Sunday, September 15, 2013

ನಾಟಕ 



ದ್ರೌಪತಿಯ ಮಾನಭಂಗದ ಸನ್ನಿವೇಶ.
ಮುತ್ತ ದ್ರೌಪದಿಯಾಗಿದ್ದ.
ತುಂಬಾನೇ ಸೀರಿಯಸ್ ಎಲ್ಲರೂ
ದುಶ್ಯಾಸನ ದ್ರೌಪದಿಯ ಸಿರೆಯೆಳೆದೆಳೆದು ಆಯಾಸ ಗೊಂಡಿದ್ದ.
ಎಷ್ಟು ಸೀರೆ ಉಟ್ಟಿದ್ದೆಯೇ ದ್ರೌಪದಿ..?
ಕೇಳಿಯೇ ಬಿಟ್ಟ ಮಾತಿಗೆ ಜೋಗ ಮುತ್ತನ್ನ
ಲೇಯ್ ಇವತ್ತು ನಾನು ಹನ್ನೆರಡಲ್ಲ ಹದಿಮೂರು ಸೀರೆ ಉಟ್ಟಿದ್ದೇನೆ ಕಣೊ ಎಂದಳು ದ್ರೌಪದಿ
ಕೃಷ್ಣ.... ಕೃಷ್ಣಾ ಕಾಪಾಡೂ.. 
ಆದರೆ........
ಕೃಷ್ಣ ಬರಲೇ ಇಲ್ಲ
ಆದಿನ
:
:

:
::
:
:
:
:
:
:

ಮುತ್ತ ತನ್ನ ಹನುಮಾನ್ ಚಡ್ಡಿಯಲ್ಲಿ ನಿಂತಾಗಲೇ ನೆನಪಾದದ್ದು
ಆತ ಹದಿಮೂರಲ್ಲ ಹನ್ನೆರಡೇ ಸೀರೆ ಸುತ್ತಿದ್ದೂ ಅಂತ.
ಆದಿನ ಆವನ ಹದಿಮೂರನೇ ಸೀರೆ ಉಟ್ಟ ಅವನ ಹೆಂಡತಿ ರಂಗದೆದುರೇ ಕುಳಿತಿದ್ದಳು.

ಮುತ್ತ ನನ್ನತ್ತ ತಿರುಗಿ
 ನೀನಾದರೂ ಹೇಳಬಹುದಿತ್ತಲ್ಲ, 
ಎಲ್ಲ ನಿನ್ನಿಂದಲೇ ಆದದ್ದ್ ಕಾಣ್ ಅಂದ

No comments:

Post a Comment