Saturday, November 3, 2012

ತ್ಯಾಂಪನ ವ್ಯಾಲಂಟೈನ್ ಹಗರಣ


 
 

ಪ್ರೇಮಿಗಳ ದಿನ ಶನಿವಾರ ಬಂದಿತ್ತು.
ರಜೆ ಅಂತಾನೂ ತ್ಯಾಂಪಿಗೆ ಹೇಳದೇ ಹೊರ ಹೊರಟಿದ್ದ ತ್ಯಾಂಪ. 
ಬಸ್ ನಿಲ್ದಾಣಕ್ಕೆ ಬಂದ. ಅದೆಕೋ ಆಗಲೇ ಆತನ ಎದೆಯಲ್ಲಿ ನಗಾರಿ ಕುಟ್ಟಲು ಆರಂಭವಾಯ್ತು.
ಕಾರಣ ಒಂದು ಮಧುರ !!! ದನಿ
"ಮಿ..!!!"
ಅಚಾನಕ್ಕಾಗಿ ಪಕ್ಕಕ್ಕೆ ತಿರುಗಿದ ಈ ಮಿ!!......ತ್ಯಾಂಪ
ಎತ್ತಿ ಕಟ್ಟಿದ ತುರುಬು, ತಂಪು ಕನ್ನಡಕಾರಿಣಿ, ಲವ್ಲೀ ಧಿರುಸು... ಪ್ರೇಮೀ ದಿನಕ್ಕೆ ಹೇಳಿ ಮಾಡಿಸಿದ ಸಂಗಾತಿ..... ಯಾರೀಕೆ..???
ಯಸ್!! ಮಿ... ಮಿ..ತ್ಯಾ ...ತ್ಯಾಂಪ" ಎಂದ ಕುಟ್ಟುತ್ತಿದ್ದ ಎದೆ ನಗಾರಿಯ ತಹಬಂದಿಗೆ ತರಲೆತ್ನಿಸಿ.
ನನ್ನ ನೆನಪಾಗಲಿಲ್ವಾ??? ಮಿ. ಥ್ಯಾಂಪ್??" ಉಲಿದಳು ನಾರಿ ನಗುತ್ತಾ, 
ಅವಳು ನಕ್ಕಾಗ ಮಲ್ಲಿಗೆ ಜಾಜಿ ಸಂಪಿಗೆಗಳ ಪರಿಮಳ... 
ಏನೂ.....ನಗೋದಕ್ಕೂ .. ಹೂವಿನ ಪರಿಮಳಕ್ಕೂ ಯಾವ ಸಂಭಂಧ ಅಂತ ಕೇಳುತ್ತಿದ್ದೀರಾ,.... ಇರಲಿ ಬಿಡಿ.. ಅಂತಹ ಯೋಚನೆಗಳಿಗೆಲ್ಲಾ ಅವನ ತಲೆಗೆಲ್ಲಿ ಪುರುಸೊತ್ತು..???
"ನಾನು ಮಂಜುಳಾ,... ನಿಮ್ಮ ಸ್ನೇಹಿತ ನಾಗೇಶ್ ನ ಪತ್ನಿ, ಆ ದಿನ ನಮ್ಮಲ್ಲಿಗೆ ಬಂದಿದ್ರಲ್ಲಾ, ನನ್ನ ಕೈ ಅಡುಗೆ ತುಂಬಾ ಚೆನ್ನಾಗಿತ್ತೂ ಅಂದಿದ್ರಿ"
"ಯಾ....ವ.... ನಾಗ್...!!! ’ ಥಟ್ಟನೆ ಹಲ್ಲು ಕಚ್ಚಿಕೊಂಡ ತ್ಯಾಂಪ.. 
"ಹೋ... ಹೌದು... ಹೌದೌದು ನೆನಪಾಯ್ತು... ಹೇಗಿದ್ದಾರೆ.. ನಾಗೇಶ್, ತುಂಬಾ ದಿನಗಳಾದುವಲ್ಲ ಅವರನ್ನೂ, ನಿಮ್ಮನ್ನೂ ನೋಡಿ". ಎಂದ ಹಲ್ಲು ಕಿರಿಯುತ್ತಾ ಮುಂದುವರಿಸಿದ.
"ಅಂದ ಹಾಗೇ ಪ್ರೇಮಿಗಳ ದಿನದ ಶುಭಾಶಯ.. ನಿಮಗೆ ಮಂಜುಳಾ ಅವರೇ"
"ಮಿ. ತ್ಯಾಂಪ್, ನೀವು ಬರೇ ಕಂಜೂಸ್ ಕಣ್ರಿ, ಬರೀ ಶುಭಾಶಯ ಮಾತ್ರಾನಾ?? ಇನ್ನೇನಿಲ್ವಾ..?? 
ಅಂದರೆ..?? ತ್ಯಾಂಪನ ಗಾಡಿ ಅಷ್ಟು ಬೇಗ ಇಳಿಯಲ್ಲ ಟ್ರಾಕಿಗೆ.
ಪಕ್ಕದಲ್ಲೇ ಕಾಫೀ ಡೆ ಇರೋವಾಗ..??" ಅವಳೇ ಸಮಜಾಯಿಸಿದಳು.
ಅನಿಯಾರ್ಯವಾಗಿ ತ್ಯಾಂಪ ಹೇಳಲೇ ಬೇಕಾಯ್ತು.. " ಸ್ಸರಿ ಸ್ಸರಿ, ಅಷ್ಟೇತಾನೇ... ನಡೆಯಿರಿ", 
ತ್ಯಾಂಪ ಹಿಂದೆಯೇ ಹೊರಟ.
ಕಾಫಿ ಡೇ..!!! ನಿಜವಾದ ಕಾಫಿಯೊಂದನ್ನು ಬಿಟ್ಟು ಇನ್ನು ಏನ್ ಬೇಕೋ ಅದೆಲ್ಲಾ ಸಿಗುತ್ತೆ ಅಲ್ಲಿ.
ಪೇಮಿಗಳ ದಿನಕ್ಕಾಗಿ ವಿಶೇಷವಾಗಿ ಸಿಂಗರಿಸಿಕೊಂಡಿತ್ತು, ನೋಡಿದಲ್ಲೆಲ್ಲಾ ಕೆಂಪು ಕೆಂಪಿನ ರಿಬ್ಬನ್, ಕೆಂಪು ಗುಲಾಬಿಗಳ ಗುಚ್ಛಗಳು, ಹೃದಯದಾಕಾರದ ಬಲೂನುಗಳು, ಅಲ್ಲಿನ ಪ್ರತಿ ನೆಲ ಕಂಭ, ಮಾಡು ವಿಶೇಷವಾಗಿ ಸಿಂಗರಿಸಿಕೊಂಡಿದ್ದು, ತನ್ನದೇ ಆದ ವಿಶಿಷ್ಟ ( ಪ್ರೇಮ!?!!??)ದ ಘಮಲು ಆವರಿಸಿಕೊಂಡಂತಿತ್ತು, ಇದನ್ನೆಲ್ಲಾ ನೋಡುತ್ತಿರಲು ಆ ಮಂಜುಳಮಣಿಯ ಜತೆಯಲ್ಲಿದ್ದ ತ್ಯಾಂಪನಿಗೆ ನಿಜವಾದ ಮತ್ತೇರಲು ಶುರುವಾಯ್ತು. ಆಮೇಲೇನಾಯ್ತು ಅವನಿಗೆ ಗೊತ್ತಿಲ್ಲ, ಅವನಿಗೆ ನೆನಪಿದ್ದುದು ಬಿಲ್ಲ್ ತೆತ್ತದ್ದು ಮಾತ್ರ.
ಜತೆಗೆ ಅವನಿಗೆ ಗೊತ್ತಿಲ್ಲದುದು ಇನ್ನೊಂದೂ ವಿಷಯವಿತ್ತು. ಇವೆಲ್ಲವನ್ನೂ ಒಂದು ಜೋಡಿ ಕಣ್ಣುಗಳು ನೋಡುತ್ತಿದ್ದವು. 
ಅವು ಈತನ ಬಾಸ್ ಪತ್ನಿ ಕಲ್ಲೂರಾಮಿಯವು.

‍॓॓॓॓॓॓॓॓॓॓॓॓॓॓॓॓॓॓॓॓॓॓॓॓॓॓ ‍॓॓॓॓॓॓॓॓॓॓॓॓॓॓ ‍॓॓॓॓॓॓॓॓॓॓॓॓॓॓॓॓॓॓॓॓॓॓॓॓॓॓ ‍

ನಾನಲ್ಲವೇ ಕರೆದದ್ದು" ತ್ಯಾಂಪನ ಅಳಲು.
ಮತ್ತೆ ಅವಳೇ ಕರೆದ್ಲಾ?? ತ್ಯಾಂಪಿ.
" ಹೌದು ಕಣೇ , ಕಾಫಿ ಕುಡಿಯೋಣ ಬನ್ನೀ ಅಂದಳು, ನಾನು ಹೋದೆ’ತ್ಯಾಂಪ
ಅವಳು ಕರದ್ಲೂ ನೀವು ಹೋದ್ರಿ, .... ನನ್ನ ನೆನಪೂ ಅಗ್ಲಿಲ್ವಾ..??.ತ್ಯಾಂಪಿ
ಅದೇ .. ಅದಕ್ಕೇ ಹೋದೆ ಕಣೇ, ಅಲ್ಲ ನೀನು ಕರೆದ್ರೆ ನಾನು ಇಲ್ಲ ಅಂತೀನಾ, ಅಲ್ಲದೇ ಇವಳು ನಿನ್ನ ಬೆಸ್ಟ್ ಫ್ರೆಂಡ್ ಅಂದಿದ್ದಳಲ್ಲ.., ನಗಾಡ್ತಾ ಕರೆದ್ರೆ ಬೇಡ ಅನ್ನಕಾಗ್ಲಿಲ್ಲ ಕಣೇ..!!"
ತ್ಯಾಂಪಿಗೂ ಗೊತ್ತು ಗಂಡನ ವೀಕ್ನೆಸ್, ಯಾರೇ ನಗಾಡ್ತಾ ಕರದ್ರೂ ಆತ ಇಲ್ಲವೆನ್ನಲಾರ.
"ಸರಿ, ಕಾಫಿ ಕುಡದ್ರಿ, ಆ ಮೇಲೇನಾಯ್ತು..?" ತ್ಯಾಂಪಿ ಡಿಟೆಕ್ಟಿವ್
"ಆಮೇಲೆ ಸರ್ವರ್ ಬಿಲ್ಲ್ ತಂದಿಟ್ಟ."..ತ್ಯಾಂಪ
"ಸರಿ.....?!"
"ಅವಳು... ತನ್ನ ಹತ್ರ ಚಿಲ್ಲರೆ ಇಲ್ಲಾರಿ ಅಂದ್ಲು" ತ್ಯಾಂಪ
ಅದಕ್ಕೇ ನೀವೇ ಕೊಟ್ಬಿಟ್ರಾ...??"
ಹೌದು" ತ್ಯಾಂಪ
ಬಿಲ್ಲ್ ಎಷ್ಟಾಯ್ತು..?? ತ್ಯಾಂಪಿ.
ಬರೇ ಐನೂರು ಚಿಲ್ರೆ’
ಬರೇ... ಐನೂರು ಚಿಲ್ರೆ....?? ಅಲ್ಲರಿ ಬರೇ ಕಾಫಿಗೆ ಐನೂರು ಅಂದರೇನು ಸ್ಟಾರ್ ಹೋಟೆಲ್ ಕೆಟ್ಟೋಯ್ತಾ..??" ತ್ಯಾಂಪಿ
ಅದು ಐಸ್ ಕ್ರೀಮ್ ಕಾಫಿ ಕಣೇ..?? " ತ್ಯಾಂಪ
"ಅದಾದ್ರೂ ಎಷ್ಟಾಗುತ್ತೆ..?? ಅಬ್ಬಬ್ಬಾ ಅಂದ್ರೆ ನೂರೈವತ್ತಾಗುತ್ತಾ..???" ತ್ಯಾಂಪಿ
"ಅಲ್ಲಾ.... ಕಣೇ.. ಇದೂ..."
"ಹಾಂ... ಹೇಳೀ... ಇದೂ....???" ತ್ಯಾಂಪಿ
ಸ್ಪೆಷೆಲ್ ಕಾಫೀ ಕಣೇ, ವ್ಯಾಲಂಟೈನ್ ಸ್ಪೆಷೆಲ್ ಕಾಫೀ ಅದಕ್ಕೇ...??? ಕಡೆಗೂ ತ್ಯಾಂಪ, ಕಾರಣ ಹೇಳಲೇ ಬೇಕಾಯ್ತು.
"ತಡೀರಿ.. ನಾನೂ ಅವಳ ಗಂಡನಿಗೆ ಈಗ್ಲೇ ಫೋನ್ ಮಾಡ್ತೀನಿ..!!" ತ್ಯಾಂಪಿಯ ಟಿಟ್ ಫ಼ಾರ್ ಟ್ಯಾಟ್.
ಯಾ... ಯಾಕೆ?" ತ್ಯಾಂಪ.
ನಾನೂ.... ಅವರನ್ನ..... ಕಾಫಿ ಕುಡಿಯೊಕ್ಕೆ ಕರಿತೀನಿ" ತ್ಯಾಂಪಿ.
"ರಮೇಶ್ ನಿನ್ನ ಜತೆ ಬರಲಿಕ್ಕಿಲ್ಲ ಬಿಡು" ತ್ಯಾಂಪ.
ನಿಮ್ಮ್ನು ಕರೆದದ್ದು ಲಕ್ಷ್ಮಿ ಅಲ್ಲವಾ ಹಾಗಾದರೆ..??" ತ್ಯಾಂಪಿ
ನಾಲಿಗೆ ಕಚ್ಚಿಕೊಂಡ ತ್ಯಾಂಪ, ತನ್ನ ತಪ್ಪು ಗೊತ್ತಾಯ್ತು.....ಲಕ್ಷ್ಮಿ ಅಂದನಾ ತಾನೂ "ಅಲ್ಲಲ್ಲಾ.... ಇವಳು ಗಾಯತ್ರಿ ಕಣೇ"
"ಥೂ.... ನಿಮ್ಮ... ಹಂಗಾರೆ.... ಗ್ಯಾರಂಟೀ ನೀವೇ ಕರೆದಿರಬೇಕು, ಕಾಫಿಗೊ ಅಥವಾ... ಇನ್ನೆಲ್ಲೋ..???
" ಅರೆರೆ....ನಿಂಗೆ ಹೇಗೆ ಗೊತ್ತಾಯ್ತು" ತ್ಯಾಂಪ ತ್ಯಾಂಪನೇ..
ಬಾಂಬ್ ಸಿಡಿಯಿತು.." ಹೌದಾ ಗಂಡಾ... ಅವಳ ಜತೆ ಸಿನೇಮಾ ಬೇರೆ ನೋಡಿದ್ರಾ..? ಯಾವ ಸಿನೇಮಾ..?? 
"ಇಲ್ಲ ಕಣೇ ಪ್ರಾಮಿಸ್... ಬರೇ ಸಿನೇಮಾ ಮಾತ್ರ ನೋಡಿದ್ವಿ, ಅದು....ಇಬ್ಬರು ಹೆಂಡಿರ ಮುದ್ದಿನ ಗಂಡ" ತ್ಯಾಂಪಿಯ ಮುನಿಸಿನ ಬಾಂಬ್ ಗೆ ತ್ಯಾಂಪ ತಣ್ಣಗಾದ.
"ಆಣೆ ಮಾಡಿ..ನನ್ನ ಕೊಂದ್ ಹಾಕಬೇಡಿ...ಸಿನೇಮದ ಹೆಸರು ನೋಡೂ.... ಆ ಕಲ್ಲೂರಾಮಿ ಹೇಳಿದಾಗಲೇ ಅಂದ್ಕೊಂಡಿದ್ದೆ, ನೀವು ಇದಿರಿಗೆ ಇದ್ದ ಹಾಗೆ ಅಲ್ಲ ಅಂತ"
ತಡೀರಿ ಯಾವ ಹುತ್ತದಲ್ಲಿ ಯಾವ ಹಾವೋ.. ಎಲ್ಲಾ ಹೊರಗೆ ಬರಲೇಳಿ, ಈಗಲೇ ಫೋನ್ ಮಾಡ್ತೇನೆ ಅವಳಿಗೆ.."
....................
"ಲಕ್ಷ್ಮೀ ..ನಾನ್ ಕಣೇ...ತ್ಯಾಂಪಿ, ಹೌದೂ ..ನೀನೆಲ್ಲಾದರೂ ಹೊರಗಡೆ ಹೋಗಿದ್ಯಾ.. ಈ ಶನಿವಾರ"
"ಇಲ್ಲವಲ್ಲಾ ತ್ಯಾಂಪಿ .. ಏನ್ಸಮಾಚಾರ..?" ಲಕ್ಷ್ಮಿ
ಅಲ್ಲ ನನ್ ಯಜಮಾನರನ್ನ ನೋಡಿದ್ಯಾ..??ತ್ಯಾಂಪಿ.
"ಇಲ್ಲ ಕಣೇ... ಆದರೆ ನಳಿನಿ ಏನೋ ಹೇಳ್ತಾ ಇದ್ದಳಲ್ಲಾ..!!!" ಲಕ್ಷ್ಮಿ
"ಏನಂದ್ಲೂ..?? ತ್ಯಾಮ್ಪಿ.
"ಅವ್ಳು ....... ಅದೇ ಶನಿವಾರ ಅವ್ಳು ಮಾಲ್ ನಲ್ಲಿ ತ್ಯಾಂಪ ರನ್ನು ನೋಡಿದ್ಲಂತೆ ಜತೆಗೆ ಯಾರೊ ಇದ್ರಂತೆ..??

"ತಡೀ ಲಕ್ಷ್ಮೀ.ಒಂದ್ನಿಮ್ಷ.... " ತ್ಯಾಂಪನೆಡೆ ತಿರುಗಿ ".. ರೀ ಶನಿವಾರ ನಿಮಗೆ ಆಫೀಸ್ ಇತ್ತಲ್ವಾ..??" ಏನಂದಾನು ತ್ಯಾಂಪ, ತನ್ನ ತಲೆ ಅಲುಗಾಡಿಸೋದನ್ನು ಬಿಟ್ಟು!!!!
ಹೌದಂತೆ ಲಕ್ಷ್ಮೀ.. ಇಡ್ತೀನಿ ಫೋನೂ..!!
ಅಫೀಸ್ ಇತ್ತು ಅಂದ್ರಲ್ಲಾ... ಮತ್ತೇನ್ರೀ ಈ ಹೋಟೆಲ್ ವಿಷ್ಯಾ..??
ತ್ಯಾಂಪ ತಡಬಡಾಯಿಸಿದ್ನಾ!!! " ಹೌದೇ ನಾನೂ ನಾಗೇಶೂ ಗೋಪಾಲಾ ಅಫೀಸಿಂದೇ ಪ್ಲಾನ್ ಮಾಡಿದ್ವಾ,.... ನೀನ್ ಬೇರೆ ಏನೋ ಫಂಕ್ಷನ್ ಇದೆ ಅಂದಿದ್ದೀಯಲ್ಲಾ ಆವತ್ತು, 
ಅದಕ್ಕೆ ಅವರೆಲ್ಲಾ ಅವರವರ ಫ್ಯಾಮಿಲೀ ಜತೆ ಬಂದಿದ್ರೂ... ನಿನ್ನ ನಳಿನಿ ಅದೇ ನೋಡಿ ಹೇಳಿರಬೇಕೂ.. ನಾವೆಲ್ಲಾ ಒಟ್ಟಿಗೇ ಇದ್ವೀ.."
ಸಾರಿ ಕಣ್ರಿ... ನಾನು ಎನೇನೋ ಹೇಳ್ಬಿಟ್ಟೆ.. ಬೇಸರವಿಲ್ಲ ತಾನೇ..??
’ಇರಲಿ ಬಿಡು ಚಿನ್ನಾ" 
ತಪ್ಪಿತು ಬೀಸುವ ದೊಣ್ಣೆ ಎಂದುಕೊಂಡ ಖುಷೀಯಾಗಿ ತ್ಯಾಂಪ............ನಿಜವಾಗಿಯೂ ಹೌದಾ..??

ಟ್ರಿಣ್ಣ್ಣ್ಣ್ಣ್ಣ್ಣ್ಣ್ಣ್ಣ್ಣ್ಣ್ಣ್ಣ್ಣ್ಣ್ಣ್ಣ್ಣ್ಣ್ಣ್ಣ್ಣ್ನ್ 

ಈ ಸಾರಿ ಫೊನೂ.... ಲಕ್ಷ್ಮಿಯದ್ದೆ..

ಹಾಂ ಹೇಳು ... ಲಕ್ಷ್ಮೀ"

ಅಲ್ಲ ಕಳೆದ ಶನಿವಾರ ಮಧ್ಯಾನ್ನ ಊಟಕ್ಕೆ ನಿನ್ನ ಕರೆದಿದ್ದೆನಲ್ಲ, ನೀನೂ ಏನೇನೋ ಸಬೂಬು ಹೇಳಿದ್ಯಲ್ಲಾ, 

"ಹೌದೂ" ತ್ಯಾಂಪಿ.
" ಆ ದಿನ ಆಫೀಸಿಗೆ ರಜೆ ಇತ್ತಲ್ಲಾ... ಅದಕ್ಕೇ.. ಊಟಕ್ಕೆ ನಾಗೇಶೂ, ಗೋಪಾಲ ಅವರವರ ಮನೆಯವರೆಲ್ಲರೂ ಬಂದಿದ್ದರು, ಎಂತಹ ಪಾರ್ಟಿ ಆಯ್ತು ಗೊತ್ತಾ, ನೀನೂ ಬಂದಿರ ಬೇಕಿತ್ತು." ಲಕ್ಷ್ಮಿ.
ತ್ಯಾಂಪಿಯ ತಲೆ ಗಿರ್ರೆಂತು.." ಏನಂದೇ..ಕಳೆದ ಶನಿವಾರವಾ.. ಅದೇ ವ್ಯಾಲಂಟೈನ್ ದಿನ ಅಲ್ವಾ.... ನಿನಗೆಲ್ಲೋ ಕನ್ಫ್ಯೂಸ್ ಆಗಿರಬೇಕು, ಆದಿನ ಆಫೀಸ್ ಇತ್ತಲ್ವಾ" ತ್ಯಾಂಪಿ 
"ಇಲ್ಲಮ್ಮಾ, ಆಫೀಸ್ ರಜೆ ಇತ್ತು....ಅದೇ ದಿನ ನಮ್ಮವರ ಬರ್ತ್ ಡೇ ಕೂಡಾ ಇತ್ತು.. ಅದ್ಕೇ.. ನಿಂಗೆ ಹೇಳಿದ್ನಲ್ಲಾ.............."
ಆಯ್ತು... ಅವಳು ಏನೇನೋ ಹೇಳುತ್ತಿದ್ದುದನ್ನೂ ಕೇಳದೇ ಫೋನು ಕೆಳಗಿಟ್ಟೇ ಬಿಟ್ಟಳು ತ್ಯಾಂಪಿ..... ಕೋಪದಿಂದ ಕುದಿಯುತ್ತಾ......"ಅಂದರೆ ಇವರು..."....ತ್ಯಾಂಪನಿದ್ದ ಕಡೆ ತಿರುಗುಗಿದಳು."" "ಯಾಕ್ರೀ...................??? " ಸಿಡುಕಿದಳು ಕೆಂಡಾಮಂಡಲವಾಗಿ. 
ಆದರೆ.......ಎಲ್ಲಿದ್ದಾನೆ ಆತ.........ತ್ಯಾಂಪ..
ಪಾ.........ಪ!!! 
ಈ ಸಾರಿ..??? ಅಲ್ಲ ಬಿಡಿ.!!!!

No comments:

Post a Comment