Tuesday, March 24, 2015

ಇದುವೇ ಜೀವನ ೭. ಇದಾ.. ಜೀವನ..??


೭. ಇದಾ.. ಜೀವನ..??
ನೇರ ಬಸ್ಸು ಸಿಗಲಿಲ್ಲವೆಂತ ಜಿಗಣಿಯಿಂದ ಬನ್ನೇರುಘಟ್ಟಕ್ಕೆ ಬಸ್ಸು ಹತ್ತಿದ್ದೆ.
ಬನ್ನೇರುಘಟ್ಟದಲ್ಲಿಳಿದೆ.
ಬಸ್ಸು ಬರಲು ಇನ್ನೂ ಸಮಯವಿತ್ತು.
ಹತ್ತಿರದಲ್ಲಿ ತಳ್ಳುಗಾಡಿಯಲ್ಲಿ ಕೆಂಡ ಸಂಪಿಗೆಯಂತಹ ಹಲಸಿನ ಹಣ್ಣಿನ ತೊಳೆಗಳನ್ನು ಮಾರಾಟ ಮಾಡುತ್ತಿದ್ದುದನ್ನು ಕಂಡೆ.
ನಿಮಗೆ ಗೊತ್ತಲ್ಲ ನಾನು ಈ ಹಣ್ಣಿನ "ಜಮ- ಬೀಸಣಿಗೆ" ಅಂತ.


ಇಡೀ ಹಲಸಿನ ಹಣ್ಣು ಕೊಂಡರೆ ಅದನ್ನು ಬಿಡಿಸುವ ಅಧ್ವಾನ ಮಹಾ ಭಯಂಕರ ಅಲ್ವೇ..?
ಅದಕ್ಕೇ ಬೇಕಾದಷ್ಟೇ ಬೇಕಾದಾಗಲೆಲ್ಲಾ ಕೊಳ್ಳುವ ಈ " ವ್ಯಾಪಾರ" ನನ್ನಂತವರಿಗೆ ಬಲು ಅನುಕೂಲ
ನನ್ನ ತುಡಿತದ ಲಹರಿ...........ನನ್ನ ತಳ್ಳೋ ಗಾಡಿಯತ್ತ ಜಾರಲು ಪ್ರೇರೇಪಿಸಿತು.
ಹತ್ತಿರ ಹೋದೆ,
ನನ್ನ ಕಿಸೆಯಿಂದ ಹಣ ತೆಗೆದು ಗಾಡಿಯವನಿಗೆ ಇತ್ತು ಇನ್ನೇನು ಹಣ್ನನ್ನು ತೆಗೆದುಕೊಳ್ಳ ಬೇಕು.
ನನ್ನ ದೃಷ್ಟಿ ಅಚಾನಕ್ಕಾಗಿ ಹಣ್ಣು ಮಾರಾಟ ಮಾಡುತ್ತಿದ್ದಾತನತ್ತ ಹರಿಯಿತು.
ಅವನು ಮಾಡುತ್ತಿದ್ದ ಕಾರ್ಯ ನೋಡಿ ದಂಗಾದೆ.
ಕೈಯ್ಯಿಂದ ಹಣ ತೆಗೆದು ಅವನತ್ತ ಚಾಚುತ್ತಿದ್ದ ಕೈ ಅದೇ ವೇಗದಲ್ಲಿ ಹಿಂದಕ್ಕೆ ಹೋಯ್ತು.
.
.
.
.
ಹಣ್ಣು ಕತ್ತರಿಸುವ ತೊಳೆ ಬಿಡಿಸುವ ದೇಶೀ ಚೂರಿಯ ಹರಿತವಾದ ಭಾಗದಿಂದ ಆತ ತನ್ನ ಅಂಗಾಲಿನಲ್ಲಾದ ವೃಣದ ಸುತ್ತ ಗೀರುತ್ತಾ ತನ್ನ ತುರಿಕೆ ಶಮನಿಸಿಕೊಳುತ್ತಿದ್ದ...
ಆ ಕಳ್ಳ ಕೊರಮ
ಅತೀ ಕಷ್ಟದಲ್ಲಿ.....
ನನ್ನ ವಾಂತಿಯ ಅನೂಹ್ಯ ತುಡಿತವನ್ನು ಸಂತೈಸಿಕೊಳ್ಳುತ್ತಾ ಜನ್ಮದಲ್ಲಿ....
............................................................................

ನೀವೇ ಯೋಚಿಸಿ ಉಳಿದದ್ದು....

ನನಗೆ ಈಗ ಇದನ್ನು ಯೋಚಿಸಲೂ ಹೇವರಿಕೆಯಾಗುತ್ತಿದೆ....
##

No comments:

Post a Comment