ಅಂಕ ೧ ಹಿನ್ನೆಲೆ
ಬೆಳಿಗ್ಗೆ ಬೇಗ ಎಚ್ಚರಾಯ್ತು.
ನನಗೆ ಯಾವಾಗಲೂ ಹಾಗೆಯೇ. ಏನಾದರೂ ವಿಶೇಷ ಘಟಿಸುವದಾದರೆ ನನ್ನ ಮನಸ್ಸು ಸ್ನಿಗ್ಧ ಸ್ಥಿತಿಯಲ್ಲಿರುತ್ತದೆ.
ನನ್ನ ಸುಪ್ತ ಮನಸ್ಸು ಮುಂದಾಗುವದನ್ನು ಮೊದಲೇ ಯೋಚನೆ ಮಾಡಿ ಇಟ್ಟಿರುತ್ತದೆ.
ಈ ಸಾರಿಯಂತೂ ಮೂರ್ನಾಲ್ಕು ದಿನಗಳಿಂದ ನನ್ನ ಮನಸ್ಸು ಪೂರ್ವಾನುಮಾನದಲ್ಲಿತ್ತು. ಒಂತರಾ ಟ್ರಾನ್ಸ್ ನಲ್ಲಿದ್ದ ಹಾಗೆ.
ಹಾಗೆ ಇದೇ ಮೊದಲಲ್ಲ ಅನ್ನಿ ಈ ಮೊದಲೇ ಮೂರ್ನಾಲ್ಕು ಬಾರಿ ಇಂತಹ ಅತೀಂದ್ರಿಯ ಪೂರ್ವಾನುಭಾಸ ಆಗಿತ್ತು
ಅದನ್ನೇ ಕಾಯುತ್ತಿದ್ದೆ. ನನ್ನೆಲ್ಲಾ ಮುಂಜಾನೆಯ ವಿಧಿಗಳನ್ನು ಪೂರೈಸಿ.
ಅಂದು ಕೊಂಡಂತೆ ಸುಮಾರು ಎಂಟು ಗಂಟೆಗೆ ಕರೆ ಬಂತು. ಎಲ್ಲಿಂದ ಅಂತ ಕೇಳಬೇಡಿ ಪ್ಲೀಸ್. ದೇಶದ ಭದ್ರತೆಯ ಪ್ರಶ್ನೆ ಇದು.
ವಾರದ ತರಭೇತಿ ಎರಡೇ ದಿನಗಳಲ್ಲಿ ಪೂರೈಸಿದ ನಿಷ್ಣಾತ ನಾನು. ಈ ಮಿಶನ್ನಿನಲ್ಲಿ ನಮ್ಮ ಗುರಿ ಯೋಜನೆಗಳೆಲ್ಲವೂ ಮೊದಲೇ ಯೋಚಿಸಿದವುಗಳಲ್ಲ.
ಅದನ್ನು ಆಯಾ ಕೆಲಸಕ್ಕೆ ಆಯಾ ಸಮಯಗಳಲ್ಲಿ ಆಯಾ ಸ್ಠಿತಿಗನುಸಾರವಾಗಿ ನಾವೇ ಮುಂದುವರಿಸಿಕೊಂಡು ಹೋಗಬೇಕು.
ಇದಂತೂ ನಿಮಗೆ ತಿಳಿದೇ ಇದೆಯಲ್ಲ..ಪ್ರತಿ ಕ್ಷಣದಲ್ಲೂ ನಮ್ಮ ಗೌಪ್ಯತೆ ಕಾಪಾಡಿಕೊಳ್ಳಬೇಕಾದದ್ದು ಮುಖ್ಯ ಕರ್ತವ್ಯ ಅಂತ.
ಈಗಿನ ಸ್ವಾರ್ಥೀ ರಾಜಕಾರಣ ಮತ್ತು ಲೋಲುಪತೆಯ ವ್ಯಾಪಾರೀ ಮನೋಭಾವನೆಯ ನಡುವೆ ನೀವು ಯಾರನ್ನೂ ನಂಬುವಂತೆಯೇ ಇಲ್ಲ.
ನನ್ನನ್ನು ಎಲ್ಲಾ ರೀತಿಯಿಂದ ಪರೀಕ್ಷಿಸಿ ನಾನು ಯೋಗ್ಯನೆಂದು ಮನದಟ್ಟಾದ ಮೇಲೆಯೇ ನನಗೆ ಈ ಕೆಲಸ ಕೊಟ್ಟದಲ್ವಾ..?
ನನಗೆ ಅತ್ಯಂತ ಅಪಾಯಕಾರೀ ಸನ್ನಿವೇಶದಲ್ಲಿ ಮಾತ್ರ ಹೇಳ ಬಹುದಾದಂತಹ ಹೆಸರೊಂದಿದೆ.
ಸಾರಿ ಸತ್ಯ ನಿಮಗೂ ನಾನು ತಿಳಿಸುವಂತಿಲ್ಲ..ಸೀಕ್ರೇಟ್ ಯು ನೋ..?
ನನ್ನ ಬುದ್ದಿ ಮತ್ತೆಗೇ ಸವಾಲು ಇದು. ಯಾಕೆ ನನ್ನನ್ನು ನಾನೇ ಅಂತ ಅಪಾಯಕಾರೀ ಸನ್ನಿವೇಶಕ್ಕೆ ಸಿಕ್ಕಿಸಿ ಕೊಳ್ತೇನೆ ನಾನು ಅಲ್ಲವೇ..
ಆದರೆ ಕನಸು ಮನಸಲ್ಲೂ ನಾನೆಣಿಸಿರಲಿಲ್ಲ ಆ ಹೆಸರನ್ನು ನಾನು ಉಪಯೋಗಿಸಿ ಕೊಳ್ಳಬೇಕಾಗಬಹುದು ಅಂತ.
ಗ್ರೇಟ್ ಅಲ್ಲ..?
ಹೊಸ ರೀತಿಯ ಕೆಲಸದಲ್ಲಿ ನನ್ನ ಇದುರಿರುವ ಎಲ್ಲರೂ ಭಾಗಿಗಳೇ. ಹೊಸ ರೀತಿಯ ಮಿಶನ್ ಇದು ಹೆಸರು
೧. ಎಮ್ ಐ ಜೀರೊ ವನ್
"ನೀವು ಕ್ಯಾಪ್ಟನ್ ರಾಠೋರ್ ರವರನ್ನು ಕರೆಯಿರಿ."
ನನಗೆ ಅಂತಹ ಅಪಾಯಕಾರೀ ಸನ್ನಿವೇಶ ಒದಗಿದರೆ ಅವರ ಹೆಸರನ್ನು ಹೇಳ ಬಹುದು ಎಂದಿದ್ದಾರೆ.
"ಯಾರವರು...?" ಕೇಳಿದ ಮಿಲಿಟರಿಯವ.
ಮೊನ್ನೆ ಸಂಜೆ ನನ್ನನ್ನು ಚಂದೀಗರ್ ನಿಂದ ಕಳುಹಿಸಲಾಗಿತ್ತು. ಚಂದಿಗರ್ ನಲ್ಲಿ ನಾನು ಭೇಟಿಯಾಗ ಬೇಕಿದ್ದವ ಮಿಲಿಟರಿ ಪೋಲೀಸ್.
ನನ್ನನ್ನು ಶ್ರೀನಗರಕ್ಕೆ ಹೋಗುವ ಒಂದು ಪೆಟ್ರೋಲ್ ಟ್ಯಾಂಕರಿನಲ್ಲಿ ಕಳುಹಿಸಿಕೊಟ್ಟಿದ್ದ. ನನ್ನ ಮೊದಲ ಬೇಸ್ ಕಾಶ್ಮೀರ.
ಅದರ ಚಾಲಕನೋ ಪಂಜಾಬಿ. ಸಿಕ್ಕಿದ ಕಡೆಯಲ್ಲೆಲ್ಲಾ ನಿಲ್ಲಿಸುತ್ತಾ ಕೇಳಿದರೆ ಟೋಲ್ ತಪ್ಪಿಸಲು ಅನ್ನುತ್ತಾ ಸಮಯ ಕಳೆಯುತ್ತಿದ್ದ..
ಅವನ ಅಜಾರೂ ಕಥೆಯೋ ನನ್ನ ದುರದೃಷ್ಟವೋ ಗೊತ್ತಾಗಲಿಲ್ಲ. ಶ್ರೀನಗರಕ್ಕೆ ತಲುಪುವ ಮೊದಲೇ ಅಂದರೆ ಜಮ್ಮುವಿನಲ್ಲಿ ನಮ್ಮನ್ನು ಹಿಡಿದರು ಮಿಲಿಟರಿಯವರು.
ಆ ಕಳ್ಳ ಕೊರಮ ಚಾಲಕನಲ್ಲಿ ಸರಿಯಾದ ಕಾಗದ ಪತ್ರಗಳೇ ಇರಲಿಲ್ಲವಂತೆ.. ಅಲ್ಲದೇ ಮಿಲಿಟರಿಗೆ ಅಂತ ಬಂದ ಆ ಪೆಟ್ರೋಲ್ ಟ್ಯಾಂಕರ್ ಸಂಪೂರ್ಣ ಖಾಲಿಯಿತ್ತು.
ಇದರ ಸಮರ್ಪಕ ಉತ್ತರ ಗಾಡಿಯ ಮಾಲೀಕನಿಂದ ಅಥವಾ ಪಡೆದುಕೊಳ್ಳಬೇಕಾದ ಮಿಲಿಟರಿ ಕಚೇರಿಯಿಂದ ಏನಾದರೂ ಕುರುಹು ಅಥವಾ ಒಪ್ಪಿಗೆ ಸಿಗದೇ ನಮ್ಮನ್ನು ಅವರು ಮುಂದಕ್ಕೆ ಬಿಡುವಂತಿಲ್ಲವಂತೆ.
ನಾವು ಹಿಂದಕ್ಕೆ ಸಹಾ ಹೋಗಲಾರೆವು. ಆಗಲೇ ಅನಿವಾರ್ಯವಾಗಿ ನನ್ನನ್ನೂ ಪರೀಕ್ಷೆಗೊಳಪಡಿಸಿದರವರು..
ಮಿಲಿಟರಿ ತನಿಖೆ ಗೊತ್ತಲ್ಲ ನಿಮಗೆ. ನನ್ನ ಕನಸಿನೊಳಕ್ಕೂ ಹೊಕ್ಕು ನೋಡುವಂತವರು ಅವರು..
ಅಮೂಲಾಗ್ರವಾಗಿ ನನ್ನ ತನಿಖೆ ಮಾಡಿದರು.
ಆ ರಾತ್ರೆ ನಾವು ಅಲ್ಲಿಯೇ ಇದ್ದೆವು. ನನಗೊಂದು ಕನಸು ಬಿತ್ತು. ನನ್ನ ಕಣ್ಣೆದುರೇ ಒಬ್ಬ ಮನುಷ್ಯನ ಕೊಲೆಯಾಯ್ತು ಭೀಕರವಾಗಿ ನನ್ನ ಕಣ್ಣೆದುರೇ... ಆತನ ಕುತ್ತಿಗೆಯಿಂದ ಬಳಬಳನೆ ರಕ್ತ ಬುಗ್ಗೆಯಾಗಿ ಹೊರ ಬರುತ್ತಿದ್ದರೆ ನನಗೇ ವಾಂತಿ ಬಂದ ಹಾಗಿತ್ತು ಆ ಭೀಭತ್ಸ ದೃಶ್ಯ...
# # #
ಮಿಲಿಟರಿ ಆಫೀಸರ್ ನನ್ನ ನೋಡಿದ "ಹೇಳಿ ಎಲ್ಲಿಂದ ಬಂದಿರಿ ನೀವು ನಿಮ್ಮ ಬಳಿ ಇದೊಂದೇ ಬಿಲ್ಲೆ ಸಿಕ್ಕಿತ್ತು. ಅದರಲ್ಲಿ I0IW ಎಂತ ಬರೆದಿತ್ತು."
ಆಗ ನನಗೆ ಅನಿವಾರ್ಯವಾಗಿ ಯಾರ ಹೆಸರನ್ನು ನನ್ನ ಮಿಷನ್ನಿನ ಅಂತ್ಯದ ವರೆಗೂ ಹೇಳ ಬಾರದು ಎಂದುಕೊಂಡಿದ್ದೆನೋ ಆ ಹೆಸರನ್ನು ಹೇಳಲೇ ಬೇಕಾಗಿತ್ತು. ನನ್ನ ಮಿಷನ್ನಿಗೆ ಹೊರಡುವ ಮುನ್ನ ಅಧಿಕಾರಿ ಹೇಳಿದ ಹೆಸರೇ ಅದು.
"ಅಂತವರ್ಯಾರೂ ಇಲ್ಲಿಲ್ಲ". ಎಂದನಾತ.
ನಾನು ತಲೆಯೋಡಿಸಿದೆ.. "ನಿಮ್ಮಲ್ಲಿ ಇಲ್ಲದಿದ್ದರೆ ಹೆಡ್ ಆಫೀಸ್ ನಲ್ಲಿ ಕೇಳಿ.. ನಾನು ಅವರ ಬಳಿಯೇ ಹೇಳ್ತೇನೆ.."
"ಅದು ಆಗಲ್ಲ " ಎಂದನಾತ ದೃಡವಾಗಿ.
"ಯಾಕೆ ಆಗಲ್ಲ..?" ನನ್ನ ಮಾತಿನಲ್ಲಿ ಖಚಿತತೆಯಿತ್ತು.
"ಯಾಕೆಂದರೆ ನಿನ್ನೆ ರಾತ್ರೆಯೇ ಯಾರೋ ಅವರ ಕುತ್ತಿಗೆ ಕತ್ತರಿಸಿ ಭೀಕರವಾಗಿ ಕೊಲೆ ಮಾಡಿದ್ದಾರೆ"
ನನ್ನ ಜಂಗಾಬಲವೇ ಉಡುಗಿತು.
ನನ್ನತ್ತ ನೋಡದೇ ಆ ಸಮವಸ್ತ್ರದ ಅಧಿಕಾರಿ ಅವನ ಅನುಯಾಯಿಗೆ ಹೇಳಿದ
"ಏಯ್ ಇವನನ್ನು ಆ ಯುದ್ಧ ಬಂಧಿಗಳ ಸೆಲ್ ಗೆ ಹಾಕು."
ನಖ ಶಿಕಾಂತ ಬೆವರಿದೆ.
ನಾನು ಯುದ್ದ ಖೈದಿ..?
@@@@@@@
(ಮುಂದುವರಿದುದು..)
____________________________________________________________
ಚಿತ್ರ ಕೃಪೆ: ಅಂತರ್ಜಾಲ
ಪರಮಾತ್ಮ!!! ಮುಂದೇನಾಯಿತು? ಬೇಗ ಬರೆಯಿರಿ...
ReplyDeleteಇದೇ ಕಥೆ ಕೊಕ್ ಕೊಟ್ಟಿದ್ದೇನಲ್ಲ ಕಾಜಾಣ ಮತ್ತು 3K ಯಲ್ಲಿ
ReplyDeleteಅವರು ಮುಂದುವರಿಸಲಿ . . . . .
ನಾನು ನಂತರ ಮುಂದುವರಿಸುವೆ
This comment has been removed by the author.
ReplyDeleteಇದೇ ಕಥೆ ಕೊಕ್ ಕೊಟ್ಟಿದ್ದೇನಲ್ಲ ಕಾಜಾಣ ಮತ್ತು 3K ಯಲ್ಲಿ
ReplyDeleteಅವರು ಮುಂದುವರಿಸಲಿ . . . . .
ನಾನು ನಂತರ ಮುಂದುವರಿಸುವೆ