Sunday, April 5, 2015

ಮಿಸೆಸ್ ಕಲ್ಲೂರಾಮ್ ಕಥೆಗಳು

ಕಾರಲ್ಲೇ     ವಾಕಿಂಗ್

ಮರೀ
ಮಿಸ್ಸೆಸ್ ಕಲ್ಲೂರಾಮ್ ಕರೆದಳು ಮರಿ ತ್ಯಾಂಪನನ್ನು.
ಏನು ಮೇಡಮ್..? ಮರಿ ತ್ಯಾಂಪ
ಮೇಡಮ್: ಸ್ನಾನ ಆಯ್ತಾ..?

ಮರಿ  ತ್ಯಾಂಪ: ಹೌದು ಮೇಡಮ್
ಮೇಡಮ್: ಸರಿಯಾಗಿ ಸಾಬೂನು ಹಾಕಿ ಕೈ ತೊಳೆದುಕೊಂಡು ಬಂದೆಯಲ್ಲಾ..?
ಮರಿ  ತ್ಯಾಂಪ: ಹಾ ಮೇಡಮ್
ಮೇಡಮ್: ಹಾಗಾದರೆ ನನ್ನ ಮಿಂಟೂ ಪಪ್ಪಿಯನ್ನು ತರ್ತೀನಿ ನಿಂಗೆ ಹಿಡ್ಕೊಳ್ಳಲಿಕ್ಕೆ, ಅದಕ್ಕೆ ಕಾಲು ನೋವಾಗಿದೆಯಲ್ಲಾ ಅದಕ್ಕೇ..
ಮರಿ  ತ್ಯಾಂಪ: ಅಲ್ಲಾ ಮೇಡಮ್ ಕಾಲು ನೋವಾದ್ರೆ ಮನೆಯಲ್ಲೇ ಇರಲಿ ಬಿಡಿ.. ರೆಸ್ಟ್ ತಗೊಳ್ಳಲಿ.
ಮೇಡಮ್: ಅರೆ ಅದು ಹ್ಯಾಗೋ ಆಗುತ್ತೆ ಅದು ವಾಕಿಂಗ್ ಹೋಗೋದು ಬೇಡವಾ..? ನೀನು ಅದನ್ನ ಎತ್ತಿಕೊಂಡು ನನ್ನ ಜತೆ ಬಾ.ಅದಕ್ಕೇ ಅಲ್ವೇ ನಿನ್ನನ್ನು ಕರೆದದ್ದು. ಪಾಪ ಅದಕ್ಕೇ ದಿನಾ ವಾಕಿಂಗ್ ಹೋಗಿಯೇ ಅಭ್ಯಾಸ .
            ಅಂದ ಹಾಗೆ ನಾನು ಡ್ರೆಸ್ ಬದಲು ಮಾಡಿಕೊಂಡು ಬರ್ತೀನಿ, ನೀನು ಮೇಜಿನ ಮೇಲಿಟ್ಟ ತಿಂಡಿ ತಿನ್ನಲು ಹೋಗಬೇಡ. ಅದು ಮಿಂಟೂ ಪಪ್ಪಿಗೆ ಆಯ್ತಾ..?
ಮರಿ  ತ್ಯಾಂಪ: ಅಲ್ಲ ಮೇಡಮ್ ಎತ್ತಿಕೊಂಡು ಹೊರಗಡೆ ಅಡ್ಡಾಡಿದರೆ ಅದು ಹ್ಯಾಗೆ ವಾಕಿಂಗ್ ಆಗುತ್ತೆ..?
ಮೇಡಮ್: ಅರೆ ಅದರಲ್ಲೇನಿದೆ ನಾನೂ ಮಿ ಕಲ್ಲೂರಾಮ್ ದಿನಾ ಹಾಗೇ ಹೋಗ್ತೇವೆ. ಹೊರಗಡೆ ಪೊಲ್ಯುಶನ್ ಎಷ್ಟು ಜಾಸ್ತಿ ಗೊತ್ತಾ..... ಅದಕ್ಕೇ ನಾವು    .ವಾಕಿಂಗ್  ಹೋಗೋದು ನಮ್ಮ ಕಾರಲ್ಲೇ....





ಅದಕ್ಕೇ ನಿದ್ದೆಯಿಲ್ಲ...


ಯಾಕೆ ಮಿಸೆಸ್ ಕಲ್ಲೂರಾಮ್.. ನಿಮ್ಮ ಕಣ್ಣೆಲ್ಲಾ ಕೆಂಪಗಿದೆ..? ರಾತ್ರೆ ಎಲ್ಲಾ ನಿದ್ದೆ ಮಾಡಲಿಲ್ಲ ಅನ್ಸುತ್ತೆ..?

ಯಜಮಾನರು ಹೊಸ್ಪಿಟೆಲ್ ನಲ್ಲಿದ್ದಾರೆ ಕಣೇ

ಅರೆ ಆಸ್ಪತ್ರೆಯಲ್ಲಿ ನರ್ಸ್ ಇರ್ತಾರಲ್ಲಾ, ಅವರು ನೋಡಿಕೊಳ್ತಾರೆ ಬಿಡೇ.

ಅದಕ್ಕೇ ಕಣೇ ನಿದ್ದೆ ಬರ್ತಾ ಇಲ್ಲ.

ಯಾಕೆ ನರ್ಸ್ ಮೇಲೆ ನಂಬುಗೆ ಇಲ್ಲವಾ..?

ನರ್ಸ್ ಮೇಲಿದೆ ನನ್ನ ಯಜಮಾನರ ಮೇಲೆ ನಂಬಿಗೆಯಿಲ್ಲ ಅದಕ್ಕೆ.......












ಚಿತ್ರ ಕೃಪೆ: ಅಂತರ್ ಜಾಲ

1 comment:

  1. ಮರು ಜಲುಮ ಅಂತಿದ್ರೆ ಮಿಂಟೂ ಪಪ್ಪಿ ಮಾಡಪ್ಪ ಅಂತಂದ ನನ್ನ ಕೂಟ ತ್ಯಾಂಪ!

    ಮಿ. ಕಲ್ಲೂರಾಮ್ ಕಿಟ್ಟಣ್ಣ ಅನ್ನಿ!

    ReplyDelete