Tuesday, March 24, 2015

ಇದುವೇ ಜೀವನ ೯. ರಸ್ತೆ ಬದಿಯ ಗೂಡಂಗಡಿ ಮತ್ತು ಪಕೋಡಾ



 ರಸ್ತೆ ಬದಿಯ ಗೂಡಂಗಡಿ ಮತ್ತು ಪಕೋಡಾ

ನಾವು ಮಲೇಶ್ವರದಲ್ಲಿದ್ದಾಗಿನ ಘಟನೆಯಿದು.
ಕಚೇರಿಯಿಂದ ಮನೆಗೆ ಬರುತ್ತಿದ್ದೆ.
ಮಲ್ಲೇಶ್ವರಮ್ ಬಸ್ ನಿಲ್ದಾಣದಲ್ಲಿಳಿದು ಮನೆ ಕಡೆ ಹೆಜ್ಜೆ ಹಾಕುತ್ತಿದ್ದೆ.
ಸಂಪಿಗೆ ರಸ್ತೆಯ ಹನ್ನೊಂದನೇ ಅಡ್ಡರಸ್ತೆಯಲ್ಲಿಳಿಯುತ್ತಿದ್ದವ ಪಕ್ಕದಲ್ಲೇ ಬಿಸಿ ಬಿಸಿ ಬೋಂಡಾ ಮಾಡುತ್ತಿದ್ದ ಗೂಡಂಗಡಿಯವನನ್ನು ನೋಡಿದೆ.


ಮನುಷ್ಯ ಮಾತ್ರದ ಚಪಲ ಆ ಕ್ಷಣಕ್ಕೆ ಹತ್ತಿಕೊಂಡಿತು.
ಬಿಸಿ ಬಿಸಿ ಎಣ್ಣೆಯಳ್ಳಿ ತೇಲುತ್ತಿದ್ದ ಗರಿ ಗರಿ ಪಕೋಡಾ/ ಬೋಂಡಾ ನೋಡಿ ಅವನನ್ನು ಕೇಳಿದೆ.
ಅಂದ ಹಾಗೆ ನೀವು ಯಾವ ಎಣ್ಣೆ ಉಪಯೋಗಿಸುತ್ತೀರಾ?
ಅಂಗಡಿಯವ ಒಂದು ಪ್ಲಾಸ್ಟಿಕ್ ಪೊಟ್ಟಣ ತೋರಿಸಿ ಹೇಳಿದ ಇದೇ.
ಅದು ರಿಫಾಯಿಂಡ್ ಎಣ್ಣೆಯ ಖಾಲಿ ಪೊಟ್ಟಣ.
ಸಮಾಧಾನವಾಯ್ತು. ಹಾಗಾದರೆ ಸರಿ.
ಬೇರೆಯವರೆಲ್ಲಾ ಯಾವ್ಯಾವುದೋ ಎಣ್ಣೆ ಉಪಯೋಗಿಸಿ ಜನರ ಆರೋಗ್ಯ ಹಾಳೂ ಮಾಡುತ್ತಾರೆ.
..........................................
ಸ್ವಲ್ಪ ಅಂಗಡಿ ನೋಡಿಕೊಂಡಿರಿ ನಾನೀಗ ಬರುತ್ತೇನೆ,
ಅಂಗಡಿಯವ ಹೊರಟು ಹೋದ ಅದೆಲ್ಲಿಗೋ
ಸ್ವಲ್ಪ ಹೊತ್ತಿನ ನಂತರ ಆತ ಬಂದ
ಎಲ್ಲಿಗೆ ಹೋಗಿದ್ರೀ ಕೇಳಿದೆ.
ಪಕ್ಕದ ಬೀದಿಯಲ್ಲಿ ನನ್ನ ಗೆಳೆಯನ ಮನೆಗೆ .;..ತಿಂಡಿ ತಿಂದು ಬಂದೆ,
ಇಲ್ಲಿ ತಿನ್ನಬಹುದಿತ್ತಲ್ಲಾ
ಅಯ್ಯೋ ನಂಗೇನ್ ಹುಚ್ಚಾ..??
ಅಲ್ಲ ಇಂತಹ ಎಣ್ಣೆ ಉಪಯೋಗಿಸುತ್ತಿದ್ದೀರಾ ,
ನಿಮ್ಮದೇ ಅಡುಗೆ
ಅದಕ್ಕೇ ಎಲ್ಲಾ ಗೊತ್ತಿದ್ದೂ ತಿನ್ನಕಾಗತ್ತೇನ್ರೀ, ನೀವಾದರೆ ಸರಿ....
ಅಲ್ಲ ನೀವು ಇಂತಹ ಒಳ್ಳೆ ಎಣ್ಣೆ ಉಪಯೋಗಿಸುತ್ತಿದ್ದೀರಾ
ಅದೆಲ್ಲಾ ತೋರಿಸ್ಲಿಕ್ಕೆ ಮಾತ್ರ ಮರಾಯರೇ... ನಿಮ್ಮಂತಹವರಿಗೆ .......
ಬಿಡಿ ನಿಮಗೆ ಅರ್ಥ ಆಗಲ್ಲ
ಹಂಗಾರೆ ನಾವೆಲ್ಲಾ... ರೇಗುವವನಿದ್ದೆ.. ಆದರೆ ಊರ ಕಡೆಯವನು..
ಆದರೆ ಅವನ ಉತ್ತರ ನನ್ನನ್ನು ದಂಗು ಬಡಿಸಿತು.
ನಿಮಗಾದರೆ ಅಭ್ಯಾಸ ಇದೆ ಸಾರ್, ಏನ್ ತಿಂದ್ರ ಕೂಡಾ ಆಗತ್ತೆ ಆದ್ರೆ ನಮ್ಗೆ ಹಾಗಲ್ಲ ಅಲ್ವಾ..
ನಾವೇನ್ ನಿಮ್ಮ ಹಾಗೆ ಏ ಸಿ ರೂಮಲ್ಲಾ ಕೆಲ್ಸ ಮಾಡೋದು...
ಅಲ್ಲ ಬೀದಿ ಬದೀ ತಿಂಡಿ ತಿಂದು ಹೊಟ್ಟೆ ಹಾಳಾದರೆ ...?
ನಾಳೆ ಇಲ್ಲಿಗೇ ಕೆಲ್ಸಕ್ಕೆ ಬರೋದ್ ಬ್ಯಾಡ್ವಾ..??
...........................
ನನ್ನ ತಲೆ ಗಿರ್ರೆಂದಿತು.
ಅಂದರೆ ಇಲ್ಲಿ ತಿಂದರೆ ಹೇಗಾದೀತು..
ನಿಮಗೆಷ್ಟು ಕೊಡಲಿ..
ಏನೋ ಸಬೂಬು ಹೇಳಿ ಅಲ್ಲಿಂದ ಜಾರಿ ಬಿಟ್ಟೆ..
ಈಗ....

ಹೊರಗಿನ ತಿಂಡಿ ತರೋ ಅಭ್ಯಾಸವೇ ಬಿಟ್ಟು ಬಿಟ್ಟೆ...
##

______________________________
ಚಿತ್ರ ಕೃಪೆ: ಅಂತರ್ ಜಾಲ

No comments:

Post a Comment