( ಮಿಲಿಂಡ್ ನ ಸಾಹಸ )
ತಲೆ ಎತ್ತಿ ನೋಡಿದರು ಮೇಜರ್ ಮತ್ತೊಮ್ಮೆ ಸರಿ ಪಡಿಸಿಕೊಳ್ಳುತ್ತಾ ಕನ್ನಡಕದೊಳಗಿಂದ ಮಿಲಿಂಡ್ ನನ್ನು.
ಏನ್ ಸಾರ್ ಅರ್ಜೆಂಟ್ ಆಗಿ ಬರ ಹೇಳಿದಿರಿ, ವಿಷಯ ಸೀರಿಯಸ್ ಎಂತ ಗೊತ್ತಾಯ್ತು.
ನಿನ್ನೆ ಒಂದು ಪೈಲ್ ಕಳಿಸಿದ್ದೆ ಸಿಕ್ಕಿತಾ,
"ಹೌದು ಮಂಜು ಕೊಟ್ಟ ಸಂಜೆ, ಅದನ್ನು ಓದಿದೆ, .
ಏನ್ ಸಾರ್ ಅರ್ಜೆಂಟ್ ಆಗಿ ಬರ ಹೇಳಿದಿರಿ, ವಿಷಯ ಸೀರಿಯಸ್ ಎಂತ ಗೊತ್ತಾಯ್ತು.
ನಿನ್ನೆ ಒಂದು ಪೈಲ್ ಕಳಿಸಿದ್ದೆ ಸಿಕ್ಕಿತಾ,
"ಹೌದು ಮಂಜು ಕೊಟ್ಟ ಸಂಜೆ, ಅದನ್ನು ಓದಿದೆ, .
ಅದು ನಿಮ್ಮ ಕಾಲೊನಿಯ ಮುನ್ನೂರು ಭವನಗಳ ಸಮುಚ್ಚಯ ( ಫ್ಲಾಟ್ ಗಳ) ವಾರ್ಷಿಕ ದುರಸ್ತಿ ಮತ್ತು ಸುಣ್ಣ ಬಣ್ಣಗಳ ಕಾರ್ಯಗಳ ಹತ್ತು ಲಕ್ಷದ ಕಾಂಟ್ರಾಕ್ಟ್ ಎಗ್ರಿಮೆಂಟ್ ಬಿಲ್ .
ಅದರಲ್ಲೇನೂ ತಪ್ಪು ಕಂಡು ಬರಲಿಲ್ಲ ನನಗೆ. ಅಲ್ಲದೇ ನನಗೆ ತುಂಬಾನೇ ಖುಷಿ ಆಯ್ತು…. ಈಗಿನ ಕಾಲದಲ್ಲೂ ಅಂತಹ ಶಾಸ್ತ್ರೀಯವಾಗಿ ಬಿಲ್ಲು ಮಾಡುವವರು ಇದ್ದಾರೆಯೇ ಅನ್ನಿಸುವಷ್ಟೂ.
ಪ್ರತಿ ಪುಟಕ್ಕೂ ಸಂಖ್ಯೆ ಹಾಕಿ ಬಿಲ್ಲಿನ ಪ್ರತಿಯೊಂದೂ ಕಾರ್ಯದ ಕರಾರುವಾಕ್ಕಾಗಿ ಮನೆಯ ಸಂಖ್ಯೆಯ ಜತೆ ಆ ಮನೆಯಲ್ಲಿ ಮಾಡಿದ್ದ ಕೆಲಸಗಳ ವಿವರ ಚಿತ್ರ ಸಮೇತ ಕೊಟ್ಟಿದ್ದಾನೆ ಪುಣ್ಯಾತ್ಮ, ಜತೆಗೆ ಅದಕ್ಕೆ ಖರ್ಚಾದ ಸಾಮಾನುಗಳ ವಿವರವೂ, ಮತ್ತು ಅದಕ್ಕೆ ನೇಮಿಸಲಾದ ಸಿಬ್ಬಂದಿಯ ಸಂಖ್ಯೆಯ ವಿವರ ಕೊನೆಯಲ್ಲಿ ತರಿಸಿದ ಸುಣ್ಣ ಬಣ್ಣ ಮತ್ತು ಸಿಮೆಂಟ್ ನ ಬಿಲ್ಲು ಕೂಡಾ ಲಗತ್ತಿಸಿದ್ದಾನೆ .
ನನ್ನ ಕಡೆಯಿಂದ ಆ ಬಿಲ್ಲಿಗೆ ಮತ್ತು ಅದನ್ನು ಮಾಡಿದಾತನಿಗೆ ನೂರಕ್ಕೆ ನೂರು ಮಾರ್ಕ್ಸುಗಳು"
ಆದರೆ ಮೇಜರ್ ನಗಲಿಲ್ಲ.
ಮುಗಿಯಿತಾ ನಿನ್ನ ಖಾನೇಶುಮಾರಿ..?
ಆ ಬಿಲ್ಲು ವಿಮರ್ಶಿಸಲಲ್ಲ ನಿನ್ನನ್ನು ಕರೆಸಿದ್ದು, ಅಥವಾ ಆ ಬಿಲ್ಲು ಬರೆದಾತನನ್ನು ಸನ್ಮಾನಿಸಲು….
ಮತ್ತೆ..?
ಅಸಲು ಆ ಬಿಲ್ಲೇ ಮೋಸದ್ದು, ನಿಜವಾದ ಬಿಲ್ಲೇ ಅಲ್ಲ ಅದು.
ಆದರೆ ಮೇಜರ್ ನಗಲಿಲ್ಲ.
ಮುಗಿಯಿತಾ ನಿನ್ನ ಖಾನೇಶುಮಾರಿ..?
ಆ ಬಿಲ್ಲು ವಿಮರ್ಶಿಸಲಲ್ಲ ನಿನ್ನನ್ನು ಕರೆಸಿದ್ದು, ಅಥವಾ ಆ ಬಿಲ್ಲು ಬರೆದಾತನನ್ನು ಸನ್ಮಾನಿಸಲು….
ಮತ್ತೆ..?
ಅಸಲು ಆ ಬಿಲ್ಲೇ ಮೋಸದ್ದು, ನಿಜವಾದ ಬಿಲ್ಲೇ ಅಲ್ಲ ಅದು.
ನಮ್ಮನ್ನು ಪೂರಾ ಮುಳುಗಿಸಲೆಂದು ಮಾಡಿದ ಖೊಟ್ಟಿ ಬಿಲ್ಲದು.
"ಅಂದರೆ….. ಏನರ್ಥ ಸರ್, ನಿಜವಾಗಿಯೂ ನೀವೇ ಕೈಯ್ಯಾರೆ ರುಜು ಮಾಡಿದ ೨೦ ಲಕ್ಷದ ಕಾಂಟ್ರೇಕ್ಟ್.
"ಅಂದರೆ….. ಏನರ್ಥ ಸರ್, ನಿಜವಾಗಿಯೂ ನೀವೇ ಕೈಯ್ಯಾರೆ ರುಜು ಮಾಡಿದ ೨೦ ಲಕ್ಷದ ಕಾಂಟ್ರೇಕ್ಟ್.
ಓದಿದ್ದೇನೆ ನಾನು.
ಬಿ ಸಿ ಕಂಪೆನಿಗೆ ಕೊಟ್ಟಿದ್ದೀರಾ.
ಮತ್ತು ಆತ ಕೆಲಸ ಮೂರು ತಿಂಗಳ ಹಿಂದೆ ಆರಂಭ ಮಾಡಿದ್ದಾನೆ ಮತ್ತು ಇಲ್ಲಿಯವರೆಗೆ ನೀವು ಎರಡು ಬಿಲ್ಲ್ ಗಳಿಂದ ಸುಮಾರು ಎಂಟು ಲಕ್ಷ ಪಾವತಿ ಸಹಾ ಮಾಡಿದ್ದೀರಾ. ಹಾಗಿರುವಾಗ ಏನು ವಿಷಯ…ಕೆಲಸ ಮುಗಿದಿದೆ,
ಆತ ಹತ್ತು ಪ್ರತಿಶತ ಬಿಟ್ಟು ಬಾಕಿ ಹತ್ತು ಲಕ್ಷ ಬಿಲ್ ಕೊಟ್ಟಿದ್ದಾನೆ ಇದರಲ್ಲಿ ಮೋಸ ಎಲ್ಲಿದೆ, ನೀವು ಏನನ್ನೋ ಮುಚ್ಚಿಟ್ಟಿದ್ದೀರಾ…. ನೇರವಾಗಿ ವಿಷಯ ತಿಳಿಸಿ ಮೇಜರ್" ಮಿಲಿಂಡ್
ಈಗ ಮೇಜರ್ ಅಚ್ಚರಿ ವ್ಯಕ್ತ ಪಡಿಸಿದರು.
ಈಗ ಮೇಜರ್ ಅಚ್ಚರಿ ವ್ಯಕ್ತ ಪಡಿಸಿದರು.
ಏನು ಅಷ್ಟರಲ್ಲಿ ನಿನಗೆ ಇಷ್ಟೆಲ್ಲಾ ಗೊತ್ತಾಯ್ತಾ..? ಹೇಗೆ" ಅವರ ಕಣ್ಣಲ್ಲಿ ಅಚ್ಚರಿಯ ಜತೆ ಮೆಚ್ಚುಗೆಯೂ ಇತ್ತು.
ಸಿಂಪಲ್ !! ಇದಕ್ಕೆ ಯಾವ ಪತ್ತೇದಾರಿಯೂ ಬೇಡ ಮೇಜರ್ ,
ಸಿಂಪಲ್ !! ಇದಕ್ಕೆ ಯಾವ ಪತ್ತೇದಾರಿಯೂ ಬೇಡ ಮೇಜರ್ ,
ನೀವು ಕೊಟ್ಟ ಫ಼ಾಯಿಲ್ ನಲ್ಲಿ ನಾನು ಹೇಳಿದ ಎಲ್ಲಾ ವಿವರವೂ ಇದೆ,
ನಾನು ಸುನೀ ಯಿಂದ ಆ ಕಾಂಟ್ರಾಕ್ಟರ್ ನ ವಿವರ ಕಾಂಟ್ರಾಕ್ಟ್ ನ ಅವಧಿ ಮತ್ತು ನನಗೆ ಬೇಕಾದ ವಿಷಯ ಕರೆ ಮಾಡಿ ತಿಳಿದುಕೊಂಡೆ ಅಷ್ಟೇ.
ಸರಿ ಮಾಯ್ ಬಾಯ್, ನೇರವಾಗಿ ವಿಷಯಕ್ಕೆ ಬರ್ತೇನೆ.
ಸರಿ ಮಾಯ್ ಬಾಯ್, ನೇರವಾಗಿ ವಿಷಯಕ್ಕೆ ಬರ್ತೇನೆ.
ಎಲ್ಲರಿಗಿಂತಾ ಕಾಂಪಿಟೀಟಿವ್ ಆಗಿದ್ದಾನೆ ಅಂತ ಎಣಿಸಿ ಈ ಬಿ ಸಿ ಕಂಪೆನಿಗೆ ಕೆಲಸ ವಹಿಸಿದೆವು.
ಮೊದಲೆರಡು ತಿಂಗಳು ಆತ ಸರಿಯಾಗಿಯೇ ಕೆಲಸ ಮಾಡಿದ.
ನಮಗೆ ಎಲ್ಲಿಯೂ ಮೋಸ ಕಂಡು ಬರಲಿಲ್ಲ, ಅವನ ಕೆಲ್ಸದಲ್ಲಿಯಾಗಲೀ ವ್ಯವಹಾರ ನಡವಳಿಕೆಯಲ್ಲೂ.
ಅದಕ್ಕೇ ಆತನ ಕೆಲ್ಸಕ್ಕೆ ಸರಿಯಾದ ಹಣವನ್ನು ಕೊಟ್ಟಿದ್ದೆವು.
ಆದರೆ ಎರಡನೇ ಬಿಲ್ಲ್ ಹಣ ಪಾವತಿಯಾದ ಮಾರನೆಯ ದಿನದಿಂದ ಏಕಾಏಕಿ ಆತ ಮಾಯವಾಗಿ ಬಿಟ್ಟ.
ಅಂದರೆ ..??
ಬಿಲ್ ಪಾವತಿಯಾದ ಮಾರನೆ ದಿನ ನನಗೆ ಕಂಪ್ಲೇಂಟ್ ಬಂತು.
ಅಂದರೆ ..??
ಬಿಲ್ ಪಾವತಿಯಾದ ಮಾರನೆ ದಿನ ನನಗೆ ಕಂಪ್ಲೇಂಟ್ ಬಂತು.
ಕೇಳಿದರೆ ಆತ ಅಪಘಾತವಾಗಿ ಆಸ್ಪತ್ತ್ರೆ ಸೇರಿದ್ದನಂತ ಸುದ್ದಿ ಬಂತು.
ಅಲ್ಲಿಗೆ ಹೋದ ನನಗೆ ಎದೆ ಧಸಕ್ ಅಂತು. ಆತನಿಗೆ ಮುಂಗಡ ಸಹಾ ಕೊಟ್ಟಾಗಿತ್ತು.
ಮುಂಗಡ ಹಣ ಕೊಟ್ಟ ಕಾರಣ
ಆತ ಮುಂದಿನ ಕೆಲಸಕ್ಕೆ ಬೇಕಾದ ಸಾಮಾನುಗಳೆಲ್ಲವನ್ನೂ ತೋರಿಸಿದ್ದ.
ಮುಂಗಡ ಹಣ ಕೊಟ್ಟ ಕಾರಣ
ಆತ ಮುಂದಿನ ಕೆಲಸಕ್ಕೆ ಬೇಕಾದ ಸಾಮಾನುಗಳೆಲ್ಲವನ್ನೂ ತೋರಿಸಿದ್ದ.
ಈ ಸಾಮಾನುಗಳ ಒಟ್ಟು ಮೊತ್ತದ ೭೦ ಪ್ರತಿ ಶತ ಹಣ ಮುಂಗಡವಾಗಿಕೊಟ್ಟಿದ್ದೆವು
ಸಾಮಾನ್ಯವಾಗಿ ಅದೇ ರೀತಿ ಮಾಡುತ್ತಾರೆ ಬಾಕಿ ಎಲ್ಲಾ ಗುತ್ತಿಗೆದಾರರಿಗೂ ಸಹಾ.
ಆ ಸಾಮಾನು ಸರಂಜಾಮಾದರೂ ಇರಬೇಕಲ್ಲ..?
ಇಲ್ಲ ಆತನಿಂದ ಬರಬೇಕಾದ ಆ ಹಣ ಬರಲಿಲ್ಲ ಅಂತ ಅದನ್ನು ಸರಬರಾಜು ಮಾಡಿದ ಕಂಪೆನಿಯವರು ಆ ಸಾಮಾನೆಲ್ಲವನ್ನೂ ವಾಪಾಸ್ಸು ತೆಗೆದುಕೊಂದು ಹೋದರಂತೆ, ಅದು ಸರಿಯೇ ಅವರಿಗೆ ಹಣ ಬರದಿದ್ದರೆ ಅವರೇನು ಮಾಡುತ್ತಾರೆ ಪಾಪ.
ಇನ್ನೇನು ಮಾಡುವುದು ನಾನೇ ನನ್ನ ಉಳಿದ ಚಿಕ್ಕ ಪುಟ್ಟ ಗುತ್ತಿಗೆದಾರರಿಂದ ಉಳಿದಿದ್ದ ಕೆಲಸವೆಲ್ಲವನ್ನೂ ಮಾಡಲು ಹೇಳಿದ್ದೆ, ಮಧ್ಯೆ ನಮ್ಮ ಎಮ್ ಡಿ ಕೂಡಾ ಇನ್ಸ್ಪೆಕ್ಶನ್ ಗಾಗಿ ಬರುವರಿದ್ದುದರಿಂದ ಹಾಗೆ ಮಾಡದೇ ಗತ್ಯಂತರವಿರಲಿಲ್ಲ,
ಉಳಿದ ಗುತ್ತಿಗೆದಾರರಿಂದ ಆ ಕೆಲಸವನ್ನು ಮಾಡಿಸಿ ಮುಗಿಸ ಬೇಕಾಯ್ತು.
ಆದರೆ ನಮಗೆ ಆಶ್ಚರ್ಯ ಕಾದಿದ್ದು ಮುಂದಿನ ತಿಂಗಳಲ್ಲಿ, ಹುಷಾರಾಗಿ ಬಂದ ರೆಡ್ಡಿ ತಾನೇ ಎಲ್ಲವನ್ನೂ ಮಾಡಿದ್ದೇನೆ ಎಂಬಂತೆ ಕೆಲಸ ಮುಗಿಸಿದ ಅರ್ಜಿ ಹಾಕಿದ,
ಅದರ ಹಿಂದಿನ ಆತನ ಕುತ್ಸಿತತೆಯ ಅರಿವಿಲ್ಲದ ನಾನು ಅವನಿಗೆ ಕೆಲಸ ಮುಗಿದ ಸರ್ಟಿಫಿಕೇಟ್ ಕೊಟ್ಟು ಬಿಟ್ಟೆ. ನಮ್ಮ ನಂಬುವ ಮೂಲಗಳಿಂದ ಗೊತ್ತಾದುದು ಏನೆಂದರೆ ಅವನು ಯಾರಿಗೂ ಹಣ ಕೊಡುವ ಮನಸ್ಸಲ್ಲಿ ಇಲ್ಲ ಅಂತ.
ಮುಂಗಡ ಹಣ ಪಡೆದುಕೊಂಡ ಆತ ತಾರಮ್ಮಯ್ಯ ಅಂದು ಬಿಟ್ಟರೆ ನನ್ನ ಗತಿ,
ಅನುಕಂಪದ ಆಧಾರದ ಮೇಲೆ ಅವನಿಗೆ ಸಹಾಯ ಮಾಡಿದ್ದೆ ಈಗ ನೋಡಿದರೆ ನಾನೇ ಕುತ್ತಿಗೆ ವರೆಗೆ ಮುಳುಗಿ ಹೋಗಿದ್ದೇನೆ. ತಾನು ಮಾಡಿದ್ದಲ್ಲ ಅನ್ನಲು ನಮ್ಮಲ್ಲಿ ಆಧಾರಗಳೇ ಇಲ್ಲ. ಬರೇ ಅನುಕಂಪದ ಆಧಾರದಲ್ಲಿ ಆತನಿಗೆ ಸಹಾಯ ಮಾಡಲು ಹೋದರೆ ಅದು ನನ್ನ ಕುತ್ತಿಗೆಗೇ ಬಂತು. ಈಗ ಉಳಿದ ಗುತ್ತಿಗೆದಾರರಿಗೆ ಖರ್ಚು ಮಾಡಿದ ಹಣವನ್ನೂ ಹೇಗೆ ಕೊಡಿಸಲಿ ಎಂಬುದೊಂದು ನನ್ನ ವ್ಯಥೆಯಾಗಿದೆ.
ಅಂದರೆ ಅವನು ಮಾಡದೇ ಇರುವ ಕೆಲಸದ ಹಣ ಅವನು ತೆಗೆದುಕೊಂಡ ಮತ್ತು ಅದು ನೀವು ಉಳಿದವರಿಂದ ಮಾಡಿಸಿದ್ದು ಅಂದರೆ ಆ ಹಣ ನೀವು ಕೆಲಸ ಮಾಡಿಸಿದ ಉಳಿದವರೆಲ್ಲರಲ್ಲೂ ಹಂಚಿಕೆಯಾಗ ಬೇಕಾಗಿತ್ತು.
ಅಂದ ಮೇಲೆ ಸರ್ ನೀವ್ಯಾಕೆ ಅವನ ಮೇಲೆ ಅಕ್ಷನ್ ತಗೋ ಬಾರದು?
ಏನಂತ ತಕೊಳ್ಳಲಿ?
ಕಾನೂನು ಪ್ರಕಾರ ಅವನೇ ಮಾಡಿದ ಹಾಗೆ ಅವನ ಹೆಸರಲ್ಲಿ ನಾವು ಮಾಡಿಸಿದ್ದಲ್ಲವಾ?
ಮೇಲಿನವರೂ ನಮ್ಮನ್ನೇ ಕೇಳ್ತಾರೆ ಯಾಕೆ ಹಾಗೆ ಮಾಡಿಸಿದಿರಿ ಅಂತ.
ಅದೂ ನಿಜವೆ.. ಸರಿ ಸರ್ ಕೊನೇಗೆ ಎಂದರೆ ಯಾವಾಗ ನೀವು ರೆಡ್ಡಿಗೆ ಕಚೇರಿಯಿಂದ ಪತ್ರ ಕಳುಹಿಸಿ ಕೊಟ್ಟಿದ್ದೀರಿ.
ಅದರಿಂದ ಏನು ಲಾಭ?
ಅದು ಆಮೇಲೆ ಹೇಳ್ತೇನೆ ಮೊದಲು ಉತ್ತರ ಹೇಳಿ ಸರ್
ಮುಂಗಡ ಹಣ ಕ್ಕೆ ಆತ ಕೇಳಿ ಬರೆದ ಪತ್ರದಲ್ಲಿ ನಾವು ಪೂರ್ತಿ ಹಣ ಕೊಡದೇ ಎಪ್ಪತೈದು ಪ್ರತಿಶತ ಮಾತ್ರ ಕೊಡುತ್ತೇವೆ ಅಂತ ಬರೆದಿದ್ದೆವು.
ಅವನು ಚೆಕ್ ತೆಗೆದುಕೊಂಡು ಹೋದನಾ?
ಚೆಕ್ ಅವನು ನಿನ್ನೆ ಬ್ಯಾಂಕೆ ಬಟವಾಡೆಗೆ ಸಲ್ಲಿಸಿದ್ದಾನೆ.
ಮತ್ತೆ..?
ನಾನು ಬ್ಯಾಂಕ್ ನವರಿಗೆ ಹೇಳಿದ್ದರೂ ಎರಡು ದಿನ ಕ್ಕಿಂತ ಜಾಸ್ತಿ ಆ ಚೆಕ್ಕನ್ನು ಹೋಲ್ಡ್ ಮಾಡಲಾಗುವುದಿಲ್ಲ ಅಂತ ಆ ಮ್ಯಾನೇಜರು ಖಡಾಖಂಡಿತವಾಗಿ ಹೇಳಿ ಬಿಟ್ಟಿದ್ದಾರೆ.
ಅಷ್ಟೇ ತಾನೇ..?
ಸರಿ ನಿಮ್ಮ ಲ್ಯಾಪ್ಟೋಫ್ ಕೊಡಿ.
ನೀವು ಈಗ ಈ ಕೆಳಗಿನಂತೆ ಒಂದು ಪತ್ರವನ್ನು ಆತನಿಗೆ ರವಾನಿಸುತ್ತಿದ್ದೀರಾ…
ಸರಿ ನಿಮ್ಮ ಲ್ಯಾಪ್ಟೋಫ್ ಕೊಡಿ.
ನೀವು ಈಗ ಈ ಕೆಳಗಿನಂತೆ ಒಂದು ಪತ್ರವನ್ನು ಆತನಿಗೆ ರವಾನಿಸುತ್ತಿದ್ದೀರಾ…
"ನಿಮ್ಮ ಕೊನೆಯ ಬಿಲ್ನಲ್ಲಿ ಕಂಡು ಬಂದ ಕೆಲವು ಅನುಮಾನಗಳನ್ನು ಬಗೆಹರಿಸಲು ನಿಮ್ಮನ್ನು ನಮ್ಮ ಕಚೇರಿಗೆ ಕರೆಯಲಾಗಿತ್ತು. ಆದರೆ ಆ ಅಂಚೆ ಸಿಕ್ಕಿದ ೨೪ ಗಂಟೆಗಳಲ್ಲೂ ನಿಮ್ಮ ಉತ್ತರ ಬಾರದಿದ್ದುದರಿಂದ ನಿಮ್ ಬಿಲ್ ತಡೆ ಹಿಡಿಯಲಾಗಿದೆ. ನೀವು ನಾಳೆ ಸಂಜೆ ೪ ಗಂಟೆಯ ಒಳಗಾಗಿ ನಿಮ್ಮ ಪುರಾವೆಗಳನ್ನೂ ನಮ್ಮ ಅನುಮಾನಗಳನ್ನೂ ಬಗೆಹರಿಸದಿದ್ದರೆ ನಿಮಗೆ ಈ ಕಾರ್ಯದಲ್ಲಿ ಆಸಕ್ತಿ ಇಲ್ಲ ಎಂದುಕೊಂಡು ಈ ಬಿಲ್ಲನ್ನೂ ಚೆಕ್ ನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುತ್ತ ಅದರ ಬಟವಾಡೆಯನ್ನೂ ನಿಲ್ಲಿಸುತ್ತಿದ್ದೇವೆ."
ಅದೆಲ್ಲಾ ಸರಿ ಮಿಲಿಂಡ್ ನಾನು ಅನಂತ ಅವನಿಗೆ ಪತ್ರ ಬರೆದಿಲ್ಲವಲ್ಲ..?.
ಸರಿ ಸಾರ್.
ನೋಡಿ ನೀವು ಈ ಅಂಚೆ ಕಳುಹಿಸಿದ್ದು ಗುರುವಾರ ಅಲ್ಲವೇ. ಇದನ್ನೇ ನೀವು ಪುನಃ ಫ಼ಾರ್ವರ್ಡ್ ಮಾಡ ಬೇಕೆಂದರೆ ಆ ಅಂಚೆಯನ್ನು ನೀವು ಎಡಿಟ್ ಮಾಡಬಹುದಲ್ಲ..?
ಅಂದರೆ
ತುಂಬಾನೇ ಸರಳ, ಸರ್ ನಿಮಗೆ ಆತ ಸೋಮವಾರ ತನ್ನ ಬಿಲ್ಲು ಕಳುಹಿಸಿದ್ದಾನೆ, ನೀವು ಗುರುವಾರ ಅವನಿಗೆ ಹೇಳುತ್ತೀರಾ ಚೆಕ್ ತೆಗೆದುಕೊಳ್ಳಲು, ಆದರೆ ಅವನು ಕೊಟ್ಟ ಬಿಲ್ಲು ನೀವು ಸರಿಯಾಗಿ ಪರಿಶೀಲಿಸಿ ಶುಕ್ರವಾರ ಪುನಃ ಇನ್ನೊಂದು ಅಂಚೆ ಬರೆದು ಹಿಂದಿನ ಪತ್ರದ ಜತೆ ಫಾರ್ವರ್ಡ್ ಮಾಡಿದ್ದೀರಾ..?
ಆದರೆ ನಾನು ಹಾಗೆ ಯಾವ ಅಂಚೆಯನ್ನೂ ಕಳುಹಿಸಲಿಲ್ಲವಲ್ಲ..?
ಅದು ನಿಜ ಸಾರ್ ಆದರೆ ನಮ್ಮ ಸಾಕ್ಷಿ ಪುರಾವೆಗಳ ಪ್ರಕಾರ ನೀವು ಅಂತಹ ಇನ್ನೊಂದು ಪತ್ರವನ್ನು ಕಳುಹಿಸಿದ್ದೀರಾ..
ಆದರೆ ಇದು ತಪ್ಪಲ್ಲವಾ? ಯಾರಾದರೂ ಚೆಕ್ ಮಾಡಿದರೆ ಗೊತ್ತಾಗುತ್ತದಲ್ಲ,
ಸಾರ್ ನೀವು ನಿಮ್ಮ ಸಾಕ್ಷಿ ಅಲ್ಲವೇ ಹೇಳುವದು, ಅವನಿಗೆ ಸಿಕ್ಕಿತೋ ಇಲ್ಲವೋ ಅದು ಬೇರೆ ವಿಷಯ, ನಿಮ್ಮ ಕೆಲಸಕ್ಕೆ ನಡೆಗೆ ನಿಮ್ಮ ಬಳಿ ಪುರಾವೆಗಳಿವೆ, ಅಷ್ಟು ಸಾಕಲ್ಲವಾ??.
ಆದರೂ…..!!!
ಸರ್ ನಿಮ್ಮ ಎಣಿಕೆಗೆ ವಿರುದ್ಧವಾಗಿ ಅವನು ಅನ್ಯಾಯ ಮಾಡುತ್ತಿದ್ದಾನೆ, ಆದರೆ ಅವನ ಅನ್ಯಾಯವನ್ನೂ ನೀವು ನೇರದಾರಿಯಲ್ಲಿ ಹೋದರೆ ತಪ್ಪೆನ್ನಲಾಗುವುದಿಲ್ಲ ಅಲ್ಲವೇ??… ಇದೂ ಹಾಗೇ…!!
ಅಂದ ಹಾಗೆ ಕಾರಣಗಳನ್ನು ಏನಂತ ಹೇಳಬೇಕು?
ನೋಡಿ ಇಲ್ಲಿ…..
ಸರಿ ಅವನು ಇದನ್ನೆಲ್ಲಾ ಒಪ್ಪದೇ ಇದ್ದ ಪಕ್ಷದಲ್ಲಿ…
ಅದನ್ನು ನನಗೆ ಬಿಡಿ ಸಾರ್….
@@@@@@@
ಮಿಲಿಂಡ್ ಎಣಿಸಿದಂತೆ ಆಯ್ತು.
ರೆಡ್ಡಿ ಓಡಿಕೊಂಡು ಬಂದ.
ಯಾಕೆ ಸರ್ ನನ್ನ ಪೇಮೆಂಟ್ ತಡೆ ಹಿಡಿದ್ದಿದ್ದೀರಾ, ನಾನು ಬೇಕಿದ್ದಲ್ಲಿ ಕೋರ್ಟ್ ಮೆಟ್ಟಿಲು ಹತ್ತಬಹುದು ಗೊತ್ತಿದೆಯಲ್ಲಾ? -ರೆಡ್ಡಿ.
ರೆಡ್ಡಿಯವರೇ ನಮ್ಮ ಸೀನಿಯರ್ ಕನ್ಸಲ್ಟೆಂಟ್ ಮಿಲಿಂಡ್ ಅವರ ಬಳಿ ಮಾತನಾಡಿ ಅವರೇ ನಿಮ್ಮ ಬಿಲ್ ತಡೆಹಿಡಿದದ್ದು.- ಮೇಜರ್
ಹೇಳಿಸರ್- ರೆಡ್ಡಿ
ಹೌದು ರೆಡ್ಡಿಯವರೇ ಆದರೆ ನಿಮ್ಮ ಬಿಲ್ಲಿನಲ್ಲಿ ಕೆಲವು ಗುಣದೋಷಗಳಿವೆ, ಅದನ್ನು ಸರಿ ಪಡಿಸಿ ಮತ್ತೆ ನಿಮ್ಮ ಹಣ ನೀವು ತೆಗೆದುಕೊಳ್ಳೀ.
ಅಷ್ಟು ಸರಿಯಾಗಿ ಮಾಡಿದ್ದೇವಲ್ಲ ಸರ್..? ರೆಡ್ಡಿ
"ನಿಮ್ಮ ಬಿಲ್ಲುಗಳನ್ನುಕೂಲಂಕುಶವಾಗಿ ಪರಿಶೀಲಿಸಿದಾಗ ಗೊತ್ತಾದ ವಿಷಯವೆಂದರೆ ನಿಮ್ಮಬಿಲ್ಲಿನ ಜತೆ ಲಗತ್ತಾದ ರಶೀದಿಗಳು ಸರಿಯಾದ ಕ್ರಮಾಂಕ ಮತ್ತು ಸಂಖ್ಯೆ ಹೊಂದಿಲ್ಲದೇ ಇದ್ದು, ಸಂಶಯಾಸ್ಪದವಾಗಿವೆ" ಮಿಲಿಂಡ್.
ಯಾಕೆ ಸರ್ – ರೆಡ್ಡಿ ವಿನಮ್ರತೆಯಿಂದ ಕೇಳಿದ್ದ "ಸರಿಯಾಗಿಯೇ ಇದೆಯಲ್ಲ"
ಆದರೆ ಇಲ್ಲಿ ನೋಡಿ, ನೀವು ಲಗತ್ತಿಸಲಾದ ಬಿಲ್ಲುಗಳನ್ನು ಕ್ರಮಾಂಕದಲ್ಲಿ ಪರಿಶೀಲಿಸಿ, ಎರಡನೇ ಕಂತಿನ ಬಿಲ್ಲು ಮೊದಲ ಕಂತಿನ ಬಿಲ್ಲಿಗಿಂತ ಮೊದಲಿದ್ದ ಅನುಕ್ರಮಣಿಕೆಯದ್ದಾಗಿದೆ.
ಅದು ಹೇಗೆ ಸರ್..
ಇಲ್ಲಿ ನೋಡಿ ಮೊದಲು ಬಂದ ಬಿಲ್ಲಿನಲ್ಲಿ ನೀವು ಲಗತ್ತಿಸಿದ್ದು ೪೬೫೬ ಕ್ರಮ ಸಂಖೆಯಲ್ಲಿದ್ದರೆ ನಂತರ ಕಳುಹಿಸಿದ ಬಿಲ್ಲಿನ ಕ್ರಮ ಸಂಖ್ಯೆ ೪೬೫೪ ಆಗಿದೆ. ಇದರ ಅರ್ಥ ಒಂದೋ ನಿಮ್ಮ ಈ ಬಿಲ್ಲು ಖೊಟ್ಟಿ ಅಥವಾ ಒಂದೇ ದಿನದಲ್ಲಿ ಬರೆದ ಬಿಲ್ಲು ಇದು.
ಇಲ್ಲ ಸಾರ್ ಬರೆಯುವಾಗ ತಪ್ಪಾಗಿದ್ದಿರಬಹುದು, ಉಳಿದ ಬಿಲ್ಲನ್ನು ಆತ ನಂತರ ಬರೆದಿರಬಹುದು.
ಒಕೆ ರೆಡ್ಡಿಯವರೇ ಹಾಗೇ ಎಣಿಸೋಣ, ನೀವು ಕಾಂಟ್ರೆಕ್ಟ್ ಆರಂಭ ಮಾಡಿ ಎಷ್ಟು ವರ್ಷಗಳಾದವು?
ಸುಮಾರು ೧೦-೧೧ ವರ್ಷ…??
ಅಲ್ಲ ರೆಡ್ಡಿಯವರೇ ಇಂದಿಗೆ ಸರಿಯಾಗಿ ಹನ್ನೆರಡು ವರ್ಷ ೮ ತಿಂಗಳು ನಾಲ್ಕು ದಿನ ಆಯ್ತು.
……………………….
ನೀವಿರುವ ಈಗಿನ ಕಚೇರಿಗೆ ನೀವು ಬಂದು ಎಷ್ಟು ವರ್ಷ ಆಯ್ತು.
ಎರಡು ವರ್ಷ..
ಇಲ್ಲ ಎರಡು ತಿಂಗಳು ನಾಲ್ಕು ದಿನ ಅಷ್ಟೆ
ಏನು ಹೇಳ್ತಾ ಇದ್ದೀರಾ ಸರ್ ನೀವು??
ನಿಜ ಈ ಬಿಲ್ಲು ನೋಡಿ, ನಿಮ್ಮ ನಾಲ್ಕನೆಯ ಬಿಲ್ಲು ಪುಸ್ತಕದಲ್ಲಿನ ವಿಳಾಸ ಮತ್ತು ಮೂರು ಮತ್ತು ಐದನೆಯ ಪುಸ್ತಕದಲ್ಲಿನ ವಿಳಾಸ ಬೇರೆ ಬೇರೆ ಇದೆ.
ಅದರಲ್ಲೇನು ಸರ್?
ಗೊತ್ತಿದ್ದು ಹೇಳ್ತಾ ಇದ್ದೀರಾ, ನೀವು ನಿಮ್ಮ ರಶೀದಿ ಪುಸ್ತಕ ಪ್ರಕಟಿಸುವಾತ ಕೊಟ್ಟ ರಶೀದಿ ನನ್ನ ಬಳಿ ಇದೆ. ಅದರ ಪ್ರಕಾರ ನೀವು ಇದೆಲ್ಲ ರಶೀದಿ ಪುಸ್ತಕಗಳನ್ನೂ ಒಟ್ಟಿಗೇ ಪ್ರಿಂಟ್ ಹಾಕಿಸಿಕೊಂಡಿದ್ದೀರಾ. ಅಂದರೆ…. ಕಾರಣ ಸ್ಪಷ್ಟ…
ಅಂದ ಹಾಗೇ ನೀವು ನಿಮ್ಮ ಸರ್ವಿಸ್ ಟ್ಯಾಕ್ಸ್ ಮತ್ತು ಇನ್ಕಮ್ ಟ್ಯಾಕ್ಸ್ ಸರಿಯಾಗಿ ಕಟ್ಟುತ್ತಿದ್ದೀರಾ?
ಯಾಕೆ ಸರ್ ಜಯವಂತ್ ನಮ್ಮ ಕನ್ಸಲ್ಟೆಂಟ್ ಅವರಲ್ಲಿ ಕೇಳಿನೋಡಿ.
ಅಂದ ಹಾಗೇ ನಿಮ್ಮ ಎರಡನೇ ಬಿಲ್ಲಿನಲ್ಲಿ ತೆಗೆದುಕೊಂಡ ಮುಂಗಡ ಹಣ , ಅದಕ್ಕಾಗಿ ಕಳುಹಿಸಿದ ರಶೀದಿ ಗಳಮೇಲೆ ನಮಗೆ ಸಂಶಯ ಇರೋದ್ರಿಂದ ಇವನ್ನ ಇನ್ಕಮ್ ಟ್ಯಾಕ್ಶ್ ಡಿಪಾರ್ಟ್ಮೆಂಟ್ ಗೆ ಪರೀಲಿಸಲು ಕಳುಹಿಸುತ್ತಿದ್ದೇವೆ. ಅಲ್ಲಿಂದ ಬಂದ ಉತ್ತರ ನೋಡಿ ಮುಂದಿನ ಕಾರ್ಯ.
ರೆಡ್ಡಿ ಏ ಸಿ ರೂಮಿನಲ್ಲೂ ಬೆವೆತಿದ್ದ.
ಬೇಡ ಸರ್ ಅದೊಂದು ಕೆಲಸ ಮಾಡ ಬೇಡಿ ನೀವು ಹೇಳಿದ ಹಾಗೆ ಮಾಡ್ತೇನೆ.
ಮಾರನೆಯ ದಿನ ಬೆಳಿಗ್ಗೆ ಮೇಜರ್ ಮೇಜಿನ ಮೇಲೆ ಎಲ್ಲಾ ಹಣ ವಾಪಾಸ್ಸು ಮಾಡಿದ್ದ ರೆಡ್ಡಿ.
ಅದನ್ನು ಯಾರ್ಯಾರಿಗೆ ಸಂದಾಯವಾಗಬೇಕೋ ಅಂತೆಯೇ ಪಾವತಿಸಿದರು ಮೇಜರ್.
########
ಅದು ಯಾವ ಮ್ಯಾಜಿಕ್ ಮಾಡಿದೆ ಮೈ ಬೊಯ್
ಏನಿಲ್ಲ ಸರ್ ರೆಡ್ಡಿಯ ಬಾಣ ಅವನ ಕಡೆಗೇ ತಿರುಗಿಸಿದೆ
ಅಂದರೆ..??
ಕಳೆದ ೧೦.೧೨ ವರ್ಷದ ಐ ಟಿ ಆರ್ ತೆಗೆಸಿದೆ, ಅದರಲ್ಲಿನ ಹುಳುಕೆಲ್ಲಾ ಪಟ್ಟಿ ಮಾಡಿ ಆತನಿಗೇ ತೋರಿಸಿದೆ ಅಷ್ಟೇ, ಇಂಗು ತಿಂದ ಮಂಗನಾದ .
ತುಂಬಾ ತುಂಬಾ ಧನ್ಯವಾದಗಳು. ಇದಕ್ಕೆ ನಿನ್ನ ಬೋನಸ್..??
ಸರಿ ಸರ್ ನಾನು ರಜೆಯಲ್ಲಿದ್ದೇನೆ ಎರಡು ವಾರ
ಮಾರನೆಯ ದಿನ ಮಿಲಿಂಡ್ ಗೊಂದು ಎಸೆಮ್ವೆಸ್ ಬಂತು
ಒಂದೇ ಅಕ್ಷರದ್ದು
ಡಿ
ಅಂದರೆ ಡೇಂಜರ್ ಅಪಾಯ
ಅಂದರೆ ಇದು ಮುಂದಿನ ತನ್ನ ಪ್ರೊಜೆಕ್ಟ್ ಅಥವಾ ಅಪಾಯದ್ದೇ ಮುನ್ಸೂಚನೆಯೋ?
ಮಿಲಿಂಡ್ ಇನ್ನೂ ಹತ್ತಿರಕ್ಕೆಳೆದುಕೊಂಡ ಸುನೀಯನ್ನ.
No comments:
Post a Comment