Monday, November 19, 2012

ತ್ಯಾಂಪ ತ್ಯಾಂಪಿಯ ರೈಲು ಪ್ರವಾ (ಯಾ) ಸ


 


ಬೆಂಗಳೂರಿಗೆ ಹೊರಡುವ ರೈಲದು.
ಇವರು ಕುಳಿತ ಭೋಗಿಯಲ್ಲಿ ಬೇರೆ ಯಾರೂ ಇರಲಿಲ್ಲ. ಹೊರಡುತ್ತೆ ಅನ್ನುವಾಗ ಒಂದು ಜೋಡಿ ಅದೇ ಬೋಗಿ ಹತ್ತಿದರು.
ನಿಮ್ಮ ಹತ್ತಿರ ರಿಸರ್ವೇಶನ್ ಟಿಕೆಟ್ ಇದೆಯಾ ಮೇಡಮ್..?
"ನುಲಿಯುವುದ್ಯಾಕೆ..? ಟಿಕೆಟ್ ಇದ್ಯಾ ಅಂತ ಕೇಳಿದನಷ್ಟೇ, ನೀನು ಭಾರೀ ಚಂದ ಅಂತೇನೂ ಹೇಳಲಿಲ್ಲ ಆತ." ತ್ಯಾಂಪ ಬಿರುಸಾದ
"ಹೇಳದಿದ್ದರೇನು ಅವನ ಕಣ್ಣೇ ಅದನ್ನು ಹೇಳಿತ್ತು..." ಸುಲಭದಲ್ಲಿ ಬಿಡುವಳಲ್ಲ ತ್ಯಾಂಪಿ
"ಹೋ...ಅದೂ ಹ್ಯಾಗೆ ....ಗೊತ್ತಾಗುತ್ತದೋ ನಿನಗೆ" ತ್ಯಾಂಪ.
"ಮತ್ತೆ........ ಊರಲ್ಲಿ ಮಾವನ ಮಗನಿದ್ದನಲ್ಲ...... ಅವನೂ ಹೀಗೇ ಇದ್ದ"
"ಮತ್ಯಾಕೆ......." ಇಲ್ಲ ತ್ಯಾಂಪನ ಗಮನ ಬೇರೆ ಕಡೆ ಹೊರಳಿತ್ತು..
"ಮಿ ತ್ಯಾಂಫ್!!! ??"
ಇದಿರಲ್ಲಿರುವ ಸುಂದರಿಗೆ ತನ್ನ ಹೆಸರೂ ತಿಳಿದಿದೆ..
" ಹೇಳಿ"
"ನನಗೆ ಬೆಂಗಳೂರಿಗೆ ಹೋಗಲಿಕ್ಕಿದೆ, ಇಲ್ಲೇ ನಿಮ್ಮ ಪಕ್ಕದಲ್ಲೇ ಕೂತುಕೊಳ್ಳಬಹುದಲ್ಲಾ..?"
ತ್ಯಾಂಪನಿಗೆ ಸ್ವರ್ಗ ಮೂರೇ ಗೇಣು... ಆದರೆ....
ಮುಚ್ರೀ ಬಾಯಿನಾ...?? ನಾಲಿಗೆಯ ಎಂಜಲೂ ಹೊರ ಬೀಳ್ತಾ ಇದೆ" ತ್ಯಾಂಪಿಯ ಬಾಂಬು ಅದೂ ....ಅವನಿಗೆ ಮಾತ್ರ ಕೇಳಿಸುವಂತೆ.
ಮುಚ್ಚಿತ್ತು ಬಾಯಿ ಆದರೇನು ಕಣ್ಣು ತೆರೆದೇ ಇದೆಯಲ್ಲ.
"ಅದ್ಯಾಕೆ ಮೇಡಮ್ ಅವರನ್ನು ಕೇಳ್ತೀರಾ... ರೈಲು ನಮ್ಮದಲ್ಲ.. ನೀವು ಎಲ್ಲಿ ಬೇಕಾದರೆ ಕುಳಿತುಕೊಳ್ಳಿ ಆದರೆ ಇಲ್ಲಲ್ಲ... ಇದು ನನಗೆ ಮತ್ತು ಈ ನನ್ನವರಿಗೆ ಮಾತ್ರ ಮೀಸಲು.
ನೀವು ಇದಿರಿನ ಸೀಟಿನಲ್ಲಿರಿ."
ಅದೂ ಬೋನಸ್ಸೇ
ಅಲ್ಲಾ ನಿಮ್ಮೆಜಮಾನ್ರೂ...? ತ್ಯಾಂಪ
ಕಿಲಕಿಲಾ ನಕ್ಕಳಾಕೆ , ತಂಪಾದ ಗಾಳಿ ಬೀಸಿತು ಬೇಸಗೆಯ ತ್ಯಾಂಪನಿಗೆ
"ನನ್ನ ಯಜಮಾನರಲ್ಲ......ಅವರು"
ಮತ್ತೆ...... ???? ತ್ಯಾಂಪಿ
ಆದರೆ ಉತ್ತರ ಕೇಳುವ ಕುತೂಹಲ ತ್ಯಾಂಪನಿಗೆ.
ನಿಮ್ಮ ಬ್ರದರ್ರಾ..? ತ್ಯಾಂಪ
"ಅಲ್ಲ ಅವರು ನನ್ನ ಕಸಿನ್"
ಎರಡರಲ್ಲೂ ಅಂತ ವ್ಯತ್ಯಾಸ ಇದೆಯಾ...... ತ್ಯಾಂಪನ ಸಂಶಯ. ಆದರೂ ಯಾಕೋ ನಿರಾಳನಾದ.
"ಮತ್ತೆ ನಿಮ್ಮ ಜತೆ ಬರಲ್ಲವಾ ಅವರೂ...." ತ್ಯಾಂಪನ ಕಣ್ಣಲ್ಲಿ ...........ಎಂತದ್ದೋ ಛಾಯೆ.
"ಇಲ್ಲ ನನ್ನನ್ನು ಬಿಡಲು ಬಂದರಷ್ಟೇ, ಹೋಗುತ್ತಾರೆ ವಾಪಾಸ್ಸು..........ಯಾಕೆ .ಏನೂ ಹೆದರಿಕೆ ಇಲ್ಲವಲ್ಲಾ ಮಿ ಥ್ಯಾಂಫ್..?? ಯಾಕೆಂದರೆ ನಾನು ಮೊದಲ ಸಲ ಇದರಲ್ಲಿ ಬರುವುದು..."
ತ್ಯಾಂಪ್ ಒಮ್ಮೆಲೇ ಉಬ್ಬಿ ಸೂಪರ್ ಮ್ಯಾನ್ ಆದ.
"ಛೇ ಏನೂ ಹೆದರಿಕೆಯಿಲ್ಲ ಬಿಡಿ, ನಾನಿದ್ದೇನಲ್ಲ..........."
"ದಂಡಕ್ಕೆ......... "ತ್ಯಾಂಪಿ ಮುಗಿಸಿದ್ದಳು ತ್ಯಾಂಪನ ವಾಕ್ಯ.
"ಏನಂದ್ರೀ ತ್ಯಾಂಪಿ ಯವರೇ" ಕೇಳಿದಳಾಕೆ.
"ಏನಿಲ್ಲ ಬಿಡಿ ಅಂದ ಹಾಗೆ ನಮ್ಮ ಹೆಸರು ಹೇಗೆ ತಿಳಿಯಿತು ನಿಮಗೆ.".
"ಹೊರಗೆ ಪೇಪರಿನಲ್ಲಿ......"
ತನ್ನ ಹೆಸರು ಪೇಪರಿನಲ್ಲಿ ಬಂದಿತ್ತಾ....??? ಯಾವಾಗ..? ತನಗೇ ತಿಳಿಯದೇ ತಾನು ಯಾವಾಗ ಫೇಮಸ್ ಆದೆ
ಯಾವ ಪೇಪರಿನಲ್ಲಿ..?
ಅಲ್ಲಲ್ಲ ಹೊರಗೆ... ಈ ಭೋಗಿಯ ಮೇಲೆ ಅಂಟಿಸಿರುತ್ತಾರಲ್ಲ ರಿಸರ್ವೇಶನ್ ಚಾರ್ಟ್ ಪೇಪರಿನಲ್ಲಿ.....
ಹೋ ಅದಾ.... ತ್ಯಾಂಪಿ ಗಂಡನೆಡೆಗೆ ತಾತ್ಸಾರವಾಗಿ ನೋಡಿದಳು
ನೀವು ಎಲ್ಲಾ ಒಟ್ಟಿಗೇ ಇರುವುದಾ..?" ತ್ಯಾಂಪಿ
ಎಲ್ಲಾ ಅಲ್ಲ ತ್ಯಾಂಪಿಯವರೇ
ನಾನೂ ಕಸಿನ್ನೂ ಒಟ್ಟಿಗೇ ಇರುವುದು.
ಮನೆಯಾ..??" ತ್ಯಾಂಪಿ
ಅಲ್ಲಲ್ಲ ರೂಮು...
ಅಂದರೆ ಅವರು ನಿಮ್ಮ ದೂರದ ಅಣ್ಣನಾ..?"ತ್ಯಾಂಪಿ
ಅಲ್ಲಪ್ಪಾ
ಮತ್ತೆ ಮೊದಲು ಕಸಿನ್ನೂ ಅಂದ್ರಿ" ತ್ಯಾಂಪಿ
ಅದು...ನಾನೂ..
"ಇರಲಿ ಬಿಡೇ ನಮಗೇನು.........? ಈಗ ಬಂದ ತ್ಯಾಂಪ ನಡುವಿಗೆ, ತ್ಯಾಂಪಿ ಯ ಪೋಲೀಸ್ ತರಹದ ವಿಚಾರಣೆ ಹಿಡಿಸಲಿಲ್ಲ ಆತನಿಗೆ.. ಪಾಪ
ಅಂದ ಹಾಗೇ ನಿಮ್ಮ ಹೆಸರು ಮಿಸ್......!! ????????
ಭಾರೀ ಖುಷಿಯಲ್ಲಿ ಕೇಳಿದ ಹಾಗಿತ್ತೇ...??
"ಮಾಯಾ"
"ಚೆಂದದ ಹೆಸರು..".ತ್ಯಾಂಪ
ಅಂದ ಹಾಗೇ ನೀವು ಏನು ಕೆಲಸ ಮಾಡುವುದು...?
"ಮಾಯಾ..."
ಅಲ್ಲ ನಿಮ್ಮ ಹೆಸರಲ್ಲ.... ಮಾಯಾ ಅವರೇ...ನಿಮ್ಮ ಉ..."
ಅಷ್ಟರಲ್ಲಿ ಮಾಯಾ ಎದ್ದು " ಈಗ ಬರ್ತೀನಿ ಸ್ವಲ್ಪ ನನ್ನ ಸಾಮಾನು ನೋಡಿಕೊಂಡಿರಿ..!!" ಎಂದಳು.
"ನಿಮ್ಮ ಸಮಯ ತಗೊಳ್ಳಿ..........." ಇದರಲ್ಲೆಲ್ಲಾ ತ್ಯಾಂಪ ಧಾರಾಳಿ ಹೆಂಗರಳು ಪಾಪ
ಟಿ ಟಿ ಬಂದ

ತ್ಯಾಂಪ ಟಿಕೆಟ್ ತೋರಿಸಿದ.
"ಬೇರೆ ಯಾರೂ ಇಲ್ಲ ಅಲ್ವಾ ಇಲ್ಲಿ"
ತ್ಯಾಂಪಿ ಏನೋ ಹೇಳ ಹೊರಟಳು. ....ತ್ಯಾಂಪ ಸುಮ್ಮನಿರಿಸಿದ.
"ಒಳಗಡೆಯಿಂದ ಬಾಗಿಲು ಹಾಕ್ಕೊಳ್ಳಿ ರಾತ್ರೆ ಕಳ್ಳ ಕಾಕರ ತೊಂದರೆ ಇರುತ್ತೆ. ಇದರಲ್ಲಿಯಂತೂ ಸ್ವಲ್ಪ ಕಲಿತಿದ್ದವರ ಹಾಗೆ ಬಂದು ಟೋಪಿ ಹಾಕುವವರೇ ಜಾಸ್ತಿ. ಎಚ್ಚರವಾಗಿರಿ, ಶುಭರಾತ್ರೆ". ಅವರನ್ನು ಎಬ್ಬಿಸಿ ಹೊರಟು ಹೋದ. ಅವನ ಕೆಲಸವೇ ಅದು.
ತ್ಯಾಂಪನಿಗೆ ಹೇಳಿ ಜಬ್ಬರ್ ದಸ್ತೀ ಬಾಗಿಲು ಹಾಕಿಸಿದಳು ಅವನ ಅರ್ಧಾಂಗಿ.
ಸ್ವಲ್ಪ ಹೊತ್ತಲ್ಲಿ ಬಾಗಿಲ ಸದ್ದಾಯ್ತು.
"ಯಾರೂ..??" ಕೇಳಿದ ತ್ಯಾಂಪ
"ನಾನು ಮಾಯಾ.. ಮಿ ಥ್ಯಾಂಫ್"
"ಅರೆ... ಮಾಯಾ ಅಂತೆ" ಬಾಗಿಲು ತೆಗೆಯಲು ಹೋದ ತ್ಯಾಂಪ
"ಟಿಟಿ ಯವರು ಬಾಗಿಲು ತೆರೆಯಬಾರದೆಂದು ಹೇಳಿದ್ದರಲ್ವಾ ..." ತ್ಯಾಂಪಿ
"ಅಲ್ಲ ಅದೆಲ್ಲ ಅಪರಿಚಿತರಾದರೆ ಮಾತ್ರ...!!!"
"ನೀವೆಲ್ಲಿಗೆ ಹೋಗಿದ್ರೀ, ಮಾಯಾ...?? ಟಿ ಟಿ ಬಂದು ಹೋದ"
"ನಾನು ನೀರು ಕುಡಿಯಲು ಕೆಳಗಿಳಿದೆ ಅಷ್ಟರಲ್ಲಿ ರೈಲು ಹೊರಟಿತ್ತು, ಹೇಗೋ ಯಾವುದೋ ಭೋಗಿ ಹತ್ತಿದೆ, ಈ ಸಲ ಇಲ್ಲಿಗೆ ಬಂದೆ ಅದಕ್ಕೆ ತಡವಾಯ್ತು...." ಮಾಯಾ.
"ನಿಮ್ಮ ಹತ್ತಿರ ಟಿಕೆಟ್ ಇದೆಯಲ್ಲಾ....??" ತ್ಯಾಂಪಿ
"ಪ್ಲಾಟ್ ಫಾರಂ ಟಿಕೆಟ್ ತಗೊಂಡೇ ನಾನು ರೈಲು ಹತ್ತಿದ್ದು...."ಮಾಯಾ.
"ಪ್ಲಾಟ್ ಫಾರಂ ಟಿಕೆಟಾ..??"
"ಹಂಗಂದ್ನಾ ನಾನು ಅಲ್ಲಲ್ಲ ಪ್ಲಾಟ್ ಫಾರಂ ನಲ್ಲಿ ಟಿಕೆಟ್ ತೆಗೆದುಕೊಂಡು ನಾನು ಈ ಭೋಗಿ ಹತ್ತಿದ್ದು ಅಂದೆ, ಯಾಕೆ ತೋರಿಸಲಾ..?? "ಮಾಯಾ.
"ಬೇಡ ಬಿಡಿ..!! ಅದರ ಅಗತ್ಯವಿಲ್ಲ.." ಅಲ್ಲ ಇಷ್ಟು ಚೆಂದ ಇರುವವರ್ಯಾರಾದರೂ ಸುಳ್ಳು ಹೇಳ್ತಾರಾ...? ತ್ಯಾಂಪ
" ಮಿ ಥ್ಯಾಂಪ ರವರೇ ನೀವು ಹೇಗೆ ಮಲಗ್ತೀರಿ..? ಮೇಲಾ..?"ಮಾಯಾ.
"ಏನಂದ್ರೀ" ಕೇಳಿದ್ದನ್ನ ನಂಬಲಾರದೇ ಕೇಳಿದ ತ್ಯಾಂಪ
"ಅಲ್ಲ ನೀವು ಕೇಳಗಿನ ಬರ್ತ್ ನಲಿ ಮಲಗ್ತೀರಾ ಅಥವಾ ನಿಮ್ಮ ಶ್ರೀಮತಿಯವರಾ..ಅಂತ ಕೇಳಿದ್ದೆ ಅಷ್ಟೆ??ಮಾಯಾ.
ಅಷ್ಟೇನಾ..??' ತ್ಯಾಂಪ
"ನಾನು ದಿನಾ ತಡವಾಗಿಯೇ ಮಲಗುವುದು, ಆದರೆ ತ್ಯಾಂಪಿ ಸ್ವಲ್ಪ ಬೇಗ ಮಲಗ್ತಾಳಷ್ಟೇ, ಸರಿ ನೀನು ಮೇಲ್ಗಡೆ ಹೋಗಿ ಮಲಗೆ..". ಅಂದ ತ್ಯಾಂಪಿಗೆ.
" ಸ್ವಲ್ಪ ಸಾಮಾನೆಲ್ಲಾ ಜೋಪಾನವಾಗಿ ನೋಡ್ಕೊಳಿ, ಆ ಟೀ ಟಿ......"ತ್ಯಾಂಪಿ
"ನೀವು ಅದನ್ನೆಲ್ಲಾ ಮರೆತು ಬಿಡಿ ಮೇಡಮ್......" ಮಾಯಾ
"ಅಂದರೆ...??" ತ್ಯಾಂಪಿ
"ನಾನೂ ತ್ಯಾಂಪ ಅವರೂ ನೋಡ್ಕೋಳ್ತೀವಿ ಬಿಡಿ." ಮಾಯಾ
"ನೆನಪಿದೆ ಎಲ್ಲವೂ ನೀನು ನಿದ್ದೆ ಮಾಡು ಆರಾಮ್ ಆಗಿ...... ನಾನಿದ್ದೇನಲ್ಲ" . ತ್ಯಾಂಪ


ತ್ಯಾಂಪ ತ್ಯಾಂಪಿಯ ರೈಲು ಪ್ರಯಾಣ

(ಕೊನೆಯ ಭಾಗ)

ಕಾಫೀ ಕಫೇಯಾ... ಪೇಪರ್ ಪೇಪರ್, ಎಲ್ಲ ಶಬ್ದಗಳೂ ಕಲಸು ಮೇಲೋಗರವಾಗಿ ಕೇಳಿಸುತ್ತಿವೆ ತ್ಯಾಂಪಿಗೆ.
ಒಂದೇ ಕ್ಷಣ
ಓಹ್ ಅಂದರೆ ತಮ್ಮ ಗಮ್ಯ ಬಂತು.
ಬೆಂಗಳೂರು.. ಬಂತು
ಅಭ್ಯಾಸ ಬಲ.... ಮಲಗಿದ್ದಲ್ಲಿಂದ ತನ್ನ ತಲೆ ಪಕ್ಕ ಕೈ ಆಡಿಸಿದಳು.
ಇಲ್ಲ ಜಂಬದ ಚೀಲ ಅಲ್ಲಿರ ಬೇಕಾಗಿತ್ತು..
...
ಹಾಗೆಯೇ ಕಣ್ಣು ಪಕ್ಕದಲ್ಲೆಲ್ಲಾ ಹುಡುಕಾಡಿತು..
ಹತ್ತು ಲೀಟರ್ ನೀರಿನ ಸಂಗ್ರಹ ದಾನಿ, ಬಿಸಿಯಾಗಿಡೋ ಚೆಂಬು,ಎರಡು ಸೂಟ್ ಕೇಸುಗಳು, ಒಂದು ಕಿಟ್ ಬ್ಯಗ್,ಎಲ್ಲವೂ ಅದರದರ ಜಾಗದಲ್ಲಿದ್ದುವು, ತನ್ನ ಜಂಬದ ಚೀಲ ತನ್ನ ತಲೆಯ ಪಕ್ಕವೇ, ಇದ್ದವು ಎಲ್ಲಾ, ಸರೀ ನೆನಪಿತ್ತು, ಆದರೆ ಅದು ತಾನು ಮಲಗುವ ಮೊದಲು
ತ್ಯಾಂಪನಿಗೆ ಹೇಳಿಯೇ ಮಲಗಿದ್ದು..
. ಅಲ್ಲಿಲ್ಲ..
ಈಗ ಯಾವುವೂ ಕಾಣುತ್ತಿಲ್ಲ ಅವುಗಳ ಜಾಗದಲ್ಲಿ..
ತ್ಯಾಂಪ ಅರಮ್ ಆಗಿ ಮಲಗಿದ್ದ ಮಗುವಿನ ಹಾಗೆ, ಅವನು ಮಲಗಿದರೆ ಹಾಗೇ, ಯಾವ ಚಿಂತೆಯಿಲ್ಲ
ಆತನೂ ತಿಳಿಸಿದ್ದ
ಎಲ್ಲಿಯೋ ಭದ್ರವಾಗಿ ತೆಗೆದಿಟ್ಟಿರಬೇಕು..
ಜತೆಗೇ.. ನೆನಪಾಯ್ತು "ಆರಾಮ್ ಆಗಿ ಮಲಗು.. ನಾವಿದ್ದೇವಲ್ಲಾ ...’
ಆಗಲೆ ನೆನಪಾಗಿ ಆಕಡೆ ಕಣ್ಣು ತಿರುಗಿತು.
ಎಲ್ಲಿದ್ದಾಳೆ ಅವಳು ..ಆ ಮಿಟುಕಲಾಡಿ!!
ರ್ರೀ ಎಲ್ರೀ... ಏಳ್ರೀ... ಹೌದಾ..???
ಹೂಂ ತಡಿಯೇ....
ಬೆಂಗಳೂರು ಬಂತು
ಬಂದೇ ಬೀಡ್ತಾ..??
ಏಳ್ರೀ.. ಇಳೀರಿ ಕೆಳಗೆ
ಯಾಕೇ ಗಂಟಲು ಹರ್ಕೋತಾ ಇದ್ದೀಯಾ
ಎಲ್ಲಿ ನಮ್ಮ ಸಾಮಾನೂ...
ಸಾಮಾನೂ..??
ತ್ಯಾಂಪ ಕೊಂಚ ಅಧೀರನಾದ
ಹೌದೂ ನಮ್ಮ ಬ್ಯಾಗೆಲ್ಲಾ ಎಲ್ಲಿ..?? ಎಲ್ಲಿಟ್ಟೀದ್ದೀರಾ..?/
ನೀನೂ ಇಟ್ಟಲ್ಲೇ ಇರಬೇಕೂ...
ಅವಳೆಲ್ಲಿ ನಿಮ್ಮ ಪಾಪದ ಮಾಯಾ..??
ಅವಳೇ ಹಿಂದೆಯೇ ಇಳಿದು ಹೋದಳಲ್ಲ.. ಅವಳ ಸಾಮಾನೆಲ್ಲಾ ನಾನೇ ಕೆಳಗಿಳಿಸಿ ಕೊಟ್ಟಿದ್ದೆ, ನಮ್ಮಹತ್ರ ಇದ್ದ ಹಾಗಿನದ್ದೇ ನೀರು ಸಂಗ್ರಹ ದಾನಿ ಕೂಡಾ ಇತ್ತು ಅವಳ ಬಳಿ, ನಮ್ಮಿಬ್ಬರ ಯೋಚನೆ ಎಷ್ಟು ಸರಿಯಾಗಿ ಹೊಂದುತ್ತೆ ಅಂತ ಕೂಡಾ ಹೇಳಿದ್ದಳು.
ಹೋಯ್ತು..ನಮ್ಮ ಸಾಮಾನೆಲ್ಲಾ ಹೋಯ್ತು... ನೀವೇ ಅವಳಿಗೆ ಕೈಯ್ಯೆತ್ತಿ ಕೊಟ್ಟಿರಲ್ಲಾ.. ದೇವರೇ
ತ್ಯಾಂಪಿಯ ಅರಚಾಟ ಹಾಗೇ...
ಇಳಿಯಲೇ ಬೇಕಲ್ಲ
ಇಲ್ಲಾ ಕಣೇ ಹಾಗೆಲ್ಲಾ ಮಾಡುವವಳಲ್ಲ ಕಣೇ ಪಾಪ....
ತ್ಯಾಂಪಿಯ ದುಮು ದುಮು ನಡೆದೇ ಇತ್ತು.....
ಬಾಗಿಲಿಂದ ಕೆಳಗಿಳಿದರು...
ಬನ್ನಿ ಮನೆಗೆ ನಿಮ್ಮ...... ನೋಡ್ಕೋತೀನಿ..
ಅರೆರೇಏನಾಯ್ತು
ಸೀನಣ್ಣ
ಅರೇ ನನ್ನ ಬ್ಯಾಗ್ ನಿಮ್ಮ ಕೈಯಲ್ಲಿ ಹೇಗೇ..?
ಅದನ್ನ ನಾನು ಹೇಳ್ತೇನೆ...
"ಪೋಲೀಸ್ ಗಣೇಶ್..."
ಸುಮಾರು ದಿನದಿಂದ ನಾವು ಒಬ್ಬ ಮೋಸ ಮಾಡುವ ಹೆಂಗಸನ್ನ ಹುಡುಕುತ್ತಿದ್ದೆವು, ನಮ್ಮ ಸೀನನ ಕಾರಣದಿಂದ ಇವಳು ಸಿಕ್ಕಿ ಬಿದ್ದಳು.
ನಾನಲ್ಲ ಕಾರಣ, ನಿಜವಾಗಿ ತ್ಯಾಂಪ ನನಗೆ ಫೋನ್ ಮಾಡಿದ್ದ, ಆಗಲೇ ನನಗೆ ಸಂಶಯ ಬಂತು, ನಾನು ಗಣೇಶನ ಸಹಾಯದಿಂದ ಹಿಡಿದು ಬಿಟ್ಟೆವು. ಓಹ್ ತ್ಯಾಂಪನಾ....
ಹೌದೇನ್ರಿ....??ತ್ಯಾಂಪಿ.
ನಾನಾ..?? ನಿನಗೆ ಯಾವಾಗ..??
ಸೀನ ಕಣ್ಣು ಹೊಡೆದದ್ದು ಗಣೇಶ ಮಾತ್ರ ನೋಡಿದ್ದ...
ಆಗಲೇ.....
ಜತೆಯಲ್ಲಿ ಮಹಿಳಾ ಪೋಲೀಸ್... ಹಗ್ಗ ಕಟ್ಟಿಸಿಕೊಂಡ ಮಾಯಾ....
ತ್ಯಾಂಪನ ಕಥೆ ಸೀನನ ಎಂಟ್ರಿ ಜತೆ ಸುಖಾಂತ್ಯ.

No comments:

Post a Comment