ಅವನಿಗೇನೋ ಲಾಭ ಇದೆ ಅಂತ ಕಾಣುತ್ತೆ ಅದಕ್ಕೇ ತೇಲುತ್ತಿದ್ದಾನೆ ಅಂದುಕೊಳ್ಳುತ್ತಿದ್ದರು..
ಆತ ಹೆಸರುವಾಸಿಯಾದ ಮೇಸ್ತ್ರಿ ಗುಂಡಪ್ಪನನ್ನು ಕರೆಸಿ ತನಗೊಂದು ಚೆಂದದ ಮನೆ ಕಟ್ಟಿಸ ಬೇಕಾಗಿದೆ ಎಂದ.
ಹಣದ ಬಗ್ಗೆ ನಿಮಗೆ ಕಾಳಜಿ ಬೇಡ, ಮನೆ ಮಾತ್ರ ಅಪರೂಪದ್ದಾಗಿ ಚೆನಾಗಿರಬೇಕು ಎಂದ ತ್ಯಾಂಪ.
ಸರಿ ಮನೆ ಆರಂಭವಾಯ್ತು.
ತ್ಯಾಂಪನ ಪ್ರತಿಸ್ಪರ್ಧಿ ಜೋಗ.
ಆತನೂ ರಹಸ್ಯವಾಗಿ ಮೇಸ್ತ್ರಿಯನ್ನು ಕರೆಸಿ ತ್ಯಾಂಪನ ಮನೆಯ ಹಾಗೇ ಇರುವ ಆದರೆ ಚೆನ್ನಾಗಿರೋ ಮನೆ ಕಟ್ಟಿಕೊಡಬೇಕೆಂದು ಕೇಳಿಕೊಳ್ಳುತ್ತಾನೆ.
ಹಣದ ಬಗ್ಗೆ ಯಾವುದೇ ಸಂಶಯ ಬೇಡ ಅಂತಲೂ ಒತ್ತೊತ್ತಿ ಹೇಳಿದ ಜೋಗ.
ಜೋಗನ ಮನೆಯೂ ಆರಂಭವಾಯ್ತು.
ಜನರೆಲ್ಲಾ ಉತ್ಸುಕರಾಗ್ಗಿ ನೋಡ ನೋಡುತ್ತಿದ್ದಂತೆ ಇವರಿಬ್ಬರ ಮನೆಯೂ ಸರ್ವಾಂಗಸುಂದರವಾಗಿ ಎದ್ದು ಬಂತು.
ಜೋಗ ಮತ್ತು ತ್ಯಾಂಪ ಒಂದು ಒಳ್ಳೆಯ ದಿನ ನೋಡಿ ಮನೆಯ ವಾಸದ ಶುಭಾರಂಭ ಮಾಡಿದರು.
ವಿಚಾರಿಸಲಾಗಿ ಗೊತ್ತಾಯ್ತು.......
.
.
.
.
.
.
.
ಅದು ಮೇಸ್ತ್ರಿ ಗುಂಡಪ್ಪನ ಮನೆ
ನನಗೆ ತಟ್ಟಂತ ನೆನಪಾದದ್ದು ಭೂತಯ್ಯನ ಮಗ ಅಯ್ಯ ಚಿತ್ರದ ವಕೀಲನ ಪಾತ್ರ!
ReplyDeleteಅರೆರೇ ಐನಾತೀ ಮೇಸ್ತ್ರೀ!
ಕಥನ ರೋಚಕವಾಗಿದೆ....
ನಿಮ್ಮ ಮೆಚ್ಚುಗೆಯೇ ಪುರಸ್ಕಾರವೆಮಗೆ, ಧನ್ಯವಾದಗಳು ಬದರಿಯವರೇ
ReplyDelete