ಸುಭಿಕ್ಷ
ಯಲ್ಲಿ ಅಲೆಯುತ್ತಿರುವ ತ್ಯಾಂಪನಿಗೆ ಕಂಡಿತೊಂದು
ಹಳೆ ಸಾಮಾನಿನ ಅಂಗಡಿ
ಹಳೆ ಸಾಮಾನಿನ ಫ್ಯಾನಾಗಿರೋ ಆಟ ನುಗ್ಗೆ ಬಿಟ್ಟ
ಒಳಗೆ, ತರಹಾವರಿ ಹಳೆ ಹಿತ್ತಾಳೆ ಕಂಚು ತಾಮ್ರದ
ಸಾಮಾನುಗಳು ಚಿಕ್ಕವು ದೊಡ್ಡವು ಬೊಂಬೆ
ಕತ್ತರಿ ಗೋಲ ಗ್ಲೋಬು ಆರತಿ ಚೆಂಬು
ಮೂರ್ತಿ ಲೋಟ ಪಿಂಗಾಣಿ ಗಾಜು
ಮಧ್ಯೆ ಕಂಡಿತು ಅರ್ಧ ಹಿತ್ತಾಳೆ ಕಂಚು
ತಾಮ್ರದ ಲೇಪನದ ನಿಜ ಜೀವಂತ
ವಾಗಿರೋ ಭ್ರಮೆ ತರಿಸೋ ಒಂದು ಇಲಿ
ಯ ವಿಗ್ರಹ ಕಂಡು ಖುಷಿಯಾದ
ಅದೇ ಖುಶಿಯಲ್ಲಿ ಕೇಳೇ ಬಿಟ್ಟ
ಎಷ್ಟು ಇದರ ಬೆಲೆ
ಅದಕ್ಕೆ ಮುನ್ನೂರು ಮಾತ್ರ
ಆದರೆ ಅದರ ಹಿಂದಿನ ಇತಿಹಾಸಕ್ಕೆ ಮೂರು ಸಾವಿರ
ಎಂದ ಅಂಗಡಿಯಾತ
ಇತಿಹಾಸ ಯಾರಿಗೆ ಬೇಕು ಇಲ್ಲಿ
ತಕೋ ಇನ್ನುರಾ ಐವತ್ತು ಚೌಕಾಶಿಯಲ್ಲಿ
ಇಲಿ ಸಿಕ್ಕಿದ ಖುಷಿಯಲ್ಲಿ ಹೊರಟೆ ಬಿಟ್ಟ
ಕಯ್ಯಲ್ಲಿ ಹಿಡಿದು ಬಂಟ
ಸಂಜೆಯ ಮಬ್ಬು ಬೆಳಕಲ್ಲಿ
ಇಲಿ ನೋಡಿ ಖುಷಿಯಲ್ಲಿ
ಸವರಿದ ಅದರ ಬೆನ್ನು
ಯಾಕೋ ವಿಚಿತ್ರವೆನಿಸಿತು
ಜಿವಂತವೆ ಈ ಇಲಿ
ಅಥವಾ ತನ್ನ ಭ್ರಮೆಯೇ ಇಲ್ಲ
ಪಕ್ಕದಲ್ಲೆಲ್ಲೋ ಚೀಕ್ ಚೀಕ್ ಅಲ್ಲ
ದನಿ ಇಲಿಯದೇ ಸಂಶಯವೇ ಇಲ್ಲ
ಒಂದು ಎರಡಾಗಿ ನಾಲ್ಕಾಗಿ ನಾನೂರಾಗಿ
ತನ್ನಕಡೆಯೇ ಓಡಿ ಬರುತ್ತಿರುವ ಇಲಿಗಳು
ಸಣ್ಣಿಲಿ ದೊಡ್ಡಿಲಿ ಮೂಗಿಲಿ ಬಿಳೀಲಿ
ಕೆಮ್ಪಿಲಿ ಕಪ್ಪಿಲಿ ತ್ಯಾಂಪ ಹೆದರಿದ
ಹಿಂದೆ ಇಲಿಗಳು ದಂಡು
ಓಡಿದ ಓಡಿ ಓಡಿ ಓಡಿ ಓಡಿ ದಣಿದ
ಪಕ್ಕದ ಕಣಿವೆಯಲ್ಲಿ ಬಿಸಾಡಿದ
ಅಂತ;
ಪುನಃ ಬಂದುದ ನೋಡಿದ ಅಂಗಡಿಯವ
ನಕ್ಕು ನುಡಿದ ತ್ಯಾಂಪನಿಗೆ
ಮೊದಲೇ ಗೊತ್ತಿತ್ತು ನಮಗೆ
ಅದರ ಇತಿಹಾಸ ಕೇಳ ಬಂದಿರಾ
ಮೂರು ಸಾವಿರ ತಂದಿರಾ?
ತ್ಯಾಂಪ ಕೇಳಿದ ಆಸಕ್ತಿಯಿಂದ
ನಮ್ಮ ರಾಜಕಾರಣಿಗಳ ಹಾಗಿನ
ಮೂರ್ತಿಗಳು ನಿಮ್ಮಲ್ಲಿ ಇವೆಯಾ
No comments:
Post a Comment