Monday, March 16, 2015

ಇದುವೇ ಜೀವನ ೪ ಯಾರು ದುರದೃಷ್ಟವಂತ..?

ಯಾರು ದುರದೃಷ್ಟವಂತ..?


ಒಂದು ಸಾರಿ ಒಂದು ಬಸ್ಸಿನಲ್ಲಿ ತುಂಬು ಯಾತ್ರಿಕರ ಗುಂಪೊಂದು ಯಾವುದೋ ಕ್ಷೇತ್ರಕ್ಕೆ ಹೊರಟಿತ್ತು.
ಅಕ್ಕಾಸ್ಮಾತ್ತಾಗಿ ವಾತಾವರಣವೇ ಬದಲಾಯ್ತು.


ಬಿಳಿ ಮೋಡ ಕಪ್ಪಾಗಿ ಆಕಾಶವೇ ತುಂಬಿ ಮಳೆಯ ಹನಿ ಬೀಳಲಾರಂಭಿಸಿತು.
ಜಿನುಗು ಮಳೆ ಜೋರಾಗಿ ಜತೆಯಲ್ಲೇ ಚಟೀಲ್ ಚಟೀಲ್ ಮಿಂಚು
ಆಗಲೇ ಮಿಂಚು ಗುಡುಗು ಜತೆ ಕುಂಭದ್ರೋಣ ಮಳೆ ಹುಯ್ಯಲಾರಂಭಿಸಿತು.
ವಾಹನ ಚಾಲಕ ಇನ್ನೇನೂ ಮಾಡಲೂ ತೋಚದೇ ವಾಹನವನ್ನು ಒಂದು ದೊಡ್ಡ ಮರದ ಕೆಳಗೆ ನಿಲ್ಲಿಸಿದ.
ತಲೆಗೊಂದೊಂದು ಮಾತನಾಡಲು ಆರಂಭಿಸಿದರು ಎಲ್ಲರೂ.
ಈ ವಾಹನದಲ್ಲಿ ಯಾರೋ ಒಬ್ಬರು ದುರದೃಷ್ಟವಂತರಿದ್ದಾರೆ. ಅವರ ದೆಸೆಯಿಂದಲೇ ನಮಗೆಲ್ಲರಿಗೂ ಈ ಗತಿ ಬಂದಿದೆ. ಅವರು ಯಾರು ಅಂತ ನೋಡಲೇ ಬೇಕು ಇಲ್ಲವಾದರೆ ಎಲ್ಲರಿಗೂ ಒಂದು ಗುಟುಕು ನೀರೇ ಗತಿ.
ಅದಕ್ಕೇ ಎಲ್ಲರನ್ನೂ ಸಾಯಿಸುವ ಬದಲು ಹೀಗೆ ಮಾಡೋಣ ಒಬ್ಬೊಬ್ಬರಾಗಿ ಬಸ್ಸಿಂದ ಇಳಿದು ಆ ಮರವನ್ನು ಮುಟ್ಟಿ ವಾಪಾಸ್ಸಾಗೋಣ ಯಾರು ಅದೃಷ್ಟ ಹೀನರೋ ಅವರು ಹೊರ ಹೋದ ಕೂಡಲೆ ಅವರ ಮೇಲೆ ಈ ಸಿಡಿಲು ಬಿದ್ದು ಸಾಯಲಿ, ಎಲ್ಲರೂ ಯಾಕೆ ಸಾಯಬೇಕು ಎಂದುಕೊಂಡರು.
ಮೊದಲ ಮನುಷ್ಯನನ್ನಂತೂ ಮೂರ್ನಾಕು ಜನರು ಎತ್ತಿ ಹೊರಗೆ ಕಳುಹಿಸ ಬೇಕಾಯ್ತು. ಆತ ಪಾಪ ಹೆದರಿಕೊಂಡೇ ಮರವನ್ನು ಮುಟ್ಟಿ ವಾಪಾಸು ಬಂದು ಬದುಕಿದೆಯಾ ಬಡಜೀವವೇ ಅಂದುಕೊಂಡ.
ಹಾಗೇ ಉಳಿದವರೂ ಕೂಡಾ ಒಬ್ಬೊಬ್ಬರಾಗಿ ಬಸ್ಸಿಂದಿಳಿದು ಅ ದೊಡ್ದ ಮರವನ್ನು ಮುಟ್ಟಿ ವಾಪಾಸ್ಸು ಬರುತ್ತಿದ್ದರು.
ಒಬ್ಬನನ್ನು ಬಿಟ್ಟು ಮತ್ತೆಲ್ಲರೂ ಬಸ್ಸಿಂದಿಳಿದು ಆ ಮರವನ್ನು ಮುಟ್ಟಿ ವಾಪಾಸ್ಸಾದರು.
ಕೊನೆಯಲ್ಲುಳಿದವನೇ ಪಾಪಿ ಎಂದು ಎಲ್ಲರೂ ಅತನೆಡೆ ಅಪಹಾಸ್ಯ ಮಾಡುತ್ತಾ...ಸಿಟ್ಟಿನಿಂದ..
ಇವತ್ತು ನಿನ್ನಿಂದಲೇ ನಮ್ಮೆಲ್ಲರ ಪ್ರಾಣವೂ ಹೋಗುತ್ತಿತ್ತು, ದೇವರ ದಯೆ ಈ ಗ ನೀನು ಇಳಿದು ಬಿಡು ನಾವೆಲ್ಲರೂ ಬದುಕಿ ಬಾಳುತ್ತೇವೆ ಎನ್ನುತ್ತಾ ಆತನನ್ನು ಬಸ್ಸಿನಿಂದ ಜಬ್ಬರದಸ್ತೀ ಇಳಿಸಿದರು..
ಆತನೂ ಅಳುತ್ತಾ ತನ್ನ ಅದೃಷ್ಟವನ್ನು ಹಳಿಯುತ್ತಾ ಬಸ್ಸಿನಿಂದ ಇಳಿದು ಮರದ ಕೆಳಗೆ ಹೆಜ್ಜೆ ಹಾಕಿದ.
ಆತ ಇನ್ನೇನು ಮರವನ್ನು ಮುಟ್ಟ ಬೇಕೆಂದುಕೊಳ್ಳುವುದರಲ್ಲಿ ಆಕಾಶವೇ ತೂತಾದ ಹಾಗೆ ಸಿಡಿಲು ಬಡಿಯಿತು...
,
,
,
,
,


.
.
.
.
.
.
ಇಡೀ ಬಸ್ಸು ಧಗಧಗನೆ ಉರಿದು ಬಸ್ಸಿನೊಳಗಿದ್ದವರೆಲ್ಲರೂ ನೋಡ ನೋಡುತ್ತಿದ್ದಂತೆ ಭಸ್ಮೀಭೂತರಾದರು...

##


ಚಿತ್ರ ಕೃಪೆ: ಅಂತರ್ಜಾಲ

1 comment:

  1. ಪಾಪಿಗಳ ನಡುವೊಬ್ಬ ಅಸಲೀ ಪುಣ್ಯವಂತ!

    ReplyDelete