Friday, April 1, 2016

ಇಹ ಕ್ಷಣ ಹೊತ್ತು... ಮರೆತಾಗ...




ಇತ್ತೀಚೆಗೆ ಒಂದು ದೊಡ್ಡ ಯೋಜನೆಗಾಗಿ ಒಂದು ವಿಚಾರಣಾ ಸಂಕೀರ್ಣ್ ಏರ್ಪಡಿಸಲಾಗಿತ್ತು.
ಅದೂ ಒಂದು ಪಂಚ ತಾರಾ ಹೋಟೆಲ್ಲಿನಲ್ಲಿ.
ಎರಡು ಸಂಪೂರ್ಣ ದಿನಗಳ ಆ ಮೀಟಿಂಗ್ ನಲ್ಲಿ ಎಲ್ಲಾ ತರಹದ ಅಧಿಕಾರಿಗಳ ದಂಡು ಇದ್ದು , ಒಂದು ಹೊಸ ಪ್ರೊಜೆಕ್ಟ್ ನ ರೂ ಪು ರೇಶೆ ಮತ್ತು ಸಾಧಕ ಬಾಧಕಗಳ ಬಗ್ಗೆ ಚರ್ಚೆ ಇತ್ತು.

ವಿಷಯ ಆ ಯೋಜನೆಯ ಬಗ್ಗೆ ಅಲ್ಲ.

ನನ್ನ ಅನುಭವದ ಬಗ್ಗೆ...
ಮೊದಲ ದಿನ ಮಧ್ಯಾಹ್ನ ಊಟಕ್ಕೆಂದು ಕೆಳಗೆ ಡೈನಿಂಗ್ ಹಾಲ್ ಗೆ ಬಂದೆವು. ಮೊದಲ ದಿನವಾದುದರಿಂದ ನನಗೆ ಅಷ್ಟಾಗಿ ಯಾರದ್ದೂ ಪರಿಚಯವಿರಲಿಲ್ಲ.

ನೂರಾರು ವಿವಿಧ ಆಹಾರಗಳನ್ನಡಗಿಸಿಕೊಂಡ ಬಾಣೆಲೆ/ ಪಾತ್ರಗಳ ಮಧ್ಯೆ ನಾನು ಸಸ್ಯಾಹಾರ ಚೀಟಿ ಹೊತ್ತ ಬಾಣೆಲೆ ಹುಡುಕುತ್ತಲಿದ್ದೆ.

ಎರಡನ್ನು ನನ್ನ ಬಟ್ಟಲಿನಲ್ಲಿ ಹಾಕಿಕೊಂಡೆ..

ಆಗಲೇ ಒಬ್ಬ ಬಂದ ಮಾಣಿ ನನ್ನೆಡೆ ವಿನಮ್ರನಾಗಿ ಸರ್ ತಮ್ಮ ರೂಂ ನಂಬರ್ ಯಾವುದು ಅಂತ ಕೇಳಿದ..

ರೂಮಾ..?
ನಾನು ಕಕ್ಕಾವಿಕ್ಕಿಯಾದೆ....
ರೂಮು..?
ಹೌದು ಸರ್ ರೂಮು...
ರೂಮಿಲ್ಲ ,
ಆಗಲೇ ಒಂದಿಬ್ಬರು ಆತನ ಕಡೆಯವರು ಸುತ್ತುವದು ಠಳಾಯಿಸತೊಡಗಿದರು ಆನ್ನಿಸಿತು.
ಮತ್ತೆ ,,?
ನಾನು ಇಲ್ಲಿ ಮೀಟಿಂಗ್ ಗೆ ಬಂದಿದ್ದೆ...
ಮೀಟಿಂಗ್..? ಯಾವ ಮೀಟಿಂಗ್..?

ಅವನು ಕೇಳೋ ರೀತಿನನಗೆ - ನಾನು ಇಲ್ಲಿಗೆ
.... ಬಿಟ್ಟಿ ತಿಂದವ ಜಾಣ
-ಅನ್ನೋ ಮಾತು ನೆನಪಿಸಿತು.

ಇಹದ ಕ್ಷಣ ಮರೆತ ಆಗ .. ನನ್ನ ಪರಿಸ್ಥಿತಿ .. ಯಾರಿಗೂ ಬೇಡ..
ವಿತ್ತು...

ಮುಂದುವರಿಯಲು ನಾನು ಬಿಡಲಿಲ್ಲ ವೆನ್ನಿ
ನಾನು ಇಲ್ಲಿಗೆ ಬಂದ ಸಕಾರಣ ವಿವರಿಸಿದ ಮೇಲೆ ಆತನಿಗೂ ನಂಬಿಗೆ ಬಂದು
ತಿನ್ನಿ ತಿನ್ನಿ ನಿಮ್ಮದೇ ಮನೆ ಅನ್ನೋ ಹಾಗೆ ಕೈ ಮಾಡಿ ಹೊರಟು ಹೋದ....

ಇದನ್ನು ನಿನ್ನೆ ಬರೆಯಲಿಲ್ಲ ಯಾಕೆಂದರೆ ನಿನ್ನೆ ಎಪ್ರಿಲ್ ಒಂದಲ್ಲವಾ..?

No comments:

Post a Comment