Monday, March 9, 2015

ಒತ್ತಡ ನಿರ್ವಹಣೆ

 - ವರ್ಗಾವಣೆ
ತ್ಯಾಂಪ ತುಂಬಾನೇ ಬಿಸಿ ( ಟೆನ್ಷನ್) ಯಲ್ಲಿದ್ದ.
ರಾತ್ರಿ ಹನ್ನೊಂದಾದರೂ ಮಲಗದೇ ಶಥ ಪಥ ತಿರುಗುತ್ತಿದ್ದ ತ್ಯಾಂಪನನ್ನು ಅವನ ಧರ್ಮ ಪತ್ನಿ ತ್ಯಾಂಪಿ ಕೇಳಿದಳು
ಏನಾಯ್ತು? ಯಾಕೆ ತಲೆ ಬಿಸಿ.
ನಂಗೆ ಒಂದು ಉಂಗುರ ಬೇಕಿತ್ತು...
ಕಳೆದ ತಿಂಗಳೆ ಹೊಸ ಸೂಟ್ ತಗೊಂಡಿದ್ದೆ ಅಲ್ಲವಾ..?
ಅದಕ್ಕೇ ಮ್ಯಾಚಿಂಗ್ ಉಂಗುರ ಬೇಕು ಐದು ಸಾವಿರ ಕೊಡಿ...
ನಿಂಗೇನು ತಲೆ ಗಿಲೆ ಕೆಟ್ಟಿದೆಯಾ..? ನಾನು ಪಕ್ಕದ ಮನೆ ಧರ್ಮಪ್ಪನವರಿಂದ ಹತ್ತು ಸಾವಿರ ಸಾಲ ತಗೊಂಡಿದ್ದೆ ಕಣೇ..
ಅದಕ್ಕೇ..?
ಇವತ್ತು ವಾಪಾಸ್ಸು ಕೊಡಬೇಕಿತ್ತು..
ಅದಕ್ಕೇ..?
ಆ ಸಾಲ ತೀರಿಸಲಾಗುತ್ತಿಲ್ಲ ....ಅದಕ್ಕೇ...
ಅಷ್ಟೇ ತಾನೇ ..? ನೀವು ನಿಶ್ಚಿಂತೆಯಿಂದ ಮಲಗಿರಿ, ನಾನು ಅದನ್ನು ಸರಿಪಡಿಸುತ್ತೇನೆ..
ತ್ಯಾಂಪ ಖುಷಿಯಾದ, ಇವಳು ಕೊಡುತ್ತಾಳೆನೋ, 


.................
ತ್ಯಾಂಪಿ ಸೀದಾ ಪಕ್ಕದ ಮನೆಗೆ ಹೋದಳು.
ಅಲ್ಲಿ ತ್ಯಾಂಪನ ಗೆಳೆಯ ಧರ್ಮಪ್ಪ ಇದ್ದ.
ಧರ್ಮಪ್ಪ್ನೋರೇ ತ್ಯಾಂಪನವರು ನಿಮಗೆ ಹತ್ತು ಸಾವಿರ ಕೊಡಬೇಕಿತ್ತಲ್ವಾ..?
ಹೌದು, ಇವತ್ತು ಕೊಡುತ್ತೇನೆ ಅಂದಿದ್ದಾರೆ... ನಿಮ್ಮ ಕೈಗೆ ಕೊಟ್ಟರೇ..?
ತ್ಯಾಂಪಿ ಎಂದಳು
ಸ್ವಾಮೀ ಧರ್ಮಪ್ಪನವರೇ ತ್ಯಾಂಪನವರು ಈ ತಿಂಗಳು ನಿಮ್ಮ ಹಣ ಹಿಂದಿರುಗಿಸಲಾರರು..
ಏನು ಬೇಕಾದರು ಮಾಡಿಕೊಳ್ಳಿ, ಇನ್ನು ಅವರು ಕೊಡುವುದು ಮುಂದಿನ ತಿಂಗಳೇ...!!
ತ್ಯಾಂಪನ ಸಮಸ್ಯೆಯ ವರ್ಗಾವಣೆಯಾಯ್ತು...
...............................
ಮನಗೆ ಬಂದವಳೇ ತ್ಯಾಂಪಿ ಎಂದಳು..
ಸರಿ ನಿಮ್ಮ ಸಮಸ್ಯೆ ದೂರವಾಯ್ತಲ್ಲ,
ಥ್ಯಾಂಕ್ಸ್...
ಅದೆಲ್ಲಾ ಬೇಡ ಬಿಡಿ ಗಂಡ ಹೆಂದಿರ ಮಧ್ಯೆ ಇದ್ಯಾಕೆ..
ತ್ಯಾಂಪ ಖುಷ್...!!! ಮತ್ತೆ. ನಿನಗೇನು ಬೇಕು ಹೇಳು.?
.......
ಕೊಡಲೇ ಬೇಕೆಂದಿದ್ದರೆ ಗೆ..!!!
ಹೇಳು ಚಿನ್ನ ನಿನಗೇನು ಬೇಕು??
ನಿಮ್ಮ ಹಣ ಉಳಿಸಿದೆನಲ್ಲ..
ಹೌದು ಅದಕ್ಕೇ..?
ಹತ್ತು ಸಾವಿರದ ಉಂಗುರ ತಂದು ಕೊಡಿ ..
!!!????!!!!
.
ತ್ಯಾಂಪನ ಇನ್ನೊಂದು ಸಮಸ್ಯೆ ಶುರು..
.
.
.
ಪಾಪ ತ್ಯಾಂಪ

No comments:

Post a Comment