Monday, March 16, 2015

ಇದುವೇ ಜೀವನ ೫ ಎಲ್ಲಾ ನಿನಗಾಗಿ

ಎಲ್ಲಾ ನಿನಗಾಗಿ


ತಂದೆಯ ಮರಣಾನಂತರ ಅವರ ಮಗ ತನ್ನ ಅಮ್ಮನನ್ನು ವೃದ್ಧಾಶ್ರಮದಲ್ಲಿ ಸೇರಿಸಿ ಆಗಾಗ್ಗೆ ಅವಳನ್ನು ನೋಡಲು ಹೋಗಿ ಬರುತ್ತಿದ್ದ.
ಒಂದು ದಿನ ಅವನಿಗೆ ಆ ವೃದ್ಧಾಶ್ರಮದಿಂದ ಕರೆ ಬಂತು..


ನಿನ್ನಮ್ಮ ತುಂಬಾನೇ ಸೀರಿಯಸ್ ಆಗಿದ್ದಾರೆ ಕೂಡಲೇ ಅವಳನ್ನು ನೋಡಲು ಬರುವುದು.
ಮಗ ಅಲ್ಲಿಗೇ ಹೋಗಿ ನೋಡುತ್ತಾನೆ ಅವ್ವ ನಿಜವಾಗಿಯೂ ಕೊನೆ ಗಳಿಗೆಯ ಮರಣ ಶಯ್ಯೆಯಲ್ಲಿದ್ದಾಳೆ.
ಮಗ ಕೇಳುತ್ತಾನೆ:
ಅಮ್ಮ ನಿನ್ನ ಈ ಕೊನೆ ಗಳಿಗೆ ಯಲ್ಲಿ ನಿನಗೇನಾದರೂ ಆಸೆ ಇದೆಯೇ? ಆ ನಿನ್ನ ಆಶೆಯನ್ನು ತೀರಿಸಲು ನಾನೇನು ಮಾಡಬೇಕು ಹೇಳು?
ಅಮ್ಮ ಹೇಳುತ್ತಾಳೆ
ಮಗನೇ ಈ ವೃದ್ಧಾಶ್ರಮದಲ್ಲಿ ಬಿಸಿಲಿನ ಬೇಗೆ ನೀಗಿಸಲು ಫ್ಯಾನ್ ಗಳಿಲ್ಲ, ಇಲ್ಲಿನ ರೂಮುಗಳಲ್ಲಿ ಪ್ಯಾನ್ ಹಾಕಿಸು. ಮತ್ತೆ ಇಲ್ಲಿ ರೆಫ್ರಿಜರೇಟರ್ ಕೂಡಾ ಇಲ್ಲ, ಅದಕ್ಕಾಗಿಯೇ ನಾನು ಹಲವಾರು ರಾತ್ರೆ ಊಟವಿಲ್ಲದೇ ಮಲಗ ಬೇಕಾಗಿತ್ತು. ಇದೇ ನನ್ನ ಕೊನೆಯ ಆಸೆ. ಇದನ್ನು ನೆರವೇರಿಸು.
ಮಗ ಆಶ್ಚರ್ಯದಿಂದ ಅಮ್ಮನನ್ನು ಕೇಳುತ್ತಾನೆ.
ಆದರೆ ಅಮ್ಮ ನೀನು ಇಲ್ಲಿರುವಷ್ಟು ಕಾಲ ನನ್ನನ್ನು ಯಾವ ಮಾತೂ ಕೇಳಲಿಲ್ಲವಲ್ಲ, ಈಗ ಈ ಇಳಿ ಹೊತ್ತಲ್ಲಿ ನಿನಗೆ ಇವುಗಳ ಅವಶ್ಯಕಥೆಯಾ..? ಏನಿದರ ಮರ್ಮ.
ತಾಯಿ ಉತ್ತರವಿತ್ತಳು
ಹೌದು ನನ್ನೊಡಲ ಕಂದಾ ನಾನು ಇಲ್ಲಿರುವಷ್ಟು ಕಾಲ ಇಲ್ಲಿನ ಬಿಸಿಲ ಬೇಗೆ, ಹಸಿವು ಮತ್ತು ನೋವು ಎಲ್ಲವನ್ನೂ ಸಹಿಸಿಕೊಂಡೆ. ಆದರೆ ನಿನ್ನ ಮಕ್ಕಳು ನಿನ್ನನ್ನು ಇಲ್ಲಿಗೆ ಕಳುಹಿಸುವಾಗ, ನೀನು ಇಷ್ಟನ್ನೆಲ್ಲಾ ತಡೆದುಕೊಳ್ಳಲಾರೆ ಮಗೂ ಅದಕ್ಕೇ ಈ ಬೇಡಿಕೆ ನಿನಗಾಗಿ ನಿನ್ನ ಒಳಿತಿಗಾಗಿ,
ಮಗ ಸ್ತಂಭೀಭೂತನಾದ.
ಇದೇ ಅಲ್ಲವೇ ಅಮ್ಮ ಅಂದರೆ ....!!!
ಅದಕ್ಕೇ ಹೇಳೋದು ಅಮ್ಮನ ಪ್ರತಿಸೃಷ್ಟಿ ಇಲ್ಲ


1 comment:

  1. ನಿಜ ಮಾತೃ ಹೃದಯದಷ್ಟು ಕ್ಷಮೆಯ ಮತ್ತು ಒಲುಮೆಯ ತಾವಿಲ್ಲ.

    ReplyDelete