Sunday, September 15, 2013

ವೇಗೋತ್ಕರ್ಷ

ವೇಗೋತ್ಕರ್ಷ

ಕರೆ ಬಂತು ಮುತ್ತನದ್ದು....
ನಿನ್ನೆ ಒಂದ್ ಕಥೆ ಆಯ್ತ್ ಗೊತ್ತಾ..? ನನ್ನ ಕೇಳಿದ 
ಏನಾಯ್ತು?
ನಾನು ಗಾಡಿಯಲ್ಲಿ ಹೋಗ್ತಾ ಇದ್ದೆ, ಕಾಲು ಗಂಟೆಯಿಂದ ಒಂದ್ ಅಸಾಮಿ ನನಗೆ ಸೈಡೇ ಕೊಡೋದಿಲ್ಲ..
ನಾನೂ ಕಾದೆ ಕಾದೆ ಸಾಕಾಯ್ತು, ಮತ್ತೆ ಸ್ವಲ್ಪ ಸೈಡಿಗೆ ಹೋಗ್ತಾ ಇದ್ದ ಹಾಗೆ ಕಂಡಿತು
ಮತ್ತೆ ನುಗ್ಗಿಸಿಯೇ ಬಿಟ್ಟೇಯಾ?
ಹೌದು ಸಿಕ್ಕಿದ್ದೇ ಚಾನ್ಸ್ ಅಂತ ಒಳ ನುಗ್ಗಿಸಿಯೇ ಬಿಟ್ಟೆ
ಅವನ್ನನ್ನು ಓವರ್ ಟೇಕ್ ಮಾಡಿದೆಯಾ?
ಎಂತಾ ಓವರ್ ಟೇಕ್, ಅವನೇ ನನ್ನನ್ನು ಮಾಡ್ದ
ಏನಾಯ್ತೋ..??
ಮುಂದಿನವ ಸೈಡ್ ಬಿಟ್ಟದ್ ನಂಗಲ್ಲ
ಮತ್ತೆ
:
:
:
:
:
:
:
:
:
:
:

ಇದಿರು ಒಂದ್ ರೋಡ್ ರೋಲರ್ ಬರ್ತಾ ಇತ್ತು ಅದಕ್ಕೆ ಮರಾಯಾ ,
ಕಡೆಗೆ
ನಾನು ಮುಂದೆ ಬಂದ ವೇಗಕ್ಕೆ ರಸ್ತೆಯಲ್ಲಿ ಬೇರೆ ಜಾಗವೇ ಇರಲಿಲ್ಲ, ಅದಕ್ಕೇ
ಆ ರೋಡ್ ರೋಲರ್ ಗೇ ಕುಟ್ಟಿದ್ದೆ....
ಆದರೂ ಬದಕ್ಕಂಡೆಯಲ್ಲ, ದೇವರ ದಯೆ..
ಅಷ್ಟರಲ್ಲೇ ಅಯ್ಯೋ ಅನ್ನೋ ಶಬ್ದ
ಏನಾಯ್ತೋ..?
ರಸ್ತೆಯಲ್ಲಿ ಎಂತ ಆಟ ಅಂತ ರಾಡಿನಲ್ಲೇ ನಂಗೆ ಹೊಗೆ ಹಾಕ್ದ ಮಾರಾಯಾ..ನನ್ ಓನರ್
ಅಯ್ಯಯ್ಯೋ ನೋವು ತಡೆಯಾಕಲ್ಲ ಮರಾಯಾ...
ಮತ್ತೆ ಯಾಕೆ...
ಕರೆ ಕಟ್ಟಾಯ್ತು.

No comments:

Post a Comment