Tuesday, March 24, 2015

ಇದುವೇ ಜೀವನ ೮ ಒಂದು ವಿಳಾಸದಲ್ಲಿನ ವಿಲಾಸ

ಒಂದು ವಿಳಾಸದಲ್ಲಿನ ವಿಲಾಸ


ಹರ್ಶ ಕಾಫೀ ಬಾರ್ ಎಲ್ಲಿದೆ ಗೊತ್ತಾ..?
ಗೊತ್ತಿಲ್ಯೇ
ಉತ್ತರ ನೇರ ಹಾಗೂ ಸ್ಪಷ್ಟವಿತ್ತು.
ಪಕ್ಕದಲ್ಲಿ ನಡೆದು ಬರುತ್ತಿರುವವನ ಕಣ್ಣುಗಳಲ್ಲಿನ ಪ್ರಶ್ನೆಯನ್ನು ನೋಡಿ ಪುನರುಚ್ಚರಿಸಿದೆ ನನ್ನ ಪ್ರಶ್ನೆಯನ್ನು.
ಸರಿಯಾದ ವಿಳಾಸ..?
ಆತನ ಪ್ರಶ್ನೆ ಸಿದ್ಧವಾಗಿತ್ತು.


ವಿಳಾಸ...
ಅವರು ನಂದಿನಿ ಹಾಲಿನ ಕೇಂದ್ರದೆದುರು ಅಂತಿದ್ದರು. ನನ್ನ ಗಲಿಬಿಲಿ ಆತನಿಗೆ ಅರ್ಥವಾಗಿತ್ತು
ಆದರೇನು ಇವನ ಉತ್ತರವೂ ನೇರವೇ,,!!
ಗೊತ್ತಿಲ್ಲ ಮುಂದೆ ಹೋಗಿ ಕೇಳಿ
ಆತ ಹೇಳಿದ ಹಾಗೇ...ಮುಂದುವರಿದೆ.
ಇನ್ನೊಬ್ಬ ತಾನೇ ಕೇಳಿದ..
ಆದರೆ ಸ್ವಲ್ಪ ವಿಭಿನ್ನ ದೃಷ್ಟಿ ಕೋಣ ಈತನದ್ದು..
ಎಲ್ಲಿಂದ ಬರ್ತಾ ಇದ್ದೀರಾ..? ಯಾರು ನೀವು..?
ಇಲ್ಲಿ ಈಗ ಇಂತಹಾ ಧಾರ್ಮಿಕ ಪ್ರಶ್ನೆಯ ಅಗತ್ಯ ಇದೆಯೇ ?
ಈ ಪ್ರಶ್ನೆಯ ಉತ್ತರ ಋಷಿ ಮುನಿಗಳಿಗೇ ಸರಿಯಾಗಿ ಗೊತ್ತಿಲ್ಲ, ಇನ್ನು ನನಗೆ..?
ಗೊತ್ತಾಗ್ಲಿಲ್ಲ. ಯಕಶ್ಚಿತ್ ಕೇಳಿದ್ದು ಹರ್ಶ ಕಾಫೀ ಬಾರ್ ನ ದಾರಿ.
ನನಗೆ ಉತ್ತರ ಬೇಕಾದರೆ ಆತನ ವಿಷಯ ಕೇಳಲೇ ಬೇಕಿತ್ತಲ್ಲ.
ಏನಾದರೂ ಸಿಗಬೇಕಿದ್ದರೆ ಕಳೆದುಕೊಳ್ಳಲೇ ಬೇಕಲ್ಲ.... ಸಮಯ..
ನನ್ನ ಪ್ರವರ ಬಿಚ್ಚಿದೆ.
ಹೌದಾ ನನ್ನದೂ ಒಂದು ಕಥಿ ಬರೀರಿ. ನಮ್ಮಲ್ಲಿ ಒಬ್ಬ ಉಗ್ರವಾದಿ ಇದ್ದಾಳೆ. ನನ್ನೆಲ್ಲಾ ವೈಯ್ಯಕ್ತಿಕ ಕೆಲಸಗಳಿಗೆ ಅಡ್ಡಗಾಲು ಹಾಕ್ತಾಳೆ. ಅಲ್ಲ ನನಗೆ ಸ್ವಂತಿಕೆಯೇ ಇಲ್ಲದ ಹಾಗೆ ಮಾಡಿದ್ದಾಳೆ.
ಸರಿಯಪ್ಪಾ.. ಈ ಕಥೆಯನ್ನು ನಾನು ಬರೆದರೆ ನಿಮಗೆ ಹೇಗೆ ನ್ಯಾಯ ದೊರಕಿಸಿದ ಹಾಗೆ ಆಗುತ್ತೆ?
ಅಷ್ಟಾದರೂ ನನಗೆ ಸಮಾಧಾನ ಸಿಗುತ್ತದಲ್ಲಾ ಸಾರ್. ನನ್ನ ಸಿಕ್ಕಾ ಪಟ್ಟೆ ಕಂಡಮ್ ಮಾಡ್ತಾಳೆ ಅಂತ ಬರೀರಿ ಸಾರ. ಸ್ವಲ್ಪ ಉಪ್ಪು ಖಾರ ಮಸಾಲೆ ಹಾಕಿ ಬರೀರಿ ಸಾರ್.
ನಾನು ಎಚ್ಚರಾದೆ..ನಾನು ರಿಪೋರ್ಟ್ರ್ ಕಣಪ್ಪಾ.. ವರದಿ ಮಾತ್ರ ಮಾಡೋದು ..?
ಹಾಗಾದರೆ ಮತ್ತೂ ಒಳ್ಳೆಯದೇ ಆಯ್ತಲ್ಲ ಸಾರ್, ನಿಮ್ಮ ಈ ವರದಿಯಿಂದ ನನ್ನಂತಹ ಗಂಡಂದಿರಿಗೆ ಒಳ್ಳೆಯದಾಗ್ತದಲ್ಲಾ ಸಾರ್..? ನನ್ನ ಹೇಗೆಲ್ಲಾ ಟಾರ್ಚರ್ ಮಾಡ್ತಾಳೆ ಅಂತ ಬರೀರಿ ಸಾರ್
ಏನೂ ಟಾರ್ಚರ್ರಾ..?
ಹೌದು ಸಾರ್ ಐದು ನಿಮಿಷ ನಾನು ಮನೆಗೆ ಹೋಗೋದು ತಡವಾದರೆ ಅರ್ಧ ಗಂಟೆ ಭಾಷಣ ಮಾಡ್ತಾಳೆ. ನಾನು ಅರ್ಧ ಗಂಟೆ ತಡ ಮಾಡಿದರಂತೂ ಮುಗಿದೇ ಹೋಯ್ತು. ಭಯಂಕರವಾಗಿ ಭಾಷಣ ಮಾಡೀ ಮಾಡೀ ನನ್ನ ತಲೆ ಚಿಟ್ಟು ಹಿಡಿಸಿ ಬಿಡ್ತಾಳೆ ಸಾರ್,
ನಿಮಗೆ ಈ ಪರಿಸ್ಥಿತಿಯಾಗಿದ್ದರೆ ಏನು ಮಾಡುತ್ತಿದ್ದಿರಿ ಯೋಚಿಸಿ ಸಾರ್.
ನಿಜ ಕಣಪ್ಪ, ನಾನಾದರೆ ಪ್ರಾಯಶಃ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೇನೋ.ಅನ್ನಿಸುತ್ತೆ...
ಹೌದಾ ಸಾರ್ ಅಷ್ಟು ಟಾರ್ಚರ್ ಕೊಡುತ್ತಿದ್ದರಾ ನಿಮ್ಮವರು..? ಇದ್ದುದರಲ್ಲಿ ನಾನೇ ವಾಸಿ ಹಾಗಾದರೆ,,?
ನಾನು ಏನು ತಪ್ಪು ಹೇಳಿದೆ ಯೋಚಿಸಿದೆ.. ಇಲ್ಲ ಅರ್ಥ ಆಗ್ಲಿಲ್ಲ.. ಹೋಗಲಿ ಇಲ್ಲೇ ಇದ್ದರೆ ನನಗೇ ತಲೆ ಸುತ್ತು ಬರುತ್ತೆ ಅನ್ನಿಸಿತು
ಅಂದ ಹಾಗೇ ಹರ್ಶ ಕಾಫೀ ಬಾರ್ ಗೊತ್ತಾ..?
ಅದಕ್ಯಾಕೆ ಸಾರ್... ತಲೆ ಬಿಸಿ. ನೀವಿರೋದೇ ಅದರ ಇದಿರಲ್ಲಿ.. ಸಾರ್
ಆಶ್ಚರ್ಯವಾಯ್ತು.. ತಲೆ ಎತ್ತಿ ನೋಡಿದೆ.
ಬೊರ್ಡ್ ಕಣ್ಣಿಗೆ ಬಿತ್ತು.

.."ಹರ್ಶ ಬಾರ್..."

1 comment:

  1. ಮಧ್ಯದಲ್ಲಿ ಕಾಫೀ ಬದಲು ಅಕಟಕಟಾ ಮದ್ಯವೇ!
    ಯಾರಪ್ಪ ಅವನು ತಲೆ ತಿಂಬೋ ಗಿರಾಕೀ!!!

    ReplyDelete