Tuesday, April 14, 2015

ಬ್ರೈನ್ ವಾಶ್ ಅಂಕ ೫... ತನಿಖೆ


ಮತ್ತೆ ನನಗೆ ನಾನೇ ಸಮಾಧಾನ ಮಾಡಿಕೊಂಡೆ.  ಬೇರೆ ಯಾವುದೇ ವಿಷಯ ನೆನಪಿಲ್ಲದೇ..
ನಾನು ಅಲ್ಲಿಗೆ ಹೋಗಿದ್ದರೆ ಮತ್ತೆ ಇಲ್ಲಿಗೆ ಹೇಗೆ ಬಂದೆ.
ಆದರೆ ನನ್ನ ಮನಸ್ಸಿನ ಸಮಾಧಾನ ವೂ ಜಾಸ್ತಿ ಸಮಯ ಉಳಿಯಗೊಡಲಿಲ್ಲ..
ಬೆಳ್ಳಂಬೆಳಗ್ಗೆಯೇ ಪೋಲಿಸು.
ಸಾಮಾನ್ಯ ಪೋಲೀಸ್ ಅಧಿಕಾರಿಗಳಿಗೆ ಮಿಲಿಟರಿಯ ಆಫೀಸಿನೊಳಕ್ಕೆ ಅಪ್ಪಣೆ ಇಲ್ಲದೇ ಪ್ರವೇಶವಿರುವುದಿಲ್ಲ.
ಹಾಗೆಲ್ಲಾ ಅವರು ಕೆಲಸವಿಲ್ಲದೇ ಬರುವುದೂ ಇಲ್ಲ. 
ಇದೊಂದು ಅಲಿಖಿತ ಒಪ್ಪಂದ ಅಷ್ಟೆ.
ಆದರೆ ಈಗ ಬಂದಿರೋದು ಅಸ್ಸಿಸ್ಟಂಟ್ ಕಮಿಶನರ್. 
ಆದರೂ ಹಾಗೆಯೇ ಸೀದಾ ಒಳಗೆ ಬರಲಿಲ್ಲ. ಮೊದಲು ತಮ್ಮ ಕಾರ್ಡ್ ಕಳುಹಿಸಿದರು.
ಕರ್ನಲ್ ವಿಶ್ವನಾಥನ್ ಸ್ವತಹ: ಹೊರ ಬಂದರು.
ಏನು ಕೌಲ್ ಸಾಹೇಬರು ಈ ಕಡೆ ದಯಮಾಡಿಸಿದ್ದು.
ದಯಮಾಡಿಸ ಬೇಕಾದ ಪ್ರಮೇಯ ಸಂಧರ್ಭ ಒದಗಿತಲ್ಲ.
ಕಲ್ಲಪ್ಪ ಅಸ್ಪತ್ರೆಯವರ ಕಂಪ್ಲೈನ್ಟ್ ನಮ್ಮಲ್ಲಿ ರಿಜಿಸ್ಟ್ರಿ ಆಗಿದೆ..
ಏನಂತೆ ?
ನಿಮ್ಮ ಆಫೀಸಿನ ಒಂದು ಜೋಂಗಾ ದಿಂದ ಅವರ ಆಸ್ಪತ್ರೆಯ ಮೂರು ಜನ ಜಖಂ ಆಗಿದ್ದಾರಂತೆ.
ಇದು ಯಾವಾಗ ನಡೆಯಿತು.
ನಿನ್ನೆ ರಾತ್ರೆ ಎರಡರಿಂದ ಮೂರು ಗಂಟೆಯ ಅವಧಿಯಲ್ಲಿ.
ಆದರೆ ಕೌಲ್ ಸಾಹೇಬರೇ ಅದು ಹೇಗೆ ನಮ್ಮದೇ ಆಫೀಸಿನ ಗಾಡಿ ಎಂಬ ನಿರ್ಣಯಕ್ಕೆ ಬಂದಿರಿ..?
ಕರ್ನಲ್ ಈ ಪಾರ್ಟಿ ಸಾಮಾನ್ಯವಾದುದಲ್ಲ. ನಿಮ್ಮ ಸಬ್ ಏರಿಯ ಆಫೀಸಿನಿಂದ ಮಾಹಿತಿ ಕಲೆ ಹಾಕಿಕೊಂಡೇ ನಮ್ಮಲ್ಲಿಯ ವರೆಗೆ ಬಂದಿದೆ ಈ ಸಮಾಚಾರ.
ಇಂತಹ ಮಾಹಿತಿಯಿಂದ ಏನು ಸಿದ್ಧ ಮಾಡುತ್ತಾರವರು..? ಇದೇ ಆಸ್ಪತ್ರೆಯ ಸಿಬ್ಬಂದಿಯಿಂದಲೇ ತಾನೇ ನಮ್ಮ ಅತ್ಯಂತ ಉತ್ತಮ ಅಧಿಕಾರಿಯ ಪತ್ನಿ ಮತ್ತು ಮಗ ಇನ್ನೂ ಕೋಮಾದಲ್ಲಿದ್ದಾರೆ..?
ಸ್ವರ ಏರಿಸ ಬೇಡಿ ಕರ್ನಲ್, ಆ ಕೇಸು ಮುಗಿದು ಹೋಗಿದೆ. ಕೋರ್ಟ್ ಅವರನ್ನು ನಿರಪರಾಧಿ ಅಂತ ನಿರ್ಧರಿಸಿತ್ತಲ್ಲಾ, ಅದನ್ನು ಮರೀ ಬೇಡಿ ನೀವು..
ನಿಮಗೆಷ್ಟು ಕೊಟ್ಟರವರು?
ಕರ್ನಲ್ ಮಾತು ರೊಚ್ಚಿಗೆಬ್ಬಿಸಿತು ಏಸಿಪಿಯನ್ನ.
ನಿಮ್ಮ ಲಿಮಿಟ್ ನಿಂದ ಹೊರ ಬರುತ್ತಿದ್ದೀರಾ ಕರ್ನಲ್... ನಾನು ಬಂದಿರೋದು ಇಲ್ಲಿ ಮಧ್ಯವರ್ತಿಯಾಗಿ...
ಏಸೀಪಿ, ನಿಮ್ಮ ಸಹಾಯ ನಮಗೆ ಅಗತ್ಯವಿಲ್ಲ.. ನೀವು ನಿಮ್ಮ ಕೆಲಸ ನೋಡಿಕೊಳ್ಳಿ ನಮಗೆ ನಮ್ಮ ಕರ್ತವ್ಯದ ಅರಿವಿದೆ.....ಹೊರ ಬಾಗಿಲು ಈ ಕಡೆ ಇದೆ.
ಪಶ್ಚಾತ್ತಾಪ ಪಡ್ತೀರಾ ಕರ್ನಲ್, ಲೋಕಲ್ ಜನರನ್ನು ವಿರೋಧಿಗಳನ್ನಾಗಿ ಮಾಡಿಕೊಂಡರೆ ನಷ್ಟ ಯಾರಿಗೆ ಗೊತ್ತಾಗುತ್ತೆ..
ಏಸೀಪಿ ಕೌಲ್ ಹೊರ ಹೊರಟರು...
ಅದನ್ನು ನಿಮ್ಮಿಂದ ಕಲಿಯಬೇಕಾಗಿಲ್ಲ ಏಸೀಪಿ, ನಿಮ್ಮಂತೋರು ಸರಿಯಾಗಿ ತಮ್ಮ ಕರ್ತವ್ಯವನ್ನು ನಿರ್ವಹಿಸಿದ್ದರೆ ... ಭಾರತದ ನಕ್ಷೆಯೇ ಬದಲಾಗುತ್ತಿತ್ತು. ಹಾಗಾಗಿಲ್ಲ ಇದು ನಮ್ಮವರ ದುರದೃಷ್ಟ.
*****
ಅಂದರೆ ನನಗೆ ಬಂದ ಕನಸ್ಸು ನಿಜವಾಗಿಯೂ ಘಟಿಸಿಯೇ ಬಿಟ್ಟಿತ್ತು.
ಎಲ್ಲಿಯವರೆಗೆ ಅಂದರೆ ಆ ಕಲ್ಲಪ್ಪ ಹಾಸ್ಪಿಟಲ್ ಇದಿರಿಗೇ ನಡೆದ ಅಪಘಾತದಲ್ಲಿ ಒಬ್ಬ ಚಾಲಕ ಮತ್ತು ಒಬ್ಬ ಮೆಕೆನಿಕ್ ಗಾಯಗೊಂಡಿದ್ದಾರಂತೆ.
ನಮ್ಮ ಜೋಂಗಾದ ಚಿತ್ರ ಕೂಡಾ ತೆಗೆದುಕೊಂಡು ಬಂದಿದ್ದರು ಆ ಏಸಿ ಪಿ, ಪುರಾವೆಗೆ ಅಂತ.
ಇದ್ದ ಒಂದೇ ಒಂದು ಜೋಂಗದ ಫೋಟೊ ತೆಗೆದುಕೊಂಡು ಹೋಗಲು ಕೂಡಾ ಪರ್ಮಿಶನ್ ಕೊಟ್ಟಿದ್ದರು ಕರ್ನಲ್ ವಿಶ್ವನಾಥ್.
ವಿಚಿತ್ರ ಎಂದರೆ ಅವರ ಫೋಟೊದಲ್ಲಿದ್ದ ಜೋಂಗಾ ನಮ್ಮಲ್ಲಿರೋ ಜೋಂಗದ ನಂಬರ್ ಅಲ್ಲ.
ಅದರ ನಂಬರ್ ಕೂಡಾ ಇನ್ನೊಮ್ಮೆ ಪರೀಕ್ಷಿಸಿ ಹೊರಟು ಹೋಗಿದ್ದರಂತೆ ಆ ಏಸಿಪಿ ಕೌಲ್.
ಆ ಆಸ್ಪತ್ರೆಯವರು ರಾಜಕೀಯವಾಗಿಯೂ ಬಲವಾದ ಕುಳವೇ ಆದುದ್ದರಿಂದ ಈ ಕೇಸು ದೊಡ್ಡದಾಗಬಹುದೆಂತಲೂ ಕೋರ್ಟ್ ಕಟ್ಟೆ ಹತ್ತಬಹುದೆಂತಲೂ ಎಚ್ಚರಿಸಿದ್ದರು.
ಆದರೆ ವಿಶ್ವನಾಥ್ ಅವರದ್ದು ಒಂದೇ ಉತ್ತರ. ಅದು ನಮ್ಮ ಗಾಡಿ ಅಲ್ಲವೇ ಅಲ್ಲ ಅಂತ.
ಅದೇನೇ ಇರಲಿ ರಾತ್ರೆ ಗಾಡಿ ಹೊರ ಹೋದುದಂತೂ ನಿಜ ಅಂತಾಯ್ತು.
ನನಗೆ ಒಂದು ಸಂಶಯ.
ಯಾಕೆಂದರೆ ಆ ರಾತ್ರಿ ನಾನು ನೋಡುವಾಗ ಎರಡು ಜೋಂಗ ಇದ್ದದ್ದು ನಿಜ ನಾನೇ ನೋಡಿದ್ದೇನೆ.
ಮತ್ತೆ ಇದು ಹ್ಯಾಗಾಯ್ತು..?
ಹಾಗಾದರೆ ನಾನು ಹೊರಗೆ ಹೋಗಿದ್ದು ನಿಜವಾ..?
ಮಧ್ಯಾಹ್ನ ಎರಡು ಗಂಟೆಯಿಂದ ನಾಲ್ಕರ ವರೆಗೆ ಸ್ವಲ್ಪ ಅಲ್ಲಿನ ವಾತಾವರಣವೇ ಮಂದವಾಗಿರುತ್ತದೆ.
ಅಧಿಕಾರಿಗಳು ತಮ್ಮ ತಮ್ಮ ಮನೆಗೆ ಹೋಗಿರುತ್ತಾರೆ. ಕಚೇರಿಯಲ್ಲಿ ಆ ಸಮಯ ಹೆಚ್ಚು ಕೆಲಸ ನಡೆಯುವದಿಲ್ಲ.
ಅದಕ್ಕೆಂದೇ ಕಚೇರಿಯ ವಾತಾವರಣವೂ ಬಿಕೋ ಎನ್ನುತ್ತಿರುತ್ತದೆ.
ಗೇಟ್ ನಲ್ಲೂ ಇಬ್ಬರೇ ಕುಳಿತಿದ್ದರು ಯಾವುದೋ ಹಳೆಯ ಜೋಕನ್ನು ಹಸಿರು ಮಾಡಿಕೊಳ್ಳುತ್ತಾ.....
ನನಗೇಕೋ ಇತ್ತೀಚೆಗೆ ಈ ಶಾಂತ ವಾತಾವರಣದ ಕಲ್ಪನೆಯೇ ಮುಂದಿನ ದೊಡ್ಡ ಅನಾಹುತಕ್ಕೆ ದಾರಿ ಎಂಬಂತೆ..
ಹೊರಗಡೆ ನೋಡುವಾಗದಾಗ ಅನ್ನಿಸಿದ್ದು...ಏನೋ ನಡೀತಾ ಇದೆ ಇಲ್ಲಿ ಅಂತ
ಯಾವುದೋ ಜೀಪ್ ಬಂದು ನಿಂತಿತು.. ಮಿಲಿಟರಿ ಜೀಪ್ ನ ಹಾಗೇ ಇದೆ..
ಅದರಿಂದ ಮಿಲಿಟರಿ ಧಿರುಸು ಹಾಕಿದ ಇಬ್ಬರು ಇಳಿದರು....
ಏನಾಯ್ತೆಂದು ಯೋಚಿಸುವುದರೊಳಗೆ.....
ಢಮಾರ್!!!
ನೋಡ ನೋಡುತ್ತಿದ್ದಂತೆ ದೊಡ್ಡ ಶಬ್ದದೊಂದಿಗೆ ನನ್ನ ಇದಿರಿನ ಇಟ್ಟಿಗೆಯ ಗೋಡೆಯೇ ನೆಲಸಮವಾಯ್ತು, ಜತೆಗೇ ಧೂಳೂ ಕಟ್ಟೋಣದ ಎರಡರಷ್ಟು ವ್ಯಾಪಿಸಿತು.
ಇಟ್ಟಿಗೆಯ ಗೋಡೆಯೊಡೆದ ಶಬ್ದ... ಆ ಧೂಳು ನನ್ನ ಕಣ್ಣುಗಳು ಅನಾಯಾಸವಾಗಿ ಮುಚ್ಚಿಕೊಂಡವು..
ಮುಖದ ಮೇಲೆ ನೀರು ಬಿತ್ತೇ.... ಅಥವಾ ಅದು ಸುಗಂಧ ದೃವ್ಯವೋ
ಗೊತ್ತಿಲ್ಲ...
ನಿಧಾನವಾಗಿ ಮಂಪರು ಆವರಿಸಿತು..
ಆ ಮಂಪರಿನಲ್ಲೂ ನನ್ನನ್ನೆತ್ತಿದ ಇಬ್ಬರಲ್ಲೊಬ್ಬ ಮತ್ತೊಬ್ಬನಿಗೆ
ಚಲೋ ಕಾಮ್ ಹೋಗಯಾ...
ಅಂದದ್ದು ಸ್ಪಷ್ಟವಾಗೇ ಕೇಳಿಸಿತು.


(ಮುಂದುವರಿಯುವುದು )

No comments:

Post a Comment