Friday, April 3, 2015

ತ್ಯಾಂಪ ತ್ಯಾಂಪಿಯರ ಸಲ್ಲಾಪನನಗೆಲ್ಲೋ ಬುದ್ದಿ ಭ್ರಮೆ ಆಗಿತ್ತು ಇಲ್ಲದ್ದಿದ್ದರೆ ನಿಮ್ಮಂತವರನ್ನು ಕಟ್ಟಿಕೊಳ್ಳುತ್ತಿರಲಿಲ್ಲ ಅಂದಳು ಒಮ್ಮೆ ತ್ಯಾಂಪಿ.
ಇದ್ದಿರಬೇಕು ಕಣೇ ಎಂದ ತ್ಯಾಂಪ ಮುಂದುವರಿಸುತ್ತಾ ಸುಂದರತೆ ಬುದ್ದಿ ಇರಲ್ಲ ಎಂದ
ಅದೂ ನಿಮ್ಮ ಅದೃಷ್ಟ ಎಂದಳು ತ್ಯಾಂಪಿ ಬಿಡದೇ
ನಿನ್ನದೂ ಕೂಡಾ, ನನ್ನ ಹತ್ರ (ನಿನ್ನಲ್ಲಿಲ್ಲದ ) ಬುದ್ದಿವಂತಿಕೆ ಇದೆಯಲ್ಲಾ ಅದಕ್ಕೇ ನಿನ್ನನು ಮದುವೆಯಾದದ್ದು. ಅಂದ ತ್ಯಾಂಪ.

ಇದ್ದರೂ ಉಪಯೋಗಿಸಲು ಗೊತ್ತಿಲ್ಲದ ಬುದ್ದಿವಂತಿಕೆ ಇದ್ದರೇನು ಇಲ್ಲದಿದ್ದರೇನು ಎರದೂ ಒಂದೇ ಎಂದಳು ತ್ಯಾಂಪಿ ತನ್ನ ಪಟ್ಟು ಬಿಡದೇ.

ನೋಡೂ ಎಲ್ಲರೂ ಉಪಯೋಗಿಸಿ ಉಪಯೋಗಿಸಿ ಅವರ ತಲೆ ಖಾಲ್ಲಿಯಾಗುತ್ತದೆ, ನೋಡಿಲ್ವಾ ಅರುವತ್ತಕ್ಕೆ ಅರುಳು ಮರುಳು ಅಂತಾರಲ್ಲ
ನನಗೆ ಹಾಗೇನೂ ಆಗಲ್ಲ, ಎಲ್ಲಾ ಬುದ್ದಿವಂತಿಕೆ ಹಾಗೇ ಇಟ್ಟುಕೊಂಡಿದ್ದೇನೆ ನಾನು ಗ್ರೇಟ್ ಅಲ್ವಾ.? ಅಂದ ತ್ಯಾಂಪ.
ನೋಡು ಝೀರೊ ವಾಟ್ಸ್ ಬಲ್ಬು ನಮ್ಮ ಮನೆ ಮೂಲೆ ಬೇಳಗೋಲ್ಲಾ, ಇಡೀ ಮನೆ ಏನು ಬೆಳಗೀತು ಹೇಳು..? ತ್ಯಾಂಪಿ ಎಂದಳು.
ಏನೂ ಏನಂದೆ..? ತ್ಯಾಂಪ್ ಬಿಸಿಯಾದ.
ಅಲ್ಲಾ, ಮದುವೆಯಾಗುವ ಮೊದಲು ನನ್ನ ಮೇಲೆ ಏನು ಪ್ರೀತಿ ಅದೇನು ಪ್ರೇಮ, ಮಾತು ಮಾತಿಗೆ ಪ್ರೀತಿ ವ್ಯಕ್ತ ಪಡಿಸುತ್ತಿದ್ರಿ.
ಪ್ರತಿ ಸಲ ಬಂದಾಗ್ಲೂ ಏನಾದರೂ ಗಿಫ್ಟ್ ತಂದು ಕೊಡುತ್ತಿದ್ರಿ....
ಎಲ್ಲವೂ ಮದುವೆಯಾದ ಮೇಲೆ ಹೇಳಹೆಸರಿಲ್ಲದಂತೆ ಮಾಯವಾದುವು..
ಮಾತು ಮಾತಿಗೆ ಜಗಳ ನನಗೂ ಸಾಕಾಗಿ ಹೋಯ್ತು... ಕಣ್ರೀ.. ತ್ಯಾಂಪಿ.
ಅಲ್ಲಾ ಕಣೇ ಮೀನು ಹಿಡಿದ ಮೇಲೂ ಅದಕ್ಕೆ ಯಾರಾದ್ರೂ ಆಹಾರ ಹಾಕ್ತಾರಾ..?ತ್ಯಾಂಪ
ಆಂ ಏನಂದಿರಿ..? ತ್ಯಾಂಪಿ ಗರಮ್ ಆದಳು.
ಏನಿಲ್ಲ ನನಗೆ ಮದುವೆಯಾದ ಹೆಂಗಸರೆಂದರೆ ಎಷ್ಟು ಖುಷಿ ಗೊತ್ತಾ, ನೀನೇ ಹೊರಗಡೆ ಹೋದಾಗ ಆಚೆ ಈಚೆ ನೋಡಿದರೆ ಗದರುತ್ತಿ...
ಏನಂದಿರಿ..?. ತ್ಯಾಂಪಿ ಬುಸುಗುಟ್ಟಿದಳು
ಏನಿಲ್ಲ ಕಣೇ... ಮದುವೆಯಾದ ಹೆಂಗಸರೆಂದರೆ ಕೂಡಾ ಗೌರವ ಪ್ರೀತ್ಯಾದರಗಳು ಜಾಸ್ತಿಯೇ ... ಚಿನ್ನಾ ...ಅದಕ್ಕೇ ನಿನ್ನ ಮೇಲಿನ ಪ್ರೀತಿ ಈಗೀಗ ಜಾಸ್ತಿಯಾಗಿದೆ . ಅಂದ ತ್ಯಾಂಪ.
ಸರಿ ಸರಿ ಇದೊಂದು ಕೇಡು ನಿಮಗೆ.. ನಿಮ್ಮಂತ ಗಂಡ ಇದ್ದಿದ್ದರೆ ಅಮೇರಿಕಾ ಇಂಗ್ಲೇಂಡ್ ನಲ್ಲಿ ಮಾರಾಟಕ್ಕೆ ಮಾರಾಟಕ್ಕೆ ಇಟ್ಟ್ಟಿರುತ್ತಿದ್ದರು ಗೊತ್ತಾ..? ಎಂದಳು ತ್ಯಾಂಪಿ.
ನನ್ನನ್ನು ಮಾರಾಟಕ್ಕಿಟ್ಟಿದ್ದರೆ ನಾಮುಂದು ತಾಮುಂದು ಅಂತ ದಿನಕ್ಕೆ ಸಾವಿರ ಬಂದಾರು ಗೊತ್ತಾ ತ್ಯಾಂಪನೂ ಬಿಡಲೊಲ್ಲ.
ಹೌದು ಹೌದು ಎರಡೇ ದಿನಕ್ಕೆ ನಿಮ್ಮ ಬಣ್ಣ ಗೊತ್ತಾಗಿ ಬಿಡುತ್ತಿತ್ತು ಎಂದಳು ತ್ಯಾಂಪಿ ಬಿಡದೇ.
ಅದೇ ನಿನಗಾದ್ರೆ ಒಬ್ಬರೂ ಬರಲಿಕ್ಕಿಲ್ಲಾ ಗೊತ್ತಾ..? ತ್ಯಾಂಪನೆಂದ..
ಹಾಗೆ ಹೇಳಿಯೇ ಮದುವೆಯಾದ ಹೊಸದರಲ್ಲಿ ನೀವು ಜೈಲಿಗೆ ಹೋಗಿದ್ದು ನೆನಪಿದೆಯಲ್ಲಾ..? ಈಗ ಮಾರೋದು ಬಿಡಿ ಅದರ ಬಗ್ಗೆ ಯೋಚಿಸಿದರೂ ಜೈಲಲ್ಲಿರಬೇಕಾಗುತ್ತೆ ಹುಷಾರ್..!!!
ಇಲ್ಲಿಗಿಂತ ಜೈಲಲ್ಲೇ ಆರಾಮ್ ಆಗಿ ಇರ್ತೇನೇನೋ ಅಂದ ತ್ಯಾಂಪ.
ಹೊತ್ತು ಹೊತ್ತಿಗೆ ಊಟ ತಿಂಡಿ ಕೇಳಿದಾಗಲೆಲ್ಲಾ ಕಾಫಿ ಅಲ್ಲೆಲ್ಲಿ ಸಿಗುತ್ತೆ ಅಂದಳು ತ್ಯಾಂಪಿ
ಅದೂ ನಿಜ ಅನ್ನು... ಈಗೊಂದು ಕಾಫಿ ಕೊಡ್ತೀಯಾ.. ಅಂದ ತ್ಯಾಂಪ
ಮುಖ ನೋಡು .. ಬೇಕಾದ್ರೆ ಮಾಡ್ಕೊಂಡು ಬನ್ನಿ, ನನಗೂ ಅರ್ಧ ಕೊಡಿ ಅದ್ರಲ್ಲೇ.. ಅಂದಳು ತ್ಯಾಂಪಿ
ಚಿತ್ರ ಕೃಪೆ:ಅಂತರ್ಜಾಲ

1 comment:

  1. 'ಮಾರಾಟಕ್ಕಿಟ್ಟಿದ್ದರೆ ನಾಮುಂದು ತಾಮುಂದು ಅಂತ ದಿನಕ್ಕೆ ಸಾವಿರ ಬಂದಾರು...' sorry ತ್ಯಾಂಪನಿಗೆ ಆಪಾಟಿ TRP ಇಲ್ಬುಡೀ ಸಾ! :-D

    ReplyDelete