Monday, April 20, 2015

ಇರಿ ಆನಂದದೇ




ಅಯ್ಯೋ ಈ ತಾಪತ್ರಯಗಳ ಸಂತೆ
ಸಾಕಪ್ಪಾ ನಮಗೆ ಮಾತ್ರ ಅಂತೆ
ಎಂದೆಣಿಸೋ ಮೊದಲು ನೆನಪಿರಲಿ
ಗೋಚರ ನಮಗೆ ನಮ್ಮ ಕಷ್ಟ ಮಾತ್ರ
ಇವೆ, ಸಕಲರಿಗೂ ಕಷ್ಟ ಅವರವರದ್ದು

ಸಂತೋಷ ಎಲ್ಲಿದೆ

ನಾವಿಲ್ಲದ ದಿನಗಳಲ್ಲೇ -ಅಲ್ಲ
ನಾವಿರದ ಕಾರ್ಯಗಳಲ್ಲೇ - ಅಲ್ಲ
ಮತ್ತೆಲ್ಲಿ- ನಾವಿರುವಲ್ಲಿ ಮಾತ್ರ

ಪ್ರೀತಿಸೆ ಎಲ್ಲವನ್ನ

ನಮ್ಮ ಪರಿಸರವನ್ನ, ಕಾರ್ಯವನ್ನ
ನಮ್ಮವರನ್ನ,ನಮ್ಮನ್ನ
ಅಲ್ಲಿದೆ ನಮ್ಮೆಲ್ಲರ ಸಂತೋಷ

ನಿನ್ನೆಯೋ ಮುಗಿದ ಕಥೆ

ನಾಳೆಯ ನೋಡಿದವರ್ಯಾರು
ಇಂದು ಮಾತ್ರವೇ ನಮ್ಮದು
ಅದಕ್ಕೇ ಇದ್ದು ಬಿಡಿ ವಾಸ್ತವದಲ್ಲಿ
ಅದೇ ಆನಂದದಲ್ಲಿ

ಇಂದು ಮುಂದು, ಮತ್ತೆಂದೂ

ಇಂದೇ ಕಲಿಯಬೇಕಿದೆ ನಾವು
ಇದೇ ಜೀವಿಸೋ ಕಲೆ
ರಮಿಸಿ, ಅನುಭವಿಸೋ ಕಲೆ
ಇರಲು ಆನಂದದೇ

1 comment:

  1. ನನ್ನಂತಹ ಕೊರಗಾತ್ಮರಿಗೆ ಕಿವಿ ಹಿಂಡಿ ಹೇಳಲ್ಪಟ್ಟ ಟಾನಿಕ್ ಕವಿತೆ..

    ReplyDelete