ತೀರಿಸಲು, ಮನೆ ಕೊಟ್ಟಾದರೂ ತೀರಿಸಬಹುದಲ್ಲಾ..., ನೋಡಪ್ಪಾ ನನ್ನ ಕಾರು ಮಾರಿದೆ, ನಾನೇನೂ ಹೇಳಲಿಲ್ಲ, ಅಮ್ಮನ ಹೆಸರಿಗಿದ್ದ ಮನೆಯನ್ನೂ ಮೋಸದಿಂದ ತಿಂದು ತೇಗಿದೆ, ಅದೇ ವ್ಯಥೆಯಿಂದ ಅವಳೂ ಕಣ್ಮುಚ್ಚಿದಳು.   ಅಂತಿಮ ಕಾಲಕ್ಕೆಂದು ಕೂಡಿಟ್ಟ ಹಣ ವನ್ನೂ ನೀರಿನಂತೆ ಖರ್ಚು ಮಾಡಿ ನಿನ್ನ ಚಟಗಳಿಗೆ ಬಲಿಯಾಗಿಸಿಕೊಂಡೆ"  ಕೇಸಿ ಮಾತನಾಡುತ್ತಾ ಆಡುತ್ತಾ ಗದ್ಗದಿತನಾಗಿದ್ದ.

"ಬಾಯ್ಮುಚ್ಚೋ ಮುದುಕಾ  ಸಾಕು ಮಾಡು ನಿನ್ನ ತಲೆ ಹರಟೆ....  ಊಟವಂತೂ ಸಿಗುತ್ತದಲ್ಲಾ....  ಬಿದ್ದಿರು ಮನೆಯ ಮೂಲೆಯಲ್ಲಿ, ನಾವು ಹೇಳಿದ ಹಾಗೆ ಕೇಳಿಕೊಂಡು "  ಕೈಯೆತ್ತಿದ್ದ ಆತನ ಮಗ ಮತ್ತೂ ಮುಂದೆ ಬಂದ.

ಇನ್ನು ಒಂದು ಕ್ಷಣವೂ ನಿಲ್ಲಲಾರೆ ಅನ್ನಿಸಿತ್ತು 
ಅಲ್ಲಿಂದ ಹೊರಬಂದೆ.
ಇವತ್ತು ಬಿದ್ದ ಕನಸಿಗೂ ಈ ಘಟನೆಗೂ ಮನಸ್ಸು ತಾಳೆ ಹಾಕಿತ್ತು.
ಈಗಲೂ ಕೇಸಿಯಲ್ಲಿ ಧೈರ್ಯ ತುಂಬಿ ಬದುಕನ್ನೆದುರಿಸುವ ಛಲ ತುಂಬ ಬಹುದೆನ್ನಿಸಿತ್ತು.
ಅವನು ತನ್ನ ವಿಶ್ರಾಂತಿ ಜೀವನ ಚೆನ್ನಾಗಿ ಕಳೆಯ ಬಹುದಾದಷ್ಟು.
ಹದ್ದು ಸಾಯುವರೆಗೆ ಒಂದೇ ಸಂಗಾತಿಯನ್ನು ಅವಲಂಬಿಸಿರುತ್ತದಂತೆ.
ಪ್ರಾಣಿಗಳಲ್ಲಿಯೂ ಸಹ ಬಾಳ್ವೆಯ ಚಿಂತನೆ ಕಂಡು ಬರುತ್ತದೆ.
ಕಮ್ಮಿಯೆಂದರೆ ಪ್ರಪಂಚದಲ್ಲಿನ ಕನಸು ಕಾಣುವ ಹಕ್ಕು ಮಾತ್ರ ಪ್ರಾಣಿಗಳಿಗೆ ಇರದದ್ದು,
ನಾವು ಕನಸು ಕಾಣುತ್ತೇವೆ ಆದರೆ ಎಂತಹಾ ವೈಪರೀತ್ಯ ನೋಡಿ .
ಪ್ರಾಣಿ ಪಕ್ಷಿಗಳ ಜೀವನದಲ್ಲಿ ಮಕ್ಕಳು ಮರಿಗಳ ಜವಾಬ್ದಾರಿ ಅವುಗಳನ್ನು ಬೆಳೆಸಿ ತನ್ನ ಅನ್ನ ಹುಡುಕಿಕೊಡುವ ವರೆಗೆ ಮಾತ್ರ ಸೀಮಿತ.
ಆದರೆ ನಮ್ಮಲ್ಲಿ....
ಮನುಷ್ಯ ಯಾಕೆ ಇಷ್ಟೊಂದು ಸ್ವಾರ್ಥಿಯಾಗುತ್ತಾನೆ.
ತನ್ನ ಹೆತ್ತವರನ್ನೇ ಕೊಲ್ಲುವಷ್ಟು.?
ಇದು ಬರೀ ಆಸೆಯಾ..?