Saturday, April 18, 2015

ಲಹರಿ




ಕಾದಿದ್ದೆ ನಿದ್ದೆಯಿಲ್ಲದ ಹಲವು ರಾತ್ರೆ
ಬೇಕಾದುದೆಲ್ಲವ ಜತೆಗಿಟ್ಟು
ಆದರೂ ಬರಲಿಲ್ಲ
ನೀನು

ಶಿವನೇರಿ ಏರಿದ್ದೆ, ಹತ್ತಿದ್ದೆ ನಂದಿ
ಕಳೆದಿದ್ದೆ ಹತ್ತು ದಿನ
ಆದರು ಸುಳಿವೇ ಇಲ್ಲ
ನಿನ್ನದು

ಬೀಸ ಬಯಲಲ್ಲೂ
ತುಂಬು ಮಡುವಲ್ಲೂ
ಹರಿವ ತೊರೆಯಲ್ಲು
ನಿಂತು ಕಾದೆ
ಪತ್ತೆಯೇ ಇಲ್ಲ
ನೀನು

ನಿಗಿ ನಿಗಿ ಕೆಂಡದ ಬಿರು ಬಿಸಿಲಲ್ಲಿ
ಇನ್ನೇನು ಬದಲಾಗೋ ಸಂಕೇತದ
ಆ ಕ್ಷಣ ಪ್ರತ್ಯಕ್ಷ
ನೀನು

image curtsy: Internet

1 comment:

  1. ಬಿರು ಬಿಸಿಲೇ ಬೇಕಾಯಿತು ನೋಡಿ!
    ಕವನದ ನಡೆಯು ನನ್ನಂತಹ ಮೊಗ್ಗಿನ ಕವಿಗಳಿಗೆ ಮಾರ್ಗದರ್ಶಕ ಶೈಲಿಯಂತಿದೆ.

    ReplyDelete