ನಿಮ್ಮ ಗಳಿಕೆಯ ಅತ್ಯಂತ ದುಬಾರಿ ವಸ್ತು ಸಮಯ
ಸಾವಿನ ದೇವ ಅವನ ಬಳಿ ತನ್ನೊಡನೆ ಕರೆಯಲು ಬಂದಾಗ ಕುಬೇರನಿನ್ನೂ ಹೊರಡಲು ತಯಾರಾಗಿರಲಿಲ್ಲ.
ಅವನೆಂದ “ನಾನಿನ್ನೂ ಇಲ್ಲಿಂದ ತೆರಳಲು ಮನಸ್ಸನ್ನು ತಯಾರಿ ಮಾಡಿಕೊಂಡಿಲ್ಲ, ನಾನು ನಿನ್ನ ಜತೆ ಬರುವುದು ಸ್ವಲ್ಪ ತಡವಾದರೆ ಏನಾದರೂ ತೊಂದರೆ ಇದೆಯೇ..?
ದೇವನೆಂದ ” ಕ್ಷಮಿಸು ಬಾಳಾ, ನಿನ್ನ ಸಮಯ ಮುಗಿಯಿತು ನೀನು ನನ್ನ ಜತೆ ಹೊರಡಲೇ ಬೇಕೀಗ.”
ಕುಬೇರನೆಂದ ” ನೀನು ಯಾರ ಜತೆ ಮಾತನಾಡುತ್ತಿದ್ದೀಯಾ ಅಂತ ಗೊತ್ತು ತಾನೇ.?, ನಾನು ಕುಬೇರ, ಪ್ರಪಂಚದಲ್ಲೇ ಅತ್ಯಂತ ಧನಿಕರ ಸಾಲಿನಲ್ಲಿ ನಿಂತವ.”
ಆಗ ದೇವ ಹೇಳಿದ ” ನನ್ನ ಗುರಿ ನೀನು ಮಾತ್ರ, ಈಗಲೇ ನನ್ನ ಜತೆ ಹೊರಡು”
ಕುಬೇರನೆಂದ ” ನಾನು ಒಂದು ವೇಳೆ ನನ್ನ ಹತ್ರ ವಿರುವ ಐಶ್ವರ್ಯ ದ ಹತ್ತು ಪ್ರತಿಶತ (ಅದೇ ಲಕ್ಷ ಕೋಟಿಗಿಂತ ಜಾಸ್ತಿ ಬರುತ್ತೆ,_) ಕೊಟ್ಟರೆ ಒಂದು ವರ್ಷ ನನಗೆ ರಿಯಾಯಿತಿ ಕೊಡಬಲ್ಲೆಯಾ..?
ದೇವನೆಂದ “ಕುಬೇರಾ ನೀನು ನನ್ನ ಎಚ್ಚರಿಕೆಯನ್ನು ಗಮನದಲ್ಲಿ ಇಟ್ಟುಕೊಂಡಿಲ್ಲ ಅಂತ ಕಾಣುತ್ತೆ, ಇದು ಹೊರಡುವ ಸಮಯ ನಿನಗೆ”
ಇನ್ನೂ ಸ್ವಲ್ಪ ಹೊತ್ತು ಕುಬೇರ ರಿಯಾಯಿತಿ ಪಡೆಯಲು ತನ್ನೆಲ್ಲಾ ಅಮಿಷಗಳನ್ನೊಡ್ಡುತ್ತಾ ಕೊನೆಗೆಂದ
” ದೇವಾ, ನಾನು ನನ್ನೆಲ್ಲಾ ಆಸ್ತಿ ಐಶ್ವರ್ಯಗಳನ್ನು ನಿನಗೆ ಕೊಟ್ತರೆ ನನ್ನ ಹೆಂಡತಿ ಮಕ್ಕಳೊಂದಿಗೆ ಮಾತನಾಡಲು ಐದು ನಿಮಿಷ.. ಬರೇ ಐದು ನಿಮಿಷ ದಯಪಾಲಿಸುತ್ತೀಯಾ..? ನಾನು ಅವರನ್ನು ಕರೆದು ನಾನವರನ್ನು ಪ್ರೀತಿಸುತ್ತೇನೆ ಅಂತ ಹೇಳುತ್ತೇನೆ ಅಷ್ಟೆ. ಇಷ್ಟರವರೆಗೆ ನನಗೆ ಅವರಲ್ಲಿ ಈ ಮಾತನ್ನು ಹೇಳಲು ಸಮಯವೇ ಸಿಕ್ಕಿರಲಿಲ್ಲ, ನೀನು ಅಪ್ಪಣೆಯಿತ್ತರೆ ನಾನು ಅವರನ್ನು ಎಷ್ಟು ಪ್ರೀತಿಸುತ್ತೇನೆ ಅಂತ ಅವರಿಗೆ ಮನದಟ್ಟು ಮಾಡುತ್ತೇನೆ, ಮತ್ತು ನಾನು ಅತ್ಯಂತ ಜಾಸ್ತಿ ನೋಯಿಸಿದ ಇಬ್ಬರನ್ನು ಕಂಡು ಕ್ಷಮೆ ಯಾಚಿಸ ಬೇಕು.
ಬರೇ ಈ ಎರಡು ಕೆಲಸ ಮಾಡಲು ನನಗೆ ಐದು ನಿಮಿಷ ನೀನು ಕೊಡಲೇ ಬೇಕು.
ಅಚ್ಚರಿಯಿಂದ ಸಾವಿನ ದೇವ ಕೇಳಿದ ” ಕುಬೇರ ನೀನು ಈ ನಿನ್ನ ಹತ್ರವಿರೋ ಆಸ್ತಿ ಸಂಪಾದಿಸಲು ಎಷ್ಟು ಸಮಯ ತೆಗೆದುಕೊಂಡೆ?
ಹೆಮ್ಮೆಯಿಂದ ಕುಬೇರನೆಂದ “ನಾಲವತ್ತು ವರುಷಗಳು… ನನ್ನ ಜೀವಮಾನದ ಅತ್ಯಂತ ದುರ್ಲಭ ನಲ್ವತ್ತು ವರ್ಷದ ಗಳಿಕೆ ಯಿದು ಗೊತ್ತೇ , ಈಗ ಅದನ್ನೇ ನಾನು ನಿನಗೆ ಕೊಡುತ್ತಿರುವುದು ಅದೂ ಬರೇ ಐದು ನಿಮಿಷಕ್ಕಾಗಿ, ಇಡೀ ಜೀವಮಾನದಲ್ಲಿ ಇನ್ನು ನೀನು ಕೆಲಸ ಮಾಡಿ ಗಳಿಸುವ ಅಗತ್ಯವಿಲ್ಲ”
ಸಾವಿನ ದೇವತೆ ತನ್ನ ತಲೆಯಲುಗಿಸಿದ ” ನನಗೆ ನಿಮ್ಮ ಈ ಮಾನವ ಮನಸ್ಸಿನ ಅಂತರಾಳ ಅರ್ಥವಾಗುತ್ತಿಲ್ಲ, ನಿನ್ನ ಜೀವನದ ನಾಲವತ್ತು ವರುಷಗಳ ಗಳಿಕೆಯನ್ನೂ ನೀನು ಹೀಗೆ ಕೆಲವೇ ನಿಮಿಷಗಳಿಗಾಗಿ ಖರ್ಚು ಮಾಡಲು ಸಿದ್ಧವಿರುವವ ನಿನ್ನ ಮೊದಲಿನ ಸಮಯವನ್ನು ಇದಕ್ಕಾಗಿ ಯಾಕೆ ವಿನಿಯೋಗಿಸಲಿಲ್ಲ..? ನಿನ್ನ ಕಾಲವನ್ನು ಹೇಗೆ ಕಳೆದೆ..? ನಿಜವಾಗಿಯೂ ನಿನ್ನ ಅವಶ್ಯಕತೆಗಳಿಗನುಸಾರವಾಗಿ ಆಧ್ಯತೆಗಳನ್ನು ಯಾಕೆ ನಿರ್ಧರಿಸಿರಲಿಲ್ಲ? ನಿನ್ನ ಭಾಧ್ಯತೆಗಳನ್ನು ಅಧ್ಯತೆಗಳನುಸಾರವಾಗಿ ಈ ಮೊದಲು ಯಾಕೆ ಕೆಲಸ ಮಾಡಲಿಲ್ಲ..?”
ಆಗಲೇ ಬೆಳಕು ಆರಿ ಎಲ್ಲ ಕಡೆ ಕತ್ತಲು ಹರಡಿತು.
ಕುಬೇರನ ನೂರು ಲಕ್ಷ ಕೋಟಿ ಗಳಿಕೆಯೂ ಅವನಿಗೆ ಕೊನೆ ಗಳಿಗೆಯಲ್ಲಿ ಬೇಕಾದ ಐದು ನಿಮಿಷಗಳನ್ನು ದಯಪಾಲಿಸಲಾಗಲಿಲ್ಲ…

ನಾವು ಏನನು ಕಳೆದುಕೊಳ್ಳುತ್ತಿದ್ದೇವೆ ಅಂತ ಸರಿಯಾದ ಸಮಯದಲ್ಲಿ ನೆನಪಿಸಿದಿರಿ.
ReplyDelete