Tuesday, April 14, 2015

ಸೋತು ಗೆದ್ದ ಕಥೆ
ಯಾಕೋ ಕದನ ಮೂರನೆಯ
ಮಹಾಯುದ್ಧವೇ ಅನ್ನಿಸಿ ಬಿಟ್ಟಿತು
ಕಾರಣವಂತು ನೆನಪೇ
ಇಲ್ಲ ಈಗ ಬಿಡಿ
ಆದರೆ ಅರುತ್ತಾರು ಕೂಡಾ
ಬದಲಾಯ್ತು ಮುವತ್ತಾರಾಗಿ


ಬೆಳಿಗ್ಗೆ ಎಂದಿನಂತೆ
ಮೌನ ಗೌರಿದೇ ತಿಂಡಿ ಕಾಫಿ
ನನಗೂ ಕದನ ವಿರಾಮದ

ಮನಸ್ಸಿತ್ತಾದರೂ
ಇಷ್ಟು ಬಿಗುಮಾನ ಇರದಿದ್ದರೆ ಹೇಗೆ
ಪತಿ ದೇವನಾಗಿ
ಸರಿ ಮಾತಿಲ್ಲ ಕಥೆಯಿಲ್ಲ
ಪತ್ರ ಉ ಹುಂ ಇಲ್ಲ
ಹಿಂದಿನ ಕಾಲ ಕೆಟ್ಟು ಹೋಯ್ತಾ ..?
ಆದರೂ ಯಾವುದರಲ್ಲೂ ಮನಸ್ಸಿಲ್ಲ
ದಪ್ತರಿನಲ್ಲಿ ಒಂದಕ್ಕೊಂದು
ಆದರೂ
ಕೆಲಸದಲ್ಲಿ ಮರೆತಿದ್ದೆ ಎಲ್ಲಾ
ಯಾಕೋ ಮದ್ಯಾಹ್ನ ಒಮ್ಮೆ
ಕರವಾಣಿ ಎತ್ತಿ ನೋಡಿದೆ
ಆರು ಮಿಸ್ಕಾಲ್
ಎರಡು ಕ್ಲೈಂಟು ದು 
ಮೂರು
ಮತ್ತೊಂದು ಧರ್ಮ ಪತ್ನಿದು
ಕಾಲ್ ಮಾಡಿದ್ಯಾ ಕೇಳಿದೆ
ಗೆದ್ದ ಗತ್ತಿನಲ್ಲಿ
ಕಿಲ ಕಿಲನಕ್ಕ ಶಬ್ದ ಆ ಕಡೆ
ಯಾಕೆ ನಗು ಡೇಟ್ ನೋಡಿ ಕೊಳ್ಳಿ
ನೋಡಿದೆ ತುಥ್ ಮೊನ್ನೆದು
ನೆನಪಾಯ್ತು ನನ್ನ ಮೊಬಾಯಿಲ್
ಸಿಗಲಿಲ್ಲ ಅಂತ ನಾನೇ ಮಿಸ್ ಕಾಲ್ ಕೊಟ್ಟಿದ್ದು
ಮತ್ತೊಮ್ಮೆ ಅದೇ ನಿರಮ್ಮಳ ನಗು
ಆದರು ಗೆದ್ದದ್ದು
ಬಿಡಿ

ನಾನೇ ತಾನೇ

No comments:

Post a Comment