Sunday, September 15, 2013

ಆಫೀಸ್ ಆಫೀಸ್ ತ್ಯಾಂಪನ್ ಇಸ್ಟಾಯಿಲ್ ನಲ್ಲಿ ಅಧ್ಯಾಯ ೧




ಆಫೀಸ್ ಆಫೀಸ್ ತ್ಯಾಂಪನ್ ಇಸ್ಟಾಯಿಲ್ ನಲ್ಲಿ


೧. ನಾಟಕ ..??!!


"ರೀ ತ್ಯಾಂಪ, ಸಾಹೇಬರು ಕರೀತವ್ರೆ"  ಚಂದ್ರೂ ಕರೆದ ಜೋರಾಗಿ.


ಮೇಜಿನ ಮೇಲಿದ್ದ ಕಾಗದ ಹಾರದಿರಲು ಉಪಯೋಗಿಸುವ ಗಾಜಿನ ಕಲ್ಲೊಳಗೆ ಅದು ಹೇಗೆ ಬಣ್ಣಬಣ್ಣದ ಚಿತ್ರ ವಿಚಿತ್ರ ಚಿತ್ತಾರದ ಕುಸುರಿಯನ್ನು ಸೇರಿಸುತ್ತಾರೊ ಅಂತ ಯೋಚಿಸುತ್ತಿದ್ದ ತ್ಯಾಂಪ ಚಂದ್ರೂನ ಏಕಾಏಕಿ ಕೂಗಿಗೆ ಬೆಚ್ಚಿ ಬಿದ್ದ.
ಓಹ್ ಥುತೆರೀಕೆ!! ನೀನಾ ಏನೂ..??
ಅಂದ ತ್ಯಾಂಪನ ಪ್ರಶ್ನೆಗೆ ಮೊದಲಿನ ಮಾತನ್ನೇ ಹೇಳಿದ ಚಂದ್ರೂ.
ಕುಳಿತಲ್ಲಿಂದ ಎದ್ದ ತ್ಯಾಂಪ ಸಾಹೇಬರ ಕೋಣೆಯತ್ತ ಹೊರಟ.

ದೂಡಿದಾಗ ಒಳಕ್ಕೆ ಹೋಗಿ ಎಷ್ಟು ಗ್ರಾಹ್ಯವೋ ಅಷ್ಟನ್ನೇ ಗ್ರಾಹಿಸಿಕೊಳ್ಳುವುದರೊಳಗೆ ಪುನಃ ತನ್ನ ಮೊದಲಿನ ಸ್ಥಾನವನ್ನೇ ಆಕ್ರಮಿಸುವ ಈ ತುಂಡು ಬಾಗಿಲಿಗೂ ತನಗೂ ಅಂತಹಾ ವ್ಯತ್ಯಾಸವಿಲ್ಲ ಅನ್ನಿಸಿತು ಆತನಿಗೆ. ನಾನು ಮಾತನಾಡುತ್ತೇನೆ ಅದು ಮಾತನಾಡುವುದಿಲ್ಲ, ಅಷ್ಟೇ. ಎಷ್ಟೊಂದು ಜನರ ಬದಲು ಬದಲಾಗುವ ಅನುಭವದ ಹರಹು ಮತ್ತದರ ಭಾವ ನೋಡಿಲ್ಲ... ಹಲಕೆಲವೊಮ್ಮೆ ಬೇರೆ ಏನೋ ಯೋಚಿಸುವಾಗ ಅನಾಮತ್ತಾಗಿ ಮುಖಕ್ಕೆ ಬಡಿದು ತನ್ನ ಯೋಚನೆಯನ್ನು ಹಾಗೇ ಝಾಡಿಸಿಕೊಂಡದ್ದೂ ಇದೆ

."ಏನ್ರೀ ಯಾವಾಗಲೂ ಯೋಚನೆಯಲ್ಲಿರ್ತೀರಾ, ....ಬಟ್  ಐ ಲೈಕ್ ಇಟ್!!!"

ಈಸಾರಿ ಉತ್ತರ ಬಂದದ್ದು ಒಳಗೆ ಕುಳಿತಿದ್ದ ಹೊಸ ಬಾಸ್ ನಿಂದ
."ಮಿ ತ್ಯಾಂಪ ನಾನು ನಿಮ್ಮ ಹೊಸ ಬಾಸ್, ಆದರೆ ನೀವು ನನ್ನನ್ನು ನಿಮ್ಮವನೇ ಅಂದ್ಕೊಂಡ್ರೆ ನನಗೆ ಖುಷಿಯಾಗುತ್ತೆ. ನನಗೆ ನಮ್ಮ ಸ್ಟೇಟಸ್, ನಾವು ಮೇಲಿನವರು , ಅಂತ ಅಂದ್ಕೊಳ್ಳೋದಂದ್ರೆ ಆಗಲ್ಲ ಯು ನೋ . ನಾವೆಲ್ಲಾ ಕೆಲಸಗಾರರೇ"

ತ್ಯಾಂಪ ಆನಂದ ತುಂದಿಲನಾದ. ಇಂತಹ ಬಾಸ್ ಆತನಿಗೆ ಯಾವಾಗಲೂ ಹೊಸಬನೇ. ಎಷ್ಟು ಜನ ಹೀಗೆ ತಮ್ಮ ಸ್ಟಾಫ್ ನ್ನು ತಮ್ಮವರ ಹಾಗೆ ತಿಳಕೊಳ್ಳುತ್ತಾರೆ?.

ಅಷ್ಟರಲ್ಲಿ ಆತ ಮುಂದುವರೆಸಿದ್ದ" ಇವತ್ತು ಮೊದಲ ದಿನ ನಿಮಗೂ ನನಗೂ ಆದುದರಿಂದ ಹೇಳುತ್ತಿದ್ದೇನೆ, ಚಂದ್ರು ಹತ್ರ ಒಂದು ಡೈರಿ ಕೊಟ್ಟಿದ್ದೇನೆ ಅದನ್ನು ತಕೊಳ್ಳಿ. ನೀವು ಇನ್ನು ಮೇಲೆ ನನ್ನ ಹತ್ರ ಬರುವಾಗ ಆ ಡೈರಿ ಹಿಡಿದೇ ಬರಬೇಕು ಆಯ್ತಾ".
"ಆಯ್ತು ಸರ್:"
ರೋಗಿಗಳ ಹತ್ರ ದೊಡ್ದವರ ಹತ್ರ ಹೋಗಬೇಕಾಗಿ ಬಂದ್ರೆ ಏನಾದರೂ ಕೈಲಿ ಹಿಡಿದು ಹೋಗು ಎನ್ನುವ ಗಾದೆ ನೆನಪಾಯ್ತು ತ್ಯಾಂಪನಿಗೆ . ಹಿಂದಿನವರು ಎಷ್ಟು ಚೆನ್ನಾಗಿ ಇವೆಲ್ಲಾ ಅರಿತಿದ್ದಾರೆ ಅಂದು ಕೊಂಡ

."ಮಿ ತ್ಯಾಂಪ ನನಗೊಂದು ಸಹಾಯ ಮಾಡ್ತೀರಾ"

ಆ ಕೇಳಿಕೆ ಹೇಗಿತ್ತೆಂದರೆ ತ್ಯಾಂಪ ದೃವಿಸಿ ಹೋದ.
"ಹೇಳಿ ಸರ್""ಈ ಕವರ್ ಮತ್ತು ಫೈಲ್ ದೊಡ್ಡ ಆಫೀಸಿಗೆ ಹೋಗಿ ಕೊಡಬೇಕು, ಇಫ್ ಯು ಡೋಂಟ್ ಮೈಂಡ್....!!!"

ತ್ಯಾಂಪ ಖುಷಿ ಯಲ್ಲೇ ಉತ್ತರಿಸಿದ.
"ಅದು ನನ್ನ ಕೆಲ್ಸ ಸಾರ್, ನೀವು ಹೀಗೆ ಕೇಳಬೇಕಾದದ್ದೇ ಇಲ್ಲ.. "
"ಜತೆಯಲ್ಲಿ ಪಕ್ಕದ ರಸ್ತೆಯಲ್ಲಿ ಧನ್ವಂತರಿ ಮೆಡಿಸಿನ್ ಅಂಗಡಿ ಇದೆ ಅಲ್ಲಿಂದ ಒಂದು ಪ್ಯಾಕೆಟ್ ಕೊಡ್ತಾರೆ . ಅದನ್ನು ಹಾಗೇ ದಾರಿಯಲ್ಲಿ ಹೋಗುವಾಗ ನಮ್ಮ ಮನೆಗೆ ತಲುಪಿಸಿ ಬಿಡಿ."
"ನಿಮ್ ಮನೆ ಯಾವ ಏರಿಯಾದಲ್ಲಿದೆ ಸಾರ್?"
"ನಮ್ಮದಾ....   ಇಲ್ಲೇ ಹತ್ರ,    ವಿದ್ಯಾರಣ್ಯಪುರದಲ್ಲಿ"

ಆರ್ಟಿ ನಗರದಿಂದ ಜಯನಗರಕ್ಕೆ ಹೋಗುವಾಗ ವಿದ್ಯಾರಣ್ಯಪುರ ದಾರಿಯಲ್ಲಿ ಹೇಗೆ ಸಿಗುತ್ತೆ ತ್ಯಾಂಪನಿಗೆ ಆಶ್ಚರ್ಯ.

ಅದನ್ನೇ ಆತ ಕೇಳಲಿಲ್ಲ ಪುಣ್ಯ

"ನನ್ನ ಮಿಸೆಸ್ ಗೆ ಮೈ ಸರಿಯಿಲ್ಲ..."
"ಸರಿ ಬಿಡಿ ಸಾರ್, ಹೇಗಿದ್ರೂ ಹೋಗ್ತಾ ಇದ್ದೇನೆ ರೋಗಿಗಳಿಗೆ ಸಹಾಯ ಮಾಡಿದ ಪುಣ್ಯವಾದರೂ ಸಿಕ್ಕೀತು ನನಗೆ"

ಎಂದ ಮಂದಸ್ಮಿತ ತ್ಯಾಂಪ.

"ಇಲ್ಲ..... ತ್ಯಾಂಪ ನಿಮ್ಮ್ ಹಾಗಿನವರು ಈ ಪ್ರಪಂಚದಲ್ಲಿ ಇದ್ದಾರಲ್ಲ, ಅದೇ ಆಶ್ಚರ್ಯ!!"
ಬಾಸ್ ಅಟ್ಟಕ್ಕೇರಿಸಿದ.
ತ್ಯಾಂಪಂಗೆ ಸ್ವರ್ಗಕ್ಕೇ ಮೂರೇ ಗೇಣು.

"ನಮ್ದೇ ಗಾಡಿ ಇದೆ ಮೊಪೆಡ್, ಚಂದ್ರೂನ ಕೇಳಿದರೆ ಗಾಡಿನೂ ಕೀನೂ ಕೊಡ್ತಾನೆ, ಜತೆಗೆ ಮನೆ ವಿಳಾಸಾನೂ ಹೇಳ್ತಾನೆ ಆಯ್ತಾ, ಹೋಗಿ ಬನ್ನಿ."


ಕೀ ಕೊಡುವಾಗ ಚಂದ್ರು ಆ ಥರಾ ನಕ್ಕದ್ಯಾಕೆ ಅಂತ ತ್ಯಾಂಪನಿಗೆ ಅರ್ಥವಾಗಲಿಲ್ಲ.


ಧನ್ವಂತರಿ ಅಂಗಡಿಯಿಂದ ಎರಡು ದೊಡ್ದ ದೊಡ್ಡ ರಟ್ಟಿನ ಪ್ಯಾಕುಗಳನ್ನು ಆ ಮೊಪೆಡ್ ಗೆ ಕಟ್ಟಿಕೊಂಡು ಬ್ಯಾಲೆನ್ಸ್ ಮಾಡುತ್ತಾ ಹೊಗುವಾಗ ಎಂದುಕೊಂಡ. ಅಲ್ಲ ಇಷ್ಟು ಮೆಡಿಸಿನ್ ಯಾರಿಗಿರಬಹುದು ? ಅಂದುಕೊಂಡ ಮನಸ್ಸಿನಲ್ಲಿಯೇ, ಅಂಗಡಿಯವನ ಹತ್ರ ಕೇಳಿದ್ದರೆ ಗೊತ್ತಾಗುತ್ತಿತ್ತೇನೋ, ಆದರೆ ದೊಡ್ಡವರ ಉಸಾಬರಿ ತನಗೇಕೆ ಎಂದುಕೊಂಡ ತ್ಯಾಂಪ ಜತೆಯಲ್ಲೇ ಕೊಟ್ಟ ಕಪ್ಪಗಿನ ಪ್ಲಾಸ್ಟಿಕ್ ಚೀಲದಲ್ಲೇನಿದೆ ಎಂದು ಕೇಳಿದ ಕುತೂಹಲದಿಂದ. ಅದು ದೊಡ್ಡವರ ಸ್ನಗ್ಗೀ ಎಂದಿದ್ದನಾತ ನಗುತ್ತಾ. ಅದೇನು ಅರ್ಥವಾಗಲಿಲ್ಲ ತ್ಯಾಂಪನಿಗೆ. ಅದರ ಬಗ್ಗೆ ಹೆಚ್ಚು ಯೋಚಿಸಲಿಲ್ಲ ಆತ.


ಚಂದ್ರು ತಿಳಿಸಿದ ವಿಳಾಸದ ಮನೆಯ ಬಾಗಿಲು ಬಡಿದ. ಇವನಿಗೇ ಕಾಯುತ್ತಿದ್ದ ಹಾಗೆ ತೆರೆಯಿತು ಬಾಗಿಲು.


ನಮಸ್ಕಾರ ತ್ಯಾಂಪ ಅವರೇ ಬನ್ನಿ , ದಿನಸಿ ಸಾಮಾನೆಲ್ಲವನ್ನೂ ತಂದಿರಾ..??ದಿನಸಿ..?? ಮೆಡಿಸಿನ್ ಅಲ್ಲವಾ? ನಿಮಗೆ ಮೈ ಸರಿಯಿಲ್ಲ ಅಂದರಲ್ಲಾ ಬಾಸ್..??

"ಓಹ್ ನೀವು ನಮ್ಮವರ ಮಾತನ್ನು ನಂಬಿ ಬಿಟ್ಟಿರೇನು? "  ಗಲಗಲ ನಗುತ್ತಾ ಕೇಳಿದಳಾಕೆ ತ್ಯಾಂಪನ ಬಾಸಿಣಿ. "ಆ ಧನ್ವಂತರಿ ಮೆಡಿಸಿನ್ ಅಂಗಡಿ ಇದೆಯಲ್ಲಾ ಅದರ ಪಕ್ಕದಲ್ಲೇ ದಿನಸಿ ಅಂಗಡಿಯಿದೆ, ಅಲ್ಲಿಂದಲೇ ನಾವು ತಿಂಗಳಿಗೊಮ್ಮೆ ಇಡೀ ತಿಂಗಳಿಗೆ ಬೇಕಾದ ಸಾಮಾನೆಲ್ಲದರ ಲಿಸ್ಟ್ ಕೊಟ್ಟಿರುತ್ತೇವೆ. . ಅವನು ದಿನಸಿ ಸಾಮಾನೆಲ್ಲವನ್ನೂ ಪ್ಯಾಕ್ ಮಾಡಿ ಈ ಮೆಡಿಸಿನ್ ಅಂಗಡಿಯಲ್ಲಿಟ್ಟಿರ್ತಾನೆ. ಸಾಹೇಬರು ಯಾವುದಾದ್ಪರೂ ಆಫೀಸ್ ಬಾಯ್ ಕೈಯ್ಯಲ್ಲಿ ಮನೆಗೆ ಕಳುಹಿಸಿಕೊಡುತ್ತಾರೆ".  


ಆದರೂ ಚಂದ್ರೂನ ನಗೆಯ ಕಾರಣ ಸ್ಪಷ್ಟವಾಗಿಯೇ ಹೊಳೆಯಿತು ತ್ಯಾಂಪನಿಗೆ.


" ಓಹ್ ಐ ಆಮ್ ಸಾರಿ, ನಿಮಗಾಗಿ ಏನಾದರೂ ಮಾಡೋಣವೆಂದರೆ ಇವತ್ತು ನಮ್ಮ ಕೆಲ್ಸದವಳು ಬಂದೇ ಇಲ್ಲ,  ಆಫೀಸಿನಲ್ಲಿ ಹೊಸ ಕಾಫಿ ವೆಂಡಿಂಗ್ ಮೆಶೀನ್ ಇತ್ತೀಚೆಗೆ ಮಿ ಕಲ್ಲೂ ತರಿಸಿದ್ದರಲ್ಲ , ಅದರಲ್ಲೇ ಕುಡಿದು ಬಂದಿರಬೇಕಲ್ವಾ ನೀವು?, ಯು ನೊ ಜಾಸ್ತಿ ಕಾಫಿ ಕುಡಿಯೋದೂ ಒಳ್ಳೆಯದಲ್ಲ, ನಿಮ್ಮ ಹೆಲ್ತ್ ಗೆ"


ತಲೆ ಹೌದು ಅಥವಾ ಇಲ್ಲ ವೆನ್ನುವಂತೆ ಅಲ್ಲಾಡಿಸಿದ ತ್ಯಾಂಪ


" ಮೇಡಮ್ ಹೌದೂ, ಯಾರು ಈ ಮಿ ಕಲ್ಲೂ?" ಕೇಳಿಯೇ ಬಿಟ್ಟ, ಆತ ಹಾಗೆಯೇ, ಸಂಶಯ ಯಾಕೆ ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕು?


"ಏನು ಮಿ ತ್ಯಾಂಪ ಹೌದು ನೀವು ತುಂಬಾ ತಮಾಶೆ ಮಾಡ್ತೀರಪ್ಪಾ, ಐ ಲೈಕ್ ಇಟ್ ನಿಮ್ಮ ಬಾಸ್ ಮಿ ಕಲ್ಲೂರಾಮ್ ಯು ನೋ..!!"  ಬಾಸೂ ಬಾಸಿಣಿ ಇಬ್ಬರೂ ಉಪೇಂದ್ರರ ಭಕ್ತರಾ ಹೇಗೆ ಅನ್ನಿಸಿತು ತ್ಯಾಂಪನಿಗೆ


ಕಾಫಿ ವೆಂಡಿಂಗ್ ಮೆಶೀನ್ ಹೆಸರು ಕೇಳಿಯೇ ತನ್ನ ಮೊದಲ ದಿನದ ಘಟನೆ ಅವನ ಕಣ್ಣ ಮುಂದೆ ನಾಟಕದ ತರ ಹಾದು ಹೋಯ್ತು. ಕಾಫಿ ಅಂತ ಬರೆದ ಗುಂಡಿ ಒತ್ತಿದ, ಸಳಸಳನೆ ಕಾಫಿ ಸುರಿಯಿತು ಆದರೆ ತಾನು ಹಿಡಿದಿದ್ದ ಕಪ್ನಲ್ಲಲ್ಲ, ಅದರ ಪಕ್ಕದಲ್ಲಿ. ಸರಿ ಹಾಲಾದರೂ ಕೂಡಿಯೋಣ ಅಂತ ಹಾಲು ಗುಂಡಿ ಅದುಮಿದ ಅದು ಕಾಫಿಯ ಪಕ್ಕದಲ್ಲೇ ಜರ್ರನೆ ಇಳಿಯಿತು ಕೆಳಗಿನ ಡ್ರೈನ್ ನಲ್ಲಿ. ಸಾಯಲಿ ಅಂತ ಚಹಾ ಆದರೂ ಕುಡಿಯೋಣ ಅಂತ ಒತ್ತಿದರೆ ಸರಿಯಾದ ಜಾಗದಲ್ಲಿ ಹಿಡಿದಿದ್ದೆ ಅಂತ ಖುಷಿ ಪಟ್ಟುದು ಜರ್ರನೆ ಇಳಿಯಿತು ಕಾರಣ ಅಲ್ಲಿ ಅವನ ಕಪ್ಪಿಗೆ ಬಿದ್ದದ್ದು ಬರೀ ಬಿಸಿ ನೀರಷ್ಟೇ. ಸತ್ತೇ ಹೋಗಲಿ ಅಂತ ಅವನ ಕಾಗದದ ಕಪ್ ನ್ನು ಅಲ್ಲೇ ಬಿಸಾಕಿ ತನ್ನ ರೂಮಿಗೆ ಬಂದು ಕುಳಿತಿದ್ದ. ಆದ ಮೋಹನ್ ಲಾಲ್ ಬಂದು ಇವನ ಸಪ್ಪೆ ಮುಖ ನೋಡಿ ಅಲ್ಲಿಗೆ ಪುನಃ ಕರಕೊಂಡು ಹೋಗಿ ಕಾಫಿ ಮಾಡುವುದುಹೇಗೆ ಚಹಾವನ್ನು ತಯಾರಿಸಬೇಕಾದರೆ ಬಿಸಿನೀರು ಹಾಲು ತಕ್ಕೊಂಡು ಅದ್ದುವ ಚಹಾದ ಪೆಕೇಟ್  ಹೇಗೆ ಸೇರಿಸಬೇಕು ಅಂತೆಲ್ಲಾ ತಿಳಿಸಿಕೊಟ್ಟಿದ್ದ. ಆದರೆ ಅದೇಕೋ ಇತ್ತೀಚೆಗೆ ಆತ ತನ್ನನ್ನು ಕಂಡರೆ ಉರಿದೇಳುತ್ತಿದ್ದ. ಕಾರಣ ಮಾತ್ರ ಅಸ್ಪಷ್ಟ.


"ಸರಿ ಮೇಡಮ್ ನಾನಿನ್ನು ಬರಲೇ?"


ನೋ ನೋ ತ್ಯಾಂಪ ಸ್ವಲ್ಪ ಇರಿ, ಹಾಗೇ ಹೇಗೆ ಹೋಗ್ತೀರಾ..?


ತ್ಯಾಂಪ ಖುಷಿಯಾದ, ನೋಡಿದ ಹಾಗಲ್ಲ ಈ ಬಾಸಿಣಿ. ಏನೋ ಕೊಡಲು ಕರೆದಿದ್ದಾರೆ ಅಂದರೆ ಜ್ಯೂಸ್, ಕೋಕಕೋಲಾ, ಫಾಂಟಾ, ಅಥವಾ ಪೆಪ್ಸಿ, ಬೇಡ ಬೇಡ ಕೋಲಾ ಪೆಪ್ಸಿ ಕುಡಿಯಲೇ ಬಾರದು, ನಮ್ ಕಡೆ ಲಿಂಬೂ ಶರಬತ್, ಸ್ವಲ್ಪವೇ ಸಕ್ಕರೆ ಹಾಕಿ, ಚಿಟಿಕೆ ಉಪ್ಪು ಸೇರಿಸಿ ಕುಡಿದರೆ ಅಹ್ ಅದರ ಮಜವೇ ಬೇರೆ.


ಇಲ್ಲ ಅಂತದ್ದೇನೂ ಆಗಿಲ್ಲ, ಸ್ವಲ್ಪ ಸಮಯ ಕಳೆಯಿತು.


ಮಿ ತ್ಯಾಂಪ, ಸ್ವಲ್ಪ ಬನ್ರೀ ಇಲ್ಲಿ...


ಒಳಗಿನಿಂದ ದನಿ...


ಅದರಲ್ಲಿ ಮಾರ್ದವತೆಯಿತ್ತೇ? ,


(ನಾಳೆ ನೋಡಿ)




ಆಫೀಸ್ ಆಫೀಸ್ ತ್ಯಾಂಪನ್ ಇಸ್ಟಾಯಿಲ್ ನಲ್ಲಿ


೨. ಸಿನೇಮಾ ??!!


ಮಿ ತ್ಯಾಂಪ, ಸ್ವಲ್ಪ ಬನ್ರೀ ಇಲ್ಲಿ...ಒಳಗಿನಿಂದ ದನಿ...ಮಾರ್ದವತೆಯಿತ್ತು, ಆದರೆ ಜತೆಗೆ ಅಧಿಕಾರಯುತವಾಗಿತ್ತು.ಏನಪ್ಪಾ ಅಂದುಕೊಂಡ ತ್ಯಾಂಪ ಒಳಗೆ ಹೋದ.ಒಳಗಡೆ ಬಾಸಿಣಿ ಸಣ್ನ ದೊಡ್ಡ ಮಕ್ಕಳ ಉಪಯೋಗಿಸಿ ಬಿಟ್ಟ ಧಿರುಸುಗಳನ್ನೆಲ್ಲಾ ಒಂದು ದೊಡ್ದ ಕಿಟ್ ಬ್ಯಾಗ್ ಗೆ ತುಂಬುತ್ತಿದ್ದರು.ಏನು ಅಲ್ಲೇ ನಿಂತಿರಲ್ಲ , ಸ್ವಲ್ಪ ಹೆಲ್ಪ್ ಮಾಡಬಾರದೇ"ಸರಿ ಸುಮಾರು ಒಂದು ಘಂಟೆ ಹಿಡಿಯಿತು ತ್ಯಾಂಪನಿಗೆ ಅದೆಲ್ಲವನ್ನೂ ತುಂಬಲು.


‘ಹ್ಯಾಗಿದ್ದರೂ ಜಯನಗರ ಕಡೆ ಹೋಗ್ತಾ ಇದ್ದೀರಲ್ಲ, ಇದನ್ನ ದಯವಿಟ್ಟು ನನ್ನ ತಂಗಿ ಮನೆಗೆ ಕೊಟ್ಟು ಹೋಗ್ತೀರಾ ಪ್ಲೀಸ್, ಅವಳು ಅಲ್ಲೇ ಹತ್ರ ವೈಟ್ ಫೀಲ್ಡ್ ನಲ್ಲಿರೋದು, ಬ್ರಿಡ್ಜ್ ಹತ್ರ ಹೋಗಿ ಕೂಗು ಹಾಕಿದರೂ ಸಾಕು ಬಂದು ತಕಂಡು ಹೋಗ್ತಾಳೆ. ನಮ್ಮ ಮನೇಲಿ ಹಾಗೇ ಬಿದ್ದಿವೆ, ನನ್ನ ಮಕ್ಕಳು ದೊಡ್ದವರಾದ್ರಲ್ಲ, ಅವಳಿಗಾದರೂ ಉಪಯೋಗಕ್ಕೆ ಬರಲಿ ಅಂತ, ನಾವು ಆದಷ್ಟೂ ಬೇರೆಯವರಿಗೆ ಸಹಾಯ ಮಾಡಬೇಕು ಯೂ ನೋ"


ಹೌದು ಮೇಡಮ್, ಆಯ್ತು" ಅಂದು ಬಿಟ್ಟ ತ್ಯಾಂಪ. ಮೇಡಮ್ ಎರಡು ಸಲ ಪ್ಲೀಸ್ ಅಂದರಲ್ಲ ಪಾಪ.ಬಿಳಿ ಬಯಲು ಮತ್ತು ಜಯನಗರಕ್ಕೆ ಹೆಚ್ಚೆಂದರೆ ೨೫-೩೦ ಕಿಲೋ ಮೀಟರ್ ಆದರೂ ಇರಹುದೇನೋ ಅಂದುಕೊಂಡ.


ರಸ್ತೆಯಲ್ಲಿ ಸಿಗ್ನಲ್ಲ್ ನಲ್ಲಿ ಪಕ್ಕಕ್ಕೆ ಹಾಕಿದ ಕಟ್ ಔಟ್ ಕಂಡ.


ಆಳೆತ್ತರಕ್ಕೆ ನಿಂತಿದ್ದಾನೆ, ಆತನ ಹೀರೋ ಸುದೀಪ. ಕೆಂಪೇಗೌಡ ಸಿನೇಮಾದ ಜಾಹೀರಾತದು. ತ್ಯಾಂಪ ಸುದೀಪನ ಫ್ಯಾನು, ಅದೂ ಅಂತಿಂತಹದ್ದಲ್ಲ, ಅವನ ಎಲ್ಲಾ ಸಿನೇಮಾಗಳನ್ನೂ ಅರೆದು ಕುಡಿದಿದ್ದಾನೆ ಈತ. ತ್ಯಾಂಪಿಯ ಬೇಸರ ಆಫೀಸಿನ ದುಗುಡ ಉದ್ವೇಗ ಎಲ್ಲವನ್ನೂ ಆತ ಮರೆಯುವದು ಈ ಎರಡುವರೆಯಿಂದ ಮೂರು ಘಂಟೆಯ ಕಲ್ಪನಾ ಲೋಕದಲ್ಲೇ. ತಾನೇ ಹೀರೋ ಆಗಿ ಸಿನೇಮಾದೊಳಗೆ ಮುಳುಗಿಯೇ ಬಿಡುತ್ತಿದ್ದ ಆತ, ಕೆಲವೊಮ್ಮೆ ಹೊರಗೆ ಸಹಾ ಅದೇ ಗುಂಗಿನಲ್ಲಿ ಇದ್ದು ಬಿಡುತ್ತಿದ್ದ. ಈ ಕೆಂಪೇಗೌಡ ಸಿನೇಮಾನ ನೋಡ ಬೇಕೂ ಅಂತ ತುಂಬಾ ದಿನಗಳಿಂದ ಸ್ಕೆಚ್ ಹಾಕ್ಕೊಂಡೇ ಇದ್ದ. ರಜಾ ದಿನ ಮತ್ತು ರವಿವಾರ ಇದು ಸಾಧ್ಯ ಆಗಲ್ಲ.ಯಾಕೆಂದರೆ ರಜಾ ದಿನಗಳಲ್ಲಿ ಆತ ಮನೆಯಲ್ಲಿಲ್ಲದಿದ್ದರೆ ತ್ಯಾಂಪಿ ಸಾಯಿಸಿ ಬಿಟ್ಟಾಳು.


ಬಾಸಿಣಿ ಕೊಟ್ಟ ವಿಳಾಸದ ಕಾಗದವನ್ನು ನೋಡುತ್ತಾ ಆ ದೊಡ್ಡ ಗೂಡ್ಸು ಕಿಟ್ ನ ಭಾರ ಬ್ಯಾಲೆನ್ಸ್ ಮಾಡಿಕೊಂಡು ತಲುಪಿದ ವೈಟ್ ಫೀಲ್ಡ್ ಅಲ್ಲಲ್ಲ ಬಿಳೀ ಬಯಲಿಗೆ.


ಬಿಳಿಬಯಲ ಸೇತುವೆ ಬಳಿ ಬಂದು ಯಾರನ್ನ ಕೂಗು ಹಾಕಬೇಕು? ಏನಂತ? ಅಲ್ಲಿ ಯಾರು ಬಂದಾರೂ?


ಆದರೂ ವಿಳಾಸವನ್ನು ಹಿಡಿದು ಆತನೂ ಅವನ ಗೂಡ್ಸೂ ಬಂದು ತಲುಪಿದ್ದು ಗೋಲ್ಡನ್ ಫೀಟ್ ಭವನ ಸಮುಚ್ಚಯಕ್ಕೆ. ಬಾಸಿಣಿ ಕೊಟ್ಟ ಗುರುತು ಪತ್ರ ಹಿಡಿದು ಆ ಭವನ ಸಮುಚ್ಚಯದ ದ್ವಾರದ ಬಳಿ ಬಂದ.


ಆದರೆ ಇದಿರಲ್ಲೇ ಬರೆದು ಹಾಕಿದ್ದರು ಒಂದು ಫಲಕವನ್ನ. ಅದರಲ್ಲಿ


ದೊಡ್ಡದಾಗಿ ಬರೆದಿತ್ತು, ಅಗಂತುಕರ ವಾಹನಗಳಿಗೆ ಪ್ರವೇಶವಿಲ್ಲ.


ದ್ವಾರದವ ನಿರ್ದಾಕ್ಷಿಣ್ಯವಾಗಿ ಹೇಳಿದ.


ಒಳಗೆ ಹೋಗಬೇಕಾದರೆ ನಡೆದೇ ಹೋಗಬೇಕು.


ಆ ಹೊರಲಾರದ ಹೊರೆ ಹೊತ್ತು ತ್ಯಾಂಪ ಎತ್ತಿಗೆ ಬಳಿ ಬಂದ


ಆ ಗುರುತು ಪತ್ರದಲ್ಲಿದ್ದಂತೆ ಬಾಸಿಣಿಯ ತಂಗಿ ಇರೋದು ಏಳನೆಯ ಮಹಡಿಯಲ್ಲಿ.


ನಿಮಗೆ ನೆನಪಿದೆಯೋ ಇಲ್ಲವೋ ನಾನೇ ಪುನಃ ಹೇಳ್ತೀನಿ, ತ್ಯಾಂಪನಿಗೆ ಎತ್ತಿಗೆ ( ಲಿಫ್ಟ್) ಯೆಂದರೆ ಹೆದರಿಕೆ, ಅದೂ ಅಂತಿಂತಹದ್ದಲ್ಲ, ಗಡಗಡ ನಡುಗುವಷ್ಟು, ಇದಕ್ಕೆ ಕಾರಣ ಗೊತ್ತಿಲ್ಲದವರಿಗೆ ಇನ್ನೊಮ್ಮೆ ಹೇಳೋಣ ಇಲ್ಲಿ ರಸಭಂಗವಾಗುವುದು ಬೇಡ.


ಆ ಏಳನೆಯ ಮಹಡಿ ಹತ್ತಿ ಬಾಸಿಣಿಯ ತಂಗಿ ಮನೆಗೆ ನುಗ್ಗುವಾಗ ತ್ಯಾಂಪನ ಕೈಕಾಲೆಲ್ಲಾ ಬಿದ್ದು ಹೋಗಿತ್ತು.ತ್ಯಾಂಪನನ್ನು ಆದರದಿಂದ ಬರಮಾಡಿಸಿಕೊಂಡ ಆಕೆ ಆತನನ್ನು ಸೋಫಾದಲ್ಲಿ ಕುಳ್ಳಿಸಿರಿದಳು. ಅದಕ್ಕೆ ಮೊದಲು ಈ ಕಿಟ್ ಬ್ಯಾಗ್ ನ್ನು ಅವನಿಂದಲೇ ತಮ್ಮ ಬೆಡ್ ರೂಮಿನಲ್ಲಿರಿಸಿಕೊಳ್ಲಲು ಮರೆಯಲಿಲ್ಲ.


ಸ್ವಲ್ಪ ಇರಿ ಬಂದೆ ಎಂದು ಒಳಹೋದಳು ಅವಳು. ಒಳಗಿನಿಂದ ಅಡಿಗೆ ಮನೆಯಿಂದ ಯಾವುದೋ ಕಮ್ಮನೆಯ ಸುವಾಸನೆ ತ್ಯಾಂಪನ ನಾಸಿಕಾಗ್ರಕ್ಕೆ ಬಡಿಯಿತು.
ತುಂಗಮ್ಮಾ, ಆ ಜೂಸ್ ತಾರಮ್ಮ ಅಂತ ಮನೆಯೊಡತಿಯ ದನಿತ್ಯಾಂಪಂಗೆ ಖುಷೀ ಆಯ್ತು,

ನಿಜವಾಗಿಯೂ ಈಗ ಅದರ ಅವಶ್ಯಕಥೆಯಿತ್ತು ಆತನಿಗೆ.ತುಂಗಮ್ಮ ಹೊರಗೆ ಬಂದಳು,ತ್ಯಾಂಪನಿಗೆ ಅವಳನ್ನು ನೋಡಿಯೇ ದಾಹ ಇಂಗಿತ್ತು. ಕೆಲಸಗಾರರಲ್ಲಿಯೂ ಇಷ್ಟು ಚೆಲುವೆಯರಿರುತ್ತಾರಾ?

ಇನ್ನೇನು ಅವಳ ಕೈಯಲ್ಲಿದ್ದ ಗ್ಲಾಸ್ ನ್ನು ತ್ಯಾಂಪ ಎತ್ತಿ ಮೈ ಮೇಲೆ ಹಾಕ್ಕೊಳ್ಳಬೇಕು..
ಅಲ್ಲಲ್ಲ

"ತುಂಗಾ,.......:" ತಂಗಿ ಬಾಸಿಣಿಯ ಧ್ವನಿ...ಇಬ್ಬರೂ ಎಚ್ಚರಾದರು"

ಎಷ್ಟು ಸಲ ನಿಂಗೆ ಹೇಳಿಲ್ಲ, ಹಾಗೆಲ್ಲಾ ಬಂದವರೆದುರಿಗೆಲ್ಲಾ ಗ್ಲಾಸು ಹಿಡಿದುಕೊಂಡು ಹೋಗಬೇಡ ಅಂತ.  ಆ ಜ್ಯೂಸು ತಕೊಂಡು ಇಲ್ಲಿ ಬಾ, ಡಾಕ್ಟರು ನಂಗೆ ನೀರು ಕುಡೀಬಾರದು, ಬದಲು ಜ್ಯೂಸ್ ಕುಡಿಯ ಬೇಕು ಅಂದದ್ದಲ್ಲವಾ?‘

“ ಬೇಸರ ಇಲ್ಲ ಅಲ್ವಾ? ತ್ಯಾಂಪ ಅವರೇ , ಮನೆಗೆ  ಹಣ್ಣು ತರಲು ಮರೆತಿದ್ದೆ, ಇದೊಂದು ಜ್ಯೂಸು ಮಾತ್ರ ಉಳಿದಿರುವುದು, ಅದಕ್ಕೇ ಹಾಗೆ ಹೇಳಿದೆ

.‘ತ್ಯಾಂಪ ಇನ್ನೇನು ತಾನೇ ಮಾಡಬಹುದು, ಕೋಲೇ ಬಸವನಾದ.‘ಮಧ್ಯಾನ್ನ ವಾಯ್ತಲ್ಲವಾ? ಕಾಫಿ ಎಲ್ಲಾ ಈಗ ಕುಡಿಯ ಬಾರದು. ಊಟದ ಸಮಯದಲ್ಲಿ ಕಾಫಿ ಚಹಾ ತಕೊಂಡರೆ ಗ್ಯಾಸ್ ಆಗುತ್ತೆ."


ಬಾಸಿಣಿ ಅವಳ ತಂಗಿ ಇಬ್ಬರು... ಕಂಜೂಸ್ ಮಾರ್ವಾಡಿಗಳು. ಇನ್ನು ಇಲ್ಲಿ ಕುಳಿತೇನು ಮಾಡುವುದು?   ‘ಸರಿ ನಾನಿನ್ನು ಬರ್ತೀನ“ ಅಂದ ತ್ಯಾಂಪ‘ಸ್ವಲ್ಪ ಇರಿ, ಅರೆರೇ, ಅದು ಹಾಗೇ ಹೇಗೆ ಹೋಗ್ತೀರಾ?‘


ಇಲ್ಲ ಇಲ್ಲ ಊಟಕ್ಕೇ ಹೇಳಬಹುದು ಅಂದುಕೊಂಡ ತ್ಯಾಂಪ.


ಮತ್ತೆ ಅರ್ಧ ಗಂಟೆ ಕಳೆಯಿತು.


ಈ ಸಾರಿ ಹೊರ ಬಂದವಳೇ ಏನ್ರೀ ಇದರಲ್ಲಿ ಐದು ನೂರು ಬಟ್ಟೇ ಇರಬೇಕಿತ್ತು, ನಾಲ್ಕು ನೂರಾ ತೊಂಭತ್ತೊಂಬತ್ತೇ ಇದೆ.... ಎನ್ನುತ್ತಾ ತ್ಯಾಂಪನನ್ನು ನಖಶಿಖಾಂತ ನೋಡಿದಳು.


ತ್ಯಾಂಪ ಉರಿದು ಬಿದ್ದ


ಕಮ್ಮಿ ಇದ್ದರೆ..... ಏನು ಹೇಳುತ್ತಿದ್ದನೋ ಅಷ್ಟರಲ್ಲಿ ಕರೆ ಬಂತು.


ಹೋ, ಹೌದಾ, ಅಲ್ಲಿಯೇ ಇತ್ತಾ....


ನಾನು ಸುಮ್ಮನೇ ಈ ತ್ಯಾಂಪನ ಮೇಲೆ ಸಂಶಯ ಪಟ್ಟೆ...ಎಂದಳು ತಂಗಿಣಿ


ಈ ಕಡೆ ತಿರುಗಿ " ತ್ಯಾಂಪ ಅವರೇ... ಸಾರಿ.. " ಎಂದಳು


ಆದರೆ ಎಲ್ಲಿದ್ದಾನೆ ಆತ ..?


೩. ಗಜ್ಜರಿ- ಪುರಾಣ


ಬೆಳಿಗ್ಗೆ ೮.೩೦

ತ್ಯಾಂಪಣ್ಣ ಬನ್ನಿ ಇಲ್ಲಿ,

ಸಾಹೇಬರು ಕರೀತಾ ಇದ್ದಾರೆ

ಬೆಳಿಗ್ಗೆ ಬೆಳಿಗ್ಗೆ ಯಾಕಪ್ಪ ಕರೆದರು ಬಾಸು ಅಂದಕಂಡು ಹೋದ ತ್ಯಾಂಪ.

ಹೇಳಿಸಾರ್ ಏನು ವಿಷ್ಯ?

ನಿಮ್ ಡೈರಿ ಎಲ್ಲಿದೆ?

ಕರೆದದ್ದು ಯಾಕೆ ಅಂತ ಹೇಳಿ

ರ್ನಾನು ನಿಮ್ ಬಾಸ್ ನಾನು ಕರೆದಾಗಲೆಲ್ಲಾ ನೀವು ಬರಬೇಕು, ನಾನು ಹೇಳಿದ ಇನ್ಸ್ಟಕ್ಷನ್ ನೀವು ತೆಗೆದುಕೊಳ್ಳಬೇಕು. ಅದಕ್ಕೇ ನಿಮ್ಮ ಬಲಿ ಡೈರಿ ಇರಲೇ ಬೇಕು ಗೊತ್ತಾಯ್ತಾ?

ತ್ಯಾಂಪ ಹಲ್ಲು ಕಿರಿದಸರ್ ನನ್ನ ತಲೆ ಕಂಪ್ಯೂಟರ್ ತರಾ, ಒಂದು ಸಾರಿ ಒಳಗೆ ಬಿದ್ದರೆ ಮತ್ತೆ ನೀವೇ ಡಿಲೀಟ್ ಮಾಡ್ಸಿದರೂ ಹೋಗಲ್ಲ, ನೀವೇನೂ ತಲೆ ಬಿಶಿ ಮಾಡ್ಕೋಭೇಡಿ ಎಲ್ಲಾ ಇಲ್ಲಿ ಅಚ್ಚಾಗಿರತ್ತೆ.

ಮೊನ್ನೆ ಮೊನ್ನೆ ಹೇಳೀದ್ದೆನಲ್ಲ, ಜಯನಗರ ಆಫೀಸಲ್ಲಿ ನೀರಿನ ಸಮಸ್ಯೆ ಇದೆ ಅಂತ ಹೋಗಿ ನೋಡಿ ಬಂದ್ರೇನ್ರೀ?

ಇಲ್ಲ ಸರ್ ಅದೂ....ಏನ್ರೀ ಅದೂ ಮರೆತೋಯ್ತು ಅಂತೀರಿ ಅಲ್ವಾ. ನಂಗೊತ್ತುರೀ, ನೀವು ಹೀಗೇ ಹೇಳ್ತೀರಾ ಅಂತ. ಇವತ್ತೊಂದು ದಿನ ಬಿಟ್ಬಿಡೀ ಮುಂದೆಂದೂ ಹೀಗಾಗಲ್ಲ ಅಂತ

ಅಲ್ಲ ಸರ್ ಅದೂ...ಮತ್ತೇನ್ರೀ, ಈ ಸಾರಿ ನಿಮ್ಮ ಯಾವ ನಾಟಕಾನೂ ನನ್ನ ಹತ್ರ ನಡೆಯೋಲ್ಲ, ನಾನು ಸ್ಟಿಕ್ಟ್ ಬಾಸ್. ಹೇಳಿ ಯಾಕೆ ಜಯನಗರ ಆಫೀಸ್ ಹೋಗಿ ನೋಡಿಲ್ಲ ನೀವು?ನಿಮ್ಮ್ ಹತ್ರ ಏನಿದೆ ಕಾರಣ. ಅದಕ್ಕೇ ಹೇಳಿದ್ದು ನಿಮ್ಮ ಮರೆಗುಳಿತನ ಜಾಸ್ತಿಯಾಗಿದೆ ಅಂತ ಇತ್ತೀಚೆಗೆ...

"ತ್ಯಾಂಪನಿಗೆ ಸಿಟ್ಟು ಏರಿತು

ಅದೂ ಇಲ್ಲ ಇದೂ ಇಲ್ಲ, ನೀವೇ ಹೇಳಿದ್ರಲ್ಲ ನಿಮ್ಮ ಮನೆಗೆ ಯಾರೋ ನಿಮ್ ಸಂಭಂಧಿಯೊಬ್ಬರು ಬರ್ತಾ ಇದ್ದಾರೆ, ಅದಕ್ಕೇ ನಿಮ್ಮ್ ಮನೆಗೆ ಹೋಗಿದ್ದೆ,ಇಡೀ ದಿನ ಅಲ್ಲೇ ಇದ್ದೆ

"ಅದೇನ್ರೀ ತ್ಯಾಂಪ, ಒಂದು ಇಡೀದಿನ ಇದ್ರಾ, ನಾನು ನಿಮ್ಗೆ ಹೇಳಿರಲಿಲ್ಲ? ಕೂಡ್ಲೇ ವಾಪಾಸ್ಸು ಬರಬೇಕು ಅಂತ? ಒಂದು ಇಡೀ ದಿನ!!!!, ಅದಕ್ಕೆಷ್ಟೂ ಬೆಲೆ ಗೊತ್ತಾ ನಿಮ್ಗೆ?..... ಅಲ್ಲರೀ ಇಡೀ ದಿನ ಮನೇಲಿರುವಂತದ್ದೇನಿದೆ ಹೇಳಿ ನೋಡುವಾ?"

"ನಿಂ ಧರ್ಮ ಪತ್ನಿ ಸಾರ್..."

ಏನ್ರೀ ತ್ಯಾಂಪಾ ಏನ್ ಹೇಳ್ತಾ ಇದ್ದೀರಾ ಅಂತ ಗೊತ್ತಿದೆ ಯೇನ್ರೀ

"ಹೌದು ಸಾರ್
ನಿಮ್ಮ ಧರ್ಮ ಪತ್ನಿ ತರಲು ಹೇಳಿದ್ದಾ ವಸ್ತುಗಳಿಗಾಗಿ ಒಂದು ಇಡೀ ದಿನ ವೇಸ್ಟ್ ಆಯ್ತು ಸಾರ್.

ಏನ್ರೀ ಹೀಗಂತೀರಾ, ನಾನೂ ನೋಡಿದ್ದೆ ಆ ಲಿಸ್ಟ್ ಅಷ್ಟು ಹೊತ್ತೇನ್ರೀ ಅದನ್ನ ತರಲಿಕ್ಕೆ? ನೋಡೋಣ ಬೆಳಗ್ಗಿಂದ ಎಲ್ಲೆಲ್ಲಿ ಹೋದ್ರೀ ಏನ್ ಮಾಡಿದ್ರೀ ಹೇಳಿ ನೋಡೋಣ?"


ಹೇಳ್ತೀನಿ ಸರಿಯಾಗಿ ಕೇಳಿಸರ್, ನಿಮ್ ಧರ್ಮ ಪತ್ನಿ ಹೇಳಿದ್ರೂ : ಬರೋರು, ಆವರ ಅಪ್ಪ ಅವರಿಗೆ ಬೇಕಾದ ಸಾಮಾನು ತಾ ಅಂದ್ರು ಸರ್
ಅವರ ಲಿಸ್ಟಲ್ಲಿರೋ ಐಟಮ್ಮು ಮೂರೇ ಮೂರು ಸಾರ್

"ಅಲ್ಲಾರೀ ನಾಚ್ಗೆ ಆಗಲ್ವಾ ನಿಮ್ಗೆ? ಮೂರು ಐಟಮ್ಮು ತರಲು ಇಡೀ ದಿನ ಹಿಡಿಯುತ್ತೇನ್ರೀ?"

"ಹೌದು ಸಾರ್, ಹಿಡೀತು"

ಅದಲ್ಲದೇ ನಮ್ ಗಾಡಿಯಲ್ಲೇ ಬೇರೆ ಹೋಗಿದ್ದಲ್ವಾ ನೀವು?

?"ಹೌದು ಸಾರ್ ನಿಮ್ಮ ವಿಕೆಡ್ ನಲ್ಲೇ ಹೋಗಿದ್ದೆ ಸರ್"

"ವಿಕೆಡ್ ಅಲ್ಲ ಮೋಪೆಡ್ ಅದು'

ಅದೇ ಸಾ
ರ್ಸರಿ ಮುಂದೆ ಹೇಳಿ

ಮೊದಲ ವಸ್ತು ಗಜ್ಜರಿ ಸಾರ್"
ಗಜ್ಜರಿ ಅಲ್ಲರೀ ಗಾಜರ್ ಅದು. ಕನ್ನಡವೂ ಸರಿಯಾಗಿ ಬರಲ್ಲ ನಿಮ್ಗೆ, ಯಾವ್ದೋ ಒಂದು ಹಾಪ್ಕಾಮ್ ಮಳಿಗೆಗೆ ಹೋಗಿ ತರಬೇಕಾಗಿತ್ತು?

ಮೊದಲು ಹಾಗೇ ಮಾಡ್ದೆ ಸಾರ್, ಆದ್ರೆ ನಿಮ್ ಧರ್ಮ ಪತ್ನಿಯವರು ಮೊದಲು ತಂದ ಗಾಜರ್ ನ್ನು ಎಲ್ಲಿಂದ ತಂದೆನೋ ಅದೇ ಮಾರ್ಕೇಟ್ ಅಂಗಡಿಗೆ ಕೊಟ್ಟು ನಂತರ ಮುಂದೆ ಹೋಗಲು ಹೇಳಿದ್ರು ಸರ್

.ಅವ್ಳು ಹಾಗೇ ಬಿಡಿ, ಅವ್ಳ್ ಹೇಳಿದ್ದೇ ಆಗ ಬೇಕು ಅವ್ಳಿಗೆ. ನಂತರ?

ಅದೇ ಸರ್ ಅದಕ್ಕೇ ಮೊದಲು ಮಲ್ಲೇಶ್ವರಮ್ ಮಾರ್ಕೇಟ್ ಹೋದೆ ಸರ್, ಅಲ್ಲಿ ಸಿಗಲಿಲ್ಲ ಸ

ರ್ಅಲ್ಲಾರೀ ಯಾರಾದ್ರೂ ನಂಬ್ತಾರೇನ್ರೀ ಮಲ್ಲೇಶ್ವರಮ್ ತರಕಾರೀ ಮಾರ್ಕೇಟ್ ನಲ್ಲಿ ಗಾಜರ್ ಸಿಗಲಿಲ್ಲ ಅಂದ್ರೆ

ಇದು ಅಂತಿಂತ ಗಜ್ಜರಿ ಅಲ್ಲ ಸರ್, ರವೀಂದ್ರ ಕಲಾಕ್ಷೇತ್ರದಲ್ಲಿ ಅದರ ಹೆಸರು ಬರೆದಿದ್ದ ಬಣ್ಣದ್ದು ಬೇಕಂತೆ , ಅಂತ ಬಣ್ಣದ್ದು ಸಿಗಲಿಲ್ಲ ಸರ್

"ಅದೇ ಯಾಕಂತೆ? ಬೇರೆ ಗಾಜರ್ ಯಾಕಾಗಲ್ವಂತೆ?

ನಿಮ್ಮಪ್ಪನಿಗೇ ಅದೇ ಬಣ್ಣದ್ದು ಇಷ್ಟ ಅಂತೆ ಸರ್,

ಹೋ ಹೌದೌದು ಸರಿ ಕರೆಕ್ಟ್ ನಮ್ಮ್ ಅಪ್ಪಂಗೆ ಬೇರೆ ಬಣ್ಣದ್ದು ಗಾಜರ್ ಆಗಿ ಬರಲ್ಲ. ಅಲ್ಲಿಲ್ಲ ಅಂದ್ರೆ ಜಯನಗರ ಮಾರ್ಕೇಟ್ ಗೆ ಹೋಗ ಬೇಕಾಗಿತ್ತು

ಹೌದು ಸರ್ ಅಲ್ಲಿಗೇ ಹೋದೆಸಿಕ್ಕಿತಾ?
ಸಿಕ್ಕಿತು ಸ

ರ್ಗುಡ್. ಕೂಡ್ಲೇ ಅಲ್ಲಿಯ ಆಫೀಸಿಗೆ ಹೋಗಿ ಬರಬಹುದಿತ್ತಲ್ಲ

ಅಲ್ಲಿಗೇ ಹೊರಟಿದ್ದೆ ಸಾರ್, ಅಶೋಕ ಪಿಲ್ಲರ ಹತ್ರ ಹೊಗ್ತಾ ಇದ್ನಾ...!!!????


ಏನಾಯ್ತು?


೪. ಅವರಲ್ಲ ಇವರು..??!!

ಏನಾಯ್ತು?



ನಿಮ್ಮವರ ಕರೆ ಬಂತು ಸಾರ್, ಗಾಡೀನ ಪಕ್ಕದಲ್ಲಿ ನಿಲ್ಸೀ ಕರೆ ಮಾಡ್ದ್ರೆ ನಿಮ್ಮವರಿಗೆ,

ನಿಲ್ಲಿ, ಇಲ್ಲಿಂದ ಸ್ವಲ್ಪ ಹಿಂದೆ ಹೋಗಬೇಕು ಕಾಲದಲ್ಲಿ, ನಿಮಗೆ ಈ ಕರೆಯ ಹಿನ್ನೆಲೆ ಅರ್ಥವಾಗಬೇಕಿದ್ದರೆ:


.....................................................................................................................

ತ್ಯಾಂಪನಿಗೆ ಬಾಸ್ ನ ಧರ್ಮ ಪತ್ನಿ ಕರೆ ಮಾಡುವ ಸ್ವಲ್ಪ ಮೊದಲು , ಬಾಸ್ ಗೂ ಕರೆ ಬಂದಿತ್ತು, ಮನೆಯಿಂದ

"....................................."

ಯಾಕೆ ಏನಾಯ್ತೇ
?".....................................

"ನೀನು ಹೈಪರ್ ಆಗಬೇಡ, ನಾನು ಅವರಿಗೆ ಹೇಳ್ತೇನೆ

"....................................."

ನಾನು ಹೇಳ್ತೇನೆ ಅಂದೆನಲ್ಲಾ

"....................................."

ಮೊದಲಿನ ಕಥೆ ಬೇರೆ ಈಗಿನ ಕಥೆಯೇ ಬೇರೆ
"....................................."
ನೀನು ನೋಡ್ತಾ ಇರು... ನಿಂಗೇ ಗೊತ್ತಾಗುತ್ತೆ ಬಿಡು
"....................................."

ಅದು ಮುಗಿದ ತಕ್ಷಣ ಇನ್ನೊಂದು ಕರೆ
"....................................."

ಏನಾಯ್ತಪ್ಪಾ, ಬೆಳಿಗ್ಗೆ ಬೆಳಿಗ್ಗೆ ಸೊಸೆಯ ಹತ್ರ ಜಗಳ ಮಾಡ್ಕೊಂಡ್ರಾ?
"....................................."

ನೀವು ಹಿರಿಯರು ನೀವೇ ಸುಧಾರಿಸ್ಕೊಂಡು ಹೋಗಬೇಕು, ಅಂತಾದ್ರಲ್ಲಿ ..
."....................................."

ಮನೆ ಸಂಸಾರ ಅಂದ್ರೆ ಒಂದು ಮಾತು ಬರುತ್ತೆ ಹೋಗುತ್ತೆ ಅಂತಾದ್ರಲ್ಲಿ

"....................................."

ಮನೆ ನಿಮ್ಮದೇ ನಿಜ ಪಪ್ಪಾ, ಹಂಗಂತ..

"....................................."

ನಂಗೂ ಗೊತ್ತಿದೆ ಅಪ್ಪಾ, ಇದೆಲ್ಲಾ ಅವಳ ಅಮ್ಮಂದೇ ಕಿತಾಪತಿ ಅಂತ,, ಆದರೂ ಅವಳು ನಿಮ್ಮ ಸೊಸೆ ಅನ್ನೋದನ್ನ ಮರೀಬೇಡಿ
."....................................."

ನಾನು ಏನಾದರೂ ಮಾಡಿ ಹೊರಗಡೆ ಎಲ್ಲಿಯಾದರೂ ಅವಳಮ್ಮ ಆ ಗಠಾಣಿಯನ್ನು ಕಳಿಸಿ ಬಿಡ್ತೇನೆ ನೋಡ್ತಾ ಇರು

"....................................."

ಇರಲಿ ಬಿಡು ಪಪ್ಪ, ನಾನು ಅದನ್ನೆಲ್ಲಾ ನೋಡ್ಕೋತಿನಿ ಬಿಡಿ

"....................................."

.........................................................................................................................

.ಓವರ್ ಟು ತ್ಯಾಂಪ

ಸೀದಾ ಜಿಗ್ಣಿ ಹತ್ರ ಯಾವ್ದೋ ಇದು ಇತ್ತಲ್ಲ ಸರ್....!!!

ಯಾವ "ಇದೂ" ರೀ

ಅದೇ ಸರ್ ಭಾರ ಇಳಿಸೋದೂ ಆಫೀಸ್

ತುಥ್ ನಿಮ್ಮ..... ನೇಚುರೋಪತಿ ಆಸ್ಪತ್ರೆನಾ?ಹೌದು ಸರ್ ಅದೇ

ಸರಿ

ಅದಕ್ಕೆ ಹೋಗಿ ಅಮ್ಮಂಗೆ ಅಲ್ಲಿ ೧೫ ದಿನ್ ಬುಕ್ ಮಾಡಿ ಬಾ ಅಂದ್ರೂ ಸರ್

ಅದೇನು ಅಮ್ಮನಿಗೆ ಭಾರ ಕಡಿಮೆ ಮಾಡ್ಲಿಕ್ಕೆ ಇತ್ತಂತಾ?

ಹೌದು ಸರ್

ಆಮೇಲೆ?

ಆಮೇಲೆ ನೋಡಿದ್ರೆ ಗಾಡಿ ಶುರುವೇ ಅಗಿಲ್ಲ ಸರ್, ಎಷ್ಟು ಪ್ರಯತ್ನ ಪಟ್ಟೇ ಸರ್ ಸ್ಟಾರ್ಟೇ ಆಗ್ಲಿಲ್ಲ ಸರ್. ಅದಕ್ಕೇ ಪುನಃ ಅವ್ರಿಗೆ ಕರೆ ಮಾಡಿ ಹೇಳ್ದೆ ಸರ್

ಏನಂದ್ರು..???

ಸಿಕ್ಕಾ ಪಟ್ಟೇ ಬೈದ್ರೂ ಸರ್

ಪಾಪ ತ್ಯಾಂಪ, ನಿಮ್ಮನ್ನ ಬೈದ್ರಾ?

ನನ್ನನ್ನ ಅಲ್ಲ ಸರ್ ನಿಮ್ಮನ್ನ!!!

ನನ್ನನ್ನಾ .......ಏನಂದ್ರೂ?

ಆ ಮುಂಡೇ ಗಂಡನಿಗೆ ರವಷ್ಟೂ ಬುದ್ದೀ ಇಲ್ಲ, ಎಶ್ಟ್ ಸರಿ ಹೇಳಿದ್ದೀನಿ ರಿಪೇರಿ ಮಾಡ್ಸಿ ಸಾಯ್ರಿ ಅಂತ, ಅಥವಾ ಎಲ್ಲಾದ್ರೂ ಕೊಟ್ಟು ಹೊಸ್ತಾದ್ರೂ ತರಬಾರ್ದಾ, ಅವ್ರಪ್ಪ ಅಮ್ಮನ ಕಾಣಿಕೆ ಅಂತ ಕುತ್ತಿಗೆಗೆ ಕಟ್ಕೊಂಡೇ ಇರೋಕೆ ಹೇಳು ಅಂದ್ರೂ ಸಾರ್

ಬಾಸ್ ಮುಖ ವರ್ಸ್ಕೊಂಡ ಸರಿ ಅಲ್ಲಿಂದ ಜಿಗಣಿಗೆ ಹೋದ್ರಾ?

ಹೌದು ಸರ್ ಬುಕ್ ಮಾಡಿಯೂ ಬಂದೆ ಸರ್

ಗುಡ್!! ತ್ಯಾಂಪ ಪೀಡೇ ತೊಲಗ್ತು

ಯಾಕೆ ಸರ್ ಅಮ್ಮಂಗೆ ಯಾರಾದ್ರೂ ಬೈತಾರಾ?

ಅಮ್ಮ ಅಲ್ಲ ತ್ಯಾಂಪ ಅವ್ರೇ ನನ್ ಪಾಲಿನ್ ಶನಿ ಅದು

ನನ್ ಕೇಳಿದ್ರೆ ಒಂದ್ ತಿಂಗಳ ವರೆಗೆ ಬಿಡ ಬೇಡಿ ಅಂತ ಹೇಳ್ತೀನಿ ಎಲ್ಲಿ ಫೋನ್ ನಂಬ್ರ ಕೊಡಿ, ಎಷ್ಟನೇ ನಂಬ್ರ ರೂಮು ಹೇಳಿ

೨೬ ಸರ್

"....................................."ಹಲ್ಲೋ ನೆಚುರೋಪತಿ, ನಿಮ್ಮಲ್ಲಿಗೆ ಬರುವ ೨೬ ನಂಬ್ರ ಪೇಷಂಟ್ ನ್ನು ಅಲ್ಲಿ ಒಂದು ತಿಂಗಳು ಇಟ್ಕೊಂಡಿರಿ, ಅಲ್ಲಲ್ಲ ಹದಿನೈದಲ್ಲಾ, ಮೂವತ್ತು ದಿನ , ಖರ್ಚು ಎಷ್ಟಾದರೂ ನಾನು ಕೊಡ್ತೀನಿ.

ಆಗಲೇ ಫೋನ್ ಬಂತು, ಮನೆಯಿಂದ ಸಾಹೇಬರ ಅತ್ತೇದೂ ಫೋನ್.

"ಎಲ್ ಹಾಳಾಗಿ ಹೋದ್ಯೋ ಮುಂಡೇದೇ...."

"ಅ ಅಮ್ಮಾ ಬಂದೇ......"

"ಸಂಜೆ ಬೇಗ ಬಂದ್ಬಿಡೂ ನಮ್ ಯಜಮಾನ್ರೂ ಬರ್ತಾ ಇದ್ದಾರೆ..."

"ಸರಿ ಸರಿ ಅಮ್ಮ....", ಪುನಃ ಮುಖ ವರ್ಸ್ಕೊಂಡ್ರೂ ಬಾಸು.

"ನಾಳೆಯಿಂದ ಇರಲ್ಲ ಅಲ್ವಾ ಇವತ್ತು ಎಷ್ಟು ಮೆರೀತಿಯೋ ಮೆರಿ" ಅಂತ ಹಲ್ಕಡ್ದ್ರು ಬಾಸ್

"ಯಾಕೆ ಸಾರ್ ನಿಮ್ ಅತ್ತೆ ಅಲ್ವಾ? ನಾಳೆಯಿಂದ ಎಲ್ಲಿಗೆ ಹೋಗ್ತಾರೆ...??" ಕೇಳಿದ ತ್ಯಾಂಪ

"ನೀವೇ ಜಿಗಣಿಯಲ್ಲಿ ಬುಕ್ ಮಾಡಿ ಬಂದ್ರಲ್ರೀ....???"

"ಇವ್ರಿಗೆ... ಅಲ್ಲ ಸಾರ್!! ಬುಕ್ ಮಾಡಿದ್ದೂ ನಿಮ್ ಡ್ಯಾಡಿಗೆ..!!!

.............................?????????



೫. ದೊಡ್ ಸಾಹೇಬರು



ರೀ ತ್ಯಾಂಪ ಬನ್ರೀ ಇಲ್ಲಿಯಾಕ್ರೀ ಇಷ್ಟು ತಡ ಇವತ್ತು?

ಸರ್ ಗಾಡಿ ಸ್ವಲ್ಪ ರಿಪೇರಿಗೆ ಬಂತು ಸರ್ಅಲ್ಲಾರೀ ನಿನ್ನೆ ನಮ್ಮನೇಲೇ ನಮ್ಮವರೂ ಅವ್ರ ತಮ್ಮ ಸೇರಿ ರಿಪೇರಿ ಮಾಡಿದ್ರಲ್ವಾ?

ಪಕ್ದ ಮನೆ ಹುಡುಗ ಪಂಕ್ಚರ್ ಮಾಡಿದ್ದ, ಅದ್ಕೇ ರಿಪೇರಿ ಅಲ್ಲ ಸರ್ ಸ್ಟೆಪ್ಣಿ ಬದ್ಲು ಮಾಡ್ಸಿದ್ರೂ ಸಾ
ರ್ಅಲ್ಲಾರೀ ಅದಕ್ಕೂ ನೀವೀಗ ಆಫೀಸಿಗೆ ತಡ ಬರಲೂ ಕಾರಣ ಏನ್ರೀಅಲ್ಲಿಗೇ ಬರ್ತಾ ಇದ್ದೆ ಸಾರ್,  ಬೆಳಿಗ್ಗೆ ಹಾಲು ಬ್ರೆಡ್ಡೂ ನಿಮ್ಮ ಮನೆಗೆ ತಂದುಕೊಟ್ನಾ, ಅಲ್ಲಿಂದ ನಿಮ್ ಗಾಡಿ ತಕಂಡು ಹೊರಟಿದ್ದೆ, ಯಾಕೋ ಗಾಡಿ ಒಂದ್ ಕಡೇನೇ ಏಳೀತಾ ಇದೆಯಲ್ಲಾ ಅಂದ್ಕೊಂಳ್ಳೋದ್ರೊಳ್ಗೆ ಎರಡ್ಮೂರು ಕಡೆ ಗುದ್ದಿತ್ತು ಸ

ರ್ಅಂದ್ರೆ ಎನ್ರೀ ಅರ್ಥ??ಗಾಡೀ ಕಂಟ್ರೋಲ್ ಗೆ ಬರ್ಲಿಲ್ಲ ಸ

ರ್ಅದಕ್ಕೆ ಕಾರಣ ಗಾಡಿ ಅಲ್ಲಾರೀ ನಿಮ್ ವಾಹನ ಚಾಲನೆ ವಿಧಾನ ಅದಕ್ಕೂ ಗಾಡಿಗೂ ಸಂಭಂಧ ಇಲ್ಲಾರೀ

ನಾನೂ ಹಾಂಗೇ ಅಂದ್ಕಂಡೆ ಸಾ

ರ್ಮತ್ತೆಸಾರ್ ರಸ್ತೆಯಲ್ಲಿ ನಾಲ್ಕು ಗಾಡಿಗೆ ಕುಟ್ಟಿ ರಸ್ತೆ ಡಿವೈಡರ್ ಗೂ ಕುಟ್ಟಿತು ಸ

ರ್ಅಂತೂ ಗಾಡಿ ಲಗಾಡಿ ತೆಗೆದ್ರಾ?

ಇಲ್ಲ ಸಾರ್ ಮತ್ತೂ ಮುಂದೆ ಬಂದು ಪೋಲೀಸ್ ಗಾಡೀಗೇ ಕುಟ್ಟಿತು ಸರ್ ಅವರು ಅದನ್ನ ಎತ್ತಲು ನೋಡಿ ಆಗದೇ ಅದನ್ನ ಗ್ಯಾರೇಜಿಗೆ ಬಿಟ್ಟರು ಸ

ರ್ಯಾಕಂತೆಆತ ಚೆಕ್ ಮಾಡಿ ಸ್ಟೆಪ್ಣಿ ಬದ್ಲಿ ಮಾಡಿದ್ದು ಯಾರು ಅಂತ ಕೇಳ್ದ ಸ

ರ್ಯಾಕೆ

ನನ್ನ ಜನ್ಮದಲ್ಲಿ ಈ ರೀತಿ ಟಯರ್ ಫಿಟ್ ಮಾಡಿದ್ದು ನೋಡ್ಲಿಲ್ಲ ಅಂದ

ಸರ್ಅಷ್ಟು ಒಳ್ಳೆಯದಾಗಿತ್ತಂತಾ?

ಹೌದು ಸರ್ ಅವರು ಟಯರನ್ನು ಉಲ್ಟ ಫಿಟ್ ಮಾಡಿದ್ದಾರೆ, ಅದಕ್ಕೇ ಗಾಡಿ ಒಂದ್ ಕಡೆ ಎಳೀತಾ ಇತ್ತು ಇಂತಹಾ ಗಾಡೀನ ಡ್ರೈವ್ ಮಾಡಿದ್ದಕ್ಕೆ ನಿಮ್ಗೇ ಗಿಫ್ಟ್ ಕೊಡಬೇಕು, ಇಷ್ಟ್ ಲಟಕಾ ಗಾಡಿ ಇಟ್ಕೊಂಡ್ ...ಓನರ್ ಹತ್ರ ಹೇಳಿ..!! ಅಂದ ಸ

ರ್ಹತ್ರ ಹೇಳೀ...???ಎಲ್ಲಾರೂ ಮೂಸಿಯಮ್ ಗೆ ಬಿಡೀ ಈ ಗಾಡೀನಾ ಅಂದ ಸ

ರ್ಯಾರು ರಿಪೇರಿಯವ್ನಾ...??

ಅಲ್ಲ ಸಾರ್ ಪೋಲೀಸವರು.........................

ಸರಿ ಸರಿ ನಾಲ್ಕೈದು ಕಂಪ್ಲೈನ್ಟ್ ಪೆನ್ಡಿಂಗ್ ಇದೆ ಪ್ಲಂಬರ್ ಕರ್ಕೊಂಡು ಹೋಗಿ ನೋಡ್ಕೊಂಡ್ ಬಂದ್ಬಿಡಿ

ಎಲ್ಲಿಗೆ ಜಯನಗರ ಅಲ್ಲಾ ಸಾ

ರ್ಅಲ್ಲಾರೀ ಈಗ ಮನೆಯಿಂದ ಫೋನ್ ಬಂತೂ, ವಿದ್ಯಾ ರಣ್ಯಪುರದಲ್ಲಿ ನಮ್ಮವರ ಅಣ್ಣನ ಮನೆ ಇದೆಯಲ್ಲ ಅಲ್ಲಿ ಹೋಗಿ ನೋಡ್ಕೊಂಡು ಮತ್ತೆ ಜಯನಗರಕ್ಕೆ ಹೋಗಿ ಆಯ್ತಾ, ಬೇಗ ಬರಬೇಕೂ.

ಅಲ್ಲಿ ಏನಾಯ್ತಂತೆ ಸರ್?
ಅಲ್ಲೇನೋ ಪೈಪ್ ತುಂಡಾಗಿದೆಯಂತೆ, ನೀರು ಸಿಕ್ಕಾ ಪಟ್ಟೆ ಲೀಕಾಗ್ತಾ ಇದೆಯಂತೆ.
ಮತ್ತೆ......

ಮತ್ತೇನ್ ಸ

ರ್ಹೇಗೆ ಹೇಳೋದೊ ಅರ್ಥ ಆಗ್ತಾ ಇಲ್ಲ..?
?ಹೇಳಿಸರ್...ತೊಂದರೆ ಇಲ್ಲ

ಅದೇ ನೀವು ನಮ್ ಮನೇಯರ್  ತರಾ...??!!!

ಏನೆಲ್ಲಾ ಹೇಳ್ಬೇಡಿ ಸರ್, ಆ ಥರಾ ಅಲ್ಲ  ನಾನು

ರೀ ಏನೇನೋ ಹೇಳ್ಬೇಡಿ ನಮ್ಮ ಸಂಬಂಧಿಕರ ತರಾ ನೀವು ಎಂದಿದ್ದು ನಾನು.

ಹೋ ಅದಾ, ಸರಿ ಸರ್ ವಿಷಯ ತಿಳಿಸಿ


ಅದೇ ನಮ್ ಶ್ರೀಮತಿಯವರ ಅಣ್ಣನ ಮನೇಲಿ ಕೆಳಗಡೆ ಅವರಿರ್ತಾರೆ . ಮೇಗಡೆ ಮೂರು ಮಹಡಿ ಪೋರ್ಶನ್ ಬಾಡಿಗೆಗೆ ಕೊಟ್ಟಿದ್ದಾರೆ.
ಸರಿ ಸರ್.

ಎರಡ್ಮೂರ್ ದಿನದಿಂದ ಮೇಗಡೆ ಬಾತ್ ರೂಮ್ ಬ್ಲಾಕ್ ಆಗಿತ್ತಂತೆ

ಸರಿ ಸರ್.

ಇವರೇ ಏನೋ ನೋಡೋಣ ಅಂತ ಒಂದು ಕೋಲ್ ತಗಂಡು ...

ಕೋಲ್ ತಗಂಡು

ಅಲ್ಗಾಡಿಸಿದ್ರಂತೆ

ಓಕೆ

ಅದೇನೋ ತಪ್ಪಾಗಿ ಆ ಬಾತ್ ರೂಮ್ ಪ್ಪೈಪ್ ಕಟ್ಟಾಗಿ ..

.ಕಟ್ಟಾಗಿ..?

ಆ ಕಚಡಾ ಎಲ್ಲಾ ಎಲ್ಲರ ಹಾಲಲ್ಲಿ ಬಿದ್ದು ಗತಿ ಗೋತ್ರ ಇಲ್ಲದರ ಹಾಗೆ ಎಲ್ಲರೂ ಹೊರಗಡೆ ಬಂದು ನಿಂತಿದ್ದಾರಂತೆ, ಇಬ್ಬರು ಸಫಾಯಿವಾಲಾ ಬಂದವರು ಸಹಾ ಆ ಕಚಡಾ ಎಲ್ಲಾ ನೋಡಿ, ಅದರ ವಾಸ್ನೆಯಲ್ಲಿ ನಿಲ್ಲಿಕ್ಕಾಗದೇ ರಿಪೇರಿ ಮಾಡದೇ ಓಡಿಹೋದ್ರಂತೆ.ನೀವೇ ಏನಾರೂ ಮಾಡಿ ಅಂತಾ ಇದ್ದಾರೆ ಕಣ್ರೀ ಏನಾರೂ ಒಂದು ಮಾಡಿ, ದಯವಿಟ್ಟು. ನೀವೊಬ್ಬರೇ ತ್ಯಾಂಪ ಈ ತಲೆ ಬಿಸಿಯಿಂದ ನನ್ನನ್ನು ಹೊರತರಲು ಸಾಧ್ಯವಿರುವವರು.

ಸರಿ ಸರ್ ನನ್ನ ಸ್ನೇಹಿತರೊಬ್ಬರ ಬಳಿ ಇಂತದ್ದೆಲ್ಲಾ ಕೆಲಸ ಅಚ್ಚುಕಟ್ಟಾಗಿ ಮಾಡೋ ಗುತ್ತಿಗೆದಾರರಿದ್ದಾರೆ ಸಾರ್ ನಾನು ಸರಿ ಮಾಡ್ತೀನಿ ಬಿಡಿ.

ಸರಿ ಸರಿ ಈ ಕೆಲ್ಸ ಮುಗಿಸಿ ಸೀದಾ ಬೇಗ ಜಯನಗರಕ್ಕೆ ಹೋಗಿ ಇವತ್ತಾದ್ರೂ ಆ ಕೆಲ್ಸ ಮುಗಿಸ್ಕೊಂಡೇ ಬನ್ನಿ, ಮಧ್ಯೆ ಮದ್ಯೆ ನಂಗೆ ಕರೆ ಮಾಡ್ತಾ ಇರಿ, ಏನಾದ್ರೂ ಸಲಹೆ ಬೇಕಾದ್ರೆ ಕೊಡ್ತೀನಿ ಆಯ್ತಾ

ಸರ್ ನನ್ನ ಮೊಬಾಯಿಲ್ ನಲ್ಲಿ ಕರೆನ್ಸಿ ಇಲ್ಲ, ನೀವೇ ಕರೆ ಮಾಡ್ಬೇಕಾಗತ್ತೆ

ಸರ್ಆಯ್ತು ಬಿಡಿ.............................................

ಅತ್ತ ಜಯನಗರನೂ ತಲುಪಲಿಲ್ಲ ತ್ಯಾಂಪ ವಿದ್ಯಾರಣ್ಯ ಪುರಾನೂ

ಮತ್ತೆ ಮತ್ತೆ ಕರೆ ಮಾಡಿದ್ರೂ ಬಾಸೂಕರೆ ಹೋಗುತ್ತಲೇ ಇತ್ತು ಆತ ಎತ್ತುತ್ತಿರಲಿಲ್ಲ

ಈ ಸಾರಿ ಆತನೇ ಕರೆ ಮಾಡಿದ

ಸಾರ್ ನಾನು ತ್ಯಾಂಪ

ಸರಿ ಎಲ್ಕ್ಲಿ ಹಾಳಾಗಿ ಹೋದ್ರೀರೀ... ಕಟ್ಟಾಯ್ತು

ಮತ್ತೆ ನಾಲ್ಕೈದು ಸಾರಿ ಅದೇ ಹಣೆ ಬರಹ,

ತ್ಯಾಂಪ ಮಾಡಿದ್ರೆ ಹಲ್ಲೋ ನಾನು ತ್ಯಾಂಪ ಅಂದ ಕೂಡ್ಲೇ ಕಟ್ಟಾಗುತ್ತೆ

ಹೀಗೇ ನಾಲ್ಕೈದು ಬಾರಿ ಆಯ್ತು ಸಾಹೇಬ್ರಿಗೆ ಪಿತ್ತ ನೆತ್ತಿಗೇರಿತು

ಈ ಸಾರಿ ಪುನ ಕರೆ ಬಂತು

ಲೇ ತ್ಯಾಂಪ ಎಲ್ಲಿ ಹಾಳಾಗಿ ಹೋದಿರಾ, ಅಲ್ಲಿ ನನ್ ಹೆಂಡ್ತಿ ಅವಳ ತಮ್ಮ ಕಾಯ್ತಾ ಇದ್ದಾರೆ, ಈ ಕಡೆ ಆ ಮುದುಕಾ ನನ್ನ ಪ್ರಾಣ ಹಿಂಡ್ತಾ ಇದಾನೆ ಎಲ್ಲಿ ಹಾಳಾದ್ರೀ

ಆ ಕಡೆಯಿಂದ ಉತ್ತರ ಅಷ್ತ್ಟೇ ಬಿರುಸಾಗಿ ಬಂತು

ಏನ್ರೀ ಕಲ್ಲೂರಾಮ್ ಆಫೀಸ್ ಕೆಲ್ಸ ಮಾಡ್ಸೋದ್ ಬಿಟ್ಟು ಸ್ಟಾಫ್ ಹತ್ರ ಮನೆ ಕೆಲ್ಸ ಮಾಡ್ಸೋಕ್ ಶುರು ಮಾಡಿದ್ರಾ, ಯಾರೀ ಅದು ಪ್ರಾಣ ತಿನ್ನೋ ಮುದುಕಾ..? ನಾನೇ ತಾನೇ?

ಪಾಪ ಬಾಸಿನ ಬಾಸ್ ಆತ

ನಾಡಿದ್ದು ಬೆಳಿಗ್ಗೆ ನೀವೂ ಆ ತ್ಯಾಂಪನ್ನು ಕರಕೊಂಡು ಹೊಸ ಪ್ರೋಜೆಕ್ಟ್ ನಲ್ಲಿ ಬೆಳಿಗ್ಗೆ ಏಳು ಗಂಟೆಗೆ ಸಿದ್ಧವಾಗಿರಿ ನಾನು ಬರ್ತಾ ಇದ್ದೇನೆ ಇನ್ ಸ್ಪೆಕ್ಷನ್ ಗೆ

ಬಾಸ್ ನ ಪ್ರಾಣ ಎರೆಡು ಸಾರಿ ಮೇಲಕ್ಕೇರಿ ಕೆಳಕ್ಕಿಳಿಯಿತು ಬೆವರೊರೆಸಿಕೊಂಡ್ರು

ತಮಗ್ ಅಲ್ಲ ಸಾರ್ ಹೇಳಿದ್ದೂ, ಆಯ್ತು ಸಾರ್ ಇರ್ತೀನಿ ಸರ್, ಓಕೆ ಸರ್.

ಪುನಃ ಕರೆ ಬಂತು ಹೇಳಿ ಸರ್ ಎಂದರು ಸಾಹೇಬರು

ಆ ಕಡೆಯಿಂದ ನಗು, ಸರ್ ಅಲ್ಲ ಸಾರ್ ತ್ಯಾಂಪ,

ಸಾಹೇಬರ ಸ್ವರವೇ ಬದಲಿತು,

 ಎಲ್ಲಿ ಹಾಳಾಗಿ ಹೋದ್ರೀ, ನಿಮ್ಮಿಂದಾಗಿ ನಾನು ಸಾಹೇಬರ ಹತ್ರ ಬೈಸಿಕೊಳ್ಳಬೇಕಾಯ್ತು ಇಲ್ಲಿ ಗೊತ್ತಾ?

ಯಾಕೆ ಸಾರ್ ಏನಾಯ್ತು

ನೀವು ಅಂತ ಅವ್ರಿಗೆ ಬೈದೆ , ಆಮೇಲೆ ನೋಡಿದ್ರೆ ಸಾಹೇಬರು, ಬೈದು ನನ್ನ ಪ್ರಾಣಾನೇ  ತೆಗ್ದ್ ಬಿಟ್ರು.    ಅಲ್ಲ ಎಲ್ಲಿದ್ದೀರಾ  ನೀವು.

ಒಟ್ಟಾರೆ ನಿಮ್ ಮನೆಯಿಂದ ಬರೋದ್ರೊಳ್ಗೇ ಹತ್ತು ಸಾರಿ ನಿಂತಿತು ಸಾರ್ ನಿಮ್ ಗಾಡಿ.

ಯಾಕ್ರೀ, ಸರೀನೇ ಇತ್ತಲ್ಲಾ,ನಿಮ್ ಹಳೇ ಗಾಡಿ ಅಷ್ಟೆಲ್ಲಾ ಓಡ್ಸಿ ಪೆಟ್ರೋಲೇ ಹಾಕದಿದ್ರೆ ಹೆಂಗೆ?ಅದಕ್ಕೇ ನನ್ನ ಹತ್ರ ಇದ್ ಬದ್ ದುಡ್ಡೇಲ್ಲಾ ಹಾಕಿ ಒಂದು ಲೀಟರ್ ಪೆಟ್ರೋಲ್ ಹಾಕಿದ್ದೆ, ಮಧ್ಯೆ ಮಧ್ಯೆ  ನಿಮ್ಮ್ ದೆಸೆಯಿಂದ ಈಗ ಶ್ರೀ ಕೃಷ್ಣ ಜನ್ಮ ಸ್ಥಾನಕ್ಕೂ ಬಂದೆ.

ಯಾಕ್ರೀ ಏನಾಯ್ತು?

ಐದು ನಿಮಿಶಕ್ಕೊಮ್ಮೆ ನೀವು ಫೋನ್ ಮಾಡೊದೂ ಅದನ್ನ ಎತ್ತೋಕಾಯ್ದೇ ನಾನು ಪರದಾಡೋದೇ ಆಯ್ತು, ಕೊನೇ ಸಾರಿ ಗಾಡಿ ಓಡ್ಸ್ತಾ ಕರೆ ಎತ್ತಿದೆ ಒಬ್ಬ ಪೋಲೀಸ್ ನನ್ನ ಹಿಡ್ಕೊಂಡ್ ಬಿಟ್ಟ.

ಎಲ್ಲಿದ್ದೀರಾ ನೀವು ಈಗಪೋಲೀಸ್ ಸ್ಟೇಶನ್ ನಲ್ಲಿ

ಏನಾದರೂ ಕೊಟ್ಟು ರಫಾ ದಫಾ ಮಾಡ್ಬೇಕಾಗಿತ್ತು
ಅದೇ ಸಾರ್ ಕೊಡ್ಲಿಕ್ಕೆ ಹೋದುದಕ್ಕೇ ನನ್ನ ಹಿಡ್ದು ಒಳ್ಗ್ ಹಾಕ್ದ ಸಾ

ರ್ಎಂತ ಜನಾ ರೀ ನೀವು ಈ ನೀವು ಅಷ್ಟು ಗೂತ್ತಾಗೋಲ್ವಾ  ಇದಿರಿನವನು ಹೇಗಿದ್ದಾನೆ , ಅಂತ ಸ್ವಲ್ಪಾನೂ ಬುದ್ದಿ ಇಲ್ಲಾರೀ ನಿಮ್ಗೆ, ಎಲ್ಲ ಪೋಲೀಸರೂ ಒಂದೇ ರೀತಿ ಇರ್ತಾರಾ?  ಎಲ್ಲಾರೂ ಲಂಚ ತಗೋತಾರೇನ್ರೀ, ಬುದ್ದಿ ಇಲ್ಲದ ಜನಾರೀ ನೀವೆಲ್ಲ. ನಿಮ್ಮಂತ ಬೇವಕೂಫನ್ನ ನನ್ನ ಜನ್ಮದಲ್ಲಿ ನೋಡಿಲ್ಲ ನಾನು.

ಸಾರ್.....

ವಿದ್ಯಾರಣ್ಯ ಪುರದ ಕಥೆ ಏನಾಯ್ತು?

 ಕ್ಲಿಯರ್ ಮಾಡಿ ಆಯ್ತು

ಸರ್ಸರಿ ಸರಿ, ಮತ್ತೆ ಜಯನಗರ...?

ಕರೆ ಮತ್ತೆ....ಕಟ್ಟಾಯ್ತು



೬.  ಸಿನೇಮಾ ಸಿನೇಮಾ ..??!!


ಗಾಡಿ ಸ್ಟಾಂಡ್ ಹಾಕಿ ಅಲ್ಲಿಂದಲೇ ಕೂಗಿದ ಚಂದ್ರೂನ
"ಆಫೀಸ್ ಬರೋದ್ರಲ್ಲಿ ಹತ್ ಸಾರಿ ಕರಿತೀರಾ ಏನು ನನ್ನ  ಹೆಂಡ್ರೂ ಅಂತ ತಿಳ್ಕಂಡ್ರಾ ಹೇಂಗೆ?"
ಗೊಣಗುತ್ತಲೇ ಹೊರಬಂದ ಆತ ಚಂದ್ರೂ

" ಏನ್ ತ್ಯಾಂಪ ಸರ್"

"ನಂಗೆ ಹೊರಗಡೆ ಕೆಲ್ಸ ಇದೆ ಹೋಗ್ತಾ ಇದ್ದೇನೆ" ಅಂದ ತ್ಯಾಂಪ.

ಸರಿ ಸಾರ್ ಬಾಸ್ ಗೆ ಹೇಳ್ಬೇಕಾ?"
ಕೇಳಿದರೆ ಮಾತ್ರ ಹೇಳು"

ಅವನೊಳಗಿನ ಭಕ್ತ ಖುಷಿಯಲ್ಲಿದ್ದ ಇಂದು.ಇವತ್ತು ಅಲ್ಲಿಗೆ ಹೋಗುವಾಗಲೇ ಹತ್ತುವರೆ ಯಾಗುತ್ತೆ ಟಿಕೇಟೇ ಸಿಗಲಿಕ್ಕಿಲ್ಲ.


ಅದಕ್ಕೇ ನಿನ್ನೆಯೇ ಹೋಗಿ ತಂದಿದ್ದ ಮುಂಗಡ ಬುಕಿಂಗ್ ನಲ್ಲಿ.

ಬಾಸಿಣಿ ಮತ್ತು ಅವಳ ತಂಗಿಯ ಅಧಿಕಾರಯುಕ್ತ ಧೋರಣೆಯಿಂದಾಗಿ ಆತನ ಮನ ರೋಸಿ ಹೋಗಿತ್ತು . ಬಾಸಿಣಿಯ ತಂಗಿಯ ಮನೆಯಿಂದ ನೇರವಾಗಿ ಮೆಜಿಸ್ಟಿಕ್ ಗೆ ನರ್ತಕಿಯ ಸಿನೇಮಾ ಕ್ಕೆ ಹೋಗಿ ಇವತ್ತಿನ ಬೆಳಗಿನ ಸಿನೇಮಾದ ಟಿಕೆಟ್ ಕೊಂಡು ತಂದಿದ್ದ.

ಅಲ್ಲಾ ಅದು ಎಷ್ಟು ಚೆನ್ನಾಗಿ ನಮ್ಮನ್ನೆಲ್ಲಾಮರುಳು ಮಾಡ್ತಾರೆ ಇವರುಗಳೆಲ್ಲಾ, ಬಾಸ್ ಸಾಮಾನು ಮನೆಗೆ ತಲುಪಿಸಿದಕ್ಕೆ ನನ್ನನ್ನು ಉಪಯೋಗಿಸಿಕೊಂಡರೆ ಅವರ ಧರ್ಮ ಪತ್ನಿ ತನ್ನ ಕೆಲಸಕ್ಕೂ ತನ್ನ ತಂಗಿಯ ಕೆಲಸಕ್ಕೂ .................... ಅಲ್ಲ ಎಲ್ಲಕ್ಕೂ ನಾನೇ ಆಗಬೇಕಿತ್ತಾ..?


ನೇರ ಬಸ್ ನಿಲ್ದಾಣದತ್ತ ಹೆಜ್ಜೆ ಹಾಕಿದ ತ್ಯಾಂಪ.
ರೆಡಿಯಾಗಿತ್ತೊಂದು ಬಸ್ಸು ಅವನಿಗಾಗಿ.

ಹತ್ತುವಾಗ ಒಂದು ಆಂಗಲ್ ನಲ್ಲಿ ಮೋಹನ್ಲಾಲ್ ಕಂಡ.

ಆಗಲೇ ಬಸ್ ಹೊರಟಾಗಿತ್ತಲ್ಲ. ತನ್ನನ್ನು ನೋಡಿರಲಿಕ್ಕಿಲ್ಲ ಅಂದುಕೊಂಡ .ಸೀದಾ ಮೆಜಿಸ್ಟೀಕ್ ನಲ್ಲಿಳಿದು ಹೊರಟ ಮನಸ್ಸು ಪ್ರಫುಲ್ಲಿತವಾಗಿತ್ತು.

ಎಲ್ಲಿದ್ದೀರಾ..?  ಬಾಸ್ ನ ಮೂರನೆಯ ಕರೆ, ಮೊದಲ ಎರಡು ಕರೆಗಳನ್ನು ಬೇಕೆಂತಲೇ ಎತ್ತಿರಲಿಲ್ಲ.

ಏನಂತ ಅವಸರ, ಕೇಳಿಯೇ ಬಿಡೋಣ ಅಂದ್ಕೊಂಡು,ಹಾಲ್ ನಿಂದ ಹೊರಗಡೆ ಬಂದೆ. ಹೊರಗಿನ ಯಾವ ಶಬ್ದವೂ ಆತನಿಗೆ ಗೊತ್ತಾಗದ ಹಾಗೆ ಎಚ್ಚರ ವಹಿಸಬೇಕಿತ್ತು.

' ಎಲ್ಲಿದ್ದೀರ್ರೀ ನೀವು ತ್ಯಾಂಪ?'

ಇದಕ್ಕೆ ಏನಂತ ಉತ್ತರಿಸಬೇಕು? ಹೇಗೆ ಹೇಳಲು ಸಾಧ್ಯ? ಮೊದಲ ದಿನ ಮೊದಲ ದೇಖಾವೆಯಲ್ಲಿದ್ದೇನೆ ಅಂತ ಹೇಳೋಕಾಗುತ್ಯೇ,

ಯಾವುದು ಬಿಟ್ಟರೂ ಇದನ್ನು.... ಉಹುಂ . ಸುತರಾಮ್ ಇಲ್ಲ. ಅದೂ ಸುದೀಪನ ಸಿನೇಮಾ!!! ಬಿಡಲ್ಲ, ಅಲ್ಲದೇ ಇದು 'ಕೆಂಪೇಗೌಡ' ಸಿನೇಮಾ,ಹ್ಯಾಗೆ ಬಿಡಲು ಸಾಧ್ಯ..?

ಬೆಬೆಬೆ ಅಂದ,

'ಅಲ್ಲರೀ ಎಲ್ಲಿದ್ದೀರಾ ಅಂತ ಕೇಳಿದರೆ ಏನೇನೋ ಹೇಳ್ತೀರಲ್ರೀ....ಅರ್ಜೆಂಟ್ ಆಫೀಸಿಗೆ ಬನ್ನಿ,

'-------------------' ಮಾತಾಡಲಿಲ್ಲ,

'ಏನ್ರೀ ಹೇಳಿದ್ದು ಕೇಳಿಸಲಿಲ್ಲವಾ?? ಎಲ್ಲಿದ್ದೀರಾ ಏನು ಮಾಡ್ತಾ ಇದ್ದೀರಾ.., ಚಂದ್ರು ನೀವು ಹೊರಗೆ ಹೋಗಿದ್ದನ್ನ ನೋಡಿದ್ದಾನೆ, ಎಲ್ಲಿಗೆ ಅಂತ ಹೇಳಲೇ ಇಲ್ಲವಂತೆ.. ಮೋಹನ್ ಲಾಲ್ ನೀವು ಮೆಜಿಸ್ಟಿಕ್ ಬಸ್ ಹತ್ತಿದ್ದು ನೋಡಿದ್ದಾನಂತೆ. ಆಫೀಸಲ್ಲಿ ಗಾಡಿ ಇಟ್ಟು ಅದೆಲ್ಲಿ ಹಾಳಾಗಿ ಹೋದ್ರಾ, ಮೆಜಿಸ್ಟಿಕ್ ನಲ್ಲಿ ನಿಮ್ಮದೇನು ಕೆಲ್ಸ ಇದೇರಿ? ನೀವು ಎಲ್ಲಿದ್ದೀರಿ ಅಂತ ಏನ್ ಮಾಡ್ತಾ ಇದ್ದೀರಿ ಹೇಳಿ ಮೊದಲು.'


ಅಂದರೆ ವಿಷಯ ಗಂಭೀರವಾಗಿದೆ ಅಂತ ಆಯ್ತು.

ಸಂಕಟ ಬಂದಾಗ ವೆಂಕಟರಮಣ ಅಂತ, ತನಗೇನಾದರೂ ಕೆಲ್ಸ ಬಂದಾಗ ಅದನ್ನ ವರ್ಗಾಯಿಸಲು ನನ್ನ ಬಗ್ಗೆ ಕೇಳ್ತಾ ಇದ್ದಾರೆ,.

ಈ ಮೋಹನ್ ಲಾಲ್ ಗೆ ಏನು ಬಂತು ರೋಗ, ನಾನು ಮ್ಯಾಜಿಸ್ಟಿಕ್ ಬಸ್ ಹತ್ತಿದೆ ಅಂತ ಯಾಕೆ ಹೇಳಬೇಕು, ಎಲ್ಲಿಗೆ ಅಂತ ಹೇಳಿದ್ದರೆ
ತಾನೂ ಬರ್ತೀನಿ ಅಂದ್ರೆ ಕಷ್ಟವೇ, ತಮ್ಮಿಬ್ಬರ ಬದಲು ಒಬ್ಬರಾದರೂ ಆಫೀಸಲ್ಲಿದ್ದರೆ ಒಳ್ಳೆಯದಲ್ಲವಾ ಅಂತ ಹೇಳಿರಲಿಲ್ಲ ಅಷ್ಟೆ. ಈಗ ಅದೇ ಕುತ್ತಿಗೆಗೆ ಬಂತು. ಅಲ್ಲ ಬೇರೆ ಸಮಯ ಸಿಗಲೇ ಇಲ್ಲವಾ ಇವನಿಗೆ, ನಿನ್ನೆ ಆಫೀಸಲ್ಲೇ ಇದ್ದಾಗ ನನ್ನ ಕರೀಲಿಕ್ಕೆ ಆಗಲಿಲ್ಲ.

ಈಗ ಅದೂ , ನನ್ನ ಒಳ್ಳೆ ಸಿನೇಮಾ ಮಧ್ಯೆ ಬಂದು ಮಜಾ ಹಾಳು ಮಾಡ್ತಾ ಇದ್ದಾನೆ.


'ಯಾಕ್ರೀ ಮಾತಾಡ್ತಾ ಇಲ್ಲ.... ಅದೆಲ್ಲಾ ನನಗೆ ಗೊತ್ತಿಲ್ಲ, ಇನ್ನು ಐದು ನಿಮಿಷದಲ್ಲಿ ಇಲ್ಲಿರಬೇಕು ನೀವು.'


ಅರೇ ನಾನಿರೋದು ನರ್ತಕಿಯಲ್ಲಿ, ಇಲ್ಲಿಂದ ಐದು ನಿಮಿಷದಲ್ಲಿ ಆಫೀಸಲ್ಲಿರಬೇಕು ಎಂದರೆ? ಇದೇನು ಮಿಲಿಟರಿ ಕೆಟ್ಟೋಯ್ತಾ? ಅದೂ ಸುದೀಪನ ಸಿನೇಮಾ ಬಿಟ್ಟು.. ಸಾಧ್ಯವೇ ಇಲ್ಲ.
ಒಂದೋ ಬಾಸು ಅಥವಾ ಸುದೀಪ ಎರಡರಲ್ಲೊಂದು ಆಯ್ದುಕೊಳ್ಳಲೇ ಬೇಕಲ್ಲ,
ಬಾಸ್ ಹತ್ರ ಹೋದ್ರೆ ... ಅದು ಇದ್ದದ್ದೇ, ಈಗ ಹೋದರೂ ಒಂದೇ ಮೂರು ಗಂಟೆ ಬಿಟ್ಟು ಹೋದರೂ, ಅದೇ ಆಫೀಸ್ ನಲ್ಲಿ ಅದೇ ಬಾಸ್ , ಹೊರಗಡೆ ಬಾಸಿಣಿ ಇಬ್ಬರೂ ನನ್ನ ಇಡೀ ಜೀವನವನ್ನೇ ಆವರಿಸಿದ್ದಾರೆ ಮನೆಗೆ ಹೋದ್ರೆ ಆ ಪತ್ನಿಣೀ. ಈ ಮೂವರೂ ತಂಗೆ ಹೇಗೆ ಗಂಟು ಬಿದ್ರೋ ಗೊತ್ತಿಲ್ಲ. ಅದೇ ತಲೆ ಬಿಸಿ, ಕೆಲಸ.

ಅದಕ್ಕಿಂತ ಈ ಎರಡು ಗಂಟೆ ನಮ್ಮ ಕಲ್ಪನಾ ಲೋಕದಲ್ಲಾದರೂ ಇರಬಹುದು ನನ್ನ ಮೆಚ್ಚಿನ ಹೀರೋ ಜತೆ . ನಿರ್ಧರಿಸಿಯೇ ಬಿಟ್ಟ.



ಯಾವಾಗಲೂ ತಾನೇ ಯಾಕೆ ತಲೆ ಬಿಸಿ ಮಾಡ್ಕೋಬೇಕು..?ಅದೆಲ್ಲಾ ಬಾಸ್ ಗೇ ಇರಲಿ. ನನ್ನ ಮುಂದಿನ ವಿಷಯ ನಾನು ಅಲ್ಲಿಗೆ ಹೋದ ಮೇಲೆ ನೋಡಿದರಾಯ್ತು.



'ನನಗೆ ಬರಲು ಸುಮಾರು ಎರಡು ಎರಡೂವರೆ ಗಂಟೆ ಹಿಡಿಯುತ್ತೆ ಸಾರ್, ಈಗ ನಾನು ಹೇಳೋ ಸ್ಥಿತಿಯಲ್ಲಿಲ್ಲ, ಬಂದು ನಿಮಗೆ ವಿವರವಾಗಿ ಹೇಳ್ತೀನಿ, ಈಗ ಬಿಸ್ ಬಾಸ್ ಕೆಲ್ಸದ ಮೇಲಿದ್ದೀನಿ "

ಏನಾದರೊಂದು ಹೇಳಲೇ ಬೇಕಿತ್ತಲ್ಲ. ಅದಕ್ಕೇ ಬಿಗ್ ಬಾಸ್ ಹೆಸರು ಹೇಳಿಬಿಟ್ಟ, ಆ ಸಮಯದಲ್ಲಿ ಬಾಯಿಗೆ ಬಂದದ್ದು ಅದೇ.


೬. ಕಾಂತಾ ಮೇಡಮ್

"ಯಾಕ್ರೀ ..ಅಲ್ಲಾ .. ಅರ್ಜೆಂಟ್....."

ಅವರ ಯಾವ ಮಾತನ್ನೂ ಕೇಳದೇ ಕರೆ ಕಟ್ ಮಾಡಿಬಿಟ್ಟ , ಮತ್ತೆ ಜಂಗಮವಾಣಿಯನ್ನ ಬಂದ್ ಮಾಡಿ ಸ್ಥಾನಕ್ಕೆ ತಿರುಗಿ, ಕೆಂಪೇಗೌಡನಲ್ಲಿ ಮುಳುಗಿ ಹೋದ. ಬಾಕಿ ಎಲ್ಲಾ ಆಮೇಲೆ.

ಅಡಿಗಾ ದಲ್ಲಿ ಜಬ್ಬರ್ದಸ್ತ್ ಊಟ ಮುಗಿಸಿ ಬಸ್ಸು ಹಿಡಿದು ಆಫೀಸಿಗೆ ತಲುಪುವಷ್ಟರಲ್ಲಿ ಮೂರು ಗಂಟೆಗೆ ಮೂರೇ ನಿಮಿಷ ಉಳಿದಿತ್ತು.

ಚಂದ್ರು, ಸಾಹೇಬರು ಕುಂಡೆ ಸುಟ್ಟ ಬೆಕ್ಕಿನಂತೆ ಅತ್ತಿಂದಿತ್ತ ಓಲಾಡುತಾ ಇದ್ದಾರೆಂತಲೂ ಹೇಳಿದ.ನಿಜವಾಗ್ಲೂ ಬಾಸ್ ಮುಖ ನೋಡುವ ಹಾಗೇ ಇರಲಿಲ್ಲ.

ಎಲ್ಲಿ ಹಾಳಾಗಿ ಹೋಗಿದ್ರೀ.... ಅಲ್ಲ ನನ್ನ ತಲೆ ಬಿಸಿ ನನಗೆ..

ಸಾರ್ ಅದೂ .....ಕೆಂಪೇಗೌಡ ಸಿನೇಮಾ....

ನಾನು ಆಫೀಸಿನಲ್ಲಿ ಊಟಾನೂ ಮಾಡ್ದೇ ಟೆನ್ಷನ್ ನಲ್ಲಿ ಸಾಯ್ತಾ ಇದ್ರೆ ನೀವು ಕೆಂಪೇ ಗೌಡ ಸಿನೇಮಾಕೆ ಹೋಗಿದ್ರಾ, ಎಷ್ಟು ಧೈರ್ಯ ನಿಮಗೆ

ಅಯ್ಯಯ್ಯೋ ಏನಿದು ತಾನು ಗಡಿಬಿಡಿಯಲ್ಲಿ ಏನು ಹೇಳ್ತಾ ಇದ್ದೇನೆ..

ಅಲ್ಲಲ್ಲ ಸರ್, ಮೆಜಿಶ್ಟಿಕ್ ಹೋಗಿದ್ದೆ ಅಂದಿದ್ದೆ.... ಅದೇ.... ಕೆಂಪೇಗೌಡ ಬಸ್ ನಿಲ್ದಾಣ..ಎರಡೂ ಒಂದೇ..ನೀವೇನೋ ಗಡಿಬಿಡಿಯಲ್ಲಿ ಹಾಗೆ ಕೇಳಿಸಿಕೊಂಡರೋ ಏನೋ..??

ಹೌದಾ ತ್ಯಾಂಪಾ ಅವರೇ ನನಗೆ ನೀವು ಸಿನೇಮಾ ಅಂದದ್ದು ಕೇಳಿಸಿತ್ತು, ಅದಕ್ಕೇ ಹಾಗೆ ನಾನು ಹೇಳಿರಬೇಕು, ಹೋಗಲಿ ಬಿಡಿ.

ಅಂದರೆ ಬಾಸ್ ತಣ್ನಗಿದ್ದಾನೆ !!.

ಇದರ ಅರ್ಥ ನನ್ನ ಅವಶ್ಯಕಥೆ ಈಗ ಜಾಸ್ತಿ ಇದೆ ಅಂತ ಕಾಣ್ಸುತ್ತೆ.

ಏನಾಗಬೇಕಿತ್ತು ಸರ್? ತುಂಬಾ ಟೆನ್ಷನ್ ನಲ್ಲಿರೋ ಹಾಗಿದೆ?

ಜಯನಗರಕ್ಕೆ ಹೋಗಿದ್ರಾ? ಆಫೀಸೇನಾಯ್ತು?

ಯಾಕೆ ಸಾರ್ ಆಫೀಸ್ ಬಿದ್ದೋಯ್ತಾ?

ರೀ ಯಾವಾಗ್ ನೋಡಿದ್ರೂ ಅಪಶಕುನ ಹೇಳ್ತಾನೇ ಇರ್ತೀರಲ್ಲ, ಒಳ್ಳೆ ಸವಾಸ ಆಯ್ತಲ್ಲ, ನಮ್ಮನ್ನ ಸಾಯ್ಸ್ತಾರೆ ಅಷ್ಟೇ ಅವರೆಲ್ಲ ಒಟ್ಟಿಗೇ ಸೇರಿ.

ನೀವು ಹೇಳಿದರಲ್ಲೇ ಸಾರ್ ನಂಗೆ ಗೊತ್ತಾಗೋದು.

ಆಫೀಸಲ್ಲಿ ನೀರೇ ಬರ್ತಾ ಇಲ್ಲಂತೆ ನೋಡಿ

ಯಾಕಂತೆ ಸರ್?

ಬಾಸ್ ಮುಖ ಕೆಂಪು ಕೆಂಪಾಗಿತ್ತು.

ಅದನ್ನ ನಾನ್ ಇಲ್ಲೇ ಕೂತ್ಕೊಂಡ್ ಹೇಳೋಕಾಗುತ್ತೇನ್ರೀ?, ಅದನ್ನೂ ನಾನು ಮಾಡ್ಬೇಕು ಅಂದ್ರೆ ನೀವೇನ್ರೀ ಮಾಡ್ತೀರಾ? ನಾನು ಈ ಆಫೀಸಿನ ಬಾಸು.ಗೊತ್ತಾಯ್ತಾ?

ಸರಿ ಸರಿ ಸರ್ ಅರ್ಥವಾಯ್ತು, ಬಿಡಿ.

"ಏನ್ರೀ ಅರ್ಥ ಆಗೋದು ನಿಮ್ಗೆ, ನನ್ನ ಇಡೀ ಸರ್ವಿಸ್ಸಿನಲ್ಲೇ ಇಂತಹ ಮಾತನ್ನು ಕೇಳಲಿಲ್ಲ, ಗೊತ್ತಾ ನಿಮಗೆ ಕಳೆದ ವಾರದಿಂದ ಹೇಳ್ತಾ ಇದ್ದೀನಲ್ಲ ಅಲ್ಲಿಗೆ ಹೋಗಿ ನೋಡಿ ಬನ್ನಿ ಅಂತ ನೀವು ಹೋಗಲೂ ಇಲ್ಲ, ಅವ್ರು ನನ್ನನ್ನ ಬಿಡ್ಲಿಲ್ಲನಿಮ್ಮನ್ನು ನಂಬಿದ್ದಕ್ಕೆ ಈ ರೀತಿ ಮಾಡಿದಿರಲ್ಲಾ ಎನ್ನುವಂತಿತ್ತು ಆ ನೋಟ.

"ನಾವೇನ್ರೀ ಮಾಡೋಕಾಗುತ್ತೆ, ಮಾಡೋದೆಲ್ಲಾ ಅವರೇ ಮಾಡಿ ಮುಗಿಸಿದಂತಿದೆ, ಎಲ್ಲಾ ನಿಮ್ಮಿಂದನೇ" ನಾನು ಮನಸ್ಸಿನಲ್ಲೇ ಅಂತ ಹೇಳಿದ್ದೂ ಸ್ವಲ್ಪ ಗಟ್ಟಿಯಾಗೇ ಕೇಳಿಸಿತೂ ಅಂತ ಕಾಣ್ಸತ್ತೆ."ಏನ್ರೀ ಮತ್ತೆ ಗೊಣಗಾಟ..? ಎಂದರು ಬಾಸ್.

"ಏನಿಲ್ಲ ಸಾರ್ ಇದೂ ಕೂಡಾ ಕಳೆಯುತ್ತೆ " ಎಂದೆ ನಾನು.

ಎನ್ರೀ ಕಳೆಯುತ್ತೆ..? ಈಗಿನ ಈ ಕ್ಷಣದ, ಈ ಗಂಡಾಂತರ ಹೇಗೆ ಕಳೆಯುವದೂ ಅಂತ ತಲೆ ಬಿಸಿಯಲ್ಲೇ ನಾನಿದ್ರೆ.............ಕಳೆಯುತ್ತೆ ಅಂತೆ !!, ಕಳೆಯುತ್ತೆ........... ನನ್ನ ತಲೆ ....ನಿಮಗೇನ್ರೀ..? ಬಿಗ್ ಬಾಸ್ ಬೇರೆ ಗಲಾಟೆ ಮಾಡ್ತಾ ಇದ್ದಾರೆ ನಮ್ ಆಫೀಸ್ ಕಂಪ್ಲೇಂಟೇ ಸರಿಮಾಡಲಾರದ ನೀವು ಬೇರೆಯವರ ಕೆಲ್ಸ ಮಾಡಿಕೊಡ್ತೀರಾ ಅಂತ ಗೊತ್ತಾ? "

ಇದೆಲ್ಲಾ ಕೇಳಿಕೊಳ್ಳೋ ಸ್ಥಿತಿಯಲ್ಲೇ ಇರಲಿಲ್ಲ,

ಕಳೆದ ಸಾರಿಯೂ ಹಾಗೇ ಆಗಿತ್ತು. ಒಂದು ವಾರದಿಂದ ನೀರು ಬಂದಿಲ್ಲ ಬಂದಿಲ್ಲ ಅಂತ ಗಲಾಟೆ ಮಾಡ್ತಾನೆ ಇದ್ರು. ಏನಾಯ್ತು ನೋಡೋಣ ಅಂತ ತಾನೇ ಹೋಗಿದ್ದೆ.

ಯಾರಿಗೂ ಹೇಳದೇ ಎಲ್ಲಾ ನಳ ಗಳನ್ನೂ ತೆರೆದು ನೋಡಿದರೆ ಏನೂ ಸಮಸ್ಯೆ ಇರಲೇ ಇಲ್ಲ, ಎಲ್ಲಾದರಲ್ಲಿಯೂ ನೀರು ಸರಿಯಾಗಿಯೇ ಬರ್ತಾ ಇತ್ತು. ನಂತರ ಕಾಂತಾ ಮೇಡಮ್ಮನ್ನು ಕರೆದು ತಾನು ತೋರಿಸಿದ್ದೆ ನೋಡಿ ಮೇಡಮ್ ಎಲ್ಲಿದೆ ನೀರಿನ ಸಮಸ್ಯೆ, ನೀರಂತೂ ಸರಿಯಾಗಿಯೇ ಬರ್ತಾ ಇದೆ ಏನು ತೊಂದರೆ ಹೇಳಿ ಎಂದಾಗ ಎಲ್ಲಿ ನಲ್ಲಿ ತಿರುಗಿಸಿ ಎಂದರು. ತಾನು ಆ ನಲ್ಲಿಯ ನ್ನು ಓಪನ್ ಮಾಡಿಸಿ ತೋರಿಸಿದಾಗ, ಓಹ್ ಇದು ಕೆಳಗಿಂದ ಮೇಲೆ ಮಾಡೋ ನಲ್ಲಿನಾ, ನಾನೇನೋ ಎಡದಿಂದ ಬಲಕ್ಕೆ ತಿರುಗಿಸಿ ನೋಡ್ತಾ ಇದ್ದೆ, ನೀರು ಬರ್ತಾನೇ ಇರಲಿಲ್ಲ ಅದಕ್ಕೇ ಕಂಪ್ಲೈನ್ಟ್ ಮಾಡಿದ್ದೆ.

ಗೊಳ್ಳನೆ ನಕ್ಕಿದ್ದೆ ತಾನು, "ಅಲ್ಲ ಮೇಡಮ್ ಯಾವ ರೀತಿಯಲ್ಲಿ ಮಾಡಬೇಕೋ ಅದೇ ರೀತಿಯಲ್ಲಿ ಮಾಡಿದರೆ ತಾನೇ ನೀರು ಬರೋದು, ಅದನ್ನ ಮಾಡದೇ ನೀವು ಹೀಗೆ ನಮ್ ಬಾಸ್ ಗೆ ಕರೆ ಮಾಡಿ ತೊಂದರೆ ಕೊಟ್ಟರೆ ಹೇಗೆ ಹೇಳಿ?ಏನಪ್ಪಾ ನೀವು ಹೀಗೆಲ್ಲಾ ಮಾತಾಡಬಾರದು, ಅಂದಿತ್ತು ಮೇಡಮ್

ನಾನು ಅಂತದ್ದೇನು ಮಾತಾಡಿದೆ ಮೇಡಮ್ ಈಗ ಕೇಳಿದ್ದೆ ತಾನು.

ಹೆಂಗಸರಲ್ಲಿ ಮಾತಾಡೋ ರೀತಿನಾ ಇದು ಅಂತ ಕೇಳಿತ್ತು ಮಲಯಾಳಮ್ ಮೇಡಮ್

ತನಗಂತೂ ತನ್ನ ತಪ್ಪು ಏನು ಅಂತಾನೂ ಅರ್ಥ ಆಗಿಲ್ಲ.

ಓಕೆ ಮೇಡಮ್ ನಾನು ಆಮೇಲೆ ಬರ್ತೀನಿ

ನಿನ್ನ ಬಗ್ಗೆ ನಾನು ಕಂಪ್ಳೈಂಟ್ ಮಾಡ್ತೀನಿ ಅಂದಿತ್ತು  ಮೇಡಮ್

         ತಾನು  ಅಲ್ಲಿಂದ ಹಾಗೇ ಹೊರಟು ಬಿಟ್ಟಿದ್ದೆ.

ಅದೆಲ್ಲಾ ನೆನಪಾಯ್ತು ಈಗ ಇಂತವರ ಹತ್ರ ಹ್ಯಾಗೆ ಕೆಲಸ ಮಾಡಿಯೇನು ತಾನು?

ಪುನಃ ಅಲ್ಲಿಗೆ ಹೋಗಲು ಹೇಳ್ತಾ ಇದ್ದಾನೆ ನಮ್ಮ ಬಾಸ್ ಏನಪ್ಪಾ ಮಾಡಲಿ..?

ಅದೂ ಆ ಮೇಡಮ್ ಮಾಡಿದ ತಪ್ಪನ್ನು ತಾನು ಎತ್ತಿ ತೋರಿಸಿದ್ದು ತಪ್ಪಾಯ್ತಾ ಅಥವಾ,ತಾನು ಮಾತನಾಡುವ ರೀತೀಯಲ್ಲೇ ಬೇರೊಂದು ಅರ್ಥ ಕಂಡಿತಾ ಮೇಡಮ್ ಗೆ ?

ಅರ್ಥ ಆಗಲಿಲ್ಲ ತ್ಯಾಂಪನಿಗೆ.

೮. ಪಳೆಯುಳಿಕೆ

ಇಲ್ಲಿಯವರೆಗೆ: https://www.facebook.com/groups/kannadablog/doc/592333184143553/
ಅಲ್ಲಿ ಜಯನಗರದ ಆಫೀಸಿನ ಮರಮ್ಮತ್ ಕೆಲಸ ನಡೀತಾ ಇತ್ತು. ಆ ಕೆಲಸ ನೋಡಿಕೊಳ್ಳಲು ಯಾರನ್ನಾದರೂ ಒಬ್ಬರನ್ನು ಕಳುಹಿಸೋ ಭಾರ ನಮ್ಮ ಕಲ್ಲೂರಾಮ್ ನದ್ದಾಗಿತ್ತು. ಅಳೆದೂ ಸುರಿದು ತ್ಯಾಂಪನನ್ನೇ ಕಳುಹಿಸಿದರು. ತ್ಯಾಂಪನಿಗೆ ಬೇರೆ ಏನೂ ಕೆಲಸವಿರಲಿಲ್ಲ. ಆಫೀಸಿನವರ ಅಗತ್ಯತೆಗೆ ತಕ್ಕಂತೆ ಕೆಲಸವು ನಡೆಯುತ್ತಿತ್ತಾದರೂ ಯಾರಾದರೊಬ್ಬಮಧ್ಯಮ ಸಂಧಾನಗಾರ ಬೇಕಿತ್ತಲ್ಲ. ದೈನಂದಿನ ಕೆಲಸಗಳ ವಿವರ ಬಿಗ್ ಬಾಸ್ ಗೆ ಕಳುಹಿಸಲು/ ಹೇಳಲು ಒಬ್ಬ ಪ್ರಾಮಾಣಿಕ ವ್ಯಕ್ತಿಯ ಅಗತ್ಯವಿತ್ತು. ಅಲ್ಲಿಗೆ ತ್ಯಾಂಪನನ್ನು ಕಳುಹಿಸಿ ಕಲ್ಲೂರಾಮ್ ಅವನಿಗೆ ಉಪಕಾರವನ್ನೇ ಮಾಡಿದರು. ಕಾರಣ ಅಲ್ಲಿನ ಕೆಲಸಗಾರರ ಜತೆ ಯಿದ್ದು ತ್ಯಾಂಪ ಕಟ್ಟೋಣದ ಮೇಲುಸ್ತುವಾರಿಯ ಕೆಲವು ಸೂತ್ರಗಳನ್ನೇ ಕಲಿತ. ಮಿಸ್ತ್ರಿಯ ಪರಿಚಯ ಮಾಡಿಕೊಂಡು ಯಾವ್ಯಾವ ಕೆಲಸಕ್ಕೆ ಸಿಮೆಂಟ್ ಉಸುಕುಗಳ ಮಿಶ್ರಣದ ಗೋಡೆ ಕಟ್ಟುವ ಕೆಲಸಗಳ ಗಾರೆ ಸುಣ್ಣ ಬಣ್ಣ ಇತ್ಯಾದಿ ಕೆಲಸಗಳ ಮೇಲುಸ್ತುವಾರಿಯನ್ನೂ ಕಲಿತ. ಹೊಸ ಕೆಲಸವಾದುದರಿಂದ ವಾಸ್ತವವಾಗಿ ಅದರಲ್ಲಿ ಆಸಕ್ತಿಯೂ ಹೆಚ್ಚಿದ್ದುದರಿಂದ ಆತ ಸಹಜವಾಗಿಯೇ ಹೆಚ್ಚಿನದನ್ನೆಲ್ಲಾ ಒಂದು ದಿನಚರಿಯಲ್ಲಿ ಬರೆದಿಟ್ಟುಕೊಳ್ಳುತ್ತಾ, ಬೇರೆ ಏನೂ ಕೆಲಸವಿಲ್ಲದುದರಿಂದ ಒಂದು ಪೊರ್ ಮೆನ್ ಥರಾ ತಯಾರಾಗುತ್ತಿದ್ದ.

ಆದರೂ ಆತನ ಹೆದರಿಕೆ ತಾನೇನೂ ಮಾಡಿರದಿದ್ದರೂ ಆ ಕಾಂತಾ ಮೇಡಮ್ ಏನಾದರೂ ಕಿತಾಪತಿ ನಡೆಸಿ ತನ್ನ ಮೇಲೆ ಕಂಫ್ಳೈಂಟ್ ಕೊಟ್ಟು ಬಿಟ್ಟರೆ ಅಂತ ಆತನಿಗೊಂದು ದಿಗಿಲಿತ್ತು. ಅದು ತನ್ನ ಸತ್ಯಾ ಸತ್ಯತೆಗಿಂತಲೂ ಹೆಣ್ಣು ಹೆಂಗಸಾದುದರಿಂದ ಸಹಜವಾಗಿಯೇ ಮೇಲಾಧಿಕಾರಿಗಳು ಅವಳ ಕಡೆ ವಾಲುತ್ತಾರೆಂಬುದು ಆತ ಇಂತಹ ಆಫೀಸಿನಲ್ಲಿದ್ದುಕೊಂಡು ಕಲಿತ ಸತ್ಯ. ಇವತ್ತು ಇದಲ್ಲವಾದರೂ ಬೇರೊಂದು ಕಡೆಯಿಂದ ಆತನನ್ನು ಅರಸಿ ಬರುತ್ತಲಿತ್ತೊಂದು ಹಳೆಯ ದಿಗಿಲು. ಒಂದು ಮುಗಿದರೆ ಮತ್ತೊಂದು ಅವಗಡ ಇದು ತ್ಯಾಂಪನ ದಿನಚರಿಯ ಹಣೆ ಬರಹ.ಚಂದ್ರೂ ಬಂದು ಕರೆದ. ಕಲ್ಲೂರಾಮ್ ಕರೀತಾ ಇದ್ದಾರೆ



ಇವತ್ತು ಇದಲ್ಲವಾದರೂ ಬೇರೊಂದು ಕಡೆಯಿಂದ ಆತನನ್ನು ಅರಸಿ ಬರುತ್ತಲಿತ್ತೊಂದು ಹಳೆಯ ದಿಗಿಲು.

ಒಂದು ಮುಗಿದರೆ ಮತ್ತೊಂದು ಅವಗಡ ಇದು ತ್ಯಾಂಪನ ದಿನಚರಿಯ ಹಣೆ ಬರಹ.

ಚಂದ್ರೂ ಬಂದು ಕರೆದ. ಕಲ್ಲೂರಾಮ್ ಕರೀತಾ ಇದ್ದಾರೆ

ರೀ ತ್ಯಾಂಪ ಇದು ಏನ್ರೀ?' ಅವರ ಕೈಲ್ಲೊಂದು ಸಣ್ಣ ಕಾಗದ

ಏನು ಸಾರ್.... ತೆಗೆದುಕೊಂಡು ನೋಡಿ' ಏನಿದು ಇದೊಂದು ಸಿನೇಮಾ ಟಿಕೇಟು' .

ಅದನ್ನ ಓದೋಕೆ ನಂಗೂ ಬರುತ್ತೇರೀ, ಅದೇ ನಮ್ಮ್ ಆಫೀಸಿನಲ್ಲಿ ಏನು ಮಾಡ್ತಾ ಇದ್ಪೆ ಅಂತ?

ನಂಗೇನು ಗೊತ್ತು ಸಾರ್? ಈ ಸಿನೇಮಾ ಟಿಕೇಟ್ ನಮ್ಮ ಆಫೀಸಿನಲ್ಲಿ ಏನು ಮಾಡ್ತಾ ಇದೆ ಅಂತ' ಅದೇ ಧಾಟಿಯಲ್ಲಿ ಉತ್ತರಿಸಿದ ತ್ಯಾಂಪ

ಇದು ನಿಮ್ ಜಾಗದಲ್ಲಿ ಸಿಕ್ತಂತೆ, ಕಸ ಗುಡ್ಸೋವಾಗ ಶೇಟಿಗೆ ಸಿಕ್ತು, ನೋಡಿ ಮೋಹನ್ ಲಾಲ್ ಗೆ ಕೊಟ್ಟರೆ ಆತ ನಂಗೆ ಕೊಡಲು ಹೇಳಿದನಂತೆ. ನಿನ್ನೆ ಹತ್ತೂವರೆಯ ಶೋ !!!! ತಡೀರಿ ನೀವೂ ನಿನ್ನೆ ಮೆಜಿಸ್ಟಿಕ್ ಗೆ ಹೋಗಿದ್ದೇನೆ ಎಂದಿರಲ್ಲ. , ಅಂದರೆ ಇದು ನಿಮ್ಮ ಟಿಕೇಟ್. ಅಂದರೆ ಆಫೀಸಿನ ಸಮಯದಲ್ಲಿ ನೀವು ಸಿನೇಮಾ ನೋಡ್ತಾ ಇರ್ತೀರಿ ಅಂದ ಹಾಗೆ ಆಯ್ತು. ಇದಕ್ಕೇ ಏನ್ರೀ ನಿಮಗೆ ನಾನು ಸಂಬಳ ಕೊಡೋದು?

ಕರೆಕ್ಷನ್ ಸಾ, ನಾನು ಸಿನೇಮಾಕೆ ಹೋದರೂ ಕಂಪೆನಿ ಖರ್ಚಿನಲ್ಲಿ ಹೋಗೋದಿಲ್ಲ ಸಾರ್ ಬೇರೆಯವರ ಹಾಗೆ, ನನ್ನ ಖರ್ಚಿನಲ್ಲೇ ಹೋಗೋದು' ಅದೂ ಅಲ್ದೇ ...ನೀವಲ್ಲ ಸಾರ್ .... ಕಂಪೆನಿ ಸಂಬಳ ಕೊಡೋದು ನನಗೆ,

ನಿಲ್ಲಿ ನಿಲ್ಲಿ, ಏನ್ರೀ ನಿಮ್ ಮಾತಿನ ಅರ್ಥ? ಬೇರೆಯವರ ಹಾಗೆ ಕಂಪೆನಿ ಖರ್ಚಿನಲ್ಲಿ ಹೊಗೋದಿಲ್ಲ ಎಂದರೆ....?ಬೇರೆಯವರು ಎಂದರೆ ಯಾರು?

ಸುಮ್ಮನೆ ಮಾತಿಗೆ ಹೇಳ್ದೆ ಸಾರ್, ನಾನ್ಯಾಕೆ ಆ ಸುದೀಪನ ಸಿನೇಮಾಕೆ ಹೋಗಲಿ, ಸಾರ್. ಅದೂ ಆ ಕೆಂಪೇ ಗೌಡ ಸಿನೇಮಾನ, ಅದನ್ನ ಕಂಡ್ರೆ ನಂಗ್ ಆಗಲ್ಲ ಸರ್.' ಥುತ್ತೇರಿಕೇ ಯಾವುದನ್ನ ಮುಚ್ಚಿಡ್ತಾ ಇದ್ದೇನೋ ಅದನ್ನೇ ಬಟ್ಟಾ ಬಯಲು ಮಾಡ್ಬಿಟ್ಟೆ.

ಬಂತಾ ಮಹಾಶಯ ತಮ್ ಬಾಯಲ್ಲೇ ಬಂತಲ್ಲ, ಯಾವ ಸಿನೇಮಾ, ಯಾರು ಹೀರೋ ಅಂತ...ನೋಡಿದ್ರಾ ಕಳ್ಳನ್ನ ಹೇಂಗೆ ಹಿಡಿದು ಬಿಟ್ಟೆ.

ಕಥೆ ಮುಗೀತು,

ಅಲ್ಲ ಆ ಮೋಹನ್ ಲಾಲ್ ಗಾದ್ರೂ ಬುದ್ದಿ ಬೇಡ್ವಾ.....??

ಊಂ ಇಲ್ಲ ಇಲ್ಲ ಸಾರ್, ನಾನು ನೋಡ್ಲಿಲ್ಲ ಸಿನೇಮಾನ

ಮತ್ಯಾರ್ರೀ ನೋಡಿದ್ರೂ, ಬೇರೆ ಯಾರಾದರೂ ನೋಡಿದ್ರೆ ನಿಮ್ ಹತ್ರ ಹ್ಯಾಂಗೆ ಬಂತು ಈ ಟಿಕೇಟ್?

..........................................................................

ಹೇಳ್ರೀ ಸುಮ್ಮನೆ ನಿಂತರೆ ಹೇಗೆ ಈಗ....??

ಅಂದರೆ ಮೊದಲಿನ ಕಥೇನ ದೊಡ್ಡದು ಮಾಡಬೇಕು ಈಗ.

ಸರ್ ನಾನು ಏನು ಹೇಳಿದ್ದೆ ನಿಮಗೆ,

ಈಗ ಹೇಳೋ ಸ್ಥಿತಿಯಲ್ಲಿಲ್ಲ, ಎಂದಿದ್ರೀ

ಅದಲ್ಲ, ಅದರ ನಂತರ..ಮುಂದೆ .. ಏನು ಹೇಳಿದ್ದೆ?

ಬಿಗ್ ಬಾಸ್ ಕೆಲಸದ ಮೇಲೆ ಇದ್ದೇನೆ ಅಂದ್ರೀ

ಅದೇ ಸಾರ್ ಬಿಗ್ ಬಾಸ್ ಕೆಲ್ಸದ ಮೇಲಿದ್ದೆ ಅಂದಿದ್ದೆನಲ್ಲ ಸರ್, ಬಾಸ್ ಹೆಂಡತಿಯ ತಮ್ಮ ಬಂದಿದ್ರು ಸರ್, ಅವರಿಗೆ ಸುದೀಪ ಅಂದ್ರೆ ಪ್ರಾಣ ಸಾರ್, ಸುದೀಪನ ಎಲ್ಲಾ ಸಿನೇಮಾ ನೋಡಿದ್ದಾರೆ ಸಾರ್...

ಸರಿ ಸರಿ............... ಅದು ಬಿಡಿ ನಿಮ್ಮ ಕಥೆ ಮುಂದುವರಿಸಿ,ಅದೇ ಸಾರ್ ಬಾಸ್ ನಂಗೆ ಅವ್ರನ್ನ ಸಿನೇಮಾ ಹಾಲ್ ಎಲ್ಲಿದೆ ಅಂತ ತೋರ್ಸೀ...

ತೋರ್ಸೀ...... ಮುಂದೆ?

ಅದೇ ತೋರ್ಸೀ , ಅವರ ಜತೇಲೇ ಇದ್ದು ಮುಗಿದ ಮೇಲೆ ಅವ್ರನ್ನ ಮನೆಗ್ ಕಳಿಸಿ ಬಾ ಅಂದ್ರೂ ಸಾರ್.ಏನ್ರೀ ಕಾಗೆ ಹಾರ್ಸ್ತಾ ಇದ್ದೀರಾ? ಬಾಸ್ ಎರಡ್ಮೂರು ದಿನ ಇರಲ್ಲ ದೆಹಲಿಗೆ ಹೋಗಿದ್ದಾರೆ, ಅಂತ ನಿಮ್ ಹತ್ರಾನೆ ನಂಗ್ ಯಾರೂ ಕರೆ ಮಾಡ್ಬೇಡಿ ಅಂತ ನಿಮ್ ಹತ್ರಾನೇ ತಾನೇ ಹೇಳ್ಸಿದ್ರೂ ಅಂದಿದ್ರೀ....

ಹಾಂಗೆ ನಾನೇ ಹೇಳಿದ್ನಾ,

ಬಾಸ್ ಅಂದ್ರೆ ಈ ಬಿಗ್ ಬಾಸ್ ಇದ್ದಾರಲ್ಲ ಅವರ ಬಾಸ್ ಸಾರ್?

ಯಾರ್ರೀ ಅದು..? ಬಾಸ್ ನ ಬಾಸ್

ನಕ್ಕ ತ್ಯಾಂಪ ಅಷ್ಟೂ ಗೊತ್ತಾಗಿಲ್ವಾ ಸರ್ .... ಅದೇ ಸರ್ ಬಾಸ್ ನ ಪತ್ನಿಯವರು ಸಾರ್. ಅವ್ರ್ ತಮ್ಮ ಅಲ್ವಾ ಸಾರ್ ಬಂದಿದ್ದು. ಮತ್ತೆ ಕರೆದು ಕೇಳಿ ಬಿಟ್ಟೀರಾ ಸಾರ್ ಮೊದಲೆ ಬಿಗ್ ಬಾಸ್ ಪತ್ನಿ ಇದನ್ನ ತಮಗೆ ಹೇಳಬೇಡ ಎಂದಿದ್ದರು.ಮುಂದಾಲೋಚನೆ ಬೇಕಲ್ಲ. ಇವರು ಕರೆದು ಕೇಳಿ ಬಿಟ್ಟರೆ, ಬಿಗ್ ಬಾಸ್ ಪತ್ನಿಯವರಿಗೆ ಯಾವ ತಮ್ಮನೂ ಇಲ್ಲ ಅಂತ ಗೊತ್ತಾದ್ರೆ ನನ್ನ ಗತಿ... ದೇವರೇ ಗತಿ.

ಬಚ್ಚಾವ್, ಒಪ್ಪಿಕೊಂಡು ಬಿಟ್ಟ....

ಸರಿ ಆ ಜಯನಗರ ಕಥೆ ಏನಾಯ್ತು.

ಪ್ಲಂಬರ್ ಕಳುಹಿಸಿದ್ದೇನೆ ಸರ್

ಸರಿ ನೀವಿನ್ನು ನಿಮ್ ಜಾಗಕ್ಕೆ ಹೋಗಿ.



೯. ಬಾಸ್ ಈಸ್ ಅಲ್ವೇಸ್ ರೈಟ್


ಸೀನಿಯರ್ ಎಲ್ಲರೂ ನೆರೆದಿದ್ದರು


ನೆರೆಯದೇ .....ಒಂದು ಪ್ರೆಸ್ಟೀಜಿಯಸ್ ಟರ್ನ್ ಕೀ ಪ್ರೊಜೆಕ್ಟ್ ಅದು.


ಪ್ರೊಜೆಕ್ಟ್ ಹೆಡ್ ಕಲ್ಲೂರಾಮ್ ದೊಡ್ಡ ಬಾಸ್ ಮತ್ತು ಕ್ಲೈಂಟ್ ಎಲ್ಲರೂ ನೆರೆದಿದ್ದರು.
ತ್ಯಾಂಪ ಮೋಹನ್ ಲಾಲ್ ಸ್ವಲ್ಪ ದೂರದಲ್ಲಿ ನಿಂತಿದ್ದರು ಅವರ ಮಾತು ಮಾತ್ರ ಕೇಳೋ ಹಾಗೆ.

ರಸ್ತೆಯಿಂದ ಇಳಿದ ಅವರ ಪಟಾಲಮ್ ಮೊದಲು ಮುಖ್ಯದ್ವಾರದ ಬಳಿ ನಿಂತಿತು.

ನೋಡಿ ಏನ್ರೀ ಇದು? ಕಲ್ಲೂರಾಮ್, ಅಲ್ಲಾ ರಸ್ತೆಯ ಲವೆಲ್ನಿಂದ ಕಟ್ಟೋಣ ಮೇಲಿರಬೇಕೋ, ಕೆಳಗಡೆಯೋ?

ಮೇಲಿರಬೇಕು ನ್ಯಾಯವಾಗಿ ಅನ್ನೋಣವೆಂದರೆ ಇಲ್ಲಿ ಅದರ ತದ್ವಿರುದ್ದವಾಗಿತ್ತು.
ಆ ಕಟ್ಟಡ ಆರಂಭವಾಗಿರುವಾಗ ಬೇರೆಯೇ ಯಾರೋ ಇದ್ದರು, ಸುಮ್ಮನೇ ಮಣ್ಣಿನ ಲವೆಲ್ ಏರಿಸಿದರೆ ತುಂಬಾನೇ ಹಣ ಖರ್ಚಾಗುತ್ತೆ ಅಂತ ಕಟ್ಟೋಣದ ಲವೆಲ್ ಅನ್ನು ರಸ್ತೆಗಿಂತ ಕೆಳಗಡೆಯೇ ಇಟ್ಟಿದ್ದರು.

ಅವರಿಗೆ ಏನುತ್ತರ ಕೊಡೋಡು ಅಂತ ಕಲ್ಲೂರಾಮ್ ಆಲೋಚನೆ ಮಾಡುತ್ತಿರಬೇಕಾದರೆ, ಇನ್ನೊಂದು ಬಾಂಬು ಬಿತ್ತು.

ಅಲ್ಲಾರೀ ಕಲ್ಲೂರಾಮ್ ನೀವೇನ್ರೀ ಇಲ್ಲಿ... ಏನ್ ಮಾಡ್ತಾ ಇದ್ದೀರಾ, ರಸ್ತೆಯಿಂದ ಇಳಿದು ಬಂದ ನೀರು ಸೀದಾ ನಮ್ಮ ಮುಖ್ಯ ಹಾಲ್ ಗೇ ಬರುತ್ತದಲ್ರೀ, ಏನಿದು..?

ಸರ್ ಈ ಡಿಸಾಯಿನ್ ಮಾಡಿದ್ದು ಜರ್ಮನ್ ನವ, ಆತ ನಾವು ಏನು ಹೇಳಿದರೂ ಕೇಳಲಿಲ್ಲ ಸರ್

ನೀವ್ಯಾಕ್ರೀ ಇರೋದು, ಅವನಿಗೆ ಸರಿಯಾಗಿ ಹೇಳಬೇಕಿತ್ತು..?? ಒಂದು ವೇಳೆ ನಿಮ್ಮ ಮಾತು ಆತ ಕೇಳಿರದಿದ್ದರೆ ನಮಗೂ ಹೇಳಬೇಕಿತ್ತಲ್ಲ..??

ಇಲ್ಲ ಈ ವಿಶಯಗಳ ಬಗ್ಗೆ ನಿಮಗೆ ಇ- ಅಂಚೆಯಲ್ಲಿ ಕಳುಹಿಸಿದ್ದೆ  ಸರ್



 ಇ  -  ಅಂಚೆನೋ ಆ ಅಂಚೆನೋ ನನಗ್ಯಾಕ್ರೀ ಗೊತ್ತಾಗಲಿಲ್ಲ? ಫೋನ್ ಮಾಡ್ಬೇಕಾಗಿತ್ತು, ಮೆಸೆಜ್ ಕಳಿಸಬೇಕಾಗಿತ್ತು.. ಇಂತಹ ತಾಂತ್ರಿಕವಾಗಿ ಮುಂದುವರಿದ ಕಾಲದಲ್ಲೂ ನೀವು ಈ ರೀತಿ ತೊದಲಿದರೆ ನಿಮ್ಮಿಂದ ಏನು ನಿರೀಕ್ಷಿಸಬಹುದು ನಾವು ಹೇಳಿ..??


ನಿಜವಾಗಿಯೂ ಆದದ್ದೇನೆಂದರೆ ಈ ಕ್ಲಯಂಟ್ ರಜೆಯಲ್ಲಿದ್ದರು. ಅವರನ್ನು ಫೋನ್ ಮಾಡಿ ಹೇಳಿದರೆ ಏನಾದರೂ ಬೈದರೆ ಅಂತ ಹೇಳಿರಲಿಲ್ಲ. ದೊಡ್ಡವರ ಕಥೆಯೇ ಇಷ್ಟು. ತಾವು ಬೇಕಾದರೆ ಸಾವಿರ ಸಾರಿ ಹಗಲಿಲ್ಲ ರಾತ್ರಿ ಅಂತ ಇಲ್ಲ ರಜೆ ಅಂತ ಇಲ್ಲ ಕರೆ ಮಾಡಿ ಜೀವ ತಿಂತಾರೆ ಅವರ ಕೈ ಕೆಳಗೆ ಕೆಲಸ ಮಾಡೋರನ್ನ, ಯಾಕೆಂದರೆ ಇವರೆಲ್ಲಾ  ಅವರ ಆಸ್ತಿ. ಅದೇ ಅವರ ಕೈ ಕೆಳಗೆ ಕೆಲಸ ಮಾಡುವವರು ಸಂಜೆ ಏಳು ಗಂಟೆಯ ನಂತರ  ಕರೆ ಮಾಡಿ ಅವರ ನಿದ್ದೆ ಕೆಡಿಸಬಾರದು, ಅವರು ರಜೆಯಲ್ಲಿದ್ದಾಗ ತೊಂದರೆ ಕೊಡಬಾರದು. ಮಾಡಿದರೆ ಮಾಡಿದ್ಯಾಕೆ ಅಂತಾನೂ, ಮಾಡಿಲ್ಲದಿದ್ದರೆ ಯಾಕೆ ಮಾಡಿಲ್ಲ ಅಂತಾನೂ ಒಟ್ಟಾರೆ ತಪ್ಪು ಮಾಡುವುದು ಕೆಳಗಿನವರ ಅಧಿಕಾರವಾದರೆ ಮೇಲಿನವರ ಅಧಿಕಾರ  ಅವರನ್ನು ಟೀಕಿಸುವುದು.


ಮಾಡಿದ್ದೆವು ಸಾರ್.... ನೀವು ನಾನು ಬಂದು ನೋಡ್ಕೊಳ್ತೇನೆ ಅಂದ್ರಿ.


ಅಂದಿರಬೇಕ್ರೀ ನಿಮ್ಮ ಹಾಗೆ ನನಗೆ ಒಂದೇ ಕೆಲಸವೇನ್ರೀ, ಮತ್ತೆ ಮತ್ತೆ ಕೇಳಬೇಕಾಗಿತ್ತು, ನಿಮಗೆ ಯಾಕ್ರೀ ಸಂಬಳ ಕೊಡ್ತಾ ಇರೋದೂ..

ಒಮ್ಮೆ ಹಾಗೆ ಕೇಳಿದ್ದಕ್ಕೆ ನಂಗೆ ಬಯ್ದು ಬಿಟ್ಟ್ರೀ ಸರ್ ನೀವು.....


ಬಂತು  ಬ್ರಹ್ಮಾಸ್ತ್ರ!!!!  

ಅದಕ್ಕೇ........ರೀ !! ರೀ    ಯಾರ್ರೀ ನಿಮ್ಮನ್ನ ಮನೇಜರ್ ಮಾಡಿರೋದು??ಮುಖ ಕೆಳಗೆ ಮಾಡಿದರು ಕಲ್ಲೂರಾಮ್ ಮತ್ತು ಅವರ ಬಾಸ್.


ಮತ್ತೆ ಮೇಲೆ ನೋಡಿ ಆ ಮಹಡಿಯ ಮೆಟ್ಟಿಲುಗಳು ಹೋಗಿ ಮೇಲಿನ ಬಾಲ್ಕನಿಗೆ ಹೋಗುತ್ತವೆ. ಹೋಗುವ ದಾರಿಯಲ್ಲಿ ಒಂದೇ ಒಂದು ಕಿಟಿಕಿಯೂ ಇಟ್ಟಿಲ್ಲ, ಮಳೆ ಬಂದರೆ ಎಲ್ಲಾ ಕಡೆ ನೀರಾಗಲ್ವೇನ್ರೀ, ನಾವೆಲ್ಲಾ ಯಾವಾಗಲೂ ಕೊಡೆ ಹಿಡ್ಕೊಂಡೋ ಅಥವಾ, ಮಳೆ ಕೋಟು ಧರಿಸಿ ಇರೋಕಾಗುತ್ತೇನ್ರೀ?  ಆ ನೀರಿನಲ್ಲಿ ನೀವು ಒಳಗಡೆ ಹೋದರೆ ಆಫೀಸೆಲ್ಲಾ ಕೆಸರಾಗಲ್ವೇನ್ರೀ, ನೀವೂ ನಿಮ್ ಡಿಸಾಯಿನ್ನೂ,,, ಹೊಳೆಗೆ ಹೊಳೆಗೆ ಹಾಕ್ರೀ.ನಾ ಹೇಳಿದ್ದಕ್ಕೆಲ್ಲಾ ತಲೆ ಅಲ್ಲಾಡಿಸ್ತಾ ಇದ್ದೀರಲ್ಲಾ, ಇದನ್ನೆಲ್ಲಾ  ಬರಕೊಂಡೂ ಮೆಮರಾಂಡಮ್ ಯಾರ್ರೀ ಮಾಡ್ತಾರೆ..??


ಈಗ ಬಂದರು ದೊಡ್ಡ ಸಾಹೇಬರು ಇಲ್ಲ ಸಾರ್ , ಕಲ್ಲೂರಾಮ್ ಮತ್ತು ತ್ಯಾಂಪ, ಮೋಹನ್ಲಾಲ್ ಎಲ್ಲಾ  ಬರೀತಾ ಇದ್ದಾರೆ ಸಾರ್, ದೊಡ್ಡ ಸಾಹೇಬರು ಮತ್ತೂ ಚುರುಕು. ಬಂಡೆ ಬಿದ್ದರೆ ಎಲ್ಲರ ತಲೆ ಮೇಲೂ ಇದ್ದಿರಲಿ ಅನ್ನೋದು ಅವರ ವಾದ.


ಸರಿ ಮತ್ತೆ ಮುಂದೆ ಹೋಯ್ತು, ಪಟಾಲಮ್, ಮೊದಲೇ ಆ ಎಮ್ ಡಿ ಗೆ ಕಲ್ಲೂರಾಮ್ ಮೇಲೆ ಕೋಪ ಬಂದಿತ್ತು.


ಮುಂದಿನ ಭವ್ಯ ಒಳಾಂಗಳದಲ್ಲಿಂದ ಮೇಲ್ಮಹಡಿಗೆ ನೇರ ಸಂಪರ್ಕಕ್ಕೆ ಮೆಟ್ಟಿಲುಗಳಿದ್ದವು ಅವುಗಳನ್ನು ಎದ್ದು ಕಾಣುವ ಹಾಗೆ ಕಟ್ಟಲು ಸಿಮೆಂಟು ಮತ್ತು ಸರಳು ಉಪಯೋಗಿಸದೇ ಕಬ್ಬಿಣದ ತೊಲೆಗಳನ್ನೂ ಕಬ್ಬಿಣದ ಹಾಸುಗಳನ್ನೂ ಉಪಯೋಗಿಸ ಬೇಕಾಗಿತ್ತು. ಕೆಲಸವಿನ್ನೂ ಆರಂಭದಲ್ಲಿದ್ದುದರಿಂದ ಅಲ್ಲದೇ ಅರ್ಧಕ್ಕರ್ಧ ಕೆಲಸ ಮಾಡಿಸುತ್ತಲಿರುವುದರಿಂದ ಅಡಿಪಾಯದಿಂದೆದ್ದು ಬರುತ್ತಿರೋ  ಜಾಗ ವೆಲ್ಡಿಂಗ್ ಮಾಡಿಟ್ಟಿರದಿದ್ದುದರಿಂದಲೂ, ಯಾರಾದರೂ ಅದರ ಮೇಲೆ ಓಡಾಡಿದರೆ ಅದು ಅಲುಗಾಡುತ್ತಿತ್ತು. ಸಾಮಾನ್ಯ ಕೆಲಸಗಾರರಿಗೆ ಅದರ ಮೇಲಿಂದ ಓಡಾಡಲು ಅನುವು ಮಾಡಿಕೊಟ್ಟಿರಲಿಲ್ಲ. ಇವತ್ತು ಇನ್ಸ್ಪೆಕ್ಷನ್ ಆದುದರಿಂದ ಅದರ ಮೇಲೆ ಹೊರಟ ಅವರ ಕಿರಿಯ ಅಧಿಕಾರಿಗಳು ಈ ವಿಷಯವನ್ನೂ ಮತ್ತೂ ವಿಷದೀಕರಿಸಲು ಹೊರಟ ಹಾಗೆ ಬದಿಯಿಂದ ಓಡಾಡುತ್ತಾ, ಬೇಕೆಂತಲೇ ಅದನ್ನು ಜಾಸ್ತಿ ಜೋಲಾಡಿಸುತ್ತಿದ್ದರು. ಇದರಿಂದ ಮತ್ತಷ್ಟು ಕಳೆಗುಂದಿತು ಇವತ್ತಿನ ಕಾರ್ಯಕ್ರಮ.

ಇದರ ಬಗ್ಗೆ ನೇರ "ಬಿಳೀಕಾಗದ" ವಿಚಾರಣಾ ಪತ್ರ ಕೇಳಿದರು ನಮ್ಮ ಆದರಣೀಯ ಯಜಮಾನರು.

ಅಲ್ಲಿಗೇ ಮುಗಿದಿರಲಿಲ್ಲ....


ಮುಂದಿನ ಧಾಳಿ ಒಳಾಂಗಣದ ನೆಲಹಾಸು.ಅಲ್ಲಿಯೂ ಅದೇ ಕಥೆ. ನೆಲಹಾಸು ಹಾಕಿದ್ದು ಕೆಲವು ಮೂಲೆಗಳೆಲ್ಲಾ ನೇರವಾಗಿ ಸಮತಲದಲ್ಲಿರದೇ ಮೂಲೆ ಮಾತ್ರ ಎದ್ದು ಎದ್ದು ಕಾಣುತ್ತಿತ್ತು.ನೋಡಿದ ಕೂಡಲೇ ಎದ್ದು ಕಾಣುವ ಹಾಗೆ.  ಅಲ್ಲಲ್ಲಿ ಜೋಡಣೆ ಸಹಾ ಸರಿಯಾಗಿರಲಿಲ್ಲ,

ಯಾರ್ರೀ ಇದನ್ನ ಸೆಲೆಕ್ಟ್ ಮಾಡಿರೋದು ಅಸಹ್ಯ ಕಲರ್ ಮತ್ತೆ ಜೋಡಣೆ ಕೂಡಾ ಸರಿಯಾಗಿಲ್ಲ, ಯಾರ್ರೀ ಗುತ್ತಿಗೆದಾರ, ಕರೆಸಿ ಅವನನ್ನು ಇಲ್ಲಿ,   ಅವನ ಕೆಲಸವನ್ನೇ ರದ್ದು ಮಾಡಿಸಿ.

ಗುತ್ತಿಗೆ ದಾರನಿಗೆ ಕರೆ ಹೋಯ್ತುನೀವೇನ್ರೀ, ಏನು ಈ ಮೊದಲು ಎಲ್ಲೆಲ್ಲಿ ಕೆಲ್ಸ ಮಾಡಿದ್ರೀ ಹೇಳಿಕಲ್ಲೂರಾಮ್ "ಸರ್ ನಿಮ್ಮ ಮನೆ ಈತನೇ ಕಟ್ತಾ ಇರೋದೂ ಸರ್. ಅದೇ ಜಯನಗ ಬಡಾವಣೇಲೀ ೮೦ ‍ ನೂರರ ಅಳತೆಯಲ್ಲಿ, ತುಂಬಾನೇ ಚೆನ್ನಾಗಿ ಕಟ್ತಾ ಇದ್ದಾನೆ ಸಾರ್ ಕ್ವಾಲಿಟೀನೂ ಸೂಪರ್"

ನಂಜುಂಡಪ್ಪ ಇವರ ಹೆಸರೇನು... ಕಲ್ಲೂರಾಮ್ ಅಲ್ಲವಾ..? ಇವರನ್ನು ಮೊದಲು ಇಲ್ಲಿಂದ ಹೊರಗೆ ಕಳುಹಿಸಿ.

ಬಾಸ್ ನ ಬಾಸ್ ಗೆ ಸೀದಾ ಆರ್ಡರ್ ಕೊಟ್ಟರು ಕ್ಲೈಂಟ್ ಮುರುಗನ್ .

ಅವರು ಅಳಗಪ್ಪ ಕಂಪೆನಿಯ ಎಮ್ ಡಿ. ಈ ಪ್ರೊಜೆಕ್ಟ್ ನ ಖರ್ಚಿನಲ್ಲೇ ಅವರ ಜಯನಗರದ ವೈಯ್ಯಕ್ತಿಕ ಬಂಗಲೆಯೂ ತಯಾರಾಗುತ್ತಿತ್ತು. ಹಾಗಂತ ಅದನ್ನ ಎಲ್ಲರೆದುರಿಗೆ ಹೇಳಿದರೆ ಹೇಗೆ?

ಇದು ಅವರ ಮರ್ಯಾದೆಯ ಪ್ರಶ್ನೆ. ಅದಕ್ಕೆ ಯಾವ ಧಾಖಲೆಯನ್ನೂ ಇರದ ಹಾಗೆ ಕಟ್ಟಿಸುತ್ತಿದ್ದಾರೆ. ಅದು ಗೊತ್ತಿದ್ದದ್ದು ನಮ್ಮ ಬಾಸ್ ಕಲ್ಲೂರಾಮ್ ಗೆ ಮಾತ್ರವೇ. ತ್ಯಾಂಪನಿಗೂ ಅಲ್ಪ ಸ್ವಲ್ಪ ಗೊತ್ತಿತ್ತು. ಎಲ್ಲಾ ಇಂತಹ ಬಾಸ್ ಗಳ ವಿಷಯ.


ಕಲ್ಲೂರಾಮ್ ಏನು ಹೇಳ್ತಾರೆ ಅಂತ ಗೊತ್ತಾಗೋದರ ಒಳಗೇ, ಆ ಎಮ್ ಡಿ ತ್ಯಾಂಪನನ್ನು ಕರೆದರು,

ಬನ್ರೀ ಇಲ್ಲಿ, ಏನು ನಿಮ್ಮ ಹೆಸರು?  ರೀ ತ್ಯಾಂಪ ಈ ಕಲ್ಲೂರಾಮ್ ನ್ನ ಈ ಪ್ರೋಜೆಕ್ಟ್ ಹ್ಯಾಂಡಲ್ ಮಾಡೋದು ಇವತ್ತಿಂದ ಬೇಡ ಅನ್ನಿ, ನೀವು ನೋಡಿಕೊಳ್ಳಿ ಆಯ್ತಾ.

ನಾನಾ ಸರ್,...ಅದೂ ಅದೂ... ತ್ಯಾಂಪ ಕಸಿವಿಸಿಗೊಂಡ.

ಬಿಗ್ ಬಾಸ್ ನ ಕಣ್ಸನ್ನೆಗೆ ಕಲ್ಲೂರಾಮ್ ಹೊರಗೆ ಹೋದ್ರು,ಅವರಿಗಂತೂ ತಾವು ಮಾಡಿದ ತಪ್ಪು ಹೊರ ಹೋಗುವವರೆಗೂ ಅರ್ಥವಾಗಿರಲೇ ಇಲ್ಲ.


ಕಲ್ಲೂರಾಮ್ ನ ಗೈರು ಹಾಜರಿಯಿದ್ದ ಅವತ್ತು ರಾತ್ರೆಯ ಪಾರ್ಟಿಯಲ್ಲಿ ತ್ಯಾಂಪನೂ ಒಬ್ಬ ಆದರಣೀಯ ಅತಿಥಿಯಾಗಿದ್ದ.


೧೦. ಚಾಲೆಂಜ್  ಡಿಪ್ಲೋಮೆಸಿ


"ಇದೆಲ್ಲಾ ನೀವೇ ಬೇಕೆಂತಲೇ ಮಾಡಿಕೊಂಡದ್ದು ಕಲ್ಲೂರಾಮ್"


ಇಲ್ಲಿಯವರೆಗೆ:


ದೊಡ್ದ ಸಾಹೇಬರ ಮತ್ತು ಕಲ್ಲೂರಾಮ್ ಮಾತುಕತೆ ನಡೆಯುತ್ತಿದ್ದುದು ಅವರ ಚೇಂಬರಿನಲ್ಲಿ.


"ಎಲ್ಲರಿಗೂ ಗೊತ್ತಿದ್ದ ವಿಷಯ ಅದು, ಅಳಗಪ್ಪನವರ ಮನೆಯ ಕೆಲ್ಸ ಅದೇ ನಮ್ಮ ಗುತ್ತಿಗೆದಾರನೇ ಮಾಡುತ್ತಿದ್ದಾನೆ ಅಂತ. ಆದರೆ ಬೇರೆ ಯಾರಿಗೂ ಅದನ್ನ ಎಲ್ಲರೆದುರು ಹೇಳುವ ಅಗತ್ಯತೆ ಇದ್ದಿರಲಿಲ್ಲ. ನಮ್ಮ ಕೆಲಸ ನಾವು ಮಾಡಿಕೊಂಡಿರಬೇಕು ಅಲ್ಲವೇ. ನೀವು ಎಲ್ಲರನ್ನೂ ಹೊಂದಿಕೊಂಡು ನಡೆಯಬೇಕಲ್ಲವೇ. ನಿಮ್ಮ ಪ್ರೊಜೆಕ್ಟ್ ಅದು, ನೀವೇ ಅದರ ಮಾಲೀಕರೂ ಕೂಡಾ. ನಿಮ್ಮ ಇವತ್ತಿನ ಒಂದು ಹೇಳಿಕೆಯಿಂದಾಗಿ ಎಲ್ಲವೂ ಉಲ್ಟಾಪುಲ್ಟಾ ಆಯ್ತು. ಅಳಗಪ್ಪನು ತನ್ನ ಮುಜುಗರವನ್ನು, ಸಿಟ್ಟನ್ನು ಮತ್ತೆ ಯಾರ ಮೇಲೆ ತೋರಿಸಬೇಕು ಅದನ್ನ ಆ ಕೋಪವನ್ನ ನಿಮ್ಮ ಮೇಲೆಯೇ ಹೊರಿಸಿದ.ನೀವು ಸ್ವಲ್ಪ ಜಾಗರೂಕತೆಯಿಂದ ಮಾತನಾಡಿದ್ದರೆ ಈ ಎಲ್ಲಾ ಜಂಜಟಗಳೇ ಇರಲಿಲ್ಲ ಅಲ್ವಾ ಯೋಚಿಸಿ ನೋಡಿ. ನಿಮಗೆ ಇನ್ನು ನಾನೇನೂ ಹೇಳಲಾರೆ"


ಆದರೆ ಅದು ತಪ್ಪಲ್ಲವಾ ಸರ್?   ಕಲ್ಲೂರಾಮ್ ವ್ಯಘ್ರರಾಗಿದ್ದರು.

ಅಳಗಪ್ಪ ತಮ್ಮ ಸ್ವಂತದ ಕೆಲಸವನ್ನು ಈ ಪ್ರೊಜೆಕ್ಟ್ ಹೆಸರಿನಲ್ಲಿ ಮಾಡಿಸಿಕೊಳ್ಳೂತ್ತಿದ್ದಾರೆ, ಪಾಪ ಕಂಪೆನಿ ಅವರನ್ನ ಇಷ್ಟು ಎತ್ತರಕ್ಕೇರಿಸಿ ಸಂಬಳ ಕೊಡುತ್ತಿದೆ ಆದರೂ...., ನೀವೇ ಹೇಳಿ ಸಾ.

‘ಯಾವುದು ತಪ್ಪಲ್ಲ ಹೇಳಿ ಕಲ್ಲೂರಾಮ್, ನೀವು ನಿಮ್ಮ ವೈಯ್ಯಕ್ತಿಕ ಕೆಲಸ ತ್ಯಾಂಪನಿಂದ ಮಾಡಿಸಿಕೊಂಡಿರಲ್ಲ ಅದು ತಪ್ಪಲ್ಲವೇ?,

ಎಲ್ಲರೂ ನೀವೂ ನಾನೂ ಅಳಗಪ್ಪ ಎಲ್ಲರೂ ಸ್ವಾರ್ಥಿಗಳೇ, ಕೆಲವರು ಸ್ವಲ್ಪ ಜಾಸ್ತಿ, ಕೆಲವರು ಕಮ್ಮಿ. ಅಷ್ಟೇ“


ಬಿಗ್ ಬಾಸ್ ಬಾಣ ನೇರವಾಗಿ ತಾಕಿತ್ತು.

‘ಈಗ ನಾನೇನು ಮಾಡಬೇಕು ಹೇಳಿಸರ“ ಕಲ್ಲೂರಾಮರಿಗೆ ಬೇರೆ ದಾರಿ ಇದ್ದಿರಲಿಲ್ಲ. 

ನೋಡಿ ನಾಳೆಯಿಂದ ಅಳಗಪ್ಪ ಕಂಪೆನಿಯ ಪ್ರೊಜೆಕ್ಟ್ ಕೆಲಸ ನೀವು ನೋಡಿಕೊಳ್ಳುವುದು ಬೇಡ.ಏನು ಹೇಳ್ತಾ ಇದ್ದೀರಿ ಸರ್ ? ಬರೇ ಹತ್ತು- ಹದಿನೈದು ದಿನ ಅಷ್ಟೇ. ಅನಂತರ ಸಂಧರ್ಭ ನೋಡಿ ನಾನು  ಕ್ಲೈಂಟ್ ಹತ್ರ ಮಾತಾಡಿ ಈ ಸಮಸ್ಯೆಯನ್ನು ಬಗೆ ಹರಿಸುತ್ತೇನೆ. ಅಲ್ಲಿಯವರೆಗೆ ನೀವು ಅಲ್ಲಿಗೆ ಹೋಗುವುದು ಬೇಡ.


 ಆದರೂ ಸರ್  ನನ್ನ ಬದಲು ಹೋಗಲು ಬೇರೆ ಯಾರೂ ಇಲ್ಲವಲ್ಲ.


ಅದು ನನಗೆ ಬಿಡಿ“


ಕೆಲಸವೂ ಜೋರಾಗಿಯೇ ನಡೆಯುತ್ತಿದೆ, ಯಾರಾದರೂ ಬೇಕೇ ಬೇಕಲ್ಲ ಸರ್.


ಕಲ್ಲೂರಾಮ್ ಬಾಸ್ ನ ಮನಸ್ಸು ಬದಲಾಯಿಸೋ ಯತ್ನದಲ್ಲಿದ್ದಾರೆ.


‘ ತನ್ನ ಬಿಟ್ರೆ ಬೇರೆ ಗತೀಯೂ ಇಲ್ಲ ಬಾಸ್ ಗೆ.


‘ಯಾಕೆ.... ನಿಮ್ಮ ಬದಲು ತ್ಯಾಂಪ ಹೋಗ್ತಾರೆ.


ಗೊಳ್ಳನೆ ನಕ್ಕರು ಕಲ್ಲೂರಾಮ್,

ಸಾರ್ ನೀವು ಆ ಟರ್ನ್ ಕೀ ಪ್ರೋಜೆಕ್ಟ್ ಗೆ ಯಾರನ್ನ.... ತ್ಯಾಂಪನನ್ನು... ಅವರು ಪಕ್ಕೆ ಹಿಡಿದು ನಗಲಾರಂಭಿಸಿದರು.

ಅಲ್ಲ ತಮಾಷೆ ಮಾಡುತ್ತಿಲ್ಲವಲ್ಲ ಸರ್ ನೀವು.


ಆದರೆ ನಂಜುಡಪ್ಪ ನಗಲಿಲ್ಲ ಅವರು ಸೀರಿಯಸ್ ಆಗಿಯೇ ಹೇಳಿದರು.


ಹಾಗಾದರೆ ಕಲ್ಲೂರಾಮ್ ಈಗ ಹೇಳಿ ನೀವು ಪ್ರೊಜೆಕ್ಟ್ ನಡೆಸುತ್ತಿದ್ದು ಇವತ್ತಿಗೆ ಹದಿನಾಲ್ಕು ತಿಂಗಳಾಯ್ತು, ಅಲ್ಲಿನ ಎಲ್ಲಾ ವಿಷಯಗಳೂ ನಿಮಗೆ ಕರತಲಾಮಲಕ ಆಗಿರ ಬೇಕಿತ್ತಲ್ಲ..?


ಸರ್ ನಾನು.. ಹೌದು ಸರ್, ನಿಮಗೆ ಈ ಸಂಶಯ ಯಾಕೆ ಬಂತು... ಇನ್ನೂ ಕಲ್ಲೂರಾಮ್ ನಗು ನಿಂತಿರಲಿಲ್ಲ


"ಹಾಗಾದರೆ ಅಳಗಪ್ಪನವರ ಒಂದು ಪ್ರಶ್ನೆಗೂ ಉತ್ತರ ನಿಮ್ಮಿಂದ ಹೇಳಲಾಗಲಿಲ್ಲ ಏಕೆ?"


ಕಲ್ಲೂರಾಮ್ ನಗು ಒಮ್ಮೆಲೇ ನಿಂತಿತು.


"ಅಂದರೆ ಏನು ನಿಮ್ಮ ಮಾತಿನ ಅರ್ಥ ಸರ್..? ಅವರ ಪ್ರಶ್ನೆಗೆ ಉತ್ತರ ನಿಮ್ಮ ಬಳಿ ಇದ್ದಿದ್ದರೆ ನೀವು ಹೇಳಬಹುದಿತ್ತಲ್ಲ...."


ಅದರರ್ಥ, ತನ್ನ ಪ್ರೊಜೆಕ್ಟ್ ಅದು, ತಾನು ಹೇಳಲಾರೆ ಎಂದ ಮೇಲೆ ಬೇರೆ ಯಾರ ಬಳಿಯೂ ಅದಕ್ಕೆ ಉತ್ತರ ಇಲ್ಲ ಎಂದೇ .


ನಸು ನಕ್ಕರು ನಂಜುಂಡಪ್ಪ


ಕಲ್ಲೂರಾಮ್ ನೀವು ಇಷ್ಟು ಅನುಭವ ಇರುವವರು. ನಿಮ್ಮಿಂದ ನಾನು ಇಂತಹ ಉತ್ತರ ನಿರೀಕ್ಷಿಸಿರಲಿಲ್ಲ. ಒಬ್ಬ ಮನುಷ್ಯ ತಾನು ಕಲಿತ ವಿಷಯಗಳಲ್ಲಿ ಪಾಂಡಿತ್ಯ ತೋರಿಸುವದು ದೊಡ್ಡದೇನಲ್ಲ.  ಇಂದು ಎಷ್ಟೋ ಜನ ತಮ್ಮ ಅನುಭವ ದಿಂದಲೇ ತಮ್ಮ ಕಾರ್ಯ ಕ್ಷೇತ್ರದಿಂದ ಹೊರ ಬಂದು ಸಾಧನೆ ಮಾಡಿ ತೋರಿಸಿಲ್ಲ ಹೇಳಿ.  ಇಂತವರಿಗೆ ಬೇಕಿದ್ದುದು ಕೆಲಸ ಕಲಿಯಬೇಕೆಂಬ ಛಲ ತಾನು ಎಲ್ಲರೆದುರಿಗೆ ನಿಲ್ಲಬೇಕೆಂಬ ಛಲ ಮಾತ್ರ. ಎಷ್ಟು ಜನರು ತಾವು ಕಲಿತ ವಿಷಯದಲ್ಲಿಯೇ ಉದ್ಯೋಗ ದೊರಕಿಸಿಕೊಂಡಿದ್ದಾರೆ, ಅದರಲ್ಲೇ ಪ್ರಸಿದ್ಧಿಯಾಗಿದ್ದಾರೆ  ಹೇಳಿ. ನಿಮ್ಮ ಹಾಗೆ ಯೋಚಿಸುವದಾದರೆ ಯಾರೂ ತಮ್ಮ ಕಾರ್ಯ ಕ್ಷೇತ್ರ ಬಿಟ್ಟು ಬೇರೆ ಕಡೆ ಉನ್ನತ ಸ್ಥಾನವೇರಲಾರರು. ಅಥವಾ ಕಾಲೇಜು ಮೆಟ್ಟಲೂ ಹತ್ತದ ಯಾರೂ ಮುಂದೆ ಬಂದ ಉದಾರಣೆ ಸಿಗಲಿಕ್ಕೇ ಇಲ್ಲ. ನಮ್ಮ ಅಂಬಾನಿ, ಬಿಲ್ಲ್ ಗೇಟ್ಸ್ ಇವರೆಲ್ಲಾ ಕಲಿತೇ ಮುಂದೆ ಬಂದವರಲ್ಲ. ಆದರೆ ತಾವು ಏನನ್ನಾದರೂ ಮಾಡಲೇ ಬೇಕೆಂಬ ಆಕಾಂಕ್ಷೆ ಅವರನ್ನು ಬೆಟ್ಟದಷ್ಟೆತ್ತರಕ್ಕೇರಿಸಿತು. ನೆನಪಿರಲಿ.


‘ಅಂದರೆ ನಿಮ್ಮ ಮಾತಿನ ದಿಸೆ ಯಾವ ಕಡೆ ತಿರುಗುತ್ತಿದೆ ಅಂತ ನನಗೆ ತಿಳಿಯಿತು ಸರ್, ನಿಮ್ಮ ಪ್ರಕಾರ ನಮ್ಮ ತ್ಯಾಂಪನಿಂದ ಆ ಕೆಲಸ ಮಾಡಿಸಬಹುದು ಅನ್ನುತ್ತಿದ್ದೀರಾ  ಸಾರ್“ 


ಈಗಲೂ ಕಲ್ಲೂರಾಮ್ ಕಣ್ಣುಗಳಲ್ಲಿ ಅದೇ ಲೇವಡಿಕೆ.


‘ಸರಿ ನಾನೂ ಇದನ್ನ ಚಾಲೇಂಜ್ ಆಗಿಯೇ ತೆಗೆದುಕೊಳ್ತೇನ“ ನಂಜುಂಡಪ್ಪ ನುಡಿದರು.

‘ಇನ್ನು ಮೂರೇ ಮೂರು ದಿನಗಳಲ್ಲಿ ಅಳಗಪ್ಪ ಕೇಳಿದ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನಮ್ಮ ತ್ಯಾಂಪನಿಂದಲೇ ತರಿಸುತ್ತೇನೆ“


 ‘ಸರಿ ಸರ್ ನೋಡೋಣ, ಆದರೆ ನಾಳೆ ಏನಾದರೂ ಹೆಚ್ಚು ಕಡಿಮೆ ಆದರೆ ನಾನೇ ಬೇಕಾಗುತ್ತದೆ ನಿಮಗೆ ನೋಡಿಕೊಳ್ಳಿ.


ಕಲ್ಲೂರಾಮ್ ರ ಧಾರ್ಷ್ಟ್ಯ ನಂಜುಂಡಪ್ಪನವರಿಗೆ ಸ್ವಲ್ಪವೂ ಹಿಡಿಸಲಿಲ್ಲ. ಆದರೆ ಆ ಮಾತುಗಳಲ್ಲಿ ಹುದುಗಿದ್ದ ಸತ್ಯವೂ ಅವರ ಮನಸ್ಸಿಗೆ ಬಾರದೇ ಇದ್ದಿರಲಿಲ್ಲ.


***********


ಅಳಗಪ್ಪ ಕಂಪೆನಿಯ ಪ್ರೊಜೆಕ್ಟ್ ಸೈಟ್ಮುಖ್ಯ ಗುತ್ತಿಗೆದಾರನ   ಸೂಪರ್ವೈಸರ್ ಕಮ್ ಇಂಜೀನೀಯರ್ ಕಮ್ ಪ್ರೊಜೆಕ್ಟ್ ಮೆನೇಜರ್ ಜಂಗಮವಾಣಿ ಕರೆಯುಲಿಯಿತು.

ಹೇಳಿ ಸರ್  
ಇವತ್ತಿಂದ ನಾನು ಬರಲ್ಲ

ಯಾಕೆ ಸರ್  

ನನ್ನ ಬದಲು ಒಬ್ಬರು ಅಬಪೆ ಬರುತ್ತಿದ್ದಾರೆ

ಸರ್ ಮತ್ತೆ ನಮ್ಮ ಕೆಲಸದ ಕಥೆ,,?

ಬರೇ ನಾಲ್ಕಾರು ದಿನ ಅಷ್ಟರಲ್ಲಿ ನಮ್ಮ ಸಾಹೇಬರ ( ನಂಜುಂಡಪ್ಪನವರ) ಧಿಮಾಕು ಸರಿಯಾಗುತ್ತೆ ಬಿಡಪ್ಪಾ. ಆಮೇಲೆ ನಾನೇ ಬರುತ್ತೇನೆ.

ಬೇರೆ ಏನೂ ಸಮಸ್ಯೆ ಇಲ್ಲವಲ್ಲ ಸರ್
ಅಂದರೆ

ನಿಮ್ಮ ಬದಲು ಬಂದವರು ಅದು ತೋರಿಸಿ ಇದು, ಚೆಕ್ ಮಾಡ್ತೇನೆ ಅಂದರೆ..?

ಅರೇ ಬರುತ್ತಾ ಇರೋನು ಸಿವಿಲ್ ಇಂಜೀನೀಯರ್ ಗಂಧ ಗಾಳಿ ಕೂಡ ಇಲ್ಲದ ಮನುಷ್ಯ

 ಏನು ಹೆಸರು ಸಾರ್

 ತ್ಯಾಂಪ ಅಂತ

 ಅದೆಂತ ಹೆಸರು ಸಾರ್  

ಅವನ ಹೆಸರು ಮಾತ್ರ ಅಲ್ಲ ಅವನೂ ಹಾಗೇ ಇರ್ತಾನೆ ಬಿಡು


 ಅದು ಈಗಾಗಲೇ ಹೇಳಿದಿರಲ್ಲ ಸರ್, ಅದು ಬರೀ ಪೆದ್ದು ಅಂತ.



**************


ತನ್ನ ಸಾಹೇಬರ ಮೊಪೆಡ್ ಪಕ್ಕದಲ್ಲಿ ನಿಲ್ಲಿಸಿ ಗಾಡಿಯಿಂದಿಳಿದ ತ್ಯಾಂಪ.
ಎಲ್ಲಿಯೋ ತಪ್ಪಿ ಬಂದೆನಾ ಅಂದುಕೊಂಡ.
ಮೊನೆ ಮೊನ್ನೆ ದೊಡ್ಡ ಸಾಹೇಬರ ಜತೆ ಬಂದ ದಾರಿಯಲ್ಲ ಅನ್ನಿಸಿತು ಆತನಿಗೆ.

ಆರನೇ ನಂಬ್ರದ ಗಲ್ಲಿ ಮುಂದೆ ಹೋಗಿ ಕೊನೆಯಾದಂತಿತ್ತು.

ಯಾರನ್ನಾದರೂ ಕೇಳೋಣವೆಂದರೆ ಒಂದು ನರ ಹುಳುವೂ ಕಾಣ್ತಾ ಇಲ್ಲ ಆ ಗಲ್ಲೀಲಿ.

ಅವನಿಗೆ ಹೋಗಬೇಕಾದದ್ದು ೭ ಏ ಗಲ್ಲಿ ನೋಡಿಯೇ ಬಂದಿದ್ದೆ ತಾನು ಆರರ ನಂತ ರ ಏಳು ಬರಲೇ ಬೇಕಲ್ಲ, ಹಾಗಾದರೆ ಎಲ್ಲಿ ಹೋಯ್ತು?



೧೧. ಕಿವುಡರ ಕೂಟ


ದೂರದಲ್ಲೊಂದು ಮನೆ ಬಾಗಿಲು ತೆರೆದಿದ್ದದ್ದು ಕಣ್ಣಿಗೆ ಬಿತ್ತು. ಅಲ್ಲಿ ಯಾರನಾದರೂ ಕೇಳಿದರಾಯ್ತು ಅಂತೆಣಿಸಿ ಹೊರಟ. ಕೈಯಲ್ಲೊಂದು ವಾರ ಪತ್ರಿಕೆಯಿತ್ತು.

ಮನೆ ಬಾಗಿಲಿಗೆ ಬಂದು ಹಲ್ಲೋ ಯಾರಿದ್ದೀರಿ ಅಂತ ಕೇಳಿದ

ಉತ್ತರವಿಲ್ಲ

ಸ್ವಲ್ಪ ಕಾದು ಪುನಃ ಗಟ್ಟಿಯಾಗಿಯೇ ಕರೆದ

ಮುದುಕರೊಬ್ಬರು ಹೊರಬಂದರು

ಯಾರಪ್ಪಾ ನೀವು ಏನು ಬೇಕಾಗಿತ್ತು?

ತನ್ನ ಕೈಯ್ಯಲ್ಲಿದ್ದ ವಿಳಾಸದ ಚೀಟಿ ಅವರ ಮುಂದೆ ಹಿಡಿದ ತ್ಯಾಂಪ

ತ್ಯಾಂಪ ಕೊಟ್ಟ ವಿಳಾಸದ ಚೀಟಿ ತೆಗೆದುಕೊಂದು ನೋಡಿ ಮನೆಯ ಕಡೆ ಮುಖ ಮಾಡಿ "ಮಗೂ ನನ್ನ ಕನ್ನಡಕ ತಾರಮ್ಮಾ" ಅಂದರು.

ತ್ಯಾಂಪನ ಕೈಯ್ಯಲ್ಲಿದ್ದ ವಾರಪತ್ರಿಕೆಗೆ ಕೈ ಹಾಕಿ ತೆಗೆದುಕೊಂಡರು." ಹೊಸತಾ..?"

ಅವರ ಮಾತಿಗೆ

"ಹೌದು ಹೊಸತೇ" ಅಂದ ತ್ಯಾಂಪ. ಇಲ್ಲ ,ಕೇಳಿಸಿಕೊಂಡಂತಿಲ್ಲ.

ಹೌದು ಈ ವಾರದ್ದೇ ಅಂದ ಪುನಃ.

"ಇಲ್ಲ ಈಗ ಕಟ್ಟಿದ್ದಲ್ಲ, ಸುಮಾರು ನಾಲ್ಕೈದು ವರ್ಶ ಆಯ್ತು ಈ ಮನೆ ಕಟ್ಟಿ" ಮುದುಕರು ಪುಸ್ತಕ ನೋಡುತ್ತಲೇ ಉತ್ತರಿಸಿದರು.

"ಸರಿ ಸರಿ, ತಾತ, ಇಲ್ಲಿ ೭ ಏ ರಸ್ತೆ ಎಲ್ಲಿದೆ? ಹೇಳ್ತೀರಾ..??" ಕೇಳಿದ ತ್ಯಾಂಪ.

" ನನಗೆಲ್ಲಪ್ಪಾ ಏಳು ಗಂಟೆಯವರೆಗೆ ನಿದ್ದೆ, ಗಂಟೆ ಹೊಡೆದ ಹಾಗೆ ಬೆಳಿಗ್ಗೆ ನಾಲ್ಕೂವರೆಗೇ ಏಳ್ತೇನೆ" ಎಂದರು

ನಾನು ಕೇಳಿದ್ದೇನು ಈತ ಹೇಳುತ್ತಿರುವುದೇನು? ಎಂದುಕೊಂಡ ತ್ಯಾಂಪ.

"ಹೌದು ಇಲ್ಲಿ ಈಶ್ವರ ದೇವಸ್ಥಾನ ಎಲ್ಲಿದೆ..??"

"ದೋಸ್ತಾನಾ... ಹೌದು ಅದು ಅಮಿತಾಬ್ ಬಚ್ಚನ್ ಏನ್ ಚೆನ್ನಾಗಿ ನಟಿಸಿದ್ದಾನೆ ನಾನು ಹತ್ತು ಸಾರಿ ನೋಡಿದ್ದೆ ಈಗಿನದ್ದೆಲ್ಲಾ ಸಿನೇಮಾವಾ..?"..ಮುದುಕರ ಯೋಚನೆ ಎಲ್ಲೆಲ್ಲಾ ಹರಡಿದೆ ಅಂದುಕೊಂಡ ಮನದಲ್ಲಿ

ಇವರು ನಾನು ಹೇಳುವುದಕ್ಕೆಲ್ಲಾ ಪೆದಂಬು ಉತ್ತರ ನೀಡುತ್ತಿದ್ದಾರಲ್ಲ, ಓದಲು ಆಗುವುದಾದರೆ ಮತ್ತೆ ಕನ್ನಡಕ ತರಲು ಹೇಳಿದ್ದು ಯಾರಿಗೆ ಅಂತಂದುಕೊಂಡ ತ್ಯಾಂಪ.

ಆಗೊಮ್ಮೆ ಈಗೊಮ್ಮೆ ದೂರದಿಂದ ಗಾಡಿಯ ಪಾಮ್ ಪಾಮ್ ಪೀಂ ಪೀಂ ಬಿಟ್ಟರೆ ಬೇರೆ ಏನೂ ಶಬ್ದ ವಿಲ್ಲ, ಮುದುಕರು ವಾರಪತ್ರಿಕೆಯ ಎರಡನೇ ಪೇಜಿನಲ್ಲಿದ್ದರೊ. ಒಂದು ಕ್ಷಣ ಒಮ್ಮೆಲೇ ತ್ಯಾಂಪನಿಗೆ ಅದೇಕೋ ಯಮ ಬೋರು ಬಂದು ಬಿಟ್ಟಿತು.

ಆಗಲೇ ಕೋಗಿಲೆಯ ಸ್ವರ

ತಾತಾ ಚಟ್ನಿ ಯಾಕೆ ಕೇಳಿದಿರಿ?

"ಅಮ್ಮ ನನ್ನ ಕನ್ನಡಕ ತಾ ಅಂದೆನಲ್ಲ, ಇದರಲ್ಲಿ ವೈನತೇಯ ತುಂಬಾ ಚೆನ್ನಾಗಿ ಬರೀತಾರೆ ಓದ್ತೀನಿ, ತಂದು ಕೊಡಮ್ಮಾ" ಅಂದರು ತಾತಯ್ಯ ಪುನಃ

"ಚಟ್ನಿ ಮಾಡಿಲ್ಲವಲ್ಲ ತಾತ" ಅಂತು ಗಿಳಿ ಅಲ್ಲಲ್ಲ ಕೋಗಿಲೆ.

ತ್ಯಾಂಪನಿಗೆ ಅಯೋಮಯ.

ತ್ಯಾಂಪ ಆದರೂ ಕೋಗಿಲೆಯಲ್ಲೇ ಕೇಳಿದ

" ರೀ, ಇಲ್ಲಿ ಏಳನೆಯ ಅಡ್ಡ ರಸ್ತೆ ಎಲ್ಲಿದೆ?".

ಒಮ್ಮೆಲೇ ನಾಚಿತು ಕೋಗಿಲೆ,

"ಇಲ್ಲ ಇಲ್ಲ ನಾನು ಐದರಿಂದ ಮುಂದೆ ಕಲಿಯಲೇ ಇಲ್ಲ."

"ಅಲ್ಲಲ್ಲ, ಏಳನೆಯ ಅಡ್ಡ ರಸ್ತೆ....??" ತ್ಯಾಂಪನ ಮಾತು ಇನ್ನೂ ಮುಗಿದಿರಲಿಲ್ಲ

ನಾಚಿಕೆಯಿಂದ ಕೋಗಿಲೆ ತಡಬಡಾಯಿಸಿ ಹತ್ತಿರದ ಖುರ್ಚಿಯನ್ನೆಡವಿ ತ್ಯಾಂಪನ ಮೇಲೆಯೇ ಬಿತ್ತು.

"ನಿನಗೆ ತಲೆ ಸರಿ ಇದೆಯಾ, ಬೆಳಿಗ್ಗೆ ಬೆಳಿಗ್ಗೆ ಕಂಡ ಕಂಡವರಿಗೆ ಪ್ರಣಾಮ ಮಾಡ್ತಾ ಇದ್ದೀಯಾ,..??"ದನಿಬಂದ ಕಡೆ ತಿರುಗಿದ ತ್ಯಾಂಪ, ಪ್ರಾಯಶಃ ಈ ಕೋಗಿಲೆಯ ಅಮ್ಮ ಇರಬೇಕು, ಸದ್ಯ ಇವರಾದರೂ ತಿಳಿಸಿಯಾರು...

" ಅಮ್ಮ ,ಇಲ್ಲಿ ಈಶ್ವರ ದೇವಸ್ಥಾನ ಎಲ್ಲಿದೆ, ೭ ಏ ರಸ್ತೆ ಅದರ ಪಕ್ಕವೇ ಅಲ್ವಾ ಇರೋದು...??"

"ಅದೆಲ್ಲಾ ಸರಿ ಅಯ್ಯ, ನಿನ್ನ ಹೆಸರು ಯಶ್ ಆಗಲೀ ಇನ್ನೇನೋ ಆಗಲಿ ಹೀಗೆ ಕಂಡ ಹುಡುಗಿಯರ ಹಿಂದೆ ತಿರುಗುವುದು ನ್ಯಾಯವೇ ಹೇಳು?"

ತ್ಯಾಂಪ ಬೆಚ್ಚಿದ, ತಾನು ಈ ಹುಡುಗಿಯ ಹಿಂದೆ ಬಿದ್ದೆನಾ..? ಅವಳೆ ನನ್ನ ಮೇಲೆ ಬಿದ್ದದ್ದಲ್ವಾ..?ನಾನೇನು ಕೇಳಿದ್ದೂ ಇವರು ಏನು ಹೇಳೋದು?

"ಅಲ್ಲಮ್ಮಾ, ಅದೂ... ನನ್ನ ಬಿಗ್ ಬಾಸ್ ವಿಳಾಸದ ಚೀಟಿ.. ಈ ತಾತಯ್ಯಾ..., ಈಶ್ವರ ದೇವಸ್ಥಾನ... ರಸ್ತೆ..." ತ್ಯಾಂಪನ ಮಾತು ಅಲ್ಲಿಯೇ ತುಂಡರಿಸಿತು. ಗಿಳಿಯ ಅಲ್ಲಲ್ಲ ಕೋಗಿಲೆಯ ಅಮ್ಮ.

"ದಯವಿಟ್ಟು ನಮ್ಮನ್ನು ನಮ್ಮ ಪಾಡಿಗೆ ಬಿಡಿ, ನಾನೀಗಲೇ ಇವಳ ಮದುವೆ ಮಾಡಲಾರೆ.. ನೀವು ಯಾರೇ ಆಗಲಿ" ನಿಜವಾಗಿಯೂ ದೈನ್ಯತೆ ಕಾಣುತ್ತಿತ್ತು ತಾಯಿಯ ಕಣ್ಣುಗಳಲ್ಲಿ

ತ್ಯಾಂಪ ದಿಗ್ಭ್ರಮೆಗೊಂಡು ಈ ಕಡೆ ತಿರುಗಿದ. ಇದು ಯಾವುದರ ಪರಿವೆಯೇ ಇಲ್ಲದೇ ಮುದುಕ ತದೇಕ ಚಿತ್ತದಿಂದ ತ್ಯಾಂಪನ ವಾರಪತ್ರಿಕೆ ಓದುತ್ತಿತ್ತು, ಈಗಂತು ಕನ್ನಡಕ ತರಲು ಹೇಳಿದುದನ್ನೂ ಮರೆತು. ನಾನೊಂದು ಕೇಳಿದರೆ ಇನ್ನೊಂದು ಉತ್ತರ ಕೊಡುವ ಅಮ್ಮ ಮಗಳು, ಕನ್ನಡಕ ತಾ ಅಂತ ಹೇಳಿ ಅದನ್ನೂ ಮರೆತು ಕನ್ನಡಕವೇ ಇಲ್ಲದೇ ತದೇಕ ಚಿತ್ತದಿಂದ ನನ್ನ ವಾರಪತ್ರಿಗೆ ಓದುತ್ತಿರುವ ಈ ಮುದುಕರು.....ಎಲ್ಲಿ ಸಿಕ್ಕಿ ಹಾಕಿಕೊಂಡೆ.. ನಾನು.

ಆಗಲೇ ಆತನಿಗೆ ಹೊಳೆದು ಬಿಟ್ಟಿತು. ಎಲ್ಲರೂ ಕಿವುಡರೇ ಇಲ್ಲಿ.

ಮುದುಕರ ಕೈಯ್ಯಿಂದ ಆ ವಿಳಾಸ ದ ಚೀಟಿಯನ್ನಾದರೂ ತೆಗೆದುಕೊಳ್ಳೋಣ ಅಂತೆಣಿಸಿ ಅವರ ಕೈಯ್ಯಲ್ಲಿ ಸಿಕ್ಕಿಸಿಕೊಂಡಿದ್ದ ಆ ಚೀಟಿಯನ್ನು ನಿಧಾನವಾಗಿ ಹಿಡಿದು ಎಳೆದ, ಅದೇನಾಯ್ತೋ, ಚೀಟೀ ಮಾತ್ರ ಅರ್ದಕ್ಕೇ ಹರಿದು ಬಿಟ್ಟಿತು.

ಉಳಿದ ಚೀಟಿ ಬೀಸಿ ಬಂದ ಗಾಳಿಯಲ್ಲಿ ಹಾರಿಯೇ ಹೋಯ್ತು.ಗೋವಿಂದ!!!ಅದು ಸಾಹೇಬರ ಮನೆಯ ವಿಳಾಸ ಬರೆದ ಚೀಟಿ.

ಇನ್ನೂ ಸ್ವಲ್ಪ ಸಂಶಯ ಬಂದು ಬಂದಿದ್ದ ಕಡೆ ತಿರುಗಿದ ತ್ಯಾಂಪ

ಗಾಭರಿ ಅಚ್ಚರಿಯಿಂದ ಅವಾಕಾಗಿ ನಿಂತ

ಆತ ಚಲಾಯಿಸಿಕೊಂಡು ಬಂದ ಗಾಡಿಎಲ್ಲಿದೆ,

ಅದು ಅವನಿಟ್ಟ ಸ್ಥಳದಲ್ಲಿಲ್ಲ!!!!

ಎಲ್ಲಿ ಹೋಯ್ತು ತನ್ನ ಗಾಡಿ!!!

ತನ್ನ ದಾ ಅದು, ಅಲ್ಲಲ್ಲ ಆ ಕಲ್ಲೂರಾಮ್ ನದ್ದು

ಅದಿಲ್ಲದೇ ವಾಪಾಸ್ಸು ಒಮ್ಮೆ ಹೋದರೂ ಆತ ತನ್ನನ್ನು ಕೊಂದು ಹಾಕಿಯಾನುಮೊದಲೇ ನನ್ನ ಮೇಲೆ ಸಿಟ್ಟಿದೆ, ಆತನ ಪ್ರಕಾರ ಸೈಟಿನಲ್ಲಾದ ಘಟನೆಗೂ ಪಾರ್ಟಿಗೆ ಕಲ್ಲೂರಾಮ್ ಬರುವುದು ತಪ್ಪಿ ಹೋದುದಕ್ಕೂ ತಾನೇ ಕಾರಣ

ಆಗಲೇ ಮೋಟರ್ ಬೈಕಿನಲ್ಲಿ ಒಬ್ಬ ಅದೇ ದಾರಿಯಾಗಿ ಬಂದ.

ತ್ಯಾಂಪ ಈ ದಾರಿಹೋಕ ಆಪತ್ಬಾಂಧವನಲ್ಲಿ ಕೇಳಿಕೊಂಡ...

ಇವರನ್ನೆಲ್ಲಾ ಅವರು ಇದ್ದ ಸ್ಥಿತಿಯಲ್ಲೇ ಬಿಟ್ಟು ತಾನು ಹೇಳಿದ್ದನ್ನು ಸರಿಯಾಗಿ ಕೇಳಿಸಿಕೊಂಡನೋ ಇಲ್ಲವೋ ಅಂತ ಕೂಡಾ ನೋಡದೇ ಅವನ ಹಿಂಗಡೆ ಕೂತ ತ್ಯಾಂಪ.

ಇದೆಲ್ಲಾ ಕಾಕತಾಳೀಯವೇ ಅಥವಾ ಬೇಕೆಂತಲೇ ಆದದ್ದೇ?

ಬರ್ರ ಬರ್ರ್ರ್ರ್ರ್ರ್ರ್ರ್ ಅಂತ ಹೊರಟ ಗಾಡಿ ಅದೇಕೋ ೨-೩ ಕಿ ಮೀ ಸಾಗಿ ನಿಂತು ಬಿಟ್ಟಿತು, ಅಪರಿತ ವೃತ್ತದಲ್ಲಿ.ತಾನು ಏನು ಹೇಳಿದ್ದೇನೋ ಆತ ಏನು ಕೇಳಿಸಿಕೊಂಡನೋ ಒಂದೂ ಗೊತ್ತಾಗದೇ ... ಇಲ್ಲಿ ನಿಲ್ಲಿಸಿ ಹಿಂದೆ ತಿರುಗಿಸಹಾ ನೋಡದೇ ಹೊರಟೇ ಹೋದ. ತಾನು ಇಳಿದದ್ದು ಗಡಿಬಿಡಿಯಲ್ಲಿ ಆತನಿಗೆ ಗೊತ್ತಾಗಲಿಲ್ಲವಾ, ಅಥವಾ ತಾನೇ ದುಡುಕಿದೆನಾ..?

ಯಾರೋ ಕಾಣಿಸಿಕೊಂಡದ್ದೂ ತನ್ನನ್ನು ಈ ಸರ್ಕಲ್ ನಲ್ಲಿ ಬಿಟ್ಟು ಹೋದದ್ದೂ..?? ಎಲ್ಲಾ ಅಯೋಮಯ, ತನಗೆ ಮಾತ್ರ ಹೀಗಾಗುತ್ತಿದೆ.

ಏನೂ ತೋಚದೇ ತ್ಯಾಂಪ ಗಟ್ಟಿಯಾಗಿ ನಗತೊಡಗಿದ.



೧೧. ಪಾಠ

ಮನುಷ್ಯ ಹುಟ್ಟಿನಿಂದಯಾವುದನ್ನೂ ಕಲಿತು ಬಂದಿರುವುದಿಲ್ಲ.ಮಗು ಹುಟ್ಟುತ್ತಲೇ ಕಲಿಯುವುದು ಹಾಲು ಕುಡಿಯಲು, ನಾಲ್ಕೈದು ತಿಂಗಳವರೆಗೆ ಮಲಗಿದಲ್ಲಿಯೇ ಎಲ್ಲವನ್ನೂ ಗ್ರಹಣ ಮಾಡುವ ಮಗು ತನ್ನ ಪರಿಸರವನ್ನು ನೋಡುತ್ತಾ ಕಲಿತುಕೊಳ್ಳುತ್ತದೆ. ಮಲಗಿದ್ದಲ್ಲಿಯೇ ಎಲ್ಲವನ್ನೂ ಸೆಳೆದುಕೊಳ್ಳುವ ಅಥವಾ ತನ್ನ ಬಳಿ ಎಲ್ಲಾ ಅಗತ್ಯಗಳನ್ನೂ ಭರಿಸುವ ಶಕ್ತಿ ಇರೋದು ಈ ಪ್ರಪಂಚದಲ್ಲಿ ಮಗುವಿಗೆ ಮಾತ್ರ. ನಿಧಾನವಾಗಿ ಗ್ರಹಿಸುತ್ತಾ ಪರಿಸರವನ್ನು ಅಧ್ಯಯನ ಮಾಡುತ್ತದೆ ಜತೆಗೆ ಇಡೀ ಜಗತ್ತನ್ನು . ಅದಕ್ಕೆ ಎಲ್ಲವೂ ಹೊಸತೇ. ಪ್ರತಿ ವಸ್ತುವನ್ನು ಗ್ರಹಿಸುತ್ತದೆ ಅರ್ಥ ಮಾಡಿಕೊಳ್ಳುತ್ತದೆ. ಮೊದಲು ಕಣ್ಣು ನಾಲಗೆ, ಕೈ ಕಾಲು ಎಲ್ಲವೂ ಚಟುವಟಿಕೆಗಳಿಂದ ಕಲಿಯುತ್ತದೆ ಮಗು. ನೀವೇ ಯೋಚನೆ ಮಾಡಿ, ನಮಗಿಂತ ವೇಗವಾಗಿ ಕಲಿಯುತ್ತದೆ. ಅದರ ಗ್ರಹಣ ಶಕ್ತಿ ಮತ್ತು ನೆನಪಿಟ್ಟುಕೊಳ್ಳುವ ಶಕ್ತಿಯನ್ನು ಗಮನಿಸಿ. ನಿರಂತರ ಕಲಿಕೆ ಗ್ರಾಹ್ಯ ಮತ್ತು ಬೆಳವಣಿಗೆ ಎಲ್ಲವೂ ಮಕ್ಕಳಲ್ಲಿದೆ.

ಆದರೆ ಸ್ವಲ್ಪ ದೊಡ್ಡವರಾಗುತ್ತಲೇ ಆ ಗ್ರಾಹ್ಯ ಶಕ್ತಿಗೆ ಬೇಲಿ ಹಾಕಿಕೊಳ್ಳುತ್ತೇವೆ, ಯಾರೋ ಎಪ್ಪತ್ತನೆ ವಯಸ್ಸಿನಲ್ಲಿ ಅಧ್ಯಯನ ಮಾಡಿದರೆ ಪರಿಕ್ಷೆಗೆ ಕುಳಿತರೆ ಬಹು ಭಾಷಾ ವಿಷಾರದರಾದರೆ ನಮಗೆ ಅಚ್ಚರಿ, ಆದರೆ ಆ ಬಹುಮುಖ ಗ್ರಹಿಕಾ ಸಾಮರ್ಥ್ಯ ನಮ್ಮಲ್ಲಿದ್ದುದೇ ಮರೆಯುತ್ತೇವೆ. ಆದುದರಿಂದ ಮನುಷ್ಯನ ಜೀವನದಲ್ಲಿ ಕಲಿಕೆ ನಿರಂತರ ಅನಿವಾರ್ಯ. ದೊಡ್ಡವರಾದ ನಾವು ಹೊಸ ಕಂಪ್ಯೂಟರ್, ಜಂಗಮವಾಣಿ ತಂದರೆ ಅದನ್ನ ಮೊದಲು "ಶ್ರೀ ಗಣೇಶ" ಮಾಡುವುದು ಯಾರು? ನಮ್ಮ ಮನೆಯಲ್ಲಿನ ಮಕ್ಕಳು, ನಾವು ನಮಗೆ ಅನಿವಾರ್ಯ ಅನ್ನುವುದನ್ನು ಮಾತ್ರ ಕಲಿಯುವ ಕೀಳರಿಮೆಯನ್ನು ಬೆಳೆಸಿಕೊಂಡಿದ್ದೇವಲ್ಲ. ಅಂದರೆ ಇಷ್ಟೇಲ್ಲಾ ಮಾತಿನ ಮುಖ್ಯ ಉದ್ದೇಶ ಮತ್ತು ನೀತಿಯೆಂದರೆ ನಾವು ನಮಗೆ ಅಗತ್ಯ ಬೇಕಿದ್ದಲ್ಲಿ ಮಾತ್ರ - ಅನಿವಾರ್ಯವೆನ್ನಿಸಿದರೆ ಮಾತ್ರ- ಕಲಿಯುತ್ತೇವೆ ಎಂತಾಯ್ತು.

ಇನ್ನು ಅಲ್ಲಿ ಇಲ್ಲಿ ವರ್ತಮಾನ ಪತ್ರಿಕೆಗಳಲ್ಲಿ, ವಾರ್ತಾ ಚಾನಲ್ಲಿನಲ್ಲಿ ಓದಿರಬಹುದು, ಕೇಳಿ, ನೋಡಿರಬಹುದು . ಕೈ ಪಂಪ್ನಿಂದ (ಹ್ಯಾಂಡ್ ಪಂಪ್) ನೀರೆಳೆದು ಕುಡಿಯುವ ಪ್ರಾಣಿಗಳನ್ನು( ದನ, ಮಂಗಗಳನ್ನು) , ನಾವು ಚಿಕ್ಕಂದಿನಲ್ಲಿ ಹೂಜಿಗೆ ಕಲ್ಲುಗಳನ್ನು ತುಂಬಿಸಿ ನೀರು ಕುಡಿದ ಕಾಗೆಯ ಕಥೆ ಕೇಳಿಯೇ ಬೆಳೆದೆವು ಆದರೆ ಈ ಪ್ರಾಣಿಗಳು..???. ಅಂದರೆ ಅನಿವಾರ್ಯ ಮತ್ತು ಕಲಿಕೆಯ ಸಶಕ್ತ ಉದಾಹರಣೆಗಳಿವು. ಪ್ರಾಣಿಗಳೇ ಇಷೊಂದು ಮುಂದುವರಿದಿರುವಾಗ, ಮಿದುಳು ಕೈ ಕಾಲುಗಳಿದ್ದ ನಾವು ಎಷ್ಟು ಮುಂದುವರಿಯಬೇಡ..??

ನಂಜುಂಡಪ್ಪನವರ ಪಾಠ ಅವ್ಯಾಹತವಾಗಿ ಸಾಗಿತ್ತು.

ತ್ಯಾಂಪ ಏನು ಯೋಚಿಸುತ್ತಿದ್ದೀರಾ..?

ಸಾರ್ ಕೆಲವು ನೀರಿನ ಫಿಲ್ಟರ್ ನಲ್ಲಿಯೂ ಕಲ್ಲುಗಳಿದ್ದಾವೆ,

ಅಂತಹ ಯೋಚನೆಯಿಂದ ಹೊರ ಬನ್ನಿ ತ್ಯಾಂಪ

ಸರಿಯಾಗಿ ಕೇಳಿಸಿಕೊಳ್ಳಿ, ನನ್ನ ಮರ್ಯಾದೆ ನಿಮ್ಮ ಕೈಯ್ಯಲ್ಲಿದೆ. ನೀವು ನಿಷ್ಪ್ರಯೋಜಕರೆಂಬ ಕಲ್ಲೂರಾಮ್ ನವರ ಮಾತನ್ನು ಅಲ್ಲಗಳೆಯುವದಕ್ಕೆ ನಿಮಗೊಂದು ಸದವಕಾಶ ಸಿಕ್ಕಿದೆ ತ್ಯಾಂಪ. ನಿಮ್ಮನ್ನು ಅಂತಹಾ ದೊಡ್ಡ ಕಂಪೆನಿಯ ಅಳಗಪ್ಪ ಸೆಲೆಕ್ಟ್ ಮಾಡಿದ್ದಾರೆ ಅಂದರೆ ನಿಮ್ಮಲ್ಲಿ ಅಂತಹದ್ದೇನೋ ಅವರು ನೋಡಿದ್ದಾರೆ ಅಂತ ಅರ್ಥ. ಅಲ್ಲದೇ ಅವರು ಅಂತಹ ದೊಡ್ಡ ಹುದ್ದೆಯಲ್ಲಿದ್ದಾರೆಂದರೆ ಅಷ್ಟು ಸುಲಭವಾಗಿ ಬೇಸ್ತು ಬೀಳುವ ನಿರ್ಧಾರ ತಗೊಳ್ಳುವದಿಲ್ಲ ಅಂತ ಅರ್ಥ. ಅದಕ್ಕಾಗಿ ತ್ಯಾಂಪ ನೀವು ನಿಮ್ಮೊಳಗಿನ ನಿಜವಾದ "ಮಾನವ"ನನ್ನು ಹೊರತರಬೇಕೀಗ.

ತ್ಯಾಂಪ ತಾನು ಧರಿಸಿದ್ದ ಜಾಕೆಟ್ ಕಳಚಿದ.

ತ್ಯಾಂಪ ನನ್ನ ಮಾತುಗಳನ್ನು ಸರಿಯಾಗಿ ಕೇಳಿಸಿಕೊಳ್ಳುತ್ತಿದ್ದೀರಲ್ಲ

ಹೌದು ಸರ್

ನಮ್ಮಲ್ಲಿ ಕಾರಿದೆ, ಕಂಪ್ಯೂಟರ್ ಇದೆ ಆದರೆ ಅದರ ಮೆಕೇನಿಸಮ್ ನಮಗೆ ಗೊತ್ತಿದೆಯಾ,,?? ಇಲ್ಲ ಅದರ ಅಗತ್ಯವೂ ಇಲ್ಲ, ಮೆಕೇನಿಕ್ ವಾಹನಗಳನ್ನು ಯಂತ್ರಗಳನ್ನು ಚೆನ್ನಾಗಿ ರಿಪೇರಿ ಮಾಡಬಲ್ಲ. ಆದರೆ ಆತ ಆ ವಾಹನದ ಅಥವಾ ಆ ಯಂತ್ರದ ಮಾಲೀಕನಾಗಿರಬೇಕೆಂದೇನಿಲ್ಲವಲ್ಲ..? ನಮಗೆ ಕಾರು ರಿಪೇರಿಯನ್ನು ಅಥವಾ ಕಂಪ್ಯೂಟರ್ ರಿಪೇರಿ ಕಲಿಯಬೇಕೆಂತೇನಿಲ್ಲ.. ಅಂದರೆ ಇವುಗಳನ್ನು ನಾವು ಚಲಾಯಿಸಲು ಕಲಿತರೆ ಸಾಕು ಅಲ್ಲವೇ..? ಎಲ್ಲಿ ಮೊದಲೇ ಶುರುವಾದ ಕೆಲಸವನ್ನು ನೋಡಿರುತ್ತೇವೋ ಅಲ್ಲಿಯವರೆಗೆ, ಯಾವುದೇ ಅಂತಹ ಕೆಲಸವನ್ನೂ ನಾವು ಮೊದಲಿಂದ ಶುರು ಮಾಡಬೇಕೆಂದಿಲ್ಲ,

ಅರ್ಥವಾಯ್ತಾ ತ್ಯಾಂಪಾ ಅವರೇ

ಆಯ್ತು ಸರ್, ಈಗ ಈ ಪ್ರೊಜೆಕ್ಟ್ ನನ್ನದೆಣಿಸಿಕೊಂಡರೆ ಅದರಲ್ಲಿ ನಡೆಯುವ ಪ್ರತಿಯೊಂದೂ ಚಟುವಟಿಕೆಗಳು ನನಗೇ ಗೊತ್ತಿರಬೇಕೆಂದೇನಿಲ್ಲ, ಅಥವಾ ನಾನು ಅದನ್ನು ನನ್ನ ಕಣ್ಣೆದುರಿಗೇ ಮಾಡಿಸಬೇಕೆಂದೇನಿಲ್ಲ. ಅದನ್ನು ಮುನ್ನಡೆಸುವದನ್ನು ಕಲಿತರೆ ಸಾಕು.

ಶಾಭಾಶ್!! ತ್ಯಾಂಪ ನೀವು ಕಲಿತದ್ದು ನಿರ್ವಹಣೆಯ ಮುಖ್ಯ ಭಾಗ ಅಥವಾ ತಿರುಳು, ನಂಜುಂಡಪ್ಪನವರಿಗೆ ತ್ಯಾಂಪನ ಈ ಕಲಿಕೆ ಅವರ ಜೀವನದ ಮೊದಲ ಮಹತ್ವದ ಮೈಲುಗಲ್ಲು ಈ ದಿಸೆಯಲ್ಲಿ.

ಆದರೆ ಸಾರ್, ಅಷ್ಟು ದೊಡ್ಡ ಪ್ರೊಜೆಕ್ಟ್ ನಲ್ಲಿ ಎಷ್ಟೊಂದು ಚಟುವಟಿಕೆಗಳು ನಡೆಯುತ್ತಿವೆ, ನನ್ನನ್ನು ಯಾರಾದರೂ ಯಾವುದಾದರೂ ಚಟುವಟಿಕೆಯ ಬಗ್ಗೆ ಏನು ಮಾಡಬೇಕು ಹೇಗೆ ಮಾಡಬೇಕುಅಂತ ಕೇಳಿದರೆ..? ನನಗೆ ಈ ಇಂಜಿನಿಯರ್ ವಿಷಯದ ಗಂಧ ಗಾಳಿಯೂ ಇಲ್ಲ.

ಮತ್ತೆ ಹಿಂದಕ್ಕೆ ಹೋದಿರಿ ತ್ಯಾಂಪ ನಿಮ್ಮ ಒಳಗಿನವನನ್ನು ಹೊರ ತನ್ನಿ. ಈ ಪ್ರೊಜೆಕ್ಟ್ ನಲ್ಲಿ ನಿಮ್ಮ ಕೆಲಸ ಮೇಲುಸ್ತುವಾರಿ ಮಾತ್ರ, ಅಂದರೆ ನೀವು ಎಲ್ಲವನ್ನೂ ಕೈಯ್ಯಿಂದ ಮಾಡುವವರಲ್ಲ. ಅದಕ್ಕೆಂದೇ ತಾನೇ ನಾವು ಎಲ್ಲಾ ಬೆಸ್ಟ್ ಹೆಕ್ಕಿ ತಂದದ್ದು ಈ ಪ್ರೊಜೆಕ್ಟ ಗಾಗಿ?. ಉತ್ತಮ ಶಿಲ್ಪಿ, ಕನ್ಸಲ್ಟೆಂಟ್, ಗುತ್ತಿಗೆದಾರ ಇತ್ಯಾದಿ, ನೀವೇ ಎಲ್ಲಾ ನೋಡಿಕೊಂಡರೆ ಅವರ ಕೆಲ್ಸ ವೇನು ಹೇಳಿ.

ಇನ್ನೊಂದು ವಿಷಯ ಈ ಕೆಲಸಕ್ಕೆ ಕಲ್ಲೂರಾಮ್ ಎಷ್ಟು ದಿನ ಬರ್ತಾರೆ ವಾರದಲ್ಲಿ?

ಎರಡು ಅಥವಾ ಮೂರು ಬಾರಿ

ಹಾಗಿದ್ದರೆ ಬಾಕಿ ದಿನಗಳಲ್ಲಿ ಕೆಲಸ ನಡೆಯುತ್ತದಲ್ಲ ಹೇಗೆ?

ಗೊತ್ತಿಲ್ಲ ಸರ್..!!!

ನಮ್ಮ ಯಾವುದೇ ಪ್ರೋಜೆಕ್ಟ ನಲ್ಲಿ ಮೂರು ಮುಖ್ಯ ಅಂಗಗಳಿವೆ. ಒಂದು ಡ್ರಾಯಿಂಗ್ಸ್ ಅಥವಾ ನಕ್ಷೆ, ಇದರ ಜವಾಬ್ದಾರಿ ಆರ್ಕಿಟೆಕ್ಟ್ ನದ್ದು. ಎರಡನೆಯದು ಗುತ್ತಿಗೆದಾರನ ಜತೆಗಿನ ನಮ್ಮ ಒಡಂಬಡಿಕೆ (ಅಗ್ರಿಮೆಂಟ್) ಇದರಂತೆ ಎಲ್ಲಾ ಚಟುವಟಿಕೆಗಳ ಜವಾಬ್ದಾರಿ ಗುತ್ತಿಗೆದಾರನದ್ದು. ಮೂರನೆಯದ್ದು ಈ ಎಲ್ಲಾ ಚಟುವಟಿಕೆಗಳನ್ನೂ ನಕ್ಷೆಗಳಲ್ಲಿದ್ದಂತೆ ನಡೆಸಲು ಬೇಕಾದ ವಸ್ತುಗಳ ಗುಣ ಮಟ್ಟ ಕಾಯ್ದುಕೊಳ್ಳಲು ಬೇಕಾದ ವಿವರ. ಇವುಗಳ ಜವಾಬ್ದಾರಿ ನಮ್ಮ ಕನ್ಸಲ್ಟೆಂಟ್ ನದ್ದು. ಈ ಮೂವರ ಅಥ್ವಾ ಮೂರರ ಮೇಲೆಯೇ ನಮ್ಮ ಪ್ರೊಜೆಕ್ಟನ ತಳಹದಿ. ಇದರಿಂದ ಹೊರಗೆ ಏನೂ ಇಲ್ಲ.

ಇವನ್ನು ಸರಿಯಾಗಿ ನೋಡಿಕೊಳ್ಳಲು ನಮಗೆ ಕೆಲವೊಂದು ಆಯುಧಗಳಿವೆ. ಎಲ್ಲಾ ಉಪಯೋಗಿಸುವ ವಸ್ತುಗಳಗುಣಮಟ್ಟ ಕಾಯ್ದುಕೊಳ್ಳಲು ಅವುಗಳನ್ನು ಪರೀಕ್ಷೆ ಮಾಡಲಾಗುತ್ತದೆ, ಎಲ್ಲಾ ಪ್ರೊಜೆಕ್ಟ್ ಗಳಲ್ಲಿಯೂ ಇದನ್ನ ಮೊದಲೇ ತಯಾರಿ ಮಾಡಿ ಇಟ್ಟಿರುತ್ತಾರೆ ಯಾವ್ಯಾವಾಗ ಎಷ್ಟು ಪರೀಕ್ಷೆಗಳ ಅಗತ್ಯತೆ ಇತ್ಯಾದಿ.ಇನ್ನು ದೈನಂದಿನ ಕೆಲಸ ಕಾರ್ಯಗಳ ಕಾರ್ಮಿಕರ ವಿವರ ದೈನಂದಿನಿಯಲ್ಲಿ ಸಿಗುತ್ತದೆ. ಅದನ್ನ ಓದಿಕೊಂಡರೆ ಸಾಕು.

ನಿನಗೆ ಗೊತ್ತಾದದ್ದು ಹೇಗೆ ಆ ಕಿವುಡರ ಕೂಟದ ಬಗ್ಗೆ, ಪ್ರಶ್ನೆ ಕೇಳಿ ಅಲ್ಲವೇ ಹಾಗೆಯೇ ಇದೂ, ನಿಮಗರ್ಥವಾಗದ್ದು ಸಂಶಯ ಬಂದದ್ದು ಎಲ್ಲವೂ ಕೇಳುತ್ತಾ ಇರಿ ಅದನ್ನೇ ಕಲಿಯಿರಿ ನಿನ್ನೆ ಆದದ್ದು ನೋಡಿ ಇವತ್ತು ಕಾರ್ಯ ನಡೆಸಿ ಇವತ್ತಿಂದು ನೋಡಿ ನಾಳೆ ಆದರೆ ಎಲ್ಲವೂ ಮೇಲಿನ ಮೂರರ ಅಧಿಪತ್ಯದಲ್ಲಿ. ಗುತ್ತಿಗೆದಾರನ ಪ್ರತೀ ಕಾರ್ಯವೂ ಒಂದೋ ಆ ನಕ್ಷೆಗಳಲ್ಲಿರಬೇಕು ಅಥವಾ ವಿವರ ಒಡಂಬಡಿಕೆಯಲ್ಲಿ ಅಥವಾ ವಸ್ತು ವಿವರದಲ್ಲಿ, ಗೊತ್ತಾಗದ ವಿಷಯವಿದ್ದರೆ ನನಗೆ ಕೂಡಲೇ ಕರೆ ಮಾಡಿ. ಓದಿ, ನೋಡಿ ,ಆರ್ಕಿಟೆಕ್ಟ್ ನ ಬಳಿ ತಿಳಿದುಕೊಳ್ಳಿ. ಹೀಗೇ ಯಾವುದೇ ಕಾರ್ಯ ನಿಮ್ಮ ಕಣ್ಣಳತೆಯ ಅಧಿಕಾರದಲ್ಲೇ ಇಟ್ಟುಕೊಳ್ಳಿ.ನೀವೇ ಸ್ವತ ಅಲ್ಲಿದ್ದು ನಡೆಸಬೇಕೆಂತಿಲ್ಲ. ಗುತ್ತಿಗೆದಾರನಲ್ಲಿ ಕೇಳಿಕೂಡಾ ಅಧಿಪತ್ಯ ನಡೆಸ ಬಹುದು. ಆದರೆ ನಿಮಗೆ ಕೆಲವು ಸೂತ್ರಗಳ ಅರಿವಿರಬೇಕಾಗುತ್ತದೆ.

ನಿಮ್ಮ ಪ್ರತೀ ದಾರಿಯನ್ನೂ ಹಿಂದಿನದ್ದನ್ನು ನೋಡಿ ಕಲಿತುಕೊಳ್ಳಿ, ಹಳೆಯ ರಿಪೋರ್ಟ್ ನೋಡಿಕೊಳ್ಳಿ, ಕಾರ್ಮಿಕರ ಹತ್ರ ಮಿಸ್ತ್ರಿಯ ಹತ್ರ ನೇರ ಮಾತನಾಡಿ ಹಿನ್ನೆಲೆ ಗಳನ್ನು ಅಭ್ಯಸಿಸಿ. ನಿಮ್ಮ ಹತ್ರ ಒಂದು ಒಳ್ಳೆಯ ಗುಣವಿದೆ, ಚಾನ್ಸ್ ಇದೆ, ನಿಮಗೆ ಏನೂ ಗೊತ್ತಿಲ್ಲ. ಯಾರನ್ನೂ ನಂಬಬೇಡಿ, ಶೋಧಿಸಿ, ಅನುಮಾನಿಸಿ. ಚಟುವಟಿಕೆಗಳನ್ನು ಪರಿಶೀಲನಾ ದೃಷ್ಟಿಯಿಂದ ನೋಡಿದರೂ ಸಾಕು, ಕಪಟಿ, ವಂಚನೆಗಾರರಿಗೆ ಹೆದರಿಕೆ ಬಂದು ಬಿಡುತ್ತದೆ, ಅವರ ಈ ಹೆದರಿಕೆ ಆತಂಕಗಳನ್ನು ನಾವು ಕ್ಯಾಷ್ ಮಾಡಿಕೊಳ್ಳಬೇಕು.

ಅರ್ಥವಾಯ್ತಾ..??

ತ್ಯಾಂಪ ಎದೆಯುಬ್ಬಿಸಿ ಹೇಳಿದ ಸಂಪೂರ್ಣವಾಗಿ ಸರ್..!!!

ನಿನ್ನನ್ನು ತೊಂದರೆ ಗೊಳಿಸಿದ ಮುದುಕರು ನನ್ನ ತಂದೆ ನಿವೃತ್ತ ಮುಖ್ಯ ಅಧ್ಯಾಪಕರು, ಅವರು ಕಿವುಡರ ಹಾಗೆ ನಟಿಸಿದರಷ್ಟೇ.

ಮತ್ತೆ ಆ ಗಾಡಿ ಸರ್..?

ಅದು ಕಲೂರಾಮನದ್ದಲ್ಲ, ಕಂಪೆನೀದು. ಅದರ ಬಗ್ಗೆ ತಲೆಬಿಸಿ ಬೇಡ. ಅದೆಲ್ಲಿದ್ದರೂ ಕಳ್ಳರನ್ನು ಹಿಡಿಯೋ ಜವಾಬ್ದಾರಿ ನಮ್ಮ ಪೋಲೀಸ್ ಗಣೇಶರದ್ದು. ಇವತ್ತಿನಿಂದ ಆಪ್ರೊಜೆಕ್ಟ್ ನಿಮ್ಮದು ತ್ಯಾಂಪಾ ಹಗಲೂ ರಾತ್ರೆ ನಿಮ್ಮ ಧ್ಯಾನ ಅದರಲ್ಲೇ ಇರಬೇಕು ಆಯ್ತಾ.

ನಂಜುಂಡಪ್ಪ ಚದುರಂಗದ ಸೈನಿಕನನ್ನು ಮಂತ್ರಿಯಾಗಿಸೋ ಪ್ರಯತ್ನದಲ್ಲಿದ್ದಾರೆ. ಇದರ ಫಲಿತಾಂಶ ಹೊರ ಬೀಳಲಿದೆ ಸದ್ಯದಲ್ಲೇ.

***********************

ಮಲ್ಲಿಕ್ ಕಾಯುತ್ತಿದ್ದ ವ್ಯಕ್ತಿ ಸೆಕ್ಯುರಿಟಿ ದ್ವಾರದಲ್ಲಿ ಕಂದು ಬಂದ.

"ನಾನು ಒಳಗೆ ಬರಬಹುದೇ ಯಜಮಾನರೇ?"

ಈ ಮಾತಿಗೆ ಗೇಟನವ ಎದ್ದು ನಿಂತ, ಈ ಸಂಭೋಧನೆ ಆತನಿಗೆ ಹೊಸದೇ..

"ಯಾರನ್ನು ಭೇಟಿಯಾಗಬೇಕು ತಾವು?"

"ಈ ಪ್ರೊಜೆಕ್ಟ್ ನೋಡಲು ಬಂದಿದ್ದೇನೆ, ನಾನು ತ್ಯಾಂಪ. ನಂಜುಂಡಪ್ಪ ಕಳುಹಿಸಿದ್ದಾರೆ."

"ಸರ್ ನಮಗೆ ನಿಮ್ಮ ನಂಜುಂಡಪ್ಪ ಯಾರೋ ಗೊತ್ತಿಲ್ಲ, ನಮಗೆ ಗೊತ್ತಿರೋದು ಕಲ್ಲೂರಾಮ್ ಮಾತ್ರ ಗೊತ್ತು, ಅವರು ಕಳಿಸಿದ್ದಾ ಹೇಳಿ?"

"ಇಲ್ಲ ಅವರು ಕಳುಹಿಸಿದ್ದಲ್ಲ" ತ್ಯಾಂಪ ಸತ್ಯವಾದಿ ಕೂಡಾ.

‘ ಹಾಗಿದ್ದಲ್ಲಿ ನಿಮ್ಮನ್ನು ಒಳ ಬಿಡಲಾಗದು, ಯಜಮಾನರೇ‘

ಆತನೂ ಅಷ್ಟೇ ನಿಷ್ಠುರವಾದಿ


೧೨. ಹಿಂಸೆ.

ಈಗ ರಂಗಕ್ಕೆ ಬಂದ ಮಲ್ಲಿಕ್.

ಗೇಟನವನನ್ನ್ನು ಮಾತನಾಡಿಸಲು ಗೊತ್ತಿಲ್ಲದವ ಈ ಮೂರು ಕೋಟಿಯ ಪ್ರೊಜೆಕ್ಟ್ ಹೇಗೆ ನೋಡಿಕೊಂಡಾನು. ಅವನ ತುಟಿ ಅಂಚಿನಲ್ಲಿ ನಗು ಅರಳಿತು.

ಏನೋ ಅದು?

ಯಾರೋ ತ್ಯಾಂಪ ಅಂತೆ ಸಾರ್, ಕಲ್ಲೂರಾಮ್ ಸಾಹೇಬರು ಕಳಿಸಿದ್ದಲ್ಲ ಅಂದ್ರು ಅವರ ಬಳಿ ಗುರುತಿನ ಚೀಟಿಯೂ ಇದ್ದಿರಲಿಲ್ಲ ಅದಕ್ಕೇ ಒಳಗೆ ಬಿಡಲಿಲ್ಲ ಎಂದ ಗಾರ್ಡ್.

ನನ ಪರಿಚಯದವರು ಒಳಕ್ಕೆ ಬಿಡು ಎಂದ ಮಲ್ಲಿಕ್.

ಸಾರಿ ಸರ್ ಬೇಸರ ಮಾಡಿಕೊಳ್ಳಬೇಡಿ, ನಿಮ್ಮ ಪರಿಚಯ ಅವನಿಗೆ ಇಲ್ಲವಲ್ಲ ಅದಕ್ಕೇ ಒಳಗೆ ತಮ್ಮನ್ನು ಬಿಡಲಿಲ್ಲ.ನಂಗೆ ಬೇಜಾರಿಲ್ಲ ಬಿಡಿ ಅವನ ಡ್ಯೂಟಿ ಅವನು ಮಾಡಿದ್ದಾನೆ ಅಂದ ತ್ಯಾಂಪ.

ಬನ್ನಿ ಸರ್ ನಿಮಗೆ ನಮ್ಮ ಸೈಟ್ ತೋರಿಸುತ್ತೇನೆ,

ಎಂದಂದು ತ್ಯಾಂಪನನ್ನು ಕರೆದು ಹೊರಟ ಮಲ್ಲಿಕ್.
ಹಿಂದಿನ ದಿನ ಮಳೆ ಬಂದು ಜಾಗವೆಲ್ಲಾ ಅಲ್ಲಲ್ಲಿ ನೀರು ನಿಂತಿತ್ತು. ಹಲವೆಡೆಯಲ್ಲಾ ವಾಹನಗಳು ಓಡಾಡಿ ಕೆಸರೂ ರಾಡಿಯಾಗಿ ಹೋಗಿ ಅಧ್ವಾನವಾಗಿತ್ತು. ನಡೆಯ ಬೇಕಾದರೂ ಆ ಕೆಸರಿಂದ ತಪ್ಪಿಸಿಕೊಳ್ಳಲು ಜಾಗೃತೆಯಾಗಿ ಹೆಜ್ಜೆ ಹಾಕಬೇಕಾಗಿತ್ತು. ಬೇಕೆಂತಲೇ ಕೆಸರಿನ ದಾರಿಯಲ್ಲೇ ಕರೆದೊಯ್ಯುತ್ತಿದ್ದ ತ್ಯಾಂಪನನ್ನು ಮಲ್ಲಿಕ್.

ಜತೆಗೆ ಆಸ್ಥೆ ತೋರಿಸುವಂತೆ ಜಾಗೃತೆ ಸಾರ್ ಎಂದೂ ಅನ್ನುತ್ತಿದ್ದ ಅಡಿಗಡಿಗೆ.

ನೋಡಿ ಸರ್ ಎರಡಂತಸ್ಥಿನ ಇದು ಆಫೀಸು ಸಮುಚ್ಚಯ, ಪಕ್ಕದಲ್ಲೇ ಭೋಜನಾಲಯ ಮತ್ತು ಕಾನ್ಫರೆನ್ಸ ರೂಮುಗಳು ಇದು ಎಮ್ ಡಿಯವರ ಕ್ಯಾಬಿನ್ನು

ಹೀಗೆ ಒಂದೊಂದೇ ತೋರಿಸುತ್ತಾ ನಡೆದ. ಮೆಟ್ಟಲು ಇನ್ನೂ ಕಟ್ಟದ ಜಾಗದಲ್ಲಿ ಮೇಲೆ ಹತ್ತಲಾಗದೇ ಜೋಲಿ ಹೊಡೆದ ತ್ಯಾಂಪ ಕೆಸರಲ್ಲಿ ಜಾರಿ ಬಿದ್ದು ಬಿಟ್ಟ.

ಅವನ ಧಿರುಸೆಲ್ಲವೂ ಕೆಸರಾಯ್ತು. ಪಕ್ಕದಲ್ಲಿನ ಮರದ ತುಂಡೊಂದು ಆತನ ಕಾಲಿಗೆ ಬಡಿದು ಗಾಯವಾಯ್ತು. ಗಾಯದಿಂದ ರಕ್ತ ಸುರಿಯಲಾರಂಭಿಸಿತು.

ನೋಡಿದರೂ ನೋಡದಹಾಗೆ ಮಲ್ಲಿಕ್ ಮುಂದೆ ಮುಂದೆ ನಡೆಯುತ್ತಿದ್ದ. ತ್ಯಾಂಪ ಅವನ ಹಿಂದೆಯೇ. ಮೂರು ಮತ್ತೊಂದು ಜಾಗದಲ್ಲಿ ತ್ಯಾಂಪ ಸ್ವಲ್ಪದರಲ್ಲಿ ಅಪಘಾತ ಆಗುವುದನ್ನು ತಪ್ಪಿಸಿಕೊಂಡಿದ್ದ.

ಆಗಲೇ ಕರೆಯೊಂದು ಬಂತು ಮಲ್ಲಿಕ್ ಗೆ. ಆತ ಸ್ವಲ್ಪ ಪಕ್ಕದಲ್ಲಿ ತಿರುಗಿಕೊಂಡು ಮಾತನಾಡುತ್ತಿದ್ದ, ತ್ಯಾಂಪ ಮುಂದೆ ಹೋದಂತೆ ನಟಿಸಿ ಆತನ ಹಿಂದೆ ಸಪ್ಪಳವಾಗದಂತೆ ಬಂದು ನಿಂತ
.........................................

ಇಲ್ಲ ಸಾರ್, ನೀವು ನೋಡಬೇಕಿತ್ತು ಸರ್,

ಆತನ ಬಟ್ಟೆಯೆಲ್ಲಾ ಕೆಸರಾಗಿದೆ ಸರ್, ಕಾಲಿಗೆ ಗಾಯವೂ ಆಗಿದೆ ಕುಂಟುತಿದ್ದಾನೆ

...................................

.ಇಲ್ಲ ಅದೆಲ್ಲಾ ನನಗೆ ಬಿಡಿ, ಇನ್ನು ಎರಡ್ಮೂರು ದಿನ ಇಲ್ಲಿಗೆ ಬರಬಾರದು ಹಾಗೆ ಮಾಡಿ ಬಿಡ್ತೀನಿಸರ್

.....................................

ನಕ್ಕ ಮಲ್ಲಿಕ್ ಜೋರಾಗಿ.ಇದು ಸೈಟು ಸರ್, ಅದು ಕಟ್ಟೋಣದ ಕಾಮಗಾರಿ ನಡೆಯುತ್ತಿದೆ, ಇಲ್ಲಿ ಏನೂ ಆಗಬಹುದು ಸರ್.ಸರಿ ಸರಿ, ಯಾವುದೇ ವಿಷಯ ಆತನಿಗೆ ಗೊತ್ತಾಗೊಲ್ಲ ಸರ್, ನೋಡಿದರೆ ನೀವು ಹೇಳಿದ್ದು ನಿಜ ಅನ್ನಿಸುತ್ತೆ ಸರ್, ಆತ ಬರೀ ಪೆದ್ದು ಸರ್.
..............................

ಸರಿ ಸರಿ ಸರ್.

ಸಂಭಾಷಣೆ ಮುಗಿಯಿತು. ಆಗಲೇ ತ್ಯಾಂಪ ಅಲ್ಲಿಂದ ತಿರುಗಿ ಗೋಡೆಯ ಇನ್ನೊಂದು ಪಕ್ಕದಲ್ಲಿ ನಿಂತ.ನಿಧಾನವಾಗಿ ತ್ಯಾಂಪನಿಗೆ ಮಲ್ಲಿಕ್ ನ ಪ್ಲಾನ್ ಅರ್ಥವಾಯ್ತು. ಆತ ಇನ್ನೂ ಎಚ್ಚರಿಕೆ ವಹಿಸಿದ. ಇಲ್ಲಿನ ಪ್ರತಿ ಹೆಜ್ಜೆ ಎಚ್ಚರವಹಿಸದಿದ್ದರೆ ಕಷ್ಟ ಎಂಬುದು ಅರಿವಾಯಿತು ಆತನಿಗೆ.

ಮುಂದೆ ಸಾಗುವಾಗ ಮೇಲಿನಿಂದ ಕಸ ಕಡ್ಡಿ ಕಲ್ಲು ಇಟ್ಟಿಗೆ ದೊಪ್ಪನೆ ಕೆಳಗೆ ಹಾಕಿದರು ಯಾರೋ, ತ್ಯಾಂಪ ಎಚ್ಚರವಹಿಸದಿದ್ದರೆ ಆತನ ತಲೆಯ ಮೇಲೇಯೇ ಬೀಳುತ್ತಿತ್ತದು.

ಇನ್ನೊಂದು ಜಾಗದಲ್ಲಿ ಮೇಲೇರಲು ಕಟ್ಟಿದ್ದ ಗಳುವಿನ ಏಣಿಯೊಂದು ಹಗ್ಗ ತುಂಡಾಗಿ ತ್ಯಾಂಪನ ತಲೆಯ ಮೇಲಿನಿಂದ ಹಾದುಹೋಯ್ತು. ತ್ಯಾಂಪ ತಲೆ ತಗ್ಗಿಸಿಕೊಂಡ ಅಪಾಯ ಮೊದಲೇ ಗೃಹಿಸಿಕೊಂಡು.

ಸುಮಾರು ಅರ್ಧ ಗಂಟೆ ಹಿಡಿಯಿತು ಅವರು ಎಲ್ಲಾ ಕಡೆ ತಿರುಗಿ ಬರಲು. ಕೊನೆಯಲ್ಲಿ ಆಫೀಸಿಗೆ ಬಂದಾಗ ಅವನನ್ನು ನೋಡಿದಂತೆ ಮಾಡಿ ಮಲ್ಲಿಕ್, ತ್ಯಾಂಪ ಸ್ಸಾರ್ ಇದೇನಿದು ಅಯ್ಯಯ್ಯೋ ಕಾಲಲ್ಲಿ ರಕ್ತ ಧಿರುಸೆಲ್ಲವೂ ಕೆಸರಾಗಿದೆ.

ಎಂದ. ತೊಳೆಯಲು ನೀರೆಲ್ಲಿ ಸಿಗುತ್ತೆ ಕೇಳಿದ ತ್ಯಾಂಪ.

ಸಾರಿ ಸರ್ ಇಲ್ಲಿ ಇವತ್ತು ನೀರು ಬರಲಿಲ್ಲ ಅಂದ ಮಲ್ಲಿಕ್.

ನೀರಿಲ್ಲದಿದ್ದರೆ ತೊಳೆಯೋದು ಹ್ಯಾಗೆ ಕೇಳಿದ ತ್ಯಾಂಪ

ಕಾಗದದಲ್ಲಿ ಒರೆಸಿದರಾಯ್ತು ಬಿಡಿ ಸಾರ್ ಎಂದ ಮಲ್ಲಿಕ್

ಮಲ್ಲಿಕ ನ ಕಪಟತನ ಸರಿಯಾಗಿ ತಿಳಿಯಿತು ತ್ಯಾಂಪನಿಗೆ. ತನಗೆ ಜಾಸ್ತಿ ಸಮಯವಿಲ್ಲ ಈಗ ಹೇಗಾದರೂ ಮಾಡಿ ನಂಝುಂಡಪ್ಪನವರ ಪ್ರಷ್ನೆಗಳಿಗೆ ಉತ್ತರ ತರಬೇಕು. ಅಂದಿನ ಮೀಟಿಂಗ್ ನಲ್ಲಿ ಅವರ ಕ್ಲೈಂಟ್ ಅಳಗಪ್ಪನವರಿಗೆ ಉತ್ತರ ಸಿಗದಿದ್ದ ಪ್ರಶ್ನೆಗಳವು. ಕಲ್ಲೂರಾಮ್ ಬೇಕೆಂತಲೇ ಸಿಕ್ಕಿಸಿದ್ದ.

ಅದಕ್ಕೆ ಉತ್ತರ ಸಿಗಬೇಕಾದರೆ ಈ ಮಲ್ಲಿಕ್ ನನ್ನು ಮೊದಲು ಪಳಗಿಸಬೇಕು.ತ್ಯಾಂಪ ತನ್ನ ಡೈರಿ ತೆಗೆದುಕೊಂಡ ಮಲ್ಲಿಕ್ ನ ಕಡೆ ತಿರುಗಿ ಕೇಳಿದ

ನಿಮ್ಮ ಆಫೀಸ್ ಎಲ್ಲಿದೆ?

ಪಕ್ಕದಲ್ಲಿದೆ, ಸರ್ ಸ್ವಲ್ಪ ರಿಪೇರಿ ನಡೆಯುತ್ತಿದೆ ಅಲ್ಲಿಗೆ ಹೋಗೋ ಹಾಗಿಲ್ಲ.

ಅಂದರೆ ತನಗೆ ಈಗ ಈತ ಕುಳಿತುಕೊಳ್ಳಲೂ ಬಿಡುತ್ತಿಲ್ಲ.

ಸರಿ ಹಾಗಾದರೆ ನಿಮ್ಮ ಸೆಕ್ಯುರಿಟಿ ಆಫೀಸಿಗೇ ಹೋಗುವಾ..

ಯಾಕೆ ಸರ್

ನಿಮ್ಮನ್ನು ಕೆಲವು ಪ್ರಶ್ನೆ ಕೇಳಬೇಕಾಗಿದೆ

ಇಲ್ಲೇ ಕೇಳಿಸರ್

ಯಾಕೆ ಅಲ್ಲಿ ಕೇಳಿದರೆ ಏನಾಗುತ್ತೆ

ಯಾವ ಪ್ರಶ್ನೆ ಸರ್

ಇಲ್ಲಿನ ಕೆಲಸದ ಬಗ್ಗೆ....

ನಾನು ಉತ್ತರ ಹೇಳದಿದ್ದರೆ,,

ತ್ಯಾಂಪ ತಡಬಡಾಯಿಸಿದ ಇದು ಆತನಿಗೆ ಅನಿರೀಕ್ಷಿತ

ನನಗೆ ಇಲ್ಲಿನ ಬಗ್ಗೆ ಏನೂ ಗೊತ್ತಿಲ್ಲ ಸರ್

ಯಾಕೆ ನೀವಿಲ್ಲಿ ಮೆನೆಜರ್ ಅಲ್ಲವಾ?

ನಿಜ ಸರ್, ಆದರೆ ಅವರನ್ನು ಕೇಳದೇ ನಾನು ಏನೂ ಯಾರಿಗೂ ಹೇಳುವಂತಿಲ್ಲ ಸರ್.

ಸರಿ ನಿನ್ನ ಮಾಲೀಕನ ನಂಬ್ರ ಕೊಡು

ನನ್ನ ಮೊಬಾಯಿಲ್ ಹಾಳಾಗಿದೆ ಸರ್, ನನಗೆ ಅವರ ನಂಬ್ರ ನೆನಪಿಲ್ಲ

ಇಲ್ಲಿ ಸೆಕ್ಯುರಿಟಿಯವನ ಬಳಿ ಪಡೆದು ನನಗೆ ಹೇಳಿ.ಅದೆಲ್ಲಾ ಆಗಲ್ಲ ಸಾ

ಇಲ್ಲಿವ ನಕ್ಷೆಗಳೆಲ್ಲ ಎಲ್ಲಿವೆ

ಆಫೀಸಿನಲ್ಲಿ

ಅದನ್ನು ತಂದು ತೋರಿಸಿ

ಇಲ್ಲ ಸರ್ ಇವತ್ತು ನನ್ನ ಅಸಿಸ್ಟೆಂಟ್ ರಜೆಯಲ್ಲಿದ್ದಾನೆ ಸರ್, ವಿವರ ಇಟ್ಟ ಬೀಗದ ಕೈ ಆತನಲ್ಲೇ ಇತ್ತು.

ಸರಿ

ತಾನಿದ್ದ ರೂಮಿನ ಸುತ್ತ ನೋಡಿದ ತ್ಯಾಂಪ

ವಾಶ್ ರೂಮಿನ ಒಳ ಹೊಕ್ಕ.

ಬಾಗಿಲು ಹಾಕಿಕೊಂಡು ತನ್ನ ಕೆಸರನ್ನೆಲ್ಲಾತೊಳೆದ, ಗಾಯವನ್ನೂ.

ಒಮ್ಮೆ ಯೋಚಿಸಿದ, ಇಲ್ಲಿಗೆ ಬಂದಕೆಲಸವಿನ್ನೂ ಶುರುವೇ ಆಗಿಲ್ಲ ಆಗಲೇ ಅರ್ಧ ದಿನ ಕಳೆಯಿತು. ಇವನಿಂದ ಹೇಗೆ ವಿವರ ಕಕ್ಕಿಸುವದು?. ಈತನೋ ಬಡ ಪೆಟ್ಟಿಗೆ ಒಪ್ಪುತ್ತಿಲ್ಲ, ಈತ ಉತ್ತರಿಸದಿದ್ದರೆ ತನಗೇನೂ ಗೊತ್ತಾಗಲು ಸಾಧ್ಯವೇ ಇಲ್ಲ.ಕಲ್ಲೂರಾಮ್ ಅಲ್ಲಿಂದ ಸೂತ್ರ ಹಿಡಿದು ಆಡಿಸುತ್ತಿದ್ದಾನೆ. ಆತನ ಗೆಲುವೇ ನನ್ನ ಸೋಲು. ಇಂತಹ ಪರಿಸ್ಥಿತಿಯಲ್ಲಿ ತಾನು ಏನು ಮಾಡಬೇಕು? ಸಮಯ ವ್ಯರ್ಥವಾಗಿ ಕಳೆಯುತ್ತಿದೆ. ನಂಜುಂಡಪ್ಪನವರಿಗಾಗಿಯಾದರೂ........

ಹೌದು ತಾನು ಗೇಟ್ ನಲ್ಲಿ ಒಳಹೋದ ಮತ್ತು ಹೊರ ಬಂದ ವಸ್ತುಗಳನ್ನು ಚೆಕ್ ಮಾಡಿದರೆ ಏನಾದರೂ ವಿಷಯ ತಿಳಿಯ ಬಹುದು. ಇಲ್ಲಿಯಂತು ಪ್ರತಿಕ್ಷಣ ಅದರಲ್ಲಿ ನಮೂದಾಗುತ್ತಿರಬೇಕಲ್ಲ.

ಈ ಯೋಚನೆ ಹೊಳೆದದ್ದೇ ತಡ ವಾಶ್ ರೂಮಿನಿಂದ ಹೊರಬಂದ ತ್ಯಾಂಪ.

ಮನಸ್ಸು ಪ್ರಪುಲ್ಲಿತವಾಗಿತ್ತು.

ಮಲ್ಲಿಕ್,..ಕರೆದ

ನಿಮ್ಮ ಎಂಟ್ರಿ ಪುಸ್ತಕ ಕೊಡಿ

ಎಲ್ಲಿದ್ದಾನೆ ಮಲ್ಲಿಕ್..? ಅಲ್ಲಿಲ್ಲವೇ ಇಲ್ಲ.

ಸೆಕ್ಯುರಿಟಿಯವನ ಬಳಿ ಕೇಳಿದ ಎಲ್ಲಿದ್ದಾರೆ ಮಲ್ಲಿಕ್

ಅವರು ಹೊರಟು ಹೋದರು ಸಾ

ಎಲ್ಲಿಗೆ?

ಗೊತ್ತಿಲ್ಲ ಸಾ

ಮತ್ತೆ ಇಲ್ಲಿನ ಎಂಟ್ರಿ ಪುಸ್ತಕ

ಅದನ್ನೂ ಜತೆಯಲ್ಲೇ ತೆಗೆದುಕೊಂಡು ಹೋದರು ಸಾರ್.

ಏನು ಮಾಡಬೇಕು ತಾನು?

ತ್ಯಾಂಪ ತಲೆ ಮೇಲೆ ಕೈಹೊತ್ತು ಕುಳಿತ




೧೩.  ಪ್ರಶ್ನೆಗಳು


ಎಲ್ಲಿ ಹೋಗಿರಬಹುದು ಮಲ್ಲಿಕ್, ಯಾಕೆ ಹೋಗಿರಬಹುದು?
ಆಗಲೇ ಅಲ್ಲಿಗೊಂದು ಕತ್ತಿಗೆ ಪಟ್ಟಿಕಟ್ಟಿಕೊಂಡ ನಾಯಿಯೂ ಜತೆಯಲ್ಲೇ ಸೇಕುತ್ತ ಅದರ ಧಡೂತಿ ಯಜಮಾನಿಯೂ ಕಂಡು ಬಂದರು.
ನಾಯಿ ಮೂಸುತ್ತ ಸೆಕ್ಯುರಿಟಿಯವನ ರೂಮಿನೊಳಕ್ಕೆ ಬರಲು ಪ್ರಯತ್ನಿಸಿತು.

ಆಗಲೇ ಅದರ ಯಜಮಾನಿ ಪೀಟರ್ ಕಮ್, ಅಂದ ಕೂಡಲೇ ವಿಧೇಯ ವಿಧ್ಯಾರ್ಥಿಯಂತೆ ಅವಳ ಹಿಂದೆ ಓಡಿತು.

ತ್ಯಾಂಪನಿಗೆ ಮಲ್ಲಿಕ್ ನನ್ನು ಕರೆಸುವ ಉಪಾಯ ಹೊಳೆದು ಮುಖವರಳಿತು.

>>>>>>>>>>>>>>>>>>>>>>>

ಕೆಲವೇ ಸಮಯ ಕಳೆದಿರಬಹುದು ಆ ರೂಮಿನಲ್ಲಿ ತ್ಯಾಂಪ ಮಲ್ಲಿಕ್ ತೇಕುತ್ತ ಪ್ರತ್ಯಕ್ಷನಾದ

 ಅವನ ಕೈಯ್ಯಲ್ಲಿ   ಫಸ್ಟ್ ಐಡ್ ಬಾಕ್ಸ್ ಕೂಡಾ ಇತ್ತು.

ತ್ಯಾಂಪನ ಗಾಯಕ್ಕೆ ಮುಲಾಮು ಸವರಿ ಡ್ರೆಸ್ಸಿಂಗ್ ಕೂಡಾ ಮಾಡಲಾಯ್ತು.


ಮಲ್ಲಿಕ್ ಅವರೇ ನಿಮ್ಮ ಸಿಮೆಂಟ್ ಗೋಡೌನ್ ಎಲ್ಲಿದೆ?

ನಿಮಗೆ ಯಾಕೆ ಸಾರ್, ಪಾಪ ಕಾಲೆಲ್ಲಾ ಗಾಯವಾಗಿದೆ ನಾನೇ ಅಲ್ಲಿನ ಲೆಕ್ಕಾಚಾರದ ಪುಸ್ತಕ ತರಿಸಿಕೊಡುತ್ತೆನೇ ಈಗಲೇ ಇಲ್ಲಿಯೇ.

ಬೇಡ ಬಿಡಿ, ನನಗೇನೂ ಆಗಿಲ್ಲ, ಈಗಂತೂ ನೀವು ಡ್ರೆಸ್ಸಿಂಗ್ ಕೂಡಾ ಮಾಡಿಸಿದಿರಿ. ನಡೆಯಿರಿ ಹೋಗೋಣ.

ಮನಸ್ಸಿಲ್ಲದ ಮನಸ್ಸಿನಿಂದ ಮಲ್ಲಿಕ್ ತ್ಯಾಂಪನನ್ನು ಕರೆದುಕೊಂಡು ಹೊರಟ.


ಗೋಡೌನ್ ಒಳಗೆ ಕಾಲೂ ಹಾಕದಷ್ಟು ಅಧ್ವಾನವಾಗಿತ್ತು.

ಅಲ್ಲಲ್ಲಿ ಚೆಲ್ಲಾಪಿಲ್ಲಿಯಾಗಿ ಹರಡಿದ್ದುವು ಕೆಲಸಕ್ಕೆ ಬಾರದ ವಸ್ತುಗಳು.

ಏನು ನಿಮ್ಮ ಸಿಮೆಂಟ್ ಗೋಡೌನ್ ಹೀಗೇ ಇರ್ತದಾ? ಕೇಳಿದ ತ್ಯಾಂಪ.

ಇಲ್ಲ ಇಲ್ಲ ಸಾರಿದನ್ನು ಖಾಲಿ ಮಾಡಿಸಿ ಕ್ಲೀನ್ ಮಾಡಿಸಿ ಇಡುತ್ತೇನೆ ಸರ್ ಇಂದೇ..

ಅಲ್ಲಪ್ಪಾ ನಾನು ಹೀಗೇ ಕೇಳಿದೆ ಅಷ್ಟೆ

ನೀವು ಹೇಳಿದುದು ನಿಜ್ ಸಾರ್, ಇದು ಸರಿಯಾಗಿ ಇಡುವ ಹಾಗೆ ಇಟ್ಟಿಲ್ಲ ನಿಜ.

ನಕ್ಕ ತ್ಯಾಂಪ. ಆ ನಗುವಿನ ನಿಜವಾದ ಅರ್ಥ ಆತನಿಗೆ ಮಾತ್ರ ಗೊತ್ತಿತ್ತು.

ಪುಸ್ತಕ ನೋಡಿ ಕೇಳಿದ ತ್ಯಾಂಪ ಇವತ್ತಿನ ಇಲ್ಲಿನ ಎಂಟ್ರಿ ಪ್ರಕಾರ ೫೬೦ ಬ್ಯಾಗ್ ಇರಬೇಕಿತ್ತು.
ಇಲ್ಲಿ ಬರೇ ನೂರೈವತ್ತು ಇವೆಯಲ್ಲಾ, ಬಾಕಿಯವು ಎಲ್ಲಿ?

ಸಾರ್ ಅದು ಬೇರೊಂದು ಗೋಡೌನ್ನಲ್ಲಿ ನಲ್ಲಿದ್ದಿರಬೇಕು, ಆದರೆ ಆಗಲೇ ಹೇಳಿದ್ದೆನಲ್ಲ ಆ ಸ್ಟೋರ್ ಕೀಪರ್  ರಜೆಯಲ್ಲಿದ್ದಾನೆ.

ಅಂದರೆ ರಜೆಯಲ್ಲಿದ್ದವನು ಸಿಮೆಂಟ್ ಗೋಡೌನ್ ಕೀ ನೂ ತೆಗೆದುಕೊಂಡು ಹೋದನಾ..?? ನಾನು ಅದನ್ನೂ ನೋಡಬೇಕು ಒಂದೇ ಕೀ ತರಿಸಿ ಅಥವಾ ಬೇರೇನಾದರೂ ಮಾಡಿ ಕ್ವಿಕ್.


ನಾನೀಗ ಬಂದೆ ಸರ್.

ಸರಿ.


ಹೊರಗಡೆ ಹೋಗಿ ಕಲ್ಲೂರಾಮ್ ಗೆ ಕರೆ ಮಾಡಿದ ಮಲ್ಲಿಕ್


ತ್ಯಾಂಪ ಅವರು ಸಿಮೆಂಟ್ ಚೆಕ್ ಮಾಡುತ್ತಿದ್ದಾರೆ

ಸರಿ ತೋರಿಸು

ಅಲ್ಲಿ ಅಷ್ಟು ಇಲ್ಲ ಸಾ,

ನಾನೂರಾ ಹತ್ತು ಬ್ಯಾಗ್ ಕಡಿಮೆ ಇದೆ.

ನಾನೇನು ಮಾಡಲಯ್ಯ ಅದಕ್ಕೇ, ಬಾಕಿ ಎಲ್ಲಿಗೆ ಹೋಯ್ತು?

ಏನ್ಸಾ ನೀವು, ನಿಮ್ಮ ಭಾವನಿಗೆ ಮುನ್ನೂರಾ ಐವತ್ತು ಬ್ಯಾಗ ಕಳುಹಿಸಿ ಕೊಟ್ಟಿದ್ದಲ್ವಾ ಸರ್, ಮರೆತಿರಾ ಹೇಗೆ?

ಸರಿ ಈಗ ನನ್ನ ತಲೆ ತಿನ್ನಬೇಡ, ಬೇರೆ ಯಾವುದಾದರೂ ಬ್ಯಾಗ ಸುಣ್ಣದ್ದೋ, ಹಾರೋ ಬೂದಿದೋ ತೋರಿಸು, ಅದಕ್ಕೆಲ್ಲಿಂದ ಗೊತ್ತಾಗಬೇಕು ಅಬಪೆ ಗೆ.

ಸರಿ ಸಾರ್ ಹಾಗೇ ಮಾಡ್ತೀನಿ.ಈ ಸಂಭಾಷಣೆಯನ್ನು ತ್ಯಾಂಪ ಹಿಂದಿನಿಂದ ಕೇಳಿಸಿಕೊಂಡಿದ್ದಾನೆಂದು ಆತನಿಗೆ ಗೊತ್ತಿಲ್ಲ.


ಪುನಃ ತ್ಯಾಂಪನಲ್ಲಿಗೆ ಸ್ವಲ್ಪ ಸಮಯ ಕೊಡಿ ಸಾರ್ ಆ ಗೋಡೌನ್ ನ್ನೂ ತೋರಿಸಿತ್ತೇನೆ ಎಂದ.

ತ್ಯಾಂಪ ಪುನಃ ನಕ್ಕ.

ಸರಿ ಅಲ್ಲಿಯವರೆಗೆ ನನಗೆ ನಿಮ್ಮ ಒಡಂಬಡಿಕೆ ಹಾಗೂ ನಕ್ಷೆ ತರಿಸಿ ವಿವರಿಸಿ ಇಂದಿನ ಕಾರ್ಯ ಸೂಚಿಯಲ್ಲಿ. ಅರ್ಧ ಗಂಟೆಯಲ್ಲಿ ಆ ಕೆಲಸ ಮುಗಿಯಿತು. ಇನ್ನು ಮುಂದೆ ನೀವು ದೈನಂದಿನ ಕೆಲಸ ಏನೇನು ಮಾಡುತ್ತೀರಿ ಎಂಬುದನ್ನ ಬೆಳಿಗ್ಗೆ ಮತ್ತು ಸಂಜೆ ನನಗೆ ವಿವರವಾಗಿ ತಿಳಿಸಬೇಕು ಹಾಗೆಯೇ ದೈನಂದಿನ ರಿಪೋರ್ಟ್ ಕೂಡಾ ಅಂದಂದೇ ನನಗೆ ತಲುಪಿಸಬೇಕು ಅಂದ ತ್ಯಾಂಪ

ನಂತರ ಮಲ್ಲಿಕ್ ತ್ಯಾಂಪನನ್ನು ಕರಕೊಂಡು ಅವನ ಇನ್ನೊಂದು ಗೋಡೌನ್ ತೋರಿಸಲು ನಡೆದ.

ಸಾರ್ ಉಳಿದ ನಾಲ್ಕು ನೂರು ಬ್ಯಾಗ್ ಇದರಲ್ಲಿಟ್ಟಿದ್ದೇವೆ ಎಂದ.

ಸರಿ ಇಲ್ಲಿಟ್ಟ ಸಿಮೆಂಟ್ ಯಾವ ಕಂಪೆನಿದು? ಕೇಳಿದ ತ್ಯಾಂಪ.

ಕೊರಮಂಡಲ್ ಎಂದ ಮಲ್ಲಿಕ್

 ಆ ಹೆಸರು ಈ ಬ್ಯಾಗ್ ನ ಮೇಲೆ ಏಕಿಲ್ಲ, ಈ ಹಿಂದೆ  ತೋರಿಸಿದಿರಲ್ಲಾ ಅದನ್ನು ನಾನೂ ನೋಡಿದ್ದೇನೆ ಅವಲ್ಲ, ಇವು.ಅಂದರೆ ಏನು ಅರ್ಥ..?
ಈ ಕೆಳಗಿನ ಒಂದು ಬ್ಯಾಗ್ ನ್ನು ಓಪನ್ ಮಾಡಿ ತೋರಿಸಿ.

ಮಲ್ಲಿಕ್ ನಿಗೆ ಹಾಗೆ ಮಾಡಲೇ ಬೇಕಾಯ್ತು. ಇದು ಸಿಮೆಂಟ್ ಅಲ್ಲ, ನಿಜವಾಗಿ ಹೇಳಬೇಕೆಂದರೆ ಇವು ಹಾರೋ ಬೂದಿ, ನನ್ನ ಕಣ್ಣಿಗೆ ಮಣ್ಣೆರಚಲು ಇದನ್ನ ತೋರಿಸುತ್ತಿದ್ದೀರಲ್ಲ..?
ಹೇಳಿ ಇಲ್ಲಿಗೆ ಕೆಲಸಕ್ಕೆಂದು ಬಂದ ಸಿಮೆಂಟ್ ಎಲ್ಲಿಗೆ ಹೋದುವು ಹೇಳಿ ಇಲ್ಲದಿದ್ದರೆ ಈಗ ಪೋಲೀಸ್ ಕರೆಸುತ್ತೇನೆ ಎಂದ ತ್ಯಾಂಪ.

ವಿಷಯ ತಿಳಿಸಲೇ  ಬೇಕಾಯ್ತು.


ಕಾಂಕ್ರೀಟ್ ಇಟ್ಟಿಗೆಗಳು

ಮಲ್ಲಿಕ್ ನೀವು ಈ ಕಾಂಕ್ರೀಟ್ ಇಟ್ಟಿಗೆಗಳ ಗುಣ ಮಟ್ಟ ಹೇಗೆ ಉಳಿಸಿಕೊಳ್ಳೂತ್ತೀರಿ.

ಸರ್ ಅದೂ, ನಮ್ಮಲ್ಲಿ ಅದನ್ನ ಪರೀಕ್ಷಿಸುವ ಯಂತ್ರವಿದೆ ಸರ್.
ನಮ್ಮ ಒಡಂಬಡಿಕೆಯಲ್ಲಿ ಅದರ ಗುಣಮಟ್ಟದ ಮಾಪನ ಎಷ್ಟಿರಬೇಕೆಂತ ಬರೆದಿದೆ .
ಮೂವತೈದು ಸರ್.
ಸರಿ ನಾನು ಹೇಳಿದ ಮೂರು ನಾಲ್ಕು ಇಟ್ಟಿಗೆಗಳನ್ನು ಪರೀಕ್ಷಿಸಿ ತೋರಿಸಿ.  ಆಯ್ತಾ..??

ಸರಿ ಸರ್.


ತ್ಯಾಂಪನ ಇದುರೇ ಪರೀಕ್ಷಿಸಲಾಯ್ತು.
ಎರಡು ಇಟ್ಟಿಗೆಗಳ ಮಾಪನ ಹದಿನೇಳು ತೋರಿಸಿದರೆ ಮತ್ತು ಇನ್ನೆರಡು ಅದಕ್ಕಿಂತಲೂ ಕಡಿಮೆ.
ನೋಡಿ ಇಲ್ಲಿ ಎಷ್ಟಿವೆ ಇಟ್ಟಿಗೆಗಳು ಸುಮಾರು ಮೂವತ್ತುಸಾವಿರ ಸರಿ ಇವೆಲ್ಲವನ್ನೂ ರಿಜೆಕ್ಟ್ ಮಾಡಿಬಿಡಿ.
ಇವುಗಳ ಜತೆ ನೀವು ಹಿಂದೆ, ಉಪಯೋಗಿಸಿದ ಎಲ್ಲಾ ಗೋಡೆಗಳನ್ನೂ ಕೆಡಹಿಬಿಡಿ ಆಯ್ತಾ..??

 ಕಾಂಕ್ರೀಟ್..

ನೀವು ಈ ಸಿದ್ಧ ಪಡಿಸಿದ ಕಾಂಕ್ರೀಟ್ ತರಿಸುತ್ತೀರಲ್ಲ ಅದರ ಗುಣ ಮಟ್ಟದ ಪರೀಕ್ಷೆ ಹೇಗೆ ಮಾಡುತ್ತೀರಾ?.
ನಾವು ಘನ ಆಕೃತಿಯ ಸಿಮೆಂಟಿನಾಕಾರ ಮಾಡಿಕೊಂಡು ಅದನ್ನ ನಮ್ಮ ಪರೀಕ್ಷಾ ಯಂತ್ರದಲ್ಲಿ ಪರೀಕ್ಷಿಸುತ್ತೇವೆ ಸರ್.
ಅದು ಸರಿ ಆದರೆ ಎಷ್ಟು ಕಾಂಕ್ರೀಟ್ ಬಂತು ಅಂತ ಹೇಗೆ ಗೊತ್ತಾಗುತ್ತದೆ?

ಅದು ತುಂಬಾ ಸುಲಭ ಸರ್.. ತ್ಯಾಂಪನಿಗೆ ಏನೂ ತಿಳೀಯದೆಂಬಂತೆ ಹೇಳಿದ ಮಲ್ಲಿಕ್.
ಈಗ ಈ ಕಾಂಕ್ರೀಟ್ ಗಾಡಿ ಬರುತ್ತದಲ್ಲ ತ್ಯಾಂಪ ಅವರೇ
ಸರಿ
ಅದು ಪೂರ್ತಿಯಾಗಿ ಬಂದರೆ ಆರರಿಂದ ಏಳು ಘನ ಮೀಟರ್ ಇರುತ್ತದೆ.

ಅದನ್ನ ಹೇಗೆ ನಿರ್ಧರಿಸುತ್ತೀರಾ..?

ಅದಕ್ಕೆ ಅವರ ಚೆಕ್ ಲಿಸ್ಟ್ ಮತ್ತು ಟ್ರಿಪ್ ಶೀಟ್ ನೋಡಿದರೆ ಗೊತ್ತಾಗುತ್ತದೆ.

ಸರಿ ಅವರು ಹೇಳುತ್ತಾರೆ ನೀವು ನಂಬುತ್ತಾರೆ, ಮೇಲಿನ ನಿಮ್ಮ ಸಿಮೆಂಟ್ ಲೆಕ್ಕದ ಹಾಗೆ ಮಾಡಿದರೆ, ನಿಮಗೆ ಹೇಗೆ ಗೊತ್ತಾಗುತ್ತಾಗುತ್ತದೆ..?

ಹೌದಲ್ಲಾ ಹೇಗೆ ಗೊತ್ತಾಗುತ್ತದೆ , ಇಲ್ಲಿಯವರೆಗೆ ತಾನು ಆ ದಿಸೆಯಲ್ಲಿ ಯೋಚಿಸಿರಲಿಲ್ಲ. ಅವರು ಕೊಟ್ಟ ಟ್ರಿಪ್ ಶೀಟುಗಳನ್ನು  ಫೈಲಿನಲ್ಲಿ ಇಡುತ್ತಿದ್ದ ಅಷ್ಟೇ.

ಹಾಗಾದರೆ ಏನು ಮಾಡಬೇಕು.?

ನೀವೇ ಹೇಳಿಸರ್.

.ಬಾಣ ನೇರ ತಾಕಿತು.

ತ್ಯಾಂಪ ಸ್ವಲ್ಪ ಹೊತ್ತು ಸುಮ್ಮನಾದ.

ಹೇಳಿ ಹೇಳಿ ಸರ್....

ಮಲ್ಲಿಕ್ಕ್ ಗೆ ಒಂದು ಒಳ್ಳೆಯ ಅವಕಾಶ ಸಿಕ್ಕಿತ್ತು.

ತ್ಯಾಂಪ ಯೋಚಿಸುತ್ತಿದ್ದ.

ನಿಮಗೂ ಗೊತ್ತಿಲ್ಲ ಅಲ್ವಾ ಸಾರ್, ಸಾಮಾನ್ಯವಾಗಿ ಇವರೆಲ್ಲಾ ಮೋಸ ಮಾಡುವುದಿಲ್ಲ ಸಾ.

ಅವರು ಮಾಡುವುದಿಲ್ಲ ,ಆದರೆ ನಾವು ಸಹಾ, ನೀವೂ ಮೋಸ ಮಾಡುವುದಿಲ್ಲ ಅಂತಲೇ ನಿಮಗೆ ಈ ಕೆಲ್ಸ ಕೊಟ್ಟದ್ದು, ಆದರೂ ಮಾಡಿದಿರಲ್ಲ. ನಿಮ್ಮ ಪ್ರಕಾರ ಆದರೆ ನಿಮಗೆ ಯಾರೂ ಮೋಸ ಮಾಡಬಾರದು  ಅಲ್ವಾ..?? ಎಂತ ತರ್ಕ.  ಸರಿ ನೀವು ಕಬ್ಬಿಣವನ್ನು ಹೇಗೆ ತರುತ್ತೀರಿ

ಲಾರಿಯಲ್ಲಿ ಸರ್

ಸಾಮಾನ್ಯ ಪ್ರಶ್ನೆ ಯಾಕೆ ಕೇಳುತ್ತಿದ್ದಾನೆ ಈತ ಇದೂ ಗೊತ್ತಿಲ್ಲವಾ ಅನಿಸಿತ್ತು .

ಅದರ ತೂಕವನ್ನು ಹೇಗೆ ನೋಡೂತ್ತೀರಾ?

ಅದೇ ಭಾರ ಮಾಪಕದಲ್ಲಿ..

ಹೇಗೆ ವಿವರಿಸಿ..ಸರ್ ತುಂಬಿದ ಲಾರಿಯನ್ನೊಮ್ಮೆ ತೂಕ ಮಾಡುತ್ತೇವೆ ಸಾರ್, ಅದೇ ರೀತಿಯಲ್ಲಿ ಆ ಗಾಡಿಯಲ್ಲಿರುವ ಕಬ್ಬಿಣವನ್ನು ಖಾಲಿ ಮಾಡಿದ ಮೇಲೆ ಪುನಃ ತೂಕ ಮಾಡಿ ವ್ಯತ್ಯಾಸ ನೋಡುತ್ತೇವೆ., ತುಂಬಾ ಸಿಂಪಲ್ ಸಾ.

ಹಾಗಾದರೆ ಈ ಕಾಂಕ್ರೀಟ್ ಗಾಡಿಯನ್ನೂ ಅದೇ ರೀತಿ ಮಾಡಬಹುದಲ್ಲಾ ಸಾ.

ತ್ಯಾಂಪ ಅದೇ ದನಿಯಲ್ಲಿ ಉತ್ತರಿಸಿದ್ದ.

ಮಲ್ಲಿಕ್ ದಿಗ್ಭ್ರಮೆಗೊಂಡ,

ಇವನಾ ಅ ಬ ಪೆ

ಅಲ್ಲಲ್ಲ

ಆಗ ಮಲ್ಲಿಕ್ ನಿಗನ್ನಿಸಿತು ಇವನು ಸಾಮಾನ್ಯನಲ್ಲ....





೧೪. ಪತ್ತೆದಾರ ತ್ಯಾಂಪ.




ತಡಿ ನಿಲ್ಲುಈ ಸಿಮೆಂಟ್ ಮತ್ತು ಮರಳು ಹ್ಯಾಗೆ ಮಿಕ್ಸ್ ಮಾಡ್ತೀರಾ? ಗಾರೆಗೆ?

ತ್ಯಾಂಪ ಕೇಳಿದ್ದು ಕೆಲಸ ಮಾಡುತ್ತಿರುವವನ ಬಳಿ.

ಒಂದಕ್ಕೆ ಹತ್ತು ಸಾರ್.

ಅಂದರೆ

ಒಂದು ಸಿಮೆಂಟ್ ಗೆ ಹತ್ತು ಮರಳು

ಇಲ್ಲಿ ಮಾಡಿದ್ದೆಲ್ಲವೂ ಇದೇ ದಾಮಾಶಯದಲ್ಲಾ...ಹೌದು ಸಾರ್

ಎಷ್ಟು ದಿನದಿಂದ ಗಾರೆ ಕೆಲಸ ಶುರು ಮಾಡಿದ್ದೀರಾ..??

ಕಳೆದ ಹತ್ತು ದಿನದಿಂದ.

ಇದು ಮಲ್ಲಿಕ್ ಅವರಿಗೆ ಗೊತ್ತಾ,

ಅವರೇ ಹೇಳಿದ್ದು ಸಾ.

ಇದಕ್ಕೇನು ಹೇಳುತ್ತೀರಾ ಮಲ್ಲಿಕ್ಕ್ ಅವರೇ..? ನಿಮ್ಮ ಪ್ರಕಾರ ನಿಮ್ಮ ನಮ್ಮ ಒಡಂಬಡಿಕೆಯಲ್ಲಿ ಎಷ್ಟೂ ಮಿಕ್ಸ್ ಮಾಡಬೇಕೆಂತ ಬರೆದಿದೆ?

ಒಡಂಬಡಿಕೆ ಅಂದ್ರೆ ಏನು ಸಾರ್..?

ಕಾಂಟ್ರೇಕ್ಟ್ ಅಗ್ರಿಮೆಂಟ್

ಹಾಗೆ ಹೇಳಿ ಸಾರ್ ಕನ್ನಡದಲ್ಲಿ, ನೀವು ಬೇರೆ ಭಾಷೆಯಲ್ಲಿ ಹೇಳಿದ್ರೆ ಹೇಗೆ. ನಾನು ಏನೋ ಅಂತಿದ್ದೆ, ನಾವದಕ್ಕೆ ಸೀ ಏ ಅಂತೀವಿ.

ಅಗ್ರಿಮೆಂಟ್ನಲ್ಲಿ ಎಷ್ಟು ಸಿಮೆಂಟ್ ಮರಳಿನ ಮಿಕ್ಸ್ ಇರಬೇಕು

ಅದೂ ಒಂದಕ್ಕೆ ನಾಲ್ಕು ಮತ್ತು ಒಂದಕ್ಕೆ ಆರು ಸರ್.

ಇದಕ್ಕೆ ಕಟ್ಟಡದ ಹೊರಗಿನ ಗಾರೆಗೆ ..?

ಒಂದಕ್ಕೆ ನಾಲ್ಕು ಸರ್.

ಹಾಗಿದ್ದರೆ ಒಂದುಪಾಯ ಮಾಡಿ ಇಲ್ಲಿಯವರೆಗೆ ಮಾಡಿದ್ದೆಲ್ಲವೂ ಹೀಗೆ ಅಂತ ಬರೆದು ಕೊಡಿ, ಮತ್ತೆ ನಿಮ್ಮ ಕೆಲಸವೆಲ್ಲವೂ ತಿರಸ್ಕೃತವಾಗಿದೆ ಅಂತ ಬರೆದು ಕೊಡ್ತಾ ಇದ್ದೇನೆ ಇಲ್ಲಿಯವರೆಗೆ ಮಾಡಿದ್ದು ಯಾವುದೂ ಸ್ವೀಕೃತವಲ್ಲ, ನೀವೀಗ ನಿಮ್ಮದೇ ಖರ್ಚಿನಲ್ಲಿ ನಮ್ಮ ಅಗ್ರಿಮೆಂಟ್ ನಲ್ಲಿ ಇದ್ದ ಗುಣಮಟ್ಟದ ಗಾರೆಯನ್ನೇ ಮಾಡಿಕೊಡಬೇಕು, ಈ ತಿರಸ್ಕೃತವಾದ ಗಾರೆಯನ್ನು ಸಂಪೂರ್ಣವಾಗಿತೆಗೆಸಿ, ಹೊಸದಾಗಿ ನಮ್ಮ ಅಗ್ರಿಮೆಂಟನಲ್ಲಿದ್ದಂತದ್ದೇ ಗುಣಮಟ್ಟದ ಗಾರೆಯನ್ನು ಮಾಡಿಸಿತೋರಿಸಬೇಕು. ಇನ್ನು ಮುಂದೆ ನೀವು ಕಳಪೆ ಮಟ್ಟದ ರೀತಿಯಲ್ಲಿ ಕೆಲಸ ಮಾಡಹೋದರೆ ನಿಮ್ಮ ಈ ಒಡಂಬಡಿಕೆಯನ್ನೇ ಮುಟ್ಟುಗೋಲು ಹಾಕಲಾಗುವುದು.

ಸಾ.....

ಗೊತ್ತಾಯ್ತಲ್ಲ ಸಾ..??

ಗೊತ್ತಾಯ್ತು ಸಾ.

>>>>>>>>>

ಎಲ್ಲಾ ರೆಡಿಯಾಗಿತ್ತು. ಸಿದ್ಧ ಪಡಿಸಿದ ಕಾಂಕ್ರೀಟನ್ನು ತುಂಬಿಕೊಂಡು ಮೊದಲು ಬಂದ ಗಾಡಿ ನಿಂತಿತ್ತು ಮಾಡಿನಲ್ಲಿ (Roof ) ಕಾಂಕ್ರೀಟ್ ಹಾಕಲು. ಅದರ ಹಿಂದೆ ಇನ್ನೂ ನಾಲ್ಕು ಗಾಡಿಗಳು ಕಾಯುತ್ತಿದ್ದವು ಸರದಿಯಲ್ಲಿ.

ಇನ್ನೇನು ಅದರ ಮಚ್ಚಿನ ಮೌಲ್ಡ್ ನಲ್ಲಿ ಕಾಂಕ್ರೀಟನ್ನು ಸುರಿಯಬೇಕು .

ತಡೆದ ತ್ಯಾಂಪ.

ನಿಲ್ಲಿ.

ಇಲ್ಲಿ ಮಚ್ಚಿಗೆ ಹಾಕಿದ್ದ ಸರಳುಗಳೆಲ್ಲಾ ಸರಿಯಾಗಿವೆ ಅಂತ ಯಾರು ಪರೀಕ್ಷಿಸಬೇಕು?

ಅದೂ ಕನ್ಸಲ್ಟೆಂಟ್ ಸಾ

ಅವರು ಪರೀಕ್ಷಿಸಿ ಬರೆದು ಕೊಟ್ಟ ಪತ್ರವೆಲ್ಲಿದೆ?

ಅದೂ, ಅವರು ನೀವು ಈಗ ಲ್ಕಾಂಕ್ರೀಟ್ ಮಾಡಿಸಿ ನಾನು ಆಮೇಲೆ ಬರೆದು ಕೊಡ್ತೇನೆ ಅಂದಿದ್ದರು ಸಾ.

ಇಲ್ಲ ಕೂಡಲೇ ಅವರನ್ನು ಕರೆಸು ಪರೀಕ್ಷೆ ಮಾಡಿಸಿ, ಅವರು ಪತ್ರ ಕೊಟ್ಟ ಮೇಲೆಯೇ ನೀವು ಕಾಂಕ್ರೀಟ್ ಮಾಡಬಹುದಷ್ಟೇ.

ಅದಕ್ಕೆ ಸುಮಾರು ಮುಕ್ಕಾಲು ಗಂಟೆ ಸಮಯ ಹಿಡಿಯಿತು. ಅದರಲ್ಲೂ ಕೆಲವು ಕಬ್ಬಿಣದ ಸರಳುಗಳನ್ನೂ ಹಾಕಿಯೇ ಇರಲಿಲ್ಲ ಮಲ್ಲಿಕ್.

ಇನ್ನಾದರೂ ಹಾಕಬಹುದಲ್ಲ ಸಾರ್ ಕಾಂಕ್ರೀಟ್..??

ಇಲ್ಲ ತಡೆಯಿರಿ.

ಮಲ್ಲಿಕ್ " ಏನಾಯ್ತು ಸಾರ್ ಎಲ್ಲಾ ಸರಿಯಾಗಿದೆಯಲ್ಲ..??"

ಇಲ್ಲಿ ಬಂದ ಕಾಂಕ್ರೀಟ್ ಗ್ರೇಡ್ ಯಾವುದು?

ಎಂ ೨೦ ಸಾ.

ನನಗೆ ಇದರ ಬಗೆಗಿನ ಎಲ್ಲಾ ವಿವರ ತರಿಸಿ ತೋರಿಸಿ ನಮ್ಮ ಅಗ್ರಿಮೆಂಟಲ್ಲಿ ಯಾವ ಗ್ರೇಡ್ ಬರೆಯಲಾಗಿದೆ ಇಲ್ಲಿಗೆ ಬಂದ ಕಾಂಕ್ರೀಟ್ ಯಾವ ಗ್ರೇಡ್ ನದ್ದು ಅಂತ.ಮತ್ತೆ ಈ ಕಾಂಕ್ರೀಟ್ ಗೆ ಉಪಯೋಗಿಸಿದ ವಸ್ತುಗಳು ಸಿಮೆಂಟ್ ಮರಳು ಜಲ್ಲಿ ಇತ್ಯಾದಿಯವು ಏನಿರಬೇಕಿತ್ತು ಈಗ ಏನಿವೆ ಅದನ್ನೂ ತೋರಿಸಿ. ಈ ಗಾಡಿಯಲ್ಲಿ ಎಷ್ಟು ಕಾಂಕ್ರೀಟ್ ಇದೆ.

ಆರು ಘನ ಮೀಟರ್ ಸರ್

ಅದು ಹೇಗೆ ಗೊತ್ತು

ಈ ಟ್ರಿಪ್ ಶೀಟ್ ನಲ್ಲಿದೆ,

ನನಗೆ ಅದಲ್ಲ ಬೇಕಾಗಿದ್ದುದು ನಿನ್ನೆ ನಾನು ಹೇಳಿದ್ದೆನಲ್ಲ ಆ ರೀತಿಯಲಿ ತಂದು ತೋರಿಸಿ. ಈಗಲೇ ಗಾಡಿಗಳನ್ನೆಲ್ಲಾ ಕಳುಹಿಸಿ ತೂಕ ಮಾಡಿಸಿ ತನ್ನಿ .

ವಿವರಗಳೆಲ್ಲಾ ಸೈಟಿನ ಆಫೀಸಿನಲ್ಲಿರದೇ ಇದ್ದುದರಿಂದ ಅವರ ಮುಖ್ಯ ಆಫೀಸಿಗೆ ಜನವನ್ನು ಕಳುಹಿಸಿ ತರಿಸಲಾಯ್ತು. ಅಷ್ಟರಲ್ಲಿ ತ್ಯಾಂಪ ಮಲ್ಲಿಕ್ ಹತ್ರ ಅವರ ಕನ್ಸಲ್ಟೆಂಟ್ ಗೆ ಕರೆ ಮಾಡಿಸಿ ಕೇಳಿದ.

ಸಿದ್ಧ ಪಡಿಸಿದ ಕಾಂಕ್ರೀಟ್ ಎಷ್ಟು ಗಂಟೆಯಲ್ಲಿ ಖಾಲಿ ಮಾಡಿಸಬೇಕು

ಉತ್ತರ ಬಂತು ಪ್ಲಾಂಟ್ ನಿಂದ ಹೊರಟ ೨.೩೦ ಯಿಂದ ಮೂರು ಗಂಟೆಗಳಲ್ಲಿ, ಇಲ್ಲವಾದರೆ ಅದರ ಗುಣ ಮಟ್ಟ ಮತ್ತು ಬಾಳಿಕೆ ನಮಗೆ ಬೇಕಾದಷ್ಟು ಇರುವುದಿಲ್ಲ.

ಈ ಗಾಡಿಗಳು ಬಂದು ಎಷ್ಟು ಹೊತ್ತಾಯ್ತು?

ಬರೇ ಎರಡೇ ಗಂಟೆ ಸಾ

ಮಲ್ಲಿಕ್ ಅವರೇ ಈ ಗಾಡಿ ಪ್ಲಾಂಟ್ ನಿಂದ ಹೊರಟದ್ದು ಎಷ್ಟು ಗಂಟೆಗೆ ಹೇಳಿ..?

ಎರಡು ಗಂಟೆಗೆ ಸರ್

ಈಗ ಎಷ್ಟು ಗಂಟೆ

ಈಗ ಐದೂವರೆ ಗಂಟೆ ಸಾ.

ಇಲ್ಲದಿದ್ದರೂ ಈ ಕಾಂಕ್ರೀಟ್ ನೀವು ಉಪಯೋಗಿಸುವ ಹಾಗೆ ಇಲ್ಲವೇ ಇಲ್ಲ

ಯಾಕೆ ಸರ್, ನೀವು ಹೇಳಿದ್ದ ಹಾಗೆ ಎಲ್ಲವನ್ನೂ ಮಾಡಿದ್ದೆನಲ್ಲ

ಮಿ ಮಲ್ಲಿಕ್, ನಿಮ್ಮ ಹತ್ರ ಇರುವ ಮಿಕ್ಸ್ ಡಿಸಾಯಿನ್ ಪ್ರಕಾರ ನೀವು ಹಾಕಬೇಕಾಗಿರುವುದು ಎಮ್ ೨೫ ಗುಣ ಮಟ್ಟದ ಕಾಂಕ್ರೀಟ್ ನ್ನು, ನೀವು ತರಿಸಿರುವುದು ಎಮ್ ೨೦ ರದ್ದು. ಅಷ್ಟೇ ಅಲ್ಲ, ನಿಮ್ಮ ಈ ಕಾಂಕ್ರೀಟ್ ನಲ್ಲಿ ಉತ್ತಮ ಮಟ್ಟದ ಮರಳು ( ನದಿ ತೀರದ್ದು) ಉಪಯೋಗಿಸಿಲ್ಲ. ಅಲ್ಲದೇ ಈಗ ಕಾಂಕ್ರೀಟ್ ಉಪಯೋಗಿಸ ಬೇಕಾದ ಅವಧಿಯೂ ಮೀರಿದ್ದರಿಂದ ಈ ಕಾಂಕ್ರೀಟನ್ನು ಹಿಂದಕ್ಕೆ ಕಳುಹಿಸಿ ಅಥವಾ ಏನು ಬೇಕಾದರೂ ಮಾಡಿ. ನಮಗೆ ಈ ಕಳಪೆ ಗುಣ ಮಟ್ಟದ ಕಾಂಕ್ರೀಟ್ ಬೇಡವೇ ಬೇಡ. ಅದೂ ಅಲ್ಲದೇ ದಯವಿಟ್ಟು ನೀವು ಇಲ್ಲಿಯವರೆಗೆ ಉಪಯೋಗಿಸಿದ ಕಾಂಕ್ರೀಟ್ ನ್ನು ಪ್ರಯೋಗ ಶಾಲೆಗೆ ಕಳುಹಿಸಿ ಅದರ ಗುಣ ಮಟ್ಟವನ್ನು ಪರೀಕ್ಷೆ ಮಾಡಿಸಬೇಕು. ಆಯ್ತಾ.

ಮಲ್ಲಿಕ್ ಕಾಂಕ್ರೀಟ್ ಗಾಡಿ ಹಿಂದೆ ಕಳುಹಿಸೋದ್ರಿಂದ ಆಗುವ ನಷ್ಟ ಲೆಕ್ಕ ಹಾಕಿದ. ಸುಮಾರು ನಾಲ್ಕು ಲಾರಿಗಳಿಂದ ಒಂದೂ ಕಾಲು ಲಕ್ಷ ನಷ್ಟ.

ನಿನ್ನೆ ಒಂದು ದಿನದಲ್ಲಿ ಒಟ್ಟು ಗುತ್ತಿಗೆದಾರನಿಗೆ ಆದ ನಷ್ಟ ಸುಮಾರು ನಾಲ್ಕು ಲಕ್ಷ ರೂಪಾಯಿಗಳು. ಅಬ್ಬ...

ಆತ ಮಾಲಿಕ್ ನಿಗೆ ಕರೆ ಮಾಡಿದ.

ಅರೆರೇ ನಮ್ಮ ಕಲ್ಲೂರಾಮ್ ಎಲ್ಲಿದ್ದಾರೆ?

ಅವರು ಬರ್ತಾ ಇಲ್ಲ ಸಾರ್, ಕಂಪೆನಿ ಇವರನ್ನು ಕಳುಹಿಸಿಕೊಟ್ಟಿದೆ

ಕಲ್ಲೂರಾಮ್ ನ ಹಾಗೇ ಇವರನ್ನೂ ಒಳಗೆ ಹಾಕಿಕೊಳ್ಳಲು ಪ್ರಯತ್ನಿಸಿ ನೋಡು.

ನೋಡ್ತೀನಿ ಸರ್... ಆದರೆ

ಏನು ಆದರೆ..?

ಕಲ್ಲೂರಾಮ್ ಹೇಳಿದ ಹಾಗೆ ಮಾಡಿದರೆ ನಮಗೆ ಸಿಗೋದು ಬರೇ ಇಪ್ಪತ್ತು ಪರ್ಸೆಂಟ್ ಲಾಭ, ಆದರೆ ನಮ್ಮ ಗುತ್ತಿಗೆಯಲ್ಲಿ ಇದ್ದ ಹಾಗೆ ಮಾಡಿದರೆ ನಮ್ಮ ಲಾಭವಲ್ಲದೇ ಐದು ಪ್ರತಿಶತ ಬೋನಸ್ ಕೂಡಾ ಇದೆ. ಆದರೆ ಗುಣ ಮಟ್ಟ ಕಳಪೆ ಅಂತ ಗೊತ್ತಾದರೆ ನಮಗೆ ಹತ್ತು ಪ್ರತಿಶತ ಪೆನಾಲ್ಟೀ ಕೂಡಾ ಇದೆ ಸಾರ್.

ಅರೆರೆ ಹಾಗಾದರೆ ಈ ಹೊಸಬ ಹೇಳಿದ ಹಾಗೇ ಮಾಡು,

ಸರಿ ಸಾರ್.

ಆ ದಿನ ಸಂಜೆ ಮಲ್ಲಿಕ್ ಇಲ್ಲದ ಸಮಯ ನೋಡಿ ಸೆಕ್ಯುರಿಟಿ ಯವನ ಗೆಳೆತನ ಮಾಡಿಕೊಂಡು ತ್ಯಾಂಪ ತನಗೆ ಬೇಕಾದ ಎಲ್ಲಾ ವಿಷಯಗಳನ್ನೂ ಹೊರಗೆಡಹಿದ. ಕಲ್ಲೂರಾಮ್ ಗೆಂತ ಕಳುಹಿಸಿದ ಗಾಡಿಯಾವುದು ಯಾವಾಗ ಅಂತ ಬೇರೆ ಎಲ್ಲಾ ತನಗೆ ಬೇಕಾದ ವಿವರ ಕಲೆ ಹಾಕಿಕೊಂಡ. ಎಲ್ಲ ವಿವರ ಅವನಿಗೆ ಸಿಕ್ಕಿತು. ಇದೆಲ್ಲವನ್ನೂ ತೆಗೆದುಕೊಂಡ ತ್ಯಾಂಪ ಅಲ್ಲಿಂದ ಸೀದಾ ನಂಜುಂಡಪ್ಪನವರ ಮನೆಗೆ ಹೊರಟ.

ಅವನಿಗೆ ಗೊತ್ತಿಲ್ಲದ ಒಂದೇ ವಿಷಯವೆಂದರೆ

ಕಲ್ಲೂರಾಮ್ ಅವನ ಈ ಬೆಳವಣಿಗೆಯನ್ನು ಎರಡು ದಿನಗಳಿಂದ

ಗಮನಿಸುತ್ತಲೇ ಇದ್ದರು ಎಂಬುದು.
 

No comments:

Post a Comment