Saturday, March 14, 2015

ಇದುವೇ ಜೀವನ ೩ ವಿನಯ ಮತ್ತು ಪಾತ್ರತೆ

ವಿನಯ ಮತ್ತು ಪಾತ್ರತೆ

ಅದೊಂದು ಬಾವಿ ಕಟ್ಟೆ.

ಹಳ್ಳಿಯ ಹೆಂಗಸರು ನೀರಿಗಾಗಿ ಅಲ್ಲಿಗೇ ಬರುತ್ತಿದ್ದರು.

ಪಕ್ಕದಲ್ಲೊಂದು ದೊಡ್ಡ ಅರಳಿ ಮರವಿದ್ದು ಅದರ ಕಟ್ಟೆಯ ಮೇಲೆ ಊರ ದೇಶ ವಿದೇಶದ ಸಮಾಚಾರಗಳೂ ಮನೆಯ ನೆರೆಹೊರೆಯವರ ಸಮಾಚಾರಗಳ ವಿನಿಮಯ ಆಗುತ್ತಿದ್ದಿತು.
ಪ್ರಸ್ತುತ ನಾಲ್ಕು ಹೆಂಗಸರು ತಮ್ಮ ತಮ್ಮ ಕುಶಲ ಸಮಾಚಾರಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದರು.
ವಿಮಲಮ್ಮಾ ಏನು ನಿಮ್ಮ ಮಗ ಏನು ಮಾಡಿಕೊಂಡಿದ್ದಾನೆ? ಕಮಲಮ್ಮಕೇಳಿದರು.
ಏನು ಹೇಳಲಿ ಕಮಲಮ್ಮ ಅವನು ಅದ್ಯಾವುದೋ ಸಿಏ ಕಲ್ತಿದ್ದಾನಂತೆ ಹಗಲು ರಾತ್ರೆ ಬರ್ತಾ ಜನ ಬರ್ತಾ ಇರ್ತಾರೆ ಅವನ್ನ ಕೇಳ್ಕೊಂಡು, ಏನ್ಕೆಲ್ಸ ಅಂತೀರಾ..?
ಅಂದ್ರೆ ನಿಮ್ಗೆ ಈಗ ದುಡ್ಡಿನ ಕಮ್ಮಿ ಏನಿಲ್ಲ ಅಲ್ವಾ?
ಅಂತಾ ಮಕ್ಕಳ ಹೆರ್ಬೇಕಾದ್ರೆ ಪುಣ್ಯ ಮಾಡಿರ್ ಬೇಕು ಬಿಡಿ.. ಅಪ್ಪಯ್ಯಂಗೆ ನಂಗೆ ಏನ್ ಬೇಕೋ ಮಾಡಿಕೊಟ್ಟಿದ್ದಾನೆ.. ಮತ್ತೆ ನಿಮ್ಮ ಮಗ?
ನನ್ನ ಮಗ ಇಂಜಿನೀಯರ್ ಮಾಡಿ ಈಗ ಅದ್ಯಾವುದೋ ದೊಡ್ಡ ಕಂಪೆನಿಯಲ್ಲಿ ಮ್ಯನೇಜರ್ ಆಗಿದ್ದಾನೆ, ಕೈತುಂಬ ಸಂಬಳ, ಕೆಲ್ಸಕ್ಕೆ ಆಳು ಕಾಳು, ಅವನ ಜರ್ಬ್ ಏನ್ ಕೇಳ್ತೀರಾ..?
ಮತ್ತೆ ಆ ಗೀತಮ್ಮನ ಮಗ ?
ಅವನು ಡಾಕ್ಟರ್ ಓದ್ಕೊಂಡಿದ್ದಾನಂತಲ್ಲ, ಇವ್ರೆಲ್ಲಾ ಖರ್ಚ್ ಮಾಡಿ ಓದಿಸಿ ಈಗ ಎಲ್ಲೋ ಹೊರಗಡೆ ಅಮೇರಿಕಾದಲ್ಲಿದ್ದಾನಂತೆ.
ಮತ್ತೆ ಇವ್ರಿಗ್ ಖರ್ಚಿಗೆ ಎನಾರೂ ಕೊಡ್ತಾನಂತಾ?
ಕೊಟ್ಟಿದ್ರ್ ಅವ್ರ್ ಈ ಸ್ಥಿತಿಯಲ್ಲಿರ್ತಿದ್ರಾ? ಪಾಪ ಕೆಲ್ಸಕ್ಕೆ ಜನ ಇಲ್ಲೆ ಮುದ್ಕ್ರು ಅವ್ರೇ ಮಾಡ್ಕೋ ಬೇಕು.. ಅವರ ಕಥೆ ಹೇಳಲು ಮನಸ್ಸೇ ಬರಲ್ಲ.
ಮತ್ತೆ ಆ ಸರಳಮ್ಮನ ಮಗ ಏನ್ ಮಾಡಿಕೊಂಡಿದ್ದಾನಂತೆ ?
ಅವನು ಏನ್ಮಾಡ್ತಾನೆ ನಮ್ ಮಕ್ಳ ಹಾಗೆ ಅವನಿಗೆ ಓದು ತಲಿಗ್ ಹತ್ತಲಿಲ್ಲ, ಏನೋ ಇಲ್ಲೇ ಎಲ್ಲೋ ಮಾಸ್ತ್ರ ಕೆಲ್ಸ ಮಾಡಿಕೊಂಡಿದ್ದಾನಂತೆ ಬಿಡಿ
ಆಗಲೇ ನಾಲ್ಕೂ ಹೆಂಗಸರ ಮಕ್ಕಳು ಬರುವುದು ಕಂಡಿತು.
ಎಲ್ಲ ಹೆಂಗಸರೂ ತಮ್ಮ ಮಕ್ಕಳನ್ನು ಪಕ್ಕದವರಿಗೆ ಹೆಮ್ಮೆಯಿಂದ ಪರಿಚಯಿಸಿ ತಮ್ಮ ತಮ್ಮ ಮನೆ ಕಡೆ ಹೊರಟರು ನೀರಿನ ಕೊಡದೊಂದಿಗೆ .
ಕೊನೆಯವನು ಮಾತ್ರ ಅಮ್ಮನ ಕಾಲಿಗೆ ನಮಸ್ಕರಿಸಿ ಅವಳ ಸೊಂಟದಲ್ಲಿದ್ದ ನೀರಿನ ಕೊಡವನ್ನು ತಾನು ತೆಗೆದುಕೊಂಡು ಜತೆಯಲ್ಲಿಯೇ ಹೊರಟ.

2 comments:

  1. ಶಭಾಷ್ ಅಪ್ಪಟ ಭಾರತೀಯ.
    ಮಾಸ್ತರನೆಂದರೆ ಹೇಗಿರಬೇಕೆಂದು ತೋರಿಸಿಕೊಟ್ಟ.
    ನಿಜವಾದ ವಿನಯ ಮತ್ತು ಗೌರವ, ಅಭಿಮಾನಗಳ ಪಾತ್ರನಾಗುವ ವ್ಯಕ್ತಿತ್ವ.

    ReplyDelete
  2. ನಮ್ಮ ಈಗಿನ ಮಕ್ಕಳಲ್ಲಿ ಕಾಣಲು ಸಿಗದಂತಹದ್ದು

    ಧನ್ಯವಾದಗಳು ಬದರಿಯವರೇ..

    ReplyDelete