Thursday, March 5, 2015

ಬಣ್ಣ



ಬಣ್ಣ



ಬಣ್ಣ ಹೊಸತನ
ಬಣ್ಣ ಹೊಸ ದಿನ
ಬಣ್ಣ ಕನಸಿನ ನೆನಸ ಸೀಂಚನ

ಬಣ್ಣ ಜೀವನ
ಬಣ್ಣ ಪಾವನ
ಬಣ್ಣ ಕಳೆಯೇ ಹಳೆಯ ಕಳೆಯನ

ಬಣ್ಣ ಬಣ್ಣದೇ
ಬಣ್ಣವೇರಿರೆ ವರಸೆಯಲಿ ಹೊಸ
ಬಣ್ಣ ಬಳಿದುದು

ಬಣ್ಣವಿಳಿಯಲಿ
ಬಣ್ಣದಿಳೆಯಲಿ ಕಳೆಯಳಿದ ಹೊಸ
ಬಣ್ಣ ತಳೆವುದು



2 comments:

  1. ತೊಳೆವ ನೀರಿಗೆ ಇಲ್ಲ ಬಣ್ಣವು
    ತೊಳೆದ ಮೇಲೆ ಕಂಡ ನಿಜ ಬಣ್ಣ!

    ಹೋಳಿಗಾದರು ಬಳಿದ ಬಣ್ಣವು
    ಪ್ರೀತಿ ಇರಲಿ, ಕೇಳಿ ಬಳಸಿ ಬಣ್ಣವು.

    ReplyDelete
  2. ಧನ್ಯ-ನಿಮ್ಮ ಮೆಚ್ಚುಗೆಯ ನುಡಿಗಳಿಗೆ ಬದರಿ

    ReplyDelete