Monday, April 20, 2015

ಜೀವನ ಸಾಗರ



ಇದಿರಿಗೆ
ಸಾಗರದ
ತುಂಬು ನೋಟ
ಏರಿಳಿವ ಅಲೆಗಳ ಮೋಹಕ ಆಟ
ಬಿಳಿನೊರೆಯ ಸಾಗಾಟ
ದಾಟಿದರೆ
ತೋರಿಕೆಗೆ ನೀಲ ಶಾಂತ,

ಆದರೆ
ಗರ್ಭವೋ ಪ್ರಚಂಡ ದಂಡು
ಅಣುವಿಂದ ಮಹತಿಗೆ ಕಾದಿಹವು
ಒಂದೊಂದನ್ನೇ ಇಡಿಡೀಯಾಗಿ
ನುಂಗಿ ನೊಣೆಯಲು
ಕರಗಿಸಿ ಅರಗಿಸಿಕೊಳ್ಳಲು
ತಿಮಿಂಗಿಲ, ಶಾರ್ಕ್,ಅಷ್ಟಪದಿ
ಒಂದೆರಡೇ ಹೆಸರಿಸಲು
ಲೆಕ್ಕವಿಲ್ಲದಷ್ಟು,

ಒಂದರಿಂದೊಂದು ಬಲ ಇವಕ್ಕೆ
ಇವನ್ನೆದುರಿಸಲು ಶಕ್ತಿ
ಇದೆಯಾದರೆ
ಹೆದರಿಸಿ ಓಡಿಸಲು ಯುಕ್ತಿ
ನಿನಗಿಲ್ಲಿ ಸ್ಥಾನ ಪಕ್ಕಾ
ಇಲ್ಲದಿರೆ ಈಗಲೇ
ಲೆಕ್ಕ ಚುಕ್ತಾ

ಕಲಿಯಬೇಕು ಇಲ್ಲೇ
ಇಂದೇ ಮುನ್ನುಗ್ಗಲು
ಇಂಥಹುಗಳ ಕೈ ಬಾಯಿಗೆ
ಸಿಲುಕದೇ ಪಾರಾಗಲು
ಬಾಳಲು
ಆಳದಡಿ ಸಿಗುವುದು
ಅಮೂಲ್ಯ ಸಂಪತ್ತು
ಹವಳ
ಮುತ್ತು

1 comment:

  1. ಒಂದರಿಂದೊಂದು ಬಲ ಎಂಬುದನ್ನು ಸಕಲ ಚರಾಚರಗಳು ಪದೇ ಪದೇ ತಿಳಿಸಿಕೊಡುತ್ತಿದ್ದರೂ, ಮನುಜ ಬಿಡನು ಏಕಮಾದ್ವಿತೇಯತೆಯ ಪೊಗರು!

    ReplyDelete