Friday, February 24, 2012

ನವ್ಯ ಚಿತ್ರ ಕಲಾ ಪ್ರದರ್ಶಿನಿಯಲ್ಲಿದ್ದ ತ್ಯಾಂಪ

 
ನವ್ಯ ಚಿತ್ರ ಕಲಾ ಪ್ರದರ್ಶಿನಿ ಮತ್ತು ತ್ಯಾಂಪ


ಅವನಿಗೆ ಯಾವುದೂ ಅರ್ಥವಾಗುತ್ತಿರಲಿಲ್ಲ.
ಜನ ಯಾಕೆ ಈ ಸಿಕ್ಕಾಪಟ್ಟೆ ಬಣ್ಣ ಹಚ್ಚಿದ ಚಿತ್ರನೋಡುತ್ತಾರೆ ಎಂದು ಯೋಚಿಸುತ್ತಿದ್ದ.
ಆದರೂ ಎಲ್ಲರೂ ಪ್ರತಿ ಚಿತ್ರವನ್ನು ಗಮನಿಸುವಂತೆ ತಾನೂ ನಟಿಸುತ್ತಿದ್ದ.
ತ್ಯಾಂಪನ ಗಮನ ಒಬ್ಬನೆಡೆ ಹರಿಯಿತು.
ಆತ ಎಲ್ಲಾ ಕಲಾಕೃತಿಯ ಹತ್ತಿರವೂ ನಿಂತು ಚಿತ್ರವನ್ನು ಪರಾಂಬರಿಸುತ್ತಿದ್ದ.
ಎಲ್ಲಾ ಕಲಾಕೃತಿಯನ್ನೂ ಕೂಲಂಕುಶವಾಗಿ ಆತ ವೀಕ್ಷಿಸುವುದನ್ನು ನೋಡಿ ತ್ಯಾಂಪ ಅವನ ಬಳಿಬಂದು ನಿಂತ.
ತ್ಯಾಂಪನನ್ನು ನೋಡುತ್ತಾ ಆತ ನುಡಿದ " ನೋಡಿ ಈ ಚಿಕ್ಕ ಚಿಕ್ಕ ಚೌಕಟ್ಟಿನ ಚಿತ್ರಗಳು ಚೆನ್ನಾಗಿಲ್ಲ, ಆ ದೊಡ್ಡ ದೊಡ್ಡ ಚೌಕಟ್ಟಿನವುಗಳು ಉತ್ತಮ"
"ನೀವು ಚಿತ್ರಕಾರರೇ?" ಕೇಳಿದ ತ್ಯಾಂಪ
"ಅಲ್ಲ"
"ಮತ್ತೆ ವಿಮರ್ಶಕರೇ"
"ಅಲ್ಲ"
"ಹಾಗಿದ್ದಲ್ಲಿ ನೀವು ಯಾರು"
"ನಾನೊಬ್ಬ ಚೌಕಟ್ಟು ಮಾಡುವವ" ಎಂದನಾತ ತ್ಯಾಂಪನನ್ನು ಅಮೂಲಾಗ್ರವಾಗಿ ವೀಕ್ಷಿಸುತ್ತಾ.
ತ್ಯಾಂಪ ನಿಗೆ ಏನು ಹೇಳಬೇಕೆಂತಲೇ ಗೊತ್ತಾಗಲಿಲ್ಲ.
ತಪ್ಪಿಸಿ ಇನ್ನೊಂದೆಡೆ ಓಡಿದ.
ಅಲ್ಲಿ
ಪ್ರತಿ ಕಲಾಕ್ರತಿಗಳನ್ನೂ ತುಂಬಾ ಆಸಕ್ತಿಯಿಂದ ನೋಡುತ್ತಿದ್ದ ಒಬ್ಬ ಹೊಸ ಕಲಾಕಾರನಿದ್ದ.
ಅವನ ಜತೆಯಲ್ಲೇ ತಿರುಗ ತೊಡಗಿದ ತ್ಯಾಂಪ.
ನೋಡಿ ನೋಡಿ ಕೊನೆಯಲ್ಲಿ ಒಂದು ಕಲಾಕ್ರತಿ ತ್ಯಾಂಪನ ಗಮನ ಸೆಳೆಯಿತು.
ಅದೊಂದು ಬಿಳಿ ಚೌಕಟ್ಟು ಮಧ್ಯದಲ್ಲಿ ಎರಡು ವ್ರತ್ತಾಕಾರದ ಕಪ್ಪು ವಸ್ತುಗಳಿದ್ದವು.
ಎಷ್ಟು ಹೊತ್ತು ನೋಡಿದರೂ ಅರ್ಥವಾಗದೇ ಕೇಳಿದ " ಇದರ ಅರ್ಥವೇನು ಗೊತ್ತೇ?"
ಹೊಸ ಕಲಾಕಾರನಿಗೂ ಅರ್ಥವಾಗಲಿಲ್ಲ,
"ಪ್ರಾಯಷಃ ಜೀವನದ ಮುಖ್ಯ ಸಂದೇಶವಿರಬಹುದು ಅನ್ನಿಸುತ್ತಿದೆ" ಎಂದನಾತ.
ಪಕ್ಕದಲ್ಲಿದ್ದ, ಇಬ್ಬರನ್ನೂ ಸೂಕ್ಷ್ಮವಾಗಿ ಗಮನಿಸುತ್ತಲಿದ್ದ ಪಹರೆಯವ ಮುಗುಮ್ಮಾಗಿ ನುಡಿದ
" ಯಾಕಿಲ್ಲ, ಕತ್ತಲೆಯಿಂದ ಬೆಳಕಿಗೆ. ಬರಲು ಸಹಾಯ ಮಾಡುವ....................!!!!!!
ಇಬ್ಬರಿಗೂ ಮುಂದಿನ ಶಬ್ದ ಕೇಳುವ ಆತುರ...............
"ಅದೊಂದು ಸ್ವಿಚ್ ಬೋರ್ಡ್"

1 comment: