Monday, January 30, 2012



ಅಕ್ಕಿ ಮುಡಿ ತಿರಿ ಮತ್ ಹರಿ ಪ್ರಸಾದ್ ನಾಡಿಗ್ರ್

ಆಫೀಸಿನ ಹೊರಹೋಗಲು ಒಂದು ಹೆಜ್ಜೆ ಇಟ್ಟಿದ್ದೆ ಅಷ್ಟೇ. ನನ್ನ ಕರವಾಣಿ ಗುರ್ರಾಯಿಸಿತು. ಹೊರಗಡೆಯ ಮಳೆಯನ್ನೂ ಗಮನಿಸದ ಹಾಗೆ ಹೊಸ ನಂಬರ್.
ಆಫೀಸಿಂದ ಮನೀಗ್ ಹೋಪುಕೆ ಅಂದ್ ಹೇಳಿ ಎರ್ಡ್ ಹೆಜ್ಜೆ ಇಟ್ಟಿದ್ದೆ ಅಷ್ಟೇ.....ನನ್ನ್ ಕೈಯಂಗಿದ್ ಕರ್ಕರೆ ವಾಣಿ ಅರ್ಜಿ ಗುಜ್ರಾಯ್ಸ್ತ್. ಕಂಡ್ರ್ ಹೊರ್ಗ್ ಜೋರ್ ಜಿರಾಪತಿ ಮಳಿ. ಹೊಸ ನಂಬ್ರ...
" ಹಿಲ್ಲೋ" 
ಸ್ವರ ಕೇಂಡ್ರೆ ಗೊತ್ತಾಯ್ತ್ !!!   "ಸೀನ!!!"
"ಎಂತ ಕಥಿ ಮಾರಾಯ ಈಚಿ ಸಿಕ್ಲೇ ಇಲ್ಲೆ"  ಅಂದೆ
"ನಿಮ್  ಬದಿಯೇ ಬರ್ತಾ ಇದ್ನಾ , ಕಾಮ್ಬೊ ಮನಿ ವಿಳಾಸ ಹೇಳ್  "  ಹೇಳ್ದೆ.
ಹತ್ರದಲ್ಲೇ ಎಲ್ಲೋ ಬರ್ತಾ ಇದ್ದ.
ಕಂಡ್ರೆ ಎದ್ರಂಗೇ ಮಳೆಯಲ್ಲೇ ನೆನ್ಕಂಡ್ ಬರ್ತಾ ಇದ್ದ, ಕೈಯಲ್ಲ್ ಕೊಡಿಯೂ ಮಡ್ಸಂಡೇ ಇತ್
ಎಂತಕಾ, ಕೊಡಿ ಬಿಡ್ಸೂಕ್ ಆಯಿಲ್ಯಾ..?ನಂಗ್ ಹೇಳ್ರ್ ಮಳಿಕೋಟ್ ಆರೂ ತತ್ತಿದ್ನಲ್ಲೆ ಮರಾಯಾ..?
ಅದೂ ಇತ್ತಾ ಈ ಬ್ಯಾಗಂಗೆ..!!
"ಮತ್ತೆ ಕೊಡಿಯೂ ಇತ್, ಬಿಡ್ಸಲ್ಲೆ, ಮಳಿ ಕೋಟೂ ಇತ್ , ಅದನ್ನೂ ಹಾಯ್ಕಣಲ್ಲೆ ಎಂತ ಕಥೆ ಮಾರಾಯಾ...?
ಇಲ್ಯಾ, ಬೇಜಾ...ರಾಯ್ತಾ..!!, ಯಾರ್ ಮೇಲಾ..?  ನನ್ ಮೇಲಾ...........?
ಅಲ್ದಾ, ಬೆಂಗ್ಳೂರ್ ಮಳಿ  ಮೇಲಾ...!!
ಅಲ್ಲನಾ, ಯಂತ ಮರಾಯಾ ಬೆಂಗ್ಳೂರ್ ಮಳೆ ಅಂದರೆ ಹೊತ್ತಿಲ್ಲ ಗೊತ್ತಿಲ್ಲ!!! ಕೊಡೆ ಬಿಡಿಸೋದ್ರಲ್ಲಿ ನಾನು ಪೂರಾ ಒದ್ದೆ!! ಅಲ್ಲ ಸ್ವಲ್ಪ ಬಿಟ್ಟರಾತಿಲ್ವಾ?
ಸಿಟ್ಟೇ ಬಂತು. ಎಷ್ಟು ನೆನಸ್ತೆ ಕಾಂಬೋ,  ಅಂತೇಳಿ ಇನ್ನು ಬಿಡ್ಸಿದ್ರೇನು? ಬಿಟ್ಟರೇನು ಅಂತ ಹಾಗೇ ನೆನ್ಕೊಂಡು ಬಂದೆ.
"ಅಂದ ಹಾಗೇ ಯಾಕೋ ಈಕಡೆ?"
"ಯಾಕೆ ಬರ ಬಾರದಾ?"
"ಹಾಗಲ್ಲಪ್ಪಾ ಮಾತಿಗೆ ಕೇಳ್ದೆ."
"ಮೊನ್ನೆ ಮೊನ್ನೆ ನಾಡಿಗರು ಸಿಕ್ಕಿದ್ರು"
ಯಾರು?
"ಅದೇ ಸಂಪದದವರು"
ಎಲಾ  ಇವ್ನ, ನಾನು ಬೆಂಗಳೂರಿಗೆ ಬಂದು ನಾಲ್ಕು ವರ್ಷ ಆಯ್ತು ನನಗಿನ್ನೂ ಅವರ ಭೇಟಿಯ ಭಾಗ್ಯ ಸಿಕ್ಕಿಲ್ಲಾ, ಇವನಿಗೆ ಹೇಗೆ ಸಿಕ್ಕಿದರು?
ಅರೇ ಸಂಪದ ನಿಂಗೆ ಗೊತ್ತಾ?
ಗೊತ್ತಿಲ್ದೇ ಏನು ? ನಂಗೆ ಸಂಪದದ ಎಲ್ಲಾರೂ ಗೊತ್ತು!! ಏನು ನಾಲ್ಕ ಅಕ್ಷರ ಬರೆದ್ರೆ ಮಾತ್ರ ಗೊತ್ತಗೋದೊ ಅಂದ್ಕಂಡಿದ್ದೀಯಾ?
ಅದಿರಲಿ ಇನ್ನೊಂಸರಿ ಎಲ್ಲಾ ಕೇಳ್ತೇನೆ, ಈಗ ವಿಷಯ ಹೇಳು
ಅದೇಕಳೆದ ಸಾರಿ ಅವರು ಊರ ಕಡೆ ಬಂದು ಚೆನ್ನೆ ಮಣೆ ,ಮೊರ ಚರಿಗೆ, ಕಲ್ಲು ಬಾನಿ, ಕಲ್ಮರಿಗೆ, ಸಾಂಬಾರ್ ದಾನಿ ಎಲ್ಲಾ ಫಟ ತೆಕ್ಕೊಂಡ್ ಬಂದಿದ್ದರಲ್ಲ
ಅದರಲ್ಲಿ ಅಕ್ಕಿ ಮುಡಿ ಮತ್ತು ತಿರಿ ಫಟಕ್ಕೆ ಸಿಕ್ಕಿರಲಿಲ್ಲ, ಅದಕ್ಕೇ ಇನ್ನೋದ್ಸಾರಿ ಬೆಂಗ್ಳೂರಿಗೆ ಬಂದ್ರೆ ಬಾ ಅಂದಿರಲ್ಲೆ ಅವರನ್ನು ಕರೀಲಿಕ್ಕೇ  ಬಂದಿದ್ದೆ.
...???? ಪುಣ್ಯ ಮತ್ತೊಮ್ಮೆ ಕರೆವಾಣಿ ಮಾತಾಡಿತು.
"ಸೀನನ ಧರ್ಮ ಪತ್ನಿ!!!           ಮಿಸ್ ಅಲ್ಲಾ ಮಿಸ್ಡ್  ಕಾಲ್
ನಾನು ಕರೆ ಮಾಡಿದೆ
" ಅಣ್ಣಾ ಅವ್ರ್ ಅಲ್ಲೇ ಇದ್ರಾ ಈಗ?"
ಕಾಣಿ ಎಂತಾ ಪರ್ಫೆಕ್ಟ್ ಟೈಮಿಂಗ್!!!    ಕೊಟ್ಟೆ ಸೀನಂಗೆ
 ಆಯ್ತೇ , ಅಕ್ಕೇ ಅಂಬ್ದ್ ಮಾತ್ರ ಗೊತಾಯ್ತ್.,
 "ಎಂತ ಅಂಬ್ರಾ , ಕಳ್ಸಾರಿ ಕೊಟ್ಟ್ ಪೌಡರ್ ಬೇಕ್ ಅಂಬ್ರಾ??  "
ಕಳ್ಸಾರಿ ಮಂಜು ಕೊಟ್  ಮೂರ್ನಾಕ್ ಪೌಡರ್ ಡಬ್ಬಿ ಇದ್ದೀತ್ ಅದನ್ನೇ ಕೊಟ್ಟಿದ್ದೆ ಮೊನ್ನಿ ಊರ್ ಕಡಿ ಹೋದಾಗ್ಳಿಕೆ..
ಅದ್ರ್ ಮಾತೆತ್ತ್ ಬೇಡ್ ನೀನ್ ಎಲ್ಲಾ ಆ ಡಬ್ಬೀದೇ ಹರಿಕಥಿ !!! ಏಮ್ತ್ ಆಯ್ತ್ ಅಂದೇಳಿ ಅವ್ಳ್ ಕತ್ರವೇ ಕೇಣ್!!
ಅದಕ್ಕೂ ನಂದೇ ಖರ್ಚ್
"ಅದೇ ಕಳೆದ ಸಾರಿ ಕೊಟ್ಟಿದ್ರಿಯಲ್ಲೆ ಎಲ್ಲಿಗ್ ಹೋಪ್ದಾದ್ರೂ ಅದೇ ಪೌಡರ್ ಇವ್ರಿಗೆ ಚವ್ಣಿ  ಜಂಬ್  ನಂಗಂತೂ ಅದನ್ ಕಂಡ್ರ್ ಆತಿಲ್ಲೆ. 
ಹಾಕ್ಕಂಬ್ದ್ ಅಂದ್ರೆ ಮುಕ್ಕಾಲ್ ಪಾಲು ನೆಲಕ್ಕೆ ಕಾಲ್ ಭಾಗ ಎದಿಗೆ. ಕಾಲೂರಿದರೆ ಜೊಯ್ ಜಾರುದು. ಮೊನ್ನೆ ಬಿದ್ದ ನಾನು ಸುಧಾರ್ಸ್ಕಂಬಕೆ ಹದ್ನೈದ್ ದಿನ ಅಯ್ತ್."
"ಆಯ್ತು ನಾನು ಅವ್ನಿಗೆ ಹೇಳ್ತೆ"
" ಎಂತ ಈಗ ಹೇಳೂದ್ ನೀವ್? ನಿನ್ನೆ ನಿಮ್ಮಲಿಗ್ ಹೊರ್ಡುವತಿಗ್ ಪುನಃ, ಈ ಸಲಿ ಬೆಡ್ ರೂಮಲ್ ಬ್ಯಾಡ ಅಂದ್ ಹೇಳಿ ಬಾಥ್ ರೂಮಿನ್ ಬಾಗ್ಲ್ ಎದ್ರಿಗ್ ಬೇಸನ್ ಇತ್ತಲ್ಲೆ ಅಲ್ಲೇ ಇಟ್ಟಿದ್ದೆ ಅದೇ ಪೌಡರ್ ಡಬ್ಬೀನ, ಮತ್ ಅದೇ ಹಣೆ ಬರಹ, ಆ ಪೌಡರ್ ಮೇಲೆ ಕಾಲಿಟ್ಟ್ ಬಿದ್ನೆ. ಈ ಸಲಿ ಏಳುವತಿಗ್ ಹಿಡ್ದ್ ಬೇಸನ್ ನನ್ ಮೇಲೇ ಬಿದ್... ಪುಣ್ಯಕ್ಕೆ ಮನಿಯೋರ್ ಬಂದ್ ಆಸ್ಪತ್ರಿಗ್ ಸೇರ್ಸಿದ್ರ್.
ಇನ್ ಜನ್ಮದಗೂ ತರಬೇಡಿ ಅಂದ್ ಹೇಳೂಕೇ ಈ ಫೋನ್ ಮಾಡದ್ದೆ....

ಎಂತ್ ಇಲ್ಯೇ...
ಮುಂದಿನ್ ಕ್ಷಣದಂಗೇ ನಾನೂ ಶೀನ್ ನೂ ಕೆಂಪೇ ಗೌಡ ಬಸ್ ಸ್ಟ್ಯಾಂಡ್ ಕಡಿಗೆ.....

ತ್ಯಾಂಪ್ನ್ ಕಥಿ ಹೈಲ್ ಆಯ್ತೇ

ತ್ಯಾಂಪ್ನ್ ಕಥಿ ಹೈಲ್ ಆಯ್ತೇ

ಅರ್ಥ ಇತ್ತೇ..?
ಕಳೆದ ತಿಂಗಳಲ್ಲಿ ೪-೫ ಸಲ ಕನ್ನಡ್ಕ ಬದ್ಲಾಯ್ಸಿದ್ರ್ ಇವ್ರ್
ಯಾಕೆ ಅಷ್ಟ್ ಬೇಗ್ ಅವ್ನ್ ಕಣ್ಣ್ ಹಾಳಾಯ್ತಾ?
... ಅಲ್ದೇ... ಕಳ್ದ್ ಹಾಕೂದೇ, ಮುಖ ತೊಳುಕಂದೇಳಿ ಹೋಪುದ್, ಕೆಳ್ಗ್ ಬೀಳ್ಸಿ ಒಡ್ದ್ ಹಾಕೂದ್, ಅದ್ ಅಲ್ದಿದ್ರೆ ಎಲ್ಲಂದ್ರೆ ಅಲ್ ಬಿಟ್ ಬಪ್ಪೂದ್
ಅಲ್ಲಾ ದಿನಾ ತಂದ್ ಪೂರೈಸೂದಾ..? ನೀವೇ ಹೇಳಿ ಕಾಂಬೋ ..?
ಅದಕ್ಕೇ ಕಣ್ಣೋಳ್ಗ್ ಇಡೂದ್ ಇತ್ತಲೆ... ಎಂತ ಅಂತ್ರ.. ಅದಕ್ಕೆ....ಅದೇ ಕಿಚ್ಚ್ ಹಿಡೂಕೆ ಅದ್ರ್ ಹೆಸ್ರ್ ನೆನ್ಪೂ ಬತ್ತಿಲ್ಲೆ ಕಣಿ... ಕಾಂಟೆ ಸೆಕ್ಸ್ ಲೆನ್ಸ್
ಅಲ್ಲ ಅದ್ ಕಾಂಟೇಕ್ಸ್ ಲೆನ್ಸ್!!
ಅದೇ ತಂದ್ ಕೊಟ್ರ್ ಅಪ್ಪಯ್ಯ
ಅವ್ಳ್ ಅಪ್ಪಯ್ಯಂದ್ ಮತ್ತೊಂದ್ ಕಥಿ ಬಿಡಿ
ರಾತ್ರಿಗ್ ಅವ್ರ್ ಕೈ ಕಟ್ಟಾಕ್ಕ್ ಕ್
ಅದೆಂತಕೆ ಮರಾಯ್ರೆ
+ಅಲ್ದೇ ಒಂದ್ ತರಾ ಕಣ್ ತೊರ್ಸೂದೆ, ಅದೂ ಹೇಂಗ್ ಅಂತ್ರೀ, ಅಲ್ಲಾ ಆ ನಮ್ನಿ ಕಣ್ಣೊಳ್ಗ್ ಕೈ ಹಾಕಂಡ್ ತೊರ್ಸೂದೇ..?
ಅರ್ಥ ಇತ್ತೇ ಬೆಳ್ಗಾಪತ್ತಿಗೆ ಕಾಂಬತ್ತಿಗೆ ಕಣ್ಣೆಲ್ಲ ಬೀಗಿ.... ಮುಕ್ದಗೆ ಕಣ್ ಮಾತ್ರ ... ಮತ್ತೆಂತ ತೋರೂದೆ ಇಲ್ಯೆ
ಯಾರಾದ್ರೂ ಕಂದ್ರೆ ಪಟ ತೆಗೀಕ್ ಅಂಬ್ರ
ಎಂತ ಹಂಗರೆ ಅಷ್ಟ್ ಚೆಂದ ಕಾಂತಿತ್ತಾ ಅವ್ನ್ ಮುಖ..?
ಅಲ್ಲಪ್ಪಾ... ಮನಿ ಕಟ್ಟೋರಿಗೆ ಎದ್ರ್ ಇಡೂಕ್ ಒಂದ್ ದಿಷ್ಟಿ ಗೊಂಬಿಯೇ....
ಕಡಿಗೆ ..
ಮತ್ತೆಂತ ಮಾಡುದೇ.. ಈಗ ಹೊಸ ಉಪಾಯ ಮಾಡಿದ್ಮೇಲೆ ಸರಿಯಾದ್ರೇ.
ಎಂತ ಮಾಡ್ರಿ ಮರ್ರರೆ
ಅದೇ ಆ ಕನ್ನಡಕಕ್ಕೆ ಹಗ್ಗ ಕಟ್ಟಿ ಮಂಡಿ ಹಿಂದ್ ತಂದ್ ಕಟ್ಟಿ ಬಿಟ್ಟೆ ಸರದ್ ಕಣಂಗೆ
ಈಗ ತೊಂದರೆ ಇಲ್ಲೆ, ಒಂದೇ ಕಣ್ಣಂಗೆ ಇಲ್ದೆ ಇದ್ರೆ ಕುತ್ತ್ಗಿಯಲ್ಲ್ ಇರತ್ತೇ , ಕಳ್ದ್ ಹಾಕೂದೂ ಇಲ್ಲೆ..
ರಾತ್ರಿ ಮಾತ್ರ ತೆಗ್ದಿಡೂದ್.......

ಕಥಿ ಹೈಲ್ ಆಯ್ತ್ ಮಾರಾಯ್ರೆ

ಸೈಕಲ್ ಯಕ್ಷಗಾನ ಮತ್ತು ಸೀನನ ಭೂಮಿ ಗೀತ

ಮೊನ್ನೆ ಮೊನ್ನೆ ಊರ ಕಡೆ ಹೋಗಿದ್ದೆ.
ರಸ್ತೆಯಲ್ಲಿ ಸೀನನ ಧರ್ಮಪತ್ನಿ ಸಿಕ್ಕಿದಳು.
"ಏನಮ್ಮಾ ಎಲ್ಲಿ ರಾಯ?"
"ಏನ್ ಕೇಳ್ತೀರಾ? ನಿಮ್ಮ ಚೇತೂರವರ( ಗೊತ್ತಾಗ್ಲಿಲ್ವಾ ಚೇತನ್ ಕೋಡುವಳ್ಳಿ ಯವರು) ಸೈಕಲ್ ಪುರಾಣ ಕೇಳಿದಾಗ್ಲಿಂದ ಪರಿಸರ ಪ್ರೇಮಿಯಾಗಿ ಹೊಸ ಸೈಕಲ್ ತಂದಿದ್ದಾರೆ.  ಅದನ್ನೇ ಕಲೀತಿದ್ದಾರೆ".
ಪಕ್ಕದಲ್ಲೇ ಬಾಂಬ್ ಬಿದ್ದಹಾಗೆ ಆಯ್ತು !!!.

ನಾನೂ ಅವನೂ ಒಮ್ಮೆ ಮನೆಯಿಂದ ಕದ್ದು ಶಂಕರನಾರಾಯಣಕ್ಕೆ ಯಕ್ಷಗಾನಕ್ಕೆಂತ ಹೋಗಿದ್ದೆವು ಸೈಕಲ್ಲಿನಲ್ಲಿ.
ಬೆಳಿಗ್ಗೆ ಐರ್ಬೈಲ್ ಉಬ್ಬಿನ ಮೇಲೆ ಬರುವಾಗ ಕೇಳಿದೆ" ಅಲ್ಲ ಸೀನಾ ಆ ಹಾಸ್ಯಗಾರನ ಅಸ್ಥಿಪಂಜರದ ಡ್ಯಾನ್ಸ್ ಎಷ್ಟು ಚಂದ ಇತ್ತು ಅಲ್ವಾ?" ಹಿಂದಿನಿಂದ ಉತ್ತರ ಬರಲಿಲ್ಲ. ಎದೆ ಧಸಕ್ಕೆಂದಿತು. ಹಿಂದೆ ನಿದ್ದೆ ಕಣ್ಣಿನಲ್ಲಿಕುಳಿತಿರಬೇಕಾದ ಪ್ರಾಣಿ ಪತ್ತೆಯಿಲ್ಲ.
ಶೇಶಿಯ ಗಲಾಟೆ ಕೇಳುವರಾರು?( ಅವಳ ಮಗನಿಲ್ಲದೇ ಮನೆಗೆ ಹೋದರೆ!!).
ಸೈಕಲ್ ಹಿಂದಕ್ಕೆ ತಿರುಗಿಸಿ ಹುಡುಕುತ್ತಾ ಹೊರಟೆ .
ಉಬ್ಬಿನ ಕೆಳಗಡೆ ಉಬ್ಬು ಶುರುವಾಗುವಲ್ಲಿ ಪಕ್ಕದ ತೋಡಿನ (ಸಣ್ಣ ತೊರೆ)ಹೊಂಡದಲ್ಲಿ ಕೌಚಿ ಮಲಗಿ ಗೊರಕೆ ಹೊಡೆಯುತ್ತಿದ್ದಾನೆ ಪ್ರಾಣಿ.
ಎಬ್ಬಿಸಿದರೆ "ಹೀಗೇ ನಿಧಾನ ಬಿಡು" ಕಾಮೆಂಟ್ ಬೇರೆ.
ಆಗ ನಾವೆಲ್ಲಾ ಅವನಿಗೆ ಕಲಿಸಲು ಹೊರಟು ನಮ್ಮ ನಾಲ್ಕೈದು ಜನರ ಸೈಕಲ್ ಬರ್ಬಾದ್ ಮಾಡಿಕೊಂಡು ಮನೆಯವರ ಕೈಲಿ .... ತಿಂದಾಗಿತ್ತು,  ಅದು ಹಳೆ ವಿಷಯ.


ಈಗ..
ನಾನು ಏನನ್ನೋ ಹೇಳಲು ಬಾಯಿ ತೆರೆಯೋದ್ರಲ್ಲಿ ಸಾಲು ಮರದ ಉಬ್ಬಿನಿಂದ ಬಹಳ ಸ್ಪೀಡಿನಲ್ಲಿ ಬರುತ್ತಿರುವ ಸೀನ ಕಾಣೀಸಿದ
" ಏಯ್ ಗೇರ್  ಸೈಕಲ್ಲು ಬಿಟ್ಟೀದ್ದೀಯಾ?........." ಆತನು ಇನ್ನೂ ಏನೋ ಹೇಳುತ್ತಾ ನನ್ನಿಂದ ಒಮ್ಮೆಲೇ ಪಾಸಾಗಿ ಬಿಟ್ಟ.
ನಾನೂ ಆತ ಹೋದ ದಿಕ್ಕಿನಲ್ಲೇ ಲಗು ಬಗೆಯಿಂದ ಹೊರಟೆ.
ಅನತಿದೂರ ತಲುಪುವದರೊಳಗೆ ಪುನ ಅಷ್ಟೇ ಸ್ಪೀಡಿನಿಂದ ವಾಪಾಸ್ಸು ನನ್ನ ಕಡೆ ಬರುತ್ತಿದ್ದನಾತ. 
" ಏಯ್ ಗೇರ್  ಸೈಕಲ್ಲು ಬಿಟ್ಟೀದ್ದೀಯಾ?......"   ಪುನಹ  ಅದೇಸ್ಟೈಲು,    ಏನ್ಮಹಾ ಇವನಿಗೊಬ್ಬನ್ಗೇನಾ ಗೇರ್ ಸೈಕಲ್ಲು ಅನ್ನಿಸಿತ್ತು.  
ಆಗಲೇ ಧಡ್ ಅಂತ್ ಶಬ್ದ ಕೇಳಿಸಿತು.    

ಓಡಿದೆ ಅತ್ತಲೆ..........!!
ಸ್ವಲ್ಪ ದೂರದಲ್ಲೇ ಧರಾಶಾಹಿಯಾದ ಪರಿಸರಪ್ರೇಮಿಯನ್ನು ಕಂಡೆ.
ಪಕ್ಕದ ತೋಡಿನಲ್ಲಿ ಆತನ ಸೈಕಲ್!!! ಅದೂ ಭೂಮಿಗೀತ ಹಾಡುತ್ತಿತ್ತು.
ಆತನೆಂದ " ಏಯ್ ಗೇರ್ ಸೈಕಲ್ ಬಿಟ್ಟಿದ್ದೀಯಾ? ಇದನ್ನ ಹೇಗೆ ಬಿಡೋದೂ? ಅಂತ ನಾನು ಕೇಳಿದ್ದು......"

ಈತ    ಬದಲಾಗುತ್ತಾನಾ?
....ಮಿಲಿಯನ್ ಡಾಲರ್ ಪ್ರಶ್ನೆ..!!!

Sunday, January 29, 2012

ತ್ಯಾಂಪ ಸೀನನ ಕಂಪೂಟರ್ ಕಲಿಕೆ 1





ತ್ಯಾಂಪ ಸೀನನ ಕಂಪೂಟರ್ ಕಲಿಕೆ   1

ಹದಿನಾ.......ರು ಪೇಜಿನ ರಿಪೋರ್ಟ್ ಅದು.
ಎಲ್ಲಾ ಲೆಕ್ಕಾಚಾರ ಮಾಡಿ ಸರಿಯಾಗಿ ಕ್ರಾಸ್ ಚೆಕ್ ಮಾಡಿಟ್ಟಿದ್ದೆ.
ತ್ಯಾಂಪ ಮತ್ತು ಶೀನ ಇಬ್ಬರೂ ವಕ್ಕರಿಸಿದರು... ಛೇ ಅಲ್ಲಲ್ಲಪ್ಪಾ ನನ್ನ ಆಪ್ತ ಸ್ನೇಹಿತರಲ್ಲವ್ರಾ ಇವ್ರು..?
ಬರಲೇನಾ    ಒಳಕ್ಕೇ......?
ಬಂದಿದ್ದಾಯ್ತಲ್ಲಾ... ಬನ್ರೀ ಬನ್ರೀ .. ಏನು ವಿಶೇಷ ಇಬ್ಬರೂ ಒಟ್ಟಿಗೇ..??
ನಾವು ಕಂಪ್ಯೂಟರ್ ಕಲೀತಾ ಇದ್ದೀವಿ...
ಅರ್ರೇ    ತುಂಬಾನೇ ಒಳ್ಳೆಯ ವಿಷಯ ಇದು.. ಏನೆನೆಲ್ಲಾ  ಕಲಿತ್ರಿ..??
ಸುಮಾರಾಗಿ ಎಲ್ಲಾ ಕಲೀತಾಯ್ತು,... ಇಲ್ಲಿ ನಿನ್ನ ಕಂಪ್ಯೂಟರಿನಲ್ಲಿ ತೋರಿಸಲಾ..?
ತ್ಯಾಂಪ ಆಪ್ತವಾಗಿ ಕೇಳಿದಾಗ ನನಗೆ ಬೇಡ ಎನ್ನಲಾಗುವುದಿಲ್ಲ ನನ್ನ ದೌರ್ಬಲ್ಯ ಅದು, ಅದು ಇವರಿಬ್ಬರಿಗೂ ಗೊತ್ತು, ಮತ್ತು ನನಗೂ.
ನೋಡಪ್ಪಾ ಏನಾದ್ರೂ ಮಾಡಿ, ಆದರೆ ನನ್ನ ಫೈಲ್ ಮುಟ್ಟಬೇಡಿ. ಆಯ್ತಾ.
ನಾನೊಂದು ಹೊಸ ವಿಷಯ ಹೇಳ್ತೇನೆ, ನಿಮಗೇನಾದರೂ ನಮ್ಮ ಕಂಪ್ಯೂಟರಿನಲ್ಲಿ ಬೇಕಾದರೆ ಕಂಟ್ರೋಲ್ ಪ್ಲಸ್ ಎಫ್ ಒತ್ತಿದರಾಯ್ತು. ಒಂದು ಟಾಸ್ಕ್  ಬಾರ್ ಬರ್ತದೆ
ಇಲ್ಲಪ್ಪ ನಮಗೆ ಹಗಲಲ್ಲಿ ಅಂತಹಾ ಕುಡಿಯುವ ಮೂಡೇನೂ ಇರಲ್ಲಾ
ತುಥ್!!  ಅದಲ್ಲಾ ಮರಾಯಾ ಶೀನ ನನ್ನ ನೆರವಿಗೆ ಬಂದ
ಆ ಬಾರ್ ಲ್ಲಿ ಏನು ಬರೆಯುತ್ತೀರೋ ಅದನ್ನು ನಿಮಗೆ ಕಂಪ್ಯೂಟರ್ನಲ್ಲಿ ತೋರಿಸುತ್ತದೆ
ಇಬ್ಬರ ಮುಖದಲ್ಲಿ ಆಶ್ಚರ್ಯ ಎದ್ದು ಕಾಣುತ್ತಿತ್ತು..
ಖುಷಿಯಿಂದ ವಿವರಿಸಿದೆ.  ಇದು ಮಾತ್ರ ನನ್ನ ಮನಸ್ಸು ಬೇಡವೆಂದರೂ ಕೇಳದೇ.
ಅಷ್ಟೇ ಅಲ್ಲ ಅದರಲ್ಲಿ ಇನ್ನೊಂದು ಅಯ್ಕೆ ಇದೆ ಅದರಲ್ಲೇ.
ಇದರಲ್ಲಿ ಬದಲು ಮಾಡಿ ಅಂತ ಇನ್ನೊಂದು ಇದೆ ಅದನ್ನ ಒತ್ತಿದರೆ ನೀವು ಬರೆದ ಅಥವಾ ತಪ್ಪೆನಿಸಿದ ಯಾವುದೇ ಶಬ್ದವನ್ನು ಬದಲಿಸಬಹುದು ಗೊತ್ತಾ..??
ಹೌದಾ ಮರಾಯ ಸಾವಿರ ಪೇಜಿದ್ದರೂ..???
ಹೌದು ಲಕ್ಷ ಪೇಜಿದ್ದರೂ ಕೂಡಾ
ಬೇಕಿದ್ದರೆ ನೋಡು..
ಅಷ್ಟರಲ್ಲಿ ಕಲ್ಲೂರಾಮ್ ಕರೆ ಬಂತು..
ನೋಡ್ತಾ ಇರಿ ಈಗ ಬಂದೆ ನಾನು, ಅವರಿಬ್ಬರನ್ನೂ ಬಿಟ್ಟು ನಾಹೊರಬಂದೆ
ಏನ್ರೀ ರಾವ್ ಎಲ್ಲಿದೆ ಬಡ್ಜಟ್  ರಿಪೋರ್ಟು..?
ರೆಡಿ ಇದೆ ಸಾರ್
ಮೂರ್ದಿನದಿಂದ ಇದೇ ಹೇಳ್ತಾ ಇದ್ದೀರಲ್ರೀ , ಹೆಡ್ ಆಫೀಸಿನಿಂದ ತಲೆ ತಿನ್ತಾ ಇದ್ದಾರೆ, ಎಲ್ಲಿ ಬೇಗ ತನ್ನಿ..
ಏನ್ಸಾರ್ ಒಂದ್ವಾರ ಬೇಕು ಅದನ್ನ ಪೂರ್ತಿಯಾಗಿ ಮಾಡೊಕ್ಕೆ, ಅದನ್ನ ನಾನು ದಿನಾ ರಾತ್ರೆ ಅಂತ ನಿದ್ದೆಗೆಟ್ಟು ನಾಲ್ಕ್ ದಿನ್ದಲ್ಲಿ ಮಾಡಿದ್ದೇನೆ ಅದನ್ನ , ನಂಗೇ ಜೋರ್ ಮಾಡ್ತಾ ಇದ್ದೀರಲ್ಲಾ
ಸರಿ ಸರಿ, ಕಳುಹಿಸಿ ಬೇಗ
ವಾಪಾಸ್ ಚೇಂಬರಿಗೆ ಬಂದೆ
ಇಬ್ಬರೂ ಕಂಪ್ಯೂಟರಿನೊಳಕ್ಕೇ ತಲೆ ಹಾಕ್ಕೊಂಡಿದ್ದಾರೆ.
ಅಕ್ಕಾ ನೀನ್ ಹೇಳ್ದನ್ನ ನಾವ್ ಕಲ್ತ್ಕಂಡೇ ಬಿಡ್ತ ಕಾಣ್
ಎಂತದಾ
ನೀನ್ ಹೇಳಿ ಕೊಟ್ಟಿಯಲ್ಲೆ, ಅದೇ ರಿಪ್ಲೇಸ್ , ಕಂಡ್ರೆ ನಿಂಗೂ ಖುಷೀಯಾತ್ ಕಾಣ್
ಹೌದಾ ಎಲ್ಲಿ..?
ಅದೇ ನಿನ್ನ ರಿಪೋರ್ಟ್ ಇದೆಯಲ್ಲಾ, ಹದಿನಾರು ಪೇಜಿನದ್....................!!
ಅಲ್ಲಾ ಮರಾಯಾ ಅದನ್ನ್ ಏನೂ ಮಾಡ್ಬೇಡಿ ಅಂದಿದ್ದೆನಲ್ಲಾ..??
ಎಂತದ್ದೂ ಮಾಡ್ಲ್ಯಾ  ..........ಇಲ್ ಕಾಣ್...........೬ ರ ಬದ್ಲು ಆರ್ ಅಂತ್ ಮಾಡ್ದೆ, ಏಳರ ಬದಲು ಪಿ ಮಾಡ್ದೆ  ಮೂರರ ಬದ್ಲು ಕ್ಯೂ ಅಂತ ಮಾಡ್ದೆ.
ಅಲ್ದಾ  ನೀನ್ ಮಾಡದ್ ಆರ್ ಗೆ ೮ , ಪಿ ಗೆ ೩ ಮತ್ ಕ್ಯೂ ಗೆ ೬ ಮಾಡದ್
ಅಲ್ಲಾ ನಂಗೆ ಸರೀ ನೆನ್ಪಿತ್ತಾ, ನಾನ್ ಹೇಳದ್ದೇ ಕರೆಕ್ಟ್..........

ಒಂದೇ ಕ್ಷಣ ನನ್ನ ಎದೆ ಬಡಿಯುವುದನ್ನೇ ನಿಲ್ಲಿಸಿತು........ ಅಂದರೆ
ನನ್ನ.... ರಿಪೋರ್ಟ್ ನಲ್ಲಿ ಇವರ ಕಲಿತಾಟ.....
ಸತ್ಯಾನಾಶ್,
ಅಂಕೆಗಳ ಬದಲು ಇಂಗ್ಲೀಷ್ ಅಕ್ಷರಗಳು ಅದೂ ಅದನ್ನ ಬದಲು ಮಾಡುವಾಗ ಒಂದೇ ಅಂಕೆ ತಪ್ಪಾದರೂ ಸರ್ವ ನಾಶ ಖಂಡಿತಾ, ಹೊಸದಾಗಿ ಮಾಡಲು ಸಮಯವೂ ಇಲ್ಲ..
ಪುನಃ ಬಾಸ್ ನ   ಕರೆ
ಏನೂ ಮಾಡಲು ತೋಚದೇ ದಿಗ್ಞೂಡನಾಗಿ ನಿಂತೆ.
ಅಕ್ಷರಗಳು ಅಂಕೆಗಳಾಗಿ ಅಂಕೆಗಳು ಅಕ್ಷರಗಳಾಗಿ ನನ್ನ ಅಣಕಿಸುತ್ತಿದ್ದವು.
ಅಯ್ಯೋ ನನ್ನ ಮಾವಂದಿರಾ ....ಮತ್ತೇನಾದರೂ ಮಾಡಿದ್ದೀರಾ ಇದ್ರಲ್ಲಿ..?
ಅಂದ್ರೆ ಎಂತ ನೀನ್ ಹೇಳೂದ್..?
ಅಲ್ಲ ಶ್ರೀಧರ್ ಅವರು ಹೇಳಿದ ಹಾಗೇ ಕಂಟ್ರೋಲ್ + ಎಸ್ ಅಂತೇನಾದರು ಒತ್ತಿದ್ರಾ...?
ಹೌದಲ್ಲಾ.... ನಮ್ಮ ಮಾಸ್ಟ್ರ್ ಹೇಳಿ ಕೊಟ್ಟಿದ್ದರಲ್ಲಾ...?
ಏನಂತ..? ನನ್ನ ಎದೆ ಬಡಿತ ಇನ್ನೂ ಜೋರಾಯ್ತು..!!!
ಅದ್ ಒತ್ತಿದ್ ಮೇಲೇ ನೀನ್ ಬಂದದ್ ಮರಾಯಾ...!!??!!
ಗೋವಿಂದಾ ಗೋವಿಂದ....!!!!!!!!!




.........................................ತ್ಯಾಂಪ ಸೀನನ ಕಂಪೂಟರ್ ಕಲಿಕೆ   2


ತ್ಯಾಂಪ ಸೀನನ ಕಂಪೂಟರ್ ಕಲಿಕೆ   2

ಅಯ್ಯೋ ದೇವರೇ.......
ಏನು ಮಾಡಿ ಬಿಟ್ಟಿರಿ ಅನ್ನೋ ಜ್ಞಾನ ಇದೆಯಾ ನಿಮಗೆ ನನ್ನ ಸ್ವರ ಜೋರಾಗಿತ್ತಾ...?
"ಎಂತ ಆಯಿಲ್ಲ್ಯಾ... ತ್ಯಾಂಪ ಈಗ ಸರಿ ಮಾಡ್ತ ಕಾಣ್ ಬೇಕಾದ್ರೆ..." ಇದು ಸೀನನ ಸ್ವರ.
ಬೇಡ   ಬೇಡವೇ ಬೇಡ, ನೀವಿಬ್ಬರೂ  ಮುಟ್ಟಬೇಡಿ ... ಕಂಪೂಟರ್ , ಈಗ ಮಾಡದ್ದೇ ಸಾಕ್ ಬಿಡಿ. ಅಂದೆ ಸ್ವಲ್ಪ ಬೇಸರದಲ್ಲಿ.
ಕೂಲ್ ಕೂಲ್... ಗೋಪಿ ಕೂಲ್....
ನನ್ನನ್ನ ನಾನೇ ಸಂತೈಸಿಕೊಂಡೆ, ಮನಸ್ಸು ಗಲಿಬಿಲಿಗೊಂಡಾಗ ನಾನು ಸಾಧಾರಣವಾಗಿ ಇದನ್ನೇ ಮಾಡುವುದು,
ನಾಲ್ಕಾರು ಧೀರ್ಘ ಶ್ವಾಸ ತೆಗೆದುಕೊಂಡೆ. ನಂತರ ಯೋಚಿಸ ತೊಡಗಿದೆ.
ಪಿ ಕ್ಯೂ ಆರ್ ಬದಲಿಗೆ ೬,೩,೭,೮ ಈ ನಾಲ್ಕೇ ಅಂಕೆಗಳು ಬದಲಾಗಿ ಅಕ್ಷರಗಳಾಗಿವೆ. ಅಷ್ಟೇ....ಏನಾಯ್ತೀಗ ಅದನ್ನು ಬದಲಾಯಿಸಿದರೆ ಸಾಕು...
ಅದು ಅನಿಜವಾಗಿಯೂ ಅಷ್ಟೇನಾ....?? ಕಡಿಮೆ ಪಕ್ಷ ಒಂದು ಪುಟದಲ್ಲಿ ಬದಲಾಯಿಸ ಬೇಕಾದ ಅಂಕೆಗಳು ಕೇವಲ ಐವತ್ತು ಇದ್ದರೂ ಸರಿಯಾದ ಕ್ರಮದಲ್ಲಿ ಇಡಬೇಕಾದರೆ ೧೬ * ೫೦ *೪ ಸಾರಿ .... ಅಬ್ಬಾ
ಕಲ್ಲೂರಾಮ್ ನನ್ನ ಕೊಂದು ಹಾಕಿಯಾನು..... ಅಲ್ಲ ಇವರ ಜತೆ ನನಗೂ  ಟಿಕೆಟ್ಟೇ
ಅಷ್ಟರಲ್ಲೇ ನಕ್ಷತ್ರಿಕ ಚಂದ್ರೂ ಬಂದ. ಸಾರ್ ಬಾಸ್ ಬಿಸೀಲವ್ರೆ, ( ಸಿಟ್ಟು)
ನನ್ನ ಸಂಕಟ ಕೇಳುವರ್ಯಾರು..? 
"ಅವರಿಗೆ ಒಂದು ಗ್ಲಾಸ್ ತಣ್ಣಗಿನ ನೀರು ಕೊಟ್ಟು ಬಾ"
"ಅಲ್ಲ ನೀವು ಬರಬೇಕಂತೆ, ಈಗಲೇ....".
"ಚಂದ್ರೂ ಅವರಿಗೆ ಹೇಳು ಕಂಪ್ಯೂಟರ್ ಹ್ಯಾಂಗಾಗಿದೆ ಅಂತ."
"ನಂಗೇನ್ ಗೊತ್ತು ಕಂಪ್ಯೂಟರ್ ಹ್ಯಾಗ್ ಆಗಿದೆ ಅಂತ. ತಮಾಶಿ ಮಾಡ್ತಾ ಇದ್ದೀರಾ...? ನಿಜವಾಗಿಯೂ ನನಗೆ ಗೊತ್ತಿಲ್ಲ." ಚಂದ್ರೂ
"ಅಲ್ಲ ಮರ್ರಯಾ ಅವ್ರಿಗೆ ಅರ್ಥ ಆಗತ್ತೆ ನಾನ್ ಹೇಳಿದ ಹಾಗೆ ಹೇಳು.ಹೋಗು"
ಅಂದರೆ ನನ್ನಈ ರಿಪೋರ್ಟಿನ ಸಾರಾಂಶದ ಮುಖ್ಯ ಪೇಜಿನಲ್ಲಿ ಮಾತ್ರ ಈ ಅಕ್ಷರಗಳನ್ನು ಅಂಕೆಗಳಾಗಿ ಸರಿ ಪಡಿಸಿಕೊಂಡು ನೋಡಬಹುದಾ..?
ಯಾಕೆಂದರೆ ಮೊತ್ತ ವೂ ಅದಕ್ಕನುಗುಣವಾಗಿ ಬದಲಾಗುತ್ತದಲ್ಲ....  ಮೊದಲೇ ಇದರ ಒಂದಾದರೂ ಪ್ರತಿ ತೆಗೆದಿರಿಸದಿದ್ದುದ್ದಕ್ಕೆ ನನ್ನನ್ನು ನಾನೇ ಶಪಿಸಿಕೊಂಡೆ. ಆದರೂ ಈಗ ಏನು ಮಾಡಲಾದೀತು...? ಚಂದ್ರೂ ಒಂದು ಸ್ಟ್ರೋಂಗ್ ಕಾಫಿ ....
ಮತ್ತೆ ನಮಗೆ...? ಕೋರಸ್!!!
ಕೂಲ್ ಕೂಲ್.....
ಚಂದ್ರೂ ಮೂರು.. ಕಾಫಿ
ಈಗಂತೂ ಹೈದ್ರಾಬಾದ್ ನಿಂದ ಬಂಡ್ರಿಯವರನ್ನು ಕರೆಸ ಬೇಕಾ, ಅಥವಾ ಪ್ರಸನ್ನ ಶಂಕರ ಪುರ ಅವರನ್ನೋ, ಅಥವಾ ರವಿಯವರನ್ನ, ಹೋಗಲಿ ಪ್ರಸಾದ್  ನನಗೇ ಬಂತು.
ಎಲ್ಲಿ ಕಳೆದಿದೆಯೋ ಅಲ್ಲೇ ಹುಡುಕಬೇಕಂತೆ. ಈ ಮಾತು ಯಾಕೆ ನೆನಪಿಗೆ ಬಂತು ಈಗ...??
ಅಲ್ಲ ಎಲ್ಲಾ ಡಿಲೀಟ್ ಮಾಡಿ ಪುನಃ ಶುರು ಹಚ್ಚಿ ಕೊಳ್ಳಲಾ.... ಇಲ್ಲ ಪುನಃ ಮಾಡಲು ಇದಕ್ಕೆ ಕಡಿಮೆ ಎಂದರೂ ಮೂರ್ನಾಲ್ಕು ದಿನ ಬೇಕೇ ಬೇಕು. ಸಾಧ್ಯವೇ ಇಲ್ಲ. ನನ್ನ ಅಷ್ಟು ದಿನದ ಶ್ರಮ ಈ ರೀತಿಯಲ್ಲಿ ... ಛೇ...
ಏನನ್ನಲಿ..? ಇವರಿಗೆ ...........ಇಲ್ಲ ನಿಜವಾಗಿಯೂ ಗೊತ್ತಿಲ್ಲ ಇವನಿಗೆ ತಾನೇನು ಮಾಡಿದ್ದೇನೆ ಅಂತ, ಪಾಪ.          ಆ ಸ್ಥಿತಿಯಲ್ಲೂ ನಗು ಬಂತು ಪಾಪ ಅವನಾ..ನಾನಾ ?
ಗೋಪೂ ಇದು ಬಿಡು ತ್ಯಾಂಪನನ್ನು ಎರಡು ಮೂರು ಶಾಲೆಯವರು ಕೈಮುಗಿದು ನೀವಿನ್ನು ಬರುವುದೇ ಬೇಡ ಇಲ್ಲಿಗೆ... ಅಂತ    ಕಳುಹಿಸಿದ್ದಾರೆ ಗೊತ್ತಾ...?
ಕೇಳಲೇ ಬೇಕು ..........ಕೇಳದಿದ್ದರೆ ಇವನು ಬಿಡುವುದೇ ಇಲ್ಲ...ಅದು ಸೀನನ ಶೈಲಿ
ಹೌದಾ ಏನಾಯ್ತು ಎಲ್ಲಾ ಅಷ್ಟು ಬೇಗ ಕಲಿತನಂತಾ... ಅಲ್ಲಲ್ಲ
ಏನು ಮಾಡುತ್ತಾನೋ ಗೊತ್ತಿಲ್ಲ ಇವನು ಕುಳಿತ ಸ್ವಲ್ಪ ಸಮಯದಲ್ಲೇ ಇವನ ಕಂಪ್ಯೂಟರ್ ಖಾಲಿಯಾಗಿ ಬಿಡುತ್ತದೆ...
ಅಂದರೆ ...?
ಅದರ ಪರದೆಯಲ್ಲೇ ಏನೂ ಇರಲ್ಲ..ಎಲ್ಲಾ ಖಾಲಿ....
ಪುಣ್ಯಾತ್ಮ ರಾಮ ಮೋಹನರು ಹೇಳಿದ ಹಾಗೆ "ಫಾರಮಾಟ್" ಮಾಡಲಾ  ಅಂದರೆ ಎಸ್ ಅಂತ ಬಟನ್ ಒತ್ತುತ್ತಾನೋ ಏನೋ..? ಇಡೀ ಕಂಫ್ಯೂಟರ್ ಫಾರ್ಮಾಟ್  ಎಸ್ ಅಂತ ಒತ್ತಿದ್ದಾಗ ನೋಡ ನೋಡುತ್ತಿದ್ದಂತೆಯೇ ಎಲ್ಲಾ ಫೈಲುಗಳೂ ಮಾಯವಾಗುತ್ತಾ ಇದ್ದು  ಕೊನೆಗೆ ಸಿಸ್ಟಮ್ಮೂ ಕೂಡಾ ಮಾಯವಾಗಿ  ....................................ಆ ಸ್ಥಿತಿಯಲ್ಲೂ ನಗು ಬಂತು. ನನ್ನ ಸ್ಥಿತಿಗಿಂತಲೂ ಅಧ್ವಾನ ಆ  ಸ್ಕೂಲ್ ನವರ  ಕಥೆ.
ಇವನು ಹೀಗೆ ಪ್ರತಿ ಕಂಪ್ಯೂಟರ್ ಅನ್ನೂ ದಿನಾ ಫಾರ್ಮಾಟ್   ಮಾಡುತ್ತಿದ್ದರೆ ಆ ಶಾಲೆಯವರೇನು ಮಾಡ ಬೇಕು ಪಾಪ, ಇವನನ್ನು ಹೊರಗಟ್ಟದೇ..
"ಕೊನೆಗೆ.......??"
ಈಗಿನ ಮಾಸ್ಟ್ರು ತುಂಬಾ ಒಳ್ಳೆಯವರು...
ಯಾಕೆ
ಅಲ್ಲ , ಹಾಗೆಲ್ಲಾ ಮಾಡಬೇಡಿ... ನಾನು ಬೇರೆ ಹೇಳಿಕೊಡುತ್ತೇನೆ ಎಂದರು.
ಅಲ್ಲಾ ಚಂದ್ರೂ ಎಲ್ಲಿ ಹಾಳಾಗಿ ಹೋದ... ಕಾಫಿ ಬರದೇ ನನ್ನ ತಲೆ ಓಡೋದೇ ಇಲ್ಲವಲ್ಲ.
ಮತ್ತೆ....
ಆಮೇಲೆ ಹೇಳಿದರು ಯಾವ ಫೈಲ್ ನೀವು ತಕೊಂಡರೂ ಅದನ್ನು ತೆರೆಯುವ ಮೊದಲು ಸೇವ್ ಆಸ್ ಅಂತ ಮಾಡಿ........
ನಾನೊಮ್ಮೆ ಜಿಗಿದೆ.....ನನಗೆ ನಂಬಿಕೆ ಬರುತ್ತಿಲ್ಲ............. ಏನೂ ಇನ್ನೊಮ್ಮೆ ಹೇಳೂ....
ಅದೇ "ಸೇವ್ ಆಸ್" ಮಾಡಿಕೊಂಡೇ ಮಾಡಿ ಅಂತ ಹೇಳಿದ್ದರು.
ಅಂದರೆ ನೀನು ತ್ಯಾಂಪ ಇದನ್ನು ಮುಟ್ಟುವ ಮೊದಲು ಹಾಗೆ ಮಾಡಿದ್ದೀರಾ...? ನನ್ನ ಸ್ವರದಲ್ಲಿ ನನಗೇ ನಂಬಿಕೆಯಿಲ್ಲ
ಹೌದು ಪ್ರತಿ ಸಾರಿಯೂ ಮಾಡ್ತೇನೆ ನಾನು.
ಎಲ್ಲಿದೆ ತೋರ್ಸು............ ಬೇಡ.......  ಮೇಲೆ ಫೈಲ್ ಹೆಸರು ನೋಡಿದೆ ಅದರಲ್ಲಿ  ಕೊನೆಯಲ್ಲಿ ಒಂದು ಅಂತ ಸೇರಿಸಿದ್ದ .........ಅಂದರೆ ನನ್ನ ಅಸಲೀ ಫೈಲ್ ಕಂಪ್ಯೂಟರ್ನಲ್ಲೇ ಇದೆ ಸೇಫಾಗಿ...
 ಫೈಲ್ ಓಪನ್ ಮಾಡಿದೆ ನಿಜ ನನ್ನ ಅಸಲೀ ಫೈಲ್ ಇಲ್ಲೇ ಇದೆ........... ನನಗೆ ನಂಬಿಕೆಯೇ ಬರುತ್ತಿಲ್ಲ
ಜೀವದಲ್ಲಿ ಜೀವ ಬಂತು ಆಗಲೇ ಚಂದ್ರೂ.... ..........ಮೂರು ಕಾಫಿ ಎಂದ ರಾಗವಾಗಿ.......
"ಅಲ್ಲ ಗೋಪು, ನಾನು ಇನ್ನೊಂದು ಕಲಿತಿದ್ದೇನೆ   ಗೊತ್ತಾ....? ಈ  ಶಿಫ್ಟ್ ಮತ್ತು ಮತ್ತು ಡಿಲೀಟ್ ಒಟ್ಟಿಗೇ ಒತ್ತಿದರೆ ಯಾವುದೇ ಫೈಲ್ ಕೂಡಾ ಕಸದ ಬುಟ್ಟಿ ( ರಿ ಸೈಕಲ್ ಬಿನ್ ) ಗೆ ಸಹಾ ಹೋಗದೇ ಮಾಯವಾಗಿಬಿಡುತ್ತೆ,  ಗೊತ್ತಾ ನಿನಗೆ ಇದು, ತೋರಿಸಲಾ.......?"  ತ್ಯಾಂಪ........
 " ಬ್ಯಾಡ............ ಬ್ಯಾಡ.......... ಏಯ್...."
ನಾನು ಕಾಫಿ ಕಪ್ ಎಸೆದು ಕಂಪ್ಯೂಟರ್ ಬಳಿ ಓಡಿದೆ......

೧. ತ್ಯಾಂಪಿಯ ಗೋಳು

ತ್ಯಾಂಪ್ನ್ ಕಥಿ ಹೈಲ್ ಆಯ್ತೇ

ಅಲ್ಲಾ ಸಾರ್ ಇದಕ್ಕೆ ಅರ್ಥ ಇದೆಯಾ ಹೇಳಿ
ಕಳೆದ ತಿಂಗಳಲ್ಲೇ ಇವರು ೫-೬ ಸಾರಿ ಕನ್ನಡಕ ಬದಲಾಯಿಸಿದವರು .
ಯಾಕೆ ಅವನ ಕಣ್ಣು ಅಷ್ಟು ಬೇಗ ಹಾಳಾಯ್ತಾ..?
...
ಅಲ್ಲ ಇವರೇ ಅವರು ಕನ್ನಡಕ ಕಳೆದು ಕೊಳ್ತಾರೆ ಅಂತ...
ಅದು ಹ್ಯಾಗೆ..?
ಅಲ್ಲ ನೋಡಿ ಮುಖ ತೊಳೆಯಲು ಬೇಸನ್ ಹತ್ರ ಹೋಗೋದು ಅಲ್ಲಿ ಕೆಳಗೆ ಬೀಳ್ಸಿ ಒಡೆದು ಹಾಕುವುದು, ಅಥವಾ ಹೊರಗಡೆ ಆಫೀಸಲ್ಲಿ, ಅಂಗಡಿಯಲ್ಲಿ , ಅಲ್ಲಿ ಇಲ್ಲಿ ,ಎಲ್ಲೆಂದರಲ್ಲಿ ಕಳೆದುಕೊಂಡು ಬಿಡುವುದು. ಅಥವಾ ಬಿಟ್ಟು ಬರುವುದು. ಇದೇ ಕಥೆ ದಿನಾ....ಇಷ್ಟೇ ಆದ್ರೆ ತೊಂದರೆಯಿಲ್ಲ ಅಲ್ಲ ನಮ್ಮ ಮನೆ ಅಂತ ಪಕ್ಕದ ಮನೆಗೆ ಹೋದರೆ ....ಅಲ್ಲಾ ಹೀಗೆ ದಿನಾ ಕಳೆದುಕೊಂಡರೆ ನಮಗೆ ಹೊಸತು ತೆಗೆದು ಪೂರೈಸುತ್ತದಾ..? ಕನ್ನಡಕದ ಅಂಗಡಿ ಇಟ್ಕಂಡ್ರೆ ಆದೀತು. ಹೀಗಾದರೆ ಹೇಗೆ......... ನೀವೇ ಹೇಳಿ..?
ಅಲ್ಲ ನಿಮ್ಮ ತಂದೆಯವರದ್ದೂ ಒಂದು ಅಂಗಡಿ ಇದೆಯಂತಲ್ಲಾ
ಅದೇ ನನ್ನ ತಂದೆಯವರು........... ಅದಕ್ಕೆ.......... ಅದೇನೋ ಇದೆಯಲ್ಲಾ ಕಣ್ಣೊಳಗೆ ಇಡುವಂತಹದ್ದು... ........ಎಂತ ಅದೂ......... ಕರ್ಮ......... ಅದರ.......... ಹೆಸರೂ.......... ನೆನಪಿಗೆ ಬರ್ತಾ ಇಲ್ಲ, ..........ಅದೆಂತದ್ದೋ ಕಾಂಟೆ ಸೆಕ್ಸ್ ಲೆನ್ಸ್
ಅಲ್ಲಲ್ಲ....... ಅದು ಕಾಂಟೆಕ್ಸ್ ಲೆನ್ಸ್
ಅದೇ ತಂದ್ ಕೊಟ್ಟರು .....ಆದ್ರೆ ರಾತ್ರೆಗೆ ಅವರ ಕೈ ಕಟ್ಟಿ ಹಾಕಬೇಕಲ್ಲ
ಯಾ...ಯಾಕೆ ಕೈ ಯಾಕೆ ಕಟ್ಟಿ ಹಾಕಬೇಕು..?
ಅಲ್ಲ ರಾತ್ರೆ ಅವರು ಅದೆಂತದ್ದೋ ಕರ್ಮ ಅದ್ರ ಹೆಸ್ರೂ ನೆನಪಿಗೆ ಬರ್ತಿಲ್ಲೆ ಎಂತ ಹೇಳಿದ್ದು ನೀವು
ಅದೇ ಕಾಂಟೆಕ್ಸ್ ಲೆನ್ಸ್
ಹೌದ್ ರಾತ್ರೆಗೆ ಅದೇ ತೆಗೆದಿರಿಸ್ತಾರಲ್ಲ ನೀರಲ್ಲಿ, ನಂತರ ಇವ್ರು ತನ್ನ ಕಣ್ಣನ್ನ ಕೈ ಬೆರಳಲ್ಲಿ ತುರಿಸಿಕೊಳ್ಳುತ್ತಾರೆ, ಅದೂ ಹೇಗೆ ಅಂದರೆ...ರಾತ್ರೆ ಎಲ್ಲಾ ತುರಿಸೀ ತುರಿಸೀ.... ಬೆಳಿಗ್ಗೆ ನೀವು ಅವರನ್ನ ನೋಡಿದ್ರೆ ಅವರ ಗುರ್ತವೇ ಇಗಲಿಕ್ಕಿಲ್ಲ ನಿಮಗೆ ಗೊತ್ತುಂಟಾ...... ಅವರ ಮುಖವೇ ಇಲ್ಲ, ಮರಾಯರೇ......... ಬರೇ........ ಕಣ್ಣು.......... ಮಾತ್ರ ಕಾಣುವುದು.........ಮತ್ತೆ ಏನೂ ಇಲ್ಲ. .........ನೀವ್ ಕಂಡ್ರೆ ಫಟ ತೆಗೆದಿರಿಸುತ್ತೀರಿ ಖಂಡಿತಾ
ಯಾಕೆ ಅಷ್ಟು ಚೆನ್ನಾಗಿ ಕಾಣ್ತಾನಾ ಅವನು..?
ಚೆಂದ ಗಿಂದ ಅಲ್ಲ ಮರಾಯ್ರೇ....... ನೀವು ಮನೆ ಕಟ್ಟಿಸ್ತಾ ಇದ್ದೀರಲ್ಲ........
ಅಲ್ಲಿ ಇಡಲು......... ದೃಷ್ಟಿ ಬೊಂಬೆ ಗಾಗಿ!!!!!!!!!!!!
ಮತ್ತೇನು ಮಾಡಿದ್ರೀ
ಈಗ ಒಂದು ಉಪಾಯ ಮಾಡಿದ್ದೆ ನೋಡಿ
ಏ ಏನು ಮಾಡಿದ್ರೀ..?
ಅದೇ ಆ ಕನ್ನಡಕಕ್ಕೆ ಒಂದು ನೂಲು ಕಟ್ಟಿ ಅದನ್ನ ಕುತ್ತಿಗೆಯ ಹಿಂದಿನಿಂದ ಭದ್ರವಾಗಿ ಕಟ್ಟಿದ್ದೆ,.......... ಸರದ ಹಾಗೆ.
ಈಗ ತೊಂದರೆ ಇಲ್ಲ. ಒಂದೇ, ಕನ್ನಡಕ ಅವರ ಕಣ್ಣಲ್ಲಿ( ಅಂದರೆ ಮುಖದಲ್ಲಿ) ಅಥವಾ ಕುತ್ತಿಗೆಯಲ್ಲೇ ಇರತ್ತೆ,........... ಒಳ್ಳೆಯ ಉಪಾಯ ಅಲ್ದಾ ನಂದು
ಹೌದೌದು.
ಆದರೆ ರಾತ್ರೆಗೆ ಮಾತ್ರ ತೆಗೆದಿಡುತ್ತಾರೆ...
ರಾತ್ರೆಗೆ... ಅದು ಯಾಕೆ..???
................................................
ತಪ್ಪು ಮಾಡಿದವರ ಹಾಗೆ ನಾಚಿಕೊಂಡಳು.

ಬೇ... ಬೇಡ ಬಿಡಿ ಗೊತ್ತಾಯ್ತು.!!!