ಬಣ್ಣ
ಬಣ್ಣ ಹೊಸತನ
ಬಣ್ಣ ಹೊಸ ದಿನ
ಬಣ್ಣ ಕನಸಿನ ನೆನಸ ಸೀಂಚನ
ಬಣ್ಣ ಜೀವನ
ಬಣ್ಣ ಪಾವನ
ಬಣ್ಣ ಕಳೆಯೇ ಹಳೆಯ ಕಳೆಯನ
ಬಣ್ಣ ಬಣ್ಣದೇ
ಬಣ್ಣವೇರಿರೆ ವರಸೆಯಲಿ ಹೊಸ
ಬಣ್ಣ ಬಳಿದುದು
ಬಣ್ಣವೇರಿರೆ ವರಸೆಯಲಿ ಹೊಸ
ಬಣ್ಣ ಬಳಿದುದು
ಬಣ್ಣವಿಳಿಯಲಿ
ಬಣ್ಣದಿಳೆಯಲಿ ಕಳೆಯಳಿದ ಹೊಸ
ಬಣ್ಣ ತಳೆವುದು
ಬಣ್ಣದಿಳೆಯಲಿ ಕಳೆಯಳಿದ ಹೊಸ
ಬಣ್ಣ ತಳೆವುದು
ತೊಳೆವ ನೀರಿಗೆ ಇಲ್ಲ ಬಣ್ಣವು
ReplyDeleteತೊಳೆದ ಮೇಲೆ ಕಂಡ ನಿಜ ಬಣ್ಣ!
ಹೋಳಿಗಾದರು ಬಳಿದ ಬಣ್ಣವು
ಪ್ರೀತಿ ಇರಲಿ, ಕೇಳಿ ಬಳಸಿ ಬಣ್ಣವು.
ಧನ್ಯ-ನಿಮ್ಮ ಮೆಚ್ಚುಗೆಯ ನುಡಿಗಳಿಗೆ ಬದರಿ
ReplyDelete